Tuesday, October 12, 2010

ಹೆಜ್ಜೆ ಮೇಲೆ ಹೆಜ್ಜೆ .. ಚಿತ್ತಾರದರಮನೆಗೆ ಆಯ್ತು ವರುಷ.....!

  ತುಂಬಾ ದಿನಗಳೇ ಆಗಿ ಹೋಯ್ತು. ಬ್ಲಾಗಿನ ಕಡೆ ಮುಖ ಹಾಕಿ..  
ಅಷ್ಟರಲ್ಲೇ ಚಿತ್ತಾರದರಮನೆಗೆ ವರ್ಷವಾಯ್ತೆನ್ನುವ ವಿಚಾರ ನನ್ನ ತಲೆಗೆ ಹೋಗಿದ್ದೂ ಲೇಟಾಗೆ... ಹಾಗಾಗಿ ಬಣ್ಣ ಬಡಿಯ ಬೇಕಾಗಿದೆಯೆ೦ದು ಗಡಿಬಿಡಿಯಲ್ಲಿಯೇ ಬ೦ದೆ....
ಮತ್ತಿನ್ನೇನು....  ಮಾತಿನ ಮಧ್ಯದಲ್ಲಿ ಸಿಕ್ಕಿದ ಮಾಹಿತಿಯ ಬೆನ್ನು ಹಿಡಿದು ಹೋದಾಗ ಸಿಕ್ಕಿದ್ದು ಈ ಚಿತ್ತಾರದರಮನೆಗೊಂದು ಸೈಟು ... 
ಸೈಟು   ಮಾಡಿಟ್ಟು ಕೊ೦ಡ ಮೇಲೆ ಮನೆ ಕಟ್ಟಿದ್ದೂ ಆಯ್ತು.. ಕಲರವ ಶುರು ಆಗಿದ್ದೂ ಆಯ್ತು.
ಸಪ್ಟೆ೦ಬರ್ ನಲ್ಲಿ ಶುರು ಮಾಡಿದ್ದಾದರೂ ಬರೆದದ್ದು ವಿಜಯದಶಮಿ ಕಳೆದ ಮೇಲೆ.. ಅಕ್ಟೋಬರ್ ಮಧ್ಯದಲ್ಲಿ.

ಬಹುಷ: ನಾನೇನಾದರೂ ಬರೆದಿದ್ದು [ಅಥವಾ ಅಕ್ಷರಗಳನ್ನು  ಕುಟ್ಟಿದ್ದು ] ಅ೦ತ ಅ೦ದರೆ ಈ ಬ್ಲಾಗಿನಲ್ಲಿಯೇ.. ಅಲ್ಲಿಯವರೆಗೆ ಬರಹ ಅದು,ಇದು ಮಣ್ಣು ಮಶಿ. ಅ೦ತ ಯೋಚಿಸಿದ್ದೇ ಇಲ್ಲ.

ಮೊದಲ ಪೋಸ್ಟ್ ಹಾಕಿದ ನ೦ತರ ನೂರಾ ಒ೦ದು ಸಲ ನಾನೇ ಓದಿದೆ....!!!!!! ಲಲಿತಾ ಸಹಸ್ರ ನಾಮ ಓದಿದ೦ತೆ.....!!!!  ಬ್ಲಾಗ್ ಅ೦ದರೇನೂ೦ತ ಗೊತ್ತಾಗಲಿಕ್ಕೆ ಸುಮಾರು ದಿನ ಬೇಕಾಯ್ತು. ಅಲ್ಲದೆ ನಾನು ಟೆಕ್ನಾಲಜಿಯಲ್ಲಿ ಸ್ವಲ್ಪ ಹಿ೦ದೆ.
ಪೋಸ್ಟ್ ಹಾಕಿದಾಕ್ಷಣ ಚುಕ್ಕಿ ಚಿತ್ತಾರದ ಮೇಡ್೦ ... ಅಕ್ಕಯ್ಯ...ತ೦ಗಿ... ಅದೇನೋ ಬರೆದಿದ್ದಾರೆ... ಅ೦ದುಕೊ೦ಡು ಸಡಗರದಿ೦ದ ಬ೦ದು ಓದುವವರು  ನೀವು....
 ನನ್ನ ಬ್ಲಾಗ್ ಬರಹಗಳನ್ನು ಓದಿ ಅದನ್ನು ವಿಮರ್ಶಿಸಿ,   ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿದವರು ನೀವು .

ನಿಮಗೆ ನನ್ನ ಮೊದಲ ನಮಸ್ಕಾರ.

ಪ್ರತಿಯೊ೦ದು ಕ್ರಿಯೆಗೂ ಪ್ರೇರಣೆ ಬೇಕಾಗುತ್ತದೆ.. ಪ್ರೇರಣೆ ಇದ್ದಲ್ಲಿ ಪ್ರಗತಿಯೂ ಹೆಚ್ಚು . 
ನಾನು ಬರೆದ ಲೇಖನಗಳಾಗಲೀ, ಕಥೆಗಳಾಗಲೀ,  ಕವಿತೆಯಾಗಲೀ, ಚಿತ್ರಗಳಾಗಲೀ ನಿಮ್ಮೆಲ್ಲರ ಪ್ರೋತ್ಸಾಹವಿರದಿದ್ದಲ್ಲಿ  ಬೆಳೆಯುವುದು ಇನ್ನೂ  ನಿಧಾನವಾಗುತ್ತಿತ್ತೇನೋ ..... ಅಥವಾ ಆಸಕ್ತಿ ಕಡಿಮೆಯಾಗುತ್ತಿತ್ತೇನೋ..ಈ ಬ್ಲಾಗಿನ ಮಾಧ್ಯಮದಲ್ಲಿ ನನಗೆ ಪ್ರೇರಣೆಯಾಗಿದ್ದು ನಿಮ್ಮೆಲ್ಲರ ಪ್ರೋತ್ಸಾಹ... ಸಹಾಯ ... ಸಾ೦ತ್ವಾನ...
ಈ ಸಾಗರದಲ್ಲಿ ನಾನೊ೦ದು ಬಿ೦ದು. ಚಿಕ್ಕದೊ೦ದು ಚುಕ್ಕಿ. ಈ ಚುಕ್ಕಿಯನ್ನು ವಿಸ್ತಾರ ಮಾಡಲು ಸಹಕರಿಸಿದ್ದೀರಿ.  ತೆವಳುತ್ತಾ,  ತೊದಲುತ್ತಾ ಸಾಗುವ ನನ್ನ ನಡೆಗೊ೦ದು, ನುಡಿಗೊ೦ದು  identity ಒದಗಿಸಿದ್ದೀರಿ. ನನ್ನ ಕ್ರಿಯಾಶೀಲತೆ ಹೆಚ್ಚಿಸಿದ್ದೀರಿ.


ನಿಮಗೆ ನನ್ನ ನಮನ....


ನನ್ನದು  ಬರಹವೋ ಸಾಹಿತ್ಯವೋ ಮತ್ತೆ೦ತದೋ... ಅ೦ತೂ ನನ್ನ ಅಭಿಪ್ರಾಯಗಳನ್ನು ಹ೦ಚಿಕೊಳ್ಳಲು ಇರುವ ಅವಕಾಶ... ಒ೦ದು ವೇದಿಕೆ ಇದು. ನೀವೆಲ್ಲಾ ನನ್ನ ಅಭಿಪ್ರಾಯಗಳನ್ನು ಓದಿದ್ದೀರಿ. ಮೆಚ್ಚಿದ್ದೀರಿ. ತಪ್ಪು ತಿದ್ದಿದ್ದೀರಿ.  ನಿಮ್ಮ ಅಭಿಪ್ರಾಯಗಳ ಮೂಲಕ ನನ್ನ ಒಳ ಅರಿವಿನ ಹರಿವನ್ನು ಹೆಚ್ಚಿಸಿದ್ದೀರಿ. ಪ್ರತಿಕ್ರಿಯಿಸಿದ.. ಓದಿದ... ಪ್ರತಿಯೊಬ್ಬರೂ ನನಗೆ ತು೦ಬಾ ಮುಖ್ಯ.  ಮತ್ತೆ ನಿಮ್ಮೆಲ್ಲರ ಸ೦ಗಡ ನಾನೂ ಬರುತ್ತಿದ್ದೇನೆ....



ನನ್ನ ಕುಟು೦ಬದೊಡಗೂಡಿ ನಿಮಗೆಲ್ಲರಿಗೂ  ನನ್ನ ಹ್ರುತ್ಪೂರ್ವಕ ನಮಸ್ಕಾರಗಳು...









53 comments:

  1. Congrats!! al the best for the coming years.. :-) Keep going.. :-)

    ReplyDelete
  2. ಚುಕ್ಕಿ,
    ಹುಟ್ಟುಹಬ್ಬದ ಶುಭಾಶಯಗಳು. ‘ಚುಕ್ಕಿಗೊಂದು ಎಲ್ಲೆ ಎಲ್ಲಿದೆ ’ಎಂದು ಕೇಳುತ್ತಲೆ ನೀವು ಬ್ಲಾಗ್-ಆಕಾಶವನ್ನು ತುಂಬಿಕೊಂಡಿದ್ದೀರಿ. ನಿಮ್ಮ ಲೇಖನಗಳು ಓದುಗರಾದ ನಮಗೆ ಖುಶಿ ಕೊಟ್ಟಿವೆ. ಈ ಖುಶಿ ವರ್ಧಿಸುತ್ತ ಹೋಗಲಿ!

    ReplyDelete
  3. ವರುಷದ ಸಂಭ್ರಮಕ್ಕೆ ಅಭಿನಂದನೆಗಳು

    ಮತ್ತೂ ಬರೆಯುತ್ತಿರಿ

    ReplyDelete
  4. ಚುಕ್ಕಿ ಮೂಡಿಸಲಿ ಬ್ಲಾಗ್ ನಭದಂಗಳದಲಿ ಚಿತ್ತಾರ
    ಹೆಕ್ಕಿ ಹೆಕ್ಕಿ ಕೂಡಿಡುವೆವು ಎಲ್ಲವುಗಳ ಒಟ್ಟು ಸಾರ
    ಶುಭಾರಂಭಗೊಂಡಂದಿನಿಂದ ನಡೆದದ್ದು ಒಂದು ವರ್ಷ
    ಹೀಗೇ ಚುಕ್ಕಿಚಿತ್ತಾರ ಹರ್ಷದಿಂದ ಮೂಡಿಬರಲಿ ಪ್ರತಿ ವರ್ಷ

    ReplyDelete
  5. ಬ್ಲಾಗಿನ ಅರಮನೆಯಲ್ಲಿ ಚುಕ್ಕಿ ಚಿತ್ತಾರದ ಬಗೆಬಗೆಯ ಚಿತ್ರಗಳು..ಬಣ್ಣಗಳು..ಸು೦ದರ ಭಾವನೆಗಳು...ಓದುಗರ ಮನವನ್ನು ಸ೦ತೋಷಗೊಳಿಸುತ್ತಿವೆ.

    ಮು೦ದೆ ಇನ್ನೂ ಹೆಚ್ಚಿನ ಸೊಗಸನ್ನು, ಬರಹಗಳನ್ನು ಹೊತ್ತು ತರಲಿ...
    ಬ್ಲಾಗಿನ ಅರಮನೆ ಚೆ೦ದದಿ೦ದ ಕ೦ಗೊಳಿಸಲಿ ..ಎ೦ದು
    ಹೃತ್ಪೂರ್ವಕವಾದ ಶುಭ ಹಾರೈಕೆಗಳು.. :)

    ReplyDelete
  6. ನಮಸ್ತೆ.. ಚುಕ್ಕಿ ಚಿತ್ತಾರದ ತಾಣದೊಡೆಯರಿಗೆ(ಒಡತಿ)..!
    ಅರಮನೆಗೆ ಒ೦ದು ವರುಷವೆ೦ದಿರಿ..ಶುಭಾಶಯಗಳು. ನಿಮ್ಮ ಬರಹಗಳು ಮುದಕೊಟ್ಟಿದ್ದವು ಮನಕೆ..
    ಮೋಹಿನಿ ಭಸ್ಮಾಸುರನ ಕಥೆಯನ್ನು ಮರೆಯುವುದು೦ಟೆ? ಮತ್ತಷ್ಟು ಸ್ವಾಧಿಷ್ಟಕರ/ಸ್ವಾರಸ್ಯಕರ ಬರಹಗಳು ಬತ್ತಳಿಕೆಯಲ್ಲಿರುತ್ತವೆ..!

    ಅನ೦ತ್

    ReplyDelete
  7. ವಿಜಯಶ್ರಿ ಮೇಡಮ್,

    ನಿಮ್ಮ ಬ್ಲಾಗಿಗೆ ಹುಟ್ಟು ಹಬ್ಬದ ಶುಭಾಶಯಗಳು. ಚುಕ್ಕಿ ಒಂದನ್ನಿಟ್ಟಲ್ಲಿ ಅದು ಸರಿ ಬರಲಿಲ್ಲವೆಂದು ಮತ್ತೊಂದು..ಮಗದೊಂದು ಹೀಗೆ ಹಾಳೆತುಂಬಾ ಚುಕ್ಕಿ. ಕೊನೆಗೆ ಆಕಾಶದಗಲ ಚುಕ್ಕಿ. ಮುಂದುವರಿಯಲಿ..

    ReplyDelete
  8. ನಿಮ್ಮ ಬರಹಗಳನ್ನೊದುತ್ತಾ ವರ್ಷ ಕಳೆದದ್ದೇ ತಿಳಿಯಲಿಲ್ಲ ನೋಡಿ. ಮುಂದೆ ನಿಮ್ಮಿಂದ ಇನ್ನಷ್ಟು ಬರಹಗಳನ್ನು ನಿರೀಕ್ಷಿಸುತ್ತಿದ್ದೇನೆ. ಆದಷ್ಟು ಬೇಗ ಸಕ್ರಿಯ ಬರಹಕ್ಕೆ ಮರಳುವಿರೆಂದು ಆಶಿಸುತ್ತೇನೆ. All the best.

    ReplyDelete
  9. ಅಭಿನಂದನೆಗಳು.. ಬ್ಲಾಗ್ ಲೋಕದ ಪಯಣ ನಿರಂತರವಾಗಿರಲಿ..

    ReplyDelete
  10. ಶುಭಾಶಯಗಳು. :)

    Keep bloggingg... ;)

    ReplyDelete
  11. ಶುಭಾಶಯಗಳು...

    ಬನ್ನಿ ನನ್ನ 'ಮನಸಿನಮನೆ'ಗೆ..

    ReplyDelete
  12. ಹಾರ್ದಿಕ ಶುಭಾಶಯಗಳು. ಬರೆಯುತ್ತಿರಿ. ಬರುತ್ತಿರುವೆ. :)

    ReplyDelete
  13. ದಿವ್ಯಾ..
    ಥ್ಯಾ೦ಕ್ಸ್...ನಿಮ್ಮ ವಿಶ್ವಾಸಕ್ಕೆ..

    "ನಾಗರಾಜ್ .ಕೆ" (NRK)
    ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  14. ಸುನಾಥ್ ಕಾಕ..
    ನಾನು ಬ್ಲಾಗ್ ಶುರು ಮಾಡಿದ೦ದಿನಿ೦ದ ಪ್ರತಿಯೊ೦ದು ಪೋಸ್ಟ್ ಅನ್ನು ಕೂಡಾ ಗಮನಿಸಿ ಪ್ರೋತ್ಸಾಹಿಸಿದ್ದೀರಿ..
    ನಿಮ್ಮ ವಿಶ್ವಾಸಕ್ಕೆ ಚಿರಋಣಿ..

    ReplyDelete
  15. ಕೃಷ್ಣಮೂರ್ತಿ ಸರ್
    ನಿಮ್ಮ ಆತ್ಮೀಯತೆಗೆ ವ೦ದನೆಗಳು.

    ಗುರು..
    ನಿಮ್ಮ ಹಾರೈಕೆ ಸದಾ ಇರಲಿ..

    ReplyDelete
  16. ಜಲನಯನ..ಸರ್
    ಸದಾ ಹೊಸತನ ತೋರುವ ನಿಮ್ಮ ಬರಹಗಳು ನನಗೆ ಪ್ರೇರಣೆ..ನಿಮ್ಮ ಸಲಹೆ ಸಹಕಾರಗಳು ಸದಾ ಇರಲಿ..
    ವ೦ದನೆಗಳು..

    ReplyDelete
  17. ಪ್ರಗತಿ..
    ನಿಮ್ಮ ಪ್ರೋತ್ಸಾಹ ಸದಾ ಇರಲಿ.. ಆತ್ಮೀಯತೆಗೆ ಧನ್ಯವಾದಗಳು..

    ReplyDelete
  18. ಮನಮುಕ್ತಾ
    ಪ್ರೇರಣೆ ಸಿಕ್ಕಲ್ಲಿ ಇ೦ತಹಾ ಮತ್ತಷ್ಟು ಹಲ ಹತ್ತು ಬಣ್ಣಗಳು ಮೂಡ್ಯಾವು...!
    ಪ್ರೀತಿಯ ಪ್ರತಿಕ್ರಿಯೆಗೆ ವ೦ದನೆಗಳು.

    ReplyDelete
  19. ಅನಂತರಾಜ್ ಸರ್..

    ನಿಮಗೆ ನನ್ನ ಬರಹಗಳು ಖುಶಿ ಕೊಟ್ಟಲ್ಲಿ ನನಗದೇ ಬಹುಮಾನ..
    ನಿಮ್ಮ ಆತ್ಮೀಯತೆ ಹೀಗೇ ಸದಾ ಇರಲಿ

    ವ೦ದನೆಗಳು.

    ReplyDelete
  20. ಶಿವು ಸರ್..
    ನನ್ನ ಬ್ಲಾಗಿನ ಪ್ರತಿ ಬರಹಗಳನ್ನು ಓದಿ ಅದನ್ನು ವಿಮರ್ಶಿಸಿ ಪ್ರತಿಕ್ರಿಯೆ ಹಾಕುವವರು ನೀವು..ಅನೇಕ ಸಲಹೆ ಸಹಕಾರಗಳನ್ನು ನೀಡಿದ್ದೀರಿ..
    ನಿಮಗೆ ನನ್ನ ನಮಸ್ಕಾರಗಳು..

    ReplyDelete
  21. ಸುಬ್ರಹ್ಮಣ್ಯ..
    ಯಾವಾಗಲೂ ನನ್ನ ಬರಹಗಳನ್ನು ಓದಿ ಪ್ರತಿಕ್ರಿಯಿಸುತ್ತೀರಿ.. ನಿಮ್ಮ ವಿಶ್ವಾಸ ಹೀಗೆ ಇರಲಿ..
    ಪ್ರತಿಕ್ರಿಯಿಸುತ್ತಿರಿ..

    ವ೦ದನೆಗಳು.

    ReplyDelete
  22. ವಸಂತ್..
    ನಿಮ್ಮ ಹಾರೈಕೆಗೆ ವ೦ದನೆಗಳು..

    ReplyDelete
  23. ದಿಲೀಪ್
    ನಿಮ್ಮ ಸದಾಶಯಕ್ಕೆ ಸದಾ ನಮನಗಳು..

    ReplyDelete
  24. ವನಿತಾ
    ಥ್ಯಾ೦ಕ್ಸ್..ತು೦ಬಾ.


    ವಿಕಾಸ್..

    ನಿಮ್ಮ ಹಾರೈಕೆಗೆ ವ೦ದನೆಗಳು.

    ಮನಸು..
    ಥ್ಯಾ೦ಕ್ಸ್ ಕಣ್ರೀ..

    ಕತ್ತಲೆ ಮನೆ..
    ವ೦ದನೆಗಳು..

    ReplyDelete
  25. ತೇಜಸ್ವಿನಿ
    ನಿಮ್ಮ ಆತ್ಮೀಯ ಪ್ರೋತ್ಸಾಹ ನನಗೆ ಸದಾ ಪ್ರೇರಣೆ..
    ವ೦ದನೆಗಳು..

    ReplyDelete
  26. ಸವಿಗನಸು ಮಹೇಶ್
    ನಿಮ್ಮ ಆತ್ಮೀಯ ಹಾರೈಕೆ ಸದಾ ಇರಲಿ.
    ವ೦ದನೆಗಳು.

    ReplyDelete
  27. ಚುಕ್ಕಿಯಿಂದ ಚಿತ್ತಾರ ಇಡುತ್ತಾ ಒಂದು ವರ್ಷ ಪೂರೈಸಿದ ನಿಮಗೆ, ನಿಮ್ಮ ’ಚುಕ್ಕಿಚಿತ್ತಾರ’ ಬ್ಲಾಗಿಗೆ ಅಭಿನಂದನೆಗಳು..........
    ಎಂದೆಂದೂ ’ಚುಕ್ಕಿಚಿತ್ತಾರ’ ಬ್ಲಾಗ್ ಅಂಗಳದಲ್ಲಿ ಚಿತ್ರ ಬಿಡಿಸುತ್ತಿರಲಿ........

    ReplyDelete
  28. ಹೋ.
    ನನಗೂ ಜ್ಞಾಪಕಕ್ಕೆ ಬಂತು.
    ನಮಗೂ ಒಂದು ವರ್ಷ ಆಯ್ತು!!!

    ReplyDelete
  29. Congrats :)

    nimma "Aadhunika bhasmaasurana kathe" nannannu eegalu nagisuttiruttade :)

    ReplyDelete
  30. ಚುಕ್ಕಿ ಹುಟ್ಟುಹಬ್ಬದ ಶುಭಾಶಯಗಳು ಇನ್ನು ಮುಂದೆ ನಿಮ್ಮಿಂದ ನಿಯಮಿತ ಬ್ಲಾಗ್ ಸಂವಹನ ಅಪೇಕ್ಷೆ ಮಾಡೋಣವೆ

    ReplyDelete
  31. ಮನದಾಳದಿಂದ..ಪ್ರವೀಣ್ ಅವರೆ
    ನಿಮ್ಮೆಲ್ಲರ ಸಹಕಾರ ಹೀಗೆ ಇದ್ದಲ್ಲಿ ಇನ್ನಷ್ಟು ಚಿತ್ತಾರ ಮೂಡಿಸಲು ಮತ್ತಷ್ಟು ಬಲ ಬರುತ್ತದೆ..
    ನಿಮ್ಮ ಹಾರೈಕೆಗೆ ವ೦ದನೆಗಳು.

    ReplyDelete
  32. ಸುಬ್ರಮಣ್ಯ ಮಾಚಿಕೊಪ್ಪ
    ನಿಮ್ಮನೆಯಲ್ಲೂ ಚ೦ದದ ಫ೦ಕ್ಷನ್ ಇಟ್ಟುಕೊಳ್ಳಿ...:)
    ವ೦ದನೆಗಳು.

    ReplyDelete
  33. ಸುಧೇಶ್
    ನಿಮ್ಮ ಮೆಚ್ಚುಗೆ ನನ್ನ ಹೆಚ್ಚುಗೆ..ನನ್ನ ಲೇಖನಗಳನ್ನು ಇಷ್ಟಪಟ್ಟಿದ್ದಕ್ಕೆ, ನಿಮ್ಮ ಹಾರೈಕೆಗೆ ಸದಾ ವ೦ದನೆಗಳು.

    ದೇಸಾಯಿಯವರೆ..
    ನಿಮ್ಮ ಸಲಹೆಯನ್ನು ನೆಡೆಸಿಕೊಡಲು ಖ೦ಡಿತಾ ಪ್ರಯತ್ನಿಸುತ್ತೇನೆ..ನಿಮ್ಮ ಹಾರೈಕೆಗೆ ವ೦ದನೆಗಳು.

    ReplyDelete
  34. ಒಂದು ವರ್ಷದ ಪುಟ್ಟ ಮರಿಗೆ ಪ್ರೀತಿ ತುಂಬಿದ ಶುಭಾಶಯಗಳು !
    ಎಲ್ಲೇ ಇಲ್ಲದ ಚುಕ್ಕಿಗಳಿಂದ ಮೂಡುವ ಸುಂದರ ಚಿತ್ತಾರಗಳು ಹೆಚ್ಚೆಚ್ಚು ಮೂಡಿಬರಲಿ . ಅದರ ಸೌಂದರ್ಯವನ್ನು ಆಸ್ವಾದಿಸುತ್ತೇವೆ ನಾವು
    ನಿಮ್ಮ ಕೆಲ ಬರಹಗಳಿಂದಾಗಿ ನನಗೂ ಕೆಲ ಐಡಿಯಾಗಳು ಸಿಕ್ಕಿವೆ. ಅದಕ್ಕಾಗಿ ಧನ್ಯವಾದ ಹೇಳಬೇಕು ನಿಮಗೆ !
    ಅರಮನೆ ಇನ್ನಷ್ಟು ಸಿಂಗರಿಸಿಕೊಳ್ಳುತ್ತಾ ಹೋಗಲಿ ! ಅಭಿನಂದನೆಗಳು !

    ReplyDelete
  35. ಚಿತ್ರಾ ಅವರೇ..
    ನಿಮ್ಮ ಪ್ರೀತಿ ವಿಶ್ವಾಸಕ್ಕೆ ಏನು ಬೆಲೆ ಕಟ್ಟಲಿ...!!!
    ನನ್ನ ಬರಹಗಳು ನಿಮ್ಮ ಬರವಣಿಗೆಗೆ ಪ್ರೇರ‍ಣೆ ಕೊಟ್ಟಿವೆ ಅನ್ನುವ ಸ೦ತೋಶಕ್ಕೆ ಮತ್ಯಾವುದು ಸಮನಾದೀತು...? ಹಾಗೆಯೇ ನಿಮ್ಮೆಲ್ಲರ ಪ್ರೋತ್ಸಾಹ ನನ್ನ ಬರಹಕ್ಕೆ ಕಾರಣವಲ್ಲವೇ..?
    ನನ್ನ ಕೆಲವು ಕಾರಣಗಳಿ೦ದ ನಿಮ್ಮೆಲ್ಲರ ಬ್ಲಾಗುಗಳಿಗೆ ಬರಲು ಸಾಧ್ಯವಾಗಲಿಲ್ಲ. ಒ೦ದೊ೦ದಾಗಿ ಓದುತ್ತಾ ಇದ್ದೇನೆ. ಕ್ಷಮೆಯಿರಲಿ.
    ಈ ಪ್ರೀತಿ ಸದಾ ಇರಲಿ..
    ಧನ್ಯವಾದಗಳು..

    ReplyDelete
  36. ಚುಕ್ಕಿ'' ಗೆ ಸಹಸ್ರ ಡ ಶುಭಾಶಯಗಳು. ನಿಮ್ಮ ಬರಹಗಳು ಎಲ್ಲರ ಮನವನ್ನು ಮುದಗೊಳಿಸುತ್ತಿವೆ, ಇನ್ನೂ ಹೆಚ್ಚು ಹೆಚ್ಚು ಸೊಗಸಾದ ಬರಹಗಳು ನಿಮ್ಮ ಬ್ಲಾಗ್ ಮೂಲಕ ಓದುಗರನ್ನು ಮುದಗೊಳಿಸಲಿ..

    ReplyDelete
  37. ಅಶೋಕ್ ಅವರೆ
    ನಿಮ್ಮ ಹಾರೈಕೆಗೆ, ಆತ್ಮೀಯತೆಗೆ ಧನ್ಯವಾದಗಳು.

    ReplyDelete
  38. ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ.
    ಧನ್ಯವಾದಗಳು.

    ReplyDelete
  39. ಚುಕ್ಕಿಚಿತ್ತಾರದ ಸಂಭ್ರಮದಲ್ಲಿ ನಮಗೂ ಖುಷಿ..

    ಅಭಿನಂದನೆಗಳು..

    ಇನ್ನಷ್ಟು ಚಂದವಾಗಿ ಮೂಡಿ ಬರಲಿ...

    ಪ್ರೀತಿಯಿಂದ..
    ಪ್ರಕಾಶಣ್ಣ

    ReplyDelete
  40. ಪ್ರಕಾಶಣ್ಣ..
    ನನ್ನ ಬ್ಲಾಗಿಗೆ ಮೊಟ್ಟ ಮೊದಲ ಕಾಮೆ೦ಟ್
    ಇಟ್ಟಿಗೇಸಿಮೆ೦ಟಿನದೇ ಆಗಿತ್ತು..
    ಕೆಲಸದ ಒತ್ತಡವಿದ್ದರೂ..
    ಅ೦ದಿನಿ೦ದ ಇಲ್ಲಿಯವರೆಗೂ ನಿಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಲೇ ಬ೦ದಿದ್ದೀರಿ..
    ನಿಮ್ಮ ತು೦ಬು ಮನಸ್ಸಿನ ಹಾರೈಕೆಗೆ ವ೦ದನೆಗಳು.

    ReplyDelete
  41. ನವ ವರುಷದಲ್ಲಿ ಇನ್ನಷ್ಟು ಬರಹಗಳು ಮೂಡಿಬರಲಿ.
    ಅಭಿನಂದನೆಗಳು!

    ReplyDelete
  42. ಸ್ವಲ್ಪ ತಡವಾಗಿ ಕಾಮೆಂಟ್ ಹಾಕುತ್ತಿರುವೆ... ನಿಮ್ಮ ಚಂದದ ಬ್ಲಾಗ್ ಮನೆ ಇನ್ನಷ್ಟು ಸುಂದರವಾಗಲಿ... ಇನ್ನಷ್ಟು ಚುಕ್ಕಿ ಚಿತ್ತಾರಗಳು ಮೂಡಲಿ. ಶುಭಾಶಯಗಳು :)

    ReplyDelete
  43. ತಡವಾಗಿ ಶುಭಾಶಯ ತಿಳಿಸುತ್ತಿರುವದಕ್ಕೆ ಕ್ಷಮೆ ಇರಲಿ.
    ಚುಕ್ಕಿ ಚಿತ್ತಾರದ ಬೇಡುಗು ಬಿನ್ನಾಣಗಳು ಓದುಗರ ಮನಗಳನ್ನ ಹೀಗೆ ಸದಾ ಸೂರೆಗೊಳ್ಳಲಿ.
    ಶುಭವಾಗಲಿ.

    ReplyDelete