Thursday, October 29, 2009

ಬನ್ನಿರಲ್ಲ...ಬ್ಲಾಗೂರ ನನ್ನ ಮನೆಗೆ ...

ಬ್ಲಾಗೂರಲ್ಲೊಂದು ಸೈಟು ಮಾಡಿದ್ದೇನೆ
ಹಾಗೇ ಅಡಿಪಾಯ ಹಾಕಿದ್ದೇನೆ ...
ಪುಟ್ಟ ಮನೆ ಕಟ್ಟುತ್ತಿದ್ದೇನೆ........
ಒಂದೇ ಬಾಗಿಲು..ನಾಲ್ಕು ಕೋಣೆ
ಚಿಕ್ಕ ಪುಟ್ಟ ಕಿಟಕಿಗಳು....ಅಲ್ಲಲ್ಲಿ ಗೂಡು ಕಪಾಟು..
ಕಟ್ಟುತ್ತೇನೆ ..ಕೀಳುತ್ತೇನೆ....
ಮತ್ತೆ ಹಾಗೇ ಮೆತ್ತುತ್ತೇನೆ ..ಸಿಂಗಾರ ಮಾಡುತ್ತೇನೆ....
ನನ್ನ ಮನೆ...ನನ್ನ ಇಷ್ಟ...ಕೆಲವೊಮ್ಮೆ ಕಷ್ಟ ..ಸಮಯ ನಷ್ಟ.....!
ಅನುಭವ ಹೊಸತು ..ಮನದಲ್ಲೇ ಮಸೆತು....
ಕಟ್ಟಬೇಕಿದೆ ಅರಮನೆ......!
ನಿಮಗೊಂದು ನೆರೆಮನೆ....!
ಬಾಗಿಲಿಗೆ ರಂಗೋಲಿ ..ಗೋಡೆಗೆ ಚಿತ್ತಾರ..
ಹೊಸಿಲಿಗೆ ತೋರಣ....ರುಚಿಸಬಲ್ಲ (?) ಹೂರಣ ...
ಕಟ್ಟುತ್ತಿದ್ದೇನೆ ಇನ್ನೂ ...ಕಟ್ಟಬೇಕಿದೆಯಿನ್ನೂ....
ಮೆತ್ತು ....ಮೇಲ್ಮೆತ್ತು ...
ಹೀಗೆ ಹಲಹತ್ತು ......
ಬರುತ್ತಾರೆ ..ಅಕ್ಕ ಪಕ್ಕದವರು ಹೀಗೆ.... ಒಳಗೆ...
ನೋಡುತ್ತಾರೆ..ಮಾತನಾಡುತ್ತಾರೆ.
ಕೆಲವರು ಉಳಿಯುತ್ತಾರೆ...ಸಲಹೆ ಕೊಡುತ್ತಾರೆ...
ಕಷ್ಟ ಸುಖ ಹಂಚುತ್ತಾರೆ.....
ಕರೆಯುತ್ತಾರೆ .....ತಮ್ಮ ಮನೆಗೆ....
ಇಡುತ್ತಾರೆ ತಮ್ಮದೊಂದು ನುಡಿಮುತ್ತ.....
ಮನೆಯ ಶೋಕೇಸ್ ಒಳಗೆ .....
ಹ್ಞಾ ....ಬನ್ನಿರಲ್ಲ ..ನೀವು ಬ್ಲಾಗೂರಿಗೆ ...
ಮನೆಯೊಂದ ಕಟ್ಟಿರಲ್ಲ...!
ಜಾತಿಯಿಲ್ಲ...ಮತವಿಲ್ಲ...
ನಿಮ್ಮ ದನಿ ನಿಮ್ಮದು ..ನನ್ನ ದನಿ ನನ್ನದು,
ಅನುಭವದ ಮೂಟೆ ..ನಗೆ ಬುಗ್ಗೆ ವೂಟೆ...
ಸಂಪೂರ್ಣ ಸ್ವಾತಂತ್ರ್ಯ ...!
ನನ್ನದೇ ಮನೆಗೊಂದು ಇಟ್ಟಿದ್ದೆನಲ್ಲ ಹೆಸರ....
ಚುಕ್ಕಿ ಚುಕ್ಕಿ ಸೇರಿಸಿ ಚುಕ್ಕಿ ಚಿತ್ತಾರ....!
ನಿಮ್ಮೆಲ್ಲರ ಬರುವು ತರುವುದಲ್ಲ ....!
ಒಂದಷ್ಟು ಖುಷಿ ...ಸಂತೋಷ...
ಮನವೆಲ್ಲ ಉಬ್ಬಿ....ಹೆಮ್ಮೆ ಒಮ್ಮೊಮ್ಮೆ.....
ಬರುವಿರಲ್ಲ ...!? ಬ್ಲಾಗೂರ ನನ್ನ ಮನೆಗೆ.........!!!!!!!

15 comments:

  1. ಬ್ಲಾಗೂರಲ್ಲೊಂದು ಹೊಸತಾದ ಚುಕ್ಕಿ
    ಬಿಡಿಸುತಿದೆ ಬಾನಾಡಿ ತುಂಬಾ ಅದರದೇ ಒಂದು ಸುಂದರ ಕಲ್ಪನೆಯ ಚಿತ್ರ.
    ನಿಮ್ಮವ,
    ರಾಘು.

    ReplyDelete
  2. ರಾಘು ಅವರೇ.. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

    ReplyDelete
  3. ಬಹಳ ಸುಂದರವಾದ...
    ಶಬ್ಧಗಳು...
    ಭಾವಗಳು... ನಿಮ್ಮ ಆಶಯವನ್ನು ತೆರೆದಿಟ್ಟಿವೆ...

    ನಿಮ್ಮ ಚುಕ್ಕಿಚಿತ್ತಾರ..
    ಬ್ಲಾಗ್ ಲೋಕದಲ್ಲಿ ಚಂದದ ರಂಗೋಲಿಯಾಗಲಿ...

    ಶುಭ ಹಾರೈಕೆಗಳು...

    ReplyDelete
  4. ಥ್ಯಾ೦ಕ್ಸ್... ಪ್ರಕಾಶಣ್ಣ.

    ReplyDelete
  5. ವಿಜಯಶ್ರೀ ಮೇಡಂ,
    ನೀವು ತೆಗೆದ ಎಲ್ಲ ಫೋಟೋಗಳು ಚೆನ್ನಾಗಿವೆ.... ' ಬನ್ನಿ ಬ್ಲಾಗೂರಿಗೆ ' ತುಂಬಾ ಚೆನ್ನಾಗಿದೆ.... ಹೀಗೆ ಬರೆಯುತ್ತಿರಿ....ನಾವು ಬರುತ್ತೇವೆ....

    ReplyDelete
  6. ವಿಜಯಶ್ರೀ ಅವರೇ
    ನಿಮ್ಮ ಕವಿತೆ ನನಗೆ ತುಂಬಾ ಇಷ್ಟವಾಯಿತು.
    ನಾವು ಇನ್ನು ಬ್ಲಾಗ್ ಮನೆ ಕಟ್ಟುವದರಲ್ಲೇ ಇದ್ದೇವೆ. ಬನ್ನಿ ಎಲ್ಲರೂ ಕೂಡಿ ಸುಂದರವಾದ ಬ್ಲೋಗುರನ್ನು ಕಟ್ಟೋಣ.
    ನನ್ನ ಬ್ಲೋಗಗೆ ನೀವು ಬಂದದ್ದು ನನಗು ಅಷ್ಟೇ ಖುಷಿಯಾಯಿತು. ಬರುತ್ತಾ ಇರಿ. ಧನ್ಯವಾದ.

    ReplyDelete
  7. ಬ್ಲಾಗೂರಿನಲ್ಲಿರುವ ನಿಮ್ಮ ”ಚುಕ್ಕಿಚಿತ್ತಾರ” ಮನೆಯ ವರ್ಣನೆ ಚೆನ್ನಾಗಿದೆ.
    ಆಹ್ವಾನಕ್ಕೆ ಧನ್ಯವಾದಗಳು.

    ReplyDelete
  8. ನಿವೇದಿತಾರವರೇ , ನನ್ನ ಅರಮನೆಗೆ ನೀವು ಬ೦ದದ್ದು ನನಗೆ ತು೦ಬಾ ಸ೦ತೋಷವಾಯಿತು... ಬರುತ್ತಾ ಇರಿ. ಜೊತೆಗೆ ಬುತ್ತಿಕೂಡಾ ತನ್ನಿ.


    ಮನಮುಕ್ತಾ ಅವರೆ.... ನಿಮ್ಮ ವಿಶ್ವಾಸಕ್ಕೆ ನನ್ನ ಧನ್ಯವಾದ.

    ReplyDelete
  9. ಮೊಗೇರ ಅವರೆ. ನಿಮ್ಮ ಬರುವಿಕೆ ಸ೦ತೋಷದಾಯಕ. ಧನ್ಯವಾದಗಳು.

    ReplyDelete
  10. ವಿಜಯಶ್ರೀ,
    ನೀವು ತೆಗೆದ ಛಾಯಾಚಿತ್ರಗಳನ್ನು ನೋಡಿ ಬೆರಗಾದೆ. ಒಳ್ಳೇ professional
    ತರಹಾ ಚಿತ್ರಗಳಿವೆ. ಚಿತ್ರಗಳ captions ಸಹ ಅರ್ಥಪೂರ್ಣವಾಗಿವೆ.
    ಚುಕ್ಕಿ ಚಿತ್ತಾರದ ‘ಸ್ವಾಗತ ಕವನ’ ಸಹ ಆಕರ್ಷಕವಾಗಿದೆ.
    ನಿಮ್ಮ ಚುಕ್ಕಿಚಿತ್ತಾರದಲ್ಲಿ ಹೊಸ ಹೊಸ ಚುಕ್ಕಿಗಳನ್ನು, ಹೊಸ ಚಿತ್ತಾರಗಳನ್ನು
    ನೋಡಲು ಕುತೂಹಲದಿಂದ ಕಾಯುತ್ತೇನೆ.

    ReplyDelete
  11. ಸುನಾಥ್ ಸರ್ ..
    ನನ್ನ ಚುಕ್ಕಿಯನ್ನು ಚಿತ್ತಾರ ಮಾಡಲು ಸಹಕರಿಸುವ ನಿಮಗೆಲ್ಲರಿಗೂ ಧನ್ಯವಾದಗಳು.

    ReplyDelete
  12. ಚಿತ್ರಗಳು ಮಾತನಾಡುತ್ತವೆ ಅನ್ನೋದು ನಿಜ ಆಯ್ತು!

    ReplyDelete
  13. ಶಬ್ದಗಳೊಡಣೆಯ ತಮ್ಮ ಆಟ
    ಚಿತ್ತಾರದ ಕೂಟ.
    ಓದುಗರ ಮನಕ್ಕೆ ರಸದೂಟ.
    ಮಿಣುಕು ಚುಕ್ಕಿಯ ತೆರದಿ ಶಬ್ದಗಳು
    ಚಿತ್ತಾರದ ನವಿರಲ್ಲಿ ಜೋಡಣೆಗಳು
    ಈ ಚುಕ್ಕಿ ಚಿತ್ತಾರದ ಬ್ಲಾಗೂರಲ್ಲಿ ತಿರುತಿರುಗಿ
    ಕಾಲ ಮರೆತ ಹರ್ಷೋತ್ಸಾಹದ ಅತಿಥಿ ನಾವು.
    ತಮ್ಮ ಬ್ಲೊಗೂರು ಹೆಸರಿನಷ್ಟೇ ಸೊಗಸಾಗಿದೆ.

    ReplyDelete
  14. ಪಯಣದಲಿ ನಾನಿದ್ದೆ,

    ಅತ್ತ ಇತ್ತ ಸುತ್ತಿದ್ದೆ,

    ಕೊಂಚ ಬಳಲಿದ್ದೆ,

    ನಿಮ್ಮ ಮನೆಯ ಕಂಡಿದ್ದೆ

    ಒಳಹೊಕ್ಕು ನಿಂದಿದ್ದೆ

    ಬೆರಗು ನಾ ಗೊಂಡಿದ್ದೆ

    ಅಂದವಾದ ಚುಕ್ಕಿ ಚಿತ್ತಾರ

    ಅದಕೊಪ್ಪುವ ಬರಹದ ಅಲಂಕಾರ



    ಒಲುಮೆಯ ಆಮಂತ್ರಣವ ನೀಡುತಿಹೆನಿಂದು

    "ನನ್ನ ಕನಸನ್ನು" ನಿಮ್ಮೊಡನೆ ಹಂಚಿಕೊಳ್ಳಲೆಂದು



    ಬಿಡುವುಮಾಡಿಕೊಳ್ಳಿರಿ ಸ್ವಲ್ಪ ನೀವು

    ಬಂದುಹೋಗಿರಿ ನನ್ನ ಮನೆಗೆ, ಅದು ನಿಮ್ಮ ಪಯಣದ ನೌಕೆಗೊಂದು ಠಾವು :) (i.e.ಬಂದರು)

    ReplyDelete
  15. blaagoora nimma maneya hoogalu thumbaa istha aayitu.lekhanada shaily thumbaane ishta aatu.

    ReplyDelete