ನಾನ್ಯಾವತ್ತೂ ಮಾರ್ಕೆಟಿಗಾಗಲೀ ಶಾಪಿಂಗ್ ಗಾಗಲೀ ಸಾಧ್ಯವಾದಷ್ಟೂ ಆಟೋದಲ್ಲೇ ಹೋಗುವುದು.. ಮತ್ತು ಯಾವಾಗ ನಾನು ಮಲ್ಲೇಶ್ವರಮ್ಮೋ , ಮತ್ತೆಲ್ಲೋ ಹೋಗ ಬೇಕಾದರೆ ನನ್ನವರನ್ನು ಕೇಳುತ್ತೇನೆ.. 'ಏನ್ರೀ ಸ್ವಲ್ಪ ಡ್ರಾಪ್ ಕೊಡುತ್ತೀರಾ?' ನನ್ನವರು ಯಾವತ್ತೂ ಇಲ್ಲಾ ಅನ್ನದೆ, ''ಮಲ್ಲೇಶ್ವರಮ್ಮಾ... ಎಷ್ಟೊತ್ತಿಗೆ..? ಆ೦.. ಊಂ.. ಇವತ್ತು ಯಾರೋ ವಿಸಿಟರ್ಸ್ ಬರೋರಿದಾರೆ... ಆಂ.. ಊಂ... ಏನ್ ಕೆಲ್ಸಾ ಅಲ್ಲಿ ಅರ್ಜ೦ಟಾ? ...''
ನಾನು, ''ಸರಿ, ಆಟೋದಲ್ಲೇ ಹೋಗ್ತೇನೆ ಬಿಡಿ..''ಎಂದು ಅವರನ್ನು ಉಭಯಸಂಕಟದಿಂದ ಪಾರು ಮಾಡುತ್ತೇನೆ.. ಅಥವಾ ಹಾಗಂದುಕೊಳ್ಳುತ್ತೇನೆ...!! ಹಾಗೊಂದು ಪಕ್ಷದಲ್ಲಿ ಸಮಯವಿದ್ದು ಜೊತೆಗೆ ಬಂದರು ಅನ್ನಿ, ನಾನು ಅಂಗಡಿ ಮೆಟ್ಟಿಲು ಹತ್ತುತ್ತಿದ್ದಂತೆ ಎಷ್ಟೊತ್ತಿದೆ ನಿನ್ ಕೆಲಸ.. ಎನ್ನುವ ಪ್ರಶ್ನೆ ಬೀಳುತ್ತದೆ. ಸೀರೆಗೊಂದು ಮ್ಯಾಚಿಂಗ್ ಬ್ಲೌಸ್ ಪೀಸ್ ಹುಡುಕಲು ಕನಿಷ್ಠ ನಾಲ್ಕು ಅಂಗಡಿ ತಿರುಗಬೇಕಾಗುತ್ತದೆ ಅಂಥಾದ್ದರಲ್ಲಿ ಇವರನ್ನು ಕಟ್ಟಿಕೊಂಡು ನಾನು ಶಾಪಿಂಗ್ ಗೆ ಹೊರಟರೆ ಅಷ್ಟೇ.. ಮಕ್ಕಳು ಬಂದರೆ ಅವರ ಚಿಪ್ಸ್ ಪ್ಯಾಕೆಟ್ಟು, ಐಸ್ ಕ್ರೀಮು, ಸ್ವೀಟ್ ಕಾರ್ನು ಇವುಗಳ ಶಾಪಿ೦ಗೇ ಆಗಿಬಿಡುತ್ತದೆ.. ಅದಕ್ಕೆ ನನ್ನ ಕೆಲಸಕ್ಕೆ ನಾನೊಬ್ಬಳೆ..ಇಲ್ಲಾ ಯಾರಾದರೂ ಸಮಾನ ಮನಸ್ಕ ಗೆಳತಿಯರೊಟ್ಟಿಗೆ ಆಟೋ ದಲ್ಲಿ.
ಆಟೋನೆ ಪರವಾಗಿಲ್ಲ ಈ ಟ್ರಾಫಿಕ್ ಗೆ. ಜಿರಳೆಯ ಮೀಸೆ ತೂರಿದರೆ ಸಾಕು ಎಂತಹಾ ಪದರದಲ್ಲೂ ನುಸಿಯುವ ಹಾಗೆ ಈ ಆಟೋದ ಮುಂದಿನ ಚಕ್ರ ನುಸುಳಿದರೆ ಸಾಕು ಇಡೀ ಆಟೋನೆ ನುಸುಳುತ್ತದೆ.. ಎಂತಹಾ ಟ್ರಾಫಿಕ್ ನಲ್ಲೂ...! ಕಾರಿನದೇ ತೊಂದರೆ. ಅಲ್ಲೆಲ್ಲೋ ಕಿಲೋಮೀಟರ್ ದೂರದಲ್ಲಿ ಪಾರ್ಕಿಂಗ್ ಪ್ಲೇಸ್ ಹುಡುಕಿ ಅಲ್ಲಿ ಇಟ್ಟು ಮತ್ತೆ ಆಟೋನೆ ಮಾಡಿಸಿಕೊಂಡು ಗಮ್ಯವನ್ನು ತಲುಪಬೇಕು. ಆಟೋನೆ ಸಾಕಪ್ಪಾ.. ಕಾರಿನ ಹಂಗೆ ಬೇಡ. ಆಟೋದವರ ಜೊತೆ ಜಗಳ ಮಾಡಿಕೊಂಡು, ಕೇಳಿದಷ್ಟು, ಒಂದಕ್ಕೆ ಒಂದೂವರೆ ಕೊಟ್ಟು ಅವರನ್ನು ಓಲೈಸಿಕೊಂಡು ಬರುವುದರಲ್ಲಿಯೇ ಒಂಥರಾ ರೋಚಕತೆಯಿದೆ ಬಿಡಿ. ಮತ್ತು ಬೆಂಗಳೂರಿನ ರಸ್ತೆಯ ಅವಸ್ಥೆಗೆ ಯಾಕೆ ಸುಮ್ಮನೆ ನಮ್ಮನೆ ಕಾರು ಹಾಳು ಮಾಡಿ ಕೊಳ್ಳಬೇಕು ..?
ಹ್ಣೂ ಕಣ್ರೀ.. ಮೊನ್ನೆ ನಮ್ಮ ಏರಿಯಾದ ಮುಖ್ಯ ರಸ್ತೆಯನ್ನು ಅದೆಷ್ಟು ಚನ್ನಾಗಿ ಟಾರು ಹಾಕಿದ್ದರೆಂದರೆ, ನನಗೆ ನಮ್ಮೂರಲ್ಲಿ ಹೆಬ್ಬಾಗಿಲ ಮುಂದೆ ರಂಗೋಲಿ ಹಾಕುವ ಜಾಗವನ್ನು ಕೊಚ್ಚಿ ಮಗುಚಿ, ಪೆಟ್ನೆ ಬಡಿದು, ಕೈ ಮಣ್ಣು ಹಾಕಿ, ಗಣಪೆ ಕಾಯಿ ತಗೊಂಡು ಒರೆದು ನುಣ್ಣಗೆ ಮಾಡುತ್ತಿದ್ದುದರ ನೆನಪಾಗಿತ್ತು...!! ನನಗೆ ಖುಷಿಯಾಗಿ ದಿನಾಲೂ ಬೆಳಿಗ್ಗೆ ಒಂದ್ಸಲಾ, ಸಾಯಂಕಾಲ ಒಂದ್ಸಲಾ ಹೋಗಿ ಅಡ್ಡಾಡಿ ಸುಮ್ಸುಮ್ನೆ ತರಕಾರಿ ತಗೊಂಡು ಬಂದೆ ಹೊಸಾ ರಸ್ತೆ ಅಂತಾ..! ಯಾರ ದೃಷ್ಟಿ ತಾಗಿತೋ ಏನೋ ಮತ್ತೆ ಮೂರ್ ದಿನಕ್ಕೆ ಬಂದ್ರಪ್ಪಾ ಒಳಚರಂಡಿಯವರು.. 'ಅಯ್ಯೋ ಅಯ್ಯೋ ಅಯ್ಯೋ' ಅನ್ಕೊಂಡು. ಬಂದವರೇ ಅಲ್ಲೊಂದು ಹೊಂಡಾ.. ಇಲ್ಲೊಂದು ಹೊಂಡಾ ತೆಗೆದು ರಸ್ತೆಯನ್ನೆಲ್ಲಾ ಅಗೆದು ಯಮರಾಡಿಯೆಬ್ಬಿಸಿಬಿಟ್ಟರು. ಹಾಗಾಗಿ ಈ ಅವಸ್ಥೆಯ ರಸ್ತೆಗಳಲ್ಲಿ ಕಾರಿನಲ್ಲಿ ಕುಳಿತು 'ಬ್ರೇಕ್ ಡ್ಯಾನ್ಸ್' ಮಾಡುತ್ತಾ ಹೋಗುವುದಕ್ಕಿಂತಾ ಆಟೋದಲ್ಲೇ ಹೋಗುತ್ತಾ 'ಅಣ್ಣಮ್ಮನ ಡ್ಯಾನ್ಸ್' ಮಾಡುವುದೊಳಿತು.ಹೋದ ಅನುಭವ ಚೆನ್ನಾಗಿ ನೆನಪಿನಲ್ಲಾದರೂ ಉಳಿಯುತ್ತೆ. ಮತ್ತೆ ಆ ಕಾರಿನ ಏಸಿ ನನಗಾಗೋಲ್ಲಪ್ಪಾ. ಹಾಗಂತಾ ಹೇಳಿ 'ನಿನಗೆ ಸುಖ ಹೆಚ್ಚಾಯ್ತು ಕಣೆ' ಅಂತ ಇವರಿಂದ ಮೂತಿ ತಿವಿಸಿಕೊಳ್ಳುವುದಕ್ಕಿಂತಾ ನನಗೆ ಸಮೃದ್ಧ ಗಾಳಿ ಧೂಳು ಸಿಗುವ ಆಟೋನೆ ಸಾಕು..
ಮೊದಲ ಸಲ ಕಾರು ತಗೊಂಡಾಗ ಅದೂ, ಮಾರುತಿ ಒಮ್ನಿ... ಎಂತಹಾ ಆನಂದ.. ಅದರಲ್ಲಿ ಕುಳಿತು ಹೋಗುತ್ತಿದ್ದರೆ ಪ್ರಪಂಚದ ಎಲ್ಲರೂ ನಮ್ಮನ್ನೇ ನೋಡಿದ ಹಾಗೆ ಅನ್ನಿಸುತ್ತಿತ್ತು..!! ಅಷ್ಟೊಂದು ಥ್ರಿಲ್. ಮೊದಲನೇ ಸಲದ್ದು ಎಲ್ಲಾ ಹಾಗೆ. 'ಮೊದಲ ಬಾರಿ ಸೆಕೆಂಡ್ ಹ್ಯಾಂಡ್ ಬೈಕ್ ತಗೊಂಡಾಗ ಆದ ಸಂತೋಷ ಕಾರು ತಗೊಂಡಾಗ ಆಗಿಲ್ಲ ಕಣೇ. ' ಆನ್ನೋದು ನನ್ನವರ ಯಾವತ್ತಿನ ಅನಿಸಿಕೆ. ವ್ಯವಹಾರಸ್ತರ ಮೊದಲ ಕಾರು ಹೆಚ್ಚಾಗಿ ಒಮ್ನಿಯೇ ಆಗಿರುತ್ತದೆ ಅನ್ನುವುದು ನನ್ನ ಪರ್ಸನಲ್ ಒಪೀನಿಯನ್ನು. ಮೊದಲು ಲಗ್ಗೆಜಿಗೆ, ಪುರಸೋತ್ತಿದ್ದರೆ ಮನೆ ಮಂದಿಗೆ ಅನ್ನುವುದು ನೂರಕ್ಕೆ ನೂರು ನಿಜ.
ಆಮೇಲಾಮೇಲೆ ಕಾರುಗಳು ನಾನಾ ತರದವು ಬಂದು ಹೋಗಿ ಮಾಡಿದ್ದರೂ ನನಗೆ ಅರಿವಿಗೆ ಬರುವುದು ಮಾರುತಿ ಒಮ್ನಿ ಮಾತ್ರಾ.ಮತ್ತು ಇನ್ನೊಂದು ವಿಶೇಷ ಅಂದರೆ, ನಮ್ಮ ಪಕ್ಕದ್ಮನೆ ಮಗು ಒಂದಿಪ್ಪತ್ತು ತರದ ಕಾರುಗಳನ್ನು ಅದರ ಚಕ್ರವೋ, ಲೈಟನ್ನೋ, ಮೂತಿಯನ್ನೋ ನೋಡಿಯೇ ಅದು ಇಂತಾ ಕಾರು ಅಂತ ಗುರುತಿಸಿಬಿಡುತ್ತದೆ. ಇದು ನ್ಯಾನೋ, ಇದು ಸ್ಕಾರ್ಪಿಯೋ, ಇದು ಡಿಸೈರ್,ಇದು ಬೆಂಜ್ ಅಂತ ನೋಡಿದಾಕ್ಷಣ ಹೇಳಿಬಿಡುತ್ತದೆ. ನಾನಂತೂ ಕಾರುಗಳಲ್ಲಿ ಮಾರುತಿ ಒಮ್ನಿಯನ್ನಾದರೆ ತಕ್ಷಣಕ್ಕೆ ಅದು ಅದೇ ಅಂತ ಗುರುತಿಸಬಲ್ಲೆ.ಯಾಕೆ ಅಂದರೆ ಅದು ಪೆಟ್ಟಿಗೆ ತರಾ ಇರುತ್ತಲ್ಲ ಅದು ಒಮ್ನಿ.. ಮೂತಿ ಇರುವುದೆಲ್ಲಾ ಕಾರುಗಳು.. ಇಲ್ಲಾ ಅಂದರೆ ನಮ್ಮ ಶೆಡ್ ನಲ್ಲಿ ಯಾವ ಕಾರು ನಿಂತಿದೆಯೋ ಅದು ಮಾತ್ರಾ ಗುರುತಿಸಿ ಹೇಳಬಲ್ಲೆ. ಅದು ರಸ್ತೆಗಿಳಿದರೆ ಮತ್ತೆ ನನಗೆ ಅಯೋಮಯ..! ಮೂತಿಯಿರುವವು ಎಲ್ಲವನ್ನೂ ಒಟ್ಟುಗೂಡಿಸಿ 'ಕಾರು' ಲಿಸ್ಟಿಗೆ ಸೇರಿಸಿಬಿಡುತ್ತೇನೆ ನಾನು. ನಾವು ಕಲಿತಿದ್ದೆ ಹಾಗಲ್ವಾ.. ಕಾರು, ಜೀಪು, ಬಸ್ಸು, ಲಾರಿ, ರೈಲು, ವಿಮಾನ ಅಂತ ಸಂಚಾರ ಮಾಧ್ಯಮಗಳನ್ನು..!!
ಇದೊಂದು ಕೇಳಿ, ನಾವೆಲ್ಲಾ ಎಲ್ಲಾದರೂ ಹೋಗುತ್ತಿರಬೇಕಾದರೆ ನನ್ನ ಜಾಣತನದ ಪರೀಕ್ಷೆ ನಡೆಯುತ್ತಿರುತ್ತದೆ. ನನ್ನ ಮಕ್ಕಳು ಆಗಾಗ ಆಚೀಚೆ ನೋಡುತ್ತಾ.. ಆಡಿ, ಆಡಿ.. ಮರ್ಸಿಡಿಸ್ ಬೆಂಜ್ ಬೆಂಜ್ ವಾವ್.. ಎನ್ನುತ್ತಿರುತ್ತಾರೆ.. ನಾನು ಎಲ್ಲಿ ಎಲ್ಲಿ ಅನ್ನುತ್ತಾ ಎದುರಿಗೆ ಹೋಗುವ ಆಟೋ, ಮತ್ಯಾವುದೋ ಬೆನ್ನು ನಪ್ಪಿದ ಕಾರುಗಳನ್ನು ನೋಡುತ್ತಿರುತ್ತೇನೆ. ಪೇಪರ್ ಓದುವಾಗ, ಟೀವಿ ನೋಡುವಾಗ.. 'ಏ ಬುಗಾಟಿ ನೋಡು, ಲ್ಯಾಮ್ಬರ್ಗಿನಿ ನೋಡು.. ಯಪ್ಪಾ ಫೆರಾರಿ ಯಂತಾ ಚನಾಗಿದೆ..'ಅನ್ನುತ್ತಾ ನಮ್ಮನೆಯ ಕನ್ನಡ ಕುವರಿ, ಕುವರ .. ಇಬ್ಬರೂ ಉದ್ಘರಿಸುತ್ತಿದ್ದರೆ ನನಗೆ ಅದರ ತಲೆ ಬುಡ ತಿಳಿಯುವುದಿಲ್ಲ.
ಕಾರಿನ ಹಿಂದಗಡೆಯೇ ಅಲ್ಲವೇ ಹೆಸರು ಇರುವುದು..? ನನಗೋ ಎದುರಿಗೆ ಹೋಗುವ ಕಾರಿನ ಹಿಂಬದಿಯಲ್ಲಿ ಏನು ಬರೆದರೆ ಅದೇ 'ಕಾರಿನ ಹೆಸರು' ಅಂದುಕೊಂಡುಬಿಡುತ್ತೇನೆ. .. ಆಲ್ಟೊ, ಸ್ವಿಫ್ಟ್, ಹೊಂಡಾ ಸಿಟಿ, ಇನ್ನೋವಾ .. ,...,...,.. ಜೊತೆಗೆ ಬಾಲಾಜಿ, ಪ್ರೇರಣಾ, ಆರ್ ಎನ್ ಎಸ್ಸ್ ಎಲ್ಲವೂ ಕಾರಿನ ಹೆಸರುಗಳಾಗಿ ಕಾಣಿಸುತ್ತವೆ..! ''ಓ ಇದ್ಯಾವುದೋ ಹೊಸಾ ಕಾರು ಮಾಂಡೋವಿ ನೋಡಿ..!!!'' ಅಂತ ನಾನು ನನ್ನ ಜಾಣತನವನ್ನು ಪ್ರದರ್ಶಿಸುತ್ತಿದ್ದರೆ ನನ್ನವರು ಸ್ಟೇರಿಂಗ್ ಗೆ ತಲೆ ತಲೆ ಜಪ್ಪಿಕೊಳ್ಳಲು ಶುರು ಮಾಡುತ್ತಾರೆ. ಈಗೀಗ ಅದ್ಯಾವ ಉಸಾಬರಿಗೂ ಹೋಗುವುದೇ ಇಲ್ಲ.. ಎದುರಿಗೆ ಹೋಗುವ ಗಾಡಿಗಳ ಹಿಂದೆ ಬರೆದಿರುವ ಶ್ರೀ ಧರ್ಮಸ್ಥಳ,ಶ್ರೀ ಸಿಗಂದೂರೇಶ್ವರಿ. ವೆಂಕಟೇಶ್ವರ, ಅಣ್ಣಮ್ಮ ದೇವಿ, ಮಾತೃ ಕೃಪಾ,...,.. ಎನ್ನುವ ಹೆಸರುಗಳನ್ನೂ ತಪ್ಪಿಯೂ ಬಾಯ್ಬಿಟ್ಟು ಓದುವುದಿಲ್ಲ..!!!
[ ಇಲ್ಲಿನ ವಿಚಾರಗಳಲ್ಲಿನ ಸತ್ಯತೆ ಮತ್ತು ಉತ್ಪ್ರೇಕ್ಷೆಗಳನ್ನು ಓದುಗರ ಊಹೆಗೆ ಬಿಟ್ಟಿದ್ದೇನೆ...:) ]