Saturday, September 24, 2011

ಮತ್ತೆ ಬಂತು ಚಿತ್ತಾರದರಮನೆಯಲ್ಲಿ ಹುಟ್ಟಿದ ಹಬ್ಬ..!

  ಎರಡು ಹೆಜ್ಜೆ ಮುಂದಿಟ್ಟಿದ್ದೇನೆ..

ತುಂಬಾ ಚಿಕ್ಕದು ನನ್ನ ಅಕ್ಷರ ಪ್ರಪಂಚ.  ಇಲ್ಲಿಯ ವರೆಗೆ ನಾನು ಪೋಸ್ಟಿಸಿದ್ದು; ಅದು  ಯಾವ ಪ್ರಾಕಾರ  ಅನ್ನುವುದು ಕೆಲವೊಮ್ಮೆ ನನಗೆ ಗೊಂದಲ ಉಂಟಾಗುತ್ತದೆ.  ನಾನು ಬರೆದಿದ್ದು ಕಥೆಯೋ ಕವನವೋ, ಕಾದಂಬರಿಯೋ, ಹಾಸ್ಯವೋ, ಹರಟೆಯೋ, ಅಂತೂ ನಾನು ಅದನ್ನು ಏನೆಂಬುದಾಗಿ  ತಿಳಿದುಕೊಂಡಿದ್ದೇನೆ ಎನ್ನುವುದನ್ನು ಕಥೆ, ಹರಟೆ, ಕವನ ಎನ್ನುವ ಲೇಬಲ್ ಹಚ್ಚಿ ನಿಮಗೆ ತಿಳಿಸಿದ್ದೇನೆ.ಸಹ ಬ್ಲಾಗಿಗರಿಂದಲೇ ನಾನು ಬರೆಯುವುದನ್ನು ಕಲಿತಿದ್ದು.  ಸಾಹಿತ್ಯ ಅದು, ಇದು, ಮಣ್ಣು ಮಸಿ ಎನ್ನುವ ತೀರಾ ಗೋಜಿಗೆ ಹೋಗುವವಳೇನೂ ನಾನಲ್ಲ.. ಆದರೆ ಬಾಲ್ಯದಿಂದಲೂ  ವಿಪರೀತ  ಓದುವ ಹುಚ್ಚು. ಪಾಠದ ಪುಸ್ತಕಕ್ಕಿಂತ ಬೊಂಬೆಮನೆ, ಚಂದಮಾಮ,  ಬಾಲಮಿತ್ರ, ಮಯೂರ, ತುಷಾರ, ತರಂಗ, ವಾರಪತ್ರಿಕೆ, ಪ್ರಜಾಮತ, ಲೆಕ್ಕವಿಲ್ಲದಷ್ಟು ಕಾದಂಬರಿಗಳು, ವಿಧ ವಿಧ ಪುಸ್ತಕಗಳು   ಹೀಗೆ ಕಾಲಕ್ಕೆ ತಕ್ಕಂತೆ ವಯಸ್ಸಿಗನುಗುಣವಾಗಿ ಪುಸ್ತಕಗಳ ಸಂತೆಯೇ ನನ್ನೆದುರು. 


ಆದರೆ ಈಗೀಗ ಓದಲು ಸಮಯ ಸಾಲುತ್ತಿಲ್ಲ ಎನ್ನುವ ನೆವವಿದೆ..! ಓದದಿದ್ದರೆ ಬರೆಯುವಾಗ ತಡವರಿಸುತ್ತದೆ,  ಮೊದಲೆಲ್ಲಾ ಬ್ಲಾಗು ವಾರಕ್ಕೊಮ್ಮೆ ಹೊಸ ಪೋಸ್ಟಿನಿಂದ ಕಂಗೊಳಿಸುತ್ತಿತ್ತು. ಈಗ ವಾರ ಮುಗಿದು ತಿಂಗಳು ಕಳೆದರೂ  ಬಾಗಿಲು ಬಳಿದು ರಂಗೋಲೆ ಇಡಲು ಸಾಧ್ಯವಾಗುತ್ತಿಲ್ಲ. ಆದರೂ ಚಿತ್ತಾರದರಮನೆಗೆ ಎರಡು ತುಂಬಿದ ಸಂಭ್ರಮ   ಸಡಗರದಿಂದ ಬರೆಯಲು ತೊಡಗಿದ್ದೇನೆ.ಏನು ಬರೆಯಲಿ? ಹೇಗೆ ಬರೆಯಲಿ?  ಎನ್ನುವ ಹುಡುಕಾಟದಲ್ಲಿಯೇ ಓಡಾಡುತ್ತಿದ್ದೇನೆ.ಚುನಾವಣೆ ಬಂದಾಗ ರಾಜಕಾರಣಿಗಳು ಎಲ್ಲಾ ತೋರಿಕೆಯ  ಕಾಮಗಾರಿಗಳನ್ನೂ ಮಾಡಿ ಮುಗಿಸಲು ಹವಣಿಸುವುದಿಲ್ಲವೇ..? ಹಾಗೆಯೇ.  ಬರೆಯಲು ಸುಮಾರು ವಿಷಯ, ವಿಶೇಷ ಇದ್ದರೂ....  ಬರೆಯಬೇಕು ಅಂದುಕೊಂಡ ವಿಚಾರವನ್ನು ಮತ್ಯಾರೋ ಬರೆದಿದ್ದಾರೆ, ಮತ್ತೆ ಅದನ್ನೇ ಬರೆಯುವುದೇನು ಅನ್ನುವ ಪಲಾಯನವಾದ ಕೂಡಾ ಇದೆ....!


ಎಲ್ಲರಿಗೂ ನನ್ನಂತೆ ಆಗುತ್ತಿದೆಯೇನೋ ?ಬ್ಲಾಗ್ ಬರೆಯುವವರ ಉತ್ಸಾಹ ಕಡಿಮೆಯಾದಂತಿದೆ,  ಮಾತಿಗೆ ಸಿಕ್ಕವರಲ್ಲಿ , ಏನ್ರೀ ಹೊಸಾ ಪೋಸ್ಟ್ ಇದೆಯಾ ? ..
ನಿಮ್ಮದಿದೆಯಾ..? ಎಂದು ಪುನಃ ಪ್ರಶ್ನಿಸಿ ಎರಡೂ ಕಡೆಗೂ ಇಲ್ಲಪ್ಪಾ .. ಎನ್ನುವ ಉತ್ತರದೊಂದಿಗೆ ಇವರು ನಮ್ಮೊಂದಿಗಿದ್ದಾರೆ ಎನ್ನುವ ಕೆಟ್ಟ ಸಮಾಧಾನ ಹೊಂದುವುದೇ ಆಗಿದೆ.ಇಲ್ಲ ಅಂದರೆ ಅವರೆಲ್ಲಾ  ಬರೆದು ಬಿಡುತ್ತಾರೆ ಅನ್ನುವ ಹುಳುಕಿಗಾದರೂ ನಾನೂ  ತಡಕಾಡಿ ಬರೆದುಬಿಡಬಹುದಿತ್ತು!

ಇರಲಿ, ನಾನು ತೀರ್ಮಾನಿಸಿದ್ದೇನೆಂದರೆ, ಮೂರು ತುಂಬುವುದರೊಳಗಾಗಿ ಇನ್ನೂ  ನಾಲ್ಕಾರು ಪೋಸ್ಟ್ ಹಾಕಿಬಿಡಬೇಕೆಂದು!
ಅರಮನೆಯನ್ನೇ ಕಟ್ಟಲು  ಹೋಗಿ   ಈಗ 'ಅರ' ಮನೆಯಾಗಿದೆ. ಆಕಾಶದೆತ್ತರಕ್ಕೆ ಕಟ್ಟ ಬೇಕೆಂಬ ಆಸೆ.. ಪುರಸೊತ್ತಿಲ್ಲ..!

ಒಂದಷ್ಟು ಮಳೆಯ ಫೋಟೋಗಳು ..




 ಚೌತಿಗೆ  ಊರಿಗೆ ಹೋದವಳು ಮಳೆಗಾಲದ ಅಬ್ಬರಾಟ  ಕಂಡು ಮರಳಿ  ಬಂದಿದ್ದೇನೆ. ಬಹಳ ದಿನಗಳೇ ಆಗಿತ್ತು. ನಿಜ ಮಳೆಗಾಲವನ್ನು ಅನುಭವಿಸದೆ. ನಾನು ಊರಿಗೆ ಕಾಲಿಟ್ಟಿದ್ದೆ ತಡ.. ಮಳೆ ಸುರಿಯಲು ಶುರುಮಾಡಿದ್ದು ಬರುವವರೆಗೂ ಹನಿ ಕಡಿಯಲಿಲ್ಲ.


 ಸೂರಂಚಿನ ನೀರಿನಲ್ಲಿ ಕಾಲು ತೊಳೆದುಕೊಳ್ಳುವುದು ಮಜಾ ಅಲ್ವೇ..?

 ಒಂದು  ದೊಡ್ಡ ಮಳೆ, ಹಾಗೆ ಚಿಕ್ಕ ಮಳೆ, ಮತ್ತೊಂದು ಸುಮಾರಿನ ಮಳೆ.  ಹೀಗೆ ಮಳೆ, ಮಳೆ, ಮಳೆ, ಹೇಳಲು ಹೊರಟರೆ ಮೂರು ಪೇಜು ಮಳೆಯೇ ಆಗಿಬಿಡುತ್ತದೆ...!  ಹೊರ ಹೋಗಲು ಆಗದಿದ್ದುದಕ್ಕೆ ಎಲ್ಲಾ ಮಳೆಯನ್ನೂ ಶಪಿಸುತ್ತಾ, ಕೆಲವರು ಹಳೆ ಕಾಲದ ಮಳೆಯನ್ನು ಹಾಡಿ ಹೊಗಳುತ್ತಾ  ಕುಳಿತು ಕೊಂಡದ್ದಾಯ್ತು.



 ನಾವು ಶಾಲೆಗೆ ಹೋಗುವಾಗಿನ ಕಾಲದ  ಮಳೆ ನಿಜಕ್ಕೂ ನಮಗೆ ಸಂತಸವನ್ನೇ ತರುತ್ತಿತ್ತು. ಶಾಲೆ ಬಿಟ್ಟ ತಕ್ಷಣ ಎಲ್ಲರೂ ಸರತಿಯ ಸಾಲಿನಲ್ಲಿ ಮಳೆ ನೀರು ಕಲೆಯುತ್ತಾ ಹೋಗುತ್ತಿದ್ದೆವು ರಸ್ತೆ ಪಕ್ಕದ ಕಾಲುವೆಯಲ್ಲಿ!   ಒಬ್ಬರಾದರೂ ರಸ್ತೆಯಲ್ಲಿ ಹೋಗುವವರಿಲ್ಲ.  ನೀರು ತುಂಬಿದ ಚಿಕ್ಕ ಚಿಕ್ಕ ಹೊಂಡದಲ್ಲಿ ಪಚ್ಚಂತ ಕಾಲಿಟ್ಟು ಕಾಲಿನ ಪಕ್ಕದಲ್ಲಿ ಮೂಡುವ ನೀರಿನ ರೆಕ್ಕೆಯನ್ನು ನೋಡಿ ಬೆರಗಾಗುತ್ತಿದ್ದೆವು. ನೀರು ಸ್ವಲ್ಪ ಎತ್ತರದಲ್ಲಿ ಬೀಳುವ ಜಾಗಕ್ಕೆ ದರಕಿನ ಕಡ್ಡಿಯನ್ನು ಹಿಡಿದು ಅದು ಕಡ್ಡಿಯ ಕವಲುಗಳಲ್ಲಿ ಹರಡಿಕೊಳ್ಳುವ ವಿನ್ಯಾಸಕ್ಕೆ  ಮುದಗೊಳ್ಳುತ್ತಿದ್ದೆವು. ಅಪ್ಪಿ ತಪ್ಪಿ ಬಿಸಿಲು ಬಿದ್ದಾಗ ಮೂಡುವ ಕಾಮನಬಿಲ್ಲು ರೋಮಾಂಚನ ಮೂಡಿಸುತ್ತಿತ್ತು.



ಮುಂದೆ ಹೋಗುವವರಿಗೆ  ಹಿಂದಿನ ಹುಡುಗರು  ತಮಗೆ ಮುಂದೆ ಬಿಡಲಿಲ್ಲ ಎನ್ನುವ ಸಂಕಟಕ್ಕೆ ನೀರು ಚಿಮ್ಮಿ ಮೈ ಎಲ್ಲ ಒದ್ದೆ ಮಾಡುವುದು.  ನೀರಿನಲ್ಲಿ ಹೋಗುತ್ತಾ ಹೋಗುತ್ತಾ    ಪಾದಗಳನ್ನ ನೋಡಿಕೊಳ್ಳುತ್ತಾ ಅದರ ಗುಲಾಬಿ ಬಿಳುಪಿಗೆ ಮೈ ಮರೆಯುತ್ತಿದ್ದೆವು.ಮನೆಗೆ ಬಂದು  ನುಣ್ಣನೆಯ ನೆಲಕ್ಕೆಕಾಲು  ತೀಡಿ  ಚೀಕ್, ಚೀಕ್  ಎನ್ನುವ ಶಬ್ದ ಹೊರಡಿಸುವುದು,  ಜೋರು ಮಳೆ ಬರಲೆಂದು ದೇವರಿಗೆ ಒಂದು ಕಟ್ಟು ದೂರ್ವೆ ಹರಕೆ ಮಾಡಿಕೊಳ್ಳುವುದು ಇತ್ತು. ಶಾಲೆಗೆ ರಜೆ ಕೊಡುತ್ತಾರೆಂದು. ರಜೆ ಕೊಟ್ಟರೆ ಮತ್ತೆ ಶಾಲೆ ಯಾವತ್ತು ಶುರುವಾಗತ್ತಪ್ಪಾ ಮನೇಲಿ ಬೇಜಾರು,  ಅನ್ನುವ ವೇದನೆ.
 


 ಒಂದೇ ಒಂದಾದರೂ ಮಳೆಯ ಫೋಟೋ ಚನ್ನಾಗಿ ತೆಗೆಯಲಾಗಲಿಲ್ಲ. ನನ್ನವರಲ್ಲಿ ದುಃಖ ತೋಡಿಕೊಂಡರೆ,'' ಮಳೆಯನ್ನು ಅಲುಗಾಡದಂತೆ ನಿಲ್ಲಿಸಿ ಫೋಟೋ ಹೊಡಿ, ಮಳೆ ನಿಂತಿದ್ದಾಗ ಹೊಡಿ,'' ಎನ್ನುವ ಸಲಹೆಯನ್ನೆಲ್ಲಾ ಕೊಟ್ಟರು.

 ಮೋಜಿಗೆ   ಎಲ್ಲಾ ಚನ್ನಾಗಿತ್ತು ಆಗ. ಬೆಂಗಳೂರಲ್ಲಿ ಮಳೆ ಬಂದರೂ ಬೇಸರ, ಬರದಿದ್ದರೂ ಚಿಂತೆ, ಮಕ್ಕಳಿಗೆ ನೀರು ಆಡಲು  ಟೆರೆಸೆ  ಗತಿ.



ಮನೆಯಲ್ಲಿಯೇ ಕುಳಿತು ಟೈಮ್ ಪಾಸ್ ಮಾಡಲು ಮಾಡಿದ  ಕಜ್ಜಾಯವೆಲ್ಲಾ  ಮೆಂದಿದ್ದಾಯ್ತು. ನನ್ನವರು, '' ಹೀಗೆ ಆದರೆ ಮತ್ತೆ ಕೂತವರನ್ನು ಎಬ್ಬಿಸಲು ಯಾವುದಾದರೂ ಮಿನಿ ಕ್ರೈನ್ ಬಾಡಿಗೆಗೆ ಸಿಗುತ್ತಾ ಕೇಳಬೇಕು''  ಎಂದು ನನ್ನನ್ನು ಉದ್ದೇಶಿಸಿಯೇ ಹೇಳಿದರು..!  ಎಲ್ಲರೆದುರು ಯಾಕೆ ಅಂತ  ನಾನೂ ಸುಮ್ಮನಾದೆ..!


ನನ್ನವರ ಊರಿಗೆ ಹೋಗುವಾಗ ಲಾಂಚಲ್ಲಿ ಹೋಗಬೇಕು.. ಅಲ್ಲೂ ಮಳೆ.ಮಳೆ. ಶರಾವತಿ ಕೂಡಾ ಅಬ್ಬರಿಸುತ್ತಿದ್ದಳು.


ಮನೆ ಒಳಗಿನಿಂದಲೇ ಕಂಡ ಕಂಡದ್ದನ್ನೆಲ್ಲ ಫೋಟೋ ತೆಗೆದಿದ್ದಾಯ್ತು.. ಹೊತ್ತು ಹೋಗದೆ.

ಅಂತೂ ಹಬ್ಬಕ್ಕೆ ಸುಲಭದ  ಕೆಲಸ ಹಮ್ಮಿಕೊಂಡು ಸಂಭ್ರಮಿಸುತ್ತಿದ್ದೇನೆ.  ಈ ಸಲ ಮಳೆಯ ಹೆಳೆಯೊಂದಿಗೆ ಚಿತ್ತಾರದರಮನೆಯಲ್ಲಿ ಹುಟ್ಟು ಹಬ್ಬ..!!



54 comments:

  1. ಮೊದಲಿಗೆ ಚಿತ್ತಾರದ ಅರಮನೆಗೊಂದು ಪ್ರೀತಿ ತುಂಬಿದ ಶುಭಾಶಯ !
    ಬರಹದ ಸಂಖ್ಯೆ ಅಲ್ಲ ಗುಣಮಟ್ಟ ಮುಖ್ಯ ಅಂತ ಎಲ್ಲ ಅನ್ನೋದಿಲ್ಲ ! ಯಾಕೆಂದ್ರೆ , ನಾವು ಮತ್ತೆ ಮತ್ತೆ ಬರೀತಾ , ಬ್ಲಾಗ್ ನ update ಮಾಡ್ತಾ ಇದ್ರೆ ಮಾತ್ರ ಜನರಿಗೆ ನೆನಪಿರತ್ತೆ !ಹಿ ಹಿಹಿ .. ಇದು ನಿಜಾನೆ ಆಲ್ವಾ ವಿಜಿ ?
    ಏನೇ ಇರಲಿ , ನಿನ್ನ ಬರಹಗಳನ್ನು ಓದಿ ಖುಷಿ ಪಟ್ಟಿದ್ದೇನೆ . ಇಲ್ಲಿ ವೈವಿಧ್ಯವನ್ನು ನೋಡಿ ಕೆಲವೊಮ್ಮೆ ಹೊಟ್ಟೆ ಉರಿಸಿಕೊಂಡಿದ್ದೇನೆ. ಈಗಲೂ ಕೂಡ ನೀನು ಚೌತಿ ಹಬ್ಬಕ್ಕೆ ಊರಿಗೆ ಹೋಗಿ ಮಳೆಗಾಲದ ಆನಂದವನ್ನು ಅನುಭವಿಸಿದ್ದಷ್ಟೇ ಅಲ್ಲದೆ, ಹಳೆಯ ನೆನಪುಗಳನ್ನು ತರುವಂಥಾ ಫೋಟೋ ಗಳನ್ನೂ ಹಾಕಿ ಇನ್ನೂ ಹೊಟ್ಟೆ ಉರಿಸಿದ್ದೀಯ !!
    ವಿಜಿ , ಚುಕ್ಕಿಯ ಚಿತ್ತಾರಗಳು ಬೆಳೆಯಲಿ , ತಿಂಗಳಿಗೊಮ್ಮೆಯಾದರೂ ಅಡ್ಡಿಲ್ಲ ಹೊಸ ರಂಗೋಲಿ ಮೂಡಲಿ ಎಂದು ಮನಃ ಪೂರ್ವಕವಾಗಿ ಹಾರೈಸುವೆ !!

    ReplyDelete
  2. ಹೌದು ವಿಜಯಾ, ನಿಮ್ಮ ಅಬಿಪ್ರಾಯಕ್ಕೆ ನನ್ನ ಹುಂ!
    ಚೆನ್ನಾಗಿದೆ ಪೋಟೋಗಳು..

    ReplyDelete
  3. ಚಿತ್ರಾ..
    ಪ್ರೀತಿ ತು೦ಬಿದ ಹಾರೈಕೆಗೆ ಎಷ್ಟು ನಮಸ್ಕಾರ ಹೇಳಲಿ ಹೇಳು.
    ನಿನ್ನ ಎಲ್ಲಾ ಮಾತೂ ನಿಜ್ವೇಯ..
    ನಾವು ಬರ್ದಿದ್ದಕ್ಕೆ ಜನರಿಗೆ ಪರಿಚಯ ಆಗಿದ್ದು.. ಬರ್ದಿದ್ದಕ್ಕೆ ಅವ್ರ ನೆನಪಿನಲ್ಲಿರದೂ.. ಅದು ಬರೀತಾ ಇದ್ರೆ ಮಾತ್ರ ಸಾಧ್ಯ.. ಕೊಟ್ಟ್ ಕಾಫಿ ಕಹಿ ಇದ್ರೂ, ಸಿಹಿ ಇದ್ರೂ.. ಸರಿ ನಾವು ಮನೆ ಬಾಗಿಲು ತೆಗೆದಿಟ್ಟುಕೊ೦ಡು ಸ್ವಾಗತಿಸಿದ್ರೆ ಮಾತ್ರ ನಮ್ಮ ನೆನಪು ಜನರಿಗೆ ಇರದು..

    ಥ್ಯಾ೦ಕ್ಸ್ ಚಿತ್ರಾ... ಬರ್ತಿರೇ....

    ReplyDelete
  4. ಶುಭಾಶಯಗಳು... ಹೀಗೆ ಮತ್ತಷ್ಟು ಲೇಖನಗಳು ಬರುತ್ತಲಿರಲಿ

    ReplyDelete
  5. ಆಶಾ ತು೦ಬಾ ಥ್ಯಾ೦ಕ್ಸ್ ಕಣ್ರೀ...

    ReplyDelete
  6. ಸುಗುಣಾ..ತು೦ಬಾ ಥ್ಯಾ೦ಕ್ಸ್

    ReplyDelete
  7. ವಿಜಯಶ್ರೀ,

    ಮೊದಲಿಗೆ ನಿಮ್ಮ ಬ್ಲಾಗ್‌ಗೆ ಹಾಗೂ ನಿಮಗೆ ಹಾರ್ದಿಕ ಅಭಿನಂದನೆಗಳು. :) ಚುಕ್ಕಿಚಿತ್ತಾರದೊಳಗಿನ ವೈವಿಧ್ಯ ಸದಾ ಹೀಗೇ ಮುಂದುವರಿಯಲಿ. ಮಳೆಯ ಫೋಟೋಗಳೆಲ್ಲಾ ತುಂಬಾ ಇಷ್ಟವಾದವು. ಅದರಲ್ಲೂ ಕಾಲುತೊಳೆಯಲು ಧಾರೆಯಾಗಿ ಹರಿಯುತ್ತಿರುವ ನೀರಿನ ಫೋಟೋ ನೋಡಿ ಹೊಟ್ಟೆ ಉರಿಯಿತು... (ಆ ಭಾಗ್ಯ ನನಗೆ ತಪ್ಪಿತಲ್ಲ ಎಂದು :)). ಕಜ್ಜಾಯಗಳೂ ಸವಿಯಾಗಿವೆ...:) ಸಿಹಿ ಕಹಿ ಏನೇ ಬರ್ಲಿ... ಬ್ಲಾಗ್ ಬರೆಯುವಿಕೆ ನಿರಂತರವಾಗಿರಲಿ. :)

    ಪ್ರೀತಿಯಿಂದ
    ತೇಜಸ್ವಿನಿ.

    ReplyDelete
  8. ಚಿತ್ತಾರದರಮನೆಗೆ ಪ್ರೀತಿ ತು೦ಬಿದ ಶುಭಾಶಯಗಳು.. :)

    ReplyDelete
  9. ವಿಜಯಶ್ರೀ ಮೇಡಂ,


    -- ಚುಕ್ಕಿ ಚಿತ್ತಾರಕ್ಕೆ ಎರಡು ವರ್ಷ ತುಂಬಿದ ಈ ಶುಭಗಳಿಗೆಯಲ್ಲಿ ಅಭಿನಂದನೆಗಳು.
    ನೀವು ಹೇಳಿದಂತೆ ಇತ್ತೀಚಿಗೆ ಬ್ಲಾಗ್ ಬರೆಯುವ ಓದುವ ಅಭ್ಯಾಸ ಕಡಿಮೆಯಾಗುತ್ತಿದೆ ಎಂಬ ಅನುಮಾನ ನನಗೂ ಕಾಡುತ್ತಿದೆ! ಮೊದಲೆಲ್ಲಾ ದಿನಕ್ಕೆ ಒಂದು ಘಂಟೆಯಾದರೂ ಬ್ಲಾಗ್ ಮನೆಗೆ ಮೀಸಲಿಡುತ್ತಿದ್ದೆ. ಆದರೆ ಇಂದು?
    ಏನೇ ಇರಲಿ,
    ಊರಿನ ಮಳೆಗಾಲದ ಚಿತ್ರಗಳು ಊರನ್ನು ನೆನಪಿಸಿತು. ಅಂದ ಹಾಗೆ ನೀವು ಊರಿಗೆ ಬಂದ ಖುಷಿಯಲ್ಲಿ ಮಳೆ ನಿಮ್ಮ ಜೊತೆ ಬಿಡಲಿಲ್ಲ ಅನಿಸುತ್ತೆ:)
    ಮುಂದಿನ ಸಾರಿ ಫೋಟೋ ತೆಗೆಯುವಾಗ ನಿಮ್ಮವರ ಸಲಹೆಗಳನ್ನು ಪಾಲಿಸಿನೋಡಿ!!!!

    ReplyDelete
  10. ಮನಮುಕ್ತಾ
    ಪ್ರೀತಿ ತು೦ಬಿದ ಹಾರೈಕೆಗೆ ಧನ್ಯವಾದಗಳು.

    ReplyDelete
  11. ಪ್ರವೀಣ್
    ಆತ್ಮೀಯ ಹಾರೈಕೆಗೆ ಅಭಾರಿ.. ನಿಮ್ಮೆಲ್ಲರ ಕೆಲಸ ಕಾರ್ಯಗಳ ನಡುವೆಯೂ ಬಿಡುವು ಮಾಡಿಕೊ೦ಡು ಹಾರೈಸಿದ್ದೀರಿ..
    ಮತ್ತೊಮ್ಮೆ ಥ್ಯಾ೦ಕ್ಸ್

    ReplyDelete
  12. ತೇಜಸ್ವಿನಿ
    ಆತ್ಮೀಯ ಪ್ರೋತ್ಸಾಹಕ್ಕೆ ತು೦ಬಾ ಥ್ಯಾ೦ಕ್ಸ್
    ಊರಿನ ಮಳೆ ನೋಡದೆ ತು೦ಬಾ ದಿನಗಳೆ ಆಗಿತ್ತು..

    ReplyDelete
  13. ಮೊದಲಿಗೆ ವಿಜಯಶ್ರೀಗೆ ಅಭಿನಂದನೆಗಳು ಮತ್ತು ಅವರ ಮನದ ಭಾವಗಳಿಗೆ ಪ್ರಕಟಣಾ ಮಾಧ್ಯಮವಾದ "ಚುಕ್ಕಿ ಚಿತ್ತಾರ"ಕ್ಕೆ ಸುಭಾಶಯಗಳು ಎರಡು ತುಂಬಿದ್ದು ಇನ್ನೂ ಹೆಚ್ಚು ಬರವಣಿಗೆ ಬರುತ್ತದೆಂಬ ಆಸೆ ನಮ್ಮದು...
    ಅಂದಹಾಗೆ ವಿಜಯಶ್ರೀನ ನಾನಂತೂ ಕೇಳುತ್ತಿದ್ದೆ "ಏನಾದ್ರೂ ಹೊಸಾದು ಇದ್ಯಾ ಬ್ಲಾಗಲ್ಲಿ?" ಅಂತ...ಇನ್ನು ಚಿತ್ರಾ ಹೇಳಿದ್ದೂ ನಿಜ ವಾರಕ್ಕೊಂದು ದಿನಕ್ಕೊಂದು ಹಾಕೋದು ಮುಖ್ಯ್ ಅಲ್ಲ ಹಾಕಿದ್ದು ಎಷ್ಟು ಮುಖ್ಯ ಅನ್ನೋದು.
    ಆದ್ರೂ "ಚುಕ್ಕಿಚಿತ್ತಾರ" ವೈವಿಧ್ಯಮಯ, ಕವನ, ಫೋಟೋ-ವಿವರ ಸಮೇತ ಲೇಖನ, ಹರಟೆ, ಲಘು ಪ್ರಹಸನ (ಭಸ್ಮಾಸುರ ಖಂಡಿತಾ ನೆನಪಾಗ್ತಾನೆ), ಅಡುಗೆ ವಿಷಯ (ನಾಲಗೆ ರುಚಿ) ವಿಜ್ಞಾನ ಬರಹಗಳು ಹೀಗೆ...
    ಚಿಕ್ಕು ಚಿತ್ತಾರ ಇನ್ನೂ ಬಾನಂಗಳದ ತುಂಬಾ ಚಿತ್ತಾರ ಮಾಲೆ ಹರಡಲಿ ಎಂದು ಹಾರೈಸುತ್ತೇನೆ...

    ReplyDelete
  14. ಸೂಪರ್...
    ಚಿತ್ರಾ ಹೇಳಿದಂತೆ, ನಮಗೆಲ್ಲಾ ಹೊಟ್ಟೆ ಉರಿಸುವುದಕ್ಕಾಗಿಯೇ (!) ನೀವು ಬರೆದರೂ, ಉರಿದ ಹೊಟ್ಟೆ ತಂಪಾಗಿದ್ದು ನಿಮ್ಮ ಬರಹಗಳಿಂದ.

    ಬರೀಲಿಕ್ಕೂ ಪುರುಸೊತ್ತಿಲ್ಲ ಎಂಬ ನಿಮ್ಮ ವಾದಕ್ಕೆ ನನ್ನದೂ ಜೈಕಾರ! ಯಾಕೆಂದರೆ ನಾನೊಬ್ಬನೇ ಅಲ್ಲ ಈ ಜಾತಿಯವ ಅಂತ ನಂಗೂ ಸಂಭ್ರಮ!

    ಶುಭಾಶಯ, ನಮ್ಮ ಹೊಟ್ಟೆ ಉರಿಸ್ತಾ ಇರಿ!
    -avisblog.wordpress.com

    ReplyDelete
  15. ಜಲನಯನ ಸರ್

    ನಿಮ್ಮ ಆತ್ಮೀಯತೆಗೆ, ಪ್ರೋತ್ಸಾಹಕ್ಕೆ ಸದಾ ಋಣಿ. ಯಾರಾದ್ರೂ ಬೆನ್ನ ಹಿ೦ದೆ ನಿ೦ತು ನಡೆ ಮು೦ದೆ ನಡೆ ಮು೦ದೆ ಅನ್ನುತ್ತಿದ್ದರೆ ಉತ್ಸಾಹ ಅನಿವಾರ್ಯವಾಗಿ ಹೆಚ್ಚಾಗಿಬಿಡುತ್ತದೆ.. ತು೦ಬಾ ಥ್ಯಾ೦ಕ್ಸ್ ಸರ್..

    ReplyDelete
  16. ಅವಿನಾಶ್..
    ಇದ್ಯಾವ ಹೊಸ ವೇಷ..?...:))ಹಳೆಯ ವೇಷ...!!

    ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.
    ನೀವೂ ಹೊಸ ಹೊಸ ಅನ್ವೇಷಣೆ ಮಾಡಿ ವರದಿ ಬರೆದು ಬರೆದು ನಮ್ಮ ಹೊಟ್ಟೆ ಉರಿಸಿ...!!!:)
    ಮತ್ತೊಮ್ಮೆ ಥ್ಯಾ೦ಕ್ಸ್..

    ReplyDelete
  17. ನನ್ನಿಷ್ಟದ ಬ್ಲಾಗುಗಳಲ್ಲಿ ನಿಮ್ಮದೂ ಒಂದು...
    ಬರಹಗಳ ವೈವಿದ್ಯ ಮುಂದೆಯೂ ಸಾಗಲಿ...

    ಜೈ ಜೈ ಜೈ ಹೋ !!

    ReplyDelete
  18. ಥ್ಯಾ೦ಕ್ಸು.... ಪ್ರಕಾಶಣ್ಣ....

    ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಋಣಿ..:)

    ReplyDelete
  19. ವಿಜಯಶ್ರೀ,
    ಎಷ್ಟು ಸುಂದರವಾದ ಚಿತ್ರಗಳನ್ನು ಕೊಟ್ಟಿದ್ದೀರಿ. ಆದರೂ ಕೊರಗುತ್ತಿದ್ದೀರಲ್ಲ. ನಿಮ್ಮ ಫೋಟೋ, ನಿಮ್ಮ ಲೇಖನ ಹಾಗು ನಿಮ್ಮ ಊರು ಸೂಪರ್ ಆಗಿದೆ ಅಂತ ಹೇಳಲೇ ಬೇಕು. ಇದೇ ರೀತಿ ಮುಂದುವರೆಯಲಿ. ಶುಭಾಶಯಗಳು.

    ReplyDelete
  20. nimma barahada gunamaTTadindale ninapiratte...

    best of luck for the future...
    innu bareetaa iri...
    vaarakkondu post irali....

    ReplyDelete
  21. ಸುಬ್ರಮಣ್ಯ ಮಾಚಿಕೊಪ್ಪ
    ಥ್ಯಾ೦ಕ್ಸ್..

    ReplyDelete
  22. ಕಾಕ..
    ಫೋಟೋಕ್ಕಿ೦ತ ಮಳೆ ಇನ್ನೂ ಚನ್ನಾಗಿತ್ತು...:))
    ನಮ್ಮೂರು ಮೆಚ್ಚಿದ್ದಕ್ಕೆ, ಬರಹ ಮೆಚ್ಚಿದ್ದಕ್ಕೆ, ಪ್ರೀತಿ ಪೂರ್ವಕ ಹಾರೈಕೆಗೆ ತು೦ಬು ಮನಸ್ಸಿನ ಧನ್ಯವಾದಗಳು.

    ReplyDelete
  23. ದಿನಕರ್..
    ತು೦ಬಾ ಥ್ಯಾ೦ಕ್ಸ್..

    ReplyDelete
  24. Many more happy returns of the day to 'chukki chittara' :)

    ReplyDelete
  25. Happy Birthday chukki chittaara

    heegeye nooraaru birthday galu aaguttirali

    ReplyDelete
  26. ಎರಡು ವರ್ಷ ತುಂಬಿದ ಚುಕ್ಕಿ ಚಿತ್ತಾರಕ್ಕೆ ಅಭಿನಂದನೆಗಳು . ವೈವಿಧ್ಯದ ಚಿತ್ತಾರವ ಸಾರುತ್ತಿರುವ ತಮ್ಮ ಬ್ಲಾಗ್ ವೈಭವಿಸಲಿ. ತಾವು ಹೇಳಿದಂತೆ ಬ್ಲಾಗಿಗರ ಉತ್ಸಾಹ ಕುಂಟಿತವಾಗಿದೆಯೇ? ನನ್ನ ವಿಷಯದಲ್ಲಂತೂ ನಿಜ.
    ಮಳೆಯ ಚಿತ್ತಾ ರ ಸೊಗಸಾಗಿದೆ.

    ReplyDelete
  27. ಶುಭಾಶಯಗಳು ವಿಜಯಶ್ರೀ ಅವರಿಗೆ. ನಿಮ್ಮ ಬ್ಲಾಗಿನ ಮೋಹಿನಿ ಭಸ್ಮಾಸುರನ ಪ್ರಸ೦ಗ ಮರೆಯಲಾಗುವುದೆ? ;).. ಮಳೆಗಾಲದ ಚಿತ್ರಗಳು, ಚಿತ್ರಣಗಳೂ ಮನ ಮುಟ್ಟಿದವು. ಅಭಿನ೦ದನೆಗಳು.

    ಅನ೦ತ್

    ReplyDelete
  28. vijayashri yavare hitavaada anubhava.abhinandanegalu.

    ReplyDelete
  29. ಎರಡು ವರ್ಷತುಂಬಿದ್ದಕ್ಕೆ ಶುಭಾಶಯಗಳು! ಹಳ್ಳಿಯ ನೆನಪನ್ನು ಆಗಾಗ ನೆನಪಿಸುವ ನಿಮ್ಮ ಬ್ಲಾಗು ವಿಭಿನ್ನ. ನುಣುಪಾದ ಕಲ್ಲಿನ ಮೇಲೆ ಕಾಳುತೊಳೆಯಲು ಹೋಗಿ ಕಾಲು ಜಾರಿದರೆ ಕಷ್ಟ. ! ಅಡಿಕೆ ದಬ್ಬೆಯ ದಾರಿ, ಅಡಿಕೆ ಸಿಪ್ಪೆ ಹೊದಿಸಿದ ಅಂಗಳ ಸೌತೆ, ಬೀನ್ಸ್ ಬಳ್ಳಿಗಳು, ಡೇರೆ ಗಿಡ ಮತ್ತೆ ಚೌತಿ ಕಜ್ಜಾಯ ಎಲ್ಲ ಸೂಪರ್!

    ReplyDelete
  30. ವಾಣಿಶ್ರೀ..
    ಥ್ಯಾ೦ಕ್ಸ್..

    ReplyDelete
  31. ಸಾಗರದಾಚೆಯ ಇಂಚರ
    ನೂರಾರುಗಳಲ್ಲಿ ಆರಕ್ಕ೦ತೂ ಗ್ಯಾರ೦ಟೀ ಕೊಡಬಹುದು...
    ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  32. ಸೀತಾರಾ೦ ಸರ್..
    ನನ್ನ ಬರಹಗಳಿಗೆ ತಮ್ಮ ಅಮೂಲ್ಯ ಪ್ರತಿಕ್ರಿಯೆ ತು೦ಬಾ ಪ್ರೋತ್ಸಾಹಕಾರಿ..
    ಪ್ರೀತಿ ವಿಶ್ವಾಸಕ್ಕೆ ಋಣಿ.

    ReplyDelete
  33. ಶಿವರಾಮ್
    ಆತ್ಮೀಯ ಪ್ರೋತ್ಸಾಹಕ್ಕೆ, ಪ್ರತಿಕ್ರಿಯೆಗೆ ಧನ್ಯವಾದಗಳು.
    ನಿಮ್ಮ ಬ್ಲಾಗು ಬಣ..ಬಣ ಗುಟ್ಟುತ್ತಿದೆ.. ಆಗಾಗ ನೀರು ಹನಿಸಿ ಸ್ವಲ್ಪ ಹಸಿರಾಗಿಸಲು ಪ್ರಯತ್ನಿಸಿ..

    ReplyDelete
  34. ಅನಂತ್ ಸರ್..
    ಭಸ್ಮಾಸುರನ ಕಥೆಯನ್ನು ಇನ್ನೂ ನೆನಪಿಟ್ಟುಕೊ೦ಡಿದ್ದಕ್ಕೆ, ಆತ್ಮೀಯತೆಗೆ, ಪ್ರತಿಕ್ರಿಯೆಗೆ ಮನ:ಪೂರ್ವಕ ಧನ್ಯವಾದಗಳು.

    ReplyDelete
  35. ಕಲರವ..
    ಹಾರೈಕೆಗೆ ಥ್ಯಾ೦ಕ್ಸ್

    ReplyDelete
  36. ಅಲ್ಲಿಗೆ 'ಲಾಂಚಿ’ನಲ್ಲಿ ಹೋಗಬೇಕು ಅಂತ ಬಹಳ ಮಂದಿ ಹೇಳುವುದನ್ನು ಕೇಳಿದ್ದೇನೆ. ಒಮ್ಮೆಯೂ ಹೋಗಲಾಗಿಲ್ಲ. ಮುಂದಿನ ಜಾತ್ರೆಗಾದರೂ (ಪಟಾಕಿ ಹೊಡೆಯೋದನ್ನು ನೋಡೋಕೆ !) ಭೇಟಿ ಕೊಡಬೇಕು ಅಂದುಕೊಂಡಿದ್ದೇನೆ. ಚಿತ್ರಗಳು ಸೊಂದರವಾಗಿವೆ. ಲೇಖನಗಳು ಕಡಿ ಮೆಯಾದರೇನಂತೆ ? ಬರೆದದ್ದಷ್ಟೂ ಚೆನ್ನಾಗಿಯೇ ಇದ್ದವು. ಎರಡು ಹನ್ನೆರೆಡಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ.

    ReplyDelete
  37. ಸುಬ್ರಹ್ಮಣ್ಯ..

    ನಿಮ್ಮ ಆತ್ಮೀಯ ಹಾರೈಕೆಗೆ ಧನ್ಯವಾದಗಳು.

    ReplyDelete
  38. ಚಿತ್ತಾರದರಮನೆಯಲಿನ ಸಂಭ್ರಮದ ಹಾಡಿಗೆ
    ನನ್ನದೂ ಸ್ವರ ಸೇರಲಿ..
    ಚುಕ್ಕಿ ಚಿತ್ತರಕ್ಕೆ ಶುಭ ಕೋರಲಿ ...:)

    ಫೋಟೋಗಳ್ಳೆಲ್ಲಾ ತುಂಬಾ ಚೆನ್ನಾಗಿವೆ. ಬರಹ ಕೂಡ ತುಂಬಾ ಇಷ್ಟವಾಯ್ತು. ಹ ಹ್ಹ ಹ್ಹ...ಬ್ಲಾಗ್ ಬರೆಯಲು ಸಮಯವಿಲ್ಲದವರ ಗುಂಪಿನಲ್ಲಿ ನಾನೂ ಇದ್ದೇನೆ..:))

    ReplyDelete
  39. Congratulation.... idhe tharaha theru eleyuttiri sathathavaagi :)

    maLeya chithragaLannu nodi manasu haage karaavalige hogi bidthu... kajaayagaLannu nodi baayi neerooriddanthu suLLalla :)

    nimma barahagaLa vaividyate manasige kushi needuttade..

    ReplyDelete
  40. ಮೇಡಮ್,
    ಮೊದಲಿಗೆ ಶುಭಾಶಯಗಳು.
    ಫೋಟೊಗಳು ಸೂಪರ್ ಆಗಿವೆ. ಅದಕ್ಕೆ ಬರಹವೂ ಕೂಡ.. ಮತ್ತೆ ನನ್ನ ಬ್ಲಾಗಿಗೆ ಈ ಸೆಪ್ಟಂಬರ್ ಹತ್ತಕ್ಕೆ ಸರಿಯಾಗಿ ನಾಲ್ಕನೆ ವರ್ಷಕ್ಕೆ ಕಾಲಿಟ್ಟಿದ್ದೆ ಮರೆತುಹೋಗಿದ್ದೇನೆ..ಬಿಡುವಿಲ್ಲದಂತಾಗಿ ಬ್ಲಾಗ್ ಬರೆಯುವುದು ಓದುವುದು ಆಗುತ್ತಿಲ್ಲ. ನೀವು ಕೆಲವರು ಉತ್ಸಾಹದಿಂದಿರುವುದು ನೋಡಿ ನಾನು ಬಿಡುವು ಮಾಡಿಕೊಳ್ಳಬೇಕೆನಿಸುತ್ತಿದೆ..

    ReplyDelete
  41. ಚೇತನಾ..
    ಫೋಟೋ ಇಷ್ಟ ಪಟ್ಟಿದ್ದಕ್ಕೆ, ಬರಹ ಮೆಚ್ಚಿದ್ದಕ್ಕೆ ಆತ್ಮೀಯವಾಗಿ ಪ್ರತಿಕ್ರಿಯಿಸಿದ್ದಕ್ಕೆ ತು೦ಬಾ ಥ್ಯಾ೦ಕ್ಸ್..

    ReplyDelete
  42. ಸುಧೇಶ್..
    ತು೦ಬಾ ಥ್ಯಾ೦ಕ್ಸ್..

    ReplyDelete
  43. ಶಿವು ಸರ್..
    ಧನ್ಯವಾದಗಳು..

    ReplyDelete
  44. ಬ್ಲಾಗಿನ ಹುಟ್ಟು ಹಬ್ಬಕ್ಕೆ ಶುಭಾಶಯಗಳು.

    ಒಳ್ಳೆಯ ಬರಹಕ್ಕೆ ಒಪ್ಪೋ ಫೋಟೋ ಅಲಂಕಾರ ಮಾಡಿದ್ದೀರಿ. ಮಳೆಗಾಲ ಎಂಬುದಂತೂ, ಪೂರ ಬರದ ಛಾಯೆಯಲ್ಲಿ ಬೇಯೋ ನಮ್ಮಂತ ಹಳ್ಳಿಗರಿಗೆ ವಿಶೇಷವೇ!

    ನನ್ನ ಬ್ಲಾಗಿಗೆ ಬನ್ನಿರಿ:
    www.badari-poems.blogspot.com
    www.badari-notes.blogspot.com

    ReplyDelete
  45. ದೀಪಸ್ಮಿತ..
    ತು೦ಬಾ ಥ್ಯಾ೦ಕ್ಸ್

    ReplyDelete
  46. ಬದರಿನಾಥ್ ಅವರೆ..
    ಚಿತ್ತಾರದರಮನೆಗೆ ಸ್ವಾಗತ..
    ಪ್ರತಿಕ್ರಿಯೆಗೆ ಮನ:ಪೂರ್ವಕ ಧನ್ಯವಾದಗಳು.

    ReplyDelete
  47. ತಡವಾಗಿದೆ...ಆದರೂ ಶುಭಾಶಾಯಗಳು...

    ReplyDelete
  48. ಮೊದಲಿಗೆ ಎರಡು ವರ್ಷ ತುಂಬಿದ್ದಕ್ಕೆ ಶುಭಾಶಯಗಳು. ದೀಪಾವಳಿಯ ಶುಭಾಶಯಗಳು ತಡವಾಗಿ. ತಡವಾಗೇನು? ಭಯಂಕರ ತಡವಾಗಿ. ನಾನೀ ಪೋಸ್ಟು ನೋಡಿದ್ದೇ ಇವತ್ತು ಅನಿಸುತ್ತಿದೆ.. ನೀವಂದಂತೆ ಸೂರಂಚಿನ ನೀರಲ್ಲಿ ಕಾಲು ತೊಳೆಯೋ ಮಜಾನೇ ಬೇರೆ.. :-) ಫೋಟೋಗಳೂ, ಲೇಖನ ಲಾಯ್ಕಿದ್ದು :-) :-)
    ಇನ್ನು ಪೋಸ್ಟು ಹಾಕಲಾಗದ ನಿಮ್ಮ ಕಥೆಯ ವ್ಯಥೆ ಬಗ್ಗೆ.. ಈಗ ಸದ್ಯ ಬರೆಯೋ ಉಮೇದಲ್ಲಿದ್ದಿ. ಬರೀತಿದ್ದಿ. ಮುಂದೆ ಕೆಲ್ಸಕ್ಕೆ ಸೇರಿದಿ ಅಂತ ಬಿಸಿಯಾದ್ರೆ ನನ್ನ ಕಥೆನೂ ಅದೇ ಏನೋ ಅನಿಸ್ತು.. ಏನೇ ಆಗ್ಲಿ. ಅಪರೂಪಕ್ಕೆ ಬರದ್ರೂ ನಿಮ್ಮ ಬರಹ ಕೊನೇವರೂ ಅದೇ ಆಸಕ್ತಿಯಿಂದ ಓದಿಸಿಕೊಂಡು ಹೋಗ್ತು. ಬರ್ಯೋ ಅಂತ ನನ್ನಂತ ಎಳೆಯವ್ಕೆ ಸ್ಪೂರ್ತಿ ಕೊಡ್ತು.. ಬರೀತಿರಿ :-)

    ReplyDelete
  49. ಸುಕನ್ಯ
    ತುಂಬಾ ಚೆನ್ನಾಗಿದೆ ರೀ ಬ್ಲಾಗು ಅಭಿನಂದನೆಗಳು

    ReplyDelete