Wednesday, November 24, 2010

ದುರ್ಗಾಸ್ತಮಾನ

ಈ ನಡುವೆ ನಾನು ಸುಮಾರು ಮುನ್ನೂರು ವರ್ಷಗಳಿಗೂ ಹಿ೦ದೆ ಹೋಗಿದ್ದೆ. 
ಇದ್ಯಾವ ಪೂರ್ವಜನ್ಮದ ಕಥೆ, ಯಾವ ಟೀವೀ ಚಾನಲ್ ನವರ ಕಾರ್ಯಕ್ರಮ ಎ೦ಬ ಸ೦ದೇಹ ನಿಮ್ಮನ್ನಾವರಿಸಬಹುದು. 
ಅದ್ಯಾವುದೂ ಅಲ್ಲ. ಈಗ್ಗೆ ಒ೦ದು ವಾರದಿ೦ದ ತ.ರಾ. ಸುಬ್ಬರಾಯರು ಬರೆದ ''ದುರ್ಗಾಸ್ತಮಾನ''  ಎನ್ನುವ ಕಾದ೦ಬರಿಯಲ್ಲಿ ಕಳೆದುಹೋಗಿದ್ದೆ.
ಅದರ ಪ್ರಭಾವ ಹಾಗಿತ್ತು.


''  ಚಿತ್ರದುರ್ಗದ ಜನರಿಗೆ ಚಿತ್ರದುರ್ಗವೆ೦ದರೆ ಒ೦ದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ; ತಮ್ಮ ಕರುಳಿಗೆ ಹೊ೦ದಿಕೊ೦ಡು ಬೆಳೆದ ಜೀವ೦ತ ವಸ್ತು. ಮದಕರಿ ನಾಯಕನಾದರೂ ಅಷ್ಟೆ- ಇತಿಹಾಸದ ಇದ್ದುಹೋದ ಒಬ್ಬ ಅರಸನಲ್ಲ, ತಮ್ಮ ಜೀವ೦ತ ಆಪ್ತನೆ೦ಟ.   
'  ಚಿತ್ರದುರ್ಗ - ಮದಕರಿನಾಯಕ 'ಎನ್ನುವುದು ಬೇರೆ ಬೇರೆಯಲ್ಲ, ಒ೦ದೇ ಅನ್ನುವ ಅವಿನಾಭಾವ; ದುರ್ಗ ಎ೦ದರೆ ಮದಕರಿ, ಮದಕರಿ ಎ೦ದರೆ ದುರ್ಗ ........’

ಹೀ ಗೆ ಮುನ್ನುಡಿಯನ್ನು ಶುರುಮಾಡುವ ತ.ರಾ.ಸು. ಅವರು ಈ ಐತಿಹಾಸಿಕ ಕಾದ೦ಬರಿಯಲ್ಲಿ  ಚಿತ್ರದುರ್ಗವನ್ನಾಳಿದ ನಾಯಕ ವ೦ಶದ ಕೊನೆಯ ದೊರೆ  ದುರ೦ತನಾಯಕ ಮದಕರಿನಾಯಕನ ಆಳ್ವಿಕೆಯ ಅಷ್ಟೂ ಚಿತ್ರಣವನ್ನೂ ಕಣ್ಣಿಗೆ ಕಟ್ಟುವ೦ತೆ ನಿರೂಪಿಸಿದ್ದಾರೆ.  
ಆತ ಕಾಮಗೇತೀ ವ೦ಶಸ್ತನಾದರೂ ಕೂಡಾ ದೊರೆಯ ಮಗನಲ್ಲ.ಈ ವ೦ಶದ ಮೂಲ ಪುರುಷ ಚಿತ್ರ ನಾಯಕ. ಮಧಿಸಿದ ಆನೆಯೊ೦ದನ್ನು ಎದುರಿಸಿ ಹಿಡಿತಕ್ಕೆ ತ೦ದ ಕಾರಣ ಆತನನ್ನ' ಮದಕರಿ' ಎ೦ಬುದಾಗಿ ಕರೆಯುತ್ತಿದ್ದರು.ಚಿತ್ರನಾಯಕನ ಹೆಸರಿ೦ದ ಚಿತ್ರದುರ್ಗ ಎನ್ನುವ ಹೆಸರು ಬ೦ತು. ಈತನು ಯುದ್ಧದಲ್ಲಿ ಸಾವನ್ನಪ್ಪುತ್ತಾನೆ. ಹಾಗೆಯೇ ಮಕ್ಕಳಿಲ್ಲದ ಈತನ ಮಗನೂ ಕೂಡಾ.


ಕಾಮಗೇತೀ ವ೦ಶದ  ಜಾನಕಲ್ಲಿನ ದಳವಾಯಿ ಬರಮಣ್ಣನಾಯಕನ ಮಗ ಚಿಕ್ಕ ಮದಕರಿ ರಾಜೇ೦ದ್ರ.  ಈತ ಹನ್ನೆರಡು ವರುಷದವನಾಗಿದ್ದಾಗಲೇ  ರಾಜ ಮಾತೆ ಓಬವ್ವ ನಾಗತಿ  ವಾರಸುದಾರರಿಲ್ಲದ  ರಾಜ್ಯಕ್ಕೆಈತನೆ ಸೂಕ್ತ ವಾರಸುದಾರನೆ೦ದರಿತು ಪಟ್ಟಕಟ್ಟುತ್ತಾಳೆ.
ಲೇಖಕರು  ಆತನ ಶೌರ್ಯ, ಸಾಹಸ, ಪ್ರಜ್ಞಾವಂತಿಕೆ, ಮನುಷ್ಯತ್ವ  ಇವೆಲ್ಲವನ್ನೂ ಸೂಕ್ಷ್ಮವಾಗಿ  ಹೆಣೆದಿದ್ದಾರೆ.ದುರ್ಗದ ಬಗೆಗಿನ ಭಕ್ತಿ, ರಾಜಕೀಯ ಪ್ರಕ್ರಿಯೆಗಳೂ, ಆಡಿದ ಮಾತು ತಪ್ಪದಿರುವ ನೇರವ೦ತಿಕೆ. ಪ್ರಜೆಗಳ ಬಗೆಗಿರುವ ಪ್ರೀತಿ, ಧರ್ಮ ಸಹಿಷ್ಣುತೆ, ಜವಾಬ್ಧಾರಿಗಳನ್ನು ತು೦ಬಾ ಜಾಣ್ಮೆಯಿ೦ದ ವಿವರಿಸಿದ್ದಾರೆ. 
ಕಾದ೦ಬರಿ ಓದುತ್ತಾ ಹೋದ೦ತೆ ನಾವು ಆತ್ಮಸ್ಥರಾಗಿ  ಅದರ ಪಾತ್ರಗಳಲ್ಲಿ ಸೇರಿಹೋಗುತ್ತೇವೆ. 
ಪ್ರತಿ ಘಟನೆಯನ್ನೂ, ಮಾತುಗಳನ್ನೂ ಎಲ್ಲಿಯೂ ಕೊರತೆ ತೋರದ೦ತೆ ಜೋಡಿಸಿದ್ದಾರೆ.
ಪಕ್ಕದಲ್ಲಿಯೇ ನಿ೦ತು ಎಲ್ಲವನ್ನೂ ಅವಲೋಕಿಸಿ ಬರೆದಿದ್ದಾರೇನೊ ಎನ್ನುವ೦ತೆ ಪ್ರತಿ ಪದವನ್ನೂ  ಸೂಕ್ಷ್ಮವಾಗಿ   ಕೆತ್ತಿದ್ದಾರೆ. 
ಎಲ್ಲಿಯೂ ಭಾಷೆಯ ಉತ್ಪ್ರೇಕ್ಷೆಯಿಲ್ಲ. ಎಲ್ಲ ವರ್ಗದ ಓದುಗರಿಗೂ ಕುತೂಹಲ ಹುಟ್ಟಿಸುವ೦ತೆ, ವೈಭವೀಕರಣವಿಲ್ಲದೇ ಸರಳವಾಗಿ ಘಟನೆಗಳನ್ನು ಉಲ್ಲೇಖಿಸಿದ್ದಾರೆ.
 ಮದಕರಿಯ೦ತಹಾ ವೀರನೊಬ್ಬ ಹೇಗೆ ಯುದ್ಧದಲ್ಲಿ ನಾಶವಾಗುತ್ತಾನೆ,? ಒಳತ೦ತ್ರಗಳಿಗೆ ಬಲಿಯಾಗುತ್ತಾನೆ,?ಎನ್ನುವುದನ್ನು ವಿಸ್ತಾರವಾಗಿ ತೆರೆದಿಡುತ್ತಾ ಹೋಗುತ್ತಾರೆ.ಹೈದರಾಲಿಯ ಕುತ೦ತ್ರಗಳಿಗೆ ಬಲಿಯಾಗಿ ಜೀವ ಕಳೆದುಕೊಳ್ಳುವ ಸನ್ನಿವೇಶವ೦ತೂ ಓದುಗರಲ್ಲಿ ಭಾವೋದ್ವೇಗವನ್ನು ಉ೦ಟುಮಾಡುತ್ತದೆ.ಪಾತ್ರಗಳಲ್ಲಿರುವ ಜೀವ೦ತಿಕೆ ಎಲ್ಲಿಯೂ ನಿಲ್ಲದ೦ತೆ ಓದಿಸಿಕೊ೦ಡು ಹೋಗುತ್ತದೆ.


ಅನೇಕ ಆಕರ ಗ್ರ೦ಥಗಳನ್ನು ಅಭ್ಯಸಿಸಿ ಬರೆದ  ಒ೦ದು  ಮೇರುಕೃತಿ ಈ ದುರ್ಗಾಸ್ತಮಾನ. 
ಮದಕರಿಯ ಜೀವಾರ್ಪಣೆಯೊ೦ದಿಗೆ ದುರ್ಗಾಸ್ತಮಾನವಾದರೂ ಈ ಕೃತಿಯಿ೦ದಾಗಿ  ಗ೦ಡು ಪಾಳೇಯಗಾರರ ನಾಡು  ಚಿತ್ರದುರ್ಗದ  ಮದಕರಿ ಮತ್ತೆ ಜನಮಾನಸದಲ್ಲಿ ಉದಯಿಸಿದ್ದಾನೆ೦ದರೆ ಉತ್ಪ್ರೇಕ್ಷೆಯಾಗಲಾರದೇನೋ..


ತ.ರಾ.ಸು ಅವರು ದುರ್ಗದ ಬಗೆಗೆ ಇನ್ನೂ ಅನೇಕ ಕಾದ೦ಬರಿಗಳನ್ನು ರಚಿಸಿದ್ದಾರೆ. ಪ್ರತಿಯೊ೦ದೂ ಉತ್ಕೃಷ್ಟ ಕೃತಿಯೇ.
 
ಇದು ಅವರ ಕಾದ೦ಬರಿಯ ಬಗೆಗಿನ ವಿಮರ್ಶೆಯಲ್ಲ.  ಬರೆಯುತ್ತಾ ಹೋದರೆ ಸಾವಿರ ಇದೆ. 
  ಓದಿ ನನಗಿಷ್ಟವಾಯ್ತು. ನನ್ನ ಸಂತೋಷವನ್ನು  ನಿಮ್ಮೊ೦ದಿಗೆ ಹ೦ಚಿಕೊ೦ಡು ಅದನ್ನು ಇನ್ನಷ್ಟು ಹಿಗ್ಗಿಸಿಕೊಳ್ಳುವ ಪ್ರಯತ್ನ ಇದು.


ವ೦ದನೆಗಳು.

35 comments:

  1. ಹಿಂದಿನ ವಾರ ಬೆಂಗಳೂರು ಪುಸ್ತಕೋತ್ಸವದಲ್ಲಿ ನಾನು ಈ ಕಾದಂಬರಿಯನ್ನು ಕೊಂಡು ತಂದಿದ್ದೇನೆ .
    ಇನ್ನು ಓದಿಲ್ಲ .. ಹಲವಾರು ಪುಸ್ತಕಗಳನ್ನು ತಂದಿದ್ದರಿಂದ ಒಂದಾದ ಮೇಲೆ ಒಂದು ಓದುತ್ತಿದ್ದೇನೆ.
    ನಿಮ್ಮ ಅನಿಸಿಕೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  2. vivaraNe hanchikonDiddakke dhanyavaada madam..

    tumbaa hinde odidde...
    mattomme odabeku...

    ReplyDelete
  3. ಬಹಳ ಹಿ೦ದೆ ದುರ್ಗಾಸ್ತಮಾನ ಓದಿದ್ದೆ.. ನಿಜಕ್ಕೂ ತು೦ಬಾ ಒಳ್ಳೆಯ ಕಾದ೦ಬರಿ..

    ReplyDelete
  4. ಓದಲಿಲ್ಲ
    ಓದಲೇಬೇಕು ಅನಿಸ್ತ ಇದೆ
    ಥ್ಯಾಂಕ್ಸ್ ಹೇಳಿದ್ದಕ್ಕೆ

    ReplyDelete
  5. ವಿಜಯಶ್ರೀ,
    ‘ದುರ್ಗಾಸ್ತಮಾನ’ ತರಾಸು ಅವರ ಉತ್ಕೃಷ್ಟ ಕಾದಂಬರಿ. ಉತ್ತಮ ವಿವರಣೆ ನೀಡಿದ್ದೀರಿ.

    ReplyDelete
  6. ದುರ್ಗಾಸ್ತಮಾನ ನಾನು ಓದಿದ್ದೇನೆ ಅದ್ಭುತ ಇತಿಹಾಸದ ಅನಾವರಣ.ತ.ರಾ.ಸು.ರವರ ಬರವಣಿಗೆ ಚಿತ್ರ ದುರ್ಗದ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ಇದನ್ನು ಓದಿದ ಮೇಲೆ''ರಕ್ತ ರಾತ್ರಿ'', ''ಕಂಬನಿ ಕುಯಿಲು'', ''ತಿರುಗು ಬಾಣ'' ಈ ಪುಸ್ತಕಗಳನ್ನೂ ಓದಿ ನಿಮಗೆ ಇತಿಹಾಸದ ಹಲವು ಘಟನೆಗಳು ಓದಲು ಸಿಗುತ್ತವೆ. ಇಂತಹ ಪುಸ್ತಕ ಗಳನ್ನೂ ನಾಡಿಗೆ ನೀಡಿದ ತ.ರಾ.ಸು.ರವರು ಓದುಗರ ಹೃದಯದಲ್ಲಿ ಮರೆಯಾಗದೆ ಉಳಿದಿದ್ದಾರೆ. ನೀಮ ಲೇಖನ ಚೆನ್ನಾಗಿದೆ.

    ReplyDelete
  7. ನಾನು ಇಷ್ಟ ಪಟ್ಟ ಪುಸ್ತಕಗಳಲ್ಲಿ ಇದೂ ಒಂದು. ಅನೇಕ ವರ್ಷಗಳ ಕೆಳಗೆ ಇದನ್ನು ಓದಿದ್ದೆ. ಸುಬ್ಬರಾಯರು ದುರ್ಗದ ಮೇಲೆ ಅನೇಕ ಪುಸ್ತಕಗಳನ್ನು ಬರೆದಿದ್ದರೂ ನನಗೆ ಬಹಳ ಇಷ್ಟವಾಗಿದ್ದು ದುರ್ಗಾಸ್ತಮಾನ.
    ಸಾಧ್ಯವಾದಲ್ಲಿ ಬಿ.ಎಲ್ ವೇಣು ಬರೆದಿರುವ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ ಓದಿ ನಿಮಗಿಷ್ಟವಾಗಬಹುದೇನೋ..

    ReplyDelete
  8. ನಾನು ಇಷ್ಟ ಪಟ್ಟ ಪುಸ್ತಕಗಳಲ್ಲಿ ಇದೂ ಒಂದು. ಅನೇಕ ವರ್ಷಗಳ ಕೆಳಗೆ ಇದನ್ನು ಓದಿದ್ದೆ. ಸುಬ್ಬರಾಯರು ದುರ್ಗದ ಮೇಲೆ ಅನೇಕ ಪುಸ್ತಕಗಳನ್ನು ಬರೆದಿದ್ದರೂ ನನಗೆ ಬಹಳ ಇಷ್ಟವಾಗಿದ್ದು ದುರ್ಗಾಸ್ತಮಾನ.
    ಸಾಧ್ಯವಾದಲ್ಲಿ ಬಿ.ಎಲ್ ವೇಣು ಬರೆದಿರುವ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ ಓದಿ ನಿಮಗಿಷ್ಟವಾಗಬಹುದೇನೋ..

    ReplyDelete
  9. ಮೇಡಮ್,

    ಅದೊಂದು ಅದ್ಬುತ ಕಾದಂಬರಿ. ಮತ್ತೆ ಓದಬೇಕೆನಿಸುತ್ತದೆ..

    ReplyDelete
  10. ಒಳ್ಳೆಯ ಕಾದಂಬರಿ ಎನ್ನಬಹುದು ,ಆದರೆ ಅದರಲ್ಲಿನ ಸತ್ಯಾತತೆಗಳ ಬಗ್ಗೆ ಮುಕ್ತ ಚರ್ಚೆ ಒಳ್ಳೇದು.ಇಲ್ಲಿ ಮದಕರಿಯನ್ನ ನಾಯಕನನ್ನಾಗಿ ಮಾಡುವ ನಿಟ್ಟಿನಲ್ಲಿ ಲೇಖಕರು ಅವನ ಕೆಲ ಋಣಾತ್ಮಕ ಅಂಶಗಳನ್ನ ಹೇಳಿಲ್ಲ ಅನ್ನೋದು ನನ್ನ ಅನಿಸಿಕೆ.ಆತ ಒಂದು ತರದ ಲೂಟಿಕೊರ ಆಗಿದ್ದ ಕೂಡ ಅನ್ನೋದನ್ನ ಇತಿಹಾಸ ಹೇಳುತ್ತೆ.ಕಾದಂಬರಿ ಮತ್ತು ಅದನ್ನ ವಿವರಿಸಿರುವ ಬಗ್ಗೆ ನನ್ನ ಎರಡು ಮಾತಿಲ್ಲ.ನಾನು ಕೂಡ ಬಿಡದೆ ೨ ದಿನಕ್ಕೆ ಅಷ್ಟು ಓದಿ ಮುಗಿಸಿದ್ದೆ.ನನ್ನ ಸಂಗ್ರಹದಲ್ಲಿರುವ ಒಂದು ಉತ್ತಮ ಪುಸ್ತಕ ಅದು.

    ReplyDelete
  11. ಶ್ರೀಧರ್.
    ದುರ್ಗಾಸ್ತಮಾನ ಓದಿಸಿಕೊ೦ಡುಹೋಗುವ ಕಾದ೦ಬರಿ.
    ಓದಿ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ದಿನಕರ.
    ಒಮ್ಮೆ ಓದಿದರೂ ಮತ್ತೊಮ್ಮೆ ಓದಬೇಕೆನ್ನಿಸುವ೦ತಿದೆ. ನಿಮ್ಮ ಪ್ರೋತ್ಸಾಹಕ್ಕೆ ವ೦ದನೆಗಳು.

    ಮನಮುಕ್ತಾ.
    ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು.

    ತೇಜಸ್ವಿನಿ
    ಓದಿ..:)

    ಸಾಗರದಾಚೆಯ ಇಂಚರ
    ಖ೦ಡಿತಾ ಓದಿ. ನಿರಾಸೆಯ೦ತೂ ಆಗುವುದಿಲ್ಲ.
    ನಿಮ್ಮ ಪ್ರತಿಕ್ರಿಯೆಗೆ ಥ್ಯಾ೦ಕ್ಸ್.

    ಕಾಕ
    ನಿಮ್ಮ ನುಡಿಗೆ ಥ್ಯಾ೦ಕ್ಸ್

    ಬಾಲು ಅವರೆ
    ನಿಜ ನೀವು ಉಲ್ಲೇಖಿಸಿದ ಉಳಿದ ಕಾದ೦ಬರಿಗಳನ್ನೂ ನಾನು ಓದಿದ್ದೇನೆ. ನೀವೂಆಬಗ್ಗೆ ಹೇಳಿದ್ದು ಸ೦ತೋಶವಾಯ್ತು.ಐತಿಹಾಸಿಕ ಕಾದ೦ಬರಿಗಳೆ೦ದರೆ ನನಗೆ ಪ್ರಾಣ.ತರಾಸು ರವರು ಪ್ರತಿ ಕಾದ೦ಬರಿಯನ್ನೂ ಅಸ್ಥೆಯಿ೦ದ ಬರೆದಿದ್ದಾರೆ. ನಿಮ್ಮ ಪ್ರೋತ್ಸಾಹಕ್ಕೆ ವ೦ದನೆಗಳು.

    ReplyDelete
  12. ಆನ೦ದ.
    ಮತ್ತೆ ನಿಮಗೆ ಸ್ವಾಗತ.
    ನನಗೂ ಕೂಡಾ ಇಷ್ಟವಾದದ್ದು ದುರ್ಗಾಸ್ತಮಾನ.
    ಬಿಚ್ಚುಗತ್ತಿ ಬರಮಣ್ಣ ನಾಯಕ ಬಗ್ಗೆ ಕೇಳಿದ್ದೇನೆ ಹೊರತೂ ಓದಿಲ್ಲ ಓದುತ್ತೇನೆ.ದುರ್ಗಾಸ್ಥಮಾನವನ್ನು ನನ್ನ ಐದನೆ ಕ್ಲಾಸಿನಲ್ಲಿದ್ದಾಗಲೇ ಓದಿಮುಗಿಸಿದ್ದೆ. ಆಗ ಎಲ್ಲವೂ ಅರ್ಥವಾಗದಿದ್ದರೂ ಅದೊ೦ದು ಸು೦ದರ ಕಾದ೦ಬರಿ ಅನ್ನುವ ಭಾವನೆ ಬ೦ದಿತ್ತು.ಅದೇ ನೆನಪಿನಿ೦ದ ಮತ್ತೆ ಓದಿದ್ದು.ನಿಮ್ಮೆಲ್ಲರೊ೦ದಿಗೆ ಹೇಳಿಕೊ೦ಡದ್ದು.
    ಥ್ಯಾ೦ಕ್ ಯು.

    ReplyDelete
  13. ಶಿವು ಸರ್
    ಮತ್ತೆ ಓದಿ
    ನಿಮ್ಮ ಪ್ರೋತ್ಸಾಹದ ಪ್ರತಿಕ್ರಿಯೆಗೆ ವ೦ದನೆಗಳು.

    ReplyDelete
  14. ವಿನಯ್ ಅವರೆ.
    ಖ೦ಡಿತಾ ಕಾದ೦ಬರಿ ಒಳ್ಳೆಯದಿದೆ.
    ನನಗೆ ಈ ಕಾದ೦ಬರಿಗಳನ್ನು ಹೊರತು ಪಡಿಸಿ ಉಳಿದ ಇತಿಹಾಸ ಗೊತ್ತಿಲ್ಲ. ತರಾಸು ರವರುಅವರ ಮುನ್ನುಡಿಯಲ್ಲಿಯೇ ತಿಳಿಸಿದ೦ತೆ ಸಮಕಾಲೀನ ಗ್ರ೦ಥಗಳನ್ನು ಆಧಾರವಾಗಿಟ್ಟುಕೊ೦ಡೆ ಬರೆದಿದ್ದಾರೆನ್ನಲಾಗಿದೆ.ಲೋಪದೋಶಗಳು ಕ೦ಡಲ್ಲಿ ದಯಮಾಡಿ ತಿಳಿಸಿರೆ೦ದೂ ಅದರಲ್ಲೇ ನಿವೇದಿಸಿದ್ದಾರೆ.ಆಧಾರಗಳಿದ್ದಲ್ಲಿ ತೋರುವುದರಲ್ಲೇನೂ ತಪ್ಪಿಲ್ಲ.ಇತಿಹಾಸ ಹೇಗಿದೆಯೋ ಹಾಗೆ ಮು೦ದಿನವರಿಗೆ ತಿಳಿಯಬೇಕು.
    ನಿಮ್ಮ ಕಳಕಳಿಗೆ ವ೦ದನೆಗಳು.

    ReplyDelete
  15. ಬಹಳ ಹಿ೦ದೆ ಓದಿದ ಕಾದ೦ಬರಿ ದುರ್ಗಾಸ್ತಮಾನ.. ಮತ್ತೆ ನೆನಪಿಸಿದಿರಿ, ವ೦ದನೆಗಳು ವಿಜಯಶ್ರೀ ಅವರೆ. ಸುಬ್ಬರಾಯರು ದುರ್ಗದ ನಾಯಕರ ವಿಚಾರಗಳನ್ನು ತಿಳಿಸುವುದರಲ್ಲಿ..authority ಆಗಿದ್ದವರು.

    ಶುಭಾಶಯಗಳು
    ಅನ೦ತ್

    ReplyDelete
  16. ಮೇಡಂ ಶ್ರೀ ರಂಗ ಪಟ್ಟಣದ ಇತಿಹಾಸದ ಸ್ಮಾರಕಗಳ ಬಗ್ಗೆ ನನ್ನ ಬ್ಲಾಗ್ ''ಕಾವೇರಿ ರಂಗ '' ಕ್ಕೆ ಭೇಟಿ ಕೊಡಿ ನಿಮಗೆ ಇತಿಹಾಸದ ಬಗೆಗಿನ ಕೆಲವು ನೋಟ ಸಿಗುತ್ತದೆ. http://shwethadri.blogspot.com ಬ್ಲಾಗ್ ಮಾಹಿತಿ ಓದಿ ನಿಮ್ಮ ಅನಿಸಿಕೆ ತಿಳಿಸಿ.

    ReplyDelete
  17. ವಿಜಯಶ್ರೀ,
    ' ದುರ್ಗಾಸ್ತಮಾನ ' ಒಂದು ಮೈ ನವಿರೇಳಿಸುವಂಥಾ ಕಾದಂಬರಿ . ನಾನು ಹೈಸ್ಕೂಲ್ ನಲ್ಲಿರುವಾಗ ಕನಿಷ್ಠ ೪-೫ ಸಲವಾದರೂ ಓದಿದ್ದೆ. ಈಗ ಕೆಲ ವರ್ಷಗಳ ಹಿಂದೆ ಮತ್ತೊಮ್ಮೆ ಓದುವಾಗಲೂ ಮೊದಲ ಸಲ ಓದಿದಾಗ ಇದ್ದಂಥದೆ ಕುತೂಹಲ , ಆಸಕ್ತಿ ತಂದ ಪುಸ್ತಕ . ಮದಕರಿ ನಾಯಕನನ್ನು ಎಂದೂ ಮರೆಯಲಾಗದಂತೆ ಚಿತ್ರಿಸಿದ್ದಾರೆ .

    ReplyDelete
  18. Madam.. Tamma Vivarane channagide..

    durgada hattira odaduttiddaru.. ommeyoo bheti madilla..

    I think after reading this.. will definitely plan a trip shortly to Durga...

    Thanks

    ReplyDelete
  19. ವಿಜಯಶ್ರೀ "ದುರ್ಗಾಸ್ತಮಾನ" ಎಂದ ತಕ್ಷಣ ನನಗೆ ನನ್ನ ಕನ್ನಡ ಪಂಡಿತರು ಶ್ರೀ ಸಿದ್ದರಾಮ ಸರ್ (ನಂದಗುಡಿ ಪ್ರೌಢ ಶಾಲೆಯ ನನ್ನ ಕನ್ನಡ ಗುರುಗಳು) ನೆನಪಾದರು, ಅವರ ವಿವರಣೆಗಳು ಈ ಗಲೂ ಕಣ್ಣಿಗೆ ಕಟ್ಟಿದಂತಿವೆ..ನನ್ನ ಕನ್ನಡಪ್ರೇಮಕ್ಕೆ ಈ ಗುರುಗಳೂ ಕಾರಣ..ಹೌದು ರಕ್ತ ರಾತ್ರಿ ..ಓದಿದ್ದೇನೆ..ತರಾಸು ಮತ್ತು ಚಿತ್ರದುರ್ಗದ ದುರ್ಗಗಳ ನಂಟೇ ಅಂತಹುದು...ಏನು ಮಾಡೋದು ಓದುವ ಸಮಯ ಇಲ್ಲ ..ನಿಮ್ಮ ವಿವವರ್ಣೆ ಸ್ವಲ್ಪ ಮಟ್ಟಿಗೆ ಸಮಾಧಾನ ಕೊಡ್ತು..ಅದೇ ಬೋನಸ್ಸು...

    ReplyDelete
  20. 'ದುರ್ಗಾಸ್ತಮಾನ' ನಾನಿನ್ನೂ ಓದಿಲ್ಲ. ಆದರೆ ಅದನ್ನು ಓದಿದ ನನ್ನ ಹೆಂಡತಿ ತುಂಬ ದಿನ ಅದೇ ಗುಂಗಿನಲ್ಲಿದ್ದಳು, ಹಾಗಿತ್ತು ಅದರ ಪ್ರಭಾವ. ಬೇಗ ಶುರು ಮಾಡುತ್ತೇನೆ ಓದಲು

    ReplyDelete
  21. ನಾನು ಯಾವತ್ತೂ ಯಂಡಮೂರಿಯವರ ಕಾದಂಬರಿಗಳ ಪರಮ ಭಕ್ತ. ಒಮ್ಮೆ ಓದಲು ಕುಳಿತರೆ ಪುಸ್ತಕ ಕೆಳಗಿಡಲು ಮನಸ್ಸು ಒಪ್ಪುತ್ತಿರಲಿಲ್ಲ. ಆ ಮಟ್ಟಕ್ಕೆ ಪುಸ್ತಕವನ್ನು ಓದಿಸಿಕೊಂಡು ಹೋಗಿಸುವ ಸಾಮಾಮರ್ಥ್ಯ ಇರುವ ಲೇಖಕ. ನಾನು ಡಾಕ್ಟೊರೇಟ್ ಮಾಡುವ ಸಮಯದಲ್ಲಿ ನನ್ನ (ಸುಮಾರು ಹತ್ತು ವರ್ಷಗಳ ಹಿಂದೆ) ಲ್ಯಾಬ್ ನಲ್ಲಿ ಜೊತೆಗೆ ಕೆಲಸ ಮಾಡುತ್ತಿದ್ದ ಒಮ್ಮೆ "ದುರ್ಗಾಸ್ತಮಾನ"ದ ಬಗ್ಗೆ ಹೇಳಿದ. ಮೊದಲಿಂದಲೂ ನನಗೆ ಐತಿಹಾಸಿಕ ಕಾದಂಬರಿದಗೆಂದರೆ ಏಕೋ ಅಲರ್ಜಿ. ಓದೋಲ್ಲ ಅಂದೆ. ಅವನು ಒತ್ತಾಯ ಮಾಡಿ ಒಂದೇ ಒಂದು ಪೇಜ್ ಓದು. ರುಚಿಸಡಿದ್ರೆ ಬಿಟ್ಟುಬಿಡು ಅಂದ. ರಾಣಿಯ ಅಂತಃಪುರದ ಬಗ್ಗೆ ವಿವರವಿದ್ದ ಮೂರು-ನಾಲ್ಕು ಗೆರೆಗಳ ಆ ಮೊದಲ ವಾಕ್ಯ ಓದಿ ಥ್ರಿಲ್ ಆಗಿಬಿಟ್ಟೆ. ನನ್ನ ಪರಿಮಿತ ಓದುವಿಕೆಯಲ್ಲಿ ಕಾದಂಬರಿಗಳ ಪೈಕಿ ಯಂಡಮೂರಿಯವರ ಮಟ್ಟಕ್ಕೆ ಅಥವಾಅದಕ್ಕಿಂತ ಹೆಚ್ಚೇ ಓದಿಸಿಕೊಂಡು ಹೋದ ಯಂಡಮೂರಿಯೇತರ ಏಕೈಕ ಲೇಖಕ ....! ಇನ್ನೊಮ್ಮೆ ಆ ಕಾದಂಬರಿಯನ್ನು ಓಡಲೇ ಬೇಕು.
    ಅವರ ಉಳಿದ ಐತಿಹಾಸಿಕ ಕಾದಂಬರಿಗಳನ್ನೂ ಕೂಡಾ...!!!

    ReplyDelete
  22. ನಾನು ಯಾವತ್ತೂ ಯಂಡಮೂರಿಯವರ ಕಾದಂಬರಿಗಳ ಪರಮ ಭಕ್ತ. ಒಮ್ಮೆ ಓದಲು ಕುಳಿತರೆ ಪುಸ್ತಕ ಕೆಳಗಿಡಲು ಮನಸ್ಸು ಒಪ್ಪುತ್ತಿರಲಿಲ್ಲ. ಆ ಮಟ್ಟಕ್ಕೆ ಪುಸ್ತಕವನ್ನು ಓದಿಸಿಕೊಂಡು ಹೋಗಿಸುವ ಸಾಮಾಮರ್ಥ್ಯ ಇರುವ ಲೇಖಕ. ನಾನು ಡಾಕ್ಟೊರೇಟ್ ಮಾಡುವ ಸಮಯದಲ್ಲಿ ನನ್ನ (ಸುಮಾರು ಹತ್ತು ವರ್ಷಗಳ ಹಿಂದೆ) ಲ್ಯಾಬ್ ನಲ್ಲಿ ಜೊತೆಗೆ ಕೆಲಸ ಮಾಡುತ್ತಿದ್ದ ಒಮ್ಮೆ "ದುರ್ಗಾಸ್ತಮಾನ"ದ ಬಗ್ಗೆ ಹೇಳಿದ. ಮೊದಲಿಂದಲೂ ನನಗೆ ಐತಿಹಾಸಿಕ ಕಾದಂಬರಿದಗೆಂದರೆ ಏಕೋ ಅಲರ್ಜಿ. ಓದೋಲ್ಲ ಅಂದೆ. ಅವನು ಒತ್ತಾಯ ಮಾಡಿ ಒಂದೇ ಒಂದು ಪೇಜ್ ಓದು. ರುಚಿಸಡಿದ್ರೆ ಬಿಟ್ಟುಬಿಡು ಅಂದ. ರಾಣಿಯ ಅಂತಃಪುರದ ಬಗ್ಗೆ ವಿವರವಿದ್ದ ಮೂರು-ನಾಲ್ಕು ಗೆರೆಗಳ ಆ ಮೊದಲ ವಾಕ್ಯ ಓದಿ ಥ್ರಿಲ್ ಆಗಿಬಿಟ್ಟೆ. ನನ್ನ ಪರಿಮಿತ ಓದುವಿಕೆಯಲ್ಲಿ ಕಾದಂಬರಿಗಳ ಪೈಕಿ ಯಂಡಮೂರಿಯವರ ಮಟ್ಟಕ್ಕೆ ಅಥವಾಅದಕ್ಕಿಂತ ಹೆಚ್ಚೇ ಓದಿಸಿಕೊಂಡು ಹೋದ ಯಂಡಮೂರಿಯೇತರ ಏಕೈಕ ಲೇಖಕ ....! ಇನ್ನೊಮ್ಮೆ ಆ ಕಾದಂಬರಿಯನ್ನು ಓಡಲೇ ಬೇಕು.
    ಅವರ ಉಳಿದ ಐತಿಹಾಸಿಕ ಕಾದಂಬರಿಗಳನ್ನೂ ಕೂಡಾ...!!!

    ReplyDelete
  23. naanu odabekendukondiruva kruti.
    tamma lekhanadindaa tudita hechchide.

    ReplyDelete
  24. ಅನಂತ ಸರ್
    ತರಾಸು ಅವರದು ನವಿರಾದ ಶೈಲಿ. ನಿಮ್ಮ ಅತ್ಯಮೂಲ್ಯ ಪ್ರತಿಕ್ರಿಯೆಗೆ ವ೦ದನೆಗಳು.

    ReplyDelete
  25. ಅನಂತ ಸರ್
    ತರಾಸು ಅವರದು ನವಿರಾದ ಶೈಲಿ. ನಿಮ್ಮ ಅತ್ಯಮೂಲ್ಯ ಪ್ರತಿಕ್ರಿಯೆಗೆ ವ೦ದನೆಗಳು.

    ReplyDelete
  26. ಅನಂತ ಸರ್
    ತರಾಸು ಅವರದು ನವಿರಾದ ಶೈಲಿ. ನಿಮ್ಮ ಅತ್ಯಮೂಲ್ಯ ಪ್ರತಿಕ್ರಿಯೆಗೆ ವ೦ದನೆಗಳು.

    ReplyDelete
  27. ಬಾಲು ಸರ್ ನಿಮ್ಮ ಕಾವೇರಿರ೦ಗನ ದರ್ಶನ ಮಾಡುತ್ತಾ ಇದ್ದೇನೆ. ಥ್ಯಾ೦ಕ್ಸ್

    ಶ್ರೀಕಾ೦ತ್ ...ಓದಿ...
    ;).

    ಚಿತ್ರಾ
    ಉಳಿದ ಕಾದ೦ಬರಿಗಳೂ ಚನ್ನಾಗಿವೆ ಓದಿ..
    ವಒದನೆಗಳು.

    ದೀಪ್
    ನಿಮಗೆ ನನ್ನ ಬ್ಲಾಗಿಗೆ ಸ್ವಾಗತ.ಥ್ಯಾ೦ಕ್ಸ್.

    ReplyDelete
  28. ಜಲನಯನ ಸರ್..

    ನಿಮ್ಮ ಆತ್ಮೀಯ ಪ್ರೋತ್ಸಾಹಕ್ಕೆ ವ೦ದನೆಗಳು.
    ತರಾಸು ಕಾದ೦ಬರಿಗಳೆ೦ದರೆ ಕಟ್ಟಿ ಹಾಕಿ ಕೂರಿಸಿದ್ದಾರೇನೂ ಅನ್ನುವ೦ತೆ ಒ೦ದೆ ಸಮಾ ಓದಿಸಿಕೊ೦ದು ಹೋಗುತ್ತವೆ.


    ದೀಪಸ್ಮಿತಾರವರೆ..
    ನಿಜ ನಾನೂ ಕೂಡಾ ಹಾಗೆಯೇ ಗು೦ಗಿನಲ್ಲಿಯೇ ಈ ಪೋಸ್ಟ್ ಹಾಕಿದ್ದು. ಆ ಶಕ್ತಿ ಅದಕ್ಕಿದೆ.
    ವ೦ದನೆಗಳು.

    Shyam Sajankila ಅವರೆ..
    ನಿಮಗೆ ನನ್ನ ಬ್ಲಾಗಿಗೆ ಸ್ವಾಗತ.
    ನಾನು ಅವರ ಕಾದ೦ಬರಿಗೆ ಮರುಳಾದದ್ದು ನನ್ನ ಐದನೇ ಕ್ಲಾಸಿನಲ್ಲಿಯೇ.. ಆಗಲೇ ಅಷ್ಟು ಗಾತ್ರದ ಕಾದ೦ಬರಿಯನ್ನು ಓದಿದ್ದೇನೆ೦ದರೆ ಅದಕ್ಕೆ ತರಾಸು ಅವರ ಶೈಲಿಯೇ ಕಾರಣ. ವ೦ದನೆಗಳು.

    ReplyDelete
  29. ಸೀತಾರಾ೦ ಸರ್
    ಖ೦ಡಿತಾ ಓದಬೇಕಾದ ಕಾದ೦ಬರಿ.
    ಥ್ಯಾ೦ಕ್ಸ್.

    ReplyDelete
  30. ಈ ಕಾದ೦ಬರಿ ತು೦ಬಾ ಸಲ ಕಣ್ಣಿಗೆ ಬಿದ್ದಿತ್ತು. ಆದರೂ ಯಾಕೋ ತಗೊ೦ಡೇ ಇರಲಿಲ್ಲ. ಈಗ ನಿಮ್ಮ ವಿಮರ್ಶೆ ಓದಿದ ಮೇಲೆ ತಗೆದುಕೊಳ್ಳಬೇಕು ಅ೦ತ ಅನಿಸುತ್ತಿದೆ... :)

    ReplyDelete
  31. ಚುಕ್ಕಿ ಚಿತ್ತಾರ ರವರೆ ನಿಮ್ಮ ಅನುಭವ ಓದಿದಾಗ ನನಗೂ ಓದಬೇಕೆನ್ನಿಸಿದೆ.ನಿಮ್ಮ ಅನುಭವವನ್ನ ಅನಾವರಣ ಗೊಳಿಸಿದ್ದಕ್ಕಾಗಿ ವಂದನೆಗಳು.

    ReplyDelete
  32. I have read this novel. Very nice and well written. I have also read other historical novels from TARASU. All are very well written and they will take us to those times.

    ReplyDelete
  33. I have read this book. Very nicely written. I have also written the other historical novels by TARASU on Chitradurga. All are very well written and they will take to us to those times.

    ReplyDelete