Monday, April 19, 2010

ಫ್ಲೂ ಜ್ವರ...

ಬೇಸಿಗೆ ಮರಳಲು ಕರೆಯದೆ ಬರುವೆ
ತಣ್ಣನೆ ತಂಪಿನಲಿ
ಬಣ್ಣದ ನೀರಿಗೆ ಮರುಳಾದೊಡೆ ನೀ
ಕಣ್ಣಿನ ಜೊ೦ಪಿನಲಿ


ಒಂದರ ಹಿಂದಿನ್ನೊಂದರ ಬರುವು
ಸಾಗರದಲೆಯಂತೆ
ಭರತವು ಮೊರೆತವು ಚಳಿಯದು ಕೊರೆತವು
ನಾಲಿಗೆ  ಕಹಿ ಬೇವೂ


ಕೊರಳಲಿ ಹಣೆಯಲಿ ಹನಿಯೊಡೆದಿಹ ಮಣಿ
ಮದ್ದಿಗೆ ಮೈ ಚಾಚಿ
ಎದ್ದೊಡುವೆ ನೀ ಸುದ್ದಿಗೂ ಬಾರದೆ
ಮರಳುವೆ ಕೈ ಚಾಚಿ


ಮೈ ಕೈ ನಡುಕವು ಕುತ್ತಿಗೆ ಕಡು ಬಿಸಿ
ಕಣ್ಣಿನ ಬುಡ ಕಪ್ಪು
ಬಣ್ಣವ ತೆಗೆಯುವೆ ಸುಣ್ಣವ ಬಳಿಯುವೆ
ಮುಖದಲಿ ಸುರಿಗಪ್ಪು


ಒಬ್ಬರ ಬಿಟ್ಟಿನ್ನೊಬ್ಬರ ಹಿಡಿಯುವೆ
ಖೋ ಖೋ ತೆರನಂತೆ
ನಲ್ಲೆಯ ಬಿಡುತಲಿ ನಲ್ಲನ ಬೆಸೆಯುವೆ
ಆಟದಿ ಸಿಗದಂತೆ


ಶಿಶು ಗೂಸೆ೦ದರು ತೋರದೆ ನೀ ದಯೆ
ವೃದ್ಧರ ಬಿಡಲೊಲ್ಲೆ
ವರವಾಗುವೆ ನೀ ಘನ ವೈಧ್ಯರಿಗೆ
ಸ್ಪರ್ಧೆಯ ಭಯದಲ್ಲೇ


ನೀನಿರೆ ಸನಿಹದಿ ಬುದ್ಧಿಗು ಜಡವೂ
ದಿಂಬಿಗೆ ತಲೆ ಇಟ್ಟು
ಮೊದಲಿನ ಮದ್ದದು ನೊಸಲಿಗೆ ತಣ್ಣೀ -
ರಿನ ಶಾಖದ ಕಟ್ಟು


ತುರ್ತಿಗೆ ನಾ ಇಟ್ಟಿರುವೆನು ಆ ಕ್ರೋ-
ಸಿನ್ನಿನ ಗುಳಿಗೆಯನು
ಜ್ವರವದು ಬಿಡದಿರೆ ಬೇಕಿದ್ದರೆ ಕಾ-
ಣೆನುತಲಿ ವೈದ್ಯರನು


18 comments:

 1. ha ha .. jwarada bavaneyannu tumba chennagi chitrisiddera.. idu nimmobara matalla ellara matu yakandre jwara barade iruvavare illa..

  chennagide

  Pravi

  ReplyDelete
 2. ನಾನಿರೋದು ಮಂಗಳೂರು........ ಇಲ್ಲಿ ಫ್ಲೂ, ಮಲೇರಿಯಾ, ಚಿಕನ್ ಗೂನ್ಯ ಎಲ್ಲಾ ಇಲ್ಲೇ ಜಾನ್ದಾ ಹೂಡಿರತ್ತೆ....... ಹೆದರಿಕೆಯಾಯಿತು ಇದನ್ನೆಲ್ಲಾ ಓದಿ......... ಉತ್ತಮ ಕವನ ಮೇಡಂ..........

  ನನ್ನ ಬ್ಲಾಗ್ ನಲ್ಲಿ ಸ್ವಲ್ಪ ಕೊರೆದಿದ್ದೇನೆ......... ಯಾರಿಗೂ ಅಪ್ಡೇಟ್ ಹೋಗ್ತಾ ಇಲ್ಲ...... ಸಮಯವಿದ್ದರೆ ಬಂದು, ಕೊರೆಯಿಸಿಕೊಳ್ಳಿ.........

  ReplyDelete
 3. ಇಷ್ಟು ವರ್ಷ ವೈದ್ಯನಾಗಿದ್ದರೂ ಈ ರೀತಿಯಲ್ಲೂ (ಕವಿತೆಯಲ್ಲೂ )ಫ್ಲೂ ಬರಬಹುದೆಂದು ಗೊತ್ತಿರಲಿಲ್ಲ :-) ಕವಿತೆ ಚೆನ್ನಾಗಿದೆ .ಫ್ಲೂ ಕವಿತೆಯಲ್ಲಿ ಮಾತ್ರ ಇರಲಿ ,ನಿಮಗ್ಯಾರಿಗೂ ಬರುವುದು ಬೇಡ .

  ReplyDelete
 4. ಮನುಷ್ಯನಲ್ಲಿ ಜ್ವರ..ಪ್ರಾಣಿ ಪಕ್ಷಿಗಳಲ್ಲಿ ಜ್ವರ..ಅದೆಲ್ಲಾ ಲೇಖನಗಳಲ್ಲೂ ಬ೦ತು. ಇಲ್ಲಿ ನೋಡಿದರೆ ಕವನದಲ್ಲಿ ಜ್ವರ!ವಾಹ್!ಚೆನ್ನಾಗಿದೆ.

  ReplyDelete
 5. ಜ್ವರವೂ ಸಹ ಕವನವಾಗುವ ಪರಿ ಚೆನ್ನಾಗಿದೆ.

  ReplyDelete
 6. ಕವಿತೆಯಲ್ಲಿ ಫ಼್ಲೂ!!
  ಚೆನ್ನಾಗಿ ವರ್ಣಿಸಿದ್ದಿರಾ!!
  ತಾವು ವೈಧ್ಯರೋ?
  ಕೃಷ್ಣಮೂರ್ತಿಯವರೂ ಡಾಕ್ತರಾಗಿದ್ದು ಜ್ವರ ಯಾರಿಗೂ ಬರೋದು ಬೇಡ ಅ೦ದಿದ್ದಾರೆ. ಅವರ ವ್ಯಾಪರ ನಡೇಯೋದು ಹೇಗೆ ಅ೦ಥಾ ನನ್ನ ಚಿ೦ತೆ.
  ಕವನ ಚೆನ್ನಾಗಿದೆ ವಿಜಯಶ್ರೀಯವರೇ.

  ReplyDelete
 7. ಚುಕ್ಕಿ ಚಿತ್ತಾರ
  ಜ್ವರದ ಹಾಡು ಸೊಗಸು
  ತುಂಬಾ ಸುಂದರವಾಗಿವೆ ಪ್ರತಿ ಸಾಲುಗಳು

  ReplyDelete
 8. -->ಚುಕ್ಕಿಚಿತ್ತಾರ,

  ಫ್ಲೂ-ಜ್ವರದ ಗುಣ-ಲಕ್ಷಣಗಳಗಳನ್ನೂ ಕವನವಾಗಿಸಿದ ನಿಮ್ಮ ಪರಿ ಉತ್ತಮ..

  ReplyDelete
 9. ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು.

  ReplyDelete
 10. Tumba chenaagide Jwarada melina kavana.

  Thanks for visiting my blog and for your comment. Keep on coming back.

  ReplyDelete
 11. ಚುಕ್ಕಿ ಚಿತ್ತಾರ,

  ಕವನದಲ್ಲೂ ಜ್ವರವೇ? ನನಗಂತೂ ಅಚ್ಚರಿ...ನನ್ನ ಬೆಕ್ಕಿನ ಜ್ವರವಾದ ಮೇಲೆ ಈ ಕವನದಲ್ಲಿ ಪ್ಲೂ...ಜ್ವರ...ನಿಜಕ್ಕೂ ಚೆನ್ನಾಗಿದೆ..

  ReplyDelete
 12. :). In the absence of title, and before reading the last paragraph, one may assume that it is a romantic composition :)

  ReplyDelete
 13. tumbaa sundara kavana...jwarda bhavaneyannu chitrisida reeti tumbaa vhennagittu...dhanyavaadagalu...

  ReplyDelete