ಅತ್ತಿತ್ತ ಹಾರಾಡಿ
ಸುತ್ತ ಹೋರಾಡಿ
ಮೂಲೆ ಮೂಲೆಯ ಹುಡುಕಿ
ಕೈ ಬಡಿದು ತೊಡೆ ತಟ್ಟಿ
ಬಿಡದೆ ಬೆನ್ನಟ್ಟಿ
ಯುದ್ಧ ಗೆದ್ದಿದ್ದೇನೆ ನೋಡು..
ಕೈ ಬೀಸಿ ಕುಣಿದಾಡಿ
ಅತ್ತಿತ್ತ ನೆಗೆದಾಡಿ
ಕೈ ಸೆಳೆಸಿ ಕಾಲ್ ಉಳುಕಿ
ಮುಡಿ ಬಿಚ್ಚಿ ಹಾರಾಡಿ
ಒತ್ತರಿಸಿ ಬರುವ ಕೋಪಕ್ಕೆ
ಜಜ್ಜಿ ಕೆಡಹಿದ್ದೇನೆ ನೋಡು..
ಚಲುವೆ ಕೆನ್ನೆಯ ಬಳಸಿ
ಮೋಹಿಸಿ ಮುದ್ದಿಟ್ಟ
ಕ್ರೂರ ರಾಕ್ಷಸನ
ಕೈಕಾಲು ಮುರಿದಿಕ್ಕಿ
ರಕ್ತದೋಕುಳಿ ಹರಿಸಿ
ಚಿತ್ರ ಬರೆದಿದ್ದೇನೆ ನೋಡು..
ಮಾಡು ಸುಖ ನಿದ್ರೆಯನು
ಬಿಡು ದಾರಿ ಎನಗೀಗ
ಮತ್ತೆ ಹೋಗಲೇ ಬೇಕು
ಶತ್ರು ಸಂಹಾರಕ್ಕೆ
ಹುಡುಕುತ್ತ ಹುಡುಕುತ್ತ
ಮತ್ತೊಂದು ಸೊಳ್ಳೆಯನು.....!!!!!!!!!