Sunday, January 17, 2010

ಚಿತ್ತಾರದರಮನೆಯಲ್ಲಿ ಹೂದೋಟ..

ನಿಮಗೆ ಮೊದಲೊಮ್ಮೆ ಹೇಳಿದ್ದೆನಲ್ಲ.... ಬ್ಲಾಗೂರಲ್ಲೊಂದು ಪುಟ್ಟ ಅರಮನೆ ಕಟ್ಟುತ್ತಿದ್ದೇನೆ ಅಂತ ..ಬೇಕಾದರೆ ನೋಡಿ ಬನ್ನಿ..
(
ಬನ್ನಿರಲ್ಲ...ಬ್ಲಾಗೂರ ನನ್ನ ಮನೆಗೆ .)

ಅಲ್ಲೀಗ ಹೂದೋಟ ಮಾಡಿದ್ದೇನೆ..
ಹೀಗೆ.... ನೋಡಲು ಬಂದವರು ಹೇಳಿದ್ದು...
ಕಟ್ಟುತ್ತಿದ್ದ ಹಾಗೆ ನಾಲ್ಕಾರು ಗಿಡ ಗೆನ್ಟೆ ನೆಡು....
ಉಪ್ಪರಿಗೆ ಕಟ್ಟುವಷ್ಟರಲ್ಲಿ ಗಿಡ ದೊಡ್ಡದಾಗಿ ಹೂ ಬಿಡುತ್ತೆ... ನೋಡಲು ಚಂದ....ಅಂತ..
ನಾನೂ ಆಚೀಚೆ , ಅಲ್ಲಿ ಇಲ್ಲಿ ಗಿಡ ಒಟ್ಟು ಮಾಡಿ ತಂದು ನೆಟ್ಟಿದ್ದೇನೆ...

ಈಗದು ಹೂಬಿಟ್ಟಿದೆ.ಎಲ್ಲಾ ತರದ್ದೂ ಇದೆ.
ಒಂದೊಂದು ಸಾಲಿನಲ್ಲಿ ಒಂದೊಂದು ತರ...
ಎಷ್ಟೊಂದು ಚಂದ ಅಂದ್ರೆ ...ಬಾಳ ಸುಂದರ..
ಮನೆ ಕಟ್ಟುವಾಗ ಸ್ವಲ್ಪ ಸಿಮೆಂಟು, ಮರಳಿನ ಧೂಳು ಬಿದ್ದಿರಬಹುದು....
ಆದರೂ ಚಂದವಿದೆ ....
ಕಾಂಪೌಂಡ್ ನ ಪಕ್ಕಕ್ಕೆ ಸಾಲಾಗಿ ಜಿನಿಯಾ ಹಾಕಿದ್ದೇನೆ...
ಬರುವವರಿಗೆಲ್ಲಾ ಸ್ವಾಗತ ಕೋರಲು ನಿ೦ತ ಸು೦ದರಿಯರ ತರ ಕಾಣುತ್ತೆ...





ತರತರದ ತರುಣಿಯರು...ಕಣ್ಣೆರಡು ಸಾಕಾಗಲಿಕ್ಕಿಲ್ಲ...ಚಂದ ಸವಿಯಲು..







ಮತ್ತೆ ಕಾಡುವ ಹುಡುಗರು ಹೂದೋಟದ ಸುತ್ತ ಸುತ್ತುತ್ತಲೇ ಇರುತ್ತಾರೆ... ಹೂಮುತ್ತಿನಾಸೆಗೆ ...




ಚಂಡು ಹೂ ಗೊತ್ತಲ್ಲವೇ...ಯಾವುದೋ ಒಣಗಿದ ಹೂಮಾಲೆ ಎಸೆದಿದ್ದು, ಬೀಜ ಉದುರಿ ಗಿಡ ಆಗಿತ್ತು .



ರಾತ್ರಿ ಉಪ್ಪರಿಗೆಯ ಬಾಲ್ಕನಿಯಲ್ಲಿ ನನ್ನವರೊಂದಿಗೆ ನಿಂತು ನೋಡಿದರೆ........ ಏನಂತ ಹೇಳಲಿ ......!! ಮೋಡಗಳ ಮರೆಯಲ್ಲಿ ಚಂದಿರ ಹೂ ನಗೆ ಚೆಲ್ಲಿದಂತೆಲ್ಲಾ...
ನಲ್ಲನಲ್ಲಿ ತುಂಟ ಕವಿ ಇಣುಕುತ್ತಾನೆ........!

ನಲ್ಲೆ ನಗುವಾಗಲೆಲ್ಲಾ....
ಮಾರಿ ಗೋಲ್ಡ್ ....
ಮತ್ತೆ ಕೋಪಿಸಿಕೊಂಡರಂತೂ....
ಹೆಮ್ಮಾರಿ ಗೋಲ್ಡ್...

ಮತ್ತೆ ಮಾರಿ ತಿರುವಷ್ಟರಲ್ಲಿ ....ಇನ್ನೊಂದು ಕವಿತೆ ರೆಡಿ.

ನಲ್ಲೆ ಮೊಗ ಕೆಂಗುಲಾಬಿ ....
ಮುನಿಸ ಮುಳ್ಳ ಬೇಗ ತೆಗಿ......




ಬಾನಲ್ಲಿ ಇಣುಕುವ ಬಿದಿಗೆ ಚಂದ್ರಮ ಪಳಕ್ಕನೆ ನಗುತ್ತಾನೆ...!!!!!
ಹಾಗೆ ಪಕ್ಕನೆ ಮೋಡದಲ್ಲಿ ಮರೆಯಾಗುತ್ತಾನೆ......
ಶಾಪದ ಭೀತಿಗಲ್ಲ..... ತಾರೆಯ ನೆನಪಾಗಿರಬೇಕು......!


ಮತ್ತೆ ಗುಲಾಬಿ ಗಿಡಗಳು ಹೂಬಿಟ್ಟು ಮುಡಿಯುವವರಿಗಾಗಿ ಕಾದಿವೆ..



ಮೈಯೆಲ್ಲಾ ಇಬ್ಬನಿಯಲ್ಲಿ ತೋಯಿಸಿಕೊಂಡು ಮಂದಹಾಸ ಬೀರುವ ಬಾಲೆಯಂತೆ ಕಾಣುತ್ತಾಳೆ.




ಮುತ್ತಿನ ಮಣಿಗಳಂತಿರುವ ಹನಿಯನ್ನು ಕೈಯಿಂದೊಮ್ಮೆ ಸವರಲೇ...... ಅನ್ನಿಸುವುದು.



ಮೊಗ್ಗುಗಳದು ಚಂದವೇ ಬೇರೆ.....
ಎಲೆ ಬಿಸಿಲಿಗೆ... ಹರಯಕ್ಕೆ ಕಾಲಿಡುವ ಬಯಕೆ ....ಅವಕ್ಕೆ ..



ತಲೆ ತುಂಬಾ ಸೆರಗ ಹೊದ್ದ ಪುಟಾಣಿ ವಧುವಿನಂತೆ ಕಂಗೊಳಿಸುವ ಬಯಕೆ ......ಹೇಳತೀರದು.




ಅಕ್ಕನ ಮದುವೆಯಲ್ಲಿ ತಂಗಿಯ ಸಡಗರಕ್ಕೇನು ಕೊರತೆ..
ಸಧ್ಯ.....! ನನಗೇನಿಲ್ಲ....
ಜವಾಬ್ಧಾರಿ ..... ಸಂಸಾರದ ಚಿಂತೆ.....!

ಗುಲಾಬಿಗಳ ವರ್ಣಿಸಿದ್ದು ಮುಗಿಯಿತಲ್ಲ..
ಸೇವಂತಿಗೆ ಕಣದ ಕಡೆ ಹೋಗೋಣ ಬನ್ನಿ....



ಕಣದಲ್ಲಿ ಚೆನ್ನಾಗಿ ಮಣ್ಣು, ಗೊಬ್ಬರ ಹಾಕಿ ಸೇವಂತಿಗೆ ಗಿಡ ನೆಟ್ಟರೆ ಚೆನ್ನಾಗಿ ಹೂ ಬಿಡುತ್ತವೆ.
ಬೆಳಗಿನ ಬಿಸಿಲು ಬಿದ್ದರೆ ಕೇಳುವುದೇ ಬೇಡ....
ಬೇರೆ ಬಣ್ಣದವೂ ಇವೆ...


ಹಳದಿ ಬಣ್ಣದವೆಂದರೆ ನನಗಿಷ್ಟ...



ಕುಂಡದಲ್ಲಿ ನೆಟ್ಟರೂ ಚೆಂದದ ಹೂಗಳು ಬಿಡುತ್ತವೆ...
ಇದನ್ನು ಹೊರ ಬಾಗಿಲ ಪಕ್ಕದಲ್ಲಿ ಮೆಟ್ಟಿಲ ಕೆಳಗೆ ಇಟ್ಟಿದ್ದೇನೆ.


ಇದು ಕಿಂಕರ ಅನ್ನುವ ಹೂಗಿಡ...ನಿಮ್ಮಲ್ಲೆಲ್ಲಾ ಏನಂತ ಕರೆಯುತ್ತೀರೋ....



ಇದು ಈಗ್ಸೋರ ....ಪೊದೆ ಆಗುವುದರಿಂದ ಕಾಂಪೌಂಡಿನ ಮೂಲೆಯಲ್ಲಿ ಜಾಗ ಕೊಟ್ಟಿದ್ದೇನೆ.
ಆದರೂ ಸಾಲಿನಲ್ಲಿ ಮುಂದೆ ಬಂದು ನಿಂತಂತೆ ಕಾಣುತ್ತೆ.

ಇದಕ್ಕೆ ಸ್ಟಾರ್ ಕ್ಲಸ್ಟರ್ ಅನ್ನುತ್ತಾರಂತೆ...
ಕಿಂಗ್ ಫಿಷರ್ ವಿಮಾನದ ಒಯ್ಯಾರದ ಗಗನಸಖಿಯಂತಿದ್ದಾಳೆ. ಕೆಂಪು ...ಕೆಂಪು...


ಇದ್ಯಾವುದರ ಹೂ ಹೇಳಿ....?
ಗೊತ್ತಾಗಲಿಲ್ವಾ .......!! ಟೊಮೇಟೊ ಹೂ .... ಅರ್ಜಂಟ್ ಗೆ ಸಾರಿಗೆ ಬೇಕಾಗುತ್ತೆ ನೋಡಿ...


ಇನ್ನೂ ಕೆಲವು ಹೆಸರೇ ಗೊತ್ತಿರದ ಗಿಡಗಳೂ ಇವೆ....

ಮುಂದಿನ ಸಲ ಯಾವಾಗಲಾದರೂ ತೋರಿಸಲೇ....

[ ಮತ್ತೆ ಏನೆಂದರೆ.....ಪಾಪ ಇಷ್ಟೆಲ್ಲಾ ಗಿಡ ಗೆನ್ಟೆ ಬೆಳೆಸಿದ್ದಾರೆ... ಯಾರಾದರೂ ಕಳ್ಳ, ಕಾಕರು ಹೂ ಕದ್ದರೆ.....ಅಂತ ನೀವು ಚಿಂತೆ ಮಾಡುವುದೇನೂ ಬೇಡ...
ಮೊನ್ನೆ ಊರಿಗೆ ಹೋದಾಗ '' ಹೂ ಬನಕ್ಕೆ ಸಿಗಂದೂರು ಚೌಡಿಯ ಕಾವಲಿದೆ ....'' ಅಂತ ಬೋರ್ಡ್ ಬರೆಸಿ, ಪೂಜೆ ಮಾಡಿಸಿಕೊಂಡು ಬಂದು ತಗುಲು ಹಾಕಿದ್ದೇನೆ.
ಈ ಕೆಲಸವನ್ನು ನನ್ನವರು ಮೆಚ್ಚಿ ಶ್ಲಾಘಿಸಿದ್ದಾರೆ.'' ಅಲ್ವೇ...ಇನ್ನೊಂದು ಬೋರ್ಡ್ ಬರೆಸಿಕೊಂಡು ಬಂದು ಭಾರತ,,, ಪಾಕ್,,, ಗಡಿಯಲ್ಲಿ ಹಾಕು... ಭಾರತ ದೇಶಕ್ಕೆ ಸಿಗಂದೂರು ಚೌಡೇಶ್ವರಿಯ ಕಾವಲಿದೆ..... ಅಂತ,,,,'' ಎಂದು ಉಚಿತವಾಗಿ , ಉಪಯುಕ್ತ ಸಲಹೆ ಕೊಟ್ಟಿದ್ದಾರೆ. ಈಗ ಪುರಸೊತ್ತಿಲ್ಲ .... ಮಕ್ಕಳಿಗೆ ಪರೀಕ್ಷೆ ,,ಮುಗಿಯುತ್ತಿದ್ದಂತೆ ಮದುವೆ, ಉಪನಯನ ಇತ್ಯಾದಿ ಕಾರ್ಯದ ಮನೆಗಳ ಸಾಲು ಸಾಲು .... ಮಳೆಗಾಲಕ್ಕೆ ಬಿತ್ತು.....ಬಿಡಿ.. ಚೌಡೇಶ್ವರಿಯ ವ್ಯಾಪ್ತಿ ವಿಸ್ತಾರವಾಗಿದೆ. ]

29 comments:

  1. ಅಭ್ಭಾ !! wonderful ! ನಿಮ್ಮ ಕಾವ್ಯಮಯ ವರ್ಣನೆ...ಸುಂದರ ಹುಡುಗಿಯರ ಅಲ್ಲಲ್ಲ....ಹೂಗಳ ಚಿತ್ರಗಳು....ಮನಸೂರೆಗೊಳ್ಳತ್ತವೆ...ಇದೆಲ್ಲಾ ನೋಡಿ ನನ್ನವಳು ಮೊದಲು ಹೂತೋಟ ಮಾಡಿ ಎಂದು ಆಜ್ಞಾಪಿಸಿದ್ದಾಳೆ ! ನಿಮ್ಮವರು ಹೇಳಿದಂತೆ ಚೌಡೇಶ್ವರಿಯ ಕಾವಲನ್ನು ದೇಶದ ಗಡಿಯಲ್ಲೂ ಹಾಕಿಸಿಬಿಡಿ ! ಒಂದಷ್ಟು ಹೊತ್ತು ಮನಸ್ಸು ಆಹ್ಲಾದಕರವಾಗಿತ್ತು...ಧನ್ಯವಾದಗಳು

    ReplyDelete
  2. ವಾವ್! ಸು೦ದರ...ಸು೦ದರ... ಸು೦ದರ....
    ಸು೦ದರವೇ ಸು೦ದರ....!

    ReplyDelete
  3. ವಿಜಯಶ್ರೀ,
    ವಾಹ್ ...! ಸುಂದರ ಹೂಗಳ ಚಿತ್ರಗಳು ಸೊಗಸಾಗಿವೆ....
    ಮನಸೂರೆಗೊಂಡಿತು.....
    ಚೆಂದದ ಚಿತ್ರಗಳು ಹಾಗೂ ವರ್ಣನೆಗಾಗಿ ಅಭಿನಂದನೆಗಳು...

    ReplyDelete
  4. ಸುಂದರ ಹೂದೋಟ
    ಎಲ್ಲ ಹೂಗಳು ಮನ ಸೆಳೆಯುತ್ತವೆ

    ReplyDelete
  5. ವಿಜಯಶ್ರೀ,
    ಬ್ಲಾಗೂರಿನಲ್ಲಿ ಎಷ್ಟೊಂದು ಚೆಲುವೆಯರು!
    ಅದಕ್ಕಾಗಿ ನಿಮಗೆ ಅಭಿನಂದನೆಗಳು.

    ReplyDelete
  6. Kanmana sooregonda sundara hoovina chitragalu.

    ReplyDelete
  7. ವಿಜಯಶ್ರೀ ಮೇಡಂ,
    ತುಂಬಾ ಸುಂದರ ಫೋಟೋಗಳು ಮತ್ತೆ ಅವುಗಳ ವರ್ಣನೆ...... ಗಡಿ ಕಾವಲಿಗೆ ಬೋರ್ಡ್ ಹಾಕುವ ಸಲಹೆ ತುಂಬಾ ಚೆನ್ನಾಗಿದೆ...... ಬಿಡುವು ಮಾಡಿಕೊಂಡು ಹೋಗಲು ಯೋಚಿಸಿ...... ಹಹ್ಹಾ....

    ReplyDelete
  8. wow enta varNane... hoovugalu naachi neeradaveno nodi....

    nanage meroon color rose tumba andre tumba ista aytu...

    ReplyDelete
  9. ಚುಕ್ಕಿ ಬಿಡಿಸಿದ ಚಿತ್ತಾರಕ್ಕೆ ಎಲ್ಲೆ ಎಲ್ಲಿದೆ...?

    ಸುಂದರ ಫೋಟೊಗಳು...
    ಅದಕ್ಕೆ ತಕ್ಕಂತೆ ಸೊಗಸಾದ ವಿವರಣೆಗಳು...

    ಒಮ್ಮೆ ನಿಮ್ಮ ತೋಟದಲ್ಲಿ ಓಡಾಡಿಸಿದ್ದಕ್ಕೆ ಧನ್ಯವಾದಗಳು...

    ಚಂದದ ಫೋಟೊಗಳಿಗೆ ಮತ್ತೊಮ್ಮೆ ಅಭಿನಂದನೆಗಳು...
    ವಾಹ್...!

    ReplyDelete
  10. ನಿಮ್ಮ ಚಂದದ ಹೂವಿನ ತೋಟ ಮುದನೀಡಿತು.

    ReplyDelete
  11. ಸುಬ್ರಹ್ಮಣ್ಯ ಭಟ್ಟರೆ..
    ನನ್ನಲ್ಲಿ ಕಾವ್ಯ ಹುಟ್ಟುವುದು ಸ್ವಲ್ಪ ಕಷ್ಟವೇ...
    ಕೆಲವೊಮ್ಮೆ ಭಾವನೆಗಳು ಉಕ್ಕಿ ಉಕ್ಕಿ ಹರಿದರೂ... ಯಾವ ಪಾತ್ರೆಗೆ ಎಷ್ಟು ಹೊಯ್ಯಬೇಕೆ೦ದು ಅರ್ಥವೇ ಆಗದು...
    ನನ್ನ ಬರಹ ಕಾವ್ಯಮಯವೆನಿಸದರೆ... ಶ್ರಮ ಸಾರ್ಥಕ.


    ಮನಮುಕ್ತಾ...
    ಹೂ ಹುಳ ತಿ೦ದಿದ್ದರೂ ಉಳಿದ ಭಾಗ ಚೆ೦ದವೇ ಕಾಣುವುದು...ಹೂವಿನ ವೈಶಿಷ್ಟ್ಯವೇ ಅ೦ತದ್ದು..
    ಧನ್ಯವಾದಗಳು...

    ಸವಿಗನಸು
    ನನ್ನ ತೋಟದ ಹೂಗಳನ್ನ ಇಷ್ಟ ಪಟ್ಟಿದ್ದಕ್ಕೆ..
    ವ೦ದನೆಗಳು..

    ಇಂಚರದ ಗುರು..
    ಸು೦ದರ ಹೂದೋಟಕ್ಕೆ ಭೇಟಿ ಇತ್ತಿದ್ದಕ್ಕೆ...
    ವ೦ದನೆಗಳು..

    ಸುನಾಥ್ ಕಾಕಾ..
    ಬ್ಲಾಗೂರ ಚೆಲುವೆಯರನ್ನು ಕಣ್ತು೦ಬಿಕೊ೦ಡಿದ್ದಕ್ಕೆ...
    ಧನ್ಯವಾದಗಳು...

    ನಿಶಾ...
    ಹೂಗಳನ್ನ ಇಷ್ಟಪಟ್ಟಿದ್ದಕ್ಕೆ...ಧನ್ಯವಾದಗಳು..

    ಕ್ಷಣ... ಚಿಂತನೆ... bhchandru..ಅವರೆ
    ನನ್ನ ಬ್ಲಾಗಿಗೆ ಬ೦ದು ಪ್ರತಿಕ್ರಿಯಿಸಿದ್ದಕ್ಕೆ...
    ಧನ್ಯವಾದಗಳು.


    ದಿನಕರ..
    ಬೋರ್ಡ್ ದೊಡ್ಡ್ದು ಬೇಕು..ನೋಡಿ...
    ಹ್ಹ..ಹ್ಹ..ಹ್ಹಾ..
    ನನ್ನರಮನೆಯ ಹೂದೋಟಕ್ಕೆ ಬೇಟಿಇತ್ತಿದ್ದಕ್ಕೆ...
    ವ೦ದನೆಗಳು.

    ಮನಸು
    ಕುಪ್ಪಿ ಬಣ್ಣದ ಗುಲಾಬಿ ಹಿಡಿಸಿತೆ...
    ಹೂದೋಟಕ್ಕೆ ಬೇಟಿಇತ್ತಿದ್ದಕ್ಕೆ..
    ಧನ್ಯವಾದಗಳು..

    ಸಿಮೆಂಟು ಮರಳಿನ ಮಧ್ಯೆಯ ಪ್ರಕಾಶಣ್ಣ...
    ಬಿಡುವು ಮಾಡಿಕೊ೦ಡು ಹೂದೋಟ ನೋಡಲು ಬ೦ದಿದಕ್ಕೆ..
    ಸ್ವಲ್ಪ ಹೊತ್ತು ಹೂವಿನ ಪರಿಮಳ ಆಘ್ರಾಣಿಸಿದ್ದಕ್ಕೆ...
    ವಿವರಣೆ ಮೆಚ್ಚಿದ್ದಕ್ಕೆ..
    ಥ್ಯಾ೦ಕ್ ಉ...

    ಉಮಾ ಭಟ್ ಅವರೇ..
    ನನ್ನರಮನೆಗೆ ಸ್ವಾಗತ..
    ಹೂದೋಟ ಮೆಚ್ಚಿದ್ದಕ್ಕೆ..ಧನ್ಯವಾದಗಳು

    ReplyDelete
  12. ವಿಜಯಶ್ರೀ ಮೇಡಂ,
    ಚಂದದ ಫೋಟೋಸ್... :) ನಿಮ್ಮ ಮನೆ ಪಕ್ಕ ಸೈಟ್ ಯಾವುದಾದರು ಖಾಲಿ ಇದೆಯಾ... :) ಬೇಕಾದಾಗ ಬಂದು ಹೂ ಕೊಯ್ಯಬಹುದಲ್ಲ... ನಿಮ್ಮ ಅಪ್ಪಣೆ ಕೇಳಿ... ಇಲ್ಲ ಅಂದ್ರೆ ಸಿಗಂದೂರು ... !!
    ನೈಸ್ ಬ್ಲಾಗ್ ...
    ನಿಮ್ಮವ,
    ರಾಘು.

    ReplyDelete
  13. ಚೆಂದದ ಫೋಟೋಗಳು.
    ಇಷ್ಟೆಲ್ಲಾ ಹಾಕಿದ್ದೀರಾ, ಕಣ್ಣಾಸರೆಯಾದೀತೆಂದು ಸಿಗಂದೂರಿನ ಫೋಟೋ ಕೂಡ ಹಾಕಬಹುದಿತ್ತೇನೋ.... :)

    ReplyDelete
  14. ಅದ್ಭುತ ಹೂತೋಟ ತಮ್ಮದು. ಜೊತೆಗೆ ಛಾಯಾಚಿತ್ರ ಹವ್ಯಾಸ. ಅದರೊ೦ದಿಗೆ ಮಹಿತಿಯೊ೦ದಿಗಿನ ಸು೦ದರ ನವಿರು ಹಾಸ್ಯ ಲೇಪಿತ ರಸಾನುಭರಿತ ನವಿರು ನಿರೂಪಣೆ. ಜೊತೆಗೆ ಬ್ಲೊಗದಾರರಿಗೆ ಉಣಬಡಿಸುವ ಧಾವ೦ತ. ತಮ್ಮ ಅಭಿರುಚಿಗೆ ಅನ೦ತ ನಮನ ವಿಜಯಶ್ರೀಯವರೇ.
    ತಮ್ಮ ತೋಟಕ್ಕೆ ನುಗ್ಗಬೇಕಾಗಿದೆ...
    ಸಧ್ಯ ಬ್ಲೊಗ್ ನುಗ್ಗಿದ್ದೆವೆ....

    ReplyDelete
  15. ರಾಘು...
    ಬ್ಲಾಗೂರಲ್ಲಿ ಅನೇಕ ಸೈಟುಗಳು ಖಾಲಿ ಇವೆ...
    ಪಕ್ಕದ ಸೈಟಿನಲ್ಲಿ ನೀವುಗಳೆ ಇದ್ದೀರಲ್ಲ....!!
    ಹೂ ಯಾಕೆ ಬೇಕು ನಿಮಗೆ.....???????????????? ಹ್ಹ..ಹ್ಹ..ಹ್ಹಾ....
    ಹೂದೋಟ ಮೆಚ್ಚಿದ್ದಕ್ಕೆ..
    ಧನ್ಯವಾದಗಳು.

    ಆನ೦ದ...
    ಸಿಗ೦ದೂರು ನಾನಿನ್ನೂ ನೋಡಿಲ್ಲ.....!!!!
    ಚ೦ದದ ಪ್ರತಿಕ್ರಿಯೆಗೆ, ಹೂದೋಟ ಮೆಚ್ಚಿದ್ದಕ್ಕೆ..ಧನ್ಯವಾದಗಳು.

    ಸೀತಾರಾ೦ ಸರ್...

    ಇದು ಚಿತ್ತಾರದರಮನೆಯಲ್ಲಿನ ಹೂದೋಟ...!
    ನಾನು ಕೊಟ್ಟ ಲಿ೦ಕ್ ನೋಡೀ...ಒಮ್ಮೆ..
    ಫೋಟೋಗಳನ್ನ, ನಿರೂಪಣೆಯನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿರುವುದಕ್ಕೆ ವ೦ದನೆಗಳು..

    ReplyDelete
  16. ಅಬ್ಬಾ! ಒಂದಕ್ಕಿಂತ ಒಂದು ಸುಂದರ ಮನಮೋಹಕ ಪುಷ್ಪಗಳು! ತುಂಬಾ ಚೆನ್ನಾಗಿ ಬೆಳಸಿದ್ದೀರಿ. ಇನ್ನು ಸಿಗಂದೂರು ಚೌಡಿ ಟ್ರಿಕ್ ಬಹು ಚೆನ್ನಾಗಿದೆ :) ಆದರೆ ಕಳ್ಳರಿಗೆ ಮಾತ್ರ ಈ ನಿಮ್ಮ ಟ್ರಿಕ್ ಗೊತ್ತಾಗದಿದ್ದರೆ ಸಾಕು :) (ಅವರೂ ಬ್ಲಾಗ್ ಓದುವವರಾಗಿದ್ದರೆ?!..:D)

    ReplyDelete
  17. ವಾವ.. ತುಂಬಾ ಅದ್ಭುತವಾಗಿ ಮೂಡಿ ಬಂದಿದೆ

    ReplyDelete
  18. ಕನ್ನಡ ಬ್ಲಾಗ ಲೋಕದ ಸಮೀಕ್ಷೆ: ನೀವೂ ಭಾಗವಹಿಸಿ ಮತ್ತು ನಿಮ್ಮ ಗೆಳೆಯರಿಗೂ ತಿಳಿಸಿ
    ಆತ್ಮೀಯರೆ,
    ಅತ್ಯಂತ ಶೀಘ್ರವಾಗಿ ಹಾಗೂ ಗುಣಾತ್ಮಕವಾಗಿ ಬೆಳೆಯುತ್ತಿರುವ ಒಂದು ಪ್ರಬಲ ಮಾದ್ಯಮ “ಬ್ಲಾಗಿಂಗ್”, ಇದಕ್ಕೆ ಕನ್ನಡಿಗರು ಮತ್ತು ಕನ್ನಡ ಬ್ಲಾಗಿಂಗ ಹೋರತಲ್ಲ. ಇವತ್ತಿಗೆ ಕನ್ನಡದಲ್ಲು ಸುಮಾರು ೮೦೦ಕ್ಕೂ ಹೆಚ್ಚು ಬ್ಲಾಗಗಳಿವೆ. ಭಾರತಿಯ ಭಾಷೆಗಳ ಬ್ಲಾಗಿಂಗ ಸಂಭ್ರಮದಲ್ಲಿ ಕನ್ನಡವಿಗ ಪ್ರಖರ ಪ್ರಕಾಶ, ಸುಂದರ ಅಕ್ಷರಗಳ ಉದ್ಯಾನ.
    ಬಹಳಷ್ಟು ಬ್ಲಾಗ್‍ಗಳಲ್ಲಿ ಒಂದು, ಎರಡು ಪೋಸ್ಟುಗಳಿವೆ. ಕೆಲವೆಡೆ ಒಬ್ಬರೇ ಐದಾರು ಬ್ಲಾಗ್ ಮಾಡಿಕೊಂಡಿದ್ದಾರೆ. ಏನೇ ಆದರೂ ಉತ್ಸಾಹ-ಆಕಾಶಕ್ಕೆ ಏಣಿ ಹಾಕುವಷ್ಟಿದೆ. ಹೀಗಾಗಿ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ಈ ಸಮೀಕ್ಷೆ ನಮ್ಮ ಮನದಲ್ಲಿ ಹುಟ್ಟಿದ್ದು, ಈ ಸಮೀಕ್ಷೆ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ವಿಶೇಷಗುಣ, ಅಪೂರ್ವಲಕ್ಷಣ, ವೈಶಿಷ್ಟ್ಯಗಳನ್ನು ಅರ್ಥೈಸಿಕೊಳ್ಳುವ ಒಂದು ಸಣ್ಣ ಪ್ರಯತ್ನ.
    ಆತ್ಮೀಯ ಬ್ಲಾಗ ಬಂಧುಗಳೇ, ಈ ಸಮೀಕ್ಷೆಯ ಸಫಲತೆ ನಿಮ್ಮ ಸಹಯೋಗದಿಂದ ಮಾತ್ರ ಸಾಧ್ಯ. ಹೀಗಾಗಿ ದಯವಿಟ್ಟು ಈ ಕೆಳಗೆ ನೀಡಿದ ಸಂಪರ್ಕ ಕೊಂಡಿ (Link) ಚಿಟುಕಿಸಿ ಅಲ್ಲಿ ನೀಡಲಾಗಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ. ನೀವು ನಿಡಿದ ಎಲ್ಲ ಮಾಹೀತಿಗಳನ್ನು ರಹಸ್ಯವಾಗಿರಿಸುವುದಾಗಿಯೂ ಮತ್ತು ಸಮೀಕ್ಷೆಯ ಫಲಿತಾಂಶವನ್ನು ಕೇವಲ ಶೈಕ್ಷಣಿಕ ಕಾರ್ಯಗಳಿಗೆ ಮಾತ್ರ ಉಪಯೋಗಿಸಿಕೊಳ್ಳಲಾಗುವುದಾಗಿ ಈ ಮೂಲಕ ಪ್ರಮಾಣಿಸುತ್ತೆವೆ.
    http://spreadsheets.google.com/viewform?formkey=dF90eEtaNDlnNkRQQmVPZlBRSE02OGc6MA..
    ತಮ್ಮ ಸಲಹೆ ಮತ್ತು ಸಂದೇಹಗಳಿಗಾಗಿ shettaru@gmail.com ಗೆ ಮಿಂಚಂಚೆ ಕಳುಹಿಸಿ.
    ಧನ್ಯವಾದಗಳೊಂದಿಗೆ
    ಈರಣ್ಣ ಶೆಟ್ಟರು ಮತ್ತು ಗ್ರಂಥಪಾಲಕ ಗೆಳೆಯರು

    ReplyDelete
  19. ಶಿವಪ್ರಕಾಶ್ ,
    ತೇಜಸ್ವಿನಿ,
    ಹೂದೋಟಕ್ಕೆ ಭೇಟಿ ಇತ್ತಿದ್ದಕ್ಕೆ....ಧನ್ಯವಾದಗಳು....


    ಪ್ರವೀಣ್ ಭಟ್ ನನ್ನ ಬ್ಲಾಗಿಗೆ ಬ೦ದು ಪ್ರತಿಕ್ರಿಯಿಸಿದ್ದಕ್ಕೆ...
    ಧನ್ಯವಾದಗಳು.

    ಶೆಟ್ಟರು (Shettaru)...
    ಧನ್ಯವಾದಗಳು.

    ReplyDelete
  20. ಮೇಡಮ್,

    ಫೋಟೊಗ್ರಫಿ ಸ್ಪರ್ಧೆಗಳ ಕೆಲಸದ ಒತ್ತಡದಲ್ಲಿ ನಿಮ್ಮ ಬ್ಲಾಗಿಗೆ ತಡವಾಗಿ ಬರುತ್ತಿದ್ದೇನೆ.

    ತಡವಾಗಿ ಬಂದರೂ ನನಗೆಷ್ಟು ಖುಷಿಯಾಯಿತು ಗೊತ್ತಾ..ಹೇಳಿಕೇಳಿ ಫೋಟೋಗ್ರಫಿ ಮನಸ್ಸು, ನೀವು ಬೆಳೆಸಿರುವ ಹೂಗಳನ್ನು ನೋಡಿ ಮನಸ್ಸಿಗೆ ಏನೋ ಆನಂದ. ಎಷ್ಟೊಂದು ವಿಭಿನ್ನವಾದ ವೈವಿಧ್ಯಮಯವಾದ ಹೂಗಳು! ನಿಮ್ಮ ಅಭಿರುಚಿಗೆ ನನ್ನ ನಮನಗಳು.
    ಜೊತೆಗೆ ನನ್ನದೊಂದು ಸಣ್ಣ ಕೋರಿಕೆ.

    ಯಾರಿಗೆ ಆಗಲಿ ಇಂಥ ಹೂಗಳನ್ನು ನೋಡಿದರೆ ಮನಸ್ಸು ಉಲ್ಲಾಸಗೊಳ್ಳುವುದು ಖಂಡಿತ.

    ಇದರ ಜೊತೆಗೆ ಒಂದಷ್ಟು ಚಿಟ್ಟೆಗಳು ಹುಟ್ಟಿಬೆಳೆಯುವ ಗಿಡಗಳನ್ನು ಹಾಕಿ. ಎಕ್ಕದ ಗಿಡವನ್ನು ಹಾಕಿದರೇ ಅದರ ಎಲೆಯನ್ನು ತಿಂದು ಅದರಲ್ಲೇ ಮೊಟ್ಟೆಇಟ್ಟು ಪ್ಯೂಪವಾಗಿ ಅದರಿಂದ ಹೊರಬರುವ "ಪ್ಲೇನ್ ಟೈಗರ್" ಎನ್ನುವ ಚಿಟ್ಟೆ ನಿಮ್ಮ ಕೈತೋಟದಲ್ಲೇ ಹಾರಾಡುತ್ತದೆ.
    ಹಾಗೆ ಕಣಗಲು ಗಿಡದಿಂದ "ಇಂಡಿಯನ್ ಕಾಮನ್ ಕ್ರೋ ಚಿಟ್ಟೇ
    ಪಾಮ್ ಟ್ರೀನಿಂದ..."ಇಂಡಿಯನ್ ಪಾಮ್ ಬಾಬ್, ಜೈಂಟ್ ರೆಡ್ ಐ"
    ಟ್ರಿ ಎಲ್ಲೋ ಗಿಡದಿಂದ " ಗ್ರಾಸ್ ಎಲ್ಲೋ"
    ನಿಂಬೆ ಗಿಡದಿಂದ "ಲೈಮ್ ಬಟರ್ ಪ್ಲೈ"
    ಮಾವಿನಗಿಡದಿಂದ "ಕಾಮನ್ ಮರಮಾನ್"
    ಇನ್ನೂ ಬೇಕಾದಷ್ಟಿವೆ. ಅದಕ್ಕಾಗಿ ಕನ್ನಡದಲ್ಲಿ "ಚಿಟ್ಟೆಗಳು" ಪುಸ್ತಕವನ್ನು ಓದಿದರೆ ನಿಮಗೆ ಮತ್ತಷ್ಟು ಗಿಡಗಳ ವಿವರಗಳು ಸಿಗುತ್ತವೆ.
    ನೀವು ಇಷ್ಟು ಮಾಡಿದರೆ ಸಾಕು ನಿಮ್ಮಂಗಳದಲ್ಲಿ ಹುಟ್ಟಿ ಹಾರಾಡುವ ಚಿಟ್ಟೆಗಳು ಜೀವನ ಪೂರ್ತಿ ನಿಮ್ಮನ್ನು ನೆನಪಿಸಿಕೊಳ್ಳುತ್ತವೆ.

    ಪ್ರಯತ್ನಿಸಿ..all the best.

    ReplyDelete
  21. ಶಿವು ಸರ್..
    ನೀವು ಕೊಟ್ಟ ಚಿಟ್ಟೆಯ ಬಗೆಗಿನ ಮಾಹಿತಿಗೆ ತು೦ಬಾ ಧನ್ಯವಾದಗಳು.
    ಇದು ನನ್ನ ಬ್ಲಾಗ್ ಅರಮನೆ... ಚಿತ್ತಾರದರಮನೆಯ ಕಲ್ಪನೆಯ ಹೂದೋಟ..
    ಫೋಟೋದ ಹೂಗಳೆಲ್ಲಾ ನನ್ನ ತವರಿನಲ್ಲಿ ಬೆಳೆದದ್ದು..
    ನೀವು ತಿಳಿಸಿದ ಮಾಹಿತಿಯನ್ನೆಲ್ಲಾ
    ಅಲ್ಲಿಗೆ ಕೊ೦ಡೊಯ್ದು ಕಾರ್ಯಗತಗೊಳಿಸುತ್ತೇನೆ. ಚಿಟ್ಟೆಯ ಸೌ೦ದರ್ಯ ಯಾರನ್ನು ಮೋಹಗೊಳಿಸದು ಹೇಳಿ...?
    ನೀವು ಭಾಗವಹಿಸಿದ ಸ್ಪರ್ಧೆಗಳಲ್ಲಿ ಜಯ ಸಿಗಲೆ೦ದು ಹಾರೈಸುತ್ತಿದ್ದೇನೆ.
    ವ೦ದನೆಗಳು.

    ReplyDelete
  22. wow.. :) superaagide madam..beautifully done post :)

    ReplyDelete
  23. ಅಹ್ಲಾದಕರ ಚಿತ್ರಮಾಲಿಕೆ...

    ReplyDelete
  24. ವಾಹ್..ತುಂಬಾ ಚೆಂದದ ಫೋಟೋಗಳು ಮತ್ತು ವರ್ಣನೆ..
    ಕಿಂಕರ ಹೂ 'Bottle brush ' ಥರ ಕಾಣಿಸ್ತಾ ಇದೆ..ಹೌದೋ ಅಲ್ಲವೋ ಗೊತ್ತಿಲ್ಲ..!!

    ReplyDelete
  25. ವ್ಹಾ..........
    ಎಷ್ಟೊಂದು ಚಂದದ ಹೂದೋಟ, ಹೂಗಳು!!!

    ಸಧ್ಯಕ್ಕೆ ನಾನು ಚೌಡೆಶ್ವರಿಯಲ್ಲಿ ಶಿಪಾರಸ್ಸು ಮಾಡುತ್ತೇನೆ.......

    ReplyDelete