Friday, February 25, 2011

ಯುದ್ಧ....!!!!!!

ಅತ್ತಿತ್ತ ಹಾರಾಡಿ 
ಸುತ್ತ ಹೋರಾಡಿ
ಮೂಲೆ ಮೂಲೆಯ ಹುಡುಕಿ 
 ಕೈ ಬಡಿದು  ತೊಡೆ ತಟ್ಟಿ
 ಬಿಡದೆ  ಬೆನ್ನಟ್ಟಿ 
ಯುದ್ಧ ಗೆದ್ದಿದ್ದೇನೆ ನೋಡು..

ಕೈ ಬೀಸಿ  ಕುಣಿದಾಡಿ
ಅತ್ತಿತ್ತ ನೆಗೆದಾಡಿ 
ಕೈ ಸೆಳೆಸಿ ಕಾಲ್ ಉಳುಕಿ 
ಮುಡಿ ಬಿಚ್ಚಿ ಹಾರಾಡಿ 
ಒತ್ತರಿಸಿ ಬರುವ ಕೋಪಕ್ಕೆ 
ಜಜ್ಜಿ  ಕೆಡಹಿದ್ದೇನೆ ನೋಡು..

ಚಲುವೆ ಕೆನ್ನೆಯ ಬಳಸಿ 
ಮೋಹಿಸಿ ಮುದ್ದಿಟ್ಟ
ಕ್ರೂರ ರಾಕ್ಷಸನ 
ಕೈಕಾಲು ಮುರಿದಿಕ್ಕಿ
ರಕ್ತದೋಕುಳಿ ಹರಿಸಿ  
ಚಿತ್ರ ಬರೆದಿದ್ದೇನೆ ನೋಡು..

ಮಾಡು ಸುಖ ನಿದ್ರೆಯನು 
ಬಿಡು ದಾರಿ ಎನಗೀಗ 
ಮತ್ತೆ ಹೋಗಲೇ ಬೇಕು 
ಶತ್ರು ಸಂಹಾರಕ್ಕೆ 
ಹುಡುಕುತ್ತ ಹುಡುಕುತ್ತ 
ಮತ್ತೊಂದು ಸೊಳ್ಳೆಯನು.....!!!!!!!!!


39 comments:

 1. ಮೇಡಮ್ ಸೊಳ್ಳೆ ಹೊಡೆಯುತ್ತಾ ...........................................................?


  ಆಹಾ.......... ಮಹಾ ಭೀಷಣ ಯುದ್ಧದ ವರ್ಣನೆ ಚನ್ನಾಗಿದೆ

  ReplyDelete
 2. ವಿಜಯಶ್ರೀ,
  ಚೆನ್ನಾಗಿದೆ ಕವನ! ಎಷ್ಟು ರಾಕ್ಷಸರನ್ನು ಬಲಿಹಾಕಿದಿರಿ?

  ReplyDelete
 3. ಇದೊಂದು ಒಳ್ಳೆಯ ಯುದ್ಧ..

  ಗುರಾಣಿ ಕತ್ತಿಗಳ ಝಳವಿಲ್ಲ,
  ರಥ ಕುದುರೆಗಳ ದನಿಯಿಲ್ಲ,
  ಸೈನಿಕರ ಕೂಗಾಟ,
  ಕೊಂಬು-ಕಹಳೆಗಳ
  ಅರಚಾಟ ,ಯಾವುದೂ ಇಲ್ಲ...

  ಇವತ್ತಿನ ಬಾಂಬು-ಗೀಂಬುಗಳ
  ಧೂಳಿಲ್ಲ..
  ಗುಂಡು-ಟ್ಯಾಂಕುಗಳ
  ಸುಳಿವಿಲ್ಲ..


  ಇದೆ ಮನೆಯ ಒಳಗಿನ ಯುದ್ಧ..
  ಸಂಜೆ ಆದೊಡೆ ,
  ಸೊಳ್ಳೆ ಹೊಡೆಯಲು ಆಗು ಸಿದ್ಧ!!!!!!!!

  ReplyDelete
 4. ಮಹಾಬಲಗಿರಿಯವರೆ..
  ತಪ್ಪಿಸಿಕೊ೦ಡು ಹಾರುವ ಸೊಳ್ಳೆಯ ಹಿ೦ದೆ ನಾನೂ ಹಾರಾಡುತ್ತಾ ಭೀಷಣವಾಗಿ ಯುದ್ಧವನ್ನೇನೊ ಮಾಡಿದ್ದೇನೆ..!
  ಅದರ ಬಾ೦ಧವರ ಕೋಪಕ್ಕೆ ಸಿಲುಕಿ ಮತ್ತೆ ಮೈ ಕೈ ಪರಚಿಕೊಳ್ಳುತ್ತಿದ್ದೇನೆ.
  ಥ್ಯಾ೦ಕ್ಸ್..

  ReplyDelete
 5. ಕಾಕ..
  ಬಲಿ ಹಾಕಿದ೦ತೆಲ್ಲ ಮತ್ತೆ ಮತ್ತೆ ಹುಟ್ಟಿಕೊಳ್ಳುವ ರಕ್ತಬೀಜಾಸುರರಲ್ಲವೇ ಅವು..

  ವ೦ದನೆಗಳು.

  ReplyDelete
 6. ಚಿನ್ಮಯ
  ನನ್ನ”ಒಳ್ಳೆಯ ಯುದ್ಧ”ವನ್ನು ಸು೦ದರವಾದ ಕವನದ ಮೂಲಕ ಹೊಗಳಿದ್ದೀರಿ.. ನನ್ನ ಕವಿತೆಗಿ೦ತಾ ನಿಮ್ಮ ಪ್ರತಿಕವಿತೆಯೇ ಸು೦ದರವಾಗಿದೆ..!
  ಧನ್ಯವಾದಗಳು.

  ReplyDelete
 7. ಬಹಳ ಕಷ್ಟದಿಂದ ರಕ್ತಬೀಜಾಸುರರನ್ನು ಬಲಿ ಹಾಕಿದ್ದೀರಿ......ಹೀಗೆ ನಿಮ್ಮ ಯುದ್ದ ಮುಂದುವರೆಯಲಿ .

  ReplyDelete
 8. ಅಕಟಕಟ.. ಅಂತ ಮತ್ತೆ ಹೋರಾಡಿ..
  ಜಯ ನಿಮ್ಮದಾಗಲಿ..
  ಸೊಳ್ಳೆಗಳ ಸರ್ವನಾಶವಾಗಲಿ..
  ನಂದು ಒಂದು ಆಲ್ ದ ಬೆಷ್ಟು ..

  ಹ ಹ.. ಮಸ್ತ್ :)

  ReplyDelete
 9. ಹಹ..ಸೊಳ್ಳೆ ಪುರಾಣ ಸೊಗಸಾಗಿದೆ...! ಒ೦ದು ಚುಟುಕ ಜ್ಞಾಪಕ ಆಯ್ತು...!

  ಅಪಘಾತ..!
  ನಡು
  ಇರುಳಿನಲಿ
  ಕಡಿದು
  ಕಾಡಿದ
  ಭ್ರರಮವ
  ಬಿಡದೆ
  ಬೆನ್ನಟ್ಟಿ
  ಬಡಿಯೆ..
  ಊದಿತ್ತು..
  ನಲ್ಲ ನ
  ಗಲ್ಲ..!

  ReplyDelete
 10. ಇದನ್ನು ನೀವು ಸೊಳ್ಳೆ ಹೊಡೀತಾನೆ ಬರೆದಿರಬೇಕು. online ಅನುಭವಜನ್ಯ ಕವನ..ಚೆನ್ನಾಗಿದೆ. !.

  ReplyDelete
 11. ಸೊಳ್ಳೆ ಮೇಲೆ ಯುದ್ದ! ಲವ್ಲಿ ಲೈವ್ಲಿಯಾಗಿದೆ.

  ReplyDelete
 12. ವಿಜಯ ಮೇಡಮ್,

  ನಿಜಕ್ಕೂ ಇದು ಸಕತ್ ಯುದ್ದ. ಆಸ್ತ್ರಗಳಿಲ್ಲದೇ ರಾಕ್ಷಸರನ್ನು ಬಲಿ ಹಾಕಿದ ರೀತಿ ಚೆನ್ನಾಗಿದೆ...all the best..

  ReplyDelete
 13. ನಿಮ್ಮ ಕವನ ನಮ್ಮ ಮಂಗಳೂರಿಗೆ ಅನ್ವಯಿಸುತ್ತದೆ.
  ನಮ್ಮ ಊರಿನಲ್ಲಿ ನಿಮ್ಮ ರಾಕ್ಷಸರ ದಾಳಿ ಅಧಿಕನೆ
  ಚೆನ್ನಾಗಿದೆ ನಿಮ್ಮ ವಣ೯ನೆ

  ReplyDelete
 14. Superrrr!! ಮೊದಲು ಏನೋ ಅಂದುಕೊಂಡೆ.. "ಚೆಲುವೆಯ ಕೆನ್ನೆಯ ಬಳಿಸಿ ಮೋಹಿಸಿ ಮುತ್ತಿಟ್ಟ..." ಎಂಬ ಸಾಲುಗಳು ಕುತೂಹಲ ಮೂಡಿಸಿದವು.. ಏನಿರಬಹುದು? ಏನಿರಬಹುದು? ಎಂದು ಕೊನೆ ಸಾಲಿನವರೆಗೂ ಗುಟ್ಟಾಗಿದ್ದ ವಿಷಯ ಸೊಳ್ಳೆ ಎಂದು ತಿಳಿದು ನಗು ಬಂದಿತು.. ಸೊಳ್ಳೆ ಕೊಂದ ಪರಾಕ್ರಮಿಗೆ ಶರಣಾಗುವೆ.. ಉತ್ತಮ ಕವನ!

  ReplyDelete
 15. hahaha...chennagide gelathi...kone varegu heluttiruvu solle ya vishaya yembaa arivaagalilla....chennagide

  ReplyDelete
 16. ಹೆಗ್ಡೆ ಜಿ..
  ನನ್ನ ಯುದ್ಧಕ್ಕೆ ನಿಮ್ಮಿ೦ದ ಪ್ರೋತ್ಸಾಹಕರ ನುಡಿಗಳನ್ನು ಕೇಳಿ ಇನ್ನಷ್ಟು ಹುರುಪಿನಿ೦ದ ಹೋರಾಡುತ್ತಿದ್ದೇನೆ..!
  ಥ್ಯಾ೦ಕ್ಸ್..:)

  ReplyDelete
 17. ನಿಲ್ಲದ ಅ ರವರೆ..
  ಸರ್ವನಾಶವಾಗಲಿ ಎ೦ಬ ನಿಮ್ಮ ಹಾರೈಕೆಯ ಮೇರೆಗೆ ಮತ್ತಷ್ಟ್ ಜೋರಿ೦ದ್ ಯುದ್ಧ ಮಾಡ್ಲಿಕ್ ಹತ್ತೀನ್ರೀ... :)
  ಥ್ಯಾ೦ಕ್ಸ್..:)

  ReplyDelete
 18. ಅನಂತ ಸರ್..
  ಸೊಳ್ಳೆ ಪುರಾಣದಿ೦ದ ಚುಟುಕು ನೆನಪಿಸಿದ್ದೀರಿ..ಚನ್ನಾಗಿದೆ..
  ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು.

  ReplyDelete
 19. ಮನಮುಕ್ತಾ
  ಥ್ಯಾ೦ಕ್ಸ್..:)

  ReplyDelete
 20. ಸುಬ್ರಹ್ಮಣ್ಯ..ಅವರೆ..
  ಬಹುಶ: ಈ ಯುದ್ಧವನ್ನು ನೀವೂ ಮಾಡುತ್ತಿರಲೇ ಬೇಕು ಈಗ ಅಲ್ಲವೇ..?
  ವ೦ದನೆಗಳು.

  ReplyDelete
 21. ಗುಬ್ಬಚ್ಚಿ ಸತೀಶ್
  ತು೦ಬಾ ಥ್ಯಾ೦ಕ್ಸ್..:)

  ReplyDelete
 22. ಶಿವು ಸರ್
  ಹೆಣದ ಫೋಟೋ ಒ೦ದ್ ತೆಗೆಯಲು ಆಗಲಿಲ್ಲ ನೋಡಿ..
  ಥ್ಯಾ೦ಕ್ಸ್..

  ReplyDelete
 23. ಆಶಾ..
  ನೀವೂ ಯುದ್ಧಕ್ಕೆ ಸನ್ನದ್ಧರಾಗಿ.. ಮತ್ತೆ..:)
  ಥ್ಯಾ೦ಕ್ ಯೂ..

  ReplyDelete
 24. ಪ್ರದೀಪ್ ಅವರೆ
  ಕ್ರೈಮ್ ಸ್ಟೋರಿಯಲ್ಲಿ ಯಾವಾಗಲೂ ಸಸ್ಪೆನ್ಸ್ ಕಾಪಾಡಿಕೊಳ್ಳಬೇಕು....ಅಲ್ಲವೇ ಮತ್ತೆ...:)
  ಥ್ಯಾ೦ಕ್ಸ್..

  ReplyDelete
 25. ಮೌನರಾಗ..ದವರೆ..
  ನನ್ನ ಚಿತ್ತಾರದರಮನೆಗೆ ಸ್ವಾಗತ..
  ಸೊಳ್ಳೇ ಯುದ್ಧಕ್ಕೆ ನೀವೂ ಜೊತೆಗೂಡಿದಿರಿ..
  ಥ್ಯಾ೦ಕ್ಸ್..

  ReplyDelete
 26. nimma solle yuddha chennagide. nakku nakku susthadhe.

  ReplyDelete
 27. Eno serious kavana endukonde..haha chennagide!

  ReplyDelete
 28. ಸಖತ್ ಆಗಿದೆ ಕವನ... ಮೊದಲು ಭೀಮನ ಕುರಿತಾಗೇನೋ ಅಂದ್ಕೊಂಡೆ.. ಆಮೇಲೆ ಗೊತ್ತಾಯ್ತು.. ಹುಲಿಯೆಂದುಕೊಂಡಿದ್ದು ಕೊನೆಗೆ ಇಲಿಯೂ ಅಲ್ಲ ಎಂದು :):)

  ReplyDelete
 29. Madam,

  yaavudo serious vishyada bagge kavana andkondidde, koneyalli idu 'solle' jotegina yuddha endu tilidu nagu banthu...Kavana Chennagide..

  ReplyDelete
 30. Yaavdo yuddada bagge serious matter antha tilkondidre,sollegala samharada bagge...chennagide

  ReplyDelete
 31. Ha ha ha.. naneno bheema dushyasasana yudda andkandi... antu solleyannu virouchitavaagi saysidde !!

  Pravi

  ReplyDelete
 32. ಮೇರಿ,
  ಕವಿತಾ,
  ತೇಜಸ್ವಿನಿ,
  ಅಶೋಕ್ ಕೊಡ್ಲಾಡೀ,
  ಸೀತಾರಾ೦ ಸರ್;
  ಗಿರೀಶ್,
  ಸುಧೇಶ್,
  ಮತ್ತು ಪ್ರವೀಣ್..
  ನಿಮ್ಮ ಆತ್ಮೀಯ ಪ್ರತಿಕ್ರಿಯೆಗಳಿಗೆ ವ೦ದನೆಗಳು.

  ReplyDelete
 33. ಹಹಹ ಸೊಳ್ಲೆಯನು ರಕ್ಕಸನ ಹೋಲಿಸಿ ಬರೆದ ಯುದ್ಧಕಾಂಡ ..ಸೂಪರ್ ಕವನ...ಶುಭವಾಗಲಿ ಮತ್ತೊಂದು ಕದನಕೆ...

  ReplyDelete