ಕಾಯುತ್ತಿದ್ದೇನೆ ...
ನಿನ್ನಲ್ಲೇ ಮನಸಿಟ್ಟು
ಬಾಗಿಲಿಗೆ ದೃಷ್ಟಿ ನೆಟ್ಟು ..
ನೆನೆಸುತ್ತಾ ...
ಮೊದಲ ನೋಟ..
ಕೊಡಿಸಿದಾ ಪಾನಿಪೂರಿ
ಮುಡಿಸಿದಾಮಲ್ಲಿಗೆಯ ಘಮ ...
ಉಣದೆ...
ತಿನದೇ..
ಒಲೆ ಹೊತ್ತಿಸದೆ
ದಾರಿ ಕಾಯುತ್ತಿದ್ದೇನೆ ಪ್ರಿಯಾ ....
ಬಾ
ಬೇಗ
ಆಫೀಸಿನಿಂದ....
ಕಟ್ಟಿಸಿಕೊಂಡು
ಮಸಾಲೆದೋಸೆ
ಹೋಟೆಲಿನಿಂದ.....!!!!!
ನಲ್ಲನಿಗೊಂದು SMS, ಮಸಾಲ ದೋಸೆ ತರಲು...
ReplyDeleteಹ್ಹಾ ಹ್ಹಾ ಹ್ಹಾ... ಚನ್ನಾಗಿದೆ ರೀ..
ಪ್ರಾರಂಭದ ಭಾವನೆಗಳು ಮತ್ತು ಪದಗಳು ತೂಕಬದ್ಧವಾಗಿದ್ದು ಅಂತ್ಯದಲ್ಲಿ ಇಷ್ಟು ಸರಳ ಆಸೆ ಮತ್ತು ಭಾಷೆ. ಒಂದು ರೀತಿಯಲ್ಲಿ ಪಂಚ್ ಚೆನ್ನಾಗಿದೆ..
ReplyDeleteಪಾಪ, ಹುಡುಗ್ರಿಗೆ ಎಲ್ಲಿಗ್ಹೋದ್ರೂ ಹೋಟ್ಲು ತಿಂಡೀನೇ ಗತಿ.. :(
ReplyDeleteಚೆನ್ನಾಗಿದೆ ಕಣ್ರೀ :)
ಚುಕ್ಕಿಚಿತ್ತಾರ ಅವರೇ,
ReplyDeleteಹಹಹ ಹ್ಹ ಹ್ಹ ಹ್ಹ .. ನಲ್ಲ ನಿಮಗೆ ಹಿಂದೆ ಕೊಡಸಿದ ಪಾನಿಪುರಿ, ತಂದು ಕೊಟ್ಟ ಹೂವು.. ಎಲ್ಲವನ್ನು ಒಂದೊಂದೇ ನೆನಪು ಮಾಡಿಕೊಳ್ತಾ ಈಗ ಮಸಾಲೆದೋಸೆ ತಿನ್ನುವ ಆಸೆ ಬಂತಾ...??
ಚೆನ್ನಾಗಿದೆ ನಿಮ್ಮ ಆಸೆಗಳು.. ನಿಮ್ಮ ನೆನಪುಗಳು... ನೆನೆಯುವ ರೀತಿ... ಹೊಸದನ್ನು ಕೇಳುವ ರೀತಿ.. :)
ನಿಮ್ಮವ,
ರಾಘು.
ಹೆ೦ಗಸರ ಆಸೆ ಯಾವತ್ತೂ ಸರಳ....!!!! ಸರಳ ಭಾಷೆಯಲ್ಲಿ ಹೇಳಬಹುದಾದ ಆಸೆಗೆ ಎಷ್ಟೊ೦ದು ಪೀಟಿಕೆ ಬೇಕು ನೋಡಿ.... ! ಪಾಪ ಹೆ೦ಗಸರು...
ReplyDeleteಫೋನ್ ಮಾಡಿ ಹೇಳಿದರೆ ನೇರವಾಗಿ ಬೇಡ ಎ೦ದರೆ ಅ೦ತ ಈ sms....
ಪ್ರತಿಕ್ರಿಯಿಸಿದ ಶಿವಪ್ರಕಾಶ್,ಶಿವು ಸರ್,ಆನ೦ದ ಹಾಗೂ ರಾಘು ಅವರೆ...ಧನ್ಯವಾದಗಳು.
ಚೆನ್ನಾಗಿದೆ..:D ಮತ್ತೆ ಮಸಾಲೆ ದೋಸೆ ಸಿಕ್ಕಿತೇ? ಇಲ್ಲಾ ಬರಿಯ sms ಮೂಲಕ "ತರುವೆ" ಎಂಬ ಸಂದೇಶ ಮಾತ್ರ ಮುಟ್ಟಿತೇ? :)
ReplyDeleteha ha.. nice msg..
ReplyDeleteBut delivery failed !! :)
ಹಾಹಾಹಾ! SMS ಚೆನ್ನಾಗಿದೆ!
ReplyDeleteಹ್ಹ ಹ್ಹ ಹ್ಹ ಚೆನ್ನಾಗಿದೆ ಮೇಡಂ ನಿಮ್ಮ ಎಸ್ಸಮೆಸ್ಸು .. :)
ReplyDeleteಅಂತೂ ಎಸ ಎಂ ಎಸ ಕಲಿಸೋದು ಮಸಾಲೆ ದೋಸೆಗೆ ಆಲ್ವಾ
ReplyDeleteಕಾಲ ನೋಡಿ ಹೇಗಾಯ್ತು ಅಂತ
ತುಂಬಾ ನಗು ಬಂತು ಓದಿ
ಚೆನ್ನಾಗಿದೆ
ಚುಕ್ಕಿ ಚಿತ್ತಾರ...
ReplyDeleteನಲ್ಲ..
ಬರುವಾಗಲೆಲ್ಲ...
ಮಸಾಲೆದೋಸೆ ತರುವೆನಲ್ಲ
ಹೇಳಿದ್ದನಲ್ಲ...
ದಾರಿಯಲ್ಲೆಲ್ಲ
ನನ್ನ
ಎಸ್ಸೆಮ್ಮೆಸ್ ನೆನಪಾಗಲ್ಲಿಲ್ಲ..
ಈಗ..
ಮನೆಯೆಲ್ಲ
ಪಾತ್ರೆಗಳ ಸದ್ದಲ್ಲ..!!
ಚಂದದ ಪಂಚ್ ಕವನ...
ಖುಷಿಯಾಯಿತು...
ಅಭಿನಂದನೆಗಳು..
ಮೊದಲೆಲ್ಲ...
ReplyDeleteರೂಡಿಯಿರಲಿಲ್ಲ..
ಹೀಗೆ sms ಕಳಿಸುವುದೆಲ್ಲ ..
ಈಗ ನಿಮ್ಮೆಲ್ಲರ ಪ್ರೋತ್ಸಾಹ ಸಿಕ್ಕಿತಲ್ಲ..
ಬಿಡುವುದಿಲ್ಲ ..
ಬೇಕಾದ್ದಕ್ಕೆಲ್ಲ ...
ಮತ್ತೆ ಎಸ್ ಎಮ್ ಎಸ್ಸೆ ಕಳಿಸುವೆ... ನಲ್ಲ.!!
ನನ್ನ ಎಸ್ಸೆ೦ಎಸ್ ಕವನಕ್ಕೆ ಪ್ರತಿಕ್ರಿಯಿಸಿ ಪ್ರೊತ್ಸಾಹಿಸಿದ ತೇಜಸ್ವಿನಿ, ವಿಕಾಸ್ ಹೆಗ್ದೆ,ಸುನಾತ್ ಸರ್,ಸ್ನೊವೈಟ್ ಸುಮ ,ಗುರು ಮತ್ತು ಪ್ರಕಾಶಣ್ಣ ....
ReplyDeleteಧನ್ಯವಾದಗಳು.
ವಿಜಯಶ್ರೀ ಕಷ್ಟಪಟ್ಟುಮಾಡಿದಳು ತನ್ನಿನಿಯನಿಗಡಿಗೆ
ReplyDeleteಕಾದಿರುವಳು ಇನಿಯ ತರುವನೆಂದು ಮುಡಿಯಲು ಮಲ್ಲಿಗೆ
ಹಾಗೇ ಮುಸು ಮುಸು ತಿಂದಳು ಮಸಾಲೆಯ ಮಂಡಿಗೆ
ಹಹಹಹ...ಎಸ್ಸೆಮ್ಮೆಸ್ಸು ಗಳಿಗೆ ಹೊಸ ಆಯಾಮ ಕೊಡ್ತಿದ್ದೀರಾ...?? ಯಾಕೆ consultancy ಇಟ್ಕೋಬಾರ್ದು
ಜಲನಯನ ಸರ್..
ReplyDeleteಈ ಸಲ ಮರೆಯಲಿಲ್ಲ ನನ್ನ ಹೆಸರನ್ನು ...!
ಇಟ್ಟಿದ್ದೀರಲ್ಲ ಜೊತೆಯಲೊ೦ದು ಕವಿತೆಯನ್ನು...!
ತಿಳಿಸುವೆ ನಿಮಗೆ ಧನ್ಯವಾದಗಳನ್ನು.
ವಿಜಯಶ್ರೀ ಮೇಡಂ,
ReplyDeleteನನ್ನವಳು ನನ್ನ ಸಂಗದ ನಿಮ್ಮ ಕವನ ಓದಿ, ಮುಸಿ ಮುಸಿ ನಗುತ್ತಾ ಒಳಗೆ ಹೋದಳು...... ಅವಳದೂ ಸಹ ಇದೆ ವರಸೆ ಎಂದು ಹೇಳಬೇಕಾಗಿಲ್ಲ ತಾನೇ..... ಚೆನ್ನಾಗಿದೆ ನಿಮ್ಮ ಶೈಲಿ, ಮಸಾಲೆ ದೋಸೆಬೇಡಿಕೆಗೆ.....
Thanks mogera sir..
ReplyDeleteಹಹಹಾ... ಸಕ್ಕತ್ತಾಗಿದೆ....ಮಸಾಲೆದೋಸೆ ತರಿಸಲು ಒಳ್ಳೆ ಉಪಾಯ ಎ೦ದುಕೊ೦ಡು ನಾನೂ ಎಸ್ ಎಮ್ ಎಸ್ ಕಳುಹಿಸಿದೆ. ಆದರೆ... ನಾನು ಕಳುಹಿಸಿದ ಮಸಾಲೆದೋಸೆ ಎಸ್ ಎಮ್ ಎಸ್ ಗೆ ಮರುಕ್ಶಣವೇ ಬ೦ತು ನೋಡಿ ಈ ಉತ್ತರ..
ReplyDeleteನಲ್ಲೆ ಹೇಗೆ ಹೇಳಲಿ ಒಲ್ಲೆ,
ಮಸಾಲೆದೋಸೆ ಸಿಗುವುದು ಗ೦ಟೆ ನಾಲ್ಕರಿ೦ದ ಏಳರಲ್ಲೆ,
ನಾನು ಅಫೀಸಿನಿ೦ದ ಬರುವುದು ಗ೦ಟೆ ಎ೦ಟಾಗುವುದಲ್ಲೆ,
ನಿನ್ನಡಿಗೆಯ ಮು೦ದೆ ಯಾವುದೂ ಇಲ್ಲವಲ್ಲೇ!!!
ಕಾಪಿ ಚಿಟ್ಟು ಮಾಡಿದರೆ ಹೀಗೆ ಆಗುವುದು...! ಗೊತ್ತಾಯ್ತಾ...? ಈಗ ಮಾಡಿದ್ದುಣ್ಣೋ...ಮಹರಾಯ.... ತಿ ..
ReplyDeleteಥ್ಯಾ೦ಕ್ಸ್
ನಾನು "sms " ಕಳಿಸಿದೆ.ನಿಮ್ಮ ಬರಹದ ಸ್ಪೂರ್ತಿ ಪಡೆದು .ನನ್ನ ಪತಿ SMS ನೋಡೋದೇ ಇಲ್ಲ ..ಅದು ಮಿಸ್ ಆಗೋಯ್ತು ...ಏನೆ ಆಗಲಿ ನಿಮಗೆ ಅಭಿನಂದನೆಗಳು .
ReplyDelete