Monday, February 10, 2014

ಚಿತ್ರ ಕಲಾ ಪ್ರದರ್ಶನದ ಒಂದಷ್ಟು ನೆನಪುಗಳು...

ನಮ್ಮ ಚಿತ್ರ ಕಲಾ ಪ್ರದರ್ಶನ ಸಾಂಗವಾಗಿ ಮುಗಿಯಿತು. ಬಂದು ವೀಕ್ಷಿಸಿ ಶುಭ ಕೋರಿದವರಿಗೂ , ಬರಲಾಗದೆ ಇದ್ದಲ್ಲಿಂದಲೇ ಶುಭ ಹಾರೈಸಿದವರಿಗೂ  ಹೃತ್ಪೂರ್ವಕ ಧನ್ಯವಾದಗಳು.

ಚಿತ್ರ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ಹಾಬಿ ಕ್ಲಾಸ್ ಸ್ಟೂಡೆಂಟ್ಸ್  ರಚಿಸಿದ ಕೆಲವು  ಕಲಾಕೃತಿಗಳು
ಬ್ಯಾಸ್ಕೆಟ್ನಲ್ಲಿ   ಬೆಕ್ಕು ನನ್ನ ರಚನೆ



 ಕೊಳಲೂದುವ ಹುಡುಗ ಮತ್ತು ಬೆಕ್ಕು , ಕೋಟೆ ಬತೇರಿ ನನ್ನ ಪೈಂಟಿಂಗ್ಸ್ 


 ನನ್ನ ರಚನೆ 











ಮಧ್ಯದಲ್ಲಿರುವ ಯಕ್ಷಗಾನದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಚಿತ್ರ ರಚಿಸಿದ್ದು ನಾನು.. ಹಂಪಿ ಕಲ್ಲಿನರಥ -ಶ್ವೇತ ಶಂಕರ್, ಮತ್ತು ಹೂಗಳು- Annie Anubodhi 



ನಮ್ಮ ಹಾಬಿ ಕೋರ್ಸ್ ನ ಗೆಳತಿಯರು 



ಮಂಜರಿ, ಗೀತಾ , ಸಿಮ್ರಾನ್, Annie , ಸುಷ್ಮಾ , ನಾನು, ಶ್ವೇತಾ, ವೀಣಾ ,   ಅಂಜನಾ ,  ಹರಿಣಿ

ಹರಿಣಿ ಭಕ್ತಿಸಾರನ್  



ವಿಜಯಲಕ್ಷ್ಮಿ ಮೇಡಂ ಮತ್ತು ಸುಂದರಿ ಮೇಡಂ
 ಇವರಿಬ್ಬರೂ 'ನಾವು ಅಜ್ಜಿಯಂದಿರು' ಅನ್ನುತ್ತಲೇ  ಸಡಗರದಿಂದ ಪೇಯಿಂಟ್ ಕಲಿಯಲು ಬರುತ್ತಿದ್ದ  ಹದಿನೆಂಟರ  ಮನಸ್ಸಿನವರು.



ಅಂಬಿಕಾ, ಸಂತೋಷ್ , ಲೇಖಾ




ಬಂದು ಸಂತೋಷ ಪಟ್ಟು ಶುಭ ಹಾರೈಸಿದ ಬಂಧು ಮಿತ್ರರು ..

 ಪ್ರಕಾಶಣ್ಣ ,ಆಶಾ  ಮತ್ತು ಗೀತಾ ಬಿ.ಯು .  ಜಯಲಕ್ಷ್ಮಿ ಪಾಟೀಲ್ 



 ಅನುರಾಧಕ್ಕ ಮತ್ತು ಭಾರತಿಅಕ್ಕ ... 



                                                        ಡಾ . ಕೃಷ್ಣಮೂರ್ತಿ ಸರ್
ಅಕ್ಷಯ, ಪ್ರಕಾಶ 

ಅನಸೂಯಕ್ಕ

ಪೂರ್ಣಿಮಾ ಗಿರೀಶ್ ದಂಪತಿಗಳು ಮಗಳೊಂದಿಗೆ ,


 ಅನುಪಮಕ್ಕ ದಂಪತಿಗಳು


ಅಪರ್ಣ , ರಶ್ಮಿ, ಸಂಗೀತ

ಸ್ವರ್ಣ ಮಗನೊಂದಿಗೆ


 ಅವಿನಾಶ್  ಮತ್ತು ನಟರಾಜ್


ಬಂಧು ಮಿತ್ರರು




ಕಾರ್ಯಕ್ರಮದ ಉದ್ಘಾಟನೆ  ಸಹಕಾರ್ಯದರ್ಶಿಗಳಾದ ಕಮಲೇಶ್ ಅವರಿಂದ 

ಚಿತ್ರ ವೀಕ್ಷಣೆ



ಆರು ತಿಂಗಳ ಕಾಲ ನಡೆಸಿದ ಪ್ರಯತ್ನದ ಫಲವಾಗಿ ಈ ಚಿತ್ರ ಪ್ರದರ್ಶನವನ್ನು ವೀಕ್ಷಿಸಿದ ಕಲಾ ರಸಿಕರು ಯಾವುದೇ ವೃತ್ತಿ ಪರ ಕಲಾವಿದರಿಗೂ ಸಾಟಿಯಿಲ್ಲದಂತೆ  ಚಿತ್ರಗಳು ರಚಿಸಲ್ಪಟ್ಟಿವೆ, ಎಂದು ಬಹುವಾಗಿ ಸಂತೋಷಪಟ್ಟರು.ನಮಗೆಲ್ಲರಿಗೂ  ಸಾರ್ಥಕ ಭಾವ...

ಎಲ್ಲರಿಗೂ ವಂದನೆಗಳು.


Monday, February 3, 2014

ಎಲ್ಲರೂ ಬನ್ನಿ, ಪ್ರೋತ್ಸಾಹಿಸಿ.

ಕನಸು ಕಾಣಲು ಯಾರ ಅಪ್ಪಣೆಯು  ಬೇಕಿಲ್ಲದಿದ್ದರೂ ಅದನ್ನು ನನಸಾಗಿಸಿಕೊಳ್ಳಲು ಸಮಯ ಮತ್ತು ಅವಕಾಶ ಬೇಕೇ ಬೇಕಾಗುತ್ತದೆ. ನಮ್ಮಂತಹಾ ಗೃಹಿಣಿಯರಿಗಂತೂ ಇನ್ನೂ ಅನೇಕ ವಿಚಾರಗಳು ಸರಿ ಸಮದೂಗಬೇಕಾಗುತ್ತದೆ.  ಅದೇ ವಿಚಾರಕ್ಕೆ ಬರುವೆ, ಈಗೊಂದು ಆರು ತಿಂಗಳಿಂದ ನಾನು ಭಯಂಕರ ಬ್ಯುಸಿ ಮತ್ತು ಆ ಕಾರಣಗಳಿಂದಲೇ ಸಧ್ಯಕ್ಕೆ  ಹೆಮ್ಮೆಪಟ್ಟುಕೊಳ್ಳುತ್ತಾ ಓಡಾಡುತ್ತಿದ್ದೇನೆ ಅಂದರೆ ಆ ಖುಷಿಗೆ ನೀವೂ ಪಾಲುದಾರರು ....!! 

ನಾನು ಆಗಾಗ ಚಿತ್ರ ಚಿತ್ರ  ಅನ್ನುತ್ತಾ ವಿಚಿತ್ರಗಳನ್ನೆಲ್ಲಾ ಬರೆಯುತ್ತಾ, ಕೊರೆಯುತ್ತಾ ಎಲ್ಲರ ತಲೆ ತಿನ್ನುತ್ತಿದ್ದೆನಲ್ಲ.  ಅದನ್ನೆಲ್ಲಾ ಇನ್ನೂ ಸ್ವಲ್ಪ ಪ್ರೋಫೆಶನಲ್ಲಾಗಿ  ಮಾಡೋಣವೆಂದು ಒಂದುಶುಭ ಮುಹೂರ್ತದಲ್ಲಿ ನಿಶ್ಚಯಿಸಿ ಕರ್ನಾಟಕ  ಚಿತ್ರಕಲಾ  ಪರಿಷತ್ತಿನವರು  ಆರು ತಿಂಗಳ ಅವಧಿಯಲ್ಲಿ ನಡೆಸುವ ಹಾಬಿ ಕೋರ್ಸ್ ಗೆ ಸೇರಿಕೊಂಡಾಯ್ತು..  ಚಿತ್ರಕಲಾಪರಿಷತ್ತಿನವರದು ಅದೊಂದು ಒಳ್ಳೆಯ ನಿರ್ಧಾರ ಮತ್ತು ಕೆಲಸ.  ರೆಗ್ಯುಲರ್  ಕ್ಲಾಸ್ ಗೆ ಹೋಗಿ ಕಲಿಯುವ ಅವಕಾಶವಾಗದೇ  ಹೇಗಾದರೂ ಕಲಾಭ್ಯಾಸ ಮಾಡಬೇಕೆನ್ನುವ ಹಪಾಹಪಿ ಇರುವವರಿಗೆ ಅತ್ಯುತ್ತಮ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.ನನ್ನಂತಹಾ ಅನೇಕರ ಕನಸುಗಳ 'ಬಿಟ್ಟ ಸ್ಥಳ' ತುಂಬಿಕೊಳ್ಳಲು ಒಂದು ಸದವಕಾಶ. ಪರಿಷತ್ತಿನ  ಸೆಕ್ರೆಟರಿಯವರಾದ ಡಿ. ಕೆ. ಚೌಟ ಅವರ  ಪ್ರಯತ್ನದ ಫಲವಾಗಿ   ಹತ್ತು ವರ್ಷಗಳಿಂದ ಈ ತರಗತಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ನನಗೆ ಗೊತ್ತಾಗಿದ್ದು ಈ ವರ್ಷ..  
ಅಂತೂ ನಾನು ಈಗ ಜ್ಞಾನೋದಯವಾಗಿ ಈ ಕೋರ್ಸ್ ಗೆ ಸೇರಿಕೊಂಡು ಬಿಟ್ಟಿದ್ದೇನೆ ಎನ್ನುತ್ತಾ ಸಂಕೋಚ ಪಡುತ್ತಾ ಮೊದಲ ದಿನ ಅಲ್ಲಿ ಹೋಗಿ ನೋಡಿದರೆ ಅಲ್ಲೇನು ... ?   ನನ್ನಂತಹಾ ಅನೇಕರು ಅಲ್ಲಿದ್ದಾರೆ..!!   ನಾನೇನು ಮಹಾ ..? ಕಾಲೇಜಿಗೆ ಹೋಗುವ ಮಕ್ಕಳಿಂದ ಹಿಡಿದು   ಗ್ರಾಂಡ್ ಪೇರೆಂಟ್ಸ್ ಗಳು   ಕೂಡಾ ಸಡಗರದಿಂದ ಬಂದು ಪೇಂಟಿಂಗ್ ಕಲಿಯುವುದನ್ನು ನೋಡಿದರೆ ಎಂಥವರಿಗೂ ಒಮ್ಮೆ ಮುಖ ಮತ್ತು ಮನಸ್ಸು ಅರಳುತ್ತದೆ. ಒಂದು ಧನ್ಯತಾ ಭಾವ ಮನಸ್ಸನ್ನು ಆವರಿಸುವುದು ಸತ್ಯ. 
ಗೆರೆ ಹಾಕುವುದರಿಂದ ಮೊದಲ್ಗೊಂಡು ಈಗ ಉದ್ದಾನುದ್ದದ ಅಕ್ರಿಲಿಕ್, ಆಯಿಲ್ ಪೇಂಟಿಂಗ್ ಗಳನ್ನೆಲ್ಲಾ ಮಾಡಿ ಮಾಡಿ ರಾಶಿ ಹಾಕಿದ್ದೇವೆ ಅಂದರೆ ಅದನ್ನೆಲ್ಲಾ ನೀವು ನೋಡಿಯೇ  ಅರಿತುಕೊಳ್ಳಬೇಕು..:)
ಮತ್ತು ಗೆರೆ ಹಾಕಲು ಕಷ್ಟ ಪಡುವವರೂ ಕೂಡಾ ಕೋರ್ಸ್ ಮುಗಿಯುವುದರೊಳಗೆ ಸುಂದರ  ಕಲಾಕೃತಿಗಳನ್ನು   ತಯಾರಿಸಿದ್ದಾರೆಂದರೆ,   ನಮ್ಮ ಅಂತಃಸತ್ವ ಮತ್ತು ಹಾರ್ಡ್ ವರ್ಕ್   ಜೊತೆಗೆ ನಮ್ಮ ಪೇಂಟಿಂಗ್ ಶಿಕ್ಷಕಿ  ಇನ್ಷಾ ಉಮ್ಮೆಹಾ  ಅವರ ಹೃತ್ಪೂರ್ವಕ ಕಲಿಸುವಿಕೆಯನ್ನು ಕೂಡಾ ಸ್ಮರಿಸಲೇ  ಬೇಕಾಗಿದೆ.  ಯಾವುದೇ ನಿರಾಕರಣೆ  ಇಲ್ಲದೇ ಕ್ಷಣ ಕ್ಷಣಕ್ಕೂ  ನಮಗೆ  ಪ್ರೇರಣೆ ನೀಡುತ್ತಾ, ಕಲೆಯ ಮಾರ್ಗದರ್ಶನ ಮಾಡುತ್ತಾ ನಮ್ಮನ್ನು ಕಲಾವಿದರನ್ನಾಗಿ ಮಾಡಿದ್ದಾರೆ.  

 ಈ  ಆರು ತಿಂಗಳ ಪ್ರಯತ್ನದ ಫಲವಾಗಿ ಮೂಡಿಬಂದ ಕಲಾಕೃತಿಗಳ ಪ್ರದರ್ಶನವನ್ನು ಇದೇ ಫೆಬ್ರವರಿ 8  ಶನಿವಾರದಂದು  ಆಯೋಜಿಸಲಾಗಿದೆ.  ಸಮಯ  ಬೆಳಿಗ್ಗೆ  ಹತ್ತೂವರೆಯಿಂದ  ಸಾಯಂಕಾಲ ಐದೂವರೆವರೆಗೆ. ದಯವಿಟ್ಟು ಎಲ್ಲರೂ ಬನ್ನಿ, ನೋಡಿ ಆನಂದಿಸಿ, ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿ.


ವಂದನೆಗಳು.