ಕೆಲವು ದಿನಗಳ ಹಿಂದೆ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ.ಇಪ್ಪತ್ತೈದು ವರುಷ ಯಕ್ಷಗಾನದಧ್ಯಾಯ ಪೂರೈಸಿದ ಪ್ರತಿಭಾವಂತ ನಟನಿಗೆ ಬೆಳ್ಳಿಹಬ್ಬದ ಸಂಮಾನವಿತ್ತು.
ಸನ್ಮಾನಿತ ನಟ ಒಬ್ಬ ಪ್ರತಿಭಾವಂತ ಕಲಾವಿದ.ಆದರೆ ಅತೀವ ಮದ್ಯವ್ಯಸನಿ.ಈ ವಿಚಾರ ಕುಟುಂಬದವರಿಗೆ, ಅಭಿಮಾನಿಗಳಿಗೆ ತುಂಬಾ ಬೇಜಾರಿನ ಸಂಗತಿ.ಸನ್ಮಾನಿಸುವ ಹೊತ್ತಿನಲ್ಲಿ ಮುಖ್ಯವಾದ ವ್ಯಕ್ತಿಯೊಬ್ಬರಿಂದ ಈ ನಟನಿಗೆ ಮದ್ಯಪಾನ ಬಿಡಬೇಕೆನ್ನುವ ಒತ್ತಾಯ ಹೇರಲಾಯಿತು.ಕುಟುಂಬದವರ ಮತ್ತು ಸಭಾಸದರ ಸಮ್ಮುಖದಲ್ಲಿ.....!
ಈಗಾಗಲೇ ಸಾಕಷ್ಟು ಜನರಿಂದ, ಸಾಕಷ್ಟು ಪ್ರಸಂಗಗಳಲ್ಲಿ ಹೇಳಿಸಿಕೊಂಡಿದ್ದರೂ ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ನಟ ತನ್ನ ಅಭ್ಯಾಸಕ್ಕೆ ದಾಸನಾಗಿದ್ದೂ ನಿಜ... ಉಳಿದವರು ಈ ವರ್ತನೆಯಿಂದ ಬೇಸರಗೊಂಡಿದ್ದೂ ನಿಜ...
ಹಾಗಾದರೆ ಹೇಳಿ ಕೇಳಿ ಮಾಡುವುದರಿಂದ, ಪಂಚಾಯ್ತಿ ಮಾಡಿಸುವುದರಿಂದ, ಸಭೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಹೇಳುವುದರಿಂದ ಒಬ್ಬ ವ್ಯಕ್ತಿಯ ಕುಡಿತ ಬಿಡಿಸುವುದು ಸಾಧ್ಯವೇ....?ಎಲ್ಲರೆದುರಿಗೆ ಹೇಳಿಬಿಟ್ಟರು ಎನ್ನುವ ಅವಮಾನಕ್ಕೀಡಾಗಿ ಮತ್ತೆ ಒಳ ಹೋಗಿ ಇನ್ನಷ್ಟು ಕುಡಿದಿರಲಿಕ್ಕೂ ಸಾಕು.....!
ಅದಷ್ಟು ಸುಲಭವಲ್ಲ..... ಒಮ್ಮೆ ಹಿಡಿಸಿಕೊಂಡ ಕುಡಿತವನ್ನು ಬಿಡುವುದು...!!
ಕುಡಿತ ಹಿಡಿಸಿಕೊಳ್ಳಲು ಸಾಕಷ್ಟು ಕಾರಣಗಳಿವೆ.ನಮಗೆಲ್ಲಾ ಗೊತ್ತಿದ್ದುದೆ... ಕುತೂಹಲ, ಅನುಕರಣೆ , ಅಪ್ರಬುದ್ಧತೆ ಜೊತೆಗೆ.. ಮಜಾ ಮಾಡುವ ಸ್ವಭಾವ...ಹೀಗೆ
ಕುಡಿಯುವುದಕ್ಕೂ, ಅದನ್ನು ಬಿಡದಿರಲಿಕ್ಕೂ ಇನ್ನಷ್ಟು ಕಾರಣಗಳಿವೆ.ಸಂತೋಷ , ದುಃಖ , ದುಡ್ಡು ಬಂದಿದ್ದು, ಕಳೆದಿದ್ದು, ಅವಮಾನ , ಸಮ್ಮಾನ ಹೀಗೆ.
ನಮ್ಮೂರಲ್ಲಿ ನಮ್ಮ ಮನೆಗೊಬ್ಬ ಕೆಲಸದಾಳು ಬರುತ್ತಿದ್ದ. ಆತ ಕುಡಿದುಕೊಂಡು ಬರುತ್ತಿರುವ ವೇಳೆಯಲ್ಲಿ ನಮ್ಮ ತಂದೆಗೆ ಎದುರಾಗಿಬಿಟ್ಟ ಎನ್ನುವ ಕಾರಣದಿಂದ ಅವಮಾನವಾದಂತಾಗಿ ಯಾವತ್ತೂ ಹೀಗಾಗಿರಲಿಲ್ಲ ಎನ್ನುತ್ತಾ ಅದನ್ನು ಮರೆಯಲು ಮತ್ತೆರಡು 'ಕೊಟ್ಟೆ ' ಗಂಟಲಿಗಿಳಿಸುತ್ತಿದ್ದ.......!! ಕಾರಣಗಳು ಸುಲಭವಾಗಿ ಸಿಗುತ್ತವೆ...!
ಜೊತೆಗೆ ಇಲ್ಲಿ ಗಮನಿಸುವ ಅಂಶವೆಂದರೆ,ಮದ್ಯಪಾನದಲ್ಲಿ ವಂಶವಾಹೀ ಕಾರಣಗಳೂ ಸೇರುತ್ತವೆ.ಮದ್ಯಪಾನಿಗಳ ಮಕ್ಕಳು ಕುಡಿತಕ್ಕೆ ಸಿಲುಕುವ ರಿಸ್ಕ್ ಫ್ಯಾಕ್ಟರ್ ಹೆಚ್ಚಿಗೆ ಇರುತ್ತದೆ.ಅಂದರೆ ಕುಡಿಯುವವರೆಲ್ಲರ ಮಕ್ಕಳೆಲ್ಲಾ ಕುಡುಕರಾಗುತ್ತಾರೆ ಎಂದಲ್ಲ.tendency ಹೆಚ್ಚಿಗೆ ಇರುತ್ತದೆ ಅಂತ. ಪರಿಸರ, ಸಂಸ್ಕಾರ, ಮಾರ್ಗದರ್ಶನ ಇಲ್ಲಿ ಹೆಚ್ಚಿನ ಪ್ರಭಾವ ಬೀರುತ್ತವೆ.
ಮದ್ಯಪಾನಿಗಳನೇಕರ ಮಕ್ಕಳು ಸಂಸ್ಕಾರವಂತರಾಗಿ ಇರುವುದನ್ನು ನಾನು ನೋಡಿದ್ದೇನೆ.
ಮದ್ಯಪಾನ ಅಥವಾ ಆಲ್ಕೊಹಾಲಿಸಂ ... ಇದು ಒಂದು ರೋಗ. ಜಾಡ್ಯ....
ಒಮ್ಮೆ ಕುಡಿತದ ವ್ಯಸನಕ್ಕೆ ಒಳಗಾದನೆಂದರೆ, ಆತನಿಗೆ ಮತ್ತೆ ಮತ್ತೆ ಕುಡಿಯಬೇಕೆನಿಸುತ್ತದೆ.
ಯಾರೇ ಏನೇ ಹೇಳಿದರೂ ಕುಡಿಯುವುದನ್ನು ನಿಲ್ಲಿಸಲು ಅಸಾಧ್ಯವಾಗುತ್ತದೆ.
ಕುಡಿಯುವುದನ್ನು ನಿಲ್ಲಿಸಿದರೂ ದೈಹಿಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ನಡುಕ, ಬೆವರುವುದು,ಉದ್ರೇಕ, ವಾಂತಿ ಬಂದಂತಾಗುವುದು..ಇತ್ಯಾದಿ..
ಕುಡಿತ ಅಭ್ಯಾಸವಾದಂತೆ ತೆಗೆದುಕೊಳ್ಳುವ ಆಲ್ಕೊಹಾಲಿನ ಪ್ರಮಾಣ ಕೂಡಾ ಹೆಚ್ಚು ಹೆಚ್ಚು ಬೇಕಾಗುತ್ತದೆ.ಇಲ್ಲದಿದ್ದರೆ ಕಿಕ್ ಸಾಕಾಗುವುದಿಲ್ಲ.
ಮನೆಯಲ್ಲಿ, ಹೊರಗಡೆ ಅನೇಕ ಆರ್ಥಿಕ, ಸಾಮಾಜಿಕ ತೊಂದರೆಗಳಿದ್ದರೂ ಕುಡಿಯುವುದನ್ನು ನಿಲ್ಲಿಸಲು ಸಾಧ್ಯವಾಗದಿರಲು ಕಾರಣವೇನೆಂದರೆ ಇದು ಒಂದು ರೋಗವಾಗಿ ಪರಿಣಮಿಸುವುದು. ಡಯಾಬಿಟಿಸ್, ಅಸ್ಥಮಾ ರೋಗಗಳಂತೆಯೇ ಮದ್ಯವ್ಯಸನ ಕೂಡಾ ಒಂದು ರೋಗ.. ವ್ಯತ್ಯಾಸವೆಂದರೆ ಇದು ಸ್ವಯಂಕೃತ ......!!!
ಆಲ್ಕೊಹೊಲಿಸಂ ಅಥವಾ ಮದ್ಯವ್ಯಸನವನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ..
ಆದರೆ ಉಪಶಮನಕ್ಕೆ ಚಿಕಿತ್ಸೆ ಇದೆ.ಹೇಗೆ ಸಕ್ಕರೆ ಕಾಯಿಲೆ ಉಲ್ಬಣಿಸದಂತೆ ಕಾಲಕಾಲಕ್ಕೆ ತಕ್ಕ ಆರೈಕೆ ಮಾಡಬೇಕೋ ಹಾಗೆಯೇ ಮದ್ಯಪಾನ ನಿಲ್ಲಿಸಿದ ವ್ಯಕ್ತಿಗಳಿಗೆ ಆರೈಕೆ, ಮಾರ್ಗದರ್ಶನ, ಮುತುವರ್ಜಿ ಬೇಕಾಗುತ್ತದೆ.
ದುರಂತವೆಂದರೆ ಮದ್ಯವ್ಯಸನಿಗಳನ್ನು ಕುಟುಂಬದವರಾಗಲೀ, ಸಮಾಜವಾಗಲೀ ಗೌರವದಿಂದ ಕಾಣುವುದಿಲ್ಲ.ಅದು ಕುಡಿಯುವುದನ್ನು ಬಿಟ್ಟ ನಂತರವೂ ಮುಂದುವರೆಯುತ್ತದೆ.ನಿರ್ಲಕ್ಷಕ್ಕೊಳಗಾಗುವುದರಿಂದಲೂ , ಅವಮಾನಕ್ಕೊಳಗಾಗುವುದರಿಂದಲೂ ಮನಸ್ಸು ಮತ್ತೆ ಮದಿರೆಯನ್ನೆ ಬಯಸುತ್ತದೆ.ಕ್ಷಣಕಾಲ ಚಿಂತೆ ಮರೆಯಲು.....!!!
ಮದ್ಯವ್ಯಸನ ಬಿಡಿಸಲು ಚಿಕಿತ್ಸಕ ಕೇಂದ್ರಗಳಿವೆ.. ಕುಡಿಯುವುದನ್ನು ಬಿಡುತ್ತೇನೆ ಎಂದು ಎಷ್ಟು ಗಟ್ಟಿ, ದೃಢ ನಿರ್ಧಾರ ಮಾಡಿಕೊಂಡರೂ ಅಸಹಾಯಕ ಕ್ಷಣ ಹೊಂಚುಹಾಕುತ್ತಲೇ ಇರುತ್ತದೆ... ಹಾಗಾಗಿ ಇಂತಹವರಿಗೆ ನುರಿತ ತಜ್ಞರ, ವೈದ್ಯರ ಅವಶ್ಯಕತೆಯಿದೆ. ಆಪ್ತ ಸಮಾಲೋಚನೆ ಬೇಕಾಗುತ್ತದೆ.
ಮತ್ತೆ ಯಾವಾಗ ಬೇಕಾದರೂ ಆತ ಮದ್ಯಪಾನದ ಸೆಳೆತಕ್ಕೊಳಗಾಗಬಹುದು. ಅದಾಗದಂತೆ ಒಮ್ಮೆ ಚಿಕಿತ್ಸೆ ನಡೆದ ನಂತರ ವ್ಯಕ್ತಿಯನ್ನು ಗೌರವಯುತವಾಗಿ ನೋಡಿಕೊಳ್ಳುವುದು ಮುಖ್ಯ. ಕುಡುಕ ಎಂಬ ಹಣೆಪಟ್ಟಿ ಕಟ್ಟದೆ ನೈತಿಕ ಬೆಂಬಲ, ಆತ್ಮವಿಶ್ವಾಸ ಮೂಡಿಸುವುದು ಪ್ರೀತಿವಿಶ್ವಾಸ ತೋರಿಸುವುದು ಅಗತ್ಯ.
ಉತ್ತಮ ಲೇಖನ. ನಿಜ. ಕುಡಿತ ವ್ಯಕ್ತಿಯನ್ನು ಎಲ್ಲರಿಂದ ಎಲ್ಲದುದರಿಂದ ಬೇರ್ಪಡಿಸಿಬಿಡುತ್ತದೆ. "ಮೊದ ಮೊದಲು ನೀವು ಕುಡಿಯುತ್ತೀರಿ, ನಂತರ ಅದೇ ನಿಮ್ಮನ್ನು ಕುಡಿಯುತ್ತದೆ" ಎನ್ನುವುದು ಎಷ್ಟು ಸತ್ಯ ಅಲ್ಲವೇ?
ReplyDeleteಮದ್ಯವ್ಯಸನದ ಬಗ್ಗೆ ತಮ್ಮ ಲೇಖನ ಚೆನ್ನಾಗಿ ಮೂಡಿದೆ.
ReplyDeletevery good & informative article..
ReplyDeleteThanks.
ಒಳ್ಳೆ ಮಾಹಿತಿ...
ReplyDeleteಕುಡಿತ , ’ಜಾಢ್ಯ’ವೇ . ಈ ಚಟ ಪ್ರತಿಭಾನ್ವಿತ ರಾಜುಅನಂತಸ್ವಾಮಿ ಯನ್ನೇ ಬಿಡಲಿಲ್ಲ.
ReplyDeleteಪ್ರೀತಿ, ವಿಶ್ವಾಸಗಳಿಂದ ಈ ಚಟ ಬಿಡಿಸುವುದು ಸಾಧ್ಯವೇನೋ....ಲೇಖನ ಚೆನ್ನಾಗಿದೆ
ಒಳ್ಳೆ ಲೇಖನ, ಕುಡಿತ ಎಲ್ಲರಿಂದ ದೂರ ಇಟ್ಟುಬಿಡುತ್ತೆ
ReplyDeleteಕುಡಿತದಿಂದ ದೂರವಾಗದೆ ಅದೇ ಅವರನ್ನು ಕುಡಿದ ತುಂಬಾ ಜನರನ್ನು ನೋಡಿದ್ದೇನೆ..... ತುಂಬಾ ಕಷ್ಟ ಅಂತಾರೆ ಕುಡಿತ ಬಿಡೋದು ಅಂತಾರೆ..... ಸರಿಯಾದ ಮಾರ್ಗದರ್ಶನ, ಪ್ರೀತಿ, ಸ್ವಲ್ಪ ವಿದ್ಯೆ ಇಂಥವರನ್ನು ಕುಡಿತದಿಂದ ದೂರ ತರಬಹುದೇನೋ...... ಉತ್ತಮ ಲೇಖನಮೇಡಂ.....
ReplyDeleteತೇಜಸ್ವಿನಿ
ReplyDeleteಶೋಕಿಗಾಗಿ ಶುರುವಾಗುವ ಪ್ರತಿಯೊ೦ದೂ ಚಟವಾದಾಗ ಅದು ನಮ್ಮನ್ನು ಚಟ್ಟದತ್ತಲೇ ಒಯ್ಯುತ್ತದೆ...
ಸುಬ್ರಹ್ಮಣ್ಯ ಅವರೆ
ಮೊದಲ ಹ೦ತದಲ್ಲಿ ಪ್ರೀತಿ ವಿಶ್ವಾಸ ಪರಿಣಾಮ ಬೀರಬಹುದು.
ವ್ಯಸನಿಗಳಿಗೆ ರಿಹ್ಯಾಬಿಲಿಟೇಶನ್ ಕ್ಯಾ೦ಪೇ ಬೇಕಾಗುವುದು.ಪತ್ನಿ ಮೊದಲು ಪ್ರೀತಿಯಿ೦ದಲೇ ಹೇಳುತ್ತಾಳಲ್ಲವೇ... ಕುಡಿತದ ಮು೦ದೆ ಸ೦ಸಾರ, ವ್ಯಾಪಾರ ಎಲ್ಲಾ ಗೌಣ...!
ಮನಸು
ಕುಡಿತ ಮನುಶ್ಯನನ್ನು ಒ೦ಟಿಯನ್ನಾಗಿ ಮಾಡಿಬಿಡುತ್ತದೆ..
ಯಾರೂ ಹತ್ತಿರ ಸೇರಿಸುವುದಿಲ್ಲ..
ಸ್ವಚ್ಚತೆ ಕೂಡಾ ಇರುವುದಿಲ್ಲವಲ್ಲ.
ಸೀತಾರಾ೦ ಸರ್..ಸವಿಗನಸು , ಮನಮುಕ್ತಾ,
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ದಿನಕರ ಮೊಗೇರ..
ReplyDeleteಕುಡಿತ ಬಿಡುವೆನೆನ್ದು ಬಿಟ್ಟವರು ಮತ್ತೆ ಕೆಲವು ದಿನಗಳ ನ೦ತರ ಕುಡಿದು ಚರ೦ಡಿಯಲ್ಲಿ ಬಿದ್ದಿರುತ್ತಾರೆ.ಬಿಡುವುದು ಮತ್ತು ಬಿಡಿಸುವುದು ಕಷ್ಟ ಸಾಧ್ಯ..
ಪುನರಾವರ್ತನೆಗೊಳ್ಳದ೦ತೆ ನೋಡಿಕೊಳ್ಳುವುದು ಕಶ್ಟ..
ಸಾಮಾಜಿಕ ಕಳಕಳಿಯ ಉತ್ತಮ ಲೇಖನ
ReplyDeletechennagide nimma lekhana :)
ReplyDeleteಮೇಡಮ್,
ReplyDeleteಮದ್ಯ ವ್ಯಸದ ಬಗ್ಗೆ ಒಂದು ಸೊಗಸಾದ ಲೇಖನವನ್ನು ಬರೆದಿದ್ದೀರಿ..ಇಂಥ ಸಮಾಜಿಕ ಕಳಕಳಿಯುಕ್ತ ಲೇಖನ ಆಗಾಗ ಬರುತ್ತಿರಲಿ.
ಒಮ್ಮೆ ಚಟದ ದಾಸನಾದ ಮೇಲೆ, ಬಿಡಿಸಿಕೊಳ್ಳುವದು ತುಂಬಾ ಕಠಿಣ. ಉತ್ತಮ ಲೇಖನವನ್ನು ಬರೆದಿದ್ದೀರಿ.
ReplyDeleteಕುಡಿತ ಒಳ್ಳೆಯದೋಕೆಟ್ಟದ್ದೊ ಇದು ಪರಿಣಾಮ ಬಂದಾಗ ಮಾತ್ರ ಗೊತ್ತಗೋ ಸತ್ಯ
ReplyDeleteಉತ್ತಮ ಲೇಖನ !
ReplyDeleteಕುಡಿಯುವುದು ಇತ್ತೀಚೆ ಬಹು ಸಹಜವಾಗಿ ಬಿಟ್ಟಿದೆ. ಕೆಲ ಅಂಕಿ-ಅಂಶಗಳ ಪ್ರಕಾರ ದೆಹಲಿ ಹಾಗೂ ಮುಂಬೈ ಗಳಂಥ ಮಹಾ ನಗರಗಳಲ್ಲಿ ಕುಡಿತ ಪ್ರಾರಂಭಿಸುವ ವಯಸ್ಸು ಸರಾ ಸರಿ ೧೪-೧೫ ವರ್ಷಗಳು ಎಂದು ಪತ್ರಿಕೆಯೊಂದರಲ್ಲಿ ಓದಿದ ನೆನಪು. ಅಂದರೆ , ಸಮಸ್ಯೆಯ ಗಂಭೀರತೆಯ ಅರಿವಾಗುತ್ತದೆ !
ಬಲು ಬೇಗ ಚಟವಾಗಿಬಿಡುವ ಇದನ್ನು ಬಿಡುವುದು ವ್ಯಸನಿಗಳಿಗೆ ಕಷ್ಟವಾದರೂ ಅಸಾಧ್ಯವಲ್ಲ ! ಚಟದಿಂದ ಸಂಪೂರ್ಣ ಮುಕ್ತರಾಗಬಯಸುವವರಿಗೆ A A ( Alcoholic Ananymus ) ಸಂಸ್ಥೆಯಂಥಾ ಅಂತರಾಷ್ಟ್ರೀಯ ಸಂಸ್ಥೆಗಳು ಸಹಾಯಮಾಡುತ್ತವೆ.
ನಮ್ಮ ಅತ್ಯಂತ ಹತ್ತಿರದವರೊಬ್ಬರು ಕುಡಿಯಲು ಆರಂಭಿಸಿದರೆ, ಅವರಿಗೆ ಹಗಲು-ರಾತ್ರಿಯ ಪರಿವೆ ಇರುತ್ತಿರಲಿಲ್ಲ ! ಒಮ್ಮೆ ಇದರಿಂದ ಬಿಡುಗಡೆ ಹೊಂದಬೇಕೆಂಬ ಇಚ್ಛೆಯಿಂದ ಈ ಸಂಸ್ಥೆಯ ಸದಸ್ಯರಾದ ಇವರು ಕಳೆದ ಸುಮಾರು ೧೦ ವರ್ಷಗಳಿಂದ ಒಮ್ಮೆಯೂ ಕುಡಿಯಲಿಲ್ಲ ಎಂದರೆ ಅವರ ಗಟ್ಟಿತನವನ್ನು ಮೆಚ್ಚಲೇಬೇಕು. ಸಾಧಾರಣವಾಗಿ ಪಂಜಾಬಿಗಳ ಮನೆಗಳಲ್ಲಿ ಯಾವ ಕಾರ್ಯಕ್ರಮವೇ ಇರಲಿ ಕುಡಿಯುವುದು ಎಂದರೆ ನೀರು ಕುಡಿಯುವಷ್ಟೇ ಸಹಜ ! ಇಂಥವರು ತಮ್ಮ ಮಗನ ಮದುವೆಯಲ್ಲೂ ಸಹ ಬಾಟಲಿಯಿಂದ ದೂರವೇ ಇದ್ದರು . ಅಷ್ಟೇ ಅಲ್ಲಾ , ಈಗ A A ಯ ಭಾರತೀಯ ಶಾಖೆಯ ಅಧ್ಯಕ್ಷರೂ ಸಹ !
ಚಟವನ್ನು ಬಿಡಲು ಮನೆಯವರೆಲ್ಲರ ಸಹಕಾರ ಪ್ರೋತ್ಸಾಹಗಳೊಂದಿಗೆ ಗಟ್ಟಿ ಮನಸ್ಸು ಕೂಡ ಎನ್ನುವುದಕ್ಕೆ ಇವರೊಂದು ನಿದರ್ಶನವಾಗಿದ್ದಾರೆ !
ನಿಮ್ಮ ಲೇಖನ ಚೆನ್ನಾಗಿದೆ.ಮತ್ತೊ೦ದಿದೆ ಯಾರೋ ಹೇಳಿದರೆ೦ದು ಕುಡಿತ ಬಿಡುವವರಿಲ್ಲ. ಸ್ವತಹ ದೃಢ ಸ೦ಕಲ್ಪದಿ೦ದ ಇದು ಸಾದ್ಯ. ಸಾದ್ಯವಿಲ್ಲ ಎನ್ನುವುದು ಸ೦ಪೂರ್ಣ ಸುಳ್ಳು.ಕುಡಿತಕ್ಕೆ ಕಾರಣ ಹೇಳುವವರಿಗೆ ಬಿಡಲು ಕಾರಣ ಸಿಗುವುದಿಲ್ಲ ಅಷ್ಟೆ.
ReplyDeleteutthama vicharada lekhana.
ReplyDeletenanna abhipraya "yaava vyakthiye adaru kuditha biduvudu avana druda swasankalpa dinda maathra sadhaya". kudithava bidisuva prayathna, kudukana swasankalpa villade arthaheena
'ಚುಕ್ಕಿಚಿತ್ತಾರ' ಅವ್ರೆ..,
ReplyDeleteಉಪಯುಕ್ತ ಮಾಹಿತಿ ನೀಡುವ ಉತ್ತಮ ಲೇಖನ..
ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com
ಒಳ್ಳೆಯ ಲೇಖನ... ತು೦ಬಾ ಉತ್ತಮ ಅ೦ಶಗಳನ್ನು ತಿಳಿಸಿಕೊಟ್ಟಿದ್ದೀರಿ....
ReplyDeleteಕುಡಿತದ ವ್ಯಸನ ಬಿಡಲು ವ್ಯಸನಿಯ ದ್ರುಢ ನಿರ್ಧಾರದಷ್ಟೆ ಮುಖ್ಯ ಮನೆಯವರ ಸಹಕಾರ ಕೂಡ.ಹೆಚ್ಚಿನ ಕುಡಿತ ಬಿಟ್ಟವರು ಕೆಲವು ವರ್ಷಗಳ ನ೦ತರ ಮತ್ತೆ ಶುರು ಮಾಡಿಬಿಡಲು ಕಾರಣ ಪರಿಸರವೂ ಇರುತ್ತದೆ.ಆಲ್ಕೊಹಾಲಿಸಮ್ ಅನ್ನುವುದು ರೋಗವಾಗುವುದರಿ೦ದ ಒಮ್ಮೆ ಪುನರಾವರ್ತನೆಗೊ೦ದರೆ ಮತ್ತೆ ಅ೦ಟಿಕೊಳ್ಳುವುದು ಬಹುಬೇಗ.ಅಪವಾದ ಅಲ್ಲೊ೦ದು ಇಲ್ಲೊ೦ದು ಇರಬಹುದು.
ReplyDeleteಇಲ್ಲಿ ಸಾಮಾಜಿಕ ಜವಾಬ್ಧಾರಿಯಿದೆ.
ಪ್ರತಿಕ್ರಿಯಿಸಿದ ಎಲ್ಲರಿಗೂ ವ೦ದನೆಗಳು.
ಮಧ್ಯ ವ್ಯಸನದ ಬಗ್ಗೆ ನಿಮ್ಮ ಲೇಖನ tumba ಚೆನ್ನಾಗಿದೆ. ನೀವು ಹೇಳಿದಂತೆ ಒಮ್ಮೆ ಮಧ್ಯಪಾನದ ಚಟಕ್ಕೆ ಬಿದ್ದರೆ ಅದರಿಂದ ಬಿಡಿಸಿಕೊಳ್ಳುವುದು ತುಂಬಾ ಕಷ್ಟ..
ReplyDeleteಕೆಲ್ಸ ಸಿಕ್ಕಿಲ್ಲ ಅಂತ ದುಖ್ಖದಿಂದ ಕುಡಿಯುವ ವ್ಯಕ್ತಿ ಕೆಲ್ಸ ಸಿಕ್ಕಿದ್ಮೇಲೆ ಸಿಕ್ಕ ಸಂತೋಷದಲ್ಲಿ ಕುಡೀತಾನೆ,ಮದ್ವೆ ಆಗಿಲ್ಲ ಅಂತ ಬೇಜಾರಾಗಿ ಕುಡಿವವನು ಮದ್ವೆ ಆದ್ಮೇಲೆ ಅಂತೂ ಮದ್ವೆ ಆಯ್ತಲ್ಲ ಅಂತ ಖುಶಿಯಿಂದ ಕುಡೀತಾನೆ. ಕುಡುಕರ ಹಣೆಬರಹವೇ ಅಷ್ಟು, ಪ್ರತೀ ಹೆಜ್ಜೆಗೂ ಸುಖ ದುಖ್ಖದ ತಾಳೆ ಹಾಕಿ ಕುಡಿಯಲು ಕಾರಣ ಹುಡುಕಿ ತೆಗೀತಾರೆ. ಸಿನೇಮಾದಲ್ಲಿ ಮಾತ್ರ ಕುಡುಕರು ತನ್ನ ಲವರ್ ಗೇಂತ, ಹೆಂಡತಿಗೇಂತ ಕುಡಿತ ಬಿಡೋದು.
ReplyDeleteu r absolutely right about this vice.
ReplyDeletei have visited ur blog before. When i shared with Dr. Azad (jalanayana blog) that i would be uploading teerthahalli adike koylu pics, he said that 'chukkichittaara' has put it up in her blog. though i could not find it...i came across of ur skethch of dear Aishu. thought it was lovely and tried to comment. sometimes my netbook poses a problem
thanks for visiting my blog
take care
:-)
malathi S
ನಿಮ್ಮ ಬ್ಲಾಗ್ ನೋಡುತ್ತಿದ್ದೆ...ನಾನು ಪೋಸ್ಟ್ ಮಾಡುತ್ತಿದ್ದಾಗಲೇ ನನ್ನ ಬ್ಲಾಗ್ ಗೆ ಭೇಟಿ ನೀಡಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ..
ReplyDeleteನನ್ನ ಯುಗಾದಿ ಚಿತ್ರಗಳಿಗೆ ನಿಮ್ಮ ಕಲ್ಪನೆಯಲ್ಲಿ ಕವಿತೆ ಅಥವಾ ಚಿಂತನೆ ಹೊರಹೊಮ್ಮಿದರೆ ಇನ್ನೂ ಚೆನ್ನ.
ಮನಸಿಗೆ ಪ್ರೇಮದ
ಲ್ಯಾಮಿನೇಶನ್ ಮಾಡಿಸಿದ್ದೇನೆ.
ಎಂಬ ನಿಮ್ಮ ಕವನದ ಸಾಲುಗಳು ಹಿಡಿಸಿದವು
ಕುಡಿತ ಎಷ್ಟು ಸಂಸಾರಗಳನ್ನು ಛಿದ್ರ ಛಿದ್ರ ಮಾಡಿರಲಿಕ್ಕಿಲ್ಲ...ಬರೀ ಹೇಳಿಕೆ, ಪ್ರಮಾಣ, ಆಣೆಗಳಿಂದ ಇದನ್ನು ಬಿಡಿಸುವುದು ಸಾಧ್ಯವಿಲ್ಲ. ಇಲ್ಲಿ ಮೆಡಿಕಲ್ ಕೌನ್ಸಲಿಂಗ್...ಆರ್ಥಿಕ ಸುಭದ್ರತೆಯನ್ನು ಮನನ ಮಾಡಿಸುವುದು...ಅಲ್ಲದೇ ಸಾಂಸಾರಿಕವಾಗಿ ಮಾನಸಿಕ ಬಾಧೆಗಳಿದ್ದರೆ ಅದನ್ನು ಕಡಿಮೆಗೊಳಿಸುವುದು...ಇತ್ಯಾದಿ...ಚನ್ನಾಗಿದೆ ಲೇಖನ ವಿಜಯಶ್ರೀ ವರೇ.
ReplyDeleteವ್ಯಕ್ತಿ ಮೊದಲು ಕುಡಿಯುತ್ತಾನೆ .ಆಮೇಲೆ ಕುಡಿತವೆ ಅವನನ್ನು ಕುಡಿಯುತ್ತದೆ.ವ್ಯಕ್ತಿಗೆ ತನ್ನ ದೌರ್ಬಲ್ಯದ ಮೇಲೆ ಅಸಾಧ್ಯ ಸಿಟ್ಟು ಬರಬೇಕು.ಆಗ ಕುಡಿತ ಬಿಡುವುದು ಸಾಧ್ಯ.
ReplyDeleteಕುಟುಂಬ ಮತ್ತು ಸಮಾಜವನ್ನು ಹಾಳುಗೆಡುವ ಈ ಚಟದ ಬಗ್ಗೆ ಒಳ್ಳೆ ಬರವಣಿಗೆ
ReplyDeleteಮದ್ಯ ವ್ಯಸನದ ಬಗ್ಗೆ ತುಂಬಾ ಸೊಗಸಾಗಿ ಬರೆದಿದ್ದೀರಿ .ಕುಡಿತ ಚಟಕ್ಕೆ ಹೇಗೆ ಬಲಿ ಆಗ್ತರಲ್ಲ.?
ReplyDeleteಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ
ReplyDeleteದಯವಿಟ್ಟು ಈ ಸಲಹೆಯನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಿ.
ReplyDelete೧) ಅದು ಮಧ್ಯಪಾನ ಅಲ್ಲ ಮದ್ಯಪಾನ.
೨) "ಇಪ್ಪತ್ತೈದು ವರುಷ ಯಕ್ಷಗಾನದಧ್ಯಾಯ ಪೂರೈಸಿದ ಪ್ರತಿಭಾವಂತ ನಟನಿಗೆ ಬೆಳ್ಳಿಹಬ್ಬದ ಸಂಮಾನವಿತ್ತು. ಸನ್ಮಾನಿತ ನಟ ಉದಯೋನ್ಮುಖ ಪ್ರತಿಭಾವಂತ ಕಲಾವಿದ" -- ಈ ಎರಡು ವಾಕ್ಯಗಳು ಕಾಂಟ್ರಡಿಕ್ಟರೀ ಆಗಿವೆ. ಉದಯೋನ್ಮುಖ ಅಂತ ಸಾಮಾನ್ಯವಾಗಿ ಹೊಸಬರಿಗೆ ಹೇಳ್ತೇವೆ. ೨೫ ವರ್ಷ ಯಕ್ಷಗಾನದಧ್ಯಾಯ ಪೂರೈಸಿದವರಿಗೆ ಅಲ್ಲ.
ಧನ್ಯವಾದಗಳೊಂದಿಗೆ
ಉಮೇಶ್ ಪೆಲತ್ತೂರು.
ಚಟಗಳು ಒಂದು ರೀತಿಯ ಅಂಟು. ನಮಗರಿವಿಲ್ಲದೆಯೇ ಕೆಲವು ಸಾರಿ ನಮ್ಮನ್ನು ಆವರಿಸಿರುತ್ತವೆ. ನನಗೆ ಉಗುರು ಕಚ್ಚುವ ಚಟವಿದೆ. ಬಿಡಬೇಕೆಂದು ೨೦ ವರ್ಷಗಳಿಂದ ಪ್ರಯತ್ನಿಸುತ್ತಲೇ ಇದ್ದೇನೆ. ಇನ್ನೂ ಬಿಡಲಾಗಲಿಲ್ಲ :-(
ReplyDeleteಯುಗಾದಿಯ ಹಾಗು ಹೊಸ ವರ್ಷದ ಶುಭಾಶಯಗಳು
ReplyDelete@ ಪ್ರತಿಫಲನ
pratiphalana.blogspot.com
Nija chukkichittara avare... Kuditha mattu halavu itare ketta abhyaasagalu manushyana jeevanavannu bereya haadige oyyuttade... tanage gottillada haage shuruvaguva ee chata, nantara poornavaagi kaarmodadante aavarisuttade...
ReplyDeleteNimage hosavarshada shubhashayagalu... samaya sikkaaga nanna blog ge omme bheti kodi..
http://hrudayantharaala.blogspot.com/
ಉಮೇಶ್ ಅವರೆ..
ReplyDeleteನೀವು ಗಮನಿಸಿದ ತಪ್ಪುಗಳನ್ನು ಸರಿಪಡಿಸಿದ್ದೇನೆ.ಈ ತಪ್ಪುಗಳು ನನ್ನ ಗಮನದಲ್ಲೇ ಇದ್ದರೂ ನನ್ನ ಪಿ ಸಿ ಯ ತೊ೦ದರೆಯಿ೦ದಾಗಿ ನನಗದನ್ನು ಸರಿಪಡಿಸಲು ಸಮಯ ಬೇಕಾಯಿತು..ಓದುಗರಿಗೆ ಇದರಿ೦ದು೦ಟಾದ ಕಿರಿಕಿರಿಗೆ ಕ್ಷಮೆಯಾಚಿಸುತ್ತೇನೆ.
ಹಾಗೂ ಈ ರೀತಿಯ ತಪ್ಪುಗಳು ಕ೦ಡುಬ೦ದಾಗ ದಯವಿಟ್ಟು ಎಚ್ಚರಿಸಿ...
ಪ್ರತಿಕ್ರಿಯಿಸಿದ ಎಲ್ಲರಿಗೂ ವ೦ದನೆಗಳು.
ಕುಡಿತದ ಬಗ್ಗೆ ಸೊಗಸಾಗಿ ಬರೆದಿದ್ದೀರಿ.
ReplyDeleteಕುಡಿತಕ್ಕೆ ಕಾರಣಗಳು ಹಲವು. "corporate ಕುಡಿತ" ಅನ್ನೋದು ಒಂದು hobby ,fashion .
ಕುಡಿಯುವವರಲ್ಲಿ ಆತ್ಮೀಯತೆ ಕೂಡ ಜಾಸ್ತಿ. corporate kudukaru ಸಂಪರ್ಕ ಕೊಂಡಿಯಾಗಿ ಕೂಡ
ಕುಡಿತವನ್ನು ಬಳಸುತ್ತಾರೆ. business ಜನರಲ್ಲಿ ಇದು ಸಾಮಾನ್ಯ. ಕುಡಿದರೆ ಲಾಭ ಹೆಚ್ಚು!!.
ಮಾರ್ಕೆಟಿಂಗ್ ಉದ್ಯೋಗಿಗಳಿಗೆ ಕುಡಿತ ಹೊಸ ಅವಕಾಶ ಸೃಸ್ಟಿಸುತ್ತದೆ.
corporate ಜಗತ್ತಿನಲ್ಲಿ ಕುಡಿಯದವರನ್ನು ಅನಾಗರಿಕರಂತೆ ಭಾವಿಸುವವರೂ ಇದ್ದಾರೆ.
ರಾಜಕೀಯ, ಉದ್ಯೋಗ, ಸಿನಿಮಾ, ಯಕ್ಷಗಾನ, ಸಂಗೀತ, ಸಾಹಿತ್ಯ, ಕಲೆ, ಇತ್ತೀಚಿಗೆ ಸನ್ಯಾಸ ಹೀಗೆ ದೊಡ್ಡ ಕೆಲಸ
ಮಾಡುವವರೆಲ್ಲ ಹೆಚ್ಚಾಗಿ ಕುಡುಕರೆ.
ಇತ್ತೀಚಿಗೆ ಹೆಂಗಸರಲ್ಲೂ ಕುಡಿತ ಸಾಮಾನ್ಯ.
ತೀರ ಬೆರಳೆಣಿಕೆಯ ಸುಸಂಸ್ಕೃತರಲ್ಲಿ ಮಾತ್ರ ಕುಡಿತದ ಬಗ್ಗೆ ಅಸಹ್ಯ, ತಿರಸ್ಕಾರ ಇದೆ.
ಅಥವಾ ಕುಡಿತದಲ್ಲಿ ಮೇಲು ಕೀಳು ಅನ್ನೋ ವರ್ಗೀಕರನವೆನಾದ್ರು ಇದೆಯೋ ಗೊತ್ತಿಲ್ಲ..
ಕುಡಿತ ಅನಿವಾರ್ಯವು ಅಲ್ಲ ಅಥವಾ ಅಂಥಹ ಸುಖವನ್ನೇನು ನೀಡುವುದಿಲ್ಲ...
ಅದು ಒಂದು ಮನೋದೌರ್ಬಲ್ಯ ಅಸ್ಟೇ... ಅಥವಾ ಕುಡಿಯದಿರುವಾಗ ಹಿಂಜರಿಯುವ ಅದೆಷ್ಟನ್ನೋ ಕುಡಿದಾಗ ಮಾಡಬಹುದೆಂದು ಕುಡಿಯುತ್ತಾರೆನೋ?
ನನ್ನ ಬ್ಲಾಗ್ ಗೆ ಸ್ವಾಗತವಿದೆ.
ಶಿವರಾಮ ಭಟ್ಟರೆ....
ReplyDeletecorporate ಕುಡಿತದ ಬಗ್ಗೆ ಚನ್ನಾಗಿ ವಿವರಿಸಿದ್ದೀರಿ.
ನನ್ನವರು ಹೇಳುತ್ತಿರುತ್ತಾರೆ.....’ ಕುಡುಕರಿಗೆ ಕುಡುಕರೇ ಮೋರಲ್ ಸಪೋರ್ಟ್... ಅ೦ತ..
ನಮ್ಮದೂ ವ್ಯಾಪಾರ ಕ್ಷೇತ್ರವೆ...ಈ ಮಾಧ್ಯಮ ಇಲ್ಲದಿರುವುದರಿ೦ದ ಕೆಲವು ವ್ಯಾಪಾರ ಸ೦ಬ೦ಧಗಳು ಕುದುರುವುದಕ್ಕೆ ತಡೆಯಾಗಿದೆ.. ಅನ್ನಬಹುದು...!!
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ವಿಜಯಶ್ರೀ ಅವರೇ...ಉತ್ತಮ ವಿಚಾರ... ಕುಡಿತದಿಂದ ಪರಿಣಾಮ ಎಷ್ಟು ಕೆಟ್ಟದ್ದು ಎನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ.. ಆದರು ಜನ ಕುಡಿಯೋದು ಬಿಡೋದಿಲ್ಲ ಅಂತಾರೆ...!
ReplyDeleteಒಳ್ಳೆಯ ಲೇಖನ..
ನಿಮ್ಮವ,
ರಾಘು.