Monday, July 5, 2010

ಪ್ರಕೃತಿ
[ಚಿತ್ರ ನನ್ನದೇ ರಚನೆ.ಗ್ರೀಟಿಂಗ್ ಒಂದರ ಸ್ಫೂರ್ತಿ ]


ನನ್ನಲ್ಲೇ
ಇರುವ
ನನ್ನಿಂದಲೇ ಹುಟ್ಟುವ
ನನ್ನಿಂದಲೇ ಬೆಳೆಯುವ
ಜೀವನ, ಕಲೆ, ಕಾವ್ಯಕೃಷಿಯನ್ನು
ಕದ್ದಿದ್ದೀರೆಂದು,
ಕೃತಿಚೌರ್ಯ ಮಾಡಿದ್ದೀರೆಂದು
ಬೊಬ್ಬೆ ಹೊಡೆಯದ
ಏಕೈಕ ವ್ಯಕ್ತಿಯೇ ನಾನು
.......

ಪ್ರಕೃತಿ


[ಗಮನಿಸಿ ; ಬ್ಲಾಗುಗಳಿಗೆನಾಗಿದೆಯೋ ಗೊತ್ತಿಲ್ಲ.. ಒಂದೂ ಕಾಮೆಂಟ್ ಪಬ್ಲಿಶ್ ಆಗುತ್ತಿಲ್ಲ..
ಬೇರೆಯವರ ಬ್ಲಾಗುಗಳಿಗೆ ಹಾಕಿದ ಕಾಮೆಂಟ್ ಗಳದ್ದು ಕೂಡಾ ಅದೇ ಹಣೆ ಬರಹ..
ಎಲ್ಲಿ ಏನು ತೊಂದರೆ.... ಒಂದೂ ಅರ್ಥವಾಗುತ್ತಿಲ್ಲ..
ಆಗಿನಿಂದ ನನ್ನಷ್ಟಕ್ಕೆ ಗೊಣಗಾಡುತ್ತಿದ್ದೇನೆ.. ಸುಮ್ಮನೆ..
ನೀವೇನೋ ಹೇಳ್ತಾ ಇದ್ದೀರಿ ನನಗೆ ಗೊತ್ತಾಗುತ್ತಿಲ್ಲ... ಕೂತಿದ್ದೇನೆ ಬಿಮ್ಮನೆ....]


34 comments:

 1. ಪ್ರಕೃತಿಯೆ ಹೇಳಿರುವ ಸಾಲುಗಳು ಸೂಪರ್....
  ಚಿತ್ರವು ಸಹ ಚೆನ್ನಾಗಿದೆ....

  ReplyDelete
 2. ನಿಜ,
  ಪ್ರಕೃತಿ ಎಂದು ಬೊಬ್ಬೆ ಹೊಡೆಯುವುದಿಲ್ಲ. ತಾಯಿ ಪ್ರೀತಿ ತೋರುವ ನಿಜವಾದ ತಾಯಿ ಪ್ರಕೃತಿ!

  ReplyDelete
 3. ಕಾಮೆ೦ಟ್ ಮೊಡೆರೇಶನ್ ಗೆ ಹಾಕಿದ್ದರಿ೦ದ ಎರಡು ಕಾಮೆ೦ಟ್ಸ್ ಡ್ಯಾಶ್ ಬೋರ್ಡ್ ನಲ್ಲಿ ಇತ್ತು..ಅಲ್ಲಿಗೆ ಕ್ಲಿಕ್ ಮಾಡಿದರೆ ಯಾವ ಕಾಮೆ೦ಟ್ಸು ಕಾಣಿಸುತ್ತಿಲ್ಲ.... ಏನಾಯ್ತು ಗೊತ್ತಾಗಲಿಲ್ಲ.. ಈಗ ಅನ್ ಮೋಡರೇಟ ಮಾಡಿದ್ದೇನೆ..

  ಯಾಕೆ ಹೀಗಾಗ್ತಾ ಇದೆ ಗೊತ್ತಿದ್ದವರು ತಿಳಿಸ್ತೀರಾ...?

  ReplyDelete
 4. ಚೆನ್ನಾಗಿ ಹೇಳಿದ್ದಿರಾ ಪ್ರಕೃತಿಯ ಮನದಾಳದ ಮಾತನ್ನು ಸು೦ದರ ಚುಟುಕಲ್ಲಿ. ಚಿತ್ರವೂ ಚೆನ್ನಾಗಿದೆ. ಚಿತ್ರಕಾರರಾರು?

  ReplyDelete
 5. ಇದು ಯಥಾರ್ಥವಾದ ಮಾತು!

  ReplyDelete
 6. ನೂರಕ್ಕೆ ನೂರು ಸತ್ಯ. ತುಂಬಾ ಅರ್ಥವತ್ತಾದ ಚುಟುಕು.

  ReplyDelete
 7. ಒಹ್ಹೊ,, ನಿಮ್ಮ ಮಾತು ಸರಿಯಾಗಿದೆ. ಏನನ್ನೂ ಹೊಸತಾಗಿ ಸೃಷ್ಟಿಸದೆ ಎಲ್ಲವೂ ನನ್ನದೇ ಎನ್ನುವ ನಾವು ಪೄಕೃತಿಯ ಮುಂದೆ ಎಂದಿಗೂ ಗೌಣ. ಹನಿಗವನ ಬಹಳ ಚೆನ್ನಾಗಿದೆ.

  ReplyDelete
 8. ಚಿತ್ರಕಾರರು ಯಾರು ? ಚಿತ್ರ ತುಂಬ ಚೆನ್ನಾಗಿದೆ.

  ReplyDelete
 9. chennagide ... meaningful poem ...

  ReplyDelete
 10. ಸಕತ್ ಪನ್...ಬೊಬ್ಬೆ ಹೊಡೆಯುವವರಿಗೆ ಒಳ್ಳೆಯ ಬುಧ್ದಿ ಕೊಡಲಿ ಪ್ರಕೃತಿ ಮಾತೆ..

  ಅನ೦ತ್

  ReplyDelete
 11. ಕಾಡಿನ ನಡುವೆ ಒಂದು ಪುಟ್ಟ ಮನೆ..
  ಮನೆ ಪಕ್ಕದ ಮರದಲ್ಲಿ ಇನ್ನೊಂದು ಪುಟ್ಟ ಮನೆ..
  ಎರಡು ಮನೆಗೆ ಒಂದೇ ಸೂರು ಆ ಬಾನು, ಒಂದೇ ಅಡಿಪಾಯ ಆ ಭೂಮಿ
  ಸುಂದರ ಕಲ್ಪನೆ.. ಚಿತ್ರ ಚೆನ್ನಾಗಿದೆ..
  ನಿಮ್ಮವ,
  ರಾಘು.

  ReplyDelete
 12. ನನ್ನ ಕಾಮೆಂಟ್ ಕಾಣಿಸ್ತಾ ಇಲ್ಲ .!!
  ನಿಮ್ಮವ,
  ರಾಘು.

  ReplyDelete
 13. ಚಿತ್ರ ಚೆನ್ನಾಗಿದೆ
  ೧೩ ಕಾಮೆಂಟ್ಸ್ ಇದ್ದರೂ ೬ ಎಂದು ತಪ್ಪು ಲೆಕ್ಕ ಹಾಕುತ್ತಿದೆ.
  ನನ್ನ ಬ್ಯಾಂಕ್ ಅಕೌಂಟ್ ಹೀಗಾದ್ರೆ...
  ಗೂಗಲ್ ಬ್ಲಾಗರ್ ಸಪೋರ್ಟ್ ಟೀಂ ಗೆ ಒಂದು ಮೆಸೇಜ್ ಕಳಿಸಿ.

  ReplyDelete
 14. ನಾಲ್ಕು ಸಾಲುಗಳಲ್ಲಿ ಅದೆಸ್ಟೋ ಅರ್ಥ ತುಂಬಿರುವಿರಿ..ತುಂಬಾ ಅರ್ಥಪೂರ್ಣವಾಗಿದೆ

  ReplyDelete
 15. ಪ್ರಕೃತಿಯೆ ಹೇಳಿರುವ ಮಾತುಗಳು ಕವನವಾಗಿ ಸೊಗಸಾಗಿದೆ.....
  ಬೆಳ್ಳಿಗೆ ಕಾಮೆಂಟ್ ಹಾಕಿದೆ ಇಲ್ಲಿ...ಕಾಣ್ತಾ ಇಲ್ಲ....

  ReplyDelete
 16. nimma barahagalante nimma chitravu sundaravaagide..

  ReplyDelete
 17. ಅಕ್ಕಿಯೊಳಗನ್ನವನು ಮೊದಲಾರು ಕ೦ಡವರು..
  ಅಕ್ಕರದ ಬರಹಕ್ಕೆ ಮೊದಲಿಗನದಾರು ..
  ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬ೦ಧುಗಳ
  ಸಿಕ್ಕುವುದೆ ನಿನಗೆ ಜಸ ಮ೦ಕುತಿಮ್ಮ.


  ಮನದಾಳದಿಂದ,
  ಸೀತಾರಾ೦ ಸರ್,
  ಸುನಾಥ್ ಕಾಕ,
  ತೇಜಸ್ವಿನಿ,
  ಸಾಗರಿ,
  ಸುಬ್ರಹ್ಮಣ್ಯ,
  ಶ್ರೀಧರ್,
  ಅನಂತ ಸರ್,
  ರಾಘು,
  ಶಿವರಾ೦,
  ಶ್ರೀಕಾ೦ತ್,
  ಮಹೇಶ್,
  ವಾಣಿಶ್ರೀ...

  ಆತ್ಮೀಯವಾಗಿ ಪ್ರತಿಕ್ರಿಯಿಸಿದ ಎಲ್ಲರಿಗೂ ವ೦ದನೆಗಳು..

  ReplyDelete
 18. ನಿಜ ನಿಮ್ಮ ಚುಟುಕಿನ ಭಾವಾರ್ಥ ಅಂತೆಯೆ ನಿಮ್ಮ ಗ್ರೀಟಿಂಗ್ ಕಲೆ ಕಂಡು ತುಂಬಾ ಖುಷಿಯಾಯಿತು....ತುಂಬಾ ಚೆನ್ನಾಗಿ ಚಿತ್ರ ಬಿಡಿಸುತ್ತೀರಿ.

  ReplyDelete
 19. ಪ್ರಕೃತಿ ಮಾತೆಯ ಮಮತೆಯ ಪರಿ ತುಂಬಾ ಚೆನ್ನಾಗಿ ವ್ಯಕ್ತವಾಗಿದೆ.

  ReplyDelete
 20. ವಿಜಯಶ್ರೀ ಮೇಡಂ
  ಚಿತ್ರ, ಹಾಗೂ ಸಾಲುಗಳು ತುಂಬಾ ಸುಂದರವಾಗಿವೆ
  ನಿಮ್ಮ ಚಿತ್ರಕಲೆಗೆ ನಮನ

  ReplyDelete
 21. ವಿಜಯಶ್ರೀ...ನಿಮ್ಮ ಚಿತ್ರಗಳು ನಿಮ್ಮ ಕವನ ಕಥನಗಳಷ್ಟೇ ...ವೇಗದಲ್ಲಿ ಬರಲಿ ನಮ್ಮ ಮುಂದೆ...ಬಹಳ ಒಳ್ಳೆಯ ಚಿತ್ರ ಬಿಡಿಸುತ್ತೀರಿ...ನಿಮ್ಮದೇ ಚಿತ್ರಕ್ಕೆ ಮೂಡಿರುವ ನಿಮ್ಮಾದೇ ಮಾತು.....ಚೊಕ್ಕ..ಚೊಕ್ಕ ..ಅಪರಂಜಿ ಮಾತಾಗಿದೆ.

  ReplyDelete
 22. nimma hosa template chennagide madam..chitra mattu kavana eradu tumbaane chennagive :)

  ReplyDelete
 23. ಚುಕ್ಕಿಚಿತ್ತಾರ ,
  ಹೌದು ಹಾಗೆಯೇ ಅದೇಕೋ..!/
  ಚೆನ್ನಾಗಿದೆ..

  ReplyDelete
 24. *********************************
  http://bhuminavilu.blogspot.com/
  *********************************

  ReplyDelete
 25. ನಾನು ಈ ಮೊದಲು ಹಾಕಿದ ಕಾಮೆಂಟ್ ಕಾಣಿಸುತ್ತಿಲ್ಲ.ಕವನ ಮತ್ತು ಚಿತ್ರ ಎರಡೂ ಬಹಳ ಚೆನ್ನಾಗಿವೆ.

  ReplyDelete
 26. ಪ್ರತಿಕ್ರಿಯಿಸಿದ ಎಲ್ಲರಿಗೂ ವ೦ದನೆಗಳು...

  ReplyDelete
 27. ಚಿತ್ರ ತುಂಬಾ ಚೆನ್ನಾಗಿದೆ. ಏನು ಬಳಸಿದೀರಾ, crayon, ಅಥವಾ water/oil colour? ತಕ್ಕ ಕವನ

  ReplyDelete
 28. ದೀಪಸ್ಮಿತಾ ಅವರೆ..
  ನಿಮ್ಮ ಪ್ರತಿಕ್ರಿಯೆಗೆ ವ೦ದನೆಗಳು.
  ನಾನು ಈ ಚಿತ್ರಕ್ಕೆ ವಾಟರ್ ಕಲರ್ ಪೆನ್ಸಿಲ್ಸ್ ಬಳಸಿದ್ದೇನೆ..

  ReplyDelete
 29. Chitra haagu Kavana eradooo superb...ista aitu....

  ReplyDelete