Friday, January 21, 2011

ಇಕೆಬಾನ

ಪ್ರಿಯೆ
ನಿನ್ನ ನಾಸಿಕ ಸಂಪಿಗೆ
ಕಣ್ಣು ಕೌಳಿ
ಕೆನ್ನೆ ಕೇದಗೆ
ಕಿವಿ ದಾಸವಾಳ
ದಾಲಿಂಬರದ ಹಲ್ಲು 
ಮುಂಗುರುಳು  ನುಲಿಕುಡಿ
ಶಂಖದ  ಕೊರಳು
ದೇಹ  ಕಡೆದಿಟ್ಟ ಬಾಳೆ ದಿಂಡು
ಎಂದೆಲ್ಲ ಹೇಳುವ ಬದಲು
ನೀ ಇಕೆಬಾನ ಎನ್ನಲೇ......????


[ ಇಕೆಬಾನ = ಜಪಾನಿ ಹೂ ಜೋಡಿಸುವ  ಕಲೆ
ಕಣ್ಣು ಕೌಳಿ = ಕೌಳಿ ಎನ್ನುವುದು ಕಪ್ಪುದ್ರಾಕ್ಷೀ ತರದ ಹಣ್ಣು.
ನುಲಿಕುಡಿ =ಟೆ೦ಡ್ರಿಲ್.. ಬಳ್ಳಿಗಳು ಹಬ್ಬುವಾಗ ಕೊಮ್ಬೆಯನ್ನು ಸುರುಳಿಯಾಕಾರದ ನುಲಿಕುಡಿಗಳಿ೦ದ ಬಳಸಿ ಹಿಡಿಯುತ್ತವೆ]

14 comments:

  1. ಚೆನ್ನಾಗಿದೆ...ವರ್ಣನೆಯ ಖುಷಿಯೇ ಬೇರೆ ಅಲ್ಲವೇ.

    ReplyDelete
  2. ವಿಜಯಶ್ರೀ,
    ನಿಮ್ಮ ಕವನವೇ ಒಂದು ‘ಇಕೆಬಾನ’ವಾಗಿದೆ. ಅಭಿನಂದನೆಗಳು.

    ReplyDelete
  3. ವಿಜಯಾ...

    ಅಂದ ಚಂದ.. ಸುಖ ಸಂತೋಷ..ಎಲ್ಲವೂ ಹೆಚ್ಚಾಗುವದು ಹೋಲಿಕೆಯ ಆಧಾರದಲ್ಲಂತೆ..

    ಒಟ್ಟಿನಲ್ಲಿ ಹೋಲಿಕೆ ಮಾಡಿಕೊಂಡೇ ಖುಷಿ ಪಡಬೇಕು ಅಂತಾಯಿತು !!

    ಸಾಲುಗಳು ಇಷ್ಟವಾದವು ..

    ReplyDelete
  4. ಹೊಸ ಕಲ್ಪನೆ..ಇಕೆಬಾನಕ್ಕೆ ಹೋಲಿಸಿದ್ದು ಸೂಪರ್..

    ReplyDelete
  5. upameya prayoga atyuttama..
    nuli kudi, kannu kouli..artha tilisiddu..
    mattuashtu
    artha--poorna vaayitu...!

    shubhashayagalu
    ananth

    ReplyDelete
  6. ವ್ಹಾ......ವ್ಹಾ.....ಚೆನ್ನಾಗಿದೆ

    ReplyDelete
  7. ವಿಜಯಶ್ರೀ ನಿಮ್ಮ ವಿವರಣೆ ನಂತರ ನಿಮ್ಮ ಉಪಮೆಗಳ ಸಮೂಲಾಗ್ರ ಇಕೆಬಾನ ಅನ್ನೋದು ಬಹಳ ಒಪ್ಪಿದೆ...ಚನ್ನಾಗಿದೆ...

    ReplyDelete
  8. ಹೋಲಿಕೆಗಳು ಉತ್ತಮವಾಗಿದೆ!

    ReplyDelete
  9. ಮೇಡಂ..,
    ಹೀಗೆಳ್ತೀನಂತ ಏನೂ ಅನ್ಕೋಬೇಡಿ..
    ಇಬೆಕಾನ ಅಂದ್ರೆ ಗೊತಾಗಲಿಲ್ಲ..??
    ಇರಲಿ..
    ಮೂಗನ್ನು ಸಂಪಿಗೆಗೆ ಹೋಲಿಸಿ ಕಿವಿಯನ್ನು ದಾಸವಾಳಕ್ಕೆ ಹೋಲಿಸಿದರೆ ಹೇಗಿರಬಹುದು..?? ಚಿತ್ರಿಸಿ ನೋಡಿ..

    ReplyDelete