Tuesday, December 28, 2010

ನನಗೂ ಜ್ಞಾನೋದಯ ಆಯ್ತು....!!!!

ನಾನು  ಹೋಳಿಗೆ ಮಾಡಿದೆ....!! 

ಇದೇನ್ಮಹಾ..? ಹೋಳಿಗೆ ಎಲ್ಲರೂ ಮಾಡ್ತಾರೆ.ನಾನೂ ಮಾಡ್ತೇನೆ.ನಮ್ಮಮ್ಮನೂ ಮಾಡ್ತಾರೆ... ಅಂತ ಅಂದುಕೊಳ್ತೀರೇನೋ ?


ಈ ಮೊದಲೂ ಹೋಳಿಗೆಯನ್ನು ನಾನು  ಮಾಡಿದ್ದೆ .ಬೇರೆ ತರದ ಅಡುಗೆಯನ್ನೂ ಮಾಡ್ತೇನೆ.  ಚೆನ್ನಾಗಿ  ಇರುತ್ತದೆ  ಎಂದು ತಿ೦ದವರು ಹೇಳುತ್ತಾರೆ....!  ಅಂದರೆ ಸಾಂಬಾರು ಸಾಂಬಾರಿನಂತೆಯೇ, ಉಪ್ಪಿನಕಾಯಿ ಉಪ್ಪಿನಕಾಯಿಯಂತೆ, ನೀರ್ಗೊಜ್ಜು  ಅದರಂತೆಯೇ,ಪಾಯಸವಾಗದ ಕೇಸರೀಬಾತೂ,  ಪಾನಕ ಬರೀ ನೀರಾಗದೆ ಪಾನಕವಾಗಿಯೇ ಇರುತ್ತದೆಂದು ಉಳಿದವರು ಹೇಳಿದ್ದು ಹೌದು. 
ನೀವು  ಮಾಡಿದ ಅಡುಗೆಯ ರುಚಿ   ನಿಮಗೆ  ಗೊತ್ತಾಗುವುದಿಲ್ಲವೇ...? ಮತ್ತೆ ಪ್ರಶ್ನೆ  ಕೇಳಬೇಡಿ. ನಮ್ಮ ಮುಖ ನೋಡಿಕೊಳ್ಳಲು ನಮಗೆ ಕನ್ನಡಿ ಬೇಕು.
  


 ಈ ಸಲ ಹೋಳಿಗೆ ಮಾಡಿದೆ ....!!  ಮಾಡ್ತಾ ಮಾಡ್ತಾ ಮೈಮರೆತು ಹೋದೆ.  ಕರೆಕ್ಟಾಗಿ ನಲವತ್ತೊಂಬತ್ತು ಹೋಳಿಗೆ ಆಯ್ತು.ಜೊತೆಗೆ  ನನಗೂ ಜ್ಞಾನೋದಯ ಆಯ್ತು....!!!!


ಹೌದು...ಹೌದಪ್ಪಾ... ಲೈಫು ಇಷ್ಟೇನೆ..!
ಯಾರೋ ಕಣಕದಲ್ಲಿ ಹೂರಣ ತುಂಬಿ ಬಾಳೆ ಎಲೆ ಮೇಲಿಡುವರು . ಮತ್ಯಾರೋ ಅದನ್ನು ಚಂದಕ್ಕೆ, ಮನ ಬಂದಂತೆ ಲಟ್ಟಿಸುವರು. ಇನ್ಯಾರೋ ಬಿಸಿಕಾವಲಿಯ ಮೇಲೆ ಹಾಕಿ ಕೌಚಿ ಮಗುಚಿ ಮಾಡುವರು.ಹದವಾಗಿ ಬೇಯಿಸಿದರೆ ಹೋಳಿಗೆ ಸವಿಯಲು ಸಿದ್ಧ.
ಇಷ್ಟೇ ಜೀವನ.ಈ ಜೀವನ ಎಷ್ಟೊಂದು ಸಿಹಿಯಲ್ಲವೇ..? ಎಷ್ಟೊಂದು ರುಚಿಯಲ್ಲವೇ..?

ಮತ್ತೇನು ಕಷ್ಟ ..? 
ಕಷ್ಟ ಹೋಳಿಗೆಯ ಕ್ವಾಲಿಟಿಯ ಮೇಲೆ ಇರುವುದು ..ಸೃಷ್ಟಿಕರ್ತರ ಚಾತುರ್ಯದ ಮೇಲಿರುವುದು.. ಅನ್ನಿಸ್ತಾ ಇದೆ.  ಪ್ರಶ್ನೆಗಳು  ಅನೇಕ.


ಎಲ್ಲರ ಮನೆ ಹೋಳಿಗೆಯ ಹೂರಣವೂ ಸಮನಾಗಿ ಸಿಹಿ ಇರುವುದೇ..?
ಕಣಕ ಹದ ಬಂದಿತ್ತೆ..?
ಹೂರಣ ಹೊರ ಬರದಂತೆ ಕಣಕದಿಂದ ಒಂದೇ ಸಮನಾಗಿ ತುಂಬಿದ್ದರೆ..?
 ಲಟ್ಟಿಸುವಾಗ ನುರಿತವರ ಕೈಗೆ ಸಿಕ್ಕಿತ್ತೇ..? ಲಟ್ಟಣಿಗೆಯಿಂದ ಲಟ್ಟಿಸುವಾಗ ಹೂರಣವೇನಾದರೂ ಕಣಕದಿಂದ ಹೊರ ಬಂದಿತ್ತೆ..? ಕಣಕ ಲಟ್ಟಣಿಗೆಗೆ  ಮೆತ್ತಿಕೊಂಡಿತ್ತೆ..? ಆಕಾರ ಸರಿಯಾಗಿತ್ತೋ ಅಥವಾ ಯಾವ ದೇಶದ್ದೋ ನಕ್ಷೆಯನ್ನು   ಹೋಲುತ್ತಿತ್ತೋ..? ಬಾಳೆ ಎಲೆಯಿ೦ದ ತೆಗೆದು ಕಾವಲಿಗೆ ಹಾಕುವಾಗಲೇನಾದರೂ ಹರಿದು ಹೋಯಿತಾ...? ಕಾವಲಿ ಸೌಟಿನಿಂದ  ಮಗುಚಿ ಹಾಕುವವರು  ಮೊದಲ ಪದರ ಸರಿಯಾಗಿ ಬೆ೦ದ ನಂತರ ಮಗುಚಿದರೋ ಇಲ್ಲವೋ..?ಕಾವಲಿಗೆ ಸರಿಯಾಗಿ ಎಣ್ಣೆ ಹಚ್ಚಿಕೊಂಡಿದ್ದರೋ ಇಲ್ಲವೋ...? ಹೋಳಿಗೆ ಹತ್ತಿತೆ..?ಹರಿಯಿತೆ..?ಗ್ಯಾಸ್ ಖಾಲಿಯಾಗಿ ಬೆಂಕಿ ಆರಿ ಅರೆ ಬೆಂದಿತೆ..? ಎರಡೂ ಮಗ್ಗುಲು ಬೆಂದ ನಂತರವಷ್ಟೇ ಹೋಳಿಗೆಯನ್ನು ನಿಧಾನಕ್ಕೆ ಮಡಚಿ  ತೆಗೆದು ಬಿಳಿ ಬಟ್ಟೆಯ ಮೇಲೆ ಹಾಕಬೇಕು..? ಪೇಪರಿನ ಮೇಲೆ ಹಾಕಿದರೆ ಹೋಳಿಗೆಗೆ   ಪೇಪರ್ ವಾಸನೆ  ಹಿಡಿದುಕೊಳ್ಳುತ್ತದೆ  ಎಚ್ಚರ ಮುಖ್ಯ. ಇದೆಲ್ಲಾ ಸರಿಯಾಗಿ ಅನುಸರಿಸಿದರೆ ಚಂದದ, ರುಚಿಯಾದ ಹೋಳಿಗೆ ಲಭ್ಯ. 


ಅರ್ಥ ಆಗ್ತಾ ಇದೆ.  ಹಾಗೇ ನಮ್ಮ ಬದುಕೂ ಅಲ್ಲವೇ..?  ಪ್ರಕೃತಿ ಮತ್ತು ಪೋಷಣೆ ಸರಿಯಾಗಿದ್ದಲ್ಲಿ,ಒಂದಕ್ಕೊಂದು ಪೂರಕವಾಗಿದ್ದಲ್ಲಿ  ಮಾತ್ರ ಚಂದದ ಜೀವನ ಸಾಧ್ಯ.. 
ಯಾರೋ ಕಣಕದಲ್ಲಿ  ತುಂಬಿದ ಹೂರಣದ ಉಂಡೆಯಂತೆ ಮಗುವೊಂದನ್ನು  ಈ ಪ್ರಪಂಚದ ಬಾಳೆ ಎಲೆ ಮೇಲೆ ತಂದಿಡುವರು. ಅವರೊಂದಿಗೆ  ಮತ್ಯಾರೋ ಇನ್ಯಾರೋ ಸಮಾಜದ ಜನರು ಲಟ್ಟಿಸಿ ಸಂಸ್ಕಾರ ಕೊಟ್ಟು  ನಮ್ಮದಾದೊಂದು  ರೂಪ ಕೊಡುವರು . ಅದರಂತೆ ಕಷ್ಟ ನಷ್ಟಗಳ  ಕಾವಲಿಯ ಮೇಲೆ  ಸುತ್ತಲಿನ ಜನ   ಕೌಚಿ ಮಗುಚಿ ಹಾಕಿ ನಮ್ಮ ತನವನ್ನು ಪರೀಕ್ಷಿಸುವರು. ಚಂದದ ಹೊಂಬಣ್ಣ  ನೋಡಿ ಹಿರಿ ಹಿರಿ ಹಿಗ್ಗುವರು. ಮತ್ಯಾರೋ ಹೊತ್ತಿಸಿಕೊಂಡು,  ಹರಿದುಕೊಂಡು ಸಹಿಸಲಾರದೆ ಕುಗ್ಗುವರು. ಇದೆಲ್ಲದರ ಒಟ್ಟುರೂಪ  ನಾವು, ನಮ್ಮ ಜೀವನ.


ಅತ್ಯುತ್ತಮ  ವಂಶವಾಹಿಗಳು ,  ಉತ್ತಮ ಸಂಸ್ಕಾರ, ಯೋಗ್ಯ ಪರಿಸರ ಇದ್ದಲ್ಲಿ, ಸಿಕ್ಕಲ್ಲಿ ಮಗುವೊಂದು ಉತ್ತಮ ಮಾನವನಾಗಿ ಬೆಳೆಯುವುದು.
ಯಾವುದಾದರೊಂದು ಕೊರತೆಯಿದ್ದಲ್ಲಿ ಕೆಲವಷ್ಟಕ್ಕೆ ಸೀಮಿತವಾಗುವುದು.......

ಹೀಗೆ....ನಮ್ಮದೇನಿಲ್ಲ. ಎಲ್ಲಾ ನೇಚರ್  ಎಂಡ್  ನರ್ಚರ್.


 ಹೋಳಿಗೆ ಮಾಡ್ತಾ ಮಾಡ್ತಾ ಮಾಡ್ತಾ....... ಜ್ಞಾನೋದಯವಾದದ್ದು ಹೀಗೆ....!!!


ನನ್ನ ಕೊರ್ತಾ ತಾಳಲಾರದೆ ನಿಮಗೀಗ ಮೂರ್ಚೆ ಬರುವಂತಾಗಿರಬಹುದೇ..?ಯೋಚಿಸುತ್ತಿದ್ದೇನೆ. ಮಾಡಿದ ಹೋಳಿಗೆ ಮಿಕ್ಕಿದೆ.ತಿಂದೂ, ನೋಡೀ  ಬಾಯಿ ಮನಸ್ಸು ಸಿಹಿ ಮಾಡಿಕೊಳ್ಳಿ.





ಬರಲಿರುವ ಹೊಸ ವರುಷ  ೨೦೧೧ ನಿಮಗೆಲ್ಲರಿಗೂ  ಶುಭ ತರಲಿ.

[ವಿ. ಸೂ. ಅಕ್ಷಯ ಬಟ್ಟಲಲ್ಲಿ ಇದ್ದದ್ದು ನಾಲ್ಕೇ ಹೋಳಿಗೆ. ಮೊದಲು ಬಂದವರಿಗೆ ಆಧ್ಯತೆ...:-))  ]

36 comments:

  1. ವಿಜಯಶ್ರೀ ಇಷ್ಟೆಲ್ಲಾ ಹೇಳೋವಾಗ ನಿಮ್ಮ ಹೋಳಿಗೆ ನಮ್ಮ ಜೋಳಿಗೆಗೆ ಬಂದು ಬಿದ್ದಿದ್ದರೆ ಈ ಫಕೀರ ಎಲ್ಲೋ ಕುಂತು ತಿಂದು..ಅನ್ನದಾತಾ ಸುಖೀ ಭವ ಎನ್ನುತ್ತಿದ್ದ..ಎಲ್ಲಿ ಹರೆದಿದೆ? ಎಲ್ಲಿ ಮೆತ್ತಿದೆ? ಎಲ್ಲೀ ಸುಟ್ಟಿದೆ...?? ಊಹೂಂ..!! ಯಾವ್ದೂ ಗಮನಿಸಿಲ್ಲ...ಹಸಿವು ..ಮಾರಾಯ್ತೀ ..ಹಸಿವು...
    ಎಲ್ಲಾನೂ ಮರೆಸುತ್ತೆ..
    ಬಹಳ ವಿಭಿನ್ನ ಶೈಲಿಯ ಶುಭ ಹಾರೈಕೆ..ನಿಮಗೂ ಹೊಸ ವರ್ಷದ ಹಾರ್ದಿಕ ಶುಭಕಾನಗೆಳು,

    ReplyDelete
  2. ನನಗಂತೂ ಮೂರೇ ಪ್ರತಿಕ್ರಿಯೆ ಕಾಣ್ತಾ ಇದೆ, ನಾಲ್ಕನೇ ಹೋಳಿಗೆ ನಂಗೇ :)
    ನಿಮಗೂ ಹೊಸ ವರ್ಷದ ಶುಭಾಶಯಗಳು

    ReplyDelete
  3. ವಿಜಯಶ್ರೀ,
    ಕೊನೆಯ ಹೋಳಿಗೆ ನನಗೆ ಸಿಗುತ್ತಿದೆಯೆ?
    ಏನೇ ಆಗಲಿ, ನಿಮ್ಮ ಹೋಳಿಗೆಯಂತಹ ಶುಭಾಶಯಗಳೇ ಸಾಕು.
    ನಿಮಗೂ ಸಹ ಹೊಸ ವರ್ಷದ ಶುಭಾಶಯಗಳು.

    ReplyDelete
  4. ನಿಮಗೆ ಕೊನೆಗೂ ಜ್ನಾನೋದಯವಾಯಿತೇ???
    ಹ್ಹ ಹ್ಹ ಹ್ಹಾ........
    ಪರವಾಗಿಲ್ಲ, ಹೋಳಿಗೆ ಮಾಡುವಾಗ ಜ್ನಾನೋದಯವೇನೋ ಆಯ್ತು. ಆದರೆ ನಮಗೆ ಹೋಳಿಗೆಯ ಸಿಹಿ ಇನ್ನೂ ಸಿಗಲಿಲ್ವಲ್ಲ ಮೇಡಮ್...........
    ಇತ್ತ ನಾಲ್ಕು ಹೋಳಿಗೆ ತಳ್ಳಿದರೆ ನಮಗೂ ಜ್ನಾನೋದಯವಾದೀತೆಂಬ ಭರವಸೆ ಇದೆ.
    ಹೊಸ ವರ್ಷದ ಶುಭಾಶಯಗಳು....

    ReplyDelete
  5. ಹೋಳಿಗೆಯನ್ನು ಜ್ಞಾನೋದಯಕ್ಕೆ ಬ್ಲೆಂಡ್ ಮಾಡಿರುವುದು ಸಕ್ಕತ್ ಆಗಿದೆ.ಹೋಳಿಗೆ ಬೇಡಿಕೆ ಜಾಸ್ತಿಯಿರುವುದರಿಂದ ನಾನು ಕೇಳುವುದಿಲ್ಲ. ಮುಂದಿನ ಬಾರಿ ಮಾಡಿದಾಗ ಸುಮ್ಮನೆ ಫೋನ್ ಮಾಡಿ ಬಂದುಬಿಡುತ್ತೇನೆ..

    ಹೊಸ ವರ್ಷದ ಶುಭಾಶಯಗಳು.

    ReplyDelete
  6. ಜಲನಯನ ಸರ್
    ಬಟ್ಟಲು ತು೦ಬಾ ನಾಲ್ಕು ಹೋಳಿಗೆ ಇಟ್ಟಿದ್ದೇನೆ..!!
    ಹಸಿವು ತಣಿಸಿಕೊಳ್ಳಿ...:)
    ನಿಮ್ಮ ಪ್ರೋತ್ಸಾಹಕರ ನುಡಿಗಳಿಗೆ ವ೦ದನೆಗಳು.

    ReplyDelete
  7. ಆನಂದ
    ಅದು ಅಕ್ಷಯ ಬಟ್ಟಲು.ಎಷ್ಟು ಹೋಳಿಗೆ ತೆಗೆದರೂ ಖಾಲಿಯಾಗದು...:))

    ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  8. ಕಾಕ..
    ಕೊನೆಯದೇಕೆ.. ಅಷ್ಟೂ ಹೋಳಿಗೆ ನಿಮಗೇ..:):]ನಿಮ್ಮ ಹೋಳಿಗೆಯ೦ತಹಾ ಹಾರೈಕೆಗೆ ನಮನಗಳು.

    ReplyDelete
  9. ಮನದಾಳದಿಂದ..
    ಹ್ನೂ.. ಜ್ನಾನೋದಯ ಆಯ್ತು ಕಣ್ರೀ.
    ನಾಲ್ಕು ಹೋಳಿಗೆ ನಿಮಗೆ೦ತಲೇ ಇಟ್ಟಿದ್ದು.. ಸವಿದು ಜ್ನಾನ ಪಡೆಯಿರಿ..:) ಥ್ಯಾ೦ಕ್ಸ್....

    ReplyDelete
  10. ಆಹಾ ಎಂತಹ ಸಮಯದಲ್ಲಿ ಜ್ನಾನೋದಯ ಆಯ್ತು .. ವಾಹ್ ,...

    ReplyDelete
  11. ನಿಮಗೂ ಕೂಡ ಹೊಸ ವರ್ಷದ ಹಾರ್ದಿಕ ಶುಭಾಶಯಗಳು :)

    ReplyDelete
  12. nimma lekhana odi nanagoo kooda jnaanodaya aada haaage anistha idhe :) hoLige chennagittu :)

    ReplyDelete
  13. nice one madam super...

    ವರುಷ ವರುಷಕ್ಕೂ ಬರುವ ಈ ಹೊಸ ವರುಷ ನಿಮ್ಮೆಲ್ಲರ ಬಾಳಿನಲ್ಲಿ ಸದಾ ಹರುಷದ ಹೊನಲನ್ನು ಹೊತ್ತಿ ತರಲಿ, ಶಾಂತಿ, ಸಹನೆ, ಸಹಬಾಳ್ವೆಯು ಎಲ್ಲರ ನೆಲೆಯಾಗಲಿ... ಹೊಸ ವರುಷದ ಹಾರ್ದಿಕ ಶುಭಾಶಯಗಳು ...

    ReplyDelete
  14. 49ರಲ್ಲಿ ನಮ್ಮ ಏಕಸದಸ್ಯ ಬ್ಯುರೋದಲ್ಲಿರುವ ಎಲ್ಲರಿಗೂ ಒಂದಷ್ಟು ತೆಗೆದಿರಿಸಿ. ದಿನಕ್ಕೊಂದು ಬಂದು ತೆಗೆದುಕೊಳ್ಳುತ್ತೇವೆ.
    ಹೊಸ ವರ್ಷ ತರಲಿ ಹರ್ಷ!

    ReplyDelete
  15. ಶಿವಪ್ರಕಾಶ್ ವ೦ದನೆಗಳು.

    ReplyDelete
  16. ಹಳ್ಳಿ ಹುಡುಗ ತರುಣ್,
    ನಿಮಗೂ ಶುಭಾಶಯಗಳು. ಥ್ಯಾ೦ಕ್ಸ್..

    ReplyDelete
  17. ಅನ್ವೇಷಿ...
    ಅಸತ್ಯವಾಗಲೂ ಎಲ್ಲಾ ಹೋಳಿಗೆಗಳು ನಿಮಗ೦ತಲೆ ಮಾಡಿದ್ದು.. ಪ್ರತಿ ವರ್ಷ ಹೀಗೆ ಬ೦ದು ಒ೦ದೊ೦ದೆ ಹೋಳಿಗೆಯನ್ನು ಹೊತ್ತೊಯ್ಯಿರಿ..!!!
    ಥ್ಯಾ೦ಕ್ಸ್... :-))

    ReplyDelete
  18. ಲೇಟಾಗಿ ಬಂದೆ. ಒಬ್ಬಟ್ಟು ಇಲ್ಲದಿದ್ರೂ ಪರವಾಗಿಲ್ಲ, ನಿಮ್ಮ ಬರವಣಿಗೆ ಮಧುರವಾಗಿದೆ.

    ReplyDelete
  19. ವಿಜಯಶ್ರೀ ಯವರೇ ನಮಗೂ ಜ್ಞಾನೋದಯವಾಯ್ತು. ಮನುಷ್ಯನ ಜೀವನವನ್ನು ಹೋಳಿಗೆಗೆ ಹೋಲಿಸಿದ ನಿಮ್ಮ ಲೇಖನದ ನಿರೂಪಣಾ ಕಲೆ, ವಿಶೇಷ ಹಾಗು ವಿಭಿನ್ನವಾಗಿದೆ.ಆದರೆ ನಾನು ಬಹಳ ತಡವಾಗಿ ಬರುತ್ತಿದ್ದೇನೆ.ಹೋಳಿಗೆ ಸಿಗೋಲ್ಲ.
    ಹೋಳಿಗೆಯಂತೆ ಸಿಹಿಯಾದ ಶುಭಾಷಯ (ಸಿಕ್ಕಿದೆ) ಕೊರಿದ್ದೀರಿ.ನಿಮಗೂ ಹೊಸ ವರ್ಷದ ಶುಭಾಶಯಗಳು.ನಮ್ಮ ಬ್ಲಾಗ್ ಗೂಒಮ್ಮೆ ಭೇಟಿ ಕೊಡಿ.

    ReplyDelete
  20. ವಿಜಯಶ್ರೀ ಯವರೇ ನಮಗೂ ಜ್ಞಾನೋದಯವಾಯ್ತು. ಮನುಷ್ಯನ ಜೀವನವನ್ನು ಹೋಳಿಗೆಗೆ ಹೋಲಿಸಿದ ನಿಮ್ಮ ಲೇಖನದ ನಿರೂಪಣಾ ಕಲೆ, ವಿಶೇಷ ಹಾಗು ವಿಭಿನ್ನವಾಗಿದೆ.ಆದರೆ ನಾನು ಬಹಳ ತಡವಾಗಿ ಬರುತ್ತಿದ್ದೇನೆ.ಹೋಳಿಗೆ ಸಿಗೋಲ್ಲ.
    ಹೋಳಿಗೆಯಂತೆ ಸಿಹಿಯಾದ ಶುಭಾಷಯ (ಸಿಕ್ಕಿದೆ) ಕೊರಿದ್ದೀರಿ.ನಿಮಗೂ ಹೊಸ ವರ್ಷದ ಶುಭಾಶಯಗಳು.ನಮ್ಮ ಬ್ಲಾಗ್ ಗೂಒಮ್ಮೆ ಭೇಟಿ ಕೊಡಿ.

    ReplyDelete
  21. ಒಂದು ಆಪ್ತ ಪಯಣ... ಒಂದಿಷ್ಟು ನೆನಪುಗಳ ಹಸಿ ಹಸಿಯಾಗಿಸಿದ ಬ್ಲಾಗಿನ ಮನೆ ತವರಿನಂತ ಾಪ್ತತೆಯ ಕಟ್ಟಿ ಕೊಟ್ಟಿತು. ನಿಮ್ಮ ಮನೆಯ ಭೇಟಿ ತುಂಬಾ ಆಪ್ತವೆನಿಸಿತು.

    ReplyDelete
  22. ಕಲರವ..
    ನಿಮ್ಮ ಮೆಚ್ಚುಗೆಗಳಿಗೆ ತು೦ಬಾ ಧನ್ಯವಾದಗಳು.ಬರುತ್ತಿರಿ.

    ಮಾನಸೀ..
    ಚಿತ್ತಾರದರಮನೆಗೆ ಸ್ವಾಗತ.ನಿಮ್ಮ ಪ್ರತಿಕ್ರಿಯೆಗಳೆ ನನಗೆ ಪ್ರೋತ್ಸಾಹ.
    ವ೦ದನೆಗಳು.

    ReplyDelete
  23. ತುಂಬಾ ಚೆನ್ನಾಗಿದೆ ನಿಮ್ಮ ಹೋಳಿಗೆ..
    ಹೋಲಿಕೆಯೂ ಸಹ ಚಂದವಿದೆ ಬಾಳಿಗೆ..
    ಬರಲೇ ನಿಮ್ಮ ಮನೆಗೆ ಹೋ-ಳಿಗೆ..
    ಬಂದು ಕೂರಲೆ ಕೂಲಿಗೆ..
    ಮಾಡುವರೇ ಇಂಥಹದೇ ಹೋಳಿಗೆ..
    ಸುಮ್ಮನೆ ಕರೆಯದಿರಿ ಬರೀ.. 'ಹೋಳಿಗೆ'..
    ೨೦೧೧ರಲ್ಲಿ ಹೋಳಿಗೆಯಂಥ ಕ್ಷಣಗಳೇ ಎದುರಾಗಲಿ..

    ReplyDelete
  24. ತುಂಬಾ ಚೆನ್ನಾಗಿದೆ ನಿಮ್ಮ ಹೋಳಿಗೆ..
    ಹೋಲಿಕೆಯೂ ಸಹ ಚಂದವಿದೆ ಬಾಳಿಗೆ..
    ಬರಲೇ ನಿಮ್ಮ ಮನೆಗೆ ಹೋ-ಳಿಗೆ..
    ಬಂದು ಕೂರಲೆ ಕೂಲಿಗೆ..
    ಮಾಡುವರೇ ಇಂಥಹದೇ ಹೋಳಿಗೆ..
    ಸುಮ್ಮನೆ ಕರೆಯದಿರಿ ಬರೀ.. 'ಹೋಳಿಗೆ'..
    ೨೦೧೧ರಲ್ಲಿ ಹೋಳಿಗೆಯಂಥ ಕ್ಷಣಗಳೇ ಎದುರಾಗಲಿ..

    ReplyDelete
  25. ಸುಬ್ರಹ್ಮಣ್ಯ ..
    ನಿಮ್ಮ ಪ್ರೋತ್ಸಾಹಗಳಿಗೆ ವ೦ದನೆಗಳು. ಒಬ್ಬಟ್ಟು ನಿಮಗೂ ಇದೆ ಅಕ್ಷಯ ಬಟ್ಟಲಲ್ಲಿ.:)

    ಕತ್ತಲೆಮನೆಯವರೆ..
    ಹೊಸ ವರುಷಕ್ಕೆ ಬೆಳಕಿಗೆ ಬನ್ನಿ.. ಬೆಳಕಿನ ಮನೆಗೆ...:) ಪ್ರತಿಕ್ರಿಯೆಗೆ ವ೦ದನೆಗಳು.

    ReplyDelete
  26. ವಿಜಯಶ್ರೀ ಮೇಡಂ ನಮಸ್ತೆ,
    ಹೋಳಗಿ ಗಿಳಗಿ ಅಂತ ತಲೇಲಿ ಹೋಳಗಿ ಹೋಳಗಿ ಹೋಳಗಿ, ಅಗ್ತಾ ಇದೆ..!!
    ಮನೆ ನೆನಪು ಕಾಡ್ತಾ ಇದೆ..
    ಸುಂದರವಾಗಿ ಬರೆದಿದ್ದಿರ..
    ನಿಮಗೂ ಹೊಸ ವರ್ಷದ ಶುಭಾಶಯಗಳು..
    ಸದಾ ನಗುವಿರಲಿ.. :)

    ReplyDelete
  27. ವಿಜಯಶ್ರೀ ಮೇಡಂ ನಮಸ್ತೆ,
    ಹೋಳಗಿ ಗಿಳಗಿ ಅಂತ ತಲೇಲಿ ಹೋಳಗಿ ಹೋಳಗಿ ಹೋಳಗಿ, ಅಗ್ತಾ ಇದೆ..!!
    ಮನೆ ನೆನಪು ಕಾಡ್ತಾ ಇದೆ..
    ಸುಂದರವಾಗಿ ಬರೆದಿದ್ದಿರ..
    ನಿಮಗೂ ಹೊಸ ವರ್ಷದ ಶುಭಾಶಯಗಳು..
    ಸದಾ ನಗುವಿರಲಿ.. :)

    ReplyDelete
  28. holige maduvallu tammallina saahiti jaagrutavaagi kaavyaatmakavaagi holigeyannu badukige sameekarisida tamma pari adbhuta. tumba chendavaagide. tamagu hosavarshada shubhaashayagalu. tadavaagi bandiddAKKE nanage holige ulidilla antalu gottu

    ReplyDelete
  29. ವಿಜಯಶ್ರೀಯವರೇ,
    ಚೆಂದನೆಯ ಬರಹ ಮತ್ತು ನಾನಿನ್ನೂ ಒಬ್ಬಳೇ ಹೋಳಿಗೆ ಮಾಡಿಲ್ಲ ಅಂತ ನೆನಪಿಸಿತು :)
    ಬದುಕನ್ನ ಹೋಳಿಗೆ ಮಾಡುವುದಕ್ಕೆ ಹೋಲಿಸಿದ ನಿಮ್ಮ ಪರಿ ಚೆನ್ನಾಗಿದೆ :)
    -ಸವಿತ ಎಸ್ ಆರ್

    ReplyDelete