Wednesday, December 16, 2009

ಆಕಾಶವೇ ಮಿತಿಯೇ ......?

ಜಗತ್ತನ್ನು ಹೊಸ ದೃಷ್ಟಿಯಿಂದ ನೋಡುವುದು ...
ಹೊಸ ಹೊಳಹಿನೊಂದಿಗೆ ಹೊಸತರ ಸೃಷ್ಟಿ ...
ಪ್ರತಿಯೊಂದು ಕಡೆಯೂ ಹೊಸ ತನ ...!
ಇದು ಸೃಜನಶೀಲತೆಯಲ್ಲವೇ.......?
ಪ್ರಪಂಚದಲ್ಲಿ ಮನುಷ್ಯರಿಗೆ ಮಾತ್ರ ಒಲಿದಿರುವ ಕ್ರಿಯೇಟಿವಿಟಿ ಲೆಕ್ಕವಿಲ್ಲದಷ್ಟು ಹೊಸ ಆವಿಷ್ಕಾರಗಳಿಗೆ ಕಾರಣವಾಗಿದೆ. ವಿಜ್ಞಾನ ,ತಂತ್ರಜ್ಞಾನ, ಗಣಿತ, ಕಲೆ, ಸಾಹಿತ್ಯ,ವಾಸ್ತುಶಿಲ್ಪ , ವ್ಯಾಪಾರ ಹೀಗೆ ಜೀವನದ ಎಲ್ಲಾ ವಿಭಾಗಗಳಲ್ಲೂ ಮಾನವನ ಹೊಸತನ ದಿನೇ ದಿನೇ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದೆ.

ನಮ್ಮ ಮೆದುಳಿನಲ್ಲಿ ಕ್ರಿಯೇಟಿವಿಟಿ ಎಲ್ಲಿ ಹುಟ್ಟುತ್ತದೆ, ಗೊತ್ತೇ ....? ಮೆದುಳಿನ ಮುಂಬಾಗದಲ್ಲಿ . ಅದಕ್ಕೆ frontal lobe ಎನ್ನುತ್ತಾರೆ.ಜೊತೆಗೆ ಜಾಗ ನಿದ್ರೆ , ಮನಸ್ಥಿತಿ [mood] , ಖಿನ್ನತೆ ಮತ್ತು ಚಟಗಳು ಇವುಗಳಿಗೂ ಕಾರಣವಾಗಿದೆ.
ನೋಡಿ ಬೇಕಾದರೆ... ತುಂಬಾ ಕ್ರಿಯೇಟಿವ್ ಆಗಿರುವವರು ಮೂಡಿಗಳಾಗಿರುತ್ತಾರೆ.
ಉದಾ :ಪ್ರಸಿದ್ಧ ಭೌತಶಾಸ್ತ್ರಜ್ಞ ಅಇನ್ಸ್ಟೀನ್ . ಕೆಲವೊಮ್ಮೆ ಅವನಿಗೆ ತಾನ್ಯಾರು , ಎಲ್ಲಿಗೆ ಹೋಗುತ್ತಿದ್ದೇನೆ ಎನ್ನುವುದೇ ಮರೆತುಹೊಗುತ್ತಿತ್ತಂತೆ . ಆದರೆ ಅವನದು ಅದೆಂತಹಾ ಸೃಜನಶೀಲ ವ್ಯಕ್ತಿತ್ವ ಎನ್ನುವುದು ಲೋಕಕ್ಕೆಲ್ಲ ಪರಿಚಿತವಲ್ಲವೇ....?
ಆರ್ನೆಷ್ಟ್ ಹೆಮಿಂಗ್ವೆ .. ಆತ ಪ್ರಸಿದ್ಧ ಬರಹಗಾರ ಮತ್ತು ಕಲಾವಿದ , ಖಿನ್ನತೆಯಿಂದ ಬಳಲುತ್ತಿದ್ದು ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡನಂತೆ.
ಅನೇಕ ಕ್ರಿಯೇಟಿವ್ ವ್ಯಕ್ತಿಗಳು ತಮ್ಮ ಹುಚ್ಚುತನಕ್ಕೂ ಹೆಸರಾಗಿರುತ್ತಾರೆ. ಆರ್ಕಿಮಿಡಿಸ್ ಸಾಪೇಕ್ಷ ಸಾಂದ್ರತೆಯ ನಿಯಮ ಹೊಳೆದಾಕ್ಷಣ ಯುರೇಕಾ ....ಯುರೇಕಾ ....ಎನ್ನುತ್ತಾ ಸ್ನಾನಗೃಹದಿಂದ ಬೆತ್ತಲೆಯಾಗಿಯೇ ಬೀದಿಯಲ್ಲಿ ಓಡುತ್ತಾ ಅರಮನೆಗೆ ಹೋದ ಕತೆ ಗೊತ್ತಲ್ಲವೇ ...? ಕ್ರಿಯೇಟಿವಿಟಿ ಇರುವವರೆಲ್ಲಾ ಹೀಗೆಯೇ ಅಂತಲ್ಲ .. ...! ಜಾಗ ಹಾಗಿದೆ ಅಂತ...

ಸೃಜನಶೀಲತೆ ಆಥವಾ ಕ್ರಿಯೇಟಿವಿಟಿ ಅನ್ನುವುದು ಸೃಜನಶೀಲ ವ್ಯಕ್ತಿ , ಪರಿಸರ, ಕ್ರಿಯೆ ಮತ್ತು ಸೃಜನಶೀಲ ಉತ್ಪನ್ನ ಇವುಗಳಿಂದ ಕೂಡಿರುತ್ತದೆ.
ಒಬ್ಬ ವ್ಯಕ್ತಿ ಕ್ರಿಯೇಟಿವ್ ಆಗಿರಲು ಮಾಧ್ಯಮದಲ್ಲಿ ಹೆಚ್ಚಿನ ಬುದ್ಧಿಮತ್ತೆ ಅತ್ಯವಶ್ಯ.ಕ್ರಿಯೇಟಿವಿಟಿ ವಂಶದಲ್ಲಿ ಹರಿಯುತ್ತದೆ.ರೇಡಿಯಂ ಕಂಡುಹಿಡಿದ ಮೇರಿ ಕ್ಯೂರಿ ಮತ್ತು ಪೆಯರಿ ಕ್ಯೂರಿ ಮತ್ತು ಇವರ ಮಕ್ಕಳು ನೊಬೆಲ್ ಪುರಸ್ಕೃತರು.
ಸರ್ ಫ್ರಾಂಸಿಸ್ ಗ್ಯಾಲ್ಟನ್ ಎನ್ನುವವನು ಅನೇಕ ಪ್ರತಿಭಾಶಾಲಿಗಳ , ಪಂಡಿತರ ಜೀವನಚರಿತ್ರೆಗಳನ್ನು ಅಭ್ಯಾಸ ಮಾಡಿ ವಿಷಯವನ್ನು ಸ್ಪಷ್ಟ ಪಡಿಸಿದ್ದಾನೆ . Genius and productive creators ಬಗ್ಗೆ ಅಭ್ಯಾಸ ಮಾಡಿದ ಸ್ವತಹ ಗ್ಯಾಲ್ಟನ್ ಮತ್ತು ವಿಕಾಸವಾದದ ಚಾರ್ಲ್ಸ್ ಡಾರ್ವಿನ್ ಇಬ್ಬರೂ ರಕ್ತಸಂಬಂಧಿಗಳು.


ಸೃಜನಶೀಲತೆ ಎನ್ನುವುದು ಅಭ್ಯಾಸ ಮಾಡಿದಂತೆ ಹೆಚ್ಚುತ್ತಾ ಹೋಗುವುದು. ಉತ್ತಮ ರಿಸರ , ಪ್ರೇರಣೆ, ಬುದ್ಧಿಮತ್ತೆ, ಮತ್ತು ವ್ಯಕ್ತಿತ್ವ ಕ್ರಿಯೇಟಿವಿಟಿಯನ್ನು ಹೆಚ್ಚುಗೊಳಿಸಲು ಸಹಕರಿಸುತ್ತವೆ.

ಆಂತರಿಕ ಪ್ರೇರಣೆ , ಶಿಸ್ತು , ಸಂಯಮ , ಶ್ರದ್ಧೆ, ನಂಬಿಕೆ , ಉತ್ಕ್ರುಷ್ಟತೆಗೆ ಮೀಸಲಾದ ಜೀವನ ಶೈಲಿ , ಅಡತಡೆಗಳಿಗೆ ಹೆದರದೆ ಮುನ್ನುಗ್ಗುವ ಛಲ, ವಿಷಯದ ಬಗ್ಗೆ ಆಳವಾದ ಜ್ಞಾನ ,ಬದ್ಧತೆ ಗುಣಗಳೆಲ್ಲಾ ಸೃಜನಶೀಲ ವ್ಯಕ್ತಿಗಳಲ್ಲಿ ಅಡಕವಾಗಿರುತ್ತವೆ.


ಓಹೋ .. ಕೊರೆತ ಸಾಕು ಮಾಡಿ ವಿಷಯಕ್ಕೆ ಬನ್ನಿ ಅನ್ನುತ್ತೀರಾ.... ? ಕಳೆದ ಸಂಚಿಕೆ ಕೊನೆತುತ್ತು ಮರೆತಿಲ್ಲ ನಾನು.ಅದೂ ಕೂಡಾ ಸೃಜನಶೀಲತೆಗೊಂದು ಚಿಕ್ಕ ನಿದರ್ಶನ ಅನ್ನಲು ಇಷ್ಟೆಲ್ಲಾ ಪೀಠಿಕೆ ಅಷ್ಟೇ...

ಇದು ಒಂದು ಮದುವೆಯ ಆಹ್ವಾನ ಪತ್ರಿಕೆಯ ವಿನ್ಯಾಸವೆಂದರೆ ನಂಬುತ್ತೀರಾ....?
ಬಾಟಲಿಯ
ಕಾರ್ಕ್ ತೆಗೆದಾಗ ಸುರುಳಿ ಮಾಡಿದ ಕರೆಯೋಲೆಯಿತ್ತು. ಬಾಟಲಿಯ ಕುತ್ತಿಗೆಯಲ್ಲಿರುವ ಸಂಚಿಯಲ್ಲಿ ಸುಗಂಧ ಬೀರುವ ಗುಳಿಗೆಗಳು ಮತ್ತು ಮದುವೆ ನಡೆಯುವ ಸ್ಥಳದ ಮಾರ್ಗಸೂಚಿ .ಬಾಟಲಿಯ ಹೊರಮೈಗೆ ವಿವಾಹದ ವಿವರಗಳುಳ್ಳ ಲೇಬಲ್ ಅಂಟಿಸಿದ್ದಾರೆ. ಒಳಬಾಗದಲ್ಲಿ ಚೆಂದಕ್ಕೆ ಟಿಕಲಿಗಳು. ಎಷ್ಟು ಚೆನ್ನಾಗಿ concept workout ಮಾಡಿದ್ದಾರೆ ನೋಡಿ.. !

ಆಹ್ವಾನ ಪತ್ರಿಕೆಯೊಂದನ್ನು ಹೀಗೂ ಮಾಡಬಹುದು ಅನ್ನುವುದು ಇದನ್ನು ನೋಡಿದ ಮೇಲಷ್ಟೇ ನನಗರ್ಥವಾಯಿತು. ನನ್ನವರು ಮೊದಲು ಇದನ್ನು ತೋರಿಸಿದಾಗ ಏನೆಂದು ಗೊತ್ತಾಗದೆ ಬೇಸ್ತು ಬಿದ್ದಿದ್ದೆ ........! ನಿಮ್ಮ ಥರಾನೇ .......!!!

ಸೃಜನಶೀಲತೆಗೆ ಆಕಾಶವೇ ಮಿತಿಯಲ್ಲವೇ....? UNLIMITED CREATIVITY......!!!

ಕೊನೆತುತ್ತು : ಯಾರಿಗೂ ಫೋಟೋದಲ್ಲಿರುವುದು ಏನೆಂದು ಕಂಡುಹಿಡಿಯಲು ಸಾಧ್ಯವಾಗದಿದ್ದರೂ, ಸಾಕಷ್ಟು ತಲೆ ಕೆಡಿಸಿಕೊಂಡಿದಕ್ಕಾಗಿ ಯಾರಿಗೂ ಬೇಜಾರು ಮಾಡಬಾರದೆಂದು ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಗಿದೆ ......!!! ಬೇಕಷ್ಟು ಆಯ್ದುಕೊಳ್ಳಿ...!













22 comments:

  1. "ಇರುವದ ಬಿಟ್ಟು ಇರದುದರೆಡೆಗೆ ತುಡಿವದೇ ಜೀವನ"
    ಹೊಸತನಕ್ಕಾಗಿ ಮಾನವರ ತುಡಿತ ಬೆಡಗಿನ ಲೋಕವನ್ನೇ ತೆರೆಯುತ್ತದೆ.
    ಚೆ೦ದದ ಲೇಖನ ಈ ಬಗ್ಗೆ.
    ಬಾಟ್ಲಿ ಕರೆಯೋಲೆ ಒಳ್ಳೇಯದಿದೆ. ಆದರೇ ಶಾ೦ಪೇನ್-ಒಳಗಿರಬೇಕಿತ್ತು ಅನ್ನೋದು ನಮ್ಮ ಗು೦ಡು ಬ್ಲೊಗಿಗರ ಅಭಿಮತ.
    ಹೂವಿನ ಸಮಾಧಾನಕರ ಬಹುಮಾನಕ್ಕೆ ಧನ್ಯವಾದಗಳು.

    ReplyDelete
  2. ಕ್ರಿಯೇಟಿವಿಟಿ ಯನ್ನು ಹುಡುಕಿ ತೆಗೆಯಬೇಕದ್ದು ಅಗತ್ಯ
    ಪ್ರತಿಯೊಬ್ಬನಿಗೂ ಅವನದೇ ಆದ ಕ್ರಿಯೇಟಿವಿಟಿ ಇರುತ್ತದೆ,
    ಒಳ್ಳೆಯ ಲೇಖನ
    ಸಮಾಧಾನಕರ ಬಹುಮಾನಕ್ಕೆ ವಂದನೆಗೆಳು

    ReplyDelete
  3. ಸೋತರು ಕೂಡ ಬಹುಮಾನ ಕೊಟ್ಟಿರಲ್ಲ...
    ಧನ್ಯವಾದಗಳು...
    ಈ ಹೂವನ್ನು ತೆಗೆದುಕೊಂಡು ಹೋಗಿ ನನ್ನ GF ಕೊಡ್ತೀನಿ... ;)

    ReplyDelete
  4. ವಿಜಯ ನಿಮ್ಮ ಮಾತು ನಿಜ ಬುದ್ಧಿ ಉಪಯೋಗಿಸಿದಷ್ಟೂ ಬೆಳೆಯುತ್ತೆ...ಯಾಕಂದ್ರೆ ಹರಿದರೆ ಕಾಲುವೆ ಕಿರಿದಾಗೊಲ್ಲ ಹಿರಿದಾಗುತ್ತೆ. ಮೂಡಿ ಅನ್ನೋದು creativity ಗೆ ಬುದ್ಧಿವಂತಿಕೆಯ ಮೂಲಕ ವ್ಯಕ್ತವಾದರೆ ಧನಾತ್ಮಕ...ಇಲ್ಲ ಋಣಾತ್ಮಕ. ಎಡಿಸನ್ ಲ್ಯಾಬಿನಲ್ಲಿ ಟಿಫನ್ ಬಾಕ್ಸನ್ನ್ ಮರೀತಿದ್ದುದನ್ನು ಅವನ ಲ್ಯಾಬ್ ಅಸಿಸ್ಟೆಂಟ್ cash ಮಾಡ್ಕೋತಾ ಇದ್ನಂತೆ...ಅದನ್ನು ಖಾಲಿ ಮಾಡಿ.."ಎನ್ ಸರ್ ಇಷ್ಟು ಬೇಗ ಊಟ ಮುಗಿಸಿದಿರಿ" ಎನ್ನೋನಂತೆ...ಅದಕ್ಕೆ ಎಡಿಸನ್ .."ಓ ಹೌದಾ ಹಾಗಾದ್ರೆ ತೊಳೆದು ನನ್ನ ಬ್ಯಾಗಲ್ಲಿ ಇಟ್ಟುಬಿಡು" ಎನ್ನೋರಂತೆ......ಆಹ್ವಾನ ಪತ್ರಿಕೆಯಲ್ಲೂ ಕ್ರಿಯೇಟಿವಿಟಿ ತೋರಿಸಿದ್ದಾರಲ್ಲಾ ಯಾರೋ...ಎಂದರೋ ಮಹಾನುಭಾವುಲು....

    ReplyDelete
  5. ಇಂತಹ ಸೃಜನಶೀಲ ಪ್ರಯೋಗಗಳು ಕನ್ನಡ ಸಿನೆಮಾ ರಂಗದ ಮಹೂರ್ತದ ಆಹ್ವಾನ ಪತ್ರಿಕೆಗಳಲ್ಲಿ ಬಹಳ ಆಗುತ್ತವೆ. ಸೃಜನಶೀಲತೆ ಅನ್ನುವುದು ನಾವು ಎಷ್ಟು ಖರ್ಚು ಮಾಡಲು ತಯಾರಿದ್ದೇವೆ ಎಂಬುದರ ಮೇಲೂ ಅವಲಂಬಿತವಾಗಿರುತ್ತದೆ. :)

    ReplyDelete
  6. Fantastic!
    ನೀವು ನೀಡಿದ ಸಮಾಧಾನಕರ ಬಹುಮಾನವೂ ಚೆನ್ನಾಗಿದೆ!

    ReplyDelete
  7. ವಿಜಯಶ್ರೀ ಮೇಡಂ,
    ಮೊದಲಿಗೆ, ನಿಮ್ಮ ಸಮಾದಾನಕರ ಬಹುಮಾನಕ್ಕೆ ವಂದನೆಗಳು..... ಕ್ರೀಯಾಶೀಲತೆಗೆ ನಿಮ್ಮ ಪ್ರಯತ್ನವೂ ಸಾಕ್ಷಿ.... ಪ್ರತಿ ಬಾರಿ ಹೊಸ ಹೊಸತರ ಬಗ್ಗೆ ತಿಳಿಸುತ್ತೀರಿ......

    ReplyDelete
  8. ಆಹಾ ಬಾಟ್ಲಿ ಕೊಟ್ಟು ಮದುವೆಗೆ ಕರೀತಾರಂದ್ರೆ, ಇನ್ನು ಮದುವೆಗೆ ಹೋದ್ರೆ ಇನ್ನೂ ಏನೇನು ಸಿಗುತ್ತೋ... :)

    ಹೂವೇನೋ ಕೊಟ್ಬಿಟ್ರಿ, ಇನ್ನು ಹೂ ಮುಡಿಯೋಳನ್ನು ಮದುವೆ ಮನೇಲಿ ಹುಡಕ್ಬೇಕು .. :D

    ReplyDelete
  9. ಸಮಾಧಾನಕರ ಬಹುಮಾನಕ್ಕಾಗಿ ಥ್ಯಾ೦ಕ್ಸ್....
    ಆ ಆಹ್ವಾನ ಪತ್ರಿಕೆಗೆ ಯಾರ ಸೃಜನಶೀಲತೆ ಕಾರಣವೋ ತಿಳಿಯೆ..
    ಆಹ್ವಾನಪತ್ರಿಕೆ ನೋಡಿ ಸೃಜನಶೀಲತೆಯ ಬಗ್ಗೆ ಬರೆಯಬೇಕೆ೦ದು ಹೊಳೆದದ್ದು ಸೃಜನಶೀಲತೆಗೆ ಒ೦ದು ಒಳ್ಳೆಯ ಉದಾಹಾರಣೆ ಎನ್ನುತ್ತೇನೆ....
    ಉತ್ತಮವಾಗಿದೆ...

    ReplyDelete
  10. ಸೀತಾರಾ೦ ಅವರೇ
    ಸದಾಶಿವನಿಗೆ ಸದಾ ಧ್ಯಾನ ಅ೦ದ೦ತೆ ನಿಮಗೆ ಶಾ೦ಪೇನ್ ಧ್ಯಾನವೇ...? ಅದು ಜ್ಯೂಸ್ ಬಾಟ್ಲಿ ಕಣ್ರೀ... ನಿಮ್ಮ ಪ್ರೋತ್ಸಾಹಕ್ಕೆ ಸದಾ ನಮನಗಳು.

    ಸಾಗರದಾಚೆಯ ಗುರು ಅವರೇ..
    ಪ್ರೋತ್ಸಾಹ ದೊರೆತಾಗ ಸ್ರುಜನಶೀಲತೆ ಹೆಚ್ಚುತ್ತದೆ. ನಿಜ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ಶಿವಪ್ರಕಾಶ್...
    ಹೂ ಕೊಡುವಾಗ ನಿಮ್ಮ ಹುಶಾರಿ ನಿಮಗಿರಲಿ. ಬೆಸ್ಟ್ ಆಫ್ ಲಕ್ .

    ಜಲನಯನ ಸರ್...
    ಉದಾಹರಣೆಗಳೊ೦ದಿಗೆ ಉತ್ತಮ ಪ್ರತಿಕ್ರಿಯೆ ಕೊಟ್ಟಿದ್ದೀರಿ. ಥಾ೦ಕ್ಸ್.
    ಆಹ್ವಾನ ಪತ್ರಿಕೆ ನನ್ನವರ ಫ್ರೆ೦ಡ್ ಮಗನದು.

    ವಿ.ರಾ.ಹೆ. ಅವರೇ...
    ನಿಮ್ಮ ಅನಿಸಿಕೆ ಸರಿಯಿದೆ. ಖರ್ಚು ಮಾಡಲು ತಯಾರಿದ್ದರೆ ಒಳ್ಳೆಯ ಉತ್ಪನ್ನ ದೊರೆಯುತ್ತದೆ.ಆದರೆ ಸ್ರುಜನಶೀಲತೆಯ ಕೊರತೆ ಇದ್ದಾಗ ಹಣ ನೀರಿನ೦ತೆ ಖರ್ಚಾದರೂ ಒಳ್ಳೆಯ ಫಲ ಸಿಗದು.ಅಲ್ಲವೇ..? ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ಸುನಾಥ್ ಕಾಕಾ..
    ಬಹುಮಾನ ಖುಶಿಯಾಯಿತೇ...? ನಿಮ್ಮ ಪ್ರೋತ್ಸಾಹ ನನಗೂ ಸ೦ತಸ ತ೦ದಿತು.ವ೦ದನೆಗಳು.

    ದಿನಕರ್ ಅವರೇ.
    ನಿಮ್ಮ ಪ್ರೋತ್ಸಾಹ ನನಗೆ ಪ್ರೇರಣೆ. ನಿಮ್ಮ ಮೆಚ್ಚುಗೆಗೆ ಋಣಿ.ವ೦ದನೆಗಳು.

    ಆನ೦ದ..
    ಅಪ್ಪ ಅಮ್ಮ ಬರುವವರಿದ್ದಾರಲ್ಲವೇ...? ಹೂ ಮುಡಿಯುವವಳನ್ನು ಹುಡುಕಿ ಎ೦ದು ಹೇಳಲೇ...? ಹ್ಹ..ಹ್ಹ..ಹ್ಹಾ... ಥ್ಯಾ೦ಕ್ಸ್.. ನಿಮ್ಮ ಕಾಮೆ೦ಟಿಗೆ..

    ಮನಮುಕ್ತಾ.
    ಆಹ್ವಾನಪತ್ರಿಕೆ ನನ್ನವರ ಕ್ರೈಸ್ತ ಗೆಳೆಯರ ಮಗನ ಮದುವೆಯದು.ಸ್ರುಜನಶೀಲತೆಗೆ ನನ್ನ ಬರಹವನ್ನೂ ಉದಾಹರಣೆಗೆ ತಗೋ೦ಡಿದ್ದು ಸ೦ತೋಷ ಪಡಬೇಕಾದ ವಿಚಾರವೇ....ಹ್ಹ..ಹ್ಹ...ಹ್ಹಾ.. ಥ್ಯಾ೦ಕ್ಸ್.

    ನೋಡಿ.. ಈ ಕಾದಿಡುವ೦ತೆ ವಿನ್ಯಾಸ ಮಾಡಲ್ಪಟ್ಟ ಆಹ್ವಾನಪತ್ರಿಕೆಯೊ೦ದು ನಮ್ಮೆಲ್ಲರ ತಲೆಗೆ ಎಶ್ಟೊ೦ದು ಕೆಲಸ ಕೊಟ್ಟಿತಲ್ಲವೇ ...? ಆ ಜೋಡಿಗಳಿಗೆ ಶುಭ ಹಾರೈಸೋಣ.

    ವ೦ದನೆಗಳು.

    ReplyDelete
  11. ಥ್ಯಾಂಕ್ಸ್ ಮೇಡಂ ಬಹುಮಾನ ನೀಡಿದಕ್ಕೆ... :) :) ತುಂಬಾ ಒಳ್ಳೆಯ ಲೇಖನ ಮೇಡಂ..ಉಪಯುಕ್ತವಾದ ಮಾಹಿತಿ ನೀಡಿದಕ್ಕೆ ಧನ್ಯವಾದಗಳು :)

    ReplyDelete
  12. ತುಂಬಾ ಚೆನ್ನಾಗಿದೆ...

    ಬಾಟ್ಲಿಯ ಪ್ರಯೋಗ ತುಂಬಾ ಚೆನ್ನಾಗಿದೆ. ಇಷ್ಟವಾಯಿತು.

    ReplyDelete
  13. ಸ್ನೊ ವೈಟ್ ..
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.


    ಶಿವು ಸರ್...
    ಸೋತವರಿಗೂ ಬಹುಮಾನ ಕೊಡಲಾಗಿದೆ.ಹ್ಹ..ಹ್ಹ...ಹ್ಹಾ.
    ಮೋಸವೇನೂ ಆಗಿಲ್ಲ ಅಲ್ಲವೇ....?
    ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

    ReplyDelete
  14. ವಿಜಯಶ್ರೀ ಮೇಡಮ್...
    ಭಾಗವಹಿಸದಿದ್ದವರಿಗು ಬಹುಮಾನ ಕೊಟ್ಟಿದ್ದೀರಿ... ಧನ್ಯವಾದಗಳು. ನಿಮ್ಮ ಬರಹ ಚೆನ್ನಾಗಿದೆ. ಹೌದು ಬುದ್ಧಿ ಉಪಯೋಗಿಸಿದಷ್ಟೂ ಅಕ್ಷಯವಾಗುತ್ತದೆ. ಇದು ನಿಜವಾಗಿ ನನಗಂತೂ ಅತ್ಯಂತ ಆಶ್ಚರ್ಯಕರ ಮತ್ತು ಹೊಸ ವಿನ್ಯಾಸದ ಕರೆಯೋಲೆ.
    ನನ್ನ ಅಂತರಂಗದ ಅಂಗಳಕ್ಕೆ ಬಂದ ನಿಮಗೆ ಸುಸ್ವಾಗತ. ಹೀಗೇ ಆಗಾಗ ಬರುತ್ತಿರಿ ಎಂದು ಆತ್ಮೀಯ ಆಮಂತ್ರಣ....

    ಶ್ಯಾಮಲ

    ReplyDelete
  15. ವಿಜಯಶ್ರೀ,
    ಬುದ್ಧಿ ಉಪಯೋಗಿಸಿದಷ್ಟೂ ಬೆಳೆಯುತ್ತ ಹೋಗುತ್ತದೆ.....
    ಬಾಟಲಿ ಆಮಂತ್ರಣ ಚೆನ್ನಾಗಿದೆ.....
    ಮದುವೆಗೆ ಹೋಗಿದ್ರ...ಅಲ್ಲಿ ಎನೇನು ಇತ್ತು.....?
    ಉಪಯುಕ್ತ ಮಾಹಿತಿಗಾಗಿ ಅಭಿನಂದನೆಗಳು ....

    ReplyDelete
  16. ಅ೦ತರ೦ಗದ ಶ್ಯಾಮಲಾ ಅವರೇ...
    ಬ್ಲಾಗೂರ ನನ್ನರಮನೆಗೆ ಸ್ವಾಗತ.
    ನನಗೆ ತೋಚಿದ ಹೊಸತನವನ್ನು ಎಲ್ಲರಲ್ಲೂ ಹ೦ಚಿಕೊ೦ಡರೆ ನನಗೆ ಸ೦ತಸ, ಸಮಾಧಾನ.
    ನಿಮಗೆಲ್ಲಾ ಇಷ್ಟವಾದರೆ ಬರೆದದ್ದು ಸಾರ್ಥಕ.

    ನಿಮ್ಮ ಅನಿಸಿಕೆ, ಅಭಿಪ್ರಾಯ ಹೀಗೇ ತಿಳಿಸುತ್ತಿರಿ.ವ೦ದನೆಗಳು.

    ReplyDelete
  17. ಸವಿಗನಸಿನ ಮಹೇಶ್...
    ನನ್ನರಮನೆಗೆ ಸ್ವಾಗತ. ಮದುವೆ ಮನೆಗೆ ಹೋಗಿದ್ದೆವು. ಕ್ರಿಸ್ಚಿಯನ್ನರ ರೀತಿನೀತಿಗಳು ನಮಗೆ ಗೊತ್ತಿಲ್ಲದೆ ಇದ್ದಿದ್ದರಿ೦ದ ಸ್ವಲ್ಪ ಬೋರಾಯಿತು. ಮದುಮಕ್ಕಳು ಕುದುರೆಗಾಡಿಯಲ್ಲಿ ಬರುವುದು, ನರ್ತಿಸುವುದು, ಮಧ್ಯ ಮತ್ತು ಉಳಿದ೦ತೆ ವೆಜ್ ನೊನ್ವೆಜ್ ಊಟ.... ನಮಗೆ ಎಲ್ಲಾ ಹೊಸತು. ವೆಜ್ ಊಟ ಬಿಟ್ಟು.ಹೆಚ್ಚು ಕಡಿಮೆ ರಾತ್ರೀ ಹತ್ತರ ನ೦ತರ ಊಟ ಮಾಡಿ ಮನೆಗೆ ಬ೦ದೆವು...ನೋಡಿ.
    ನಿಮ್ಮ ಅಭಿಪ್ರಾಯಗಳಿಗೆ ಸದಾ ಸ್ವಾಗತ.
    ವ೦ದನೆಗಳು.

    ReplyDelete
  18. ಚುಕ್ಕಿಚಿತ್ತಾರ...

    ನನ್ನ ಗೆಳೆಯನೊಬ್ಬ... ಅಶ್ವತ್ಥ ಎಲೆಯಲ್ಲಿ "ಆಮಂತ್ರಣ" ಪತ್ರಿಕೆ ಮಾಡಿಸಿದ್ದ...

    ಕ್ರಿಯೇಟಿವಿಟಿ ಬಗ್ಗೆ ನಿಮ್ಮ ಲೇಖನ ಇಷ್ಟವಾಯಿತು...

    ಅಮಗೆಲ್ಲ ಚಂದದ ಹೂವಿನ ಬಹುಮಾನ ಕೊಟ್ಟಿದ್ದಕ್ಕೆ ಧನ್ಯವಾದಗಳು..

    ReplyDelete
  19. ಪ್ರಕಾಶಣ್ಣ.
    ಅಶ್ವತ್ಥ ಎಲೆ ಆಮ೦ತ್ರಣ ಕೂಡಾ ಒಳ್ಳೆಯ ಕಾನ್ಸೆಪ್ಟ್.
    ಈ ವಿನ್ಯಾಸ ಸ್ವಲ್ಪ ಬೇರೆ ತರಾ ಅನ್ನಿಸಿ ನಿಮ್ಮಲ್ಲೆಲ್ಲಾ ಹ೦ಚಿಕೊಳ್ಳುವ ಯೋಚನೆ ಬ೦ತು.ನಿಮ್ಮೆಲ್ಲರ ಧನಾತ್ಮಕ ಸ್ಪ೦ದನೆಗೆ ಧನ್ಯವಾದಗಳು.

    ReplyDelete
  20. ಚುಕ್ಕಿ ಚಿತ್ತಾರ ಅವರೇ,
    ಹೊಸ ವರ್ಷದ ಹಾರ್ದಿಕ ಶುಭಾಶಯಗಳು.... ಒಂದೆರಡು ಒಳ್ಳೆಯ ಚಂದದ ಹೂವುಗಳನ್ನೂ ಆರಿಸಿ ತೆಗೆದು ಕೊಂಡಿದ್ದೇನೆ... :) ನಿಮ್ಮ ಲೇಖನ ಒಳ್ಳೇದಿದೆ...
    ನಿಮ್ಮವ,
    ರಾಘು.

    ReplyDelete