Thursday, December 10, 2009

ಇದು ಶಂಕರಭಟ್ಟನ ಕ್ರಿಕೆಟ್ಟು...!

ನಮ್ಮನೆಯಲ್ಲಿ ಆಗಾಗ ಕೇರಂ ಆಡುತ್ತಿರುತ್ತೇವೆ . ಅ೦ದರೆ ವರ್ಷಕ್ಕೆರಡು ಮೂರು ಸಲ..!

ಹಾಗೆ ಹೇಳುವುದಾದರೆ ನಾವೆಲ್ಲಾ ಕೇರಂ ಆಟದಲ್ಲಿ ಶೂರರು.. .....ಆಡಲು ಶುರುಮಾಡಿದೆವೆಂದರೆ ಘಂಟೆಗಟ್ಟಲೆ ಆಡುತ್ತೇವೆ ...

ಒಂದೇ ಬೋರ್ಡನ್ನ..!!

ನಮ್ಮದೂ ಒಂದು ಸ್ಪೆಷಾಲಿಟಿ ಇದೆ ......?

ಪಾನುಗಳನ್ನು ಪೌಚಲ್ಲಿ ಬೀಳಿಸುವುದು .....ಎಲ್ಲರೂ ಆಡುತ್ತಾರೆ .ಅದೇನು ಮಹಾ.. ? ಹೇಗೆ ಹೊಡೆದರೂ ಪಾನು ಬೀಳದಂತೆ ಆಡುವುದು ವಿಶೇಷ ...!!! ಗೊತ್ತಾಯಿತೆ...? ನಾವು ಹಾಗೆ ಆಡುತ್ತೇವೆ. ಒಂದು ತರಾ ಕ್ಷೇಮ ಸಮಾಚಾರದ ಪತ್ರವಿದ್ದ ಹಾಗೆ..

ಪ್ರೀತಿಯ ............ಗೆ

ಇಲ್ಲಿ ನಾವೆಲ್ಲಾ ಕ್ಷೇಮ . ಅಲ್ಲಿ ನೀವೂ ಕೂಡಾ ಕ್ಷೇಮವೆಂದು ನಂಬಿದ್ದೇನೆ.ಇನ್ನೇನೂ ವಿಶೇಷಗಳಿಲ್ಲ . ಉಳಿದ ಸಮಾಚಾರಗಳು ಮುಂದಿನ ಪತ್ರದಲ್ಲಿ ಅಥವಾ ಸಿಕ್ಕಾಗ.

ಇಂತಿ ನಿನ್ನ ಪ್ರೀತಿಯ
.....................


ಮುಂದಿನ ಪತ್ರ ಸಹಾ ಹೀಗೆಯೇ .... ಸ್ವಾರಸ್ಯವಿಲ್ಲದ್ದು.

ಆದರೆ ನಾವು ಕಾಲೇಜಿನಲ್ಲಿದ್ದಾಗ ನೀರಸದಲ್ಲಿಯೇ ರಸ ಹುಡುಕುವ ಪ್ರಯತ್ನ ಮಾಡುತ್ತಿದ್ದೆವು. ತರಗತಿಗೆ ಹೋಗುವ ಅವಸರದಲ್ಲಿದ್ದಾಗ , ಬೇರೆ ಕ್ಲಾಸಿನ ಗೆಳತಿಯರು ಸಿಕ್ಕರೆ ಅವಸರದಲ್ಲೇ ಹೇಳುವುದು..

ಪ್ರೀತಿಯ ಗೆಳತಿ ರೇವತಿ ...

ನಾನು ಕ್ಷೇಮ . ನೀನು ಕ್ಷೇಮವೆಂದು ನಂಬಿದ್ದೇನೆ . ಸಮಾಚಾರ ಹೇಳಲು ಪುರಸೊತ್ತಿಲ್ಲ. ಉಳಿದ ಸಮಾಚಾರಗಳು ಇನ್ನೊಮ್ಮೆ ಸಿಕ್ಕಾಗ.

ಇಂತಿ ನಿನ್ನ ಪ್ರೀತಿಯ ಗೆಳತಿ

.............

ಎನ್ನುತ್ತಾ ಕ್ಲಾಸಿನೊಳಗೆ ಓಡುವುದು...ಕಿರುನಗುತ್ತಾ...



ಹೀಗಿರುವಾಗ ಅಂದು ಮಧ್ಯಾಹ್ನದ ಮೇಲೆ ನಾನು, ಐಶು ಮತ್ತು ನನ್ನವರು ಕೇರಂ ಆಡಲು ಕುಳಿತೆವು.ಐಶು ಪಾನನ್ನೆಲ್ಲಾ ಜೋಡಿಸಿಡುತ್ತಿದ್ದಳು.ಶಿಶಿರ ಮಲಗಿದ್ದವನು ಎದ್ದು ಬಂದ.


''ನನ್ನನ್ನು ಮಾತ್ರಾ ಆಟಕ್ಕೆ ಸೇರಿಸಿ ಕೊಳ್ಲೋಲ್ಲಾ... ''ಅವನದು ಗಲಾಟೆ.
''ಸರಿ , ಇಲ್ಲಿ ಕುಳಿತುಕೋ.''
''ಬೇಡಾ, ನಾನು ಐಶು ಕುಳಿತಲ್ಲಿಯೇ ಕುಳಿತುಕೊಳ್ಳುವುದು , ಐಶು ನೀ ಏಳು ... '' ಪಾಪ.. ಅವಳನ್ನು ಎಬ್ಬಿಸಿ ತಾನು ಅವಳ ಜಾಗದಲ್ಲಿ ಕುಳಿತ ..
''ನಾನೇ ಪಷ್ಟು .....ಆಡುವುದು ..''ಸ್ಟ್ರೈಕರ್ ತಗೊಂಡ . ಶಿಶಿರ ಬಂದನೆಂದರೆ ನಿಯಮಗಳೆಲ್ಲ ಗಾಳಿಗೆ .....ಐಶುಗು ಗೊತ್ತು ಅದು . ಅವಳು ನಗುತ್ತಾ .. ''ಆಡು ಪುಟ್ಟಾ....''
''ನೋಡೀಗ ಅಷ್ಟೂ ಪಾನೂ ನಾನೇ ಬೀಳಿಸ್ತೀನಿ, '' ಎಲ್ಲೆಲ್ಲೋ ಸ್ಟ್ರೈಕರ್ ಇಟ್ಟು ಅಂತೂ ಹೊಡೆದ.ಕೂಗಿದ ,''ಬಿತ್ತೂ,''
ಏನು ಬಿದ್ದಿದ್ದು.. ಡ್ಯೂ....!!!ಸ್ಟ್ರೈಕರ್ ಪೌಚಲ್ಲಿ ಬಿದ್ದಿತ್ತು.
ಅದೆಲ್ಲ ಅವನಿಗೆ ಗೊತ್ತಿಲ್ಲ. ಸ್ಟ್ರೈಕರ್ ಆದರೂ ಬೀಳಲಿ, ಏನಾದರೂ ಬೀಳಲಿ.ಬೋರ್ಡ್ ಮೇಲಿದ್ದ ನಾಲ್ಕು ಪಾನುಗಳನ್ನು'' ಇವಿಷ್ಟು ನಂದು ''ಎನ್ನುತ್ತಾ ಎತ್ತಿಟ್ಟುಕೊಂಡ.ನಮಗೆ ನಗು. ಇವರು ಹೇಳಿದರು , '' ಮಾರಾಯ, ನಿಂದು ಶಂಕರಭಟ್ಟನ ಕ್ರಿಕೆಟ್ಟು,''

''ಏನು..ಅದು ?''


''ನಾವೆಲ್ಲ ಹೈಸ್ಕೂಲಿನಲ್ಲಿದ್ದಾಗ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು. ನಮಗೂ ,ಪಕ್ಕದೂರಿಗೂ ನಡುವೆ.ಅಲ್ಲೊಬ್ಬ ಭಯಂಕರ ಆಟಗಾರ , ಬ್ಯಾಟ್ಸಮನ್ .. ಶಂಕರಭಟ್ಟ ಅಂತ. ನಮ್ಮದೆಲ್ಲ ಅಡಿಕೆ ಮರದ ಬ್ಯಾಟು . ಅವನದು ಕಂಪನಿ ಬ್ಯಾಟು ..ಕಾಲಿಗೆ ಶೂ ಮತ್ತೆ ಪ್ಯಾಡು..ನಮಗೆ ಅದೆಲ್ಲಾ ಇರಲಿಲ್ಲ. ನಮ್ಮದೇನಿದ್ದರೂ ಹವಾಯಿ ಚಪ್ಪಲು .ಅಂವ ಬ್ಯಾಟ್ ಬೀಸುತ್ತಾ ಬರುವ ರೀತಿಗೆ ಎಂತಹಾ ಎದುರಾಳಿ ತಂಡದವರೂ ಹೆದರಿ ನಡುಗಬೇಕು...! ಹಾಗೆ. ಬಂದು ನಿಂತವನು ಗಂಬೀರ ವದನನಾಗಿ ಮೈದಾನವನ್ನೆಲ್ಲ ವೀಕ್ಷಿಸಿ, ಕವಾಯಿತು ಮಾಡುತ್ತಿದ್ದ... ಬ್ಯಾಟು ಬೀಸಿ,ಕೂತು, ಎದ್ದು..... ಹಾಗೂ ಸೊಂಟ ತಿರುವಿ...! ಥೇಟ್ ಭಾರತ ತಂಡದ ಆಟಗಾರರಂತೆ.


ಎದುರಿಗೆ ಬೌಲರ್ ಓಡುತ್ತಾ ಬಂದು ಫಾಸ್ಟ್ ಬೌಲಿಂಗ್ ಮಾಡಿದ,
ಹೋ ....... ......... ......... ......... .......... .......... ...........
....ಬ್ಯಾಟ್ ಬೀಸಿದ ಹೊಡೆತಕ್ಕೆ,........ ಎಲ್ಲರೂ ದಂಗಾಗಿ ಮೈದಾನದ ಹೊರಗೆ ನೋಡಿದರು.
ಬಾಲು ಬಿದ್ದಿದ್ದೆಲ್ಲಿ ಗೊತ್ತೇ............?
ಎಲ್ಲೋ ಅಲ್ಲ .. ವಿಕೆಟ್ಟಿಗೆ ತಾಗಿ ಕಾಲು ಬುಡದಲ್ಲಿ... !!!!!!!!!
ಹಾಗಾಯ್ತು ಶಿಶಿರಾ...."
ಐಶು ಗೆ ನಗು ತಡೆಯಲಾಗಲಿಲ್ಲ.


ತುಂಬಾ ತಯಾರಿ ನಡೆಸಿ ನಂತರ ವಿಫಲರಾದರೆ ನನ್ನವರು ಯಾವಾಗಲೂ ಹೀಗೆ ಹೇಳುತ್ತಾರೆ ,
ಇದು ಶಂಕರಭಟ್ಟನ ಕ್ರಿಕೆಟ್ಟು.....


ಕೊನೆ ತುತ್ತು : ಇದು ಏನು ?






ಕಂಡು ಹಿಡಿದವರಿಗೆ ಆಕರ್ಷಕ ಬಹುಮಾನವಿದೆ.....!!!!!

16 comments:

  1. ಹ್ಹ ಹ್ಹ. ಚೆನ್ನಾಗಿದೆ ಶಂಕರಭಟ್ಟನ ಕ್ರಿಕೆಟ್ಟು!

    ಚಿತ್ರದಲ್ಲಿರುವುದು ಏನು ಅಂತ ಗೊತ್ತಾಗ್ತಿಲ್ವಲ್ಲ!:)

    ReplyDelete
  2. ನಾನು ಶಂಕರಭಟ್ಟ ಅಂತ ಓದಿದ ತಕ್ಷಣ ಏನೇನೋ ಕಲ್ಪಿಸಿಕೊಂಡಿದ್ದೆ. :)
    ನಾವು ಕೇರಂ ಆಡುವುದೂ ಕೂಡ ಶಿಶಿರನ ತರಹವೇ, ಅವನಷ್ಟು ನೇರವಾಗಿ ಅಲ್ಲದಿದ್ದರೂ, ಗೊತ್ತಾಗದಂತೆ ಒಂದೆರಡು ಪಾನ್ ಗಳನ್ನು ಜೇಬಿಗಿಳಿಸುವುದು ಮಜವಾಗಿರುತ್ತೆ !
    ಪತ್ರಗಳು ಚೆನ್ನಾಗಿವೆ.

    ಚಿತ್ರದಲ್ಲಿರುವುದು ಶಾಂಪೇನ್ ಬಾಟ್ಲಿ ಅಲ್ವೇನ್ರೀ..(cork ಬೇರೆ ಇದೆ)

    ReplyDelete
  3. ಚೆನ್ನಾಗಿದೆ ಮೇಡಂ ..:)ಹ್ಹ ಹ್ಹ ಹ್ಹ :) ಚಿತ್ರದಲ್ಲಿರುವುದು ಶಾಂಪೇನ್ ಬಾಟ್ಲಿ ಅನಿಸುತ್ತೆ :)

    ReplyDelete
  4. ಶಿಶಿರನ ಕಥೆಗಳು ತುಂಬಾ ಚನ್ನಾಗಿದವೇ. ನಾನು ಅವನ ಅಭಿಮಾನಿಯಾಗಿದ್ದೇನೆ. ನನಗೆ ಆಟೋಗ್ರಾಫ್ ಬೇಕು...
    ಶಂಕರಬಟ್ಟನ ಕ್ರಿಕೆಟ್ಟು ಮಜವಾಗಿದೆ.
    ಚಿತ್ರದಲ್ಲಿರುವುದು ಉಡುಗೊರೆ ಇರಬೇಕು. ಬಾಟಲ್ ಒಳಗಡೆ ಯಾವುದೋ ಮುತ್ತಿನ ಸರ ಇದ್ದಹಾಗೆ ಇದೆ... :)

    ReplyDelete
  5. ಶ೦ಕರಭಟ್ಟನ ಅಟಾಟೋಪ ಭಾರಿ ಚೆನ್ನಾಗಿದೆ. ಸೀರಿಯಸ್ಸಾಗಿ ಕೇರಮ್ ಆಡಿದರೆ ಮಜವೆಲ್ಲಿ?... ಶಿಶಿರನ ಆಟದ ಮು೦ದೆ.... ಮತ್ತೆ ಅದು ಪೆಪ್ಸಿ ಬಾಟಲಿಗೆ ಬಣ್ಣ ಹಾಕಿ ಒಳಗೆ ಬಣ್ಣದ ರಿಬ್ಬನ್ ಗಳನ್ನು ತು೦ಬಿ ಅಲ೦ಕರಿಸಿದ್ದಾಗಿರಬಹುದೇ?...

    ReplyDelete
  6. ಚುಕ್ಕಿ ಚಿತ್ತಾರ
    ಶಂಕರ ಭಟ್ಟನ ಕ್ರಿಕೆಟ್ಟಿನ ಕಥೆ ಮಜವಾಗಿದೆ
    ತುಂಬಾ ಸ್ವಾರಸ್ಯಕರವಾಗಿ ಬರೆದಿದ್ದೀರ
    ಇನ್ನು ಚಿತ್ರದಲ್ಲಿ ೧೯ ಡಿಸೆಂಬರ್ ಅಂತಿದೆ, ಅಂದು ಮಗನ ಹುಟ್ಟಿದ ಹಬ್ಬವೇ?

    ReplyDelete
  7. ಓ .. ಫೋಟೊದಲ್ಲಿರುವುದು ಏನು ಅಂತ ನಾನು ಹೇಳಿಬಿಡ್ಲಾ?? ನಂಗೆ ಬಹುಮಾನ ಕೊಡಕ್ಕು ಮತ್ತೇ !!

    ReplyDelete
  8. ಸುಮ ಇದೊ೦ದು ವಿಷಯ ಬಿಟ್ಟು ಹೋಗಿತ್ತು ನೋಡು.. ನಿನಗೆ ಹೇಳದಿದ್ರೆ ಬಹುಮಾನ...!!!! ಯಾರಿಗೂ ಹೇಳಡ ಆತಾ....

    ReplyDelete
  9. ಶಂಕರ ಭಟ್ಟರ ಕ್ರಿಕೆಟ್ಟು ಅಂದರೇ ಏನೇನೋ ಅಂದುಕೊಂಡುಬಿಟ್ಟಿದ್ದೆ. ನಿಮ್ಮ ಮನೆಯ ಕೇರಂ ಗಲಾಟೆ ಚೆನ್ನಾಗಿದೆ. ನಿಮ್ಮ ಶಿಶಿರನಿಗೆ ನನ್ನ ಓಟು. ನಾನು ಯಾವಾಗಲು ಚಿಕ್ಕ ಮಕ್ಕಳ ಪರ.

    ಮತ್ತೆ ಫೋಟೊದಲ್ಲಿರುವುದು ಏನು ಅಂತ ಗೊತ್ತಾಗುತ್ತಿಲ್ಲ. ಏಕೆಂದರೆ ನೀವು ಕೊಡುವ ಬಹುಮಾನವೂ ಶಂಕರನ ಕ್ರಿಕೆಟ್ ಆಗಿದ್ದರೇ..[ಮೋಸವಾದರೆ].

    ReplyDelete
  10. ನಮ್ಮ ICC ಕ್ರಿಕೆಟ್ಟಿಗಿಂತ ಈ ಶಂಕರಭಟ್ಟರ ಕ್ರಿಕೆಟ್ಟೇ ಚೆನ್ನಾಗಿದೆ. ಚಿತ್ರದಲ್ಲಿರುವ ಗುಟ್ಟು ಗೊತ್ತಾಗ್ತಾ ಇಲ್ಲ.

    ReplyDelete
  11. ಚುಕ್ಕಿ ಚಿತ್ತಾರ,
    ಸ್ಟೋರಿ ಚೆನ್ನಾಗಿದೆ.. ನಮ್ಮಲ್ಲಿ ಹಾಗೆ ಒಂದು ಕೇರಂ ಆಟಕ್ಕೆ ೮-೧೦ ಜನ.. :) ಸೂಪರ್ ಆಗಿ ಇರುತ್ತೆ... ಹದ್ದಿನ ಕಣ್ಣಿನ ಅರ್ಹತೆ ಆಟಕ್ಕೆ ಬೇಕೇ ಬೇಕು.. :)

    ಏನೆ ಆಯ್ಲಿ ಐಶು ನಗು ಎಲ್ಲ ಕಡೆ.. :)

    ಫೋಟೋ... ನಿಮಗೆ ಯಾರೋ ಒಂದು ಗಿಫ್ಟ್ ಕೊಟ್ಟಿದ್ದಾರೆ... :) Cadbury ಡೈರಿ ಮಿಲ್ಕ್ ನ wrapper use ಮಾಡಿಕೊಂಡು ಕೊಟ್ಟಿರೋ ಗಿಫ್ಟ್.. ನನಗೆ ಹಾಗೆ ತೋರ್ತ ಇದೆ...

    ಅಲ್ಲದಿದ್ದರೆ ಏನಾದ್ರು ಒಂದು ಕ್ಲೂ ಕೊಡಿ ಮಾರಾಯ್ರೆ.. :) ಇಲ್ಲ ಅಂದ್ರೆ ಸುಮಾ ಅವರನ್ನೇ ಕೇಳಬೇಕು.. ಹೇಗಿದ್ದರು ಅವರಿಗೆ ಬಹುಮಾನ ಕೊಟ್ಟೆ ಕೊಡ್ತಿರಿ ಅಲ್ವ...

    ನಿಮ್ಮವ,
    ರಾಘು.

    ReplyDelete
  12. ವಿಜಯಶ್ರೀ ಮೇಡಂ,
    ನಿಮ್ಮ ಶಿಶಿರ್ ನಮ್ಮ ಮನೆಯ ಹಿರೋ ಆಗ್ತಾ ಇದ್ದಾನೆ..... ಅವನ ತುಂಟಾಟ ತುಂಬಾ ಇಷ್ಟ ಆಗ್ತಾ ಇದೆ..... ಶಂಕರ ಭಟ್ಟರ ಕ್ರಿಕೆಟ್ ಇಷ್ಟ ಆಯ್ತು.....

    ReplyDelete
  13. nice article
    shaaomeign bottlnalli yeno haaki ittiddira....

    ReplyDelete
  14. ವ೦ದನೆಗಳು. ಫೋಟೋದ ವಿಚಾರ ಮು೦ದಿನ ಸ೦ಚಿಕೆಯಲ್ಲಿ ತಿಳಿಸುವೆ. ಫೋಟೋದ ಬಗ್ಗೆ ತಲೆ ಕೆಡಿಸಿಕೊ೦ಡ ನಿಮಗೆಲ್ಲಾ ಇನ್ನೊಮ್ಮೆ ಧನ್ಯವಾದಗಳು.

    ವಿಕಾಸ ಹೆಗ್ಡೆ,ಆನ೦ದ, ಸ್ನೊ ವೈಟ್ , ಮನಮುಕ್ತಾ, ಗುರು,ಶಿವು ಸರ್, ಸುಮಾ ,ಸುನಾಥ್ ಸರ್,ರಾಘು,ಮೋಗೇರ, ನನ್ನ ಬರಹ ಮೆಚ್ಚಿ ಪ್ರತಿಕ್ರಿಯಿಸಿದವರಿಗೆಲ್ಲ ವ೦ದನೆಗಳು .
    ಸೀತಾರಾ೦ ಸರ್ , ನನ್ನ ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು.

    ಶಿವಪ್ರಕಾಶ್.. ಅವರೆ, ಶಿಶಿರನನ್ನ ನಿಮ್ಮ ಮನೆಗೆ ಕಳಿಸುತ್ತೇನೆ . ಎಷ್ಟು ಬೇಕಾದ್ರೂ ಆಟೋಗ್ರಾಫ್ ಹಾಕಿಸಿಕೊಳ್ಳಿ.. ಗೋಡೆಯ ಮೇಲೆ...!!!!!
    ವ೦ದನೆಗಳು.

    ReplyDelete
  15. ಹ್ಹ ಹ್ಹ. ಚೆನ್ನಾಗಿದೆ ಶಂಕರಭಟ್ಟನ ಕ್ರಿಕೆಟ್ಟು! ಬಾಟ್ಲಿ ಚೆನ್ನಾಗಿದೆ ಹ್ಹ ಹ್ಹ ಹ್ಹ ಹ್ಹ

    ReplyDelete
  16. ನಂಗೆ ಗೊತ್ತಿದು...ಬಹುಮಾನ ಕೊಡೋದಾದ್ರೆ ಹೇಳ್ತಿ...:)

    ReplyDelete