ಅವಿತಿಟ್ಟುಕೊಳ್ಳಲಾರದೆ
ಕಲ್ಪನಾ ಸಾಗರದಲೆಯೊಂದು
ಬಂದು ಮಾನಸ ದಡಕ್ಕಪ್ಪಳಿಸಿ
ಹೆಜ್ಜೆ ಗುರುತನೊಂದುಳಿಸಿ ಕವಿತೆಯಾಯ್ತು
ಭಾವಾ೦ಭುದಿಯಲಿ ತೇಲಿ ತೇಲಿ
ಛ೦ದಸ್ಸಿನ ಚಂದವಿರದಿದ್ದರೂ
ವ್ಯಾಕರಣದ ಹಂಗಿರದಿದ್ದರೂ
ಮನಕ್ಕೊಪ್ಪುವ ಭಾವಗೀತೆಯಾಯ್ತು
ದಡವನಪ್ಪಿದ್ದು ಲವಣವೋ ಹವಳವೋ
ಮರಳೋ ಹರಳೋ ಶಂಖವೋ ಶೃ೦ಖಲೆಯೊ
ತಬ್ಬಿದವನಿಗೆ ಗೊತ್ತು
ಅಂದವೋ ಅನುಬಂಧವೋ
ಚಂದವೋ ಸ್ವಚ್ಚಂದವೋ ಸ್ಮೃತಿಯೋ ವಿಸ್ಮೃತಿಯೋ
ಸವಿದವನಿಗೆ ಗೊತ್ತು
ಕಲ್ಪನೆಗಿದೆಯೇ ಎಲ್ಲೆ
ಹೃದಯ ಪಲುಕಿದಂತೆಲ್ಲಾ
ತೆರೆಯಾಗಿ ಅಲೆಯಾಗಿ ದಿಬ್ಬಣದಂತೆ
ಮೆರವಣಿಗೆ ಹೊರಡುವುದರ ಪರಿಗೆ
ಬೆರಗಾಗಿ ಮೈಮರೆವಾಗಿ
ಚಲಿಸಲಾಗದೆ ಹಾಗೇ ಶಿಲೆಯಾದೆನಲ್ಲಿಯೇ ..!
"ದಡವನಪ್ಪಿದ್ದು ಲವಣವೋ ಹವಳವೋ ಮರಳೋ ಹರಳೋ ಶಂಖವೋ ಶೃ೦ಖಲೆಯೊ 'ತಬ್ಬಿದವನಿಗೆ' ಗೊತ್ತು"
ReplyDelete---
ವಾವ್,
ತುಂಬಾ ಹಿಡಿಸಿತು.. :)
ಕವಿತೆಯೋ ಭಾವಕ್ಕೆ ಹಿಡಿದ ಕನ್ನಡಿಯೋ
ReplyDeleteಕವಯಿತ್ರಿಗೆ ಸಾಹಿತ್ಯಸಾಗರದಿ ಸಿಕ್ಕ ಮಾಣಿಕ್ಯವೋ
ಕವಯಿತ್ರಿಯಾ ಕಲ್ಪನೆ ಕಂಡು ಹೀಗೂ ಕವಿತೆಯ
ಬರೆಯಬಹುದೇ ಯಂಬ ಅಚ್ಚರಿಯಾಯ್ತು
ನಿಮ್ಮ ಕವನ ಹುಟ್ಟಿದ ಪರಿ ಇಷ್ಟ ಆಯಿತು...:) ದಡವನಪ್ಪಿದ್ದು ಹವಳ ಎ೦ದೆನಿಸುತ್ತದೆ ನನಗೆ ಈ ಕವನ ಓದಿದ ಮೇಲೆ :)
ReplyDeletechendada kavite... :)
ReplyDeleteದಡವನಪ್ಪಿದ್ದು ಹವಳವೆನ್ನುವದರಲ್ಲಿ ಏನೂ ಸಂದೇಹವಿಲ್ಲ. ಉತ್ತಮ ಕಲ್ಪನೆಗೆ ಉತ್ತಮ ಛಂದಸ್ಸನ್ನು ಜೋಡಿಸಿ, ಖುಶಿಯಾಗುವಂತಹ ಕವನವನ್ನು ನೀಡಿದ್ದೀರಿ.
ReplyDeletesumdara kavana!
ReplyDeleteತುಂಬಾ ಸುಂದರ ಕವಿತೆ..
ReplyDeleteವಿಜಯಶ್ರೀ ಅವರೇ.
ReplyDelete"ದಡವನಪ್ಪಿದ್ದು ಲವಣವೋ ಹವಳವೋ ಮರಳೋ ಹರಳೋ ಶಂಖವೋ ಶೃ೦ಖಲೆಯೊ 'ತಬ್ಬಿದವನಿಗೆ' ಗೊತ್ತು"
ಎನ್ನುವ ಸಾಲುಗಳು ತುಂಬಾ ಮುದ್ದಾಗಿವೆ .ಒಂದು ಚೆಂದಾದ ಕವಿತೆ ಬರೆದು ಕೊಟ್ಟ ನಿಮ್ಮಗೆ ಅನಂತ ಧನ್ಯವಾದಗಳು
ವಿಜಯಾ...
ReplyDeleteಸಹಜ ಸುಂದರ ... ಅರ್ಥಪೂರ್ಣ.....ಸಾಲುಗಳು..!!
ಇಷ್ಟವಾಯ್ತು.. !!
ಮೇಡಮ್,
ReplyDelete"ಚಂದವೋ ಸ್ವಚ್ಚಂದವೋ ಸ್ಮ್ರುತಿಯೋ ವಿಸ್ಮ್ರುತಿಯೋ
ಸವಿದವನಿಗೆ ಗೊತ್ತು"....
ಹಾಗೆ ಈ ಕವನವೂ ಇಷ್ಟವಾಯಿತು.
ಚಂದವೋ ಸ್ವಚ್ಚಂದವೋ ಸ್ಮ್ರುತಿಯೋ ವಿಸ್ಮ್ರುತಿಯೋ
ReplyDeleteಸಾಲುಗಳಲ್ಲಿ ಅದು ಸ್ಮೃತಿ ಅಂತ ಅಗಬೇಕಲ್ವ?
ನನಗೆ ಹಾಗೆ ಅನಿಸತ್ತೆ
ಸುಂದರ ಕವನ
ದಡವನಪ್ಪಿದ್ದು ಲವಣವೋ ಹವಳವೋ
ReplyDeleteಮರಳೋ ಹರಳೋ ಶಂಖವೋ ಶೃ೦ಖಲೆಯೊ
ತಬ್ಬಿದವನಿಗೆ ಗೊತ್ತು--- ee saalu tumba istavaaytu
super kavana
ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು.
ReplyDeleteಗುರುಮೂರ್ತಿಯವರೆ..
ತಪ್ಪು ಸರಿಪಡಿಸಿದ್ದೇನೆ..:)
ಕವಿತೆ ಹುಟ್ಟುವ ಪರಿಯ ವರ್ಣನೆ ಸೊಗಸಾಗಿದೆ. ಕವಿತೆಯೂ ಸೂಪರ್.
ReplyDeleteದಡವನಪ್ಪಿದ್ದು ಲವಣವೋ ಹವಳವೋ
ReplyDeleteಮರಳೋ ಹರಳೋ ಶಂಖವೋ ಶೃ೦ಖಲೆಯೊ
ತಬ್ಬಿದವನಿಗೆ ಗೊತ್ತು
wov wov very nice
ವ್ಯಾಕರಣದ ಹಂಗಿರದಿದ್ದರೂ
ReplyDeleteಮನಕ್ಕೊಪ್ಪುವ ಭಾವಗೀತೆಯಾಯ್ತು
NICE ONE!!!
sundaravaada salugalu... very nice
ReplyDeletekavite huttuva prakriyeya sutta heneda sundara shabda jaala manavanna aralisitu. tumbaa adbhuta kavana
ReplyDeleteಚುಕ್ಕಿ ಚುಕ್ಕಿ ಸೇರಿ ಚಿತ್ತಾರವಾಗಿದೆಯಿಲ್ಲಿ
ReplyDeleteಹೆಕ್ಕಿ ಹೆಕ್ಕಿ ಕಾಳು ಬಿತ್ತಾದರಾಗುವುದಲ್ಲಿ
ಒಂದು ಕವನ..ಮತ್ತೊಂದು ದವಸಕಣ...
ವಿಜಯಶ್ರೀ...ಆಶ್ಚರ್ಯಕಾದಿತ್ತು ನನಗೆ ಎರೆಡೆರಡು ಕವನಗಳ ನಿಮ್ಮ ಬ್ಲಾಗ್..ಎರಡಕ್ಕೂ ನಮೂದಿಸ್ತಿದ್ದೇನೆ,,ಪ್ರತಿಕ್ರಿಯೆ..