ಈ ಸಮಯದಲ್ಲಿ ನೀವೇನಾದರೂ ಮಲೆನಾಡಿನ ಕಡೆ ಹೋದರೆ ಅಲ್ಲೆಲ್ಲಾದರೂ ನಿಮಗೆ ಕಬ್ಬಿನ ರಸದ ಸುವಾಸನೆ,ಬೆಲ್ಲದ ನರುಗಂಪು ಗಾಳಿಯಲ್ಲಿ ತೇಲಿ ಬಂದು ನಿಮ್ಮ ನಾಸಾಗ್ರಗಳಲ್ಲಿ ಪ್ರವೇಶಿಸಿ ಮನಸ್ಸಿಗೆ ಆನಂದಾನುಭೂತಿಯನ್ನು ಕರುಣಿಸಿತೆಂದರೆ ಹತ್ತಿರದಲ್ಲೆಲ್ಲೋ ಆಲೆ ಮನೆ ಇರುವ ಸಾಧ್ಯತೆ ಇದ್ದೇ ಇದೆ ಎಂದರ್ಥ.
ಆಲೆಮನೆ ಅದೊಂದು ಹಬ್ಬ. ಊರಕಡೆ ಯಾರ ಮನೆಯಲ್ಲಾದರೂ ಆಲೆಮನೆ ಶುರುವಾಯಿತೆಂದರೆ ಬಂಧು ಬಳಗದವರನ್ನು, ಪರಿಚಯಸ್ತರನ್ನು ಕರೆದು ಹಬ್ಬದ ರೀತಿಯಲ್ಲಿ ಸಂಭ್ರಮಿಸುವುದು ಈಗಲೂ ಇದೆ. ಆಲೆಮನೆಯಲ್ಲಿ ಹಾಲು ಬೆಲ್ಲದ ಜೊತೆಗೆ ಮಂಡಕ್ಕಿ ಕಂಬಳ, ಬೋಂಡದಾ ಕಂಬಳ ಇತ್ಯಾದಿಗಳನ್ನೂ ಉತ್ಸಾಹೀ ಯುವಕರು ಹಮ್ಮಿಕೊಳ್ಳುವುದುಂಟು ಕೆಲವೆಡೆ..
ಈಗೆಲ್ಲಾ ಆಲೆಮನೆಗಳಲ್ಲಿ ಆಧುನಿಕ ಯಂತ್ರಗಳನ್ನು ಬಳಸಿ ಕೆಲಸವನ್ನು ಸುಲಭೀಕರಿಸಿ ಕೊಳ್ಳಲಾಗುತ್ತಿದೆ.ಆದರೆ ಕೋಣ ಕಟ್ಟಿ ''ಆಲೆಕಣೆ '' ತಿರುಗಿಸುವ ಆ ಒರಿಜಿನಲ್ ಆಲೆಮನೆ ಮಾತ್ರಾ ಒಂದು ರೀತಿಯ ಆಹ್ಲಾದ ಉಂಟುಮಾಡುತ್ತದೆ. ಒಂದು ಊರಿಗೆ ಕಣೇ ಬಂತೆಂದರೆ ಆ ಊರವರೆಲ್ಲರಿಗೂ ಆಲೆಮನೆಯ ಸಂಭ್ರಮ.ಈಗೀಗ ಕೋಣ ಸಾಕುವವರೂ ಕಡಿಮೆಯಾಗಿದ್ದಾರೆ. ಮತ್ತು ಕೋಣ ಕಟ್ಟಿದರೆ ಬಿಸಿಲಿನಲ್ಲಿ ಕೊಣಕ್ಕೆ ಆಯಾಸವಾಗುತ್ತದೆಂಬ ಕಾರಣಕ್ಕೆ ಸಂಜೆ ತಂಪು ಹೊತ್ತಿನಲ್ಲಿಯೇ ಕೆಲಸ ಮಾಡಬೇಕು. ರಾತ್ರಿಯಿಡೀ ಕೆಲಸ. ಕ್ರಷರ್ ನದು ಆ ತೊಂದರೆ ಇಲ್ಲ..
ಆಲೆ ಮನೆಯ ಕೆಲವು ಫೋಟೋಗಳು
ಕಬ್ಬಿನ ಗದ್ದೆ ..
ಕೋಣ ಕಟ್ಟಿದ ಆಲೆ ಕಣೆ
''ಹೊಯ್ ''ಎನ್ನುತ್ತಾ ಕೋಣ ಹೊಡೆಯುವುದು..ನೋಡುವುದು ಮಜವಾಗಿರುತ್ತದೆ. ಆಲೆ ಮನೆಗೆ ಹೋದರೆ ಸ್ವಲ್ಪ ಸಮಯ ಕೋಣ ಹೊಡೆದು ಚಟ ತೀರಿಸಿಕೊಳ್ಳುವವರೂ ಇದ್ದಾರೆ. ಕಬ್ಬಿನ ರಸ ಬಾನಿಗೆ ಬಂದು ಬೀಳುವುದು
ಆಲೆ ಒಲೆ, ಕೊಪ್ಪರಿಗೆ ಮತ್ತು ಬೆಲ್ಲದ ಪಾಕ ನೋಡುತ್ತಿರುವುದು .
ಬೆಲ್ಲ ಪಾಕ ಬಂದಿದೆಯಾ ನೋಡಲು ಆಲೆಮನೆ ಗಳಲ್ಲಿ ಕೆಲ ಸ್ಪೆಶಲಿಷ್ಟರೂ ಇರುತ್ತಾರೆ.ಇಲ್ಲದಿದ್ದಲ್ಲಿ ಬೆಲ್ಲ ಅ೦ಟಾಗಿ ಬಿಡುವ, ಹೊತ್ತಿಹೋಗುವ ಪ್ರಸಂಗಗಳೂ ಇಲ್ಲದಿಲ್ಲ. ಬೃಹದಾಕಾರದ ಆಲೆ ಒಲೆಗೆ ಸಾಕಷ್ಟು ಬೆಂಕಿ ಹಾಕಲು ದೊಡ್ಡ ದೊಡ್ಡ ಕುಂಟೆಗಳನ್ನು ಬಳಸುತ್ತಾರೆ. ಕೊಪ್ಪರಿಗೆಯಲ್ಲಿ ನೊರೆ ಬೆಲ್ಲ
ಪಾಕದ ಮರಿಗೆ
ಆಲೆ ಮನೆಯಲ್ಲಿ ಕಬ್ಬಿನ ಹಾಲು ಕುಡಿಯುವುದು, ನೊರೆ ಬೆಲ್ಲ ನೆಕ್ಕುವುದು ಅಲ್ಲಿಗೆ ಹೋದವರ ಖಾಯಂ ಕೆಲಸ. ಮಾವಿನ ಮಿಡಿ ಉಪ್ಪಿನಕಾಯಿ ಜೊತೆಗೆ,ಶುಂಟಿ ರಸದ ಜೊತೆಗೆ ಹಾಲು ಕುಡಿಯುವುದು ಕೆಲವರ ಖಯಾಲಿ.
ತುಂಬಾ ಚೆನ್ನಾಗಿವೆ ಚಿತ್ರಗಳು... ನಮ್ಮ ಅಜ್ಜನ ಮನೆಯಲ್ಲೂ ಆಲೆ ಮನೆ ಇತ್ತು... ರಜೆ ಬಂದರೆ ನಮಗೆ ಒಂದು ರೀತಿ ಹಬ್ಬ ಇದ್ದ ಹಾಗೆ ಇತ್ತು..... ನಮ್ಮೊರನ್ನು ನೆನಪಿಸಿತು ನಿಮ್ಮ ಲೇಖನ ಧನ್ಯವಾದಗಳು
ReplyDeleteThumbaa Channagide.. Matte hale halliya nenapugalu....
ReplyDeleteE sala naany alemane bagge bareyo heli photo ella tagandu banidde .. neevu bardbitri .. hoglibidi .. ottinalli sandesha onde ..
ReplyDelete.. aalemane sooper ..
ವಿಜಯಶ್ರೀ,
ReplyDeleteಅಲೆಮನೆಯಲ್ಲಿಯೇ ಕಬ್ಬಿನ ಹಾಲು ಕುಡಿದಷ್ಟು ಖುಶಿಯಾಯಿತು. ಫೋಟೋ ಹಾಗು ವಿವರಣೆ ಬಲು ಸೊಗಸಾಗಿವೆ.
ವಿಜಿ ,
ReplyDeleteಆಲೆಮನೆ ನೆನಪು ಮಾಡ್ದೇ ಮತ್ತೆ ನೀನು !ಅದರಲ್ಲೂ ಬಿಸಿ ಬಿಸಿ ನೊರೆಬೆಲ್ಲ..... ಆಹಾಹಾ ಮೂಗಲ್ಲಿ ಪರಿಮಳ ತುಂಬಿದಂಗೆ ಆಗ್ತಿದ್ದು ನಂಗೆ ! ಮಾಹಿತಿ, ಫೋಟೋ ಚೆನಾಗಿದ್ದು.
ನಾನು ಬ್ಲಾಗ್ ಬರೆಯಕೆ ಶುರು ಮಾಡಿದ ಹೊಸದರಲ್ಲಿ "ಆಲೆಮನೆ" ಬಗ್ಗೆ ಬರ್ದಿದ್ದಿ. ಮಾರ್ಚ್ ೧೨, ೨೦೦೮ ರ ಪೋಸ್ಟ್. ಲಿಂಕ್ ಹಾಕಲೇ ಅಗ್ತಾ ಇಲ್ಲೆ ನಂಗೆ ಇಲ್ಲಿ . ಏನೋ ಪ್ರಾಬ್ಲಂ . ಅದನ್ನೂ ಓದಿ ನೋಡು .
ನಿಜವಾಗಿಯು ತುಂಬಾ ದನ್ಯವಾಗಳು. ಕಭ್ಬಿನ ರಸ , ಬೆಲ್ಲದ ಸವಿ ಸವಿ ನೆನಪು ......
ReplyDeleteಹೌದು ಹೌದು ಆಲೆಮನೆಗಳು ಚನ್ನಾಗಿರುತ್ತವೆ. ನಾನೂ ಇಲ್ಲಿ ಹೋಗ್ತಿದ್ದೆ.
ReplyDeleteಚಿತ್ರ-ಲೇಖನ ಎರಡೂ ಚೆನ್ನಾಗಿದೆ.
ReplyDeleteuttama maahiti lekhana...bellada ruchi baayi neeroodisidarooo, bele baayi onagisuttade..
ReplyDeleteshubhashayagalu
ananth
ನೊರೆಬೆಲ್ಲ ತಿ೦ದಿದ್ದು,ಕಬ್ಬಿನಹಾಲು ಕುಡಿದಿದ್ದು, ಕಬ್ಬು ತಿ೦ದಿದ್ದು, ಎಲ್ಲ ಒ೦ದು ಸಲ action replay ...ಆತು. :)
ReplyDeleteವಿಜಯಶ್ರಿ ನನ್ನ ಮಂಡ್ಯದ ವಿ.ಸಿ.ಫಾರಂ ನ ನೌಕರಿ ದಿನಗಳು ನೆನಪಾದವು ನಿಮ್ಮ ಚಿತ್ರಗಳನ್ನ ಮತ್ತು ಕಾಮೆಂಟರಿ ಓದಿ...ಹೌದು ಬಿಸಿ ಬಿಸಿ ಬೆಲ್ಲದ ಸವಿಯೋದೆ ಒಂದು ಮಜಾ...
ReplyDeleteVery nice pictures and article about alemane.
ReplyDeleteಚ೦ದದ ಚಿತ್ರಗಳ ಜೊತೆಗೆ ಲೇಖನ ಚೆನ್ನಾಗಿದೆ
ReplyDeleteale mane chitradalli nodidde... savivaravaagi barediddeera... thumba thanks :)
ReplyDeletebaayalli neeru kooda banthu :)
ವಿಜಯಾ..
ReplyDeleteನಿಮ್ಮ ಲೇಖನ ಓದಿ ಊರಿನ ಆಲೆ ಮನೆ ನೆನಪಾಯಿತು..
ಈಗಲೂ ಆಗುತ್ತದೆ..
ಆದರೆ ಕೋಣಗಳಿಲ್ಲ...
ಇಲೆಕ್ಟ್ರಿಕ್ ಮಷಿನ್ನುಗಳಿಂದ...
ಎಲ್ಲವೂ ವ್ಯಾಪಾರಿಕರಣ.
ಮೊದಲಿನ ಸಡಗರ ಸಂಭ್ರಮಗಳಿಲ್ಲ...
ನಾವು ಆಧುನಿಕರಾಗಿ ಬಹಳಷ್ಟು ಖುಶಿ..ಸಂತೋಷ.. ಸಂಭ್ರಮಗಳನ್ನು ಕಳೆದುಕೊಂಡಿದ್ದೇವೆ...
ಚಂದದ ಚಿತ್ರ ಲೇಖನ... ಅಭಿನಂದನೆಗಳು..
ಹಳ್ಳಿಯಲ್ಲಿರುವವರು ಸಾಮಾನ್ಯವಾಗಿ ಆಲೆಮನೆ ನೋಡಿರುತ್ತಾರೆ.
ReplyDeleteಪೇಟೆಯಲ್ಲಿಯೇ ಹುಟ್ಟಿ ಬೆಳೆದ ಜನಕ್ಕೆ ಆಲೆಮನೆ ನೋಡುವ ಸೌಭಾಗ್ಯ ಸಿಕ್ಕುವುದು ಕಡಿಮೆ..
ಅದರ ಸುಖವನ್ನು ಅನುಭವಿಸಿಯೆ ಅರಿಯಬೇಕು..
ಆತ್ಮೀಯವಾಗಿ ಪ್ರತಿಕ್ರಿಯಿಸಿದ
ಮನಸು,
ಮನು,
ಸುನಾಥ್ ಕಾಕ,
ಚಿತ್ರಾ,
ಆಶಾ,
ಸುಬ್ರಮಣ್ಯ ಮಾಚಿಕೊಪ್ಪ,
ನಾರಾಯಣ್ ಭಟ್ ಸರ್,
ಅನಂತ ಸರ್,
ಮನಮುಕ್ತಾ,
ಜಲನಯನ ಸರ್,
ಮೇರಿ,
ದಿಗ್ವಾಸ್,
ಸುಧೇಶ್,
ಪ್ರಕಾಶಣ್ಣ,
ಎಲ್ಲರಿಗೂ ಧನ್ಯವಾದಗಳು.
ಶ್ರೀಧರ್- ನೀವೂ ನಿಮ್ಮ ಬ್ಲಾಗಿನಲ್ಲಿ ಚಿತ್ರಗಳನ್ನು ಹಾಕಿ.. ಧನ್ಯವಾದಗಳು.
ನನಗಂತೂ ಆಲೆಮನೆಯ ದರ್ಶನ ಆಗುತ್ತಲೇ ಇರುತ್ತದೆ, ಅದರ ವಿವರಣೆ ಸೊಗಸಾಗಿತ್ತು.
ReplyDeleteChennagide photos mattu lekhana..
ReplyDeleteNanagu aalemene andre tumba ishta.
Adakke sannavaliddaga friends maneya alemeneyannu miss maadkotiralilla :)
chukki chittaara ravare,nimma lekhana odidaaga baalyadalli namma oorige hoguvaaga, dariyalli siguttidda aalemaneya savinenapu marukalisi khushiyaayitu.dhanyavaadagalu.
ReplyDeleteaale-mane tumba channagide... :)
ReplyDeleteನಮ್ಮ ಕಡೆ ಬೇರೆ ತರಹದೆ ಆಲೆಮನೆಗಳಿವೆ..
ReplyDeleteಈ ತರಹದವನ್ನು ತಿಳಿಸಿದ್ದಕ್ಕೆ ಧನ್ಯ್ಯವಾದ..
ಇನ್ನು ಬೇರೆ ತರಹದ ಆಲೆಮನೆ ಬಗ್ಗೆ ಯಾರೋ ಬ್ಲಾಗ್ ನಲ್ಲಿ ಬರೆದಿದ್ದರು.. ಕ್ಷಮಿಸಿ ಬ್ಲಾಗ್ ವಿಳಾಸ ನೆನಪಿಲ್ಲ..
baayalli neeruuuuuuu..... aalemaneya nenapu.....
ReplyDelete