ಸ್ಯಾಡಿಸಂ
ಮೋಡ ಬಿಕ್ಕಿ ಬಿಕ್ಕಿ ಅತ್ತು
ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತು
ಭೂಮಿ ಮೋಡದ ಕಣ್ಣೀರು ನುಂಗಿ
ಗಹಿ ಗಹಿಸಿ ನಕ್ಕಿತು...!ಅಸ್ತಿತ್ವ ಬೆಳೆಸಿಕೊಂಡಿತು..!
ಪ್ರಲಾಪ...!
''ಚಿರೋಟಿಯಂತ ಕೆನ್ನೆಯವಳೇ
ಕೊಯ್ದಿಟ್ಟ ಮೈಸೂರ್ ಪಾಕಿನಂತ ಹಲ್ಲಿನವಳೇ..
ಹೊತ್ತಿ ಹೋದ ಪೇಣಿಯಂತ ವೇಣಿಯವಳೇ..
ಚಕ್ಕುಲಿಯಂತ ಮುಂಗುರುಳಿನವಳೇ..
ಕ್ಯಾರೆಟ್ ಹಲ್ವದಂತಹ ತುಟಿಯವಳೇ
ನೀನು ವೀಳ್ಯದೆಲೆಯಂತಹಾ ಕಣ್ಣುಗಳಿಂದ ನೋಡಿ
ಮುಗುಳುನಕ್ಕಾಗ ನೀರ್ಗೊಜ್ಜು ಕುಡಿದಂತೆ ಅಮಲೇರಿತು..! ''
ಎಂದು ಅಡುಗೆ ಭಟ್ಟನ ಮಗ ಪ್ರಲಾಪಿಸುತ್ತಿದ್ದ..
ಕ್ರೌರ್ಯ..
ಏನಿದೇನಿದು ..?
ಪದ ಪ್ರಾಸವಿಲ್ಲ
ವ್ಯಾಕರಣ ಬಳಸಿಲ್ಲ
ಛಂದಸ್ಸಿನ ಚಂದವಿಲ್ಲ
ಪ್ರತಿಮಾ ವಿಶೇಷವಿಲ್ಲ
ವ್ಯುತ್ಪತ್ತಿ ಸಾಲದು
ಭಾವುಕತೆ ಕೊಂಚ ಜಾಸ್ತಿಯಾಯ್ತು
ಪಂಚ್ ಇಲ್ಲ ಪನ್ ಇಲ್ಲ
ರೋಮಾಂಚನ ಇಲ್ಲವೇ ಇಲ್ಲ
ಎಂದೆಲ್ಲಾ ಹಾಡಿ ಹೊಗಳಿ
ಕವಿತೆಯೊಂದರ
ಕೊಲೆಮಾಡಿದ
ವಿಮರ್ಶಕ..!
ಸರ್ವರಿಗೂ ಸಂಕ್ರಮಣದ ಹಾರ್ದಿಕ ಶುಭಾಶಯಗಳು
bhattara magana pralaapa sakath.
ReplyDeletenimagu sankramanada haardika shubhashayagalu.
ananth
ಚುಟುಕು ಚನ್ನಾಗಿದೆ........... ಕೊನೆಯ ಚುಟುಕಿನಲ್ಲಿ ಯುತ್ಪತ್ತಿ ಅಂತಾಗಿದೆ.ಅದು ವ್ಯುತ್ಪತ್ತಿ ಅಂತ ಆಗಬೇಕಿತ್ತು ಅಂತ ಅನಿಸ್ತಾ ಇದೆ ನನಗೆ.........
ReplyDelete...... ಶುಭ ಸಂಕ್ರಾತಿ .........
bahala dinagala nantara blog-ge tirugidaaga modalu sikkiddu tamma vinutana chtukugalu.tumbaa khushiyaayitu, tamagu sankramanada shubhaashayagalu.
ReplyDeleteಚಂದದ ಚುಟಕಗಳು.ಸಂಕ್ರಮಣದ ಶುಭಾಶಯಗಳು.
ReplyDeleteವಿಜಯಾ...
ReplyDeleteಸಾಲುಗಳಲ್ಲಿರುವ ಹೊಸತನ ಇಷ್ಟವಾಯಿತು...
ಇಂಥಹ ಪ್ರಯೋಗ ನಡೆಯುತ್ತಿರಲಿ....
ನಿಮಗೂ..
ನಿಮ್ಮ ಕುಟುಂಬಕ್ಕೂ ಸಂಕ್ರಮಣದ ಶುಭಾಶಯಗಳು...
ಚುಟುಕುಗಳೆಲ್ಲವೂ ಚೆನ್ನಾಗಿವೆ...ಸಂಕ್ರಮಣದ ಶುಭಾಶಯಗಳು.
ReplyDeleteಚೆನ್ನಾಗಿವೆ ಚುಟುಕುಗಳು. ನಿಮಗೂ, ಮನೆಯವರಿಗೆಲ್ಲರಿಗೂ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು!!
ReplyDeleteWish you all Happy Sankranti.
ReplyDeleteತಮಗೂ ಮತ್ತು ತಮ್ಮ ಮನೆಯವರಿಗೂ ಸಂಕ್ರಾಂತಿಯ ಶುಭಾಶಯಗಳು
ReplyDeleteಅಸ್ಥಿತ್ವ ಅಲ್ಲ, ಅಸ್ತಿತ್ವ ಎಂಬುದು ಸರಿಯಾದ ಪ್ರಯೋಗ.(ನೀವು ಎರಡು ಕಡೆಯೂ ಅಸ್ಥಿತ್ವ ಎಂದು ಬಳಸಿರುವ ಕಾರಣ ಅಚ್ಚಿನ ತಪ್ಪಲ್ಲ ಎಂದು ಭಾವಿಸಿದ್ದೇನೆ.) ಸ್ವಾರಸ್ಯಕರ ಕಲ್ಪನೆಯ ಚುಟುಕಗಳು.
ReplyDeletenice... 1st 2 chutukugaLu istavaadavu....
ReplyDeletechutuku tumbaa chennaagide....super..
ReplyDeletenimagu habbada shubhaashaya...
ಏಕೆ ಮೋಡ ಅಳುತ್ತಿದೆ,
ReplyDeleteಅದಕ್ಕೆ ಎಲ್ಲರಿಗಿಂತ ಮೋದಲು ಸಂಕ್ರಾತಿಯ ಎಳ್ಳು ಬೆಲ್ಲ ಬೇಕಂತೆ
ಅಯ್ತು ನಾವೆಲ್ಲಾ ಕೊಡೋಣ, ಪಾಪ!
ಎಳ್ಳು ಬೆಲ್ಲ ತಿಂದು ಮಳೆಗಾಲಕ್ಕೆ ಒಳ್ಳೋಳ್ಳೆ ಮಳೆ ಸುರಿಸು
ಅಂತ ಅದಕ್ಕೆ ತಿಳಿಸೋಣ
ಇನ್ನೇನು ಭೊಮಿ ಹೊಸ ದಿರಿಸು ತೊಟ್ಟು ಬರುತ್ತಾಳೆ ಅಂತ ಸಂತಸಪಡಲು ಹೇಳೋಣ
ಚುಟುಕುಗಳು ಚನ್ನಾಗಿವೆ
ಸಂಕ್ರಾತಿ ಹಬ್ಬದ ಶುಭಾಷಯಗಳು
ಮೊದಲನೆಯ ಚುಟುಕು ತುಂಬಾ ಚೆನ್ನಾಗಿದೆ. ಪ್ರಕೃತಿಯ ಈ ಪರಿಪಾಠ ಎಂಥ ವಿಪರ್ಯಾಸವಲ್ಲವೇ
ReplyDeleteವಿಜಯಶ್ರೀ...ಅನಿರೀಕ್ಷಿತ ರೀತಿಯ ಶಾಕುಗಳ ಪಾಕ ತಿಂದೂ ತಿಂದೂ ..ಡರ್ರ್..ತೇಗು ಬಂತು...ಹಹಹ ಭಟ್ಟನಪ್ರಲಾಪದ ಅಲಾಪನೆ ಒಂದು ರೀತಿಯ ಪಾಕವಾದರೆ..ವಿಮರ್ಶಕನ ಕ್ರೌರ್ಯದ ಕಡುಬು ಮತ್ತೊಂದು...ಹಹಹ ಪದ ಪ್ರಾಸ...??!! ನಮಗೆ ನಮ್ಮ ಭಾವ ಪ್ರಕಟಣೆ ಮುಖ್ಯ..ನಿಜ..ಅಲ್ಲವೇ..?? ಚನ್ನಾಗಿವೆ ಎಲ್ಲಾ ಮುಟುಕು-ಕುಟುಕುಗಳು.
ReplyDeleteಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ವ೦ದನೆಗಳು.
ReplyDeleteತಪ್ಪು ತಿದ್ದಿ ಬರೆದಿದ್ದೇನೆ..
ಮತ್ತೊಮ್ಮೆ ಎಲ್ಲರಿಗೂ ಸ೦ಕ್ರಮಣದ ಶುಭ ಹಾರೈಕೆಗಳು.
superro... super... bhatru maga joridna :)
ReplyDeleteಚುಕ್ಕಿಚಿತ್ತಾರ..,
ReplyDeleteಮೊದಲನೆಯದು ವಿಶೇಷವಾಗಿದೆ..
ಮಳೆ ಬಂದು ಇಳೆ ತಮ್ಪಾಯಿತೆಂದು ಕೇಳಿದ್ದೆ..
ಇದು ಒಂಥರಾ ಚೆನ್ನಾಗಿದೆ..
ಶುಭಾಶಯಗಳು..
ನೀವು ಚಿರೋಟಿ ,ಮೈಸೂರ್ ಪಾಕು, ಪೇಣಿ, ಚಕ್ಕುಲಿ ಕ್ಯಾರೆಟ್ ಹಲ್ವ ಮುಂತಾವುಗಳನ್ನು ನೆನಪಿಸಿ ನನ್ನ ನಾಲಗೆ ತಿನ್ನಬೇಕೆಂದು ಚಪ್ಪರಿಸುತ್ತಿದೆ....... ನೀವು ಚಿರೋಟಿ ,ಮೈಸೂರ್ ಪಾಕು, ಪೇಣಿ, ಚಕ್ಕುಲಿ ಕ್ಯಾರೆಟ್ ಹಲ್ವ ಮುಂತಾವುಗಳನ್ನು ನೆನಪಿಸಿ ನನ್ನ ನಾಲಗೆ ತಿನ್ನಬೇಕೆಂದು ಚಪ್ಪರಿಸುತ್ತಿದೆ....... ಆಹಾ
ReplyDeleteನೀವು ಚಿರೋಟಿ ,ಮೈಸೂರ್ ಪಾಕು, ಪೇಣಿ, ಚಕ್ಕುಲಿ ಕ್ಯಾರೆಟ್ ಹಲ್ವ ಮುಂತಾವುಗಳನ್ನು ನೆನಪಿಸಿ ನನ್ನ ನಾಲಗೆ ತಿನ್ನಬೇಕೆಂದು ಚಪ್ಪರಿಸುತ್ತಿದೆ....... ಆಹಾ
ReplyDeleteಚ೦ದದ ಸಾಲುಗಳು
ReplyDelete1st and 2nd are really nice... :))
ReplyDeleteಮೊದಲನೆಯದು ಚೆನ್ನಾಗಿಯೇ ಕುಟುಕಿದೆ !,ಎರಡನೆಯದು ಪಂಚಿಂಗ್ ...ಸೊಗಸಾದ ಮೊಟಕುಗಳು .
ReplyDeleteಕ್ರೌರ್ಯ: Thumbaa Channagide..
ReplyDeleteವಿಜಿ ,
ReplyDeleteಸಖತ್ ಚೆನಾಗಿದ್ದು ಚುಟುಕಗಳು . ಹೊಸ ಕಲ್ಪನೆ , ಹೊಸ ರೀತಿ . ಎಳ್ಳು ಬೆಲ್ಲದ ಹಾಗೆಯೇ , ಚಿಕ್ಕದಾದರೂ ಚಪ್ಪರಿಸುವಂಥಾ ರುಚಿ !!
ಇನ್ನಷ್ಟು ಬರಲಿ
modalaneyadu tumba ishta aytu
ReplyDeletesundara chutukugalu