ಸೋಮು ಒಕ್ಕಾಲಿನಲ್ಲಿ ಬಿಸಿಲಿನಲ್ಲಿ ನಿಂತಿದ್ದ. ''ಎಲ್ಲರೂ ನನ್ನ ಆಲೋಚನೆಗಳನ್ನು ಕದಿಯುತ್ತಿದ್ದಾರೆ. ಪೇಪರ್ ನಲ್ಲೆಲ್ಲಾ ನನ್ನ ಸುದ್ದಿಯನ್ನೇ ಬರೆದಿದ್ದಾರೆ.ನೋಡು ಟೀವಿ ಯವರೆಲ್ಲಾ ನನ್ನ ವಿಷಯವನ್ನೇ ಒದರುತ್ತಿದ್ದಾರೆ. ನನ್ನ ಆಲೋಚನೆಗಳನ್ನೆಲ್ಲಾ ಯಾರೋ ಕಂಟ್ರೋಲ್ ಮಾಡ್ತಾ ಇದ್ದಾರೆ. ಅವರನ್ನು ಆಚೆ ಕಳಿಸು.'' ಪದೇ ಪದೇ ಇದೇ ತರದ ಮಾತುಗಳನ್ನಾಡುತ್ತ ಮನೆಯಲ್ಲಿದ್ದವರ ತಲೆ ತಿಂದಿದ್ದ.
ಇದು 'ಇಚ್ಚಿತ್ತದ' ಲಕ್ಷಣ.
ನಾವೆಲ್ಲಾ ಸಾಮಾನ್ಯವಾಗಿ ಈ ತರದ ವ್ಯಕ್ತಿಗಳಿಗೆ' ಹುಚ್ಚು ಹಿಡಿದಿದೆ ' ಎಂಬುದಾಗಿ ಒಂದೇ ಮಾತಿನಲ್ಲಿ ಹೇಳಿಬಿಡುತ್ತೇವೆ.
ಸ್ಚಿಜೋಫ್ರೆನಿಯ ಅಥವಾ ಇಚ್ಚಿತ್ತ
ಇದೊಂದು ಸಾಮಾನ್ಯವಾಗಿ ಗುರುತಿಸಬಹುದಾದ ಮಾನಸಿಕ ಖಾಯಿಲೆ....... ಇದನ್ನು 'ಒಡೆದ ಮನ ' ಎಂದು ವರ್ಣಿಸಬಹುದು. ಗ್ರಹಿಕೆ, ಆಲೋಚನೆ ಮತ್ತು ಭಾವನೆಗಳಲ್ಲಿ ಅಸ್ತವ್ಯಸ್ತ ವಾಗುವುದು, ಒಂದಕ್ಕೊಂದು ಸಂಬಂಧವಿಲ್ಲದಿರುವುದು ಇದರ ಮುಖ್ಯ ಲಕ್ಷಣ.
ಇಚ್ಚಿತ್ತದ ನಡವಳಿಕೆಯ ಸಾಮಾನ್ಯ ಚಿನ್ಹೆಗಳು ಹೀಗಿವೆ.
* ಅತಿಯಾದ ನಡವಳಿಕೆಗಳು... ಉದಾ .. ಹೆಚ್ಚೆಚ್ಚು ಮಾತು, ನಗು, ಬೈಗುಳ. ಹಿಂಸಾವೃತ್ತಿ, ಉದ್ದೇಶವಿಲ್ಲದೆ ಮಾಡಿದ್ದನ್ನೇ ಮಾಡುವುದು.
* ಖಿನ್ನತೆಯಿ೦ದ ಕುಳಿತಿರುವುದು.ಸ್ವಂತದ ಮತ್ತು ಸುತ್ತಲಿನ ಸ್ವಚ್ಚತೆಯ ಕಡೆ ಗಮನವಿಲ್ಲದಿರುವುದು.
* ಅಸ್ತವ್ಯಸ್ತ ಸ್ಥಿತಿಯಲ್ಲಿ ಘಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ ಇರುವರು. ಉದಾ - ಒಂದೇ ಕಾಲಿನಲ್ಲಿ ನಿಂತುಕೊಂಡಿರುವುದು.ಸೂರ್ಯನ ಕಿರಣಗಳು ಕಣ್ಣು ಕುಕ್ಕುತ್ತಿದ್ದರೂ ಅವನೆಡೆಗೆ ದೃಷ್ಟಿಯಿಟ್ಟು ನೋಡುವುದೂ ...
* ಋಣಾತ್ಮಕ ನಡವಳಿಕೆಗಳು. ಉದಾ ಕೈ ತೋರಿಸು ಎಂದರೆ ತೋರಿಸೊಲ್ಲ ಎಂದು ಕೈ ಬಚ್ಚಿಟ್ಟು ಕೊಳ್ಳುವುದು. ಬಾಯಿ ತೆರೆ ಎಂದರೆ ಬಾಯಿ ಬಿಗಿ ಹಿಡಿದು ಮುಚ್ಚಿಕೊಳ್ಳುವುದು.
*ಕೆಲವೊಮ್ಮೆ ಅನಪೇಕ್ಷಿತ ವಿಧೇಯತೆ. ಎಷ್ಟು ಹೊಡೆದರೂ ಹೊಡೆಸಿಕೊಳ್ಳುವುದು, ಹೇಳಿದಂತೆ ಮಾಡುವುದೂ, ಸೂಜಿಯಿಂದ ನಾಲಿಗೆಯನ್ನು ಚುಚ್ಚುತ್ತೆನೆಂದರೂ... ಸರಿ ಎಂದು ನಾಲಿಗೆಯನ್ನು ಹೊರಚಾಚುವರು.ಚುಚ್ಚಿದರೂ ನಾಲಿಗೆಯನ್ನು ಒಳಗೆಳೆದು ಕೊಳ್ಳಲಾರರು.
*ಬೇರೆಯವರು ಆಡಿದ್ದನ್ನೇ ಪ್ರತಿದ್ವನಿ ಮಾಡುವುದು. ಬೇರೆಯವರ ಭಂಗಿಗಳನ್ನು ಅನುಕರಿಸುವುದು.
* ಕೆಲವೇ ಪದಗಳನ್ನು ಮಾತನಾಡಿಕೊಳ್ಳುತ್ತಿರುವುದು.ಪುನರಾವರ್ತನೆ. ಹೊಂದಾಣಿಕೆ ಯಿಲ್ಲದ ಮಾತುಗಳು.
* ಆಲೋಚನಾ ಗತಿಯಲ್ಲಿ ತಡೆಯಾಗುವುದು. [thought block]
* ಆಲೋಚನಾ ವಿಷಯದಲ್ಲಿನ ಅಸಮಂಜಸತೆ ....
* ಭ್ರಮೆ..
ಇದು ಸಾಮಾನ್ಯವಾಗಿ ಹೆಚ್ಚಿನ ಸ್ಚಿಜೊಪ್ರೆನಿಕ್ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುವ ಲಕ್ಷಣ. ಯಾರೋ ಆಲೋಚನೆಗಳನ್ನು ಕದಿಯುತ್ತಿದ್ದಾರೆನ್ನುವುದೂ, ಆಲೋಚಿಸುವುದನ್ನು ತಡೆಯುತ್ತಿದ್ದಾರೆನ್ನುವುದೂ, ದೂರದರ್ಶನದಲ್ಲಿ ಪ್ರಸಾರ ಮಾಡುತ್ತಿದ್ದಾರೆನ್ನುವುದೂ, ಆಗದವರ್ಯಾರೋ ತನ್ನನ್ನು ಕೊಲ್ಲಲು ಬಯಸಿದ್ದಾರೆನ್ನುವುದೂ, ಯಾರೋ ಪಿತೂರಿ ಮಾಡುತ್ತಿದ್ದಾರೆನ್ನುವುದೂ , ಕಿವಿಯಲ್ಲಿ, ತಲೆಯಲ್ಲಿ, ಎದೆಯಲ್ಲಿ ಅಥವಾ ಹೊಟ್ಟೆಯಲ್ಲಿ ಯಾರೋ ಇಬ್ಬರು ತನ್ನ ಬಗ್ಗೆ ಮಾತಾಡುತ್ತಾರೆನ್ನುವುದೂ.. ಇವರ ದೂರುಗಳಾಗಿರುತ್ತವೆ. ಸಂಶಯ ಪ್ರವೃತ್ತಿ ಹೆಚ್ಚು. ಸಂಗಾತಿಯ ನೈತಿಕತೆಯ ಬಗ್ಗೆ ಸಂಶಯ.
ರುಚಿ , ವಾಸನೆ, ದೃಷ್ಟಿ ಇವುಗಳಿಗೆ ಸಂಬಂಧ ಪಟ್ಟ ಭ್ರಮೆಗಳಿಗಿಂತಲೂ ಶ್ರವಣೆ೦ದ್ರಿಯಕ್ಕೆ ಸಂಬಂಧಿಸಿದ ಭ್ರಮೆಗಳು ಹೆಚ್ಚು.
* ಭೌದ್ಧಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ ಅಸಮರ್ಪಕ ಹೊಂದಾಣಿಕೆ , ತನ್ನನ್ನೇ ಮರೆಯುವುದು..
* ನಿದ್ರಾಹೀನತೆ, ಜಡತೆ, ನೋವುಗಳು, ಆಹಾರ ಸೇವನೆಯಲ್ಲಿ ಅಲಕ್ಷ್ಯ.
ಇಚ್ಚಿತ್ತಕ್ಕೆ ಮುಖ್ಯ ಕಾರಣಗಳೆಂದರೆ,
*ಅತಿಯಾದ ಡೋಪಮೈನ್ ಎನ್ನುವ ನರಚೋದಕದ ಸ್ರವಿಸುವಿಕೆ,
* ಆನುವಂಶಿಕತೆ,
*ನರವ್ಯೂಹಗಳಲ್ಲಿನ ತೊಂದರೆ, ಮೆದುಳಿಗೆ ಪೆಟ್ಟು ಬಿದ್ದಿರುವುದು..ಇತ್ಯಾದಿ
ಹದಿಹರೆಯದಲ್ಲಿ ಹೆಚ್ಚಾಗಿ ಇದು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಬಾಲ್ಯದಲ್ಲಿಯೂ, ವ್ರುದ್ದಾಪ್ಯದಲ್ಲಿಯೂ ಕಾಣಿಸಿಕೊಳ್ಳಬಹುದು.
ಇದರಲ್ಲಿ ಅನೇಕ ವಿಧಗಳಿವೆ.
ಇದರ ನಿವಾರಣೆಗೆ ಔಷಧಗಳೇ ಬೇಕು. ಒಂದು ತಹಬದಿಗೆ ಬರಲು ಆಸ್ಪತ್ರೆ ವಾಸವೂ ಬೇಕಾಗುತ್ತದೆ.
ಈ ರೋಗಿಗಳ ಬಗ್ಗೆ ಸಾಮಾಜಿಕ ಕಾಳಜಿ ಅತ್ಯಗತ್ಯ. ಹುಚ್ಚರೆಂದು ಕಲ್ಲು ಎಸೆಯುವುದು, ಅವರನ್ನು ಕಟ್ಟಿ ಹಾಕುವುದೂ, ಥಳಿಸುವುದೂ ಖಂಡಿತಾ ಮಾಡಬಾರದು. ಆ ಸ್ತಿತಿಯಲ್ಲಿ ಅವರೊಬ್ಬ ವ್ಯಕ್ತಿಯಾಗಿರುವುದಿಲ್ಲ. ತಮ್ಮ ಬಗ್ಗೆ ಏನೇನೂ ಅರಿವಿರುವುದಿಲ್ಲ.ಸಮಾಜದ ಸಹನೆ ಬೇಕು. ಕುಟುಂಬದವರ ಆರೈಕೆ, ಸಹಾಯ , ಸಾಂತ್ವಾನ , ತ್ಯಾಗ ಇವುಗಳಿಂದ ಇಚ್ಚಿತ್ತ ರೋಗಿಗಳು ತಮ್ಮ ಜೀವನವನ್ನು ಪುನಃ ರೂಪಿಸಿಕೊಳ್ಳಬಹುದಾಗಿದೆ.
ವಂದನೆಗಳು.
ಧನ್ಯವಾದಗಳು ವಿಜಯಶ್ರೀ ಮೇಡಮ್. ನೀವು ಇಚ್ಚಿತ್ತ [schizophrenia] ಮಾನಸಿಕ ಕಾಯಿಲೆಯ ಬಗ್ಗೆ ವಿವರರಣೆಯನ್ನ ನೀಡಿದ್ದು ಮಾನಸಿಕ ಕಯಿಲೆಯ ಬಗೆಗಳಬಗ್ಗೆ ತಿಳಿದು ಕೊಳ್ಳಲು ಸಹಕಾರಿಯಾಯಿತು.ಅಂತೆಯೇ ನಾನು ಕೆಲವು ಮಾನಸಿಕ ಕಾಯಿಲೆಗೆ ಮತ್ತು ಮನಸ್ಸಿಗೆ ಸಂಬಂದಿಸಿದ ಪುಸ್ತಕವನ್ನ ಓದಬೇಕೆಂದುಕೊಂಡಿದ್ದೇನೆ ದಯವಿಟ್ಟು ಸರಳವಾಗಿ ಓದಿ ತಿಳಿದುಕೊಳ್ಳಬಹುದಾದ ಪುಸ್ತಕಗಳ ಹೆಸರುಗಳನ್ನ ತಿಳಿಸಿ.
ReplyDeleteಧನ್ಯವಾದಗಳು ವಿಜಯಶ್ರೀ ಮೇಡಮ್. ನೀವು ಇಚ್ಚಿತ್ತ [schizophrenia] ಮಾನಸಿಕ ಕಾಯಿಲೆಯ ಬಗ್ಗೆ ವಿವರರಣೆಯನ್ನ ನೀಡಿದ್ದು ಮಾನಸಿಕ ಕಯಿಲೆಯ ಬಗೆಗಳಬಗ್ಗೆ ತಿಳಿದು ಕೊಳ್ಳಲು ಸಹಕಾರಿಯಾಯಿತು.ಅಂತೆಯೇ ನಾನು ಕೆಲವು ಮಾನಸಿಕ ಕಾಯಿಲೆಗೆ ಮತ್ತು ಮನಸ್ಸಿಗೆ ಸಂಬಂದಿಸಿದ ಪುಸ್ತಕವನ್ನ ಓದಬೇಕೆಂದುಕೊಂಡಿದ್ದೇನೆ ದಯವಿಟ್ಟು ಸರಳವಾಗಿ ಓದಿ ತಿಳಿದುಕೊಳ್ಳಬಹುದಾದ ಪುಸ್ತಕಗಳ ಹೆಸರುಗಳನ್ನ ತಿಳಿಸಿ.
ReplyDeleteಮಹಾಬಲಗಿರಿಯವರೆ..
ReplyDeleteನಿಮಗೆ ನನ್ನ ಬ್ಲಾಗಿಗೆ ಸ್ವಾಗತ.
ನಿಮ್ಮ ಆಸಕ್ತಿ ಮೆಚ್ಚುವ೦ತದ್ದು. ನೀವು ಮಾನಸಿಕ ಸಮಸ್ಯೆಗಳ ಕುರಿತಾಗಿ ಮೀನಗು೦ಡೀ ಸುಬ್ರಹ್ಮಣ್ಯ ಅವರು ಬರೆದ ” ಮನಸ್ಸು ಇಲ್ಲದ ಮಾರ್ಗ ” ಅನ್ನುವ ಪುಸ್ತಕವನ್ನು ಓದಬಹುದು. ಮಾನಸಿಕ ಕಾಯಿಲೆಗಳ ಬಗ್ಗೆ ಸಿ.ಆರ್ ಚ೦ದ್ರಶೇಕರ್ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.
ವ೦ದನೆಗಳು.
schizophrenia ಪದಕ್ಕೆ ಇಚ್ಚಿತ್ತ ಎನ್ನುವ ಸುಂದರ ಕನ್ನಡ ಪದವನ್ನು ರೂಪಿಸಿದ್ದೀರಿ. ಈ ಮಾನಸಿಕ ಕಾಯಿಲೆಯ ಲಕ್ಷಣಗಳನ್ನು ವಿವರವಾಗಿ ತಿಳಿಸಿದ್ದೀರಿ. ಧನ್ಯವಾದಗಳು.
ReplyDelete"ಚುಕ್ಕಿಚಿತ್ತಾರ",ಕೇವಲ ಚುಕ್ಕಿ ಮತ್ತು ಚಿತ್ತಾರಕ್ಕೆ ಸೀಮಿತವಾಗಿರದೆ ಸಾಮಾಜಿಕ ಕಳಕಳಿಯ ವಿಷಯಗಳನ್ನು ಬಿತ್ತರಿಸುವುದನ್ನು ನೋಡಿ ಖುಶಿ ಆಯಿತು.
ReplyDeleteಇಚ್ಚಿತ್ತ..ಕನ್ನದ ಪದ ಭ೦ಡಾರಕ್ಕೆ ಹೊಸ ಸೇರ್ಪಡೆಯೇ? ಅಪರೂಪದ ವಿಚಾರಗಳನ್ನು ಹೊಮ್ಮಿಸುತ್ತ, ಅತ್ತ್ಯುತ್ತಮ ಮಾಹಿತಿಗಳನ್ನು ನೀಡುತ್ತಾ, ನಿಮ್ಮ ತಾಣವನ್ನು ಶ್ರೀಮ೦ತಗೊಳಿಸುತ್ತಿದ್ದೀರಿ. ಶುಭಾಶಯಗಳು ವಿಜಯಶ್ರೀ ಅವರೆ.
ReplyDeleteಅನ೦ತ್
uttama vivaraNe kottiddiri madam,
ReplyDeletedhanyavaada..
ಕಾಕ ಮತ್ತು ಅನ೦ತ ಸರ್,
ReplyDeleteಇಚ್ಚಿತ್ತ ನಾನು ರೂಪಿಸಿದ ಪದ ಖ೦ಡಿತಾ ಅಲ್ಲ. ಯಾರೋ ಮಹಾನುಭಾವರು ರೂಪಿಸಿದ ಪದವನ್ನು ನಾನಿಲ್ಲಿ ಬಳಸಿಕೊ೦ಡಿದ್ದೇನೆ. ನಿಮ್ಮ ಸಾದರದ ಪ್ರತಿಕ್ರಿಯೆಗೆ ನನ್ನ ನಮನಗಳು.
ಆನ೦ದ..
ReplyDeleteಸಮಾಜದಲ್ಲಿರುವ ಪ್ರತಿಯೊಬ್ಬರೂ ಒ೦ದಲ್ಲಾ ಒ೦ದುಕಡೆ ಸಾಮಾಜಿಕ ಕಳಕಳಿ ತೋರಿಸಿಯೇ ತೋರಿಸುತ್ತಾರಲ್ಲವೇ.? ಈ ಮಾರ್ಗದಲ್ಲಿ ನಿಮ್ಮೆಲ್ಲರೊಡಗೂಡಿ ನನ್ನದೊ೦ದು ಚಿಕ್ಕ ಪ್ರಯತ್ನ ಅಷ್ಟೆ..
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.
ದಿನಕರ
ReplyDeleteನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.
Madam,
ReplyDelete''Veronica Decides to Die'' ಎಂಬ ಕಾದಂಬರಿಯಲ್ಲಿ ಈ ಕಾಯಿಲೆ ಬಗ್ಗೆ ವಿವರಿಸಲಾಗಿದೆ
ಅಲ್ಲಿಯೂ ಒಬ್ಬನಿಗೆ ಇಂಥಹ ಕಾಯಿಲೆ ಬಂದು ಆಟ ವಿಚಿತ್ರವಾಗಿ ವರ್ತಿಸುತ್ತಾನೆ
ತುಂಬಾ ಉತ್ತಮ ಬರಹ
ಗುರುಮೂರ್ತಿ..
ReplyDeleteಹೌದೆ.. ಇದರಲ್ಲಿ ಅನೇಕ ವಿಧಗಳಿವೆ. ಕೆಲವು ತರದವುಗಳನ್ನು ಸ೦ಪೂರ್ಣ ಗುಣಪಡಿಸಬಹುದು. ಕೆಲವು ಸಾಧ್ಯವಿಲ್ಲ.
ನಿಮ್ಮ ಅಮೂಲ್ಯ ಪ್ರತಿಕ್ರಿಯೆಗೆ ನಮನಗಳು.
schizophrenia ಖಾಯಿಲೆ ಬಗ್ಗೆ ಉತ್ತಮ ತಿಳುವಳಿಕೆ ನೀಡಿದ್ದೀರಿ..ಕೃತಜ್ಞತೆಗಳು..ನೀವಂದಂತೆ "ಮನಸ್ಸು ಇಲ್ಲದ ಮಾರ್ಗ" ಉತ್ತಮ ಪುಸ್ತಕ.
ReplyDeleteಚುಕ್ಕಿ ಚಿತ್ತಾರ ಮೇಡಂ;ಒಳ್ಳೆಯ ಮಾಹಿತಿಗಳುಳ್ಳ ಸುಂದರ ಬರಹ.ನಿಮ್ಮಿಂದ ಇಂತಹ ಇನ್ನಷ್ಟು ಒಳ್ಳೆಯ ಬರಹಗಳು ಬರಲಿ.
ReplyDeleteನಾರಾಯಣ ಭಟ್ ಸರ್
ReplyDeleteಮತ್ತು
ಡಾಕ್ಟರ್ ಸರ್
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಮೀನಗು೦ಡಿ ಸುಬ್ರಮಣ್ಯರ ಪುಸ್ತಕಗಳು ಉಪಯುಕ್ತವಾದದ್ದು. ನನ್ನ ಹತ್ತಿರ ಅವರ ಎರಡು ಪುಸ್ತಕಗಳಿವೆ.
ReplyDeleteಮಾಹಿತಿಗೆ ಧನ್ಯವಾದಗಳು.
ವಿಜಯಶ್ರೀ,
ReplyDeleteಮಾಹಿತಿಪೂರ್ಣ ಲೇಖನ. "ಇಚ್ಚಿತ್ತ" ಎನ್ನುವ ಹೊಸ ಪದದ ಪರಿಚಯ ಮಾಡಿದ್ದೀರಿ. ಧನ್ಯವಾದಗಳು.
ಕೆಲವರಿಗೆ ಅತಿಯಾದ ಶುಚಿತ್ವದ ಗೀಳೂ ಇರುತ್ತದೆ. ಉದಾಹರಣೆಗೆ ಕೈ ತೊಳೆಯ ಹೋದರೆ ಟೇಪನ್ನು ನೀರು ಹಾಕಿ ತೊಳೆದು ತೊಳೆದು ಕೈ ತೊಳೆಯುವುದು. ಕೈಯನ್ನೇ ಪದೇ ಪದೇ ತೊಳೆಯುತ್ತಿರುವುದು. ಸ್ನಾನಕ್ಕೆ ಹೋದರೆ ಬಚ್ಚಲು ಮನೆಯನ್ನು ಶುಚಿ ಮಾಡಿ ಮಾಡಿ ನಿಧಾನವಾಗಿ ಸ್ನಾನ ಮಾಡುವುದು, ಪಾತ್ರೆ ತೊಳೆಯ ಹೋದರೆ ಗಂಟೆಗಟ್ಟಲೆ ತೊಳೆಯುವುದು...ಇತ್ಯಾದಿ. ಇದೂ ಇದೇ ಮಾನಸಿಕ ಕಾಯಿಲೆಯ ಒಂದು ಅಂಗವಲ್ಲವೇ?
ಸೀತಾರಾ೦ ಸರ್.
ReplyDeleteಮೀನಗು೦ಡಿ ಸುಬ್ರಹ್ಮಣ್ಯ ಅವರ ಮೂರು ಪುಸ್ಥಕಗಳು ನನ್ನಲ್ಲಿವೆ.ಉಳಿದ೦ತೆ ಅವರು ಬೇರೆ ಪುಸ್ತಕಗಳನ್ನು ಬರೆದಿದ್ದಾರಾ ಮಾಹಿತಿ ಇಲ್ಲ.
೧. ಮನಸ್ಸು ಇಲ್ಲದ ಮಾರ್ಗ
೨. ಮಡದಿ ಮತ್ತೊಬ್ಬ ಚಲುವಗೆ
೩. ಈ ವರ್ತನೆಗಳು ನಿಮ್ಮಲ್ಲಿವೆಯೇ..?
ಮೂರೂ ಚನ್ನಾಗಿದೆ.
ನಿಮ್ಮ ಆದರದ ಪ್ರತಿಕ್ರಿಯೆಗೆ ವ೦ದನೆಗಳು.
ತೇಜಸ್ವಿನಿ
ReplyDeleteಗೀಳು ಇಚ್ಚಿತ್ತದ ವಿಧವಲ್ಲ.ಸ್ಕಿಜೊಫ್ರೆನಿಯ ಇರುವವರಿಗೆ ಗೀಳೂ ಇರಬಹುದು. ಆದರೆ ಗೀಳು ಉದ್ವೇಗದ ಲಕ್ಶಣ. ಅತಿಯಾದ ಆತ೦ಕದಿ೦ದ ಗೀಳು ರೋಗ ಶುರುವಾಗುತ್ತದೆ.ನನ್ನ ಹಿ೦ದಿನ ಲೇಖನದಲ್ಲಿ ಗೀಳು ರೋಗದ ಕುರಿತಾಗಿ ವಿವರಿಸಿದ್ದೇನೆ.
ನಿಮ್ಮ ಆಸಕ್ತಿಗೆ ಧನ್ಯವಾದಗಳು.
thumba interesting aagiththu odokke... nange inthaha barahagaLa bagge thumba kuthoohala...
ReplyDeletegood information..
ReplyDeleteಸುಧೇಶ್'thanks..
ReplyDeleteಮನಮುಕ್ತಾ.. thank u
icchita vishayada bagge bahala visheshavaada lekhana kottiddeera.dhanyavaadagalu.
ReplyDeleteಬಹಳ ಉಪಯುಕ್ತೆ ಮತ್ತು ಸರಳವಾಗಿ ತಿಳಿಸಿದ ಪರಿ ಇಷ್ತವಾಯ್ತು ವಿಜಯಶ್ರೀ...
ReplyDeleteಮಾನಸಿಕ ತುಮುಲಗಳು ಮತ್ತು ಲಯತಪ್ಪುವಿಕೆ ಇಘಿಗ ಹೆಚ್ಚಾಗುತ್ತಿದೆಯಂತೆ ಕಾರಣ ಒತ್ತಡಭರಿತ ಜೀವನ ಶೈಲಿ.
ನಾನು ಮೂರ್ನಾಲ್ಕು ಸರ್ತಿ ಕೆಲಸ ನಿಮಿತ್ತ ಡಾ,ಚಂದ್ರಶೇಖರ್ ಅವರನ್ನ ಕಂಡಿದ್ದೆ (ನೀವು ನಿಮ್ಹಾನ್ಸ್ ಡಾಕ್ಟ್ರ ಬಗ್ಗೆ ಹೇಳಿದ್ದಾದ್ರೆ)..ಅವರು ಒಂದು ಮಾತು ಹೇಳಿದ್ರು.. ಸಾಮಾನ್ಯ್ ಮತ್ತು ಮನೋವೈಕಲ್ಯದ ರೋಗಿಗಗಳ ಮಧ್ಯೆಯ ಅಂತರ ವಿವವರಿಸುತ್ತಾ
feelings are similar but the rationale is different..expression is controlled in us..they dont...ಅಂತಾ...ಎಷ್ಟು ಸತ್ಯ ಅಲ್ವಾ..?
ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು. ಮನಃಶಾಸ್ತ್ರ ಮತ್ತು ಮನೋವಿಜ್ಞಾನದ ಇನ್ನಷ್ಟು ವಿಚಾರಗಳನ್ನು ಬರೆಯಿರಿ.
ReplyDelete`ಇಚ್ಚಿತ್ತ'ದ ಬಗ್ಗೆ ಉತ್ತಮ ಮಾಹಿತಿ ನೀಡಿರುವುದಕ್ಕಾಗಿ ಧನ್ಯವಾದಗಳು. ನನ್ನ ಮಗಳು ಸುಷ್ಮ ಸಿಂಧು clinical psychology ಯಲ್ಲಿ M .Sc ಮಾಡುತ್ತಿದ್ದು ಈ ಬಗ್ಗೆ ತಿಳಿಸುತ್ತಿರುತ್ತಾಳೆ. ಉತ್ತಮ ಪುಸ್ತಕಗಳ ಮಾಹಿತಿಯನ್ನೂ ನೀಡಿದ್ದೀರಿ. ವ೦ದನೆಗಳು.
ReplyDeleteschizophrenia ಬಗ್ಗೆ ತುಂಬಾ ಮಾಹಿತಿ ನೀಡಿದ್ದೀರಿ. ಧನ್ಯವಾದ
ReplyDeletethanks to all
ReplyDeleteYou have given very nice information about schizophrenia. I liked the article very much. Even the books written by Dr. subramanyam are very helpful for the common people.
ReplyDeletenanna hattira iruvadu neevu heliruva ondaneya mattu muraneya pustakagalu.
ReplyDeleteavara pustakagalu tumbaa chennaagive.