Sunday, June 12, 2011

ನ್ಯಾಲೆ!

ಅಲ್ಲೂ ಈಗ ಮಳೆಗಾಲವಂತೆ..
ಮೊಡವಂತೆ
ಮಳೆಯಂತೆ
ಬಟ್ಟೆ ಒಣಗೋಲ್ಲವಂತೆ
ಪಟ್ಟೆ ಪೀತಾಂಬರ  
ಸೀರೆ ಪತ್ತಲ 
ಮುಗ್ಗುಲು ಹಿಡಿಯುತ್ತಂತೆ
ಚುಕ್ಕಿಗಳೂರಲ್ಲಿ ಮನೆತುಂಬ ಮಕ್ಕಳಂತೆ 
ಚಂದ್ರನರಸಿಯರು ಉಪಾಯ ಮಾಡಿದರಂತೆ
ಮಳೆ ಸ್ವಲ್ಪ ಬಿಟ್ಟಾಗ 
ಗಾಳಿಯಾಡಲಿಕೆಂದು
 ಬಟ್ಟೆ ಒಣಸಲಿಕೆಂದು ಕಟ್ಟಿದರಂತೆ

ಮುಗಿಲ ಮ್ಯಾಲೆ   ಹೊಗೆಯ ನ್ಯಾಲೆ!







26 comments:

  1. ಕಲ್ಪನೆ ಇಷ್ಟವಾಯಿತು

    ReplyDelete
  2. ವಾವ್... ತುಂಬಾ ಚೆನ್ನಾಗಿದೆ... ನ್ಯಾಲೆ ಹರ್ಕೊಂಡ್ ಬಿದ್ರೆ, ನಮ್ ತಲೆ ಮೇಲೊಂದು ಬೀಳದಿದ್ರೆ ಸಾಕು.

    ReplyDelete
  3. nice one both your imagination and the poem itself are good

    ReplyDelete
  4. ತೇಜಸ್ವಿನಿ,
    ಧನ್ಯವಾದಗಳು..

    ReplyDelete
  5. ಸಿದ್ಧಾರ್ಥ
    ನ್ಯಾಲೆ ಹರ್ಕೊಂಡ್ ಬಿದ್ರೆ,ಹರಡಿ ಹೋಗುತ್ತೆ.. ಹೊಗೆಯ ಹಗ್ಗ ..:))
    ಥ್ಯಾ೦ಕ್ ಯು..

    ReplyDelete
  6. ಸೀತಾರಾ೦ ಸರ್..
    ವ೦ದನೆಗಳು.

    ReplyDelete
  7. ದೇಸಾಯಿ ಸರ್, ಸವಿಗನಸು,ಕಾಕ,ಮನಸು,ಮನಮುಕ್ತಾ
    ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  8. ಸೂಪರ್ ಇದ್ದು ಕಲ್ಪನೆ ವಿಜಿ ,
    ಈಗ ನಮ್ಮನೇಲಿ ನ್ಯಾಲೆ ಕಟ್ಟದೆಲ್ಲಿ ಅಂತ ನೋಡಕಾತು . ನಮ್ಮಲ್ಲೂ ಮಳೆ , ಬಟ್ಟೆ ಒಣಗ್ತಾ ಇಲ್ಲೆ !!!! ಮುಗಿಲಲ್ಲಿ ಕಟ್ಟಿದ ನ್ಯಾಲೆ ನಂಗೆ ಸಿಗ್ತಾ ಇಲ್ಲೆ !!!

    ReplyDelete
  9. ಚಿತ್ರಾ
    ನ೦ಗೂ ಸಿಗ್ತಾ ಇರ್ಲೆ, ಪುಣ್ಯಕ್ಕೆ ಹತ್ರಕ್ಕೆ ಕ್ಯಾಮರಾ ಇತ್ತು.. ಹ೦ಗಾಗಿ ಅದ್ರೊಳಗೆ ಹಿಡ್ದಿಟ್ಟಿ..:))

    ReplyDelete
  10. ಚಿತ್ರ, ಕಲ್ಪನೆ ಎರಡೂ ಸೊಗಸಾಗಿದೆ..:)

    ReplyDelete
  11. Madam really superb imagination..

    I think this pic was taken on 12th June evening in Bangalore skies... I also saw this beautiful scene in sky & ran to terrace with my cam..
    see this pic link below.. seems to be taken from almost same place!! I took it from Nandini Layout what about you?

    https://picasaweb.google.com/lh/photo/o6ZnrOuECxs1D_FJr-43KabK7iT-eqGeYxs1hUtUB4M?feat=directlink

    ReplyDelete
  12. ತುಂಬಾ ಚೆನ್ನಾಗಿದೆ.

    ReplyDelete
  13. Albert Einstein ಹೇಳ್ತಾರೆ -
    "Logic will take you from A to Z, but imagination will take you everywhere"

    ಸುಂದರ ಕಲ್ಪನೆ..ಸ್ವಾರಸ್ಯಕರ ಸಾಲುಗಳು..
    ಹೀಗೆ ಬರೆಯುತ್ತಿರಿ..

    ReplyDelete
  14. Nyaale Chennagide ! ishtavaayitu :)

    ReplyDelete