Wednesday, January 6, 2010

ಮಲೆನಾಡಿನಲ್ಲಿ ಯಂತ್ರಗಳು...

ಮಲೆನಾಡು ಎಂದಾಕ್ಷಣ ಗುಡ್ಡ ,ಬೆಟ್ಟ, ಕಾಡು, ಝರಿ ,ಹಳ್ಳ ,ತೊರೆ, ಕಾಫಿ , ಇವುಗಳೆಲ್ಲಾ ನೆನಪಾಗುತ್ತದಷ್ಟೇ...
ಜೊತೆಗೆ ಮುಖ್ಯವಾಗಿ ಇನ್ನೂ ಒಂದು ನೆನಪಾಗೇ ಆಗುತ್ತದೆ..........!!!
ಅಡಿಕೆತೋಟ...... ಅಲ್ಲವೇ .....?
ಅಡಿಕೆ ಮಲೆನಾಡಿನ ಮುಖ್ಯ ವಾಣಿಜ್ಯ ಬೆಳೆ. ತಾಂಬೂಲಕ್ಕೆ ಅಡಿಕೆಯೇ ರಾಜ..! ಮಲೆನಾ
ಡಿನಲ್ಲಿನ ಬಹುತೇಕ ಜನರಬಾಯಿ...ಗಲ್ಲವೆಲ್ಲಾ ತಾಂಬೂಲರಸಪೂರಿತ ......!!!
ಸಾಗರ,ಸೊರಬ, ಹೊಸನಗರ,ತೀರ್ಥಹಳ್ಳಿ , ಉತ್ತರಕನ್ನಡದ ಸಿರಸಿ , ಸಿದ್ದಾಪುರ, ಯೆಲ್ಲಾಪುರ ಈ ಸಾಲಿನಲ್ಲಿ ಅಡಿಕೆಬೆಳೆ ಅಧಿಕ .
ಅಲ್ಲದೆ ಕೆಲವು ವರ್ಷಗಳ ಹಿಂದೆ ಅಡಿಕೆ ಬೆಲೆ ಒಮ್ಮೆಲೇ ಹೆಚ್ಚಾಗಿದ್ದರಿಂದ ಚಿತ್ರದುರ್ಗದ ಸುತ್ತಮುತ್ತ , ಚನ್ನಗಿರಿ, ಹೊನ್ನಾಳಿ , ಭೀಮಸಮುದ್ರ ,....ಇನ್ನಿತರ ಕಡೆಗಳಲ್ಲೂ ಅಡಿಕೆ ಕೃಷಿ ಮಾಡಲು ಶುರುಮಾಡಿದ್ದಾರೆ.


ಅಡಿಕೆ ತೆಂಗಿನ ಮರದಂತೆಯೇ ಉದ್ದವಾಗಿ ಬೆಳೆಯುತ್ತದೆ . ಕಾಂಡದ ಅಗಲ ಕಡಿಮೆ. ತೆಂಗಿನಂತೆಯೇ ಗರಿಗಳು . ಅಡಿಕೆ ಮಡ್ಳು ಎನ್ನುತ್ತಾರೆ.
ಇದು ನೋಡಿ... ಅಡಿಕೆ ಮರ.ಕೊನೆಯಲ್ಲಿ ಕೊನೆ [ಗೊನೆ] ಬಿಟ್ಟಿದೆ .




ಅಡಿಕೆ ಬೆಳೆದ ನಂತರ ಅದರ ಮರಹತ್ತಿ ಕೊಯ್ಲು ಮಾಡಬೇಕು . ಹಸಿರು ಅಡಿಕೆ ಸುಲಿದು ಒಳಗಿನ ಬೇಳೆಯನ್ನು ಬೇಯಿಸಿ ಒಣಗಿಸ
ಬೇಕು. ಅದು ಕೆಂಪಡಿಕೆ . ಹಣ್ಣಾದ ಅಡಿಕೆಯನ್ನು ಹಾಗೆ ಒಣ ಹಾಕಿ ' ಚಾಲಿ ' ಮಾಡುತ್ತಾರೆ. ಈ ಅಡಿಕೆ ಕೊಯ್ಲು ನವೆಂಬರ್ ತಿಂಗಳಿನಿಂದ ಜನವರೀ ಕೊನೆವಾರದವರೆಗೂ ಇರುತ್ತದೆ.



ಇದು ಹಣ್ಣಡಿಕೆಗಳ ರಾಶಿ .

ಇದನ್ನು ಸಂಸ್ಕರಿಸಲು ಅದರದೇ ಆದ ಕ್ರಮಗಳಿವೆ. ಕತ್ತಿಯಿಂದ ಪ್ರತಿಯೊಂದು ಅಡಿಕೆಯನ್ನೂ ಸುಲಿಯಬೇಕು. ಸುಲಿಯಲು ಬರದ, ಅರ್ಧ ಸುಲಿದ ಕಾಯಿಗಳು ಕುಕ್ಕುಗೋಟು ಆಗುತ್ತವೆ. ಕುಕ್ಕು ಗೋಟಿಗೆ ಬೆಲೆ ಕಡಿಮೆ.







ಮೆಟ್ಗತ್ತಿಯಿಂದ ಅಡಿಕೆ ಸುಲಿಯುವುದು


ಕೂಲಿಯಾಳುಗಳ, ಅಡಿಕೆಸುಲಿಯುವವರ ಸಮಸ್ಯೆ ತಲೆದೊರಿದ್ದರಿಂದ ಅಡಿಕೆಬೆಳೆಗಾರರು ಈಗೀಗ ಅಡಿಕೆ ಸುಲಿಯುವ ಯಂತ್ರಗಳನ್ನು ಬಳಸ ತೊಡಗಿದ್ದಾರೆ.

ಮೊದಲು ಅಡಿಕೆಗಳನ್ನು ಗೊನೆಯಿಂದ ಬೇರ್ಪಡಿಸಬೇಕು.
ಇದು ನೋಡಿ ...



ಗೊನೆಯಿಂದ ಅಡಿಕೆ ಬೇರ್ಪಡಿಸುವ ಯಂತ್ರ


ಇದಕ್ಕೆ 1 h.p. ಮೊಟರಿನ ಅಗತ್ಯವಿದೆ .ಆಳಿನ ಅಗತ್ಯವಿಲ್ಲದೆ ಹೆಣ್ಣು ಮಕ್ಕಳಾದ
ರೂ ಈ ಕೆಲಸ ಮಾಡಬಹುದು . ಸ್ವಲ್ಪ ಎಚ್ಚರಿಕೆ ಸಾಕು.

ಈಗ ಬಿಡಿಸಿದ ಅಡಿಕೆಗಳನ್ನು ಸುಲಿಯಬೇಕು.ಅದಕ್ಕೆ ಯಂತ್ರ ಸಿದ್ಧವಿದೆ.



ಅರೆಕಾ ಹಸ್ಕರ್


ಇದರ ಮೇಲಿನ ಸಾಣಿಗೆಯಲ್ಲಿ ಹಸಿ ಅಡಿಕೆಗಳು ಕಾಣಿಸುತ್ತಿವೆಯಲ್ಲವೇ...? ಮೊದಲು ಅಡಿಕೆಗಳನ್ನು ಸಾಣಿಗೆಯಲ್ಲಿ ಸುರಿಯಬೇಕು....
ಕಲ್ಲುಗಳಿಲ್ಲದಂತೆ ನೋಡಿಕೊಳ್ಳಬೇಕು. ಇದ್ದರೆ ಬ್ಲೇಡ್ ಹಾಳಾಗಬಹುದು.



ಇದು ಯಂತ್ರದ ಹಿಂಬಾಗ . ಇಲ್ಲಿಂದ ಸಿಪ್ಪೆ ಬೀಳುತ್ತದೆ.




ಅಡಿಕೆ ಬೀಳುವ ಜಾಗ

ಇಲ್ಲಿಂದ ಸುಲಿದ ಅಡಿಕೆ ಹೊರಬರುತ್ತದೆ . ಮೇಲಿನ ಪ್ಲೇಟ್ ನಿಂದ ಗಟ್ಟಿಯಿರುವ, ಅರ್ಧ ಸುಲಿದ ಅಡಿಕೆಗಳು ಹೊರಬರುತ್ತವೆ. ಅದನ್ನಾದರೂ ನಂತರ ಕೈಯಿಂದಲೇ ಸುಲಭವಾಗಿ ಬಿಡಿಸಿ ಹಾಕಬಹುದು.ಕೆಳಗಿರುವ ಪ್ಲೇಟ್ ನಿಂದ ಪೂರ್ಣ ಸುಲಿದ ಅಡಿಕೆಗಳು ಹೊರಬರುತ್ತವೆ.
ಕಸ ಬೇರ್ಪಡಿಸಲು ವೈಬ್ರೆ ಟರ್ ಅಳವಡಿಸಲಾಗಿದೆ.
ಅಡಿಕೆಯ ಮೇಲ್ಪದರಕ್ಕೆ ಹಾನಿಯಿಲ್ಲ.
ಸಣ್ಣ , ದೊಡ್ಡ ಎಂದು ಅಡಿಕೆಗಳನ್ನು ವರ್ಗೀಕರಿಸುವ ಅಗತ್ಯವಿಲ್ಲ. ಎಲ್ಲವನ್ನೂ ಸುಲಿಯುತ್ತದೆ.




ಸುಲಿದ ಅಡಿಕೆ


ಇದಕ್ಕೆ 1 h.p. ಮೋಟಾರ್ ಅಗತ್ಯವಿದೆ. ಒಂದು ಘಂಟೆಗೆ ನಾಲ್ಕು ಡಬ್ಬ ಅಡಿಕೆ ಸುಲಿಯುವ ಈ ಯಂತ್ರದ ಜೊತೆ ಹದಿನೈದು ಜನ ಆಳುಲೆಕ್ಕ ಬೇಕಾಗುವಲ್ಲಿ ನಾಲ್ಕೇ ಜನರಿದ್ದರೆ ಸಾಕಾಗುವುದು. ಅಡಿಕೆ ಕೊಳೆಸಿಕೊಳ್ಳುವ ಭಯವಿಲ್ಲ.

ಮಲೆನಾಡಿನಲ್ಲಿ ಕೂಲಿಯಾಳುಗಳ ಸಮಸ್ಯೆ ಅಧಿಕ ..
ಹಾಗಾಗಿ ಕೆಲಸಕ್ಕೆ ಪರ್ಯಾಯಮಾರ್ಗ ಹುಡುಕಿಕೊಳ್ಳುವುದು ಅನಿವಾರ್ಯ.ಜನರ ಬದಲಿಗೆ ಬೆಳೆಗಾರ ಯಂತ್ರದ ಮೊರೆಹೊಗಬೇಕಾಗಿದೆ.
ಅಡಿಕೆ
ಸುಲಿಯುವವರ ನಡುವಿನ ಹುಂಡಿ ಪದಗಳು, ಜನಪದಗೀತೆಗಳು, ಗಾದೆಮಾತುಗಳೂ, ಸುದ್ದಿ ಸಪ್ತಾಹಗಳು ಮರೆಯಾಗಿ ಜೀವನ ಯಾಂತ್ರಿಕವಾಗುತ್ತಿರುವುದು ಬೇಸರದ ಸಂಗತಿಯಾದರೂ.. ಗತ್ಯಂತರವಿಲ್ಲ .. ಬೆಳೆಗಾರನೂ ಬದುಕಬೇಕಲ್ಲ ...
ಜೀವ ಗಟ್ಟಿಯಿದ್ದರೆ ಭಾವ ಸೆಲೆಯೊಡೆದೀತು.......!!

ಮತ್ತೆ ಕಳೆ ಕೀಳಲು ಕೂಡಾ ವೀಡ್ ಕಟ್ಟರ್ ಉಪಯೋಗಿಸಲಾಗುತ್ತಿದೆ.ಗೌರವವಾಗಿ ಕಳೆಕೀಳಬಹುದು.



ವೀಡ್ ಕಟ್ಟರ್


ಹಳ್ಳಿಗಳಲ್ಲಿ ವಿಧ್ಯುತ್ತಿನ ಅಭಾವ ಸಾಮಾನ್ಯ .
ಅದಕ್ಕೂ ಉಪಾಯವಿದೆ. ಮಲೆನಾಡಿನಲ್ಲಿ ಗುಡ್ಡದ ಇಳಿಜಾರಿನಲ್ಲಿ ಸಣ್ಣ ಪುಟ್ಟ ಝ
ರಿಗಳು ಹರಿಯುತ್ತಿರುತ್ತವೆ. ಅದನ್ನು ಕಿರು ಜಲವಿದ್ಯುತ್ ಯೋಜನೆಯ ಮೂಲಕ ವಿದ್ಯುತ್ ವುತ್ಪನ್ನ ಮಾಡಲು ಬಳಸಿಕೊಳ್ಳುತ್ತಾರೆ.

ಇದು ಮಿನಿ ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ಲಾಂಟ್






ಎಲ್ಲಾ ಸೌಲಭ್ಯಗಳನ್ನು ಹೊಂದಲು ಸರ್ಕಾರ ಸಹಾಯಧನವನ್ನು ಕೊಡುತ್ತದೆನ್ನುವುದು ಮೆಚ್ಚುವ ವಿಚಾರವಾಗಿದೆ.
ಮಲೆನಾಡಿನ ಸಂಪತ್ತನ್ನು ಯೋಗ್ಯರೀತಿಯಲ್ಲಿ ಬಳಸಿಕೊಂಡರೆ ಮಲೆನಾಡಿಗರಷ್ಟು ಅನುಕೂಲಸ್ತರು ಮತ್ಯಾರಿದ್ದಾರೆ....?

ಮಾಡುವ ಛಲ, ಬಳಸುವ ಕಲೆ ಗೊತ್ತಿದ್ದರೆ ಸಾಕೇ ಸಾಕು.
ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ.

28 comments:

  1. ಯಂತ್ರಗಳನ್ನೆಲ್ಲಾ ಈಗಲೆ ನೋಡಿದ್ದು....
    ಬಾಲ್ಯದಲ್ಲಿ ನಮ್ಮ ಹಳ್ಳಿಯಲ್ಲಿ ಈ ಕೆಲಸಗಳನ್ನೆಲ್ಲಾ ನೋಡಿದ್ದೆ...ನಿಮ್ಮ ಲೇಖನ ನನ್ನ ಬಾಲ್ಯ ನೆನಪು ತರಿಸಿತು...
    ಚಿತ್ರಗಳು ಇನ್ನು ಮುದ ತಂದಿದೆ....
    ಅಭಿನಂದನೆಗಳು....

    ReplyDelete
  2. ಅಜ್ಜಿ ಮನೆಯಲ್ಲಿ ಪ್ರತಿ ವರ್ಷ ನೋಡುವ ದೃಶ್ಯಗಳಿವು.
    ಒಣಗಿಸಲಿಕ್ಕೆ ಕೆಲವೊಮ್ಮೆ ಡ್ರೈಯರ್ ಉಪಯೋಗಿಸ್ತಾರಾದರೂ ಅಲ್ಲಿ ಇನ್ನೂ ಜನರೇ ಅಡಕೆ ಸುಲೀತಾರೆ.
    ನಾನು ಕೂಡ ಚಿಕ್ಕೋನಿದ್ದಾಗ ಸಿಪ್ಪೆ ಸುಲಿಯಲು ಹೋಗಿ ಮೆಟಗತ್ತಿಯಲ್ಲಿ ಕೈ ಕುಯ್ಕೊಂಡಿದ್ದೀನಿ :)
    ಈಗ ಅಂತ ಸಾಹಸಗಳನ್ನು ಮಾಡ್ತಾ ಇಲ್ಲ.

    ಅಡಕೆ ಒಂದು ಕಾಲದಲ್ಲಿ ಒಳ್ಳೆ ಬೆಳೆಯೇನೋ ಹೌದು, ಆದರೆ ಈ ಸದ್ಯದ ಪರಿಸ್ಥಿತಿಯಲ್ಲಿ ( ಅದರಲ್ಲೂ ಮಲೆನಾಡಿನಲ್ಲಿ ) ಯಾಕಪ್ಪಾ ಬೇಕು ಅಂತ ಅನಿಸುತ್ತದೆ.
    ಒಂದು ತೋಟಕ್ಕೆ ರೋಗ ಬಂದರೆ ಅಕ್ಕ ಪಕ್ಕದವರೆಲ್ಲಾ ಹುಶಾರಾಗಿರಬೇಕು. ಬೆಲೆಯೂ ಇಳಿದುಹೋಗಿದೆ. ಅಲ್ಲಿನ ರೈತರ ಪಾಡು ನೋಡಿದರೆ ಬೇಜಾರಾಗುತ್ತೆ.
    ಗಾಯದ ಮೇಲೆ ಬರೆ ಎಳೆದಂತೆ ಶಿವಮೊಗ್ಗ ಇತ್ಯಾದಿ ಮಂಡಿಯ ದಲ್ಲಾಳರು ಟೋಪಿ ಹಾಕಿ ಓಡಿ ಹೋಗುವ ಸುದ್ದಿಯನ್ನು ಇತ್ತೀಚಿಗೆ ಮೇಲಿಂದ ಮೇಲೆ ಓದ್ತಾ ಇದ್ದೀವಿ :(

    ReplyDelete
  3. ನಾನು ಈ ಯಂತ್ರಗಳನ್ನೆಲ್ಲಾ ನೋಡಿಲ್ಲ :(

    ಮಾಹಿತಿ, ಚಿತ್ರಗಳು ಬಹಳ ಚೆನ್ನಾಗಿವೆ. thank you.

    ReplyDelete
  4. ಚಿಕ್ಕ೦ದಿನಲ್ಲಿ ಅಡಿಕೆ ಸುಲಿಯುವುದು ಒ೦ತರಾ ಚೆನ್ನಾಗಿರುತ್ತಿತ್ತು.
    ಕೈ ಕುಕ್ಕಿಕೊ೦ಡು ಆಮೇಲೆ ಬರೆಯಲು ಕಷ್ಟಪಡುವುದು ನೆನೆಸಿಕೊಳ್ಳಲು ಚೆನ್ನಾಗಿರುತ್ತದೆ.
    ಕೈ ಕಪ್ಪಾಗುತ್ತಲ್ಲಾ ಎನ್ನುವ ಸಣ್ಣ ಬೇಜಾರು ಜೊತೆಗೆ.
    ಯ೦ತ್ರಗಳನ್ನು ಈಗೀಗ ಅಲ್ಲಲ್ಲಿ ಬಳಸುತ್ತಿದ್ದಾರೆ..ಅಷ್ಟೇ
    ನನ್ನ ತವರಿನಲ್ಲಿ ಈ ಯ೦ತ್ರಗಳನ್ನು ಬಳಸುತ್ತಿದ್ದಾರೆ.
    ಅನೇಕ ಕಡೆ ಕೈಯಲ್ಲೆ ಸುಲಿಯುತ್ತಾರೆ.
    ಮಹೇಶ್, ಆನ೦ದ,ವಿಕಾಸ ಅನುಭವಗಳನ್ನು ಹ೦ಚಿಕೊ೦ಡಿದ್ದಕ್ಕೆ ವ೦ದನೆಗಳು.

    ReplyDelete
  5. ಚುಕ್ಕಿ ಚಿತ್ತಾರ,
    ಮಲೆನಾಡಿನಲ್ಲಿ ಕೇಳದವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ
    ಉದ್ಯೋಗ ಅರಸಿ ಪಟ್ಟಣಕ್ಕೆ ಬರುವ ಯುವಜನತೆಯಿಂದಾಗಿ
    ತೋಟ ನೋಡಿಕೊಳ್ಳುವವರೇ ಇಲ್ಲದಾಗಿದೆ.
    ಇಂಥಹ ಯಂತ್ರಗಳು ಎಲ್ಲರ ಮನೆಗೆ ಬಂದರೆ ಸ್ವಲ್ಪ ಉಸಿರಾಡಬಹುದೇನೋ ಅವರೆಲ್ಲ
    ಒಳ್ಳೆಯ ಲೇಖನ

    ReplyDelete
  6. ನಮ್ ಕಡೆ ಅಡುಕೆ ಬೆಳೆಯೋಲ್ಲ..
    ಹಾಗಾಗಿ ಇವೆಲ್ಲ ಗೊತ್ತಿರ್ಲಿಲ್ಲ..
    ಮಾಹಿತಿಯುಕ್ತ ಚಿತ್ರಲೇಖನಕ್ಕೆ ಧನ್ಯವಾದಗಳು...

    ReplyDelete
  7. ಹಳ್ಳಿಗಳಲ್ಲಿ ಈ ರೀತಿಯ ಸ್ವಾವಲ೦ಬನೆ ಅತೀ ಅವಶ್ಯಕ. ಕೂಲಿಯಾಳುಗಳ ಸಮಸ್ಯೆ ಇರುವಲ್ಲಿ ಜಾಸ್ತಿ ತೋಟ ಇರುವವರಿಗೆ ಕೊನೆ ಕೋಯ್ಲು ಮುಗಿಸುವುದು ದೊಡ್ಡ ತಾಪತ್ರಯವೇ ಆಗುತ್ತದೆ. ಫೋಟೊಗಳು ಹಾಗೂ ಒಕ್ಕಣಿಕೆ ತು೦ಬಾ ಸು೦ದರವಾಗಿ ಬ೦ದಿವೆ.

    ReplyDelete
  8. ಅಡಿಕೆ ಅಂಗಡಿಗೆ ಬರುವಷ್ಟರಲ್ಲಿ ಇಷ್ಟೆಲ್ಲಾ ಸಂಸ್ಕರಣೆಗೆ ಒಳಪಡುತ್ತದೆ ಎಂದು ತಿಳಿದಿರಲಿಲ್ಲ. ನಮ್ಮಲ್ಲೂ ಅಡಿಕೆ ಬೆಳೆಯುತ್ತಾರೆ ಆದರೆ ಇಷ್ಟೊಂದು ಯಂತ್ರಗಳನ್ನು ಉಪಯೋಗಿಸುವುದನ್ನು ನೋಡಿರಲಿಲ್ಲ... ಸಚಿತ್ರ ವಿವರಣೆ ಇನ್ನಷ್ಟು ವಿಚಾರ ತಿಳಿದುಕೊಳ್ಳಲು ಸಹಾಯವಾಯಿತು. ಧನ್ಯವಾದಗಳು.

    ReplyDelete
  9. ಮರ ಹತ್ತಿ ಅಡಿಕೆಗಳನ್ನು ಬೆರ್ಪಡಿಸುವ ಯ೦ತ್ರವೊ೦ದಿಲ್ಲವಾಯಿತು!!!! ವಿದ್ಯುತ ಉತ್ಪಾದನೆಯಿ೦ದ, ಅಡಿಕೆ ಬಿಡಿಸಿ ಬೇರ್ಪಡಿಸುವವರೆಗಿನ ಯ೦ತ್ರ ಅವಿಷ್ಕಾರಗಳನ್ನು ತೋರಿಸಿ ಹೇಗೆ ಮಲೆನಾಡ ರೈತ ಸ್ವಾವಲ೦ಬಿ ಬದುಕಿನೆಡೆಗೆ ಮುಖ ಮಾಡಿರುವನು- ಕೂಲಿಜನ ಸಿಗಲಾರದ್ದಕ್ಕೆ ಅನ್ನುವ ಬಗ್ಗೆ ಉಪಯುಕ್ತ ಮಾಹಿತಿ.
    ಇದನ್ನು ಪತ್ರಿಕೆಗೇಕೆ ಕಳಿಸಬಾರದು ವಿಜಯಶ್ರೀಯವರೇ?

    ReplyDelete
  10. ದೊಡ್ಡ ಹಿಡುವಳೀದಾರರು ಈ ರೀತಿಯ ಯ೦ತ್ರಗಳನ್ನು ಸ್ವ೦ತ ಉಪಯೋಗಕ್ಕೆ ಖರೀದಿಸಬಹುದು. ಸಣ್ಣ ಪುಟ್ಟ ಕ್ರುಷಿಕರು ಎ೦ಟು ಹತ್ತು ಜನ ಸೇರಿ ಸಹಭಾಗಿತ್ವದಲ್ಲಿಯೂ ಖರೀದಿ ಮಾಡುವುದಿದೆ.
    ಮರಹತ್ತಿ ಕೊನೆ ಇಳಿಸುವ ಯ೦ತ್ರವೂ ಇದೆಯ೦ತೆ..
    ನನಗದರ ಮಾಹಿತಿ ಲಭ್ಯವಿಲ್ಲ.
    ಕರಿಮೆಣಸನ್ನು ಬೋಳ್ಕಾಳು ಮಾಡುವ ಯ೦ತ್ರವೂ ನನ್ನ ತವರುಮನೆಯಲ್ಲಿದೆ. ಎಲ್ಲಾ ಕಡೆ ಯ೦ತ್ರಗಳದ್ದೆ ರಾಜ್ಯ...!!ಕೂಲಿಯವರಿಲ್ಲದ ಮೇಲೆ ಏನು ಮಾಡುವುದು.....?

    ಪ್ರೋತ್ಸಾಹಿಸಿದ ಗುರುಮೂರ್ತಿ,ಶಿವಪ್ರಕಾಶ್,ಸುಭ್ರಹ್ಮಣ್ಯ ಭಟ್ ಮತ್ತು ಸೀತಾರಾಮ್ ರವರೆ ವ೦ದನೆಗಳು.

    ReplyDelete
  11. ವಿಜಯಶ್ರೀ ಮೇಡಮ್.

    ಆಡಿಕೆ ಬೆಳೆ ಮತ್ತು ಕಟಾವಿನ ನಂತರದ ಕೆಲಸಗಳನ್ನು ಸಿರಸಿಯ ಹತ್ತಿರದ ಮುತ್ಮರ್ಡು ಊರಿನಲ್ಲಿರುವ ಗೆಳೆಯ ನಾಗೇಂದ್ರನ ಮನೆಗೆ ಹೋದಾಗ ಅಡಿಕೆ ಬೆಳೆಯ ಚಟುವಟಿಕೆಗಳನ್ನು ನೋಡಿದ್ದೆ. ನೀವು ಅದಕ್ಕಿಂತ ಹೆಚ್ಚಾಗಿ ಕೆಲವು ವಿಚಾರಗಳನ್ನು ತಿಳಿಸಿದ್ದೀರಿ. ಮಾಹಿತಿಯುಕ್ತವಾದ ವಿವರಗಳಿಗೆ ಧನ್ಯವಾದಗಳು.

    ReplyDelete
  12. ವಿಜಯಶ್ರೀ, ನಮ್ಮ ಸ್ನೇಹಿತ ಸಹಪಾಠಿಗಳು (ಅಗ್ರಿ ಬಿ.ಎಸ್ಸಿ) ಕೃಷಿ ಪದವಿಯ ಅಗ್ರಿ ಎಂಜಿನೀಯರಿಂಗ್ ಓದುವಾಗ ನಮಗೆ ಪರಿಚಯವಾದ ಈ ಉಪಕರಣಗಳು ನಂತರ ನಾನು ಮಂಡ್ಯದ ಕೃ.ವಿ.ವಿ. ಯಲ್ಲಿ ಪ್ರಾತ್ಯಕ್ಷಿಕೆಗಳಲ್ಲಿ ಪಾಲ್ಗೊಂಡಾಗ ಆದ ಅನುಭ ಎಲ್ಲ ನಿಮ್ಮ ಈ ಲೇಖನದಿಂದ ಮತ್ತೆ ನೆನಪಾಯಿತು. ಇದನ್ನು ಕೃಷಿ ಸಮೂಹ ಸಂಪರ್ಕ ಬ್ಲೊಗ್ ನಲ್ಲಿ ಹಾಕಿದರೆ ನಮ್ಮ ರೈತ ಮಿತ್ರರಿಗೆ ಮಾಹಿತಿ ಸಿಕ್ಕಂತಾಗುತ್ತೆ...ಅಲ್ಲವೇ...?? ಬಹಳ ಉಪಯುಕ್ತ ನಿಮ್ಮ ಲೇಖನ..ಅದರಲ್ಲೂ ಸೂಕ್ತ ಚಿತ್ರಗಳು ಇದನ್ನು ಇನ್ನೂ ಉಪಯುಕ್ತ ಮಾಡುತ್ತವೆ.

    ReplyDelete
  13. ವಿಜಯಶ್ರೀ,
    ಒಳ್ಳೆಯ ಉಪಯುಕ್ತ ಮಾಹಿತಿ ಕಲೆಹಾಕಿ ನಮಗೆ ವಿವರಣೆ ಜೊತೆಗೆ ಫೋಟೋಗಳ ಸಮೇತ ತಿಳಿಸಿದ್ದಿರಿ... ಚೆನ್ನಾಗಿದೆ...
    ನಿಮ್ಮವ,
    ರಾಘು.

    ReplyDelete
  14. ವಿಜಯಶ್ರೀಯವರೆ ,
    ಅಡಿಕೆ ಸೊಲಿಯುವ ಯಂತ್ರ ನೋಡಿರಲಿಲ್ಲವಾದರು , ಅಡಿಕೆ ಸೊಲಿಯುವ
    ಅನುಭವವಿತ್ತು. ಅಡಿಕೆ ಬೆಯಿಸಲು ಹಾಕುವ ಒಲೆ ನಮಗೆ ಚಳಿಗಾಲದಲ್ಲಿ
    ಮೈ ಕೈ ಬೆಚ್ಚಗೆ ಮಾಡಿಕೊಳ್ಳಲು ಅನುಕೂಲವಾಗ್ತಿತ್ತು.
    ಮತ್ತೊಮ್ಮೆ ಬಾಲ್ಯ ನೆನಪಾಯ್ತು. ಒಳ್ಳೆಯ ಲೇಖನ.

    ReplyDelete
  15. ಹಸಿ ಅಡಿಕೆಯನ್ನು ನಾನು ನೋಡಿರಲಿಲ್ಲ. ಅದು ಇಷ್ಟು ಸುಂದರ ಎಂದು ಗೊತ್ತಿರಲಿಲ್ಲ. ಇವೆಲ್ಲಾ ಫೋಟೋಗಳಿಗಾಗಿ ಧನ್ಯವಾದಗಳು. ಯಂತ್ರಗಳ ವಿವರಣೆ ಚೆನ್ನಾಗಿದೆ.

    ReplyDelete
  16. ಚೆನ್ನಾಗಿ ತಿಳಿಸಿದ್ದೀರಿ, ನಮ್ಮ ಅಮ್ಮನ ಊರಿನಲ್ಲಿ ಇದೆಲ್ಲ ಮಾಡುತ್ತಲಿದ್ದರು ನಾವು ಚಿಕ್ಕವರಿದ್ದಾಗ ನೋಡಿದ್ದೆವು ಇತ್ತೀಚೆಗೆ ಇವೆಲ್ಲ ಮರೆಯಾಗಿದೆ.. ನನ್ನ ನೆನಪು ಮರುಕಳಿಸಿದ್ದಕ್ಕೆ ಧನ್ಯವಾದಗಳು

    ReplyDelete
  17. ಈಗ ನಮ್ಮೂರಲ್ಲೆಲ್ಲಾ ಕೊನೆಕೊಯ್ಲಿನದೇ ಗಲಾಟೆ. ಆದರೂ ಹೆಚ್ಚಿನ ಕಡೆಯಲ್ಲಾ ಇನ್ನೂ ಜನರೇ ಸುಲಿಯುತ್ತಾರೆ. ಯಂತ್ರಗಳ ಬಳಕೆ ಕಡಿಮೆ ಎಂದರೆ ತಪ್ಪಾಗದು. ತುಂಬಾ ಚೆನ್ನಾಗಿದೆ ವಿವರಣೆ ಜೊತೆಗೆ ಚಿತ್ರಗಳು. ನಾನೂ ನೋಡಿರಲೇ ಇಲ್ಲ.

    ಧನ್ಯವಾದಗಳು.

    ReplyDelete
  18. ಲೇಖನ ಮತ್ತು ಚಿತ್ರಗಳು ತುಂಬಾ ಚೆನ್ನಾಗಿದೆ... :) ಈ ಯಂತ್ರಗಳನೆಲ್ಲ ಇದೆ ಮೊದಲ ಬಾರಿ ನೋಡಿದ್ದು :)

    ReplyDelete
  19. ವಿಜಯಶ್ರೀ ಮೇಡಂ,
    ಭಟ್ಕಳದವನಾದ ನಾನು ಸಿರಸಿ ಕಡೆ ಪ್ರಯಾಣ ಮಾಡಿದಾಗಲೆಲ್ಲಾ ಅಡಿಕೆ ತೋಟ ನೋಡುತ್ತಿದ್ದೆ, ಈಗ ಇದನ್ನ್ನ ಸುಲಿಯಲು ಬಂದ ಯತ್ರಗಳನ್ನು ನೋಡಿ, ನನ್ನ ಕೆಲವೊಂದು ಫ್ರೆಂಡ್ ಗಳಿಗೂ ಹೇಳಬಹುದು...... ಚಿತ್ರ ಲೇಖನಕ್ಕೆಧನ್ಯವಾದಗಳು....

    ReplyDelete
  20. ಈಗಾಗಲೇ ಈ ಅಡಿಕೆ ಸುಲಿಯುವ ಯ೦ತ್ರದ ಬಗ್ಗೆ ಬಹುತೇಕ ಕ್ರುಷಿ ಪತ್ರಿಕೆಗಳಲ್ಲಿ ಪರಿಚಯವಾಗಿದೆ ಅನ್ನಿಸುತ್ತೆ.ಬರೀ ಅಷ್ಟಕ್ಕೇ ಸೀಮಿತವಾಗಿದ್ದ ಇವುಗಳು ಈಗೀಗ ಬಳಕೆಗೂ ಬರುತ್ತಿವೆ.ಅದರ ಬಗೆಗೆ ಇರುವ ಅಪನ೦ಬಿಕೆಯೇ ಬಳಸದಿರಲು ಕಾರಣ.
    ಸ್ವಾವಲ೦ಬನೆ ಮಾನವನ ಅನಿವಾರ್ಯತೆಯಲ್ಲಿ ಒ೦ದಾಗುತ್ತಿದೆ....
    ಶಿವು ಸರ್,
    ಜಲನಯನ,
    ರಾಘು,
    ಸುನಾಥ್ ಕಾಕಾ,
    ಶ್ರೀಧರ್,
    ತೇಜಸ್ವಿನಿ,
    ಸ್ನೊವೈಟ್
    ಮತ್ತು ದಿನಕರ್
    ನಿಮ್ಮೆಲ್ಲರ ಪ್ರತಿಕ್ರಿಯೆಗೆ, ಅನುಭವ ಹ೦ಚಿಕೊ೦ಡಿದ್ದಕ್ಕೆ, ಪ್ರೋತ್ಸಾಹಕ್ಕೆ ವ೦ದನೆಗಳು.

    ReplyDelete
  21. ಮನಸು ಅವರೆ....
    ಅನುಭವಗಳನ್ನು ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.

    ReplyDelete
  22. ನಮ್ಮೂರಿಗೆ ಈ ಯಂತ್ರಗಳೆಲ್ಲ ಇನ್ನೂ ಕಾಲಿಟ್ಟಿಲ್ಲಾ... ಉತ್ತಮ ಬರಹ..

    ReplyDelete
  23. ಇನ್ನು ಮುಂದೆ ಕ್ರಷಿ ಉಳಿಬೇಕಾದರೆ ಯಂತ್ರದ ಬಳಕೆ ಅನಿವರ್ಯವೇನೋ! ಅದು ಮಲೆನಾಡಾಗಲಿ, ಬಯಲು ಸೀಮೆ ಆಗಲಿ. ಈಗಲೇ ಜಗತ್ತಿನ ಅರ್ಧಕ್ಕಿಂತ ಹೆಚ್ಚು ಜನ ಪೇಟೆಯಲ್ಲಿದ್ದಾರಂತೆ!
    ಹಳ್ಳಿ ಅಂದ್ರೆ ನಗರಕ್ಕೆ ಬೇಕಾಗೋ ಕಛ್ಛಾವಸ್ತು ಪೂರೈಸೋ ಮೂಲ ಅಗಿಹೋಗ್ತಾ ಇದೆ.

    ReplyDelete
  24. ಕೆಲವು ವರ್ಷಗಳ ಹಿಂದೆ ಈ ಅಡಿಕೆ ಸುಲಿಯುವ ಯಂತ್ರದ ಸಂಶೋದನೆ ತುಂಬಾ ಜನ ಕೃಷಿಕರ ಕನಸಾಗಿತ್ತು. ಅದು ನನಸಗಿರುವುದು ಸಂತೋಷಕರ ವಿಷಯ. ಮಾಹಿತಿಗೆ ಧನ್ಯವಾದಗಳು.

    ReplyDelete
  25. Karnatakada prabhaavee mantriyorvarige budgetginta modalu salaheyondannu kalisidde.

    ಕೃಷಿಯಾ ಅಧುನಿಕರಣಕ್ಕೆ ಕೃಷಿ ಉಪಕರಣಗಳ ಸಂಶೋಧನೆಗೆ ಹಣ ಒದಗಿಸುವ ಕೆಲಸ ಆಗಬೇಕಾಗಿದೆ
    ಕೃಷಿಕರ ಉತ್ಪನ್ನಗಳಿಗೆ ಯೋಗ್ಯಬೆಲೆ ರೈತರೇ ನಿರ್ಧರಿಸುವ ತನಕ ವ್ರುತ್ತಿತಾರತಮ್ಯ ಮರೆಯಾಗುವ ತನಕ ನಿಮ್ಮ ಮೂಲವಾದ ಕೃಷಿ ಶಾಪಗ್ರಸ್ತ
    ವೃತ್ತಿಯಾಗಿ ಯುವ ಪೀಳಿಗೆಯನ್ನು ಪಟ್ಟಣಕ್ಕೆ ಅನ್ಯ ವೃತ್ತಿಗೆ ತಳ್ಳಿ ಸಮಾಜದ ಅಸಮತೋಲನಕ್ಕೆ ಮುಂದೊನ್ದುದಿನ ಆಹಾರ ಸ್ವಾವಲಂಬನೆಯು ಇಲ್ಲದಂತೆ ಮಾಡುವುದರಲ್ಲಿ ನನಗೆ ನಿಸ್ಸಂಶಯ.
    ಖಾಸಗಿ ವ್ಯಕ್ತಿಗಳು ಸರಕಾರದ ಬೆಂಬಲವಿಲ್ಲದೆ ಗುಣಮಟ್ಟದ ಉಪಕರಣ ಸಿಧ್ಧಪದಿಸುವುದು ಸಾಧ್ಯವಿಲ್ಲ ತಂತ್ರಜ್ಞಾನ ಒಂದು ಅಪಘಾತವಲ್ಲ ನಿರ್ದಿಷ್ಟ ಗುರಿಯಿಂದ ಸತತ ಪ್ರಯತ್ನದಿಂದ ಸರಕಾರದ ಒತ್ತಾಸೆಯಿಂದ ಇದು ಸಾಧ್ಯ ಅಡಿಕೆ ಸುಲಿಯುವ ಯಂತ್ರ ಮರ ಹತ್ತುವ ಯಂತ್ರ ಕಳೆಕೀಳುವ ಯಂತ್ರಗಳು ಬದಕ್ರಿಶಿಕನಿಗೆ ದೊರಕುವಂತೆ ಹೋರಾಟ ರೂಪಿಸಿ
    ಸರಕಾರದ ಹಣ ಅನುಪಯುಕ್ತ ಸರಕಾರೀ ಕಛೇರಿಗಳಲ್ಲಿ ಸೋರಿ ಹೋಗುತ್ತಿರುವುದನ್ನು ತಡೆಗಟ್ಟಿ ಉಪಯುಕ್ತ ಕೆಲಸಕ್ಕೆ ಬಳಕೆಯಾಗುವಂತೆ ಮಾಡಿದರೆ ಸಾಕು
    ನಾವು ಮತ್ತಸ್ತು ಅಭಿಮಾನ ಪಡುವಂತಹ ಕೆಲಸ ನಿಮ್ಮ ನೇತೃತ್ವದಲ್ಲಿ ಆಗಲಿ.

    ಅಧಿಕಾರೀ ವಲಯದ ಒತ್ತಾಸೆಯಿಂದ ಉಪಕರಣಗಳನ್ನು ಇನ್ನು ನಿಖರಗೊಳಿಸಿ, ನ್ಯೂನತೆ ಸರಿಪಡಿಸಿ, ನಯಗೊಳಿಸಿ, ವಿನ್ಯಾಸ ಗೊಳಿಸಿ, ಬೆಲೆ ಕಡಿಮೆ ಮಾಡಿ ಗುಣಮಟ್ಟ ಮತ್ತು ಕಾರ್ಯ ದಕ್ಷತೆಯನ್ನು ಹೆಚ್ಚಿಸುವ ಕೆಲಸ ಆಗಬೇಕಾಗಿದೆ. ಸಾಮಾನ್ಯ ಬಡ ರೈತನಿಗೆ ಸಿಗಬೇಕಾದರೆ ಸಾಹಾಯವು ಅಗತ್ಯ. ಸರಕಾರ ಮುಂಗಡ ಪತ್ರದಲ್ಲಿ ೫೦% ಸಹಾಯಧನ ಘೋಷಿಸಿದೆ.
    ಶಿವರಾಂ

    ReplyDelete
  26. ಮಾಹಿತಿ ಪೂರ್ಣ ಲೇಖನ. ತುಂಬಾ ಚೆನ್ನಾಗಿದೆ. ಈ ಯಂತ್ರಗಳನ್ನು...ಇವುಗಳ ಕಾರ್ಯವೈಖರಿಯನ್ನು ನೋಡಿರಲೇ ಇಲ್ಲ... ಚಿತ್ರದಲ್ಲಿ ಕಾಣಿಸಿದ್ದಕ್ಕೆ ತುಂಬಾ ಧನ್ಯವಾದಗಳು.

    ReplyDelete
  27. ಅಡಿಕೆ ಕೊಯ್ಲು ಬಗ್ಗೆ ಒಂದು ಬ್ಲಾಗ್ ಪೋಸ್ಟ್ ಮೂಲಕ ಚನ್ನಾಗಿ ಬರೆದಿದ್ದೀರ. ಉಪಯುಕ್ತ ಲೇಖನ

    ReplyDelete
  28. very nice article... malenada prakrutiya bhasira madilali iro manassugalu kattiro sanskruti, beleyuttiruva krushi utpanna nijavagiyo vaijnanika sparsha padeyuva drushya illi kanuttide...
    by,
    Pruthviraj Gangotri

    ReplyDelete