Friday, February 11, 2011

ಇರುವೆ ಸತ್ತ ನಂತರ ಏನಾಗುತ್ತೆ..ಪ್ರೇತವಾಗುತ್ತಾ..?


 ಕೆಲಸದ ರುಕ್ಕಮ್ಮ ಸ್ವಲ್ಪ ಭಯಮಿಶ್ರಿತ ಧ್ವನಿಯಲ್ಲಿಯೇ ಹೇಳಿದಳು.'' ಅಕ್ಕ ನಿನ್ನೆ ನಮ್ಮನೆ ಹತ್ರ ದೆವ್ವ ಬಂದಿತ್ತು...! ''




 '' ಎನ್ಮಾಡ್ತೆ ?''
''ಅಕ್ಕೋ ಎನ್ಮಾಡ್ತೂ ಅಂತೀಯಾ.. ಮನೆ ಶೀಟ್  ಮೇಲೆಲ್ಲಾ ದಡ ಬಡ ದಡ  ಬಡ ಓಡಾಡ್ತಾ ಇತ್ತು..''
''ಬೆಕ್ಕಿರಬಹುದು  ...! ಇಲೀನೋ ಹೆಗ್ಗಣನೋ ಓಡಿಸ್ಕೊಂಡು    ಬಂದಿರಬಹುದೇನೋ...?    ನೀನೊಬ್ಳು  ಶಬ್ದ   ಆದರೆ   ಸಾಕು,   ದೆವ್ವ ಅಂತೀಯ...''
''ಇಲ್ಲಾಕ್ಕ, ಮಧ್ಯ ರಾತ್ರಿ ಹೊತ್ತಿಗೆ...ಏನ್ ಭಯ ಆಯ್ತೂನ್ತೀಯ ...
ನನ್ನೆಜ್ಮಾನ ಯಾವ್ ದೆವ್ವಕ್ಕೂ ಹೆದರದೆ ಇರೋವ್ನು ಈ ದೆವ್ವಕ್ಕೆ ಭಯ  ಬಿದ್ಬುಟ್ಟ. ಒಂತರಾ ಅಳ್ತಿತ್ತು.....    ಕಳೆದ ತಿಂಗಳು ಆ ವಟಾರದ ಮನೇಲಿ ಬಸುರೀ ಹೆಂಗಸು  ಸುಟ್ಕೊಂಡು ಸತ್ತೊದ್ಳಲ್ಲಾ ಅಕ್ಕಾ ಅದು ಕೊಲೆ ಅಂತೆ.  ಅದಕ್ಕೆ ಅವಳೇ ದೆವ್ವ ಆಗಿ ಅಲೀತಾ ಇರೋದಂತೆ.. ಆಮೇಲೆ...., ಹೇಗೋ ಧೈರ್ಯ ತಂದ್ಕೊಂಡು ಇನ್ನೊಂದ್ ಸಲ ಈ ಕಡೆ ಬಂದೇ ಅಂದ್ರೆ ನೋಡು  ಚಪ್ಲಿ ತಗೊಂಡ್ ಹೊಡೀತೀನಿ ಅಂದಕೂಡಲೇ ದೆವ್ವದ ಶಬ್ಧಾನೆ ಇಲ್ಲಾನ್ತೀನಿ....'' ಕಣ್ಣು ಬಾಯಿ ತಿರುಗಿಸಿ ಹೇಳುವುದನ್ನು ನೋಡಿ ನನಗೆ ನಗು ತಡೆಯಲಾಗಲಿಲ್ಲ...

''ಅಲ್ವೇ ಚಪ್ಲಿಗೆ ಹೆದರಿ ಹೊಯ್ತೇನೆ  ಭೂತ.....? ಅದು ಯಾವಾಗಲೂ ನಿಮ್ಮನೆಗೆ ಯಾಕೆ ಬರತ್ತೆ.. ಎದ್ರೀಗೆ ನಮ್ಮನೆ ಇಷ್ಟ್ ದೊಡ್ಡದಾಗಿ ಇದೆ.  ಒಂದಿನಾನೂ ನಮ್ಮನೆಗೆ ಬಂದಿಲ್ವಲ್ಲೇ...?   ಮುಂದಿನ ಸಲ ಬಂದಾಗ ನಮ್ಮನೆ ಅಡ್ರೆಸ್ ಕೊಡು ಅದಕ್ಕೆ.. ''ಎನ್ನುತ್ತಾ ನಕ್ಕೆ. 

''ಅಕ್ಕೋ ನೀನ್ಯಾವತ್ತೂ ನಗ್ತೀಯ.. ನಂಬದೆ ಇಲ್ಲ.. ಸುಳ್ಳಲ್ಲ ಅಕ್ಕಾ. '' ಎನ್ನುತ್ತಾ ನನ್ನನ್ನು ನಂಬಿಸಲು ಸಾಧ್ಯವಾಗದಿದ್ದಿದ್ದಕ್ಕೆ ಮತ್ತೇನೂ  ತೋಚದೆ   ಗೋಡೆ ಪಕ್ಕದಲ್ಲಿ ಹರಿಯುತ್ತಿದ್ದ ಇರುವೆಯೊಂದನ್ನು ಹೊಸಕಿ ಕೊಂದಳು...!
''ಅಯ್ಯೋ ರುಕ್ಕಮ್ಮ....! ಇರುವೆ ಕೊಂದ್ಯಲ್ಲೇ...! ಅದು ದೆವ್ವವಾಗಿ ಬಂದು ಕಾಡಿದರೆ ಎನ್ಕಥೆ...?''
 '' ಹೋಗಕ್ಕೋ.. ಇರುವೆ ಎಲ್ಲಾ ದೆವ್ವ ಆಗಲ್ಲಕ್ಕೋ ''
'' ಅಲ್ವೇ...    ಇರುವೆ ಯಾಕೆ ದೆವ್ವ ಆಗ್ಬಾರ್ದೂ..?   ಎಲ್ಲರಿಗೂ ಒಂದೇ ಅಲ್ವೇನೆ ಜೀವ..? ಅದು ಬಸರಿಯಾಗಿತ್ತಾ...? ಬಾಳ೦ತಿಯಾಗಿತ್ತಾ...? ಮಕ್ಕಳಿಗೆ ಅಂತ ಆಹಾರ ಹುಡುಕೋಕೆ ಬಂದಿತ್ತಾ ಅನ್ಯಾಯವಾಗಿ ಇರುವೆ ಕೊಂದ್ಯಲ್ಲೇ.    ಅದು ದೆವ್ವ ಆಗಿ ಕಾಡತ್ತೆ ಇರು.  ''
  ಪಾಪ ರುಕ್ಕಮ್ಮ ಯೋಚಿಸತೊಡಗಿದಳು..


ನಾನೂ ಯೋಚನೆಗೆ ಬಿದ್ದೆ....!  ಮನುಷ್ಯರು ಮಾತ್ರ ದೆವ್ವವಾಗುವುದೇ ...? ಇರುವೆ ಯಾಕಾಗಬಾರದು..?
ಅದು ಬಸುರಿಯೋ  ಬಾಳಂತಿಯೋ  ಆಗಿದ್ದು ಸತ್ತರೆ ಪ್ರೇತವಾಗಲಾರದೆ..? ಗೂಡಿನಲ್ಲಿ ಮೊಟ್ಟೆ, ಮರಿಗಳಿದ್ದು ಅವಕ್ಕೆ ಆಹಾರ ತೆಗೆದುಕೊಂಡು ಹೋಗಬೇಕಾದರೆ ನಮ್ಮ ಕಾಲಿಗೆ ಸಿಕ್ಕಿ ಸತ್ತರೆ ಅದು ದೆವ್ವವಾಗಿ ನಮ್ಮನ್ನು ಕಾಡಬಹುದೇ..?
ನಾಯಿ ಆಕ್ಸಿಡೆಂಟ್ ನಲ್ಲಿ ಸತ್ತರೆ ದೆವ್ವವೇನಾದರೂ ಆಗಬಹುದೇ..?  ಹಸು ಕರು ಹಾಕುವಾಗೇನಾದರೂ ತೊಂದರೆಯಾಗಿ ಬಳಲಿ ಸತ್ತಿದ್ದರೆ..?
ಮಾಂಸಾಹಾರ ಸೇವಿಸುವವರು ಅದೆಷ್ಟು ಪ್ರಾಣಿಗಳನ್ನು ಕೊಂದಿರುವುದಿಲ್ಲ.. ತಿಂದಿರುವುದಿಲ್ಲ.. ಅವೆಲ್ಲ ದೆವ್ವವೋ ಪ್ರೇತವೋ ಆಗಿ ಅವರುಗಳನ್ನು ಕಾಡಬಹುದೇ..?


ಅದೇ ಮನುಷ್ಯರಲ್ಲಿ ಅಕಾಲದಲ್ಲಿ, ಬಸುರಿಯೋ, ಬಾಳಂತಿಯೋ ಸತ್ತರೆ ಅವರುಗಳ  ಆತ್ಮ ಅತೃಪ್ತಿಯಿಂದ ಪ್ರೇತವೋ, ಪಿಶಾಚಿಯೋ, ದೆವ್ವವೋ ಮತ್ತಿನ್ನೇನೋ ಆಗಿ ಮನುಷ್ಯರಿಗೆ ಕಾಟ ಕೊಡುತ್ತವೆ ಅನ್ನುತ್ತಾರಲ್ಲ...! ಯಾಕೆ ಕಾಟ ಕೊಡಬೇಕು..?
ಇಷ್ಟು ದಿನ ಆದರೂ ನನಗೆ ಒಂದೂ ದೆವ್ವ ಕಾಣಿಸಿಲ್ಲ..

ಪ್ರಾಣಿಗಳಲ್ಲಿ ದೆವ್ವ, ಭೂತ ಕಾನ್ಸೆಪ್ಟ್ ಇಲ್ಲ ಅನ್ನೋಣವೇ...?  ಆತ್ಮ ಅನ್ನುವುದರ ಕಾನ್ಸೆಪ್ಟ್ ಎಲ್ಲರಿಗೂ   ಒಂದೇ ತಾನೇ..? ಹೇಳುವುದಿಲ್ಲವೇ ... ಪಾಪ ಮಾಡಿದವರು ಮುಂದಿನ ಜನ್ಮದಲ್ಲಿ ನಾಯಿಯೋ,ನರಿಯೋ ಆಗಿ ಹುಟ್ಟುತ್ತಾರೆಂದು...! ಅದೆಷ್ಟೋ ಜನ್ಮದ ಪುಣ್ಯದಿಂದಾಗಿ ಮನುಷ್ಯ ಜನ್ಮ ಸಿಕ್ಕಿತು ಎಂದು..
ಚರಾಚರ ಜೀವಿಗಳಲ್ಲೆಲ್ಲಾ ಇರುವುದು ನಾನೆ ಎ೦ದು ಶ್ರೀಕೃಷ್ಣನೇ  ಹೇಳಿದ್ದಾನೆ.. ಎಂದು ಬಲ್ಲವರು ಹೇಳುತ್ತಾರೆ..ಅಂದರೆ ಭೂತದಲ್ಲಿ, ಪಿಶಾಚಿಯಲ್ಲಿ,ಪ್ರೇತದಲ್ಲಿ,   .... ಯಾರಿದ್ದಾರೆ..? ಭೂತ  ಜೀವಿಯಲ್ಲವೇ..? ಸತ್ತ ಮೇಲೆ ಆಗುವುದು ಭೂತವೆಂದಾದರೆ ಅದು ನಿರ್ಜೀವ...  ಅಂದರೆ ಅದರಲ್ಲೂ ಇದ್ದದ್ದು ಶ್ರೀ ಕೃಷ್ಣನೇ ಆದಂತಾಯಿತಲ್ಲವೆ..? ಎಲ್ಲದರಲ್ಲೂ ಅವನೇ ಇದ್ದಾನೆ ಅಂದರೆ ಈ ಭೂತ ಯಾರು..?


ಆತ್ಮ ಕಾನ್ಸೆಪ್ಟ್ ಒಂದೇ ಅಂದರೆ ಭೂತ ಅನ್ನುವುದು ನಿಜ ಅನ್ನುವುದಾದರೆ, ಎಲ್ಲ ತರದ ಪ್ರಾಣಿಗಳೂ ಅಕಾಲದಲ್ಲಿ ಸತ್ತರೆ, ಅತೃಪ್ತಿಯಿಂದ ಸತ್ತರೆ ಪ್ರೇತವೇ ಆಗುತ್ತವೆಂದಾಯ್ತು ..ಇಲ್ಲ ಕೆಳಸ್ತರದ ಪ್ರಾಣಿಗಳು ಪ್ರೇತ  ಆಗೋಲ್ಲ ಅಂತಂದ್ರೆ  ಮನುಷ್ಯರಲ್ಲೂ ಪ್ರೇತ, ಪಿಶಾಚಿ ಎಲ್ಲಾ ಇಲ್ಲ ಅಂತಲೂ ಆಗಬಹುದು. 

ಪ್ರಾಣಿಗಳಲ್ಲಿ ಈ ತರದ್ದು ಇಲ್ಲ ಅಂದರೆ ಮನುಷ್ಯರಲ್ಲಿ ಮಾತ್ರ ಯಾಕಿರ ಬೇಕು..?ಮನುಷ್ಯನಿಗೆ ಯೋಚಿಸಲು ಬರುತ್ತೆ ಅಂತಲೇ ..?
ನರವ್ಯೂಹ ಬೆಳೆದಿದೆ ಅಂತಲೇ..? ಪ್ರಕೃತಿ ಮನುಷ್ಯನಿಗೆ ಯೋಚನಾ ಶಕ್ತಿ ಎನ್ನುವ ವರದೊಂದಿಗೆ ಭ್ರಮೆ, ಭಯ ಇತ್ಯಾದಿ   ಅಡ್ಡ ಪರಿಣಾಮವನ್ನೂ ಕೊಟ್ಟಿತೇ..?  

''ಗಿಲ್ಟ್ '' ಅನ್ನುವುದು ಮನುಷ್ಯನೊಬ್ಬನಲ್ಲೇ  ಬೆಳೆಯುವುದು..ಮತ್ತು ಬೆಳೆಸುವುದು ಜೊತೆಗೆ ಬಿಡಿಸಿಕೊಳ್ಳಲೆತ್ನಿಸುವುದು.   ತಪ್ಪಿತಸ್ತ ಮನೋಭಾವನೆಯೇ ಈ ರೀತಿಯ ಸಮಸ್ಯೆಗಳಿಗೆ   ದಾರಿ ಮಾಡಿಕೊಡುವುದಲ್ಲವೇ..?  ಈ ಭಾವನೆಗಳು  ಹುಟ್ಟುಟ್ಟುತ್ತಲೇ ಹಿರಿಯರಿ೦ದ ಮಕ್ಕಳಿಗೆ ಕಾಪಿ ಪೇಸ್ಟ್ ಆಗಿಬಿಟ್ಟಿರುತ್ತವೆ. ಏನೋ ತಪ್ಪು ಮಾಡಿದ್ದೇವೆಂದುಕೊಳ್ಳುವುದೂ, ಅದಕ್ಕೊಂದು ಶಾಂತಿ ಮಾಡಿಸುವುದು..ಹರಕೆ ಹೇಳಿಕೊಳ್ಳುವುದೂ .. ತಪ್ಪುಗಾಣಿಕೆ ಕಟ್ಟಿ  ತಪ್ಪಿತಸ್ತ ಮನೋಭಾವದಿಂದ ಬಿಡಿಸಿಕೊಳ್ಳಲೆತ್ನಿಸುವುದು..ಹೀಗೆ ನಾನಾ ತರದಲ್ಲಿ.   
ದೇವರು, ದೆವ್ವ ಎರಡೂ ವಿಚಾರ  ನಮ್ಮ ಮನಸಿನಲ್ಲೇ ಇರುವುದಲ್ಲವೇ..? ಅವೆಲ್ಲ ಕೆಲವೊಮ್ಮೆ ಉಪಯೋಗಕ್ಕೆ ಬರುತ್ತದೆ ಅನ್ನುವುದು ಹೌದಾದರೂ  ಅದಕ್ಕಾಗಿ ಮಾಡದ ತಪ್ಪನ್ನು ಊಹಿಸಿಕೊಂಡು ಕೊರಗುವುದ್ಯಾಕೆ..?


ಇವಿಷ್ಟನ್ನೂ ರುಕ್ಕಮ್ಮನಿಗೆ ಹೇಳಿ ಸಮಾಧಾನಿಸುವಷ್ಟರಲ್ಲಿ ಸಾಕುಬೇಕಾಯಿತು..ಇನ್ನೂ ಒಂದಷ್ಟು ನೀವೂ ಹೇಳಿ ಪುಣ್ಯ ಕಟ್ಟಿಕೊಳ್ಳಿ...!!!  

48 comments:

  1. sheershikeye catchy idhe :)

    thumba chennagi vishleshisi barediddeera... interesting aagi ittu :)

    ReplyDelete
  2. ಆತ್ಮದ ವಿಚಾರ ಬಂದಾಗ ನಿಮ್ಮ ರೀತಿ ಪ್ರಶ್ನೆ ಮೂಡುವುದು ಸಹಜ. ಎಲ್ಲಾ ಪ್ರಾಣಿ ಪಕ್ಷಿಗಳ ಜೀವ ಮನುಷ್ಯರಂತಲ್ಲವೆ? ಮನುಷ್ಯ ಭೂತ ಪ್ರೇತವಾಗಬಹುದು, ಇರುವೆ ಯಾಕಾಗುವುದುಲ್ಲ?
    ಭೂತ ಪ್ರೇತದ ನಂಬಿಕೆಗಳು ಎಲ್ಲೋ ಹುಟ್ಟಿ ಇಲ್ಲಿವರೆಗೆ ಬೆಳೆದು ಬಂದ ಮೂಢತೆ. ನಂಬಲು ನಮ್ಮಂತವರಿದ್ದರೆ ಕತೆಗಳಿಗೆ ಜೀವ ಬರಲು ಸಮಯವೆಷ್ಟು ಹಿಡಿದೀತು?
    ತಲೆಗೆ ಕೆಲಸ ಕೊಟ್ಟ ಲೇಖನ!
    ಧನ್ಯವಾದಗಳು.

    ReplyDelete
  3. ಅರೆ ಹೌದಲ್ವಾ ಅನೀಸಿತು ನಿಮ್ಮ ಈ ಲೇಖನ ಓದಿ, ಹೌದು ನೀವು ಬರೆದಿರುವ ವಿಚಾರಗಳ ಬಗ್ಗೆ ಯಾರೂ ಯೋಚಿಸಿಲ್ಲ ಅನ್ನಿಸುತ್ತೆ. ನಿಮ್ಮ ಆಲೋಚನೆ ವಿಶೇಷವಾಗಿದೆ.ಇದೆಲ್ಲಾ ಭೂಮಿಮೇಲಿನ ಬುದ್ದಿವಂತ ಜೀವಿ ಅನ್ನಿಸಿಕೊಂಡ ಮಂಜೂರ ಮೌಡ್ಯ. ಬರಹ ಚೆನ್ನಾಗಿ ಮೂಡಿ ಬಂದಿದೆ. ನಿಮಗೆ ವಂದನೆಗಳು.

    ReplyDelete
  4. 100% ನಿಜ ಹೇಳಿದಿರಿ ಚುಕ್ಕಿ ಚಿತ್ತಾರರವರೆ.. ನೀವು ಕೊಟ್ಟ ವಿವರಣೆ ಮತ್ತು ಉದಾಹರಣೆ ಅತ್ಯುತ್ತಮವಾಗಿದೆ..

    ReplyDelete
  5. ಒಳ್ಳೇ ತರ್ಕ...ಚೆನ್ನಾಗಿದ್ದು.

    ReplyDelete
  6. ವಿಜಯಶ್ರೀ...ಹಹಹಹ್ ಒಳ್ಳೆ ಹುಳ ಬಿಟ್ರಿ...ಅತೃಪ್ತ ಆತ್ಮ ಭೂತ (ಸ್ಪಿರಿಟ್ಟು...ಹೆಂಡ ಸಾರಾಯಿ ಅಲ್ಲ) ಆಗುತ್ತೆ ಅನ್ನೋದು ನಂಬಿಕೆ...ಪ್ರಾಣಿಗಳ ನೆನಪು ಹೆಚ್ಚಿರೊಲ್ಲವಂತೆ..ಹಾಗಾಗಿ ಅತೃಪ್ತ ಆತ್ಮಗಳು ಕಡಿಮೇನೇ ಅನ್ಸುತ್ತೆ,,,ಹಹಹ ಯಾವುದಕ್ಕೂ ಸಂಶೋಧನೆ ಆಧಾರ ಇಲ್ದೇ...ನೋ ಕಾಮೆಂಟ್ಸೂ....

    ReplyDelete
  7. ವಿಜಿ ,

    ನನ್ನ ತಲೆಲೂ ಇಂಥದೇ ವಿಚಾರ ಹೊಳಿತಾಇತ್ತು. . ಯೋಚನೆ ಮಾಡು , ಪ್ರಾಣಿ , ಪಕ್ಷಿಗಳು ಯಾಕೆ ಭೂತಗಳಾಗೋದಿಲ್ಲ ಅನ್ನೋದಂತೂ ಒಂದು . ಅಕಸ್ಮಾತ್ , ಈ ಕಾಂಟ್ರಾಕ್ಟ್ ಕೂಡ ಮನುಷ್ಯಂಗೆ ಮಾತ್ರ ಅಂತಾ ಇಟ್ಕೊಳೋಣ , ಆಗ ಮತ್ತೂ ಇಂಟರೆಸ್ಟಿಂಗ್ ಅಂದ್ರೆ ಬರೀ ದುರ್ಘಟನೆಯಲ್ಲಿ ಸತ್ತವರಲ್ಲಿ ಅರ್ಧದಷ್ಟಾದರೂ ಭೂತ- ದೆವ್ವ ಆದ್ರೆ, ಅವುಗಳ ಸಂಖ್ಯೆ ಎಷ್ಟಿರಬೇಕು ? ಕೇವಲ ಒಂದು ಭೂಕಂಪನೋ , ತ್ಸುನಾಮಿ ನೋ ಆದ್ರೆ ಲಕ್ಷಗಟ್ಟಲೆ ಜನ ಸಾಯ್ತಾರೆ . ಆಗ ಭೂತಲೋಕದಲ್ಲಿ ಪಾಪ್ಯುಲೇಶನ್ ಎಷ್ಟು ಹೆಚ್ಚಾಗಬೇಡ ? ಮೊದಲೇ ಅವುಗಳಿಗೆ ಸಾವಿಲ್ಲ ಅಂತಾರೆ ... ಅಂದಮೇಲೆ ... ಓಡಾದಲಾದ್ರೂ ಅವರಲ್ಲಿ ಜಾಗ ಇರಬಹುದಾ? ...... ಎಷ್ಟೆಲ್ಲಾ ಪ್ರಶ್ನೆಗಳು !!! ಯಾವುದಾದರೂ ಭೂತವೇ ಉತ್ತರ ಕೊಡಬೇಕು

    ReplyDelete
  8. haha chennagide, nirupaNe istavaytu... ellarigu artavaaguva haage tiLisiddeeri

    ReplyDelete
  9. ಮೇಡಮ್,

    ದೆವ್ವದ ವಿಚಾರವನ್ನು ಚೆನ್ನಾಗಿ ಬರೆದಿದ್ದೀರಿ. ನನಗೂ ಇದೆಲ್ಲಾ ನಂಬಿಕೆಯಿಲ್ಲ. ಆದ್ರೂ ಕೆಲವೊಮ್ಮೆ ನಮ್ಮ ಹಳ್ಳಿಯ ಕತ್ತಲಲ್ಲಿ ಬರುವಾಗ ದಿಗಿಲಾಗುವುದು ನಿಜ. ಪ್ರಾಣಿ ಪಕ್ಷಿಗಳ ಆತ್ಮ ಬದುಕು ಅವು ದೆವ್ವಗಳಾಗುವ ವಿಚಾರಗಳನ್ನು ಚೆನ್ನಾಗಿ ಬರೆದಿದ್ದೀರಿ..

    ReplyDelete
  10. ಹೊಸ ವಿಚಾರಗಳನ್ನು ಒಳಗೊಂಡ ವೈಚಾರಿಕ ಲೇಖನ.ಚೆನ್ನಾಗಿದೆ

    ReplyDelete
  11. Vijaya, Good creative thinking. hosa hosa vicharagalannu baritha iri. nimma follower.

    ReplyDelete
  12. ಹ..ಹ..ಹ ಹೆಚ್ಚು ಕಡಿಮೆ ಇದೇ ಸೀನ್ ನಮ್ಮನೇಲೂ ನಡೆದಿತ್ತು. ರುಕ್ಕಮ್ಮನ ದೆವ್ವದ ಕಥೆಗೆ ನಾನು ನಕ್ಕಿದ್ದೂ , ಅವಳು " ಹೋಗಕ್ಕ ನೀನೊಬ್ಳು ದೇವ್ರು ದೆವ್ವ ಅಂದ್ರೆ ನಗ್ತೀಯ ...ನಿನ್ನ ಹತ್ರ ನಾನೇನೂ ಹೇಳೊದೇ ಇಲ್ಲ " ಅಂತ ನೂರಾ ಒಂದನೇ ಸಾರಿ ಶಪಥ ಮಾಡಿದ್ದು ಎಲ್ಲ ಆಯ್ತು.

    ReplyDelete
  13. ದೇವರು, ದೆವ್ವ ಎರಡೂ ವಿಚಾರ ನಮ್ಮ ಮನಸಿನಲ್ಲೇ ಇರುವುದಲ್ಲವೇ..? ಅವೆಲ್ಲ ಕೆಲವೊಮ್ಮೆ ಉಪಯೋಗಕ್ಕೆ ಬರುತ್ತದೆ ಅನ್ನುವುದು ಹೌದಾದರೂ ಅದಕ್ಕಾಗಿ ಮಾಡದ ತಪ್ಪನ್ನು ಊಹಿಸಿಕೊಂಡು ಕೊರಗುವುದ್ಯಾಕೆ..?
    agreed..!

    ananth

    ReplyDelete
  14. ನನ್ನ ಹಾಗೂ ನಿಮ್ಮ ಆಲೋಚನೆಗಳಲ್ಲಿ ತುಂಬಾ ಸಾಮ್ಯವಿದೆ. ಇನ್ನೊಂದು ವಿಷಯ-ಈ ಭೂತ,ದೆವ್ವ,ಮಾಟ-ಮಂತ್ರ,(ಫಲ)ಜ್ಯೋತಿಷ್ಯ-ಈ ವಿಷಯಗಳನ್ನು ನಮ್ಮ ಮಲೆನಾಡಿನ ಜನಕ್ಕಿಂತ ಕರಾವಳಿ ಹಾಗೂ ದೊಡ್ಡ ನಗರಗಳಲ್ಲೇ ಹೆಚ್ಚು ನಂಬುತ್ತಾರೆ.

    ReplyDelete
  15. ಹ ಹ,,
    ಖರೆ ನೋಡ್ರಿ..!
    ನಮ್ಮ ಅಜ್ಜಿ ನಮಗ ದೆವ್ವ್ಗೋಳ ಕತಿ ಹೇಳಿ ಹೇಳಿ ಬ್ಯಾಸರ ಮಾಡಿದ್ಲು..
    ಆದ್ರ ಒಮ್ಮಿನು ದೆವ್ವ ತೋರ್ಸಿಲ್ಲ ನೋಡ್ರಿ..
    ಆದ್ರ ಒಂದು ಮಾತಂತೂ ಖರೆ,ಲೇಖನ ಓದಿ ಒಮ್ಮೆ ಸುತ್ತ ನೋಡಿದೆ..!
    ಯಾಕಂತ ದೆವ್ವದ ಆಣಿ ಗೊತ್ತಿಲ್ಲ.. :)

    ವಿಜಯಶ್ರೀ ಮೇಡಂ,
    ಲೇಖನ ತುಂಬಾ ಇಷ್ಟ ಆಯ್ತು..
    ನಿಮಗೂ ನಮ್ಮೂರ ಶೈಲಿ ಕನ್ನಡ ಇಷ್ಟ ಆಯ್ತು ಅನ್ಕೊತಿನಿ :)

    ಧನ್ಯವಾದಗಳು.

    ReplyDelete
  16. ವಿಜಯಾ ನಿಮ್ಮ ಲೇಖನ ಓದಿ ನನ್ನ ಬಾಲ್ಯದ ಘಟನೆಯೊಂದು ನೆನಪಾಯಿತು..

    ನಾವು ಸಣ್ಣವರಿದ್ದಾಗ ನನ್ನ ಗೆಳೆಯ "ಕುಷ್ಟನ ಮನೆಯಲ್ಲಿ ಕೆಂಪು ಹೋರಿಯೊಂದು ಇತ್ತು..
    ಒಂದುದಿನ ಅದು ನಮ್ಮನ್ನು ಬಹಳ ದೂರ ಅಟ್ಟಿಸಿಕೊಂಡು ಬಂದಿತ್ತು..
    ಹಾಗೆ ಕೆಲವು ದಿನಗಳಲ್ಲಿ ಆ ಹೋರಿ ಎತ್ತರದಿಂದ ಬಿದ್ದು (ಇಳಿಜಾರಿನಲ್ಲಿ) ಸತ್ತೂ ಹೋಯಿತು..

    ಅದು ಪುಂಡು ಹೋರಿಯಾಗಿ ಬಹಳ ಜನರಿಗೆ ಕಾಟ ಕೊಟ್ಟಿತ್ತು..

    ಅದು ದೆವ್ವವಾಗಿ ಬರುತ್ತದೆ ಎಂದು ನಮ್ಮನ್ನು ಮನೆಯವರು ಹೆದರಿಸಿದ್ದರು..
    ನಾವು ರಜೆಯಲ್ಲಿ ಯಾವಾಗಲೂ ಕಾಡುಗಳಲ್ಲಿ ಅಲೆಯುತ್ತಿದ್ದೆವು.. ಹಾಗೆ ತಿರುಗುವದು ಮನೆಯವರಿಗೆ ಬೇಡವಾಗಿತ್ತು.. ಅದಕ್ಕೆ ಹಾಗೆ ಹೇಳಿದ್ದರು..

    ನಮಗೆ ಬಹಳ ದಿನಗಳವರೆಗೆ "ಕೆಂಪು ಹೋರಿ"ಯ ದೆವ್ವದ ಕನಸು ಬೀಳುತ್ತಿರುತ್ತಿತ್ತು...

    ನಿಮ್ಮ ಲೇಖನ ಇಷ್ಟವಾಯಿತು... ಜೈ ಹೋ. !

    ReplyDelete
  17. iruvegaluu... jeevigalellaaruu... devvane aagtaa iddare bhumi jeeva jagattu agtaa irlilla bhutajagattu aagtaa ittu antha ...

    ReplyDelete
  18. ವಿಜಯಶ್ರೀ,
    ಆಪ್ತಶೈಲಿಯಲ್ಲಿ ಬರೆದ ವಿಚಾರಪೂರ್ಣ ಲೇಖನ. ಎಲ್ಲ ಪ್ರಾಣಿಗಳಲ್ಲಿಯೂ ಇರುವ ಆತ್ಮ ಒಂದೇ ಆದಾಗ, ಮನುಷ್ಯದೇಹದಲ್ಲಿರುವ ಆತ್ಮಕ್ಕೆ ಇರುವ ಹೆಚ್ಚುಗಾರಿಕೆ ಏನು?
    ವಿಚಾರಮಂಡನೆಯನ್ನು ಸರಳ ರೀತಿಯಲ್ಲಿ ಮಾಡಿಕೊಡಬಹುದಾದ ಬಗೆಯನ್ನು ತೋರಿಸಿದ್ದೀರಿ. ಅಭಿನಂದನೆಗಳು.

    ReplyDelete
  19. ವಿಜಯಶ್ರೀ,
    ಆಪ್ತಶೈಲಿಯಲ್ಲಿ ಬರೆದ ವಿಚಾರಪೂರ್ಣ ಲೇಖನ. ಎಲ್ಲ ಪ್ರಾಣಿಗಳಲ್ಲಿಯೂ ಇರುವ ಆತ್ಮ ಒಂದೇ ಆದಾಗ, ಮನುಷ್ಯದೇಹದಲ್ಲಿರುವ ಆತ್ಮಕ್ಕೆ ಇರುವ ಹೆಚ್ಚುಗಾರಿಕೆ ಏನು?
    ವಿಚಾರಮಂಡನೆಯನ್ನು ಸರಳ ರೀತಿಯಲ್ಲಿ ಮಾಡಿಕೊಡಬಹುದಾದ ಬಗೆಯನ್ನು ತೋರಿಸಿದ್ದೀರಿ. ಅಭಿನಂದನೆಗಳು.

    ReplyDelete
  20. ಸುಧೇಶ್..
    ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು..

    ReplyDelete
  21. ಪ್ರವೀಣ್..
    ದೇವರು,, ದೆವ್ವ ಇವೆಲ್ಲವುಗಳ ಮೇಲಿನ ನ೦ಬಿಕೆ ಮಿತಿಯಲ್ಲಿದ್ದರೆ ಆರೋಗ್ಯಕರ.. ಕೆಲವೊಮ್ಮೆ ತಪ್ಪು ಮಾಡದ೦ತಿರಲು ಕಾಣದ ಶಕ್ತಿಯ ಮೇಲಿನ ಭಯ ಭಕ್ತಿ ಬೇಕಾಗುತ್ತದೆ.. ಆದರೆ ಒಳಿತಿಗೂ ಕೂಡಾ ನಮ್ಮ ಶಕ್ತಿಯ ಮೇಲಿನ ನ೦ಬಿಕೆ ಕಳೆದುಕೊಳ್ಳಬಾರದು..

    ತಲೆಕೆಡಿಸಿಕೊ೦ಡಿದ್ದಕ್ಕೆ....:):)

    ReplyDelete
  22. ಬಾಲು ಸರ್..
    ವಿದ್ಯಾವ೦ತರೂ ಕೂಡಾ ಮೌಡ್ಯದ ಬೆನ್ನು ಹತ್ತಿ ಹೊಗುತ್ತಾರಲ್ಲ ಅದಕ್ಕೆ ಬೇಸರ.. ನ೦ಬಿಕೆ ಬೇರೆ.. ಆದರೆ ಎಲ್ಲದಕ್ಕೂ ದೇವರು ದೆವ್ವದ ಮೊರೆ ಹೋಗುವುದು ಸರಿಯಲ್ಲ ಅನ್ನುವುದು ನನ್ನ ಅನಿಸಿಕೆ.
    ನಿಮ್ಮ ಅಮೂಲ್ಯ ಪ್ರತಿಕ್ರಿಯೆಗೆ ಆಭಾರಿ..

    ReplyDelete
  23. ಪ್ರದೀಪ್
    ಕೊಟ್ಟ ಬೆ೦ಬಲಕ್ಕೆ ಸಾವಿರ ನಮಸ್ಕಾರ..:)

    ReplyDelete
  24. ಮನಮುಕ್ತಾ..
    ಥ್ಯಾ೦ಕ್ಸೆ....

    ReplyDelete
  25. ಚಿತ್ರಾ
    ಅಲ್ದನೇ....ಅಕಾಲದಲ್ಲಿ ಸತ್ತ ಮನುಶ್ಯರು ಎಲ್ಲರೂ ಭೂತ್ವೆ ಆಗದಾಗಿದ್ರೇ ಎಷ್ಟ್ ಕಷ್ಟ ಆಗ್ತಿತ್ತು...ಹ೦ಗೆ ಯೋಚ್ನೆ ಮಾಡ್ತಾ ಹೋಗು..ಜ್ವರ ಬ೦ದಾಗ ಸಾಯ ವೈರಸ್ಸು..ಬ್ಯಾಕ್ಟೀರಿಯಾ.. ಎಲ್ಲಾ ಭೂತ ಆದ್ರೆ ಎ೦ತಾ ಮಾಡದೇ..? ಔಷಧಿ ತಗ೦ಡು ಅದನ್ನ ಸಾಯ್ಸಿದ್ದ್ ಪಾಪ ಬೇರೆ ಬರ್ಗು...!
    ಥ್ಯಾ೦ಕ್ಸ್.. :):)

    ReplyDelete
  26. ಮನಸು
    ಪ್ರೀತಿಯಿ೦ದ ಪ್ರತಿಕ್ರಿಯಿಸಿದ್ದಕ್ಕೆ ಥ್ಯಾ೦ಕ್ಸ್..

    ReplyDelete
  27. ಶಿವು ಸರ್..
    ನಿಮ್ಮ೦ತೆ ನನಗೂ ಭಯ ಆಗುತ್ತೆ.. ದೆವ್ವಕ್ಕೆ ಅ೦ತಲ್ಲ.. ದೆವ್ವಕ್ಕಿ೦ತಲೂ ಭಯ೦ಕರವಾದ ಮನುಶ್ಯರ ಬಗೆಗೇ.. ಆ ಭಯ..

    ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

    ReplyDelete
  28. Joshini..
    ನನ್ನ ಬ್ಲಾಗಿಗೆ ಸ್ವಾಗತ.. ಥ್ಯಾ೦ಕ್ಸ್..

    ReplyDelete
  29. ಡಾಕ್ಟರ್..
    ತು೦ಬಾ ಥ್ಯಾ೦ಕ್ಸ್..

    ReplyDelete
  30. ಮೇರಿ.. ನಿಮ್ಮ ಆತ್ಮೀಯತೆಗೆ ಥ್ಯಾ೦ಕ್ಸ್

    ReplyDelete
  31. ಸುಮ
    ಅವ್ಳಿಗೂ ಒ೦ದ್ ಸಲಾನೂ ಕಾಣ್ಲ್ಯಡ..:)

    ReplyDelete
  32. ಅನಂತ ಸರ್..
    ಒಪ್ಪಿಕೊ೦ಡಿದ್ದಕ್ಕೆ ಥ್ಯಾ೦ಕ್ಸ್...:):):)

    ReplyDelete
  33. ಸುಬ್ರಮಣ್ಯ
    ಹೌದು.. ಥ್ಯಾ೦ಕ್ಸ್..

    ReplyDelete
  34. ಅನಿಲ್..
    ಹೌದೇನ್ರೀ.. ಬಾಜೂದಾಗ್ ದೆವ್ವ ಏನರಾ ಬ೦ತೇನ್ರೀ ಮತ್ತ..
    ನನಗ ನಿಮ್ಮೂರ್ ಭಾಷಾ.. ಜೋಳದ ಭಕ್ರೀ.. ಜೊತಿಗೆ ಶೇ೦ಗಾ ಚಟ್ನೀ.. ಕಾಳ್ ಪಲ್ಯ.. ಎಲ್ಲಾ ಸೇರ್ತದರೀ... :):)

    ನಿಮ್ಮ ಆತ್ಮೀಯತೆಗೆ ಶರಣು...:)

    ReplyDelete
  35. ಪ್ರಕಾಶಣ್ಣ..
    ಅಲ್ಲವೇ ಮತ್ತೆ..?
    ಮನುಶ್ಯನಿಗೆ ಕೆಟ್ಟದ್ದರ ಕಡೆ ಹೋಗದಿರಲು ಈ ರೀತಿಯ ಕಡಿವಾಣ ಹಾಕಿದ್ದಾರೆ ಹಳೆಕಾಲದವರು..
    ಮರ ಕಡಿಯ ಬಾರದು ಹೇಳಿ ಚೌಡಿ ಮರ.. ಭೂತನ ಕಟ್ಟೆ.. ಯಕ್ಷಿ ಮರ.. ನಾಗರಕಲ್ಲು ಹೀಗೆ ನಾನಾ ತರದ ಉಪಾಯ ಮಾಡಿದ್ದು ಅದು..
    ಅದನ್ನು ಅರ್ಥ ಮಾಡಿಕೊಳ್ಳಲು ಹೋಗದೆ ಮೌಡ್ಯಕ್ಕೆ ಬೀಳುವ ಜಾಣರು ನಾವು...!!

    ಚ೦ದದ ಪ್ರತಿಕ್ರಿಯೆಗೆ ವ೦ದನೆಗಳು.

    ReplyDelete
  36. ಡಾ. ಚಂದ್ರಿಕಾ ಹೆಗಡೆ..
    ನಿಮಗೆ ನನ್ನ ಬ್ಲಾಗಿಗೆ ಸ್ವಾಗತ..
    ನಿಮ್ಮ ಅಭಿಪ್ರಾಯ ನಿಜ.. ಭೂತ ಜಗತ್ತಿನಲ್ಲಿ ಮನುಶ್ಯರು ನಾವಾಗುತ್ತಿದ್ದೆವು..
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  37. ಕಾಕ..
    ನಿಮ್ಮ ಒ೦ದೆ ವಾಕ್ಯದ ಪ್ರತಿಕ್ರಿಯೆಯಲ್ಲಿ ನನ್ನ ಲೇಖನದ ಪೂರಾ ಸಾರಾ೦ಶವನ್ನುಹೇಳಿದ್ದೀರಿ.. ಧನ್ಯವಾದಗಳು.

    ReplyDelete
  38. ಚಿಂತನಶೀಲ ಲೇಖನ. ನನಗೂ ಈ ದೆವ್ವ, ಭೂತದ ಹೆದರಿಕೆ ಇಲ್ಲ... ಆದರೆ ಕೆಲವಂದು ಅಸಹಜ ಘಟನಾವಳಿಗಳ ಅರಿವಿದೆ... ಖುದ್ದಾ ನೋಡಿದ ಅನುಭವವಿದೆ. ಹೀಗೆ ಎಂದು ಹೇಳಲಾಗದು. ಹೀಗೂ ಆಗಿರಬಹುದೆಂದಷ್ಟೇ ಹೇಳಬಲ್ಲೆ. (ಹೆಚ್ಚಿನ ವಿಷಯ ಇಲ್ಲ ಅನಗತ್ಯ ಎಂದೆನಿಸಿತು ಅದಕ್ಕೇ ಇಷ್ಟೇ :))

    ReplyDelete
  39. ಶೀರ್ಷಿಕೆ ಲೇಖನ ಎರಡೂ ಚೆನ್ನಾಗಿದೆ

    ReplyDelete
  40. ಜಲನಯನ ಸರ್..
    ಮೀನುಗಳ ಸ೦ಶೋಧನೆಯಲ್ಲಿ ಮೀನು ಭೂತ ಏನಾದ್ರೂ ಕಾಣಿಸಿದೆಯಾ...? ಸ೦ಶೋಧನೆ ಮಾಡಿ ಸರ್.. ನಮಗೆ ಹೇಳಿ..ಹ್ಹ.ಹ್ಹ..ಹ್ಹಾ..
    ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು.

    ReplyDelete
  41. ತೇಜಸ್ವಿನಿ..
    ಏನೋಪ್ಪಾ.. ನಾನೂ ಏನೂ ಹೇಳಲಾರೆ..:)
    ಥ್ಯಾ೦ಕ್ ಯೂ..

    ReplyDelete
  42. ವಿಜಯಕುಮಾರ್ ಕನ್ನ೦ತ..
    ನನ್ನ ಚಿತ್ತಾರದರಮನೆಗೆ ಸ್ವಾಗತ..ಧನ್ಯವಾದಗಳು.

    ReplyDelete
  43. Ellu illada Aalochane nimge baradu hEli ...

    Sooper vishaya ....

    ReplyDelete
  44. ನಿಮ್ಮದು ವಿಶೇಷವಾದ ಆಲೋಚನೆ....

    ReplyDelete
  45. hosa reethiya lekhana...nimma baraha odida mele ee bagge nangu kutoohala mooditu....Lekhana ishta aitu...

    ReplyDelete
  46. vichaarapoorna vishehsa kathegaagi abhinandanegalu.

    ReplyDelete