Monday, June 27, 2011

ಜೀವನ ಕಲೆ !

ಭಾನುವಾರದ ದಿನ ಬೆಳಗಿನಲ್ಲಿ ಟ0ಟಾಣ ಟ0ಟಾಣ ಎನ್ನುವ ಸದ್ದಿನೊ೦ದಿಗೆ,  ನನ್ನ ತಲೆಯಲ್ಲಿ  ಹುಟ್ಟಿಕೊ೦ಡ ಕೆಲವು ವಿಚಾರಗಳು.


 ಸದ್ದು ಯಾವುದರದ್ದು..? ಪುಟ್ಟ ಬಾಲಕನೊಬ್ಬನ   ಮರಗಾಲು  [stilts] ಕುಣಿತದ್ದು..
ಅದ್ಯಾವುದೋ ಭಾಷೆಯಲ್ಲಿ ಪದ್ಯ ಹೇಳುತ್ತಾ  ಅದಕ್ಕೆ ತಕ್ಕಂತೆ ನರ್ತಿಸುವುದರದ್ದು.. 
ಅದು ಅವನ ಕಲೆಯ ಸದ್ದು ,  ಸಂಸ್ಕೃತಿಯ  ಸದ್ದು,  ಜೀವದ ಸದ್ದು .. ಬದುಕಿನ ಸದ್ದು..
 ಇಂದಿನ ಸದ್ದು.. ಅವನ ನಾಳೆಗಳ ಸದ್ದು..
ಸಧ್ಯಕ್ಕೆ ಅದು ಹೊಟ್ಟೆಯ ಸದ್ದು , ಹಸಿವಿನ ಸದ್ದು.. ಹೌದು ಅದು ಅವನ ಹಸಿವಿನ ಸದ್ದು..!! 


ನೋಡಿದರೆ ಪಾಪ ಅನ್ನಿಸುತ್ತದೆ. ಹತ್ತರಿ೦ದ ಹನ್ನೆರಡು ವಯಸ್ಸಿರಬಹುದು. ಆತ ಲಾಗ ಹಾಕುವುದು, ಮೈ ಬಾಗಿಸುವುದು ನೋಡುತ್ತಿದ್ದರೆ ಮೈ ನವಿರೇಳುತ್ತದೆ. ಯಾರಾದರೂ ಎತ್ತರ ಹಿಮ್ಮಡಿಯ ಚಪ್ಪಲಿ ಧರಿಸಿದ್ದನ್ನು  ನೋಡುತ್ತಿದ್ದರೆ 'ಬಿದ್ದರೆ 'ಅನ್ನುವ ಭಯ ನನಗೆ!   ಅಷ್ಟೊಂದು ಉದ್ದದ ಮರಗಾಲು ಹಾಕಿಕೊಂಡು ಡ್ಯಾನ್ಸ್ ಬೇರೆ ಮಾಡುತ್ತಾನೆ!  ಅದವರ ಕುಲ ಕಸುಬು. ಪಿತ್ರಾರ್ಜಿತ..!  ಯಾವ ರಿಯಾಲಿಟಿ ಶೋದಲ್ಲಿ ತೋರಿಸುವ ಕಸರತ್ತುಗಳಿಗೇನು ಕಡಿಮೆಯಿಲ್ಲ  ಅವನದು.   ಅವಕಾಶ ಸಿಕ್ಕಿಲ್ಲವೋ? ಅದವನಿಗೆ ಬೇಡವೋ?  ಅಂತೂ  ಹಾದಿ  ಬದಿಯ ಬದುಕು ಅವನದು. ಅನೇಕ ಕಡೆ ಹಳ್ಳ ದಾಟಲು ಮರಗಾಲು ಬಳಸುವ ಪದ್ದತಿಯಿದೆಯಂತೆ.    ಇಲ್ಲಿ ಜೀವನದ ನದಿ ದಾಟುತ್ತಿದ್ದಾನೆ ಅಷ್ಟೇ.


ಯಾವ ವಿಶ್ವ ವಿದ್ಯಾಲಯದಲ್ಲೂ ಕಲಿಸಲು ಸಾಧ್ಯವಾಗದ ಜೀವನ ಕಲೆ ಅವನದು.ಕಲೆಯೇ ಜೀವನ. ಹುಟ್ಟುಟ್ಟುತ್ತಲೇ    ಕಲಿತದ್ದು. 
ಸುಮ್ಮನೆ ಬಾಲ ಕಾರ್ಮಿಕರು , ಕೌಮಾರ್ಯದ  ಕೊಲೆ .. ಹಾಗೆ  ಹೀಗೆ  ಎಂದು  ಕೂಗಿ  ಕಿರುಚಾಡುವುದಕ್ಕಿಂತ, ಆಮೇಲೆ ನಡು ಹೊಳೆಯಲ್ಲಿ ಅವರನ್ನು ಬಿಟ್ಟು ಹೋಗುವುದಕ್ಕಿಂತ,   ಸಾಧ್ಯವಾದರೆ ನಿಂತು  ನೋಡಿ ಸಂತೋಷಿಸೋಣ, ಕೈಲಾದಷ್ಟು ದುಡ್ದೋ,  ಹಳೆ ಬಟ್ಟೆಯೂ ಏನೋ ಒಂದು ಕೊಡೋಣ, ಅವರನ್ನ ಇದ್ದ ಹಾಗೆಯೇ ಗೌರವಿಸೋಣ,  ಸಂತೋಷ ಪಟ್ಟಿದ್ದರ  ಋಣ ಅಷ್ಟರ ಮಟ್ಟಿಗೆ ಕಡಿಮೆಯಾದೀತು.ಮಕ್ಕಳ ಕಣ್ಣಿನ ಅಚ್ಚರಿಗೊಂದು ಬೆಲೆ ಕೊಟ್ಟಂತಾದೀತು.


ಬಂದದ್ದು ಭಾನುವಾರ, ಹಾಗಾಗಿ ಉಳಿದ ದಿನಗಳಲ್ಲಿ ಶಾಲೆಗೆ  ಹೋದರೂ  ಹೋಗಬಹುದು ಎನ್ನುವ ಆಶಾವಾದ ನನ್ನದು. ಅಲೆಮಾರಿಯಲ್ಲದಿದ್ದಲ್ಲಿ.  ಕೇಳಲಿಲ್ಲ ಅವನನ್ನು.
19 comments:

 1. ಇದನ್ನ ನೋಡಿ ಬೇಸರವಾಗುತ್ತೆ . ಇಂತಹ ಮಕ್ಕಳು ಬಹಳ ಮಂದಿ ಇದ್ದಾರೆ. ಇಂತಹ ಮಕ್ಕಳಿಗೆ ದಾರಿ ತೋರುವವರು ಮಾತ್ರ ಇಲ್ಲ.......

  ReplyDelete
 2. ಮನಸ್ಸಿಗೆ ಬಹಳ ನೋವು ಆಯ್ತು...ನಮ್ಮ ಮಕ್ಕಳಂತೆಯೇ ಅಲ್ಲವೆ ಅವ್ರು. ಅವನ ಕಲೆಯನ್ನು ನಾವು ಮೆಚ್ಚೊಣ.. ಗೌರವಿಸೋಣ.

  ReplyDelete
 3. ವಿಜಯಶ್ರೀ,
  ಹೊಟ್ಟೆಪಾಡಿಗಾಗಿ ಎಂಥೆಂಥಾ ಸರ್ಕಸ್ ಮಾಡಬೇಕಲ್ಲ!

  ReplyDelete
 4. ಉದರ ನಿಮಿತ್ತಂ ಬಹುಕೃತ ವೇಷಮ್ !

  ReplyDelete
 5. ವಾವ್! ಎರಡೇ ಎರಡು ಕೋಲುಗಳ ಮೇಲೆ ಎಷ್ಟು ಆರಾಮಾಗಿ ನಿಂತಿದಾನಲ್ಲ ಎಂದು ಆಶ್ಚರ್ಯವಾಯಿತು!

  ReplyDelete
 6. ಹೌದು ನಮ್ಮ ಕೈಲಾದದ್ದು ನಾವು ಮಾಡೋಣ.

  ReplyDelete
 7. ವಿಜಯಶ್ರೀ ಬಾಲಕಾರ್ಮಿಕರನ್ನು ಇಟ್ಟುಕೊಳ್ಳುವುದು ಮಹಾಪರಾಧ ಎನ್ನುವ ಸರ್ಕಾರದ ಬಳಿ ಪರ್ಯಾಯ ಪರಿಯೋಜನೆಗಳು ಇವೆಯೇ...?? ಇಲ್ಲ..ಹಾಗಾಗಿ ಅವರಿಗೆ ಅನಿವಾರ್ಯ ಎಲ್ಲಾ ಸರ್ಕಸ್,,,,
  ಚಿಕ್ಕ ಮತ್ತು ಚೊಕ್ಕ ವಿಚಾರಾಧೀನ ಮಾಡುವ ಲೇಖನ...

  ReplyDelete
 8. ವಿಜಯಕ್ಕ,
  ನಿಜ ಬದುಕು ಎಲ್ಲವನ್ನೂ ಕಲಿಸುತ್ತದೆ. ನಮಗೊಬ್ಬರು ಕೆಮಿಸ್ಟ್ರಿ ಅದ್ಯಾಪಕರಿದ್ದರು ಸೋಮಯಾಜಿ ಅಂತ. ಅವರು ಯಾವಾಗ್ಲೂ ನನ್ನ ಹತ್ತಿರ ಹೇಳ್ತಾ ಇದ್ದರು ಕೆಮಿಸ್ಟ್ರಿ, ಫಿಸಿಕ್ಸ್‌ ಯಾವುದೂ ಬದುಕನ್ನು ಕಲಿಸುವುದಿಲ್ಲ. ಬದುಕುವುದನ್ನು ಮಾತ್ರ ಕಲಿಸುತ್ತವೆ. ಅನುಭವಗಳು ಮಾತ್ರ ಬದುಕನ್ನು ಬದಲಿಸಬಲ್ಲವು ಎಂದು. ಈ ವೀಡಿಯೊದ ಬಾಲಕನನ್ನು ನೋಡಿದಾಗ ನಿಜ ಅನ್ನಿಸಿತು ಆ ಮಾತು. ಒಳ್ಳೆ ಗ್ರಹಿಕೆ ಮತ್ತು ಬರಹ...
  ವಿನಾಯಕ ಕೋಡ್ಸರ

  ReplyDelete
 9. lekhana chennagide....thumba makkaLu heege idaare.....

  ReplyDelete
 10. ಬದುಕ ಬಂಡಿ ಎಳೆಯಲು ಕಸರತ್ತು ಮಾಡುವದು ಎಳೆಯ ನ ಅನಿವಾರ್ಯತೆ

  ReplyDelete
 11. ಹೃದಯಸ್ಪರ್ಶಿ ಲೇಖನ. ಆದರೂ ಅಸಹಾಯಕತೆ ಎಲ್ಲೋ ಮನದ ಒ೦ದು ಮೂಲೆಯಲ್ಲಿ ಚುಚ್ಚುತ್ತದೆ. ಉತ್ತಮ ವಿಚಾರದ ಪ್ರಸ್ತುತಿಗೆ ಅಭಿನ೦ದನೆಗಳು.

  ಅನ೦ತ್

  ReplyDelete
 12. vijayashri yavare, tanna kaalu kaledukondiddaruu..krutaka kalinamelaadaru horaadi svaabhimaanadinda nilluva,baduku saagisuva prayatna maaduttiddaanalla...!!!!!!!!!!!adu hemmeya vishaya.abhimaanada lekhanakkaagi abhinandanegalu.

  ReplyDelete
 13. ಒಳ್ಳೆಯ ಲೇಖನ ....ಭಾರತದಲ್ಲಿ ನಮಗೆ ಇಂಥ ಸನ್ನಿವೇಶ ಪ್ರತಿ ಹೆಜ್ಜೆಯಲ್ಲೂ ಕಾಣಸಿಗುತ್ತದೆ. ಆ ಪುಟ್ಟ ಮಕ್ಕಳನ್ನು ನೋಡಿದಾಗ ತುಂಬಾ ಸಂಕಟವಾಗುತ್ತದೆ.

  ReplyDelete
 14. ಕಲಾವತಿಯವರೆ..
  ಈ ಬಾಲಕ ತನ್ನ ಕಾಲು ಕಳೆದುಕೊ೦ಡಿಲ್ಲ..
  ಉದ್ದನೆಯ ಗಳಗಳನ್ನು ತನ್ನ ಕಾಲಿಗೆ ಕಟ್ಟಿಕೊ೦ಡು ಅದರ ಅಧಾರದ ಮೇಲೆ ನಡೆಯುವ ಇದು ಅವನ ಕಲೆ, ಅವರ ಕುಲಕಸುಬು.. ಹಾಗೆ ನಡೆಯುತ್ತಲೆ ಜನರನ್ನು ರ೦ಜಿಸುತ್ತಾರೆ.ಆದರೆ ಹೆಚ್ಚಿನವರು ಅಲೆಮಾರಿಗಳಾದುದರಿ೦ದ ಶಾಲೆ ಇನ್ನಿತರೇ ಅವಕಾಶಗಳಿ೦ದ ವ೦ಚಿತರು..ಜೀವಿಸುವ ಕಲೆ ಗೊತ್ತಿದ್ದವರಿಗೆ ಶಾಲೆಯಿ೦ದ ಹೆಚ್ಚಿನ ಪ್ರಯೋಜನವೇನಿದೆ..ಬಿಡಿ.
  ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು.

  ReplyDelete
 15. ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು.

  ReplyDelete