Friday, July 16, 2010

ಚಿಟ್ಟೆ ... ಹಿಡಿದು ಬಿಟ್ಟೆ....!!!

ಅಲ್ಲಿ ಕೂತು ಇಲ್ಲಿ ಕೂತು
ಮೆಲ್ಲ ಮೆಲ್ಲ ರೆಕ್ಕೆ ಬಡಿದು
ಚಿಣ್ಣರಂತೆ  ಕಣ್ಣು ಮುಚ್ಚೆ 
 ಮಾಯವಾಗುವೆ ಮತ್ತೆ ಮೊರೆ ತೋರುವೆ. 



ಮಣ್ಣು, ಹೂವು, ದರಕು ಪರಕು.
ಕಾಲು ಸೋತಲ್ಲಿ ಕುಳಿತು.
ಕೊಂಬನೆತ್ತಿ ಹೂವ ಮುಡಿಯ
ಸವರ ಬೇಕಿದೆ ನವಿರು ಭಾವತಾಕಿದೆ

ಅಂದ ಚಂದದೊಡವೆ ತನುಗೆ  [ತನುವಿಗೆ]

ಕಣ್ಣು ತುಂಬಾ ಕಣ್ಣೇ  ಮೈಗೆ..
ಹೂವ  ಹೀರುವಾಸೆ ನಿನಗೆ
ಸ್ವಪ್ನ ಸುಂದರಿ ಮನಕೆ  ಬಯಕೆ ದಳ್ಳುರಿ.




ಪಕ್ಕದೊಂದು ಸೈಟಿನಲ್ಲಿ
ಮುಕ್ತವಾಗಿ ಹಾರುತಿರುವೆ
ಮಕ್ಕಳೆಲ್ಲ ಮುದದಿ ನಿನ್ನ
ರೆಕ್ಕೆ ಹಿಡಿವರು ಬಣ್ಣ ಮೆತ್ತಿಕೊಳುವರು.






ಕಷ್ಟ ಪಟ್ಟು ಹಿಡಿದು ಬಿಟ್ಟೆ
ಇಷ್ಟ ಪಟ್ಟು ಫೋಟೋದಲ್ಲಿ
ಜತನದಿಂದ ಸಾರಲಿಕ್ಕೆ 
ಬ್ಲಾಗ ಬೇಕಿದೆ ಜನಕೆ  ತೋರಬೇಕಿದೆ..







[ಪಕ್ಕದ ಸೈಟಿನಲ್ಲಿ ತನ್ನಷ್ಟಕ್ಕೆ ಹೂ ಬಿಟ್ಟು ನಿಂತಿರುವ ಚದುರಂಗದ ಗಿಡಗಳ ಸುತ್ತ ಚಿಟ್ಟೆಗಳದೇ  ಹಾರಾಟ .. ನೋಡಲಾಗದೆ ನನ್ನ ಕ್ಯಾಮರಾದಲ್ಲಿ ಕೆಲವನ್ನು ಕಷ್ಟ ಪಟ್ಟು ಅಡಗಿಸಿಟ್ಟು ಕೊಂಡಿದ್ದೇನೆ..ಮತ್ತೆ 
ಹಾಗೇ   ಮಕ್ಕಳಿಗೊಂದು ಪದ್ಯ ಮನಸಿನಲ್ಲೇ ಮೂಡಿ ಬಂತು..]

24 comments:

  1. ಚಿತ್ರಗಳು ಚೆನ್ನಾಗಿವೆ...ಕವನ ಚಿತ್ರಗಳಿಗೆ ಪುಉರಕವಾಗಿದೆ..ಚೆನ್ನಾಗಿದೆ.

    ReplyDelete
  2. ಫೋಟೋಸ್ ಎಲ್ಲ ಚೆನ್ನಾಗಿ ಬಂದಿದೆ.
    ಕೊನೆಗೂ ಚಿಟ್ಟೆ ಹಿಡಿದು ಬ್ಲಾಗ್ ತೋಟಕ್ಕೆ ಬಿಟ್ಟಿದ್ದಿರ.
    ನೈಸ್.
    ನಿಮ್ಮವ,
    ರಾಘು.

    ReplyDelete
  3. ಚುಕ್ಕಿ ಚಿತ್ತಾರ..

    ಫೋಟೊಗಳಷ್ಟೆ..
    ಸುಂದರ
    ನೀವು ಬರೆದ ಸಾಲುಗಳು..

    ಅಭಿನಂದನೆಗಳು....

    ReplyDelete
  4. ಮೇಡಮ್,

    ಚಿಟ್ಟೆಗಳ ಫೋಟೊಗಳು ತುಂಬಾ ಚೆನ್ನಾಗಿದ್ದು ಅದಕ್ಕೆ ತಕ್ಕಂತೆ ಸೂಕ್ತ ಕವನ ಬರೆದಿದ್ದೀರಿ.

    ReplyDelete
  5. ಚಿಟ್ಟೆಯ ಕಂಡೆ
    ಏನಾ ಚಿತ್ತಾರ?
    ಯಾರು ಬಳಿದರು ಬಣ್ಣ
    ಯಾರದೀ ಹುನ್ನಾರ?
    ವಿಜಯಶ್ರೀ ಬಹಳ ಚನ್ನಾಗಿವೆ ಚಿತ್ರಗಳು....ಅದಕ್ಕೆ ತಕ್ಕ ಪದ-ಪೋಣಿಕೆಯ ವಿವರಮಾಲೆ.

    ReplyDelete
  6. chitra....

    foto;s tumba chennagide adakke takkanaada saalugalu ....

    ReplyDelete
  7. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

    ನನ್ನ ನೆಟ್ ಕನೆಕ್ಶನ್ ಆಗಾಗ ಕೈ ಕೊಡುತ್ತಿದೆ.. ಯಾರ ಬ್ಲಾಗುಗಳಿಗೂ ಹೊಗಲಾಗುತ್ತಿಲ್ಲ. ಯಾರೂ ಅನ್ಯಥಾ ಭಾವಿಸುವುದಿಲ್ಲವೆ೦ದು ಭಾವಿಸುತ್ತೇನೆ.

    ReplyDelete
  8. chitragalu mattu kavana eradu tumba chennagive madam :)

    ReplyDelete
  9. ಅಹಾ !. ಮನಮೋಹಕ ಚಿತ್ರಗಳು ಅದರೊಟ್ಟಿಗೆ ಚಿತ್ರಗಳೂ ಸಹ.

    ReplyDelete
  10. ಚಿಟ್ಟೆಗಳ ವಿವಿಧ ಚಿತ್ರಗಳನ್ನು ನೋಡಿ ಖುಶಿಯಾಯಿತು. ಆ ಚಿತ್ರಗಳಿಗೆ ತಕ್ಕಂತಹ ಪದ್ಯಗಳನ್ನು ಬರೆದಿದ್ದೀರಿ. ಓದುತ್ತ ಓದುತ್ತ ಬೇಂದ್ರೆಯವರ "ಪಾತರಗಿತ್ತಿ ಪಕ್ಕಾ" ಕವನವೂ ನೆನಪಾಯಿತು.

    ReplyDelete
  11. ಚಿಟ್ಟೆ ಅ೦ದ ನೋಡುತಿರಲು
    ಪುಟ್ಟ ರೆಕ್ಕೆ ಹಾರಿಸುತ್ತ
    ಥಟ್ಟನದುವೆ ಹಾರಿ ಬ೦ದು
    ಗುಟ್ಟನೊ೦ದು ಹೇಳಿತು..
    ಸೈಟ ಪಕ್ಕದಲ್ಲಿ ನಿ೦ತು
    ಫೋಟೊ ಕ್ಲಿಕ್ಕಿಸುತ್ತ ಇರುವ
    ಚುಕ್ಕಿ ಚಿತ್ತಾರಗೊ೦ದು
    thanks ಹೇಳೆ೦ದು..!

    ಅನ೦ತ್

    ReplyDelete
  12. ಸುಂದರ ಚಿತ್ರಗಳು ಅಷ್ಟೇ ಸುಂದರ ಕವನ.

    ReplyDelete
  13. ಪೋಟೋಗಳು ಜೊತೆಗೆ ಸೊಗಸಾದ ಕವನ. ಬ್ಲಾಗ್ ಪೋಸ್ಟ್ ಚನ್ನಾಗಿದೆ.

    ReplyDelete
  14. ವಿಜಯಶ್ರೀಯವರೆ,
    ಸುಂದರ ಚಿತ್ರಗಳೊಂದಿಗಿನ ಸುಂದರ ಬರಹ.

    ReplyDelete
  15. ಚಿಟ್ಟೆಯ ಚಿತ್ರಗಳು ಅದ್ಭುತವ್ವಗಿದೆ. ಜೊತೆಗೆ ಕೈ ತತ್ತಿ ಕುಣಿಯುತ್ತಾ ಹಾಡಬಹುದಾದ ಸುಮಧುರ ಮಕ್ಕಳ ಪದ್ಯ!
    ಎರಡರ ನವಿರು ಚಿತ್ತಾರಕ್ಕೆ ಧನ್ಯವಾದಗಳು.

    ReplyDelete
  16. ಮೈಮೇಲೆ ಚುಕ್ಕಿ ಇರುವ ಪಾತರಗಿತ್ತಿಯ ಚಿತ್ತಾರವನ್ನು ಚೆನ್ನಾಗಿ ವರ್ಣಿಸಿದ್ದೀರಿ...

    ReplyDelete
  17. ಚುಕ್ಕಿಚಿತ್ತಾರ ,

    ಸೂಪರ್...

    ReplyDelete
  18. ಎಲ್ಲರೂ ನನ್ನ ಕವಿತೆಗೆ, ಚಿತ್ರಗಳಿಗೆ..
    ಗಧ್ಯದಲ್ಲಿ, ಪದ್ಯದಲ್ಲಿ .. ತಮ್ಮೆಲ್ಲರ ನುಡಿಮುತ್ತುಗಳನ್ನು ಇಟ್ಟು ಪ್ರೋತ್ಸಾಹಿಸಿದ್ದೀರಿ.. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಸದಾ ಋಣಿ..

    ReplyDelete
  19. ಚಿಟ್ಟೆ ಯ ಚಿತ್ರಕ್ಕೆ ಕವನದ ಸ್ಪೂರ್ತಿ
    ತುಂಬಾ ಚೆನ್ನಾಗಿದೆ

    ReplyDelete
  20. ಮೇಡಂ,

    ಚಿತ್ರಕ್ಕೆ ಪೂರಕವಾಗುವಂತೆ ಸುಂದರ ಸಾಲುಗಳು...ಚಿತ್ರ ಹಾಗೂ ಕವನಗಳು ಸೊಗಸಾಗಿ ಮೂಡಿಬಂದಿವೆ..ಧನ್ಯವಾದಗಳು

    ReplyDelete
  21. ನೀವು ತೆಗೆದ ಪೋಟೊಗಳಷ್ಟೆ ನಿಮ್ಮ ಬರಹವು ಕೂಡ ಚನ್ನಾಗಿದೆ.

    ಹೊನ್ನ ಹನಿ

    ReplyDelete