Saturday, January 9, 2010

ನೀರ ದಾರಿ....................
ಯುಗಾದಿ ಕಳೆದು
ಮರಳುತಿರೆ ಮತ್ತೆ ಧರೆ
ಸುಡುನೆತ್ತಿ ಬಿಸಿಲ ಮುಸಲಧಾರೆ
ಕಂಕುಳ ಮಗುವಿಗೂ....ಬೆವರಹನಿ ಜಲಧಾರೆ..!


ಛಾಯೆಯಿಲ್ಲದ ಭೂಮಿ
ದೂರದಾ ಹರದಾರಿ
ತೀರದಾ ದಾಹಕ್ಕೆ
ನೀರ ಬಿಂದಿಗೆ ಹೊತ್ತ
ನೀರೆ ಹೊರಟಿಹಳಲ್ಲಿ.....ನೀರಬೇಟೆಗೆ....!


ಭರವಸೆಯ ಹುಸಿನೆರಳು
ವಿಧಿಯ ಕರಿನೆರಳು
ಏಗಬೇಕಿದೆ ಜೀವ
ಬವಣೆಯಾ ಬದುಕಿಗೆ
ಆಗಬೇಕಿದೆ ಅಲ್ಲಿ... ಚಮತ್ಕಾರ ಬಾನಲ್ಲಿ...!


ಸಾಗಬೇಕಿದೆಯಿನ್ನೂ...
ಜೀವದಾ ಹಾದಿ
ಜೀವಜಲ ದರುಶನಕೆ ಹುಡುಕಿ ದಾರಿ
ಬದುಕಲೇ ಬೇಕಿದೆ...ಸ್ವಾಮಿ
ನೀರೆ ಹೊರಟಿಹಳಲ್ಲಿ ...ಕಾಲನಿಗೆ ಬೆನ್ನು ತೋರಿ....!

[ ಚಿತ್ರ ನನ್ನದೇ ರಚನೆ.]

24 comments:

 1. ನಿಮ್ಮ ಚಿತ್ರ ಸೂಪರ್,
  ಅದಕ್ಕೆ ತಕ್ಕಂತೆ ಇರುವ ಕವನ,
  ಕವನದಿಂದ ಚಿತ್ರದ ಸೌಂದರ್ಯ ಹೆಚ್ಚಿತೋ?
  ಚಿತ್ರದಿಂದ ಕವನದ ಸೌಂದರ್ಯ ಹೆಚ್ಚಿತೋ?
  ಹೇಳುವುದು

  ReplyDelete
 2. ಚುಕ್ಕಿಚಿತ್ತಾರ,,,

  ಚಿತ್ರ..
  ಕವನ..
  ಎರಡೂ ತುಂಬಾ ಚೆನ್ನಾಗಿದೆ...
  ಅಭಿನಂದನೆಗಳು..

  ReplyDelete
 3. ನಿಮ್ಮದು ಕಲ್ಪನೆಯ ಕವನ. ಆದರೆ ಕವನ ವಾಸ್ತವದ ಪ್ರತಿಬಿಂಬವಾಗಿದೆ. ಚಿತ್ರದ ಜೊತೆಗಿನೆ ಕವನದ ಸಾಮ್ಯತೆ ವಾಸ್ತವವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಬೆನ್ನು ಹಾಕಿ ಹೊರಟಿರುವ ನೀರೆ...ಕವನದ ಕೊನೆಯ ಸಾಲು ....ಏನು ಹೇಳಲಿ...Simply superb

  ReplyDelete
 4. ಭರವಸೆಯ ಹುಸಿನೆರಳು,
  ನೀರೆಯೂ ಅರಿತಿಹಳು ,
  ಆದರೂ ತಡೆಯದು ತಾಯ ಕರುಳು,
  ಭರವಸೆಯ ಬೆ೦ಬಿಡದೆ ಸಾಗಹತ್ತಿಹಳು.

  ಚಿತ್ರ,ಕವನ ಎರಡೂ ಚೆನ್ನಾಗಿದೆ.

  ReplyDelete
 5. ವಾಸ್ತವತೆಯ ಯಥಾರ್ಥ ದರ್ಶನ ನಿಮ್ಮ ಕವನದಲ್ಲಿದೆ. ಜೊತೆಗೇ
  ಉತ್ತಮ ಚಿತ್ರವನ್ನೂ ಹಾಕಿದ್ದೀರಿ.
  ಸಾಹಿತ್ಯ ಹಾಗು ಚಿತ್ರಕಲೆ ಎರಡರಲ್ಲೂ ನಿಮ್ಮಂತೆ ಪರಿಣತಿ ಇರುವವರು ಕಡಿಮೆ.

  ReplyDelete
 6. ಕವನದ ಜೊತೆ ಚಿತ್ರ ಎರಡೂ ತುಂಬಾ ಚೆನ್ನಾಗಿದೆ...
  ಅಭಿನಂದನೆಗಳು.....

  ReplyDelete
 7. wow wonderfull!!! chitrada jote kavana tumbane chennagide

  ReplyDelete
 8. ವಿಜಯಶ್ರೀ ಮೇಡಮ್,

  ಚಿತ್ರವನ್ನು ನೀವೇ ಬರೆದಿದ್ದಾ....ತುಂಬಾ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಕವನ ಕೂಡ..

  ReplyDelete
 9. Wow...! Superb..!
  Good imagination...

  ReplyDelete
 10. ನಿಮ್ಮ ಚಿತ್ರ ಹಾಗೂ ಕವನ ಸುಂದರವಾಗಿದೆ.

  ReplyDelete
 11. ವಾಸ್ತವ ಚಿತ್ರಣ ಸೊಗಸಾಗಿ ಮೂಡಿ ಬಂದಿದೆ. ಜೊತೆಯಲ್ಲಿನ ಚಿತ್ರ ಮತ್ತಷ್ಟು ಅರ್ಥಗಳನ್ನು ಕೊಡುತ್ತೆ.

  ReplyDelete
 12. ನೀರು ....
  ಪ್ರತಿಯೊ೦ದು ಜೀವಿಯ ಆವಶ್ಯಕ ವಸ್ತು.
  ದೇವರು ಪ್ರತಿಯೊನ್ದು ಜೀವಿಗೂ ನೀರಿನ ಬಳಕೆಯಲ್ಲಿನ ವೈವಿಧ್ಯತೆಗಳನ್ನು ಕಲಿಸಿ, ಕಳಿಸಿ ಕೊಟ್ಟಿದ್ದಾನೆ.

  ಮಾನವನೆ೦ಬ ಜೀವಿಗೆ ಮಾತ್ರಾ ಜಾಣ ಮರೆವು.
  ಹಾಗಾಗಿ ಎಲ್ಲಾ ಜೀವನಾವಶ್ಯಕ ವಸ್ತುಗಳನ್ನೂ ಬೇಕಾಬಿಟ್ಟಿ ಉಪಯೊಗಿಸುತ್ತಿದ್ದಾನೆ.

  ನೀರಿನ ಮಹತ್ವ ಮತ್ತು ಅದರ ಬಳಕೆಯಲ್ಲಿನ ಪರಿಮಿತಿ,ಮಳೆಯೊ೦ದೆ ಆಧಾರವಾಗಿರುವ ಬಯಲು ಸೀಮೆಯ ಜನಗಳಿಗೆ ತು೦ಬಾ ಚೆನ್ನಾಗಿ ಗೊತ್ತು ಎನ್ನುವುದು ನನ್ನ ಭಾವನೆ.

  ಪ್ರತಿಕ್ರಿಯಿಸಿದ ಸುಪ್ತವರ್ಣ,ಸಾಗರದಾಚೆಯ ಇಂಚರ,ಸಿಮೆಂಟು ಮರಳಿನ ಮಧ್ಯೆ,ಸುಬ್ರಹ್ಮಣ್ಯಭಟ್,ಮನಮುಕ್ತಾ,ಸುನಾಥ್ ಕಾಕ,ಸವಿಗನಸು,ಮನಸು ,ಗೌತಮ್ ಹೆಗಡೆ,ರವಿಕಾಂತ ಗೋರೆ, ಸುಮಾ,ಶಿವು ಸರ್,ಶಿವಪ್ರಕಾಶ್,ರಾಕೆಶ್ ಹೊಳ್ಳ,ಉಮಾ ಭಟ್,ಆನಂದ ಎಲ್ಲರಿಗೂ ನಮನಗಳು.

  ReplyDelete
 13. olle chayachitra haagu kavana. ondarinda innondara artha hechchuttide.
  EXCELLENT

  ReplyDelete
 14. ವಿಜಯಶ್ರೀ, ನೀರೆಯ ನೀರ ಹೊರೆ ತೊರೆ, ಕೆರೆಗಲ್ಲ..ದೂರ ದೂರದ ಜಲದ ಝರಿಗೆ.....ಕಂಕುಳಮಗುವಿಗೆ ಬೆವರಿನ ಜಲಧಾರೆ...ಚೆನ್ನಾಗಿ ಹರಿದಿದೆ ನಿಮ್ಮ ಭಾವನೆಯ ಬಿತ್ತರ....

  ReplyDelete
 15. ವಿಜಯಶ್ರೀ ಅವರೇ,
  ಸೂಪರ್ ಆಗಿದೆ ಕವನ.. ಅಮ್ಮ ಮಗುವನ್ನು ಸಲಹುವುದು ಕಾಲನಿಗೆ ಬೆನ್ನ ತೋರಿ...!
  ನಿಮ್ಮವ,
  ರಾಘು.

  ReplyDelete
 16. ತುಂಬಾ ಚೆನ್ನಾಗಿದೆ ಕವನ. ಕವನಕ್ಕೆ ತಕ್ಕಂತಿರುವ ಚಿತ್ರ ಕೂಡ ಇಷ್ಟವಾಯಿತು. ಗ್ಲೋಬಲ್ ವಾರ್ಮಿಂಗ್‌ನಿಂದಾಗಿ ನಮ್ಮ ಮುಂದಿನ ಬದುಕು ಬಹಳ ದುಃಸ್ಥರವಾಗುವುದರಲ್ಲಿ ಸಂಶಯವಿಲ್ಲ!! :(

  ReplyDelete
 17. ಚಿತ್ರ, ಕವಿತೆ ಮೆಚ್ಚಿದ ಸೀತಾರಾ೦ ಸರ್, ಜಲನಯನ,ರಾಘು ಹಾಗು ತೇಜಸ್ವಿನಿ ಧನ್ಯವಾದಗಳು.

  ReplyDelete
 18. NANNA BLOG GE BANDU PRATIKYISIDDAKKE DHANYAVADA MADOM:)

  ReplyDelete