Wednesday, June 19, 2013

ಮಾವನವರ ಚಿತ್ರ .

ಇದು ನಾನು ರಚಿಸಿದ ನನ್ನ ಮಾವನವರ ಚಿತ್ರ . ಅವರು ನಮ್ಮನ್ನಗಲಿ ಮೂರು ವರ್ಷಗಳ ಮೇಲಾಯ್ತು.  ಬದುಕಿದ್ದಾಗ ಅನೇಕ ಸಲ ಹೇಳಿದ್ದರು.   ''ವಿಜಯ, ನನ್ನದೊಂದು ಚಿತ್ರ ಬರಿ'' ಅಂತ. ನಾನು ಬರೆದಿರಲಿಲ್ಲ. ನನಗೆ ಇಷ್ಟರ ಮಟ್ಟಿಗೆ ಚಿತ್ರಿಸಲು ಬರುತ್ತೆ ಅನ್ನುವ ಕಲ್ಪನೆ ಆಗ  ನನಗಿರಲಿಲ್ಲ. ಆ ಅಳುಕಿನಿಂದ  'ಬರೀತೀನಿ, ಬರೀತೀನಿ' ಅನ್ನುತ್ತಾ ಕಾಲ ಕಳೆಯುತ್ತಿದ್ದಂತೆ  ಅವರೇ 'ಬರುತ್ತೀನಿ,' ಎನ್ನುತ್ತಾ ಎದ್ದು ಹೋದರು.  ನನಗೆ ಅದೊಂತರ ಗಿಲ್ಟ್ ಸದಾ ಕಾಡುತ್ತಲೇ ಇರುತ್ತದೆ. ಕೆಲವು ತಿಂಗಳುಗಳ ಕೆಳಗೆ  ಮನೆಯಲ್ಲಿ  ಮದುವೆ  ಸಮಾರಂಭವಿತ್ತು. ಆ ಸಮಯದಲ್ಲಿ   ಈ ಚಿತ್ರ ಬರೆದು ಕಟ್ಟು ಹಾಕಿಸಿ ಗೋಡೆಗೆ ನೇತು ಹಾಕಿದೆ.  ಮಾವ ಇದ್ದಿದ್ದರೆ ತುಂಬಾ ಸಂತಸ ಪಡುತ್ತಿದ್ದರು.




ಚಿತ್ರ ಬರೆದಾದ ತಕ್ಷಣ ಸ್ಕ್ಯಾನ್ ಮಾಡದೇ   ಗಡಿಬಿಡಿಯಲ್ಲಿ ಫ್ರೇಮ್ ಹಾಕಿಸಿ ಊರಿಗೆ  ಕಳಿಸಿಯಾಯ್ತು . ನಂತರ ಫೋಟೋ ತೆಗೆದು ಇಲ್ಲಿ ಹಾಕಿದ್ದು.  
ಮಾವ



ವಂದನೆಗಳು


16 comments:

  1. ವಿಜಯಕ್ಕಾ... ನಾನು ಯಾವಾಗ ಈ ರೀತಿ ಚಿತ್ರ ಬರೆಸ್ಕೊಳ್ಳೋದು ಬೆಂಗಳೂರಿಗೆ ಈ ಸರಿ ಬಂದಾಗ ಬಂದು ಬಿಡೋಣ ಅಂದುಕೊಂಡೇ ಆದರೆ ಈ ಆರೋಗ್ಯ ಎತ್ತಲೂ ಅತ್ತಿದಿಂತ ಕದಲಲು ಬಿಡಲೇ ಇಲ್ಲ... ಮಿಸ್ ಆಯ್ತು :)
    ಮಾವ ಇರುವಾಗಲೇ ಪ್ರಯತ್ನ ಪಟ್ಟಿದ್ದರೆ ಚೆನ್ನಾಗಿರೋದು ಖುಷಿ ಪಡುವುದನ್ನ ನೀವು ನೋಡಬಹುದಿತ್ತು... ಈಗಲೂ ಅವರು ನಿಮ್ಮ ಚಿತ್ರ ನೋಡಿ ಖಂಡಿತಾ ಖುಷಿ ಪಡುತ್ತಾರೆ.... ತುಂಬಾ ಚೆನ್ನಾಗಿ ಬಿಡಿಸಿದ್ದೀರಿ ಅಕ್ಕಾ... ಹಾಗೆ ಅವರ ಪೋಟೋ ಜೊತೆ ನೀವು ಬಿಡಿಸಿದ ಚಿತ್ರ ಹಾಕಬೇಕಿತ್ತು...

    ReplyDelete
    Replies
    1. ಹೌದು ಸುಗುಣಾ ... ಕೆಲವೊಮ್ಮೆ ನಾವಿರುವ ವರೆಗೂ ಅವ್ರೂ ಇರ್ತಾರೆ ಅ0ತ ತಿಳಿದು ಕೊ0ಡು ಎಡವಿ ಬಿಡುತ್ತೇವೆ ನ0ತರ ಪರಿತಪಿಸುತ್ತೇವೆ..

      ನಿಮ್ಮ ಚಿತ್ರವನ್ನೂ ಬರೆದು ಕೊಡುತ್ತೇನೆ.. ಸೀಜನ್ 2 ವರೆಗೆ ಕಾಯಿರಿ..:)
      thanks

      Delete
  2. ಬೆಳಿಗ್ಗೆ ಭಾರತೀ ಬಿ. ವಿ ಯವರ "ಮಾಡಬೇಕಿತ್ತು ... ಆದರೆ ಮಾಡಲಿಲ್ಲ" ಎಂಬ ಲೇಖನವನ್ನು ಅವಧಿಯಲ್ಲಿ ಓದಿದ್ದೆ. ಅದೇ ಸಾಲಿಗೆ ಸೇರುವಂತದ್ದು ಇದು ಎನಿಸಿತು. ಖಂಡಿತ ನಿಮ್ಮ ಮಾವನವರು ತುಂಬಾ ಖುಷಿ ಪಡುತ್ತಿದ್ದರೇನೋ . ಏಕೆಂದರೆ ಚಿತ್ರ ಭಾವಪೂರ್ಣವಾಗಿದೆ ವಿಜಯಕ್ಕ ... ಒರಿಜಿನಲ್ ಫೋಟೋವನ್ನು ಕೂಡಾ ಶೇರ್ ಮಾಡಿದ್ದರೆ ಚೆನ್ನಾಗಿತ್ತು ...

    ReplyDelete
    Replies
    1. ಹ್ನೂ ನಿಮ್ಮ ಮಾತು ನಿಜ ಕೆಲವು ಕ್ಶಣಗಳನ್ನು ಕಳೆದುಕೊ0ಡಾಗಲೇ ಬುದ್ಧಿ ಬರುವುದು. ಒರಿಜಿನಲ್ ಫೋಟೋ ವನ್ನೂ ಕೂಡಾ ಅಪ್ ಲೋಡ್ ಮಾಡುತ್ತೇನೆ..
      ಧನ್ಯವಾದಗಳು.

      Delete
  3. ಹಾಂ ಮರೆತಿದ್ದೆ .. ನನ್ನದೂ ಒಂದು ಪೋಟ್ರೈಟ್ ಬಿಡಿಸಿಕೊಡಲೇ ಬೇಕು ಮತ್ತೇ .... --

    ReplyDelete
  4. ಒಮ್ಮೊಮ್ಮೆ ಮಾಡಬೇಕು ಎಂಬ ಕೆಲಸವನ್ನು ಆ ಸಮಯಕ್ಕೆ ಮಾಡದೆ ಪರಿತಪಿಸಿದ್ದು ಉಂಟು . ತುಂಬಾ ಚೆನ್ನಾಗಿ ಚಿತ್ರ ಬಿಡಿಸಿದ್ದೀರಿ. ಅಭಿನಂದನೆಗಳು

    ReplyDelete
  5. Well done. Concentrate more on shadows and lighting especially on the neck to make this already a nice piece of work an exquisite one!

    ReplyDelete
  6. Well done. Concentrate more on shadows and lighting to turn this already a nice piece into an exquisite piece of art work.

    ReplyDelete
  7. ಮನದಲ್ಲಿ ಉಕ್ಕಿದ ಸುಂದರ ನೆನಪುಗಳು ರೇಖೆಯ ರೂಪದಲ್ಲಿ ಮೂಡಿದೆ. ಸುಂದರ ವ್ಯಕ್ತಿತ್ವದ ಚಿತ್ರ. ಸುಂದರವಾಗಿದೆ

    ReplyDelete
  8. ಅವರ ಮುಖದ ಮೇಲಿನ ಗಾಂಭೀರ್ಯ ತುಂಬಾ ಚೆನ್ನಾಗಿ ಬಂದಿದೆ ಚಿತ್ರದಲ್ಲಿ.
    ಅಭಿನಂದನೆಗಳು

    ReplyDelete
  9. ಅವರ ಮುಖದ ಗಾಂಭೀರ್ಯವನ್ನು ಅಂದವಾಗಿ ಚಿತ್ರಿಸಿದ್ದೀರಿ
    ಅಭಿನಂದನೆಗಳು ..ಅವರೂ ನೋಡಿರ್ತಾರೆ ಬಿಡಿ.

    ReplyDelete
  10. ನೀವು ಬಿಡಿಸಿದ ಚಿತ್ರ ಚೆನ್ನಾಗಿದೆ. ಅಭಿನಂದನೆಗಳು.

    ReplyDelete
  11. ಚಿತ್ರ ತುಂಬಾ ,ತುಂಬಾ ಚೆನ್ನಾಗಿದೆ .Every one continues to exist in the form of energy.ಅವರು ಖಂಡಿತ ಖುಷಿ ಪಟ್ಟಿರುತ್ತಾರೆ.ಯಾವ ಸಂಶಯವೂ ಬೇಡ. ನಿಮ್ಮನ್ನು ಗಿಲ್ಟ್ ಕಾಡದಿರಲಿ.ನಮಸ್ಕಾರ.

    ReplyDelete
  12. ಮಾವನ ಚಿತ್ರ ತು೦ಬಾ ಚೆನ್ನಾಗ್ ಆಯ್ದು ವಿಜಿಯಕ್ಕ.

    ReplyDelete
  13. ಅವರಿದ್ದಾಗಲೇ ಚಿತ್ರ ಬಿಡಿಸಿದ್ದಿದ್ರೆ... ಎಷ್ಟು ಖುಷಿಯಾಗ್ತಿದ್ರೋ ಅನ್ನಿಸಿತು! ಕೆಲವೊಂದು ಕೆಲಸಗಳೂ ಹಾಗೇ! ಮಾಡುವಂತಿದ್ದರೂ ಮಾಡುವುದೇ ಇಲ್ಲ. ಯಾಕೆಂದು ಇಂದಿಗೂ ಅರ್ಥವಾಗಿಲ್ಲ! ಅರ್ಥ ಹುಡುಕುವುದು ಕೂಡ ವ್ಯರ್ಥ ಅನ್ನಿಸುತ್ತದೆ! - Triveni

    ReplyDelete