ಚಿತ್ತಾರದೂರಿನ ಬಂಧುಗಳೇ ..
ನನ್ನ ಬ್ಲಾಗಿನ ಚಟುವಟಿಕೆಗಳನ್ನು ಸದಾ ಪ್ರೋತ್ಸಾಹಿಸುವವರು ನೀವು.
ನನ್ನ ಸಂತೋಷವನ್ನಿಷ್ಟು ನಿಮ್ಮಲ್ಲಿ ಹಂಚಿಕೊಳ್ಳುವಾಸೆ.
ಚುಕ್ಕಿಚಿತ್ತಾರ ಬ್ಲಾಗ್ ತನ್ನ ಎಲ್ಲೆಯನ್ನು ವಿಸ್ತರಿಸಿ ಉದಯವಾಣಿ ಪತ್ರಿಕೆಯಲ್ಲಿ ಕಾಣಿಸಿಕೊಂಡಿದೆ.
ಬರೆಯುವುದನ್ನು ಬ್ಲಾಗಿನಲ್ಲಿಯೇ ಕಲಿತವಳು ನಾನು.ಅಲ್ಲಿಯವರೆಗೆ ನೆಟ್ಟಗೆ ಪತ್ರ ಬರೆಯುವುದೂ ಗೊತ್ತಿರಲಿಲ್ಲ. ಬರೆದದ್ದು ಏನು ಎನ್ನುವುದರ ಬಗ್ಗೆ ಸಂಶೋಧನೆಯೇ ಬೇಕಾಗುತ್ತಿತ್ತು ಈ ಮೊದಲು. ಬರೀ ಚಿತ್ರ ಬರೆಯುವುದೂ, ಪುಸ್ತಕಗಳನ್ನು ಓದುವುದೂ, ಅದೂ ಇದೂ ಕಸೂತಿ ಕೈಗಾರಿಕೆ ಮಾಡುವುದರಲ್ಲೇ ನನ್ನ ಕೆಲಸ ಸೀಮಿತವಾಗಿತ್ತು.ನಾನು ಬರೆದದ್ದರ ಬಗ್ಗೆ ನನಗೆ ಭರವಸೆಯಿರಲಿಲ್ಲ. ನನ್ನ ಬ್ಲಾಗಿನ ಬರಹಗಳನ್ನು ಓದಿ, ಬರೆಯಲು ಹೆಚ್ಚಿನ ಉತ್ಸಾಹ ತುಂಬಿದವರು ನೀವು..
ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಇನ್ನೊ೦ದು ಸಂತೋಷದ ಸಂಗತಿಯೆಂದರೆ ವಿಜಯಕರ್ನಾಟಕ ಪತ್ರಿಕೆಯ ಲವಲವಿಕೆಯಲ್ಲಿ ನಾನು ಬರೆದ ಲೇಖನವೊಂದು ಪ್ರಕಟವಾದದ್ದು.ದಿನಾಂಕ 29-11-2010 ರಂದು ಪ್ರಕಟಣೆಗೊಂಡ ''ಮಲೆನಾಡಿನಲ್ಲಿ ಈಗ ಯಂತ್ರಗಳದ್ದೆ ಸದ್ದು ಎನ್ನುವ ಲೇಖನ''. ನನಗೆ ಬರೆಯುವಲ್ಲಿ ಹೆಚ್ಚಿನ ಆತ್ಮವಿಶ್ವಾಸ ತಂದುಕೊಟ್ಟಿದೆ. ಕೇವಲ ಬ್ಲಾಗಿಗೆ ಸೀಮಿತವಾದ ನನ್ನ ಬರಹ ಪತ್ರಿಕೆಯೊಂದರಲ್ಲಿ ಕಾಣಿಸಿಕೊಳ್ಳಲು ಕಾರಣ ಶ್ರೀಶಂ ಬ್ಲಾಗಿನ ರಾಘವೇಂದ್ರ ಶರ್ಮರು.ಲೇಖನದ ಸಂಸ್ಕರಣೆ ಮತ್ತು ಮಾಧ್ಯಮದ ಸಂಸ್ಕಾರ ಎರಡೂ ಹೇಳಿಕೊಟ್ಟು ಪತ್ರಿಕೆಗೆ ಕಳುಹಿಸಲು ಪ್ರೇರಣೆ ಕೊಟ್ಟಿದ್ದು ರಾಘಣ್ಣ. ಅವರಿಗೆ ನನ್ನ ಹೃತ್ಪೂರ್ವಕ ನಮನಗಳು.
http://www.vijaykarnatakaepaper.com/pdf/2010/11/29/20101129l_003101001.pdf
ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ಸದಾ ಇರಲಿ. ನಿಮ್ಮೆಲ್ಲರ ಪ್ರೀತಿಗೆ, ವಿಶ್ವಾಸಕ್ಕೆ, ಆತ್ಮೀಯತೆಗೆ ಸದಾ ಋಣಿ.
ವಂದನೆಗಳು.
Move on . . .
ReplyDeleteAbhinandanegaLu.. nimage heege sAhitya lokada mannane doreyuttirali..
ReplyDeletecongrats..
ReplyDeleteಅಭಿನಂದನೆಗಳು.
ReplyDeleteಕಾಮೆಂಟ್ ಬರೆಯುವಲ್ಲಿನ ವರ್ಡ್ ವೆರಿಫಿಕಶನ್ ತೆಗೆದು ಹಾಕಿ. ಅದು ಕಿರಿಕಿರಿ!! ಏನಂತಿರಿ?
ವಿಜಯಶ್ರೀ,
ReplyDeleteನಿಮಗೆ ಶುಭಾಶಯಗಳು.
ಹೀಗೇ ಸಾಗಲಿ ನಿಮ್ಮ ಯಶಸ್ಸಿನ ಪಯಣ. ಶುಭಾಶಯಗಳು.
ReplyDeleteಕ೦ಗ್ರ್ಯಾಟ್ಸ್ ಕಣ್ರಿ..... ತು೦ಬಾ ಖುಷಿ ಕೊಡುವ ವಿಷಯ ಇದು :)
ReplyDeletehrutpoorvaka abhinandanegalu...vijayashree avare...mattashtu utkrushta krutigala srustiyaagali....
ReplyDeleteananth
ಅಭಿನಂದನೆಗಳು ಮೇಡಮ್,
ReplyDeleteಹೀಗೆ ಮುಂದುವರಿಯಲಿ ನಿಮ್ಮ ಅಭಿಯಾನ.
ವಿಜಯಶ್ರೀ ನಿಮ್ಮ ಲೇಖನ ಪ್ರಕಟವಾದುದ್ದಕ್ಕೆ ಅಭಿನಂದನೆಗಳು...ಮತ್ತೂ ಯಶಸ್ಸು ಕೋರುವ ನಿಮ್ಮ ಮಿತ್ರರು...
ReplyDeleteಆತ್ಮೀಯವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ
ReplyDeleteನಾಗರಾಜ್,
ಪ್ರದೀಪ್,
ಮನಮುಕ್ತಾ,
ಸುಬ್ರಮಣ್ಯ ಮಾಚಿಕೊಪ್ಪ,
ಕಾಕ,
ಸುಬ್ರಹ್ಮಣ್ಯ,
ಸುಧೇಶ್,
ಅನಂತ ಸರ್,
ಶಿವು ಸರ್,
ಜಲನಯನ ಸರ್,
ನಿಮಗೆಲ್ಲರಿಗೂ ಹ್ರುತ್ಪೂರ್ವಕ ವ೦ದನೆಗಳು.
ಅಭಿನ೦ದನೆಗಳು.
ReplyDeleteವಿಜಯ ಕರ್ನಾಟಕ ದಲ್ಲಿನ ಲೇಖನ ನಿಮ್ಮದೇ ಎಂದು ಗೊತ್ತಿರಲಿಲ್ಲ
ReplyDeleteಒಳ್ಳೆಯ ಮಾಹಿತಿ ಇದೆ
ಹೀಗೆ ಇನ್ನೂ ಒಳ್ಳೆಯ ವಿಚಾರಗಳು ಬರುವಂತಾಗಲಿ
congrats madam :)
ReplyDeleteಅಭಿನಂದನೆಗಳು..
ReplyDelete(ನಿಮ್ಮ ಲೇಖನda e-paper copy ಇಟ್ಟುಕೊಳ್ಳಿ ಈಗ ಹಾಕಿರುವ ಫೋಟೋ ಬದಲಾಗಿ)