Saturday, January 30, 2010

ತಿನ್ನುವಲ್ಲಿನ ತೊಂದರೆಗಳು.

ಹಸಿವು ಮನುಷ್ಯನ ಆಂತರಿಕ ಪ್ರೇರಣೆ.
ಬದುಕಲು ಹಸಿವನ್ನು ತಣಿಸಲೇ ಬೇಕು.
ಸ್ವಸ್ತ ಜೀವನ ನಡೆಸಲು ಸೂಕ್ತ ಪ್ರಮಾಣದ ಆಹಾರ ಸೇವಿಸಲೇ ಬೇಕು.
ಸರಿಯಾದ ರೀತಿಯಲ್ಲಿ , ಸಮತೋಲಿತ ಆಹಾರ ದೇಹಕ್ಕೆ ದೊರಕದಿದ್ದಲ್ಲಿ ತೊಂದರೆಗಳು ಶುರುವಾಗುತ್ತವೆ.

ಅವುಗಳಲ್ಲಿ ಎರಡು ವಿಧಗಳಿವೆ. ೧. ಅನೋರೆಕ್ಸಿಯ ನರ್ವೊಸಾ ಮತ್ತು ೨. ಬುಲಿಮಿಯ ನರ್ವೊಸಾ

1 . ಅನೋರೆಕ್ಸಿಯ ನರ್ವೋಸ : ಇದು ದೇಹದ ತೂಕವನ್ನು ಕಡಿಮೆ ಪ್ರಮಾಣದಲ್ಲಿ ಇರಿಸಿಕೊಳ್ಳಲೇ ಬೇಕೆಂಬ ಹಪಹಪಿಯಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸುವುದನ್ನು ಅಭ್ಯಾಸ ಮಾಡಿಕೊಂಡಿರುವ ಒಂದು ತರದ ಮಾನಸಿಕ ವ್ಯಾಧಿ.

ಮೊದಲು ಮಿತ ಆಹಾರ ಸೇವನೆ ,ಜೊತೆಗೆ ವ್ಯಾಯಾಮ ,ಜಾಗಿಂಗ್ ಇನ್ನಿತರ ದೈಹಿಕ ಕಸರತ್ತುಗಳನ್ನು ಮಾಡುವುದು.ಕ್ರಮೇಣ ಇದು ಚಟವಾಗಿ ಹೋಗುತ್ತದೆ. ದೇಹದ ತೂಕ ಸಹಜ ತೂಕಕ್ಕಿಂತ ಶೇಕಡಾ ಎಂಬತೈದು ಭಾಗಕ್ಕಿಂತಲೂ ಕಡಿಮೆ ಇದ್ದಾಗ ಅವರನ್ನು ಅನೋರೆಕ್ಸಿಕ್ ಎಂದು ಗುರುತಿಸಲಾಗುವುದು.

ಇದು ಮುಖ್ಯವಾಗಿ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುವ ಖಾಯಿಲೆ.ದೇಹವನ್ನು ಬಳುಕುವ ಬಳ್ಳಿಯಂತಿರಿಸಿಕೊಳ್ಳುವ ಪ್ರಯತ್ನದಿಂದ ಆಹಾರದ ಪ್ರಮಾಣವನ್ನು ಕಡಿಮೆ ಮಾಡುತ್ತಾ, ಮಾಡುತ್ತಾ ಒಂದು ಹಂತದಲ್ಲಿ ತಿನ್ನುವುದನ್ನೇ ನಿಲ್ಲಿಸುವ ಹಂತ ತಲುಪುತ್ತಾರೆ. ನಂತರ ಉಸಿರನ್ನು.....!!
ತಾವೆಷ್ಟು ತೆಳು ಶರೀರ ಹೊಂದಿದ್ದೇವೆ ಎನ್ನುವ ಸ್ವಯಂ ತೃಪ್ತಿಯೇ ಇಲ್ಲಿ ಮುಖ್ಯವಾಗಿರುತ್ತದೆ. ಇದು ಸಾಮಾಜಿಕ ಪಿಡುಗು.

ಗಂಡಸರಲ್ಲಿ ಈ ಖಾಯಿಲೆ ಕಾಣಿಸಿಕೊಂಡರೂ ಸ್ವಲ್ಪ ಪ್ರಮಾಣದಲ್ಲಿ ಮತ್ತು ಅಪಾಯಕಾರಿಯೇನಲ್ಲ. ವಯಸ್ಸಾದ ವ್ಯಕ್ತಿಗಳಲ್ಲೂ ಕೆಲವೊಮ್ಮೆ ಕಾಣಿಸಿಕೊಳ್ಳುವುದುಂಟು.

ಅನುವಂಶೀಯವಾಗಿ ಈ ರೋಗ ಬರಬಹುದು . ಮೆದುಳಿನಲ್ಲಿ ಸ್ರವಿಸುವ serotonin ಏರುಪೇರು ಮುಖ್ಯ ಕಾರಣ.

ದೇಹಕ್ಕೆ ಬೇಕಾಗುವಷ್ಟು ಪೌಷ್ಟಿಕಾಂಶಗಳ ಪೂರೈಕೆ ಆಗದ ಕಾರಣ ನಿಶ್ಯಕ್ತಿ ಉಂಟಾಗುವುದು. ಬೆಳವಣಿಗೆಯ ಹಂತದಲ್ಲಿರುವಾಗಲೇ ಇದು ಶುರುವಾಗುವುದರಿಂದ ಅನೇಕ ತರದ ದೈಹಿಕ, ಮಾನಸಿಕ ಸಮಸ್ಯೆಗಳು ತಲೆದೋರುವುವು.

ಕೂದಲು ಉದುರುವಿಕೆ, ಬಂಜೆತನ, ಎಲುಬಿನ ಬೆಳವಣಿಗೆ ಕುಂಟಿತವಾಗುವಿಕೆ, ವಾತ, ಹೃದಯದ ತೊಂದರೆಗಳೂ, ಮೂತ್ರ ಪಿಂಡದ ತೊಂದರೆಗಳೂ , ಇತರ ಮಾನಸಿಕ ತೊಂದರೆಗಳಾದ ಡಿಪ್ರೆಶನ್, ವ್ಯಕ್ತಿತ್ವ ದೋಷಗಳೂ ಕಾಣಿಸಿಕೊಳ್ಳುತ್ತವೆ.

ಅನೋರೆಕ್ಸಿಯ ರೋಗಿಗಳು ಸದಾಕಾಲ ಹಸಿವೆಯನ್ನು ಅನುಭವಿಸುತ್ತಿರುತ್ತಾರೆ ಮತ್ತು ತಿನ್ನಲು ಭಯಪಡುತ್ತಾರೆ.
ಕೆಲವರು ಆಹಾರದ ಪ್ರಮಾಣವನ್ನೇ ಮಿಥಿಗೊಳಿಸುತ್ತಾ ಬರುತ್ತಾರೆ. ಇವರಿಗೆ restricted type ಎನ್ನುತ್ತಾರೆ.

ಮತ್ತೆ ಕೆಲವರು ದಾಕ್ಷಿಣ್ಯಕ್ಕೋ ಮತ್ತಾವ ಕಾರಣಕ್ಕೋ ತಿನ್ನುವಾಗ ತಿಂದು ನಂತರ ಬಚ್ಚಲಿಗೆ ಹೋಗಿ ವಾಂತಿ ಮಾಡಿಕೊಳ್ಳುತ್ತಾರೆ ಇಲ್ಲವೇ ಭೇದಿ ಮಾತ್ರೆ ತೆಗೆದುಕೊಳ್ಳುತ್ತಾರೆ.ಇವರನ್ನು purging type ಎನ್ನುವರು.
ಈ ರೋಗ ಹೊರನೋಟಕ್ಕೆ ವಿಶೇಷವಾಗಿ ಅನ್ನಿಸದೆ ಹೋದರೂ ಇದಕ್ಕೆ ಚಿಕಿತ್ಸೆ ಬೇಕು.

ಮುಖ್ಯ ಲಕ್ಷಣಗಳೆಂದರೆ,

* ಮಿತ ಆಹಾರ ಸೇವನೆ. ಪ್ರತಿಯೊಂದು ಆಹಾರದಲ್ಲೂ ಪುನಃ ಪುನಃ ಕ್ಯಾಲೋರಿ ಲೆಕ್ಕ ಹಾಕುವುದು.
*ಎಲ್ಲರೆದುರು ತಿನ್ನುವಂತೆ ನಟಿಸುವುದು ಅಥವಾ ಹೊಟ್ಟೆ ತುಂಬಿದೆಯೆಂದು ಸುಳ್ಳು ಹೇಳುವುದು.
* ಸಾರ್ವಜನಿಕವಾಗಿ ತಿನ್ನಲು ನಿರಾಕರಿಸುವುದು. ತಿಂದರೂ ನಂತರ ಗುಟ್ಟಾಗಿ ವಾಂತಿ ಮಾಡಿಕೊಳ್ಳುವುದು.
*ಪದೇಪದೇ ಎಕ್ಸರ್ಸೈಸ್ ಮಾಡುವುದು.

ದೈಹಿಕ ಲಕ್ಷಣಗಳೆಂದರೆ,

*ಋತುಚಕ್ರದಲ್ಲಿ ಏರುಪೇರು,
*ನಿಶ್ಯಕ್ತಿ,
*ಒಣಗಿದ ಚರ್ಮ, ಹಳದೀ ಬಣ್ಣಕ್ಕೆ ತಿರುಗುವುದು.
*ಮಲಭದ್ದತೆ, ಹೊಟ್ಟೆನೋವು,
*ಅಶಾಂತಿ, ಅತಿನಿದ್ರೆ, ತಲೆನೋವು, ತಲೆಸುತ್ತು ಬರುವುದು.

ಸಿನಿಮಾ ನಟಿಯರೂ, ಮಾಡೆಲ್ ಗಳೂ ಈ ಕಾಯಿಲೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು.ಇಲ್ಲಿ ದೇಹ ಸೌಂದರ್ಯವೇ ಬಂಡವಾಳ. ಇಂಡಸ್ಟ್ರಿಯಲ್ಲಿ ಬಹುಕಾಲ ಇರಬೇಕೆನ್ನುವ ಒತ್ತಡದಿಂದ ಎಲ್ಲಾ ಸೌಕರ್ಯ,ಸವಲತ್ತುಗಳು ಇದ್ದಾಗ್ಯೂ ಮಿತಾಹಾರಿಗಳಾಗಿ ರೋಗಿಗಳಾಗುತ್ತಾರೆ. ತೆಳುದೇಹದ ಕಲ್ಪನೆ [slim fit ] ಪಾಶ್ಚಾತ್ಯರಿಂದ ಬಂದಿದ್ದು. ನಮಗಿದು ''imported culture ''

ಕೆಲವು ವರ್ಷಗಳ ಹಿಂದೆ ನಫೀಸಾ ಜೋಸೆಫ್ ಎನ್ನುವ M.t.v. ನಿರೂಪಕಿಯೊಬ್ಬಳು ಮುಂಬೈ ನ ತನ್ನ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆ ಹೇಗಿದ್ದಳೆಂದರೆ ಪೊರಕೆ ಕಡ್ಡಿಯಂತೆ .ಆಕೆಗೆ ಖಿನ್ನತೆಯಿತ್ತಂತೆ. ನನಗನ್ನಿಸುವ ಪ್ರಕಾರ ಈ ಅನೋರೆಕ್ಸಿಯಾ ಕೂಡ ಇತ್ತೇನೋ.
ಅನೇಕ ಮಾಡೆಲ್ ಗಳು ಫ್ಯಾಶನ್ ಷೋ ಗಳಲ್ಲಿ ramp ನ ಮೇಲೆ ನಡೆಯುತ್ತಿರುವಾಗಲೇ ಬಿದ್ದು ಸತ್ತಿರುವ ಘಟನೆಗಳುಂಟು.

ಮೊನ್ನೆ ಮೊನ್ನೆ ಕರೀನಾ ಕಪೂರ್ ನಿಶ್ಯಕ್ತಿ ಯಾಯ್ತೆಂದು ಆಸ್ಪತ್ರೆಗೆ ಸೇರಿದ ಘಟನೆ ನಮಗೆಲ್ಲರಿಗೂ ತಿಳಿದದ್ದೇ ಆಗಿದೆ.
ಐಶ್ವರ್ಯ ರೈ ಕೂಡಾ ಹೊರತೇನಲ್ಲ.
ಪ್ರತಿ ವರುಷವೂ ಈ ಕಾಯಿಲೆಗೆ ಹೆಣವಾಗುವವರ ಸಂಖ್ಯೆ ಸಾವಿರ ದಾಟುತ್ತದಂತೆ.

ಬಳುಕುವ ಸುಂದರಿಯರನ್ನು ನೋಡಿ ಹೊಟ್ಟೆ ಉರಿಸಿಕೊಳ್ಳುವ ಹೆಣ್ಣುಮಕ್ಕಳು ಇದರ ಹಿಂದೆ ಎಷ್ಟೆಲ್ಲಾ ಸಮಸ್ಯೆಯಿದೆಯೆಂದು ಅರ್ಥಮಾಡಿಕೊಳ್ಳಬೇಕಿದೆ.
ಯಶಸ್ಸು, ಹಣದ ಬೆನ್ನು ಹತ್ತಿ ತಮ್ಮ ದೇಹದ ಬಗೆಗಿನ ತಪ್ಪು ಕಲ್ಪನೆಯಿಂದ ತಮ್ಮನ್ನೇ ತಾವು ಶೋಷಿಸಿ ಕೊಳ್ಳುತ್ತಾರೆ. ಸೋಮಾಲಿಯಾದಂತ ದೇಶದಲ್ಲಿ ಎಷ್ಟೋ ಜನ ತುತ್ತಿಗೆ ಕಾತರಿಸುತ್ತಿದ್ದಾರೆ. ಒಂದು ಕಡೆ ಹಾಗೆ ..ಇನ್ನೊಂದು ಕಡೆ ಹೀಗೆ.
ಎಂತಹಾ ವಿಪರ್ಯಾಸ....!

೨. ಬುಲಿಮಿಯ ನರ್ವೋಸ : ಇದು ಅತಿ ತಿನ್ನುವ ರೋಗ.ತಿಂದು ತಿಂದು ವಾಂತಿ ಮಾಡುವುದು. ಈ ರೋಗಿಗಳು ಸಹಜತೂಕ ಅಥವಾ ಅದಕ್ಕಿಂತಲೂ ಹೆಚ್ಚಿನ ತೂಕವನ್ನು ಹೊಂದಿರುತ್ತಾರೆ.ತಿನ್ನುವ ಚಟ ಇವರಿಗೆ. ನಿಯಂತ್ರಣವೇ ಇರುವುದಿಲ್ಲ. ಸಮಾಜದಲ್ಲಿ ಆದ ಅವಮಾನ ಅಥವಾ ತಪ್ಪಿತಸ್ತ ಭಾವನೆಯಿಂದ ತಪ್ಪಿಸಿಕೊಳ್ಳಲು ಈ ರೀತಿಯ ಅಭ್ಯಾಸ ಮಾಡಿಕೊಂಡಿರುತ್ತಾರೆ.ಖಿನ್ನತೆ ಅಥವಾ ಅತಿ ಉದ್ವೇಗದ ಸನ್ನಿವೇಶಗಳಲ್ಲಿ ಇದು ಕಾಣಿಸಿಕೊಳ್ಳಬಹುದು. ಅನೋರೆಕ್ಸಿಯಾದ ಹೆಚ್ಚಿನ ಲಕ್ಷಣಗಳೇ ಇಲ್ಲೂ ಕಾಣಿಸಿಕೊಳ್ಳುತ್ತವೆ .

ಕೆಲವೊಮ್ಮೆ ಮೆದುಳಿನಲ್ಲಿ ಹಸಿವನ್ನು ನಿಯಂತ್ರಿಸುವ ಹೈಪೋಥಲಾಮಾಸ್ ಎನ್ನುವ ಭಾಗಕ್ಕೆ ಊನವಾದರೆ ಕೂಡಾ ಹಸಿವಾದದ್ದು , ಅಥವಾ ಹೊಟ್ಟೆ ತುಂಬಿದ ಸೂಚನೆ ಗೊತ್ತಾಗದೆ ಇರುವ ಪ್ರಸಂಗಗಳೂ ಉಂಟು.


ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಇದೆ ಮತ್ತು ಈ ರೋಗದಿಂದ ಮುಕ್ತರಾಗ ಬಹುದು. ಸಮಾಜದ , ಕುಟುಂಬದ ಬೆಂಬಲದಿಂದ ಹೊಸ ಮನುಷ್ಯರಾಗಬಹುದು.

ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮ ಮನುಷ್ಯನನ್ನು ಯಾವಾಗಲೂ ಆರೋಗ್ಯದಿಂದಿರಿಸುತ್ತದೆ.






21 comments:

  1. ವಿಜಯಶ್ರೀ ಮೇಡಂ,
    ನಾನಂತೂ ತುಂಬಾ ತಿಂತಾ ಇದ್ದೇನೆ.... ನನ್ನಾಕೆಗೂ ಸರಿಯಾಗಿ ತಿನ್ನಲು ಹೇಳ್ತಾ ಇರುತ್ತೇನೆ...... ಅಬ್ಬಾ.. ತುಂಬಾ ಗಂಭೀರ ವಿಷಯದ ಬಗ್ಗೆ ಹೇಳಿದಿರಿ....... ಧನ್ಯವಾದ ... ಉಪಯುಕ್ತ ವಿಷಯಕ್ಕೆ......

    ReplyDelete
  2. ದಿನಕರ.. ಅವರೆ
    ದೇಹ ಚಟುವಟಿಕೆಯಲ್ಲಿದ್ದಾಗ ಆಹಾರ ಸಾಕಷ್ಟು ಬೇಕಾಗುತ್ತದೆ.
    ಸಹಜ ವ್ಯಕ್ತಿಗಳಿಗೆ ಒಮ್ಮೆ ಮಿತಿಮೀರಿ ತಿ೦ದರೂ ಮರುದಿನ ಏನೂ ಬೇಡ ಅನ್ನಿಸುತ್ತದಲ್ಲವೇ....ದೇಹ ತನ್ನ ಸಮತೋಲನವನ್ನು ತಾನೆ ಕಾಪಾಡಿಕೊಳ್ಳುತ್ತದೆ. ಜ೦ಕ್ ಫುಡ್ ಹಾನಿಯೇ ಹೊರತೂ ಉತ್ತಮ ಆಹಾರ ಸ್ವಲ್ಪ ಹೆಚ್ಚು ಕಡಿಮೆಯಾದರೂ ತೊ೦ದರೆಯೇನಿಲ್ಲ.. ಹೆಚ್ಚೆ೦ದರೆ ಅಜೀರ್ಣವಾಗಬಹುದು..
    ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು.

    ReplyDelete
  3. ಅತಿ ಸರ್ವತ್ರ ವರ್ಜಯೇತ್ ಅಂದಿದ್ದು ಎಷ್ಟು ನಿಜ ಅಲ್ಲವೇ? ಯಾವುದೂ ಅತಿಯಾಗಬಾರದು. ಅದರಿಂದ ತೊಂದರೆ ನಮಗೇ ಆಗುವುದು. ಉತ್ತಮ ಲೇಖನ.

    ReplyDelete
  4. entaha vichaara mundittiri naavugaLu yochisale bekaddu...

    naanu ati tinnuvudilla, teera kadime tinnuvudoo illa hahaha.

    tumba dhanyavaadagaLu intaha maahiti nammottige hanchikondidakke.

    ReplyDelete
  5. ಉತ್ತಮ ಲೇಖನ..ಆಹಾರ ವಿಹಾರ ಎಲ್ಲದರ ಇತಿ ಮಿತಿ ತಿಳಿದಲ್ಲಿ ತೊ೦ದರೆಯಾಗದು ಅಲ್ಲವೇ? ನಿಜ.. ಅಹಾರ ಸೇವಿಸುವುದರಲ್ಲಿ ಅಸಮತೋಲನ ಇದ್ದರೆ, ಅರೋಗ್ಯದ ಮೇಲೆ ದುಶ್ಪರಿಣಾಮವಾಗದೆ ಇರದು.

    ReplyDelete
  6. Very balanced post !!ಹಾಗೇ ಆಹಾರವೂ ಸಮತೋಲಿತವಾಗಿದ್ದುಬಿಟ್ಟರೆ ಆರೋಗ್ಯವೂ ಇರುತ್ತದೆ.....ಸಮಕಾಲೀನ ಸಮಸ್ಯೆಗೆ ಉತ್ತರವೆನ್ನುವಂತಹ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು.

    ReplyDelete
  7. tumba upayuktavada lekhana madam :)

    ReplyDelete
  8. ಉತ್ತಮ ಸಲಹೆ ನೀಡಿದ್ದೀರಿ. ಧನ್ಯವಾದಗಳು.

    ReplyDelete
  9. ಈ ತರಹವೂ ಇದೆಯಾ.. ಗೊತ್ತು ಮಾಡಿದ್ದಕ್ಕೆ ಧನ್ಯವಾದಗಳು....

    ಲೇಖನ ಓದಿ ಮತ್ತು ನನಗೆ ಈ ಎರಡೂ ತೊ೦ದರೆಗಳು ಇಲ್ಲ ಎ೦ದು ತಿಳಿದು ಸ೦ತೋಷ ಆಯಿತು :)

    ReplyDelete
  10. ಮಾಹಿತಿಯುಕ್ತ ಲೇಖನಕ್ಕೆ ಧನ್ಯವಾದಗಳು..

    ReplyDelete
  11. ವಿಜಯಶ್ರೀಯವರೇ ಉಪಯುಕ್ತ ಮಾಹಿತಿ ನೀಡಿದ್ದಿರಾ ನನಗೆ ಗೊತ್ತ್ತಿರುವ ನಾಲ್ಕೈದು ಜನಕ್ಕೆ( ಕಡಿಮೆ ತಿನ್ನೋ ಫ಼್ಯಾಷನ್ ಮಾಡ್ಕೊ೦ಡಿರೋರು)ತಮ್ಮ ಲೇಖನದ ಕ್೦ಡಿ ಕಳಿಸಿರುವೆ.

    ReplyDelete
  12. ತೇಜಸ್ವಿನಿ...
    ಯಾವುದು ಅತಿಯಾದರೂ ಅದು ಕೆಟ್ಟದ್ದರ ಸೂಚನೆ..
    ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು.

    ಮನಸು..
    ನಿಮ್ಮ ಆಯ್ಕೆ ಸರಿ...
    ವ೦ದನೆಗಳು.

    ಸವಿಗನಸು..
    ಮಾಹಿತಿ ಮೆಚ್ಚಿದ್ದಕ್ಕೆ ಧನ್ಯವಾದಗಳು.

    ಮನಮುಕ್ತಾ..
    ನಮ್ಮ ಆರೋಗ್ಯದ ರಕ್ಷಣೆ ನಮ್ಮ ಕೈಯಲ್ಲೆ ಇದೆ.
    ಆತ್ಮೀಯತೆಗೆ ನಮಸ್ಕಾರಗಳು.

    ಸುಬ್ರಹ್ಮಣ್ಯ ಭಟ್..
    ಸಧ್ಯದ ಪರಿಸ್ತಿತಿಯಲ್ಲಿ ನಾವು ತಿನ್ನುವ ಆಹಾರ ಹೇಗಿದೆ ಅನ್ನುವುದರ ಅರಿವು ನಮಗಿರಬೇಕಾದ್ದು ಅಗತ್ಯ..ಎಲ್ಲೆಲ್ಲೂ ಜ೦ಕ್ ಫುಡ್ ಮಯ....ಜೊತೆಗೆ ರಾಸಾಯನಿಕಗಳ ಮಿಶ್ರಣ....
    ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ. ವ೦ದನೆಗಳು.

    ಸುಮ..
    ಪ್ರತಿಕ್ರಿಯೆಗೆ ವ೦ದನೆಗಳು.

    ಸುನಾಥ್ ಕಾಕಾ..
    ಪ್ರತಿಕ್ರಿಯೆಗೆ ಧನ್ಯವಾದಗಳು.

    ಸುಧೇಶ್ ಶೆಟ್ಟಿ...ಅವರೆ..
    ನನ್ನ ಬ್ಲಾಗಿಗೆ ಸ್ವಾಗತ..
    ನಮಗೆ ಗೊತ್ತಿಲ್ಲದೇ ಇರುವ ಎಷ್ಟೋ ಖಾಯಿಲೆಗಳು ಇವೆ.
    ಗೊತ್ತಾದಾಗ ಹೀಗೂ ಇರುತ್ತದೆಯೇ.. ಅನ್ನಿಸಿಬಿಡುತ್ತದೆ.
    ನಿಮ್ಮಾಭಿಪ್ರಾಯಗಳಿಗೆ ವ೦ದನೆಗಳು.

    ಶಿವಪ್ರಕಾಶ್..
    ಪ್ರತಿಕ್ರಿಯೆಗೆ ವ೦ದನೆಗಳು.

    ಸೀತಾರಾ೦ ಸರ್..
    ನಮಗೆ ಗೊತ್ತಾದ್ದನ್ನು ಮತ್ನಾಲ್ಕು ಜನರಿಗೆ ಹೇಳುವ ನಿಮ್ಮ ಆಸಕ್ತಿ ಒಳ್ಳೆಯದು...
    ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು.

    ReplyDelete
  13. ವಿಜಯಶ್ರಿ ಮೇಡಮ್,

    ಒಂದು ಉತ್ತಮವಾದ ಮತ್ತು ಉಪಯುಕ್ತವಾದ ಲೇಖನವನ್ನು ನೀಡಿದ್ದೀರಿ. ಇದರಲ್ಲಿರುವ ಕೆಲವು ಅಂಶಗಳನ್ನು ಬದುಕಿನಲ್ಲಿ ಆಳವಡಿಸಿಕೊಂಡರೇ ನಿಜಕ್ಕೂ ಉತ್ತಮ ಮತ್ತು ಆರೋಗ್ಯವಂತರಾಗಿ ಜೀವಿಸಬಹುದು.

    ಧನ್ಯವಾದಗಳು.

    ReplyDelete
  14. ಚುಕ್ಕಿ ಚಿತ್ತಾರ\
    ಆಹಾರದ ಬಗೆಗೆ ಒಳ್ಳೆಯ ನಿರೂಪಣೆ

    ReplyDelete
  15. ಉತ್ತಮವಾದ ಲೇಖನ.

    ReplyDelete
  16. ಶಿವು ಸರ್...
    ನಿಮ್ಮ ಪ್ರೋತ್ಸಾಹ, ಪ್ರತಿಕ್ರಿಯೆಗೆ ಧನ್ಯವಾದಗಳು.
    ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜಯಿಯಾಗಿದ್ದಕ್ಕೆ ಇನ್ನೊಮ್ಮೆ ಅಭಿನ೦ದನೆಗಳು.

    ಸಾಗರದಾಚೆಯ ಇಂಚರ...
    ನನ್ನ ಬರಹ ಮೆಚ್ಚಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದಕ್ಕಾಗಿ ವ೦ದನೆಗಳು.

    ಉಮಾ ಅವರೇ..
    ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು.

    ReplyDelete
  17. 'ಚುಕ್ಕಿ ಚಿತ್ತಾರ' ಅವರೇ..,

    ಇದೇ ರೀತಿ ಆರೋಗ್ಯದ ಬಗ್ಗೆ ತಿಳಿಹೇಳುತ್ತಿರಿ..

    ನನ್ನ ಮನಸಿನಮನೆಗೆ..:http//manasinamane.blogspot.com

    ReplyDelete
  18. ತುಂಬಾ ಉಪಯುಕ್ತ ಮಾಹಿತಿ ನೀಡಿ ಉಪಕರಿಸಿದ್ದೀರಿ..ಥ್ಯಾಂಕ್ಸ್.

    ReplyDelete