Thursday, August 5, 2010

ಹೀಗೊ೦ದು ಆಕ್ಸಿಡೆ೦ಟ್ ......

ಗೆಳತಿ ತುಂಬಾ ಒತ್ತಾಯ ಮಾಡಿ ಕರೆದಿದ್ದಕ್ಕೆ ಹೊರಟಿದ್ದು...ಯಜಮಾನ್ರು , ಮಕ್ಕಳನ್ನ ಆಫೀಸಿಗೆ , ಶಾಲೆಗೇ ಅಂತ ಕಳಿಸಿ ಗಡಿಬಿಡಿಯಲ್ಲೇ ತಯಾರಾಗಿ ಹೊರಡುವ ಹೊತ್ತಿಗೆ ಘಂಟೆ ೯. ೩೦ ಆಗಿತ್ತು.. ಹತ್ತು ಘಂಟೆಗೆಲ್ಲಾ ಗೆಳತಿಯ ಮನೆಗೆ 
   ಬರುತ್ತೇನೆಂದು ಹೇಳಿದ್ದೆ..ಅಲ್ಲಿಂದ ಇಬ್ಬರೂ  ಸಿಟಿಗೆ  ಹೋಗುವ ಪ್ಲಾನ್...


'' ಆಟೋ .... ಆಟೋ....'' ಯಾರೂ ನಿಲ್ಲಿಸುತ್ತಲೇ ಇಲ್ಲ..
ಒಬ್ಬ ನಿಲ್ಲಿಸಿದ..'' ಫಸ್ಟ್ ಬ್ಲಾಕ್ ಬರ್ತೀರಾ.... ?''
''ವಿಜಯನಗರ ಬೇಕಾದ್ರೆ ಬರ್ತೀನಿ ''

ಇವನ ತಲೆ ! ವಿಜಯನಗರಕ್ಕೆ ಹೋಗಿ ನಾನೇನು ಮಾಡ್ಲಿ....?ಏನ್ ಆಟೋದವರಪ್ಪಾ.. ಕರೆದಲ್ಲಿಗೆ ಬರುವುದಿಲ್ಲ.  ಆಟೋ ಇಟ್ಟಿದ್ದಾದರೂ ಯಾಕೆ ಅಂತಾ.  ಸಾಲಾಗಿ ಆಟೋ ನಿಲ್ಲಿಸಿಕೊಂಡು ಆಟೋ ಸ್ಟಾಂಡ್ ನಲ್ಲೆ ಬೇಕಾದರೆ ಬೆಳಗಿನಿಂದ ಸಂಜೆ ತನಕ ನಿಂತ್ಕೊಂಡು ಏನ್ ಮಾಡ್ತಾರೋ ?  ಏನೋ ಸ್ವಲ್ಪ ಬಂನೀಪ್ಪಾ ಅಂತ ಕರೆದರೆ ಸೊಕ್ಕು ಮಾಡುತ್ತಾರೆ.  ಹಾಳಾಗ್ ಹೋಗ್ಲಿ.  ನಿಂಗೆ ಇಲ್ಲ ದುಡಿಮೆ. ಮನದಲ್ಲೇ ಬೈದು ಕೊಂಡೆ.  ರೋಡಿನ ಆ ಪಕ್ಕಕ್ಕಾದರೂ ಹೋದ್ರೆ ಆಟೋ ಸಿಗಬಹುದು.  ಅಂದುಕೊಂಡೆ ರಸ್ತೆ ದಾಟಲು ಅಣಿಯಾದೆ.

ಒಹ್ ! ಏನು ಟ್ರಾಫಿಕ್ಕು ? ಹೌದು ಪೀಕ್ ಅವರ್ ಆಲ್ವಾ.  ಒಂದರ ಹಿಂದೆ ಒಂದು ಬರುತ್ತಲೇ ಇರುತ್ತವೆ.  ಈ ಬದಿಯಿಂದ ಆಬದಿಗೆ ಹೋಗಲು ಐದು ನಿಮಿಷಾನೆ ಬೇಕು.


ರ್ರ್ರೂಯ್ ..ರ್ರೂಯ್.... ರ್ರೋಯ್ .. ಇಂತಾ  ಟ್ರಾಫಿಕ್ ನಲ್ಲೂ ಈಪಡ್ಡೆ  ಹುಡುಗರ ಬೈಕ್ ಬಿಡುವ  ಉತ್ಸಾಹ ಮಾತ್ರಾ...   ಸಾಕಪ್ಪಾ ಸಾಕು.  ಮೈ ಮೇಲೆ ಹತ್ತಿಸಿಕೊಂಡು ಹೋಗ್ತಾರೇನೋ ಅನ್ನುವ ಭಯ   ನನಗೆ ಯಾವಾಗಲೂ.


ಸುಮ್ಮನೆ ನಿಂತೆ. ಎದುರಿಗೆ'' ಶಾಂತಿ ನಿವಾಸ '' ಎನ್ನುವ ಹೋಟೆಲ್ ಬೋರ್ಡ್ ಕಾಣಿಸಿತು.  ಪಕ್ಕನೆ ನಗು ಬಂತು...!   ಮಗ, ಮಗಳು ಬೆಳಿಗ್ಗೆ ಜಗಳ ಆಡುತ್ತಿದ್ದುದು ನೆನಪಾಗಿ. ವ್ಯಾಜ್ಯ ನನ್ನವರೆಗೂ ಬಂದಿದ್ದರಿಂದಲೇ  ನಗು ಬಂದಿದ್ದು.
''ಅಮ್ಮಾ,   ಶಾಂತಿ ಎಂದರೆ ಹಿ....[he] ನಾ...? ಶಿ....[she] ನಾ....? ಮಗ ಸಮಸ್ಯೆ ಹೊತ್ತು ತಂದಿದ್ದ..
'' ಪುಟ್ಟಾ ಶಾಂತಿ ಎಂದರೆ she ಕಣೋ .  ಶಾಂತಿ ಅನ್ನುವುದು ಹುಡುಗಿಯರ ಹೆಸರು''
''ನೋಡು ಅಮ್ಮಾ...   ಅಕ್ಕ ಓಂ ಶಾಂತಿ , ಶಾಂತಿ , ಶಾಂತಿ ಹಿ ಅಂತ ಹೇಳ್ತಾ ಇದ್ದಾಳೆ.  ನಾನೆಷ್ಟು ಹೇಳಿದ್ರೂ ಶಿ ಅಂತ ಹೇಳ್ತಿಲ್ಲಮ್ಮಾ.....?''
 ಎಲ್ಲರೂ ಜೋರಾಗಿ ನಕ್ಕಿದ್ದೆವು.
ಮತ್ತೆ ಸುತ್ತ ಮುತ್ತ ನೋಡಿಕೊಂಡೆ ನಕ್ಕಿದ್ದು ಯಾರಾದ್ರೂ ನೋಡಿದ್ರಾ ಅಂತ.

ಟ್ರಾಫಿಕ್ ಸ್ವಲ್ಪ ಕಡಿಮೆಯಾಗತೊಡಗಿತು.  ಸ್ವಲ್ಪ ದೂರದಲ್ಲಿ ಟ್ರಕ್ ಒಂದು ಬರುತ್ತಿತ್ತು  ಅಷ್ಟೇ.
ಈಗಲೇ  ರಸ್ತೆ ದಾಟಿದರೆ ದಾಟಬೇಕು. ಇಲ್ಲಾಂದ್ರೆ ಮತ್ತೆ ಸಿಗ್ನಲ್ ಬಿಟ್ಟು ವಾಹನಗಳ ಪ್ರವಾಹವೇ ಹರಿಯ ತೊಡಗುತ್ತೆ.
ಲಗುಬಗೆಯಿಂದ ದಾಟತೊಡಗಿದೆ.
'ಶ್ಯೇ .....ಆ ಟ್ರಕ್ ನವನು ಏಕ್ದಂ ಸ್ಪೀಡ್ ತಗೊಳ್ಳೋದೇ...?   ಮೈ ಮೇಲೆ ಬಂದಹಾಗೆ ಬಂದ ನೋಡಿ. ಚಂಗನೆ ಪಕ್ಕಕ್ಕೆ ಹಾರಿಕೊಂಡೆ. ಸವರಿಕೊಂಡೇ ಹೋದಂತೆನಿಸಿತು ಒಮ್ಮೆ. ಅಲ್ಲೇ ಬದಿಯಲ್ಲಿ ಕುಕ್ಕರಿಸಿದೆ..!   ಕಿರ್ರೋಓಒ ಅಂತ ಬ್ರೇಕ್ ಶಬ್ದ.

ಸ್ವಲ್ಪ ಸುಧಾರಿಸಿಕೊಂಡು ನೋಡ್ತೇನೆ. ಜನ ಎಲ್ಲಾ ಬರ್ತಾ ಇದ್ದಾರೆ. ನನಗೇನೂ ಆಗಿಲ್ಲ ಸಧ್ಯ...!! ಮತ್ಯಾರದ್ದೋ ಮೈ ಮೇಲೆ ಟ್ರಕ್ ಹತ್ತಿಸಿದ್ದಾನೆ.  ಈ ಟ್ರಕ್ ಡ್ರೈವರ್ ಗಳಿಗಂತೂ ಪ್ರಜ್ಞೆಯೇ ಇರುವುದಿಲ್ಲ. ಕುಡಿದಿದ್ದನಿರಬೇಕು.
ಎಲ್ಲಾ ಜನ ಸೇರತೊಡಗಿದರು.

ನಾನು ನೋಡ್ತಲೇ ಇದ್ದೇ. ಅದ್ಯಾರೋ ಬ್ಯಾಗ್ ನಿಂದ   'ಮೊಬೈಲ್ ' ತೆಗೆದು  ಕಾಲ್ ಮಾಡತೊಡಗಿದ....!!! ಅರೆ, ನನ್ನ ಬ್ಯಾಗು...! ಓಹ್ ,  ಹಾರಿಕೊಳ್ಳುವ ರಭಸದಲ್ಲಿ ಕೈ ತಪ್ಪಿಬಿದ್ದು  ಹೋಗಿತ್ತಾ ?  ಛೇ,  ಎಂತಾ ಜನ ಇರುತ್ತಾರೆ ನೋಡಿ.  ಏನೋ ಅಯ್ಯೋ ಪಾಪ ಅಂತ ಬ್ಯಾಗ್ ಹೆಕ್ಕಿ ಕೊಡುವುದು ಬಿಟ್ಟು ಮೊಬೈಲ್ ತೆಗೆದು ಕಾಲ್ ಬೇರೆ ಮಾಡ್ತಿದ್ದಾನಲ್ರೀ....?


''ಓಯ್ .... ಸ್ವಾಮಿ .. ಕೊಡ್ರೀ ಇಲ್ಲಿ.. ನಂ ಬ್ಯಾಗನ ಮೊಬೈಲ್ನ... ಕೊಡ್ರೀ ಇಲ್ಲಿ.. ''

ಅಯ್ಯೋ.  ಪುಣ್ಯಾತ್ಮ ತಿರುಗಿಯೂ ನೋಡಲಿಲ್ಲ. ಅಥವಾ ಭಯದಲ್ಲಿ ನನಗೆ ಧ್ವನಿಯೇ ಹೊರಡುತ್ತಿಲ್ಲವೋ !  ಅರ್ಥವಾಗುತ್ತಿಲ್ಲ..ಶಾಕ್ ಆಗುವುದೆಂದರೆ ಇದೆ ತರಾ ಇರಬೇಕು....!!  ಮು೦ದೆ ಹೆಜ್ಜೆ ಕಿತ್ತಿಡಲೂ ಸಾಧ್ಯ ಆಗ್ತಾ ಇಲ್ಲ  ನನಗೆ.


ನಾನೂ ಈಗ ಆಕ್ಸಿಡೆಂಟ್ ಆದ ವ್ಯಕ್ತಿಯತ್ತ ನೋಡತೊಡಗಿದೆ. ಅದು ಹೆಂಗಸು, ಸುತ್ತ ಮುತ್ತಿಕೊಂಡ ಜನರ ನಡುವೆಯೇ ನನಗೆ ಕಾಣಿಸುತ್ತಿತ್ತು. ನನಗೊಂದು ತರಾ ಸಿಟ್ಟು ಬಂತು. ಎಲ್ಲಾ ಆ ಹೆಂಗಸಿನ ಸುತ್ತಲೇ ಇದ್ದಾರೆ ಹೊರತೂ ಆಘಾತಕ್ಕೊಳಗಾದ ನನ್ನನ್ನು ಯಾರೂ ಗಮನಿಸುತ್ತಲೇ ಇಲ್ಲ.   ಛೇ..
ಅಷ್ಟರಲ್ಲಿ ನಮ್ಮವರ ಕಾರ್ ಬರುತ್ತಿದ್ದುದು ಕಾಣಿಸಿತು..      


ಓಹ್ ... ಸಧ್ಯ  ಇಲ್ಲೆಲ್ಲೊ ಕೆಲಸದ ಪ್ರಯುಕ್ತ  ಬ೦ದಿರಬೇಕು. ಕೈ ಮಾಡಿದೆ. ..... ರೀ.... ರೀ.....
ಹ್ನಾ.. ನನ್ನನ್ನ ನೋಡುತ್ತಲೇ ಇಲ್ಲ......!!!!  ಸೀದಾ ಗು೦ಪಿನತ್ತಲೇ ನಡೆದರು..ಏನ್ ಇವ್ರು.  ಇಷ್ಟು ಎದುರಲ್ಲಿ ನಿ೦ತಿದ್ದರೂ ನೋಡದೇ ಅಲ್ಯಾಕೆ ಹೋದರು..?




 ನನಗೆ ಎಲ್ಲವೂ ನಿಚ್ಚಳವಾಗತೊಡಗಿತ್ತು. ನನ್ನವರು   ತಲೆ ಮೇಲೆ ಕೈ ಹೊತ್ತು ಕೊ೦ಡು  ಹೆ೦ಗಸಿನ ಬದಿಯಲ್ಲಿ  ಕೂತುಕೊ೦ಡಿದ್ದು ಕಾಣಿಸುತ್ತಿತ್ತು.  ಅರೆ... ಇವರ ಆಫೀಸಿನಲ್ಲಿ ಕೆಲಸ ಮಾಡುವವರಾರಾದರೂ ಇರಬಹುದಾ...?  ಇದ್ದರೂ ಇರಬಹುದು..
ಆದರೆ ಇವರ ಕಣ್ಣಲ್ಲಿ ನೀರೇಕೆ....? ಉಳಿದ ಜೊತೆಯವರು ಇವರನ್ನು ಸಮಾಧಾನಿಸುವುದ್ಯಾಕೆ....?  ಯಾವುದೋ ಸ೦ಬ೦ಧದ  ಎಳೆ ಬಿಗಿಯತೊಡಗಿತು..


ಅಷ್ಟೋತ್ತಿಗೆ ಅ೦ಬ್ಯುಲೆನ್ಸ್  ಬ೦ತು.. ಆ ಹೆ೦ಗಸಿನ ದೇಹವನ್ನು ಎತ್ತಿ ವಾಹನದಲ್ಲಿಡತೊಡಗಿದರು.. ಸುಮಾರು ನನ್ನದೇ  ವಯಸ್ಸಿನಾಕೆ. ನಾನು ಧರಿಸಿದ೦ತೆಯೇ  ಆಕೆಯೂ ಬಿಳೀ ಬಣ್ಣದ ಚೂಡೀದಾರ್  ಧರಿಸಿದ್ದಳು..ರಕ್ತ ಚೆಲ್ಲಾಡಿತ್ತು.
  ನನ್ನವರೇನಾದರೂ ನಾನು ಅ೦ತ ತಪ್ಪು ತಿಳಿದಿರಬಹುದೇ...?
ಅಥವಾ  ರವಿಚ೦ದ್ರನ್ ಸಿನಿಮಾಗಳಲ್ಲಿ ಇರುವ೦ತೆ ಇಬ್ಬಿಬ್ಬರು  ಹೆಂಡತಿಯರು ............!!!!! ಇಬ್ಬರಿಗೂ ಒ೦ದೆ ತರಾ ಡ್ರೆಸ್ಸು ಗಿಫ್ಟ್ ಕೊಡುವುದು..!!!  ಒಂದೇ ತರದ ವಸ್ತುಗಳನ್ನು ಕೊಡುವುದು.....!!!  ದೇವ್ರೆ.....  ಹಾಗೊ೦ದು ಆಗದಿರಲಿ. ಕಣ್ಕತ್ತಲೆ ಬ೦ದ೦ತಾಯ್ತು.


                                                                           




ವಾಹನವೊಂದರಲ್ಲಿದ್ದೆ.. ನನಗೆ ಅರಿವು ಮೂಡಿದಾಗ .
.ಅದೊಂದು ಅಂಬುಲೆನ್ಸ್ ತರಾನೆ ಇತ್ತು.  ಈ ಮೊದಲು ಆ ತರದ ಗಾಡಿಯಲ್ಲಿ ಹೋದ ಅನುಭವವಿಲ್ಲ.
ಅರೆ ನಾನ್ಯಾವಾಗ ಹತ್ತಿಕೊಂಡೆ  ಈ ವೆಹಿಕಲ್ಲನ್ನ.  ನೆನಪಿಗೆ ಬರ್ತಾ ಇಲ್ಲ.  ಓಹೋ ಬಹುಷಃ ಎಚ್ಚರ ತಪ್ಪಿತ್ತು ಅಂತ ಕಾಣುತ್ತೆ  ನನಗೆ.   ಯಾರೋ ಎತ್ತಿ ಮಲಗಿಸಿದ್ದಾರೆ..ಪಾಪ ಪುಣ್ಯ ಇದೆ  ಜನಕ್ಕೆ.


ಅದೇನದು..? ಒಹ್,  ಆಕ್ಸಿಡೆಂಟ್ ಆದ ಹೆಂಗಸಿನ ಬಾಡಿ ಅನ್ನಿಸುತ್ತೆ. ಸತ್ತ ದೇಹದ ಜೊತೆ ನನ್ನನ್ನೂ ಕರೆದೊಯ್ಯುತ್ತಿದ್ದಾರೆ.   ಮನುಷ್ಯತ್ವವಿಲ್ಲದ ಜನರು.  ಭಾವನೆಗಳಿಗೆ ಬೆಲೆಯಿಲ್ಲ  ಇಲ್ಲಿ. ಅಥವಾ ಬೇರೆ ವೆಹಿಕಲ್ ಯಾಕೆ  ಹೆಣಕ್ಕೆ ಅಂತ ಅಂಬುಲೆನ್ಸ್ ನಲ್ಲಿಯೇ ಕರೆದೊಯ್ಯುತ್ತಿದ್ದಾರ... ?
ನನಗೇನಾಗಿದೆ ಮಹಾ  ಅಂತ ಅಂಬುಲೆನ್ಸ್ ನಲ್ಲಿ ಕರೆದೊಯ್ಯುತ್ತಿದ್ದಾರೆ.. ? ಯಾವ ನೋವು, ಉರಿ ಏನೂ ಇಲ್ಲ.   ಮುಖಕ್ಕಷ್ಟು ನೀರು ಚುಮುಕಿಸಿದ್ದಿದ್ದರೆ ಎಚ್ಚರವಾಗುತ್ತಿತ್ತು.   ಅದನ್ನು ಬಿಟ್ಟು ಈ ಹೆಣದ ಜೊತೆ ನನ್ನನ್ನು ...... ಛೆ.


ಯೋಚನೆಗಳ ಮಹಾಪೂರ ಮನದೊಳಗೆ ಪ್ರವಹಿಸುತ್ತಿತ್ತು.  ಗಾಡಿಯ ಅಲುಗಾಟದಿಂದ ಹೆಣದ ಮೇಲೆ ಮುಚ್ಚಿದ್ದ  ವಸ್ತ್ರ ಸರಿಯಲು ತೊಡಗಿತ್ತು.  ಕೈ ಮೇಲಿನ ಬಟ್ಟೆ ತುಸು ಸರಿಯಿತು.  ವಾಚು ಕಾಣಿಸಿತು.
ಹ್ಞಾ ... ಇದು ನನ್ನ ವಾಚಿನಂತದ್ದೆ.
 ಬೆರಳಿನಲ್ಲಿದ್ದ ಉಂಗುರ ಪರೀಕ್ಷಿಸಿದೆ. ಹೌದು.  ಹೋದ ವರ್ಷ ಹುಟ್ಟುಹಬ್ಬಕ್ಕೆ ಕೊಟ್ಟ ಉಡುಗೊರೆ  ಇದೆ ತರದ ಉಂಗುರವಲ್ಲವೇ...?
ಹ್ಹಾ ..ವಿಧಿಯೇ..! ಅನಿಲ್ ಕಪೂರ್ ಸಿನಿಮಾ ನೆನಪಾಯ್ತು.   ಘರವಾಲೀ ಬಾಹರ್ವಾಲೀ .....
ಮನೆಯಲ್ಲೊಬ್ಬಳು.   ಹೊರಗಡೆ ಇನ್ನೊಬ್ಬಳು. ಇಷ್ಟು ದಿನವಾದರೂ ಒಂಚೂರೂ ಗೊತ್ತಾಗದೆ ಹೋಯ್ತೆ.
ಹೇ  ದೇವ್ರೇ...!  ಸತ್ತವಳು ಸತ್ತಳು ನನಗೆ ಗೊತ್ತು ಮಾಡಿಯೇ ಸಾಯಬೇಕೆ....?
ಮನೆಗೆ ಹೋದಮೇಲೆ ವಿಚಾರಿಸಿಕೊಳ್ಳುತ್ತೇನೆ ಯಾವುದಕ್ಕೂ.


ಅಯ್ಯೋ ಎಷ್ಟೊತ್ತು ಆಗೋಯ್ತು. ಮಕ್ಕಳು ಬೇರೆ ಮನೆಗೆ ಬಂದು ಕಾದಿರುತ್ತಾರೆ .. ಅಮ್ಮಾ ಎಲ್ಲಿ ಅಂತ ಗಾಬರಿಯಾಗುತ್ತಾರೆ.
ಅಂತ ಟೈಮ್ ನೋಡಿದೆ ಕೈಲಿದ್ದ ವಾಚನ್ನು.
ಹ್ಞಾ ...ವಾಚೆಲ್ಲಿ...?...?    ಕೈ ತಿರುಗಿಸಿ ನೋಡಿದೆ..
ಉಸಿರು ನಿಂತಂತಾಯ್ತು.. ಕೈಯೇ ಕಾಣುತ್ತಿಲ್ಲ...!!
 ಯಾಕೋ ಅನುಮಾನ ......  ದೆವ್ವ ಮೆಟ್ಟಿಕೊಂಡಿತೆ ..? ....ಪುಣ್ಯಾತ್ಗಿತ್ತಿ ಯಾರಿವಳು  ನೋಡೋಣ ಅಂತ ಮುಖದ ಮೇಲಿನ ವಸ್ತ್ರವನ್ನು ನಿಧಾನವಾಗಿ ಸರಿಸುತ್ತಿದ್ದಂತೆ.......
..........................................
.........ಮುಖ
ನೋಡಿದರೆ....
ನೋಡಿದರೆ  ...  ....................
ಅದು ನನ್ನ ಮುಖ.......!!!!!!
...........................
ಹ್ಹಾ...ಹ್ಹಾ...ಹ್ಹ..
ನನಗೆ ತೆಲುಗು ಲೇಖಕರೆಲ್ಲ ಒಮ್ಮೆಲೇ ನೆನಪಾದರು... ಯಂಡಮೂರಿ..ವಂಶಿ... ..... ....ಇತ್ಯಾದಿ..
ಇದು ನನ್ನ ಮೂರನೇದೋ  ನಾಲ್ಕನೇದೋ   ಆಯಾಮಾ......!!!
ಹ್ಹಾ....ಹ್ಹಾ....ಹ್ಹಾ...






''ಏ... ಏಳೇ... ಏಳು ಘಂಟೆಯಾಯ್ತು. ಅನ್ನಪೂರ್ಣೆಶ್ವರಿ  ತಾಯೀ... ಏಳು ಟೀ ಮಾಡೇ .....''

 ಸದಾಶಿವ ಮೈ ಅಲುಗಾಡಿಸಿ ಎಚ್ಚರಿಸುತ್ತಿದ್ದ...
ದಿಗ್ಗನೆದ್ದಳು   ಸುಧಾ..  ಏನೂ ಅರ್ಥವಾಗದೆ ತನ್ನ ಮೈಯನ್ನೆಲ್ಲಾ ನೋಡಿಕೊಂಡಳು... ಪಕ್ಕದಲ್ಲಿ ನೋಡಿದಳು. ಮಗ ತಲೆಕೆಳಗಾಗಿ  ಮಲಗಿದ್ದ..ಮಗಳು ಮಲಗಿದಲ್ಲೆ ಕಣ್ಣು ಬಿಟ್ಟು ನೋಡುತ್ತಿದ್ದಳು.

ಅರೆ   ಇಷ್ಟೊತ್ತೂ ಕನಸಿನಲ್ಲಿದ್ದೆನಾ...?
ಮುಖದಲ್ಲಿ ನಗು ಹೊಮ್ಮಿತು..
  .[ ಕಥೆ]                                                  

42 comments:

  1. ಯಪ್ಪಾ!! ಎಂಥ ಭಯಾನಕ ಕನಸು ಕಂಡಿದಿರ ಅಕ್ಕಾ... :)ಮೊದಲು ಓದುತ್ತಾ ನಿಜವಿರಬಹುದೇ ಅಂದುಕೊಂಡೆ.. ಎರಡನೇ phara ಓದಿ ಗೊತ್ತಾಯ್ತು ಇದು ಕನಸು ಅಂತ... :-)
    ಇನ್ನು ಮುಂದೆ ಒಳ್ಳೆ ಒಳ್ಳೆ ಕನಸುಗಳಷ್ಟೇ ಬೀಳಲಿ ಅಂತ ಕನಸುಗಳಿಗೆ order ಮಾಡ್ತೀನಿ ಓಕೆ ನಾ? .. :-)

    ReplyDelete
  2. ''ನೋಡು ಅಮ್ಮಾ...ಅಕ್ಕ ಓಂ ಶಾಂತಿ , ಶಾಂತಿ , ಶಾಂತಿ ಹಿ ಅಂತ ಹೇಳ್ತಾ ಇದ್ದಾಳೆ .. ನಾನೆಷ್ಟು ಹೇಳಿದ್ರೂ ಶಿ ಅಂತ ಹೇಳ್ತಿಲ್ಲಮ್ಮಾ.....?''

    super

    ReplyDelete
  3. ಹೋ ದೇವರೆ.......
    ಎಂತಾ ಕಥೆ ಬರೆದಿರಿ ನೀವು..... ಚೆನ್ನಾಗೇನೋ ಇದೆ ಆದರೆ ಸ್ವಲ್ಪ ಭಯ ಹುಟ್ಟಿಸಿಬಿಟ್ಟಿರಿ..... ನೀವು ಪಾರಾಗಿದ್ದಿರಿ ಎನಿಸಿತು ಎರಡನೇ ಪ್ಯಾರಕ್ಕೆ ಬಂದಾಗ ಇಲ್ಲೇನೋ ಕನಸಲ್ಲಿ ಬಿದ್ದವರೆ ಎಂದು ಕೊಂಡೆ ಹಹಹ... ತುಂಬಾ ಚೆನ್ನಾಗಿದೆ..... ಹೀಗೆ ಬರಿತಾ ಇರಿ

    ReplyDelete
  4. ಕೆಲವೊಮ್ಮೆ ನಾವೇ ಸತ್ತ ಹಾಗೆ ಕನಸು ಬೀಳುತ್ತದೆ ಅಲ್ವೆ...
    ಸತ್ತಿದ್ದರೂ ನಮಗೆಲ್ಲ ಕಾಣಿಸುತ್ತೆ...!!
    ಕನಸಿಗೆ ಸ್ವಲ್ಪ ಕಲ್ಪನೆ ಹಾಕಿದ್ದೇನೆ... ಮಜಾಕ್ಕೆ..
    ದಿವ್ಯಾ..
    ರಾಘಣ್ಣ...
    ಸುಗುಣ...
    ನಿಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗಳಿಗೆ ತು೦ಬಾ ಥ್ಯಾ೦ಕ್ಸ್.

    ReplyDelete
  5. ಓದುತ್ತಾ ಓದುತ್ತ ಇದು ಒಂದು ಕಲ್ಪನೆ ಅಂತ ಸ್ಪಷ್ಟವಾಯಿತು.
    ಆದರು ಮಸ್ತ್ ಥ್ರಿಲ್ಲಿಂಗ್ ಆಗಿ ಇದೆ.
    ಏನೆ ಆಗಲಿ ಸರ್ ಬಗ್ಗೆ ಅನುಮಾನ ಪಟ್ರಲ್ಲ(ಕನಸಲ್ಲಿ) ಪಾಪ ಬೇಜಾರ್ ಮಾಡ್ಕೊಂದ್ರೆನೋ :-) :-)
    ಒಳ್ಳೆ ಒಳ್ಳೆ ಕನಸುಗಳು ಕಾಣಸಿಗಲಿ.

    ReplyDelete
  6. ಕನಸು ಅಂದ್ರೆ ಹೀಗಿರಬೇಕು. ರೋಚಕವಾಗಿ. ನಿದ್ದೆ ಮಾಡೋಕೂ ಆಸಕ್ತಿ ಇರುತ್ತೆ ಆಗ :)

    ReplyDelete
  7. ನಾಗರಾಜ್...
    ಇಸು ನನಗೆ ಬಿದ್ದ ಕನಸಲ್ಲಾರೀ... ನೀವು ಕೊನೆ ಪ್ಯಾರಾ ಇನ್ನೊಮ್ಮೆ ಓದಿ.. ಅದು ಸುಧಾಳ ಕನಸು..
    ನಿಮ್ಮ ಆತ್ಮ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು.

    ವಿಕಾಸ್..
    ಕನಸು ಏನು ಬಿದ್ದರೂ ಚನ್ನಾಗೆ ಇರುತ್ತೆ.. ಬೆ೦ಗಳೂರಿನ ಮನೆಯಲ್ಲಿ ಊಟ ಮಾಡಿ ೩೫೦ ಕಿ ಮೀ ದೂರದ ಊರಿನ ಬಚ್ಚಲಲ್ಲಿ ಕೈ ತೊಳೆಯುವುದು.....!
    ಥ್ಯಾ೦ಕ್ಸ್ ಕಾಮೆ೦ಟಿಸಿದ್ದಕ್ಕೆ..

    ReplyDelete
  8. ಥ್ರಿಲ್ಲರ್,ಸಸ್ಪೆನ್ಸ್ ಚೆನ್ನಾಗಿದೆ:-)

    ReplyDelete
  9. ವಿಜಯಶ್ರೀ....ನನಗೆ ಇದು ಶಾಕ್ ಕೊಡೋ ಸೀರೀಸ್ಸಾ...ಹಹಹ...ಅಂದ ಹಾಗೆ ನಮ್ಮ ಸ್ನೇಹಿತರ ನಮ್ಮ ಕಡೆಯ ಸಾಲುಗಳನ್ನು ನೋಡೊಲ್ಲಾ ಅನ್ನೋದು ಖಾತ್ರಿ ಆಗ್ತಿದೆ...ನನಗೂ ಇದೇ ತರಹ ಪ್ರತಿಕ್ರಿಯೆಗಳು....ಇದು ನಿಜಾನಾ...ಕಲ್ಪನೆನೋ ಅರ್ಥವೇ ಆಗ್ಲಿಲ್ಲ,,!!! ಹಹಹ
    ಚನ್ನಾಗಿದೆ ನಿಮ್ಮ ... ಸಾರಿ ಸುಧಳ ಕನಸಿನ ...ಕರಾಳ ಚಿತ್ರ...

    ReplyDelete
  10. ಕೆಟ್ಟ ಕನಸು.. ಆದರೆ ಸುಂದರ ಬರಹ...! ಧನ್ಯವಾದಗಳು.

    ReplyDelete
  11. ಮಸ್ತ್ ಆಗಿದೆ :)

    ReplyDelete
  12. ಸಾವಿನ ಸಮಯದಲ್ಲೂ ದೇಹದಿಂದ ಬೆಳಕಿನ ಸುರಂಗದೊಳಗೆ ಹೋದಂತ ಅನುಭವವಾಗುತ್ತದೆ.ಅದರ ಬಗ್ಗೆ ಪುರುಸೊತ್ತಾದಾಗ ಒಂದು ಬ್ಲಾಗ್ ಬರೀತೀನಿ.

    ReplyDelete
  13. ತುಂಬಾ ಭಯ ಬೀಳಿಸಿಬಿತ್ರಿ

    ಚೆನ್ನಾಗಿದೆ ಕಥೆ ಹೆಣೆದ ರೀತಿ

    ReplyDelete
  14. ಹಹಹ.. ಕನಸಿನ ಕಥೆ ಚೆನ್ನಾಗಿದೆ..

    ReplyDelete
  15. ಮೈ ನವಿರೇಳಿಸುವಂಥಾ ಕನಸು!

    ReplyDelete
  16. ಅಯ್ಯೋ ಇದೇನಾಯ್ತು?.. ಗ್ರಹಚಾರ ಅ೦ದ್ಕೋತಾನೆ ಕೊನೆ ಪ್ಯಾರ ಓದಿದೆ..ಸದ್ಯ..ಕನಸು.. ಕಥೆ..ಮಸಾಲ.. ಬರಹ ಚೆನ್ನಾಗಿದೆ.
    ಗಡಿಗಿಡಿ ಕೆಲಸಗಳು.. ಬ್ಲೊಗ್ ಕಡೆ ಬರ್ಲಿಕಾಗ್ತಾ ಇಲ್ಲ.

    ReplyDelete
  17. ಸಖತ್ ಥ್ರಿಲ್ ಆಗಿದೆ..
    ಮೊದಮೊದಲು ಭಯ..,ನಂತರ ನೀವು ಉಳಿದ ಸಮಾಧಾನ..,ಆಕೆಯ ಸ್ಥಿತಿಗೆ ಮರುಕ..,..
    ಎಲ್ಲ ಕನಸು ಎಂಬ ಹೆಸರಿನಿಂದ ಅಳಿದುಹೊಯ್ತು.

    ReplyDelete
  18. ಚಿಕ್ಕಿಚಿತ್ತಾರ ವಿಜಯಶ್ರಿ ಮೇಡಮ್,
    ಓದುತ್ತಾ ನಿಜವೆಂದುಕೊಂಡುಬಿಟ್ಟಿದ್ದೆ. ನಂತರ ಇದು ಕನಸು ಅಂತ ಗೊತ್ತಾಯ್ತು....ತುಂಬಾ ಚೆನ್ನಾಗಿ ಕುತೂಹಲದಿಂದ ಓದಿಸಿಕೊಂಡು ಹೋಯ್ತು...

    ReplyDelete
  19. ಒಳ್ಳೆ ತ್ರಿಲ್ಲಿಂಗ್ ಕನಸಿನ ಕತೆ!
    ನಮ್ಮ ಸಾವನ್ನು ನಾವೇ ನೋಡುವಂತ ಕನಸು ಬೀಳೋದು ಎಷ್ಟು ಚಂದ ಅಲ್ವಾ? ನಮ್ಮ ಸಾವನ್ನು ನೋಡಿಕೊಳ್ಳುವ ಅದೃಷ್ಟ ಸಿಗುತ್ತಲ್ಲಾ.........!
    ಕತೆ ಸ್ವಲ್ಪ ಭಯ ಹುಟ್ಟಿಸಿದ್ದು ಹೌದು.

    ReplyDelete
  20. ಚುಕ್ಕಿಚಿತ್ತಾರಾ...

    ಉಫ್.....!
    ಇಂಥಹ ಕನಸುಗಳನ್ನು ನೋಡ ಬೇಡಿ..

    ಬಹಳ ಸೊಗಸಾದ ಬರವಣಿಗೆ...!

    ನಮ್ಮನ್ನು ತುದಿಗಾಲಲ್ಲಿ ಓದುವಂತೆ ಮಾಡಿದೆ...

    ಅಭಿನಂದನೆಗಳು...

    ReplyDelete
  21. "ಓಂ ಶಾಂತಿ, ಶಾಂತಿ, ಶಾಂತಿ ಹಿ..!!..super:-)
    ಫಸ್ಟ್ ೩-೪ ಪ್ಯಾರ ಅಂತೂ ನಿಜಾ ಅನ್ನೋ ಥರಾನೆ ಅನ್ನಿಸ್ತು..:-)

    ReplyDelete
  22. ಓಂ ಶಾಂತಿ ಶಾಂತಿ ಹಿ... :) ಮಸ್ತಿದ್ದು ಈ ಜೋಕು... ನೆನ್ಪಿಟ್ಕಂಡು ಮನೆಯವರಿಗೆಲ್ಲಾ ಹೇಳ್ತಿ...:D ಭಯಂಕರ ಕನಸೇ ಸರಿ ಇದು!

    ReplyDelete
  23. ಕಥೆ ಕುತೂಹಲಕಾರಿಯಾಗಿತ್ತು. "ಓಂ ಶ್ಯಾಂ ತಿಶ್ಯಾಂ ತಿಶ್ಯಾಂ ತಿಹೀ....." ನಮ್ಮ ಕಡೆ "ಶ್ಯಾಂ" "ತಿಶ್ಯಾ" ಅನ್ನುವವರೆಲ್ಲಾ "ಹೀ" ನೇ. ಪುಣ್ಯಕ್ಕೆ ಕನಸು ಬಿದ್ದಿದ್ದು ಸುಧಾಗೆ...ಸಂಜೆ ೭ ಘಂಟೆಯವರೆಗೂ ನಿದ್ದೆ ಮಾಡಿದರೆ ಅದೂ ಗಂಡನಿಗೆ ಟೀ ಮಾಡಿಕೊಡದೆ :-) ಹೀಗೆ ಕನಸು ಬೀಳುತ್ತದೇನೋ?

    ReplyDelete
  24. ಅರರೆ,,, ಬೆಳಿಗ್ಗೆ ಬಿದ್ದ ಕನಸು ನನಸಾಗುತ್ತಂತೆ.. ತಮಾಷೆಗೆ ಅಂದೆ. ನಿಮ್ಮ ಈ ಕನಸು ನನಸಾಗುವುದು ಬೇಡಪ್ಪಾ.

    ReplyDelete
  25. ಸ್ವಾರಸ್ಯಕರ ನಿರೂಪಣೆ ವಿಜಯಶ್ರೀ ಅವರೆ. ಆದರೆ ನನಗೆ
    "ಇಷ್ಟು ಎದುರಲ್ಲಿ ನಿ೦ತಿದ್ದರೂ ನೋಡದೇ ಅಲ್ಯಾಕೆ ಹೋದರು.." ಎ೦ದು ತಿಳಿಸಿದಾಗ ಗೊತ್ತಾಗಿ ಹೋಯ್ತು..ನೀವು ಭಯಾನಕ ಕನಸಿನ ಕಥೆಯನ್ನು ಹೇಳುತ್ತಿದ್ದೀರಿ ಎ೦ದು. ಸೊಗಸಾಗಿ ಹೇಳಿದ್ದೀರಿ.

    ಶುಭಾಶಯಗಳು
    ಅನ೦ತ್

    ReplyDelete
  26. ಪ್ರಾರಂಭದಲ್ಲಿ ತಮ್ಮ ಅನುಭವ ಹೇಳುತ್ತಿದ್ದರೆ ಎನಿಸಿತು ಬರಬರುತ್ತಾ ರೋಚಕವಾಗಿ, ತದನಂತರ ರೋಮಾ೦ಚನವಾಗಿ ಕೊನೆಗೆ ಕನಸಿನ ಕಥೆಯಾಗಿಬಿಟ್ಟಿತು. ಎಂತಾ ತಿರುವಿನ ತಂತ್ರಗಾರಿಕೆಯ ಅದ್ಭುತ ಕಥೆ.
    ಧನ್ಯವಾದಗಳು
    ಕೀರೀಟ ತೆಗೆದಿಟ್ಟೆ!!!
    ಎತ್ತರಕ್ಕಿಡಿ!!

    ReplyDelete
  27. ಪ್ರೋತ್ಸಾಹಿಸಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

    ಸಮಯದ ಅಭಾವದಿ೦ದ ಪ್ರತಿಯೊಬ್ಬರಿಗೂ ವೈಯಕ್ತಿಕ ಮರು ಪ್ರತಿಕ್ರಿಯೆ ಹಾಕಲು ಆಗುತ್ತಿಲ್ಲ.. ಕ್ಷಮೆ ಇರಲಿ.
    ವ೦ದನೆಗಳು.

    ReplyDelete
  28. Ha ha ha... Expect maadidde idu kanasu anta :D

    ReplyDelete
  29. ಅಬ್ಬ!!!! ಹೀಗೂ ಉಂಟೆ... ಭಯಂಕರ ಕನಸು ಸುಧಾ ಅವರದು..

    ReplyDelete
  30. oh kanasa idu... ondsala enathappa ansibidthu.. niroopane naviragide

    Pravi

    ReplyDelete
  31. uffh..... antoo kanasu mugiyitu..... chennaagi barediddeeraa madam...
    nimma blog update aagiddu nanage gottirale illa....

    adakke late aagi bande....

    ReplyDelete
  32. ನಿಮ್ಮ 'ಆಕ್ಸಿಡೆಂಟ್ ಕಥೆ' ಚೆನ್ನಾಗಿದೆ, ಆದರೆ ಒಂದೇನು ಗೊತ್ತೇ ಕೆಲವು ಆಕ್ಸಿಡೆಂಟ್ ಗಳಲ್ಲಿ ನಾನು ಸಹಭಾಗಿಯಾಗಿ ಈಗೀಗ ನನಗೆ ಅದೂ ಕೂಡ ಮಾಮೂಲಾಗಿ ಬಿಟ್ಟಿದೆ, ಅದಕ್ಕೇ ಆರಂಭದಲ್ಲಿ ನೀವು ಕಥೆಯನ್ನು ನೈಜವಾಗಿಸುತ್ತ ಹೆದರಿಸಿದರೂ ತೀರಾ ಹೆದರಿಕೊಳ್ಳಲಿಲ್ಲ ಬಿಡಿ, ಥ್ಯಾಂಕ್ಸ್

    ReplyDelete
  33. ಕೊನೆ ತನಕ ಏನಾಯಿತಪ್ಪ ಅಂತ ಒಸಿರು ಬಿಗಿ ಹಿಡಿದು ಓದಿದೆ.
    ಕೊನೆಗೆ ಮನಸ್ಸಿಗೆ ನಿರಾಳವಾಯಿತು.
    ಒಳ್ಳೆಯ ಬರಹ.
    ನಿಮ್ಮವ,
    ರಾಘು.

    ReplyDelete
  34. ayyo modlu kanasu antaane gottaglilla,
    story sooper....

    ReplyDelete
  35. Awesome Story Vijayashree Nataraj.. out of body experience aagutte kelavomme...mattu kanasalli sattante kaNdare that person is gonna live for a loooooooooooong time ante...
    :-)
    malathi S

    ReplyDelete