Saturday, January 23, 2010

ಕೇಳಲಾರೆ... ತಾಳಲಾರೆ...

ನಿಮಗೆ ಮುಖ್ಯವಾದ ವಿಚಾರವೊ೦ದನ್ನು ಹೇಳಬೇಕೆಂದು ಕೊಂಡಿದ್ದೇನೆ. ...........

ಗಜಮುಖನೆ ನಾನು ಇಂದು....
ನಿನ್ನನೆ ಭಜಿಸುವೆಎಂದೂ .....
ಕರುಣೆ ತೋರು ನೀನು ನನ್ನಲೀ.......

ಅಯ್ಯೋ ... ಇದ್ಯಾವ ಸೀಮೆಯ ಭಕ್ತಿಗೀತೆಯಪ್ಪಾ... ಸಿನಿಮಾ ಹಾಡುಗಳ ಧಾಟಿಯಲ್ಲೇ ಭಕ್ತಿಗೀತೆಗಳನ್ನು ಹಾಡುವುದು ಹೊಸ ಸ್ಟೈಲಿರಬೇಕು....! ಅನಿಸುತಿದೆ ಯಾಕೋ ಇಂದು.... ಅಂದ ಹಾಗೆಯೇ ಕೇಳಿಸುತ್ತಿದೆ.

ನಾನು ಹೇಳಲು ಹೊರಟಿದ್ದು ಏನೆಂದರೆ..........

ಮಂದಾಕಿನಿಯೇ.. ನೀ ಸಿಡಿಲಿನ ಕಿಡಿಯೇ...
ಮಂದಾಕಿನಿಯೇ...ನೀ ಸುಡಬೇಡ ತಡಿಯೇ....
................. ............ ...................

ಕದ್ದು ಕದ್ದು ನೋಡ್ತಾರೆ....
ಪಾಪ ಇನ್ನೆನ್ಮಾಡ್ತಾರೆ...?

ಕಾಲೇಜು ಹುಡುಗರ ಹುಡುಗಾಟ ಚಂದ...ನಾವು ಪಿ. ಯು. ಸಿ. ಯಲ್ಲಿದ್ದಾಗ ಜೂವಾಲಜಿ ಲ್ಯಾಬಿಗೆ ಹೋಗುತ್ತಿದ್ದರೆ...
ಕೆಲ ಹುಡುಗರು ...ಜೂವಾಲಜಿ ಲ್ಯಾಬಿಗೆ ಹೊಸ ಎಮ್ಮೆ ತಂದಿದ್ದಾರಂತೆ... ನಿಮ್ಮನ್ನೇ ಕರೆಯುತ್ತಿದ್ದಾರೆ...
ಎಂದು ಗೋಳು ಹೊಯ್ದುಕೊಳ್ಳುತ್ತಿದ್ದರು... ತರದ ತುಂಟತನ ಇಷ್ಟವಾಗುತ್ತಿತ್ತು ನಮಗೆ.


ನೋಡಿ ನಮ್ಮಲ್ಲೀಗ ಏನಾಗಿದೆಯೆಂದರೆ ದೇಶದಲ್ಲಿ ಮೊದಲು....

ಹಳೆ ಪಾತ್ರೆ ..ಹಳೆ ಕಪಡಾ....ಹಳೆ ಪೇಪರ್ ..ತರವೊಯಿ...
ಪ್ರೀತಿ ಪ್ರೇಮ.......... ..... .....

ಎಲ್ಲ ಹಳೆಯದೇ ಬಿಡಿ . ಗ್ಲೋಬಲ್ ಈಟಿಂಗು... ಲೋಕಲ್ ತಿನ್ಕಿಂಗು ....ಪ್ರೀತಿ ಪ್ರೇಮ ಸುಲಭಕ್ಕೆ ದೊರಕುವುದಿಲ್ಲ..ಕಂಬಕ್ತ್ಇಷ್ಕ್....

ಈಗ ಹೇಳಲು ಆಗದಪ್ಪಾ.....ಈ ಗಲಾಟೆಯಲ್ಲಿ....

ನೋಡಿ ಇವರೇ.. ಪಕ್ಕದ ಬೀದಿಯಲ್ಲಿ ಈಗ ಗಣೇಶನ್ನ ಕೂರಿಸಿದ್ದಾರೆ.... ಹೊತ್ತಲ್ಲದ ಹೊತ್ತಲ್ಲಿ ಯಾವಾಗ ಬೇಕಾದರೂ ಹಬ್ಬಮಾಡುತ್ತಾರೆ.
ಬ್ರಹ್ಮಚಾರಿ ಗಣೇಶನ ಒಂದು ಪಕ್ಕದಲ್ಲಿ ಅಣ್ಣಮ್ಮ,ಇನ್ನೊಂದು ಪಕ್ಕದಲ್ಲಿ ಕನ್ನಡಮ್ಮ...
ಗಣೇಶ ಸಿದ್ಧಿ, ಬುದ್ಧಿ ಎಂಬಿಬ್ಬರೊಡನೆ ಕದ್ದು ವ್ಯವಹರಿಸುತ್ತಾನೆಂಬ ಸುದ್ದಿಯಿದ್ದರೂ ..... ವಿಚಾರ ಬಿಡಿ .. ನಾನು ನೋಡಿಲ್ಲ.
ಅಮ್ಮಂದಿರು ಬಹುಷಃ ಕಾವಲಿಗೆ ಕುಳಿತಿದ್ದರೂ ಕುಳಿತಿರಬಹುದು....!!

ಅವರದ್ದೇ ಗಲಾಟೆ..... ಅಂದರೆ ಮೈಕಿನದ್ದು ಎಂದರ್ಥ. ತರಾವರಿ ಗಾಯನ... ಬೆಳಗ್ಗೆ ನಾಲ್ಕು ಘಂಟೆಗೆ ಸುಪ್ರಭಾತದೊಂದಿಗೆ ಶುರುವಾದರೆ ರಾತ್ರಿ ಹನ್ನೊಂದರ ತನಕ ಬಿಡುವೆ ಇಲ್ಲ ಬಾಯಿಗೆ...[ ಮೈಕಿನದ್ದು]

ದಿನ ಬಂದಿದ್ದರಲ್ಲ ಪಡ್ಡೆ ಹೈದರು..ಚಂದಾ ಕೇಳಲು...
ಕೊಡುವುದಿಲ್ಲ ಇವರೇ... ಮೈಕಿನ ಗದ್ದಲ ಕೇಳಲು ಸಾಧ್ಯವಿಲ್ಲ. ದುಡ್ಡು ಕೊಟ್ಟು ದುಃಖ ಪಡಲೇ ನಾನು....?
ಬೈದು ಕಳಿಸಿದ್ದೇನೆ. ನಿಮ್ಮ ಮನೆ ಬಾಗಿಲಿಗೇ ಮೈಕ್ ಕಟ್ಟುತ್ತೇವೆಂದು ಹೇಳಿ ಹೋಗಿದ್ದರಲ್ಲ ....ಅವರೂ ಸಿಟ್ಟಲ್ಲಿ....!

ಹಾಗಾದರೆ ಗಣೇಶನಿಗಾದರೂ ಬುದ್ಧಿ ಇಲ್ಲದೆ ಅಲ್ಲೇ ಕುಳಿತಿದ್ದಾನೆಯೇ....?
ಯಾರಿಗ್ಗೊತ್ತು.... ದೇವರು ಆತ್ಮ ಸ್ವರೂಪಿಯಲ್ಲವೇ....? ಸರ್ವಾಂತರ್ಯಾಮಿ....ಎಲ್ಲಾದರೂ ಹೋಗಿರಲೂ ಬಹುದು...
ಮತ್ತೊಂದು, ಇದ್ದರೂ ಆತನ ಕಿವಿ ಕೆಪ್ಪವಾಗಿರಲಿಕ್ಕೆ ಸಾಕು... ಮೊರದಗಲ ಕಿವಿಯಿದ್ದರೂ ಹೊರಗಿನ ತಮಟೆ ಸದ್ದಿಗೆ ಒಳಗಿನ ತಮಟೆ ಹರಿದಿರಲೂಬಹುದು...! ಕಾಲದಲ್ಲಿ ಕ್ವಾಲಿಟಿ ಪ್ರಾಡಕ್ಟ್ ಯಾವುದಿದೆ ಹೇಳಿ....?

ದೇವರುಗಳನ್ನೆಲ್ಲಾ ಕೂರಿಸಿ ಹಬ್ಬ ಮಾಡುವ ಜನರಲ್ಲಿ ಅದೂ... ಇದು... ಕಾರ್ಯಕ್ರಮಗಳ ಲಿಸ್ಟ್ ಕೂಡಾ ಇರುತ್ತಂತೆ...

ಮಧ್ಯ ಮಧ್ಯ ಗಣ ಹೋಮ, ಚಂಡಿಕಾ ಯಾಗ, ಕನ್ನಡಮ್ಮನಿಗೆ ಅರ್ಕೆಷ್ಟ್ರಾ...... ಸ್ಪೆಷಲ್ ಹಿಂದಿ ಹಾಡುಗಳೂ.... ಜೊತೆಗೆ ಇಂಗ್ಲೀಷಿನಲ್ಲಿ ಹಾಡಿರುವ ಅಚ್ಚ ಕನ್ನಡದ ಗೀತೆಗಳು....!!!

ಪೂಜೆಗಳೆಲ್ಲಾ ಮುಗಿದ ಮೇಲೆ ಅಷ್ಟಾಂಗ ಸೇವೆ ಮಾಡುವ ಪದ್ಧತಿಯಿದೆ ನಮ್ಮ ಕಡೆ.. ಅದರಲ್ಲಿ ಸಂಗೀತ, ನೃತ್ಯ ಸೇವೆಗಳೂ ಒಳಗೊಂಡಿರುತ್ತವೆ..... ಕೆಲವರು ಸೇವೆಯ ಹರಕೆ ಹೊತ್ತಿರುತ್ತಾರೆ...
ಕಾಲಕ್ಕೆ ತಕ್ಕಂತೆ ಸಿನಿಮಾ ಸಂಗೀತ ಸೇವೆ.......!!
ಬ್ರಹ್ಮಚಾರೀ ಗಣಪನಿಗೆ ಟಂ ಸಾಂಗುಗಳನ್ನೇ ಹಾಡಿಸುತ್ತೀವಿ ಎನ್ನುವ ಹೊಸ ಹರಕೆ ಇರಬಹುದೇ.....? ಸೋಜಿಗ ನನಗೆ....!

ಹಾಳಾದ್ ಹಾಳಾದ್ ಹಾರ್ಟಲೀ.....
ಹೊಸಾ ಹುಡ್ಗೀರ್ ಹಾವಳಿ...

ಎಲೆ ಕೆಂಚಿ ತಾರೆ ..ನಂ ಮನೀ ತಂಕ ಬಾರೆ...

ಮಿಸ್ಸು ಲಚ್ಚಿ.. ನೀ ಕೊಂಚ ಹುಚ್ಚಿ ....
ಎಲ್ಲಾರೂ ಹಾಳಾಗೋದು ಪ್ರೀತಿಯಿಂದಲೇ.....

ಚಕ್ಲೀ ನಿಪ್ಪಟ್ ತಿನ್ಕೊಂಡು ...ಗೋಲಿ ಆಟ ಆಡ್ಕೊಂಡು ...
ಬಣ್ಣ ಬಣ್ಣದ್ ಡ್ರೆಸ್ಸು ಹಾಕ್ಕಂಡು ...ಸಿಳ್ಳೆ ಹೊಡಿಯೋಣ...
ಕಬಡಿ ಕಬಡಿ ಕಬಡಿ.....

ಏನಾಯ್ತೋ ....ಏನಾಯ್ತೋ ..ವಿಧಿಯಾಟ ಇದೇನಾಯ್ತೋ.....

ಅಯ್ಯಪ್ಪಾ.... ದೇವರೇ ಕಾಪಾಡಬೇಕು ಇವರನ್ನೆಲ್ಲಾ.....!!! ಸಾಯಂಕಾಲದ ಹೊತ್ತಿಗೆ ಸಕ್ಕತ್ ಹಾಟ್ ಮಗಾ....
ಭಕ್ತಿಯ ಅಂತಿಮ ಹಂತ ..ತೀರ್ಥ ಸೇವನೆ... ಚಮಚೆಗಳಲ್ಲಿ ಸೇವಿಸಿದರೆ ಪವರ್ರ್ ಸಾಕಾಗದು...ಹಾಗಾಗಿ ಬಾಟಲಿಗಳಲ್ಲೇ ಹೊಯ್ದುಕೊಂಡು ....ಬಾಡಿ ಅಕ್ಸಿಲರೆಟ್ ಮಾಡಿಕೊಳ್ಳಬೇಕು ಯುವಶಕ್ತಿಗೆ...!!!!
ಕುಡಿದು ಚರಂಡಿ ಅಳೆಯುವುದು....
ಯಾವ್ದಕ್ಕೂ ಮಸ್ತ್ ಮಜ್ಜಾ ಮಾಡಿ ..... ಸಿದ್ಧಾಂತ ...!

ಈಗೀಗ ನನ್ನ ಧ್ವನಿ ಯಾವಾಗಲೂ ಒಡೆದುಕೊಂಡೇ ಇರುವುದಕ್ಕೆ ಕಾರಣ ಮೈಕುಗಳೊಂದಿಗೆ ನಾನು ನಡೆಸುವ ಪೈಪೋಟಿ...
ಸಹಜ ಧ್ವನಿ ಯಾರಿಗೆ ಕೇಳಿಸುತ್ತೆ ಮನೆಯಲ್ಲಿ... ಎತ್ತರದ ಧ್ವನಿಯೇ ಬೇಕು....ಎಲ್ಲರಿಗೂ

ವಾರವಿಡೀ ಇದೇ ಹಾಡು... ಇದೇ ರಾಗ.. ಮೈಕಿಗೂ obsessions . ಬೀದಿ ಬದಲಾಗಿರುತ್ತೆ ಅಷ್ಟೇ..
ದೇವರಿಗೆ ರಜಾದಿನಗಳಿಲ್ಲ.. ಸೆವೆನ್ ಡೇಸ್ ವೀಕ್ ...!

ದಶ ದಿಕ್ಕುಗಳಿಂದಲೂ ಮೇಲಿಂದ ಮೇಲೆ..... ಕರ್ಣ ಪ್ರಹಾರವನ್ನು ತಾಳಿ ..ತಾಳಿ ..
ಗಾಯನದ ಮಾಧುರ್ಯತೆಯನ್ನು ...ಮಾರ್ಧವತೆಯನ್ನೂ ಅನುಭವಿಸುವ ಸಂವೇಧಿಗಳೇ ಭಗ್ನಗೊಂಡಿವೆ ನನ್ನ ಮೆದುಳಲ್ಲಿ....
ನೀವು ಎಂತಹಾ ಹಾಡುಗಾರರನ್ನೇ ಕರೆದು ತಂದು ನನ್ನೆದುರು ಹಾಡಿಸಿ ... ಚೆನ್ನಾಗಿದೆ ಎಂದು ನಾನೆಂದರೆ ಕೇಳಿ ..ಮತ್ತೆ.


ಮುಖ್ಯವಾದ ವಿಚಾರವೊಂದನ್ನು ಹೇಳಬೇಕೆಂದು ವಾರದಿಂದ ತಯಾರಿ ನಡೆಸಿದ್ದೆ...
ಹಾಳು ಗಲಾಟೆಯಲ್ಲಿ ಮರೆತು ಹೋಗುತ್ತಿದೆ..
ಮುಂದಿನ ವಾರ ಗಣೇಶನನ್ನು ಮುಳುಗಿಸಿದ ಮೇಲೆ ಮತ್ತೆ ಬರುವೆ.

22 comments:

 1. ಅನುಗ್ರಹ ಪೂರ್ವಕವಾಗಿ ಪರಿಪೂರ್ಣ ಪರಿವರ್ತನೆಯಿಂದ "ಬ್ರಹ್ಮಾಂಡ"ವನ್ನೆಲ್ಲಾ ಸುತ್ತಿ ಬಂದು ನೀವೇ ಗಣೇಶನನ್ನು ಮುಳುಗಿಸಿದರೂ ಅವನು ಮತ್ತೆ ಎದ್ದು ಬರುತ್ತಾನೆ..ಭಕ್ತರನ್ನು ಉದ್ಧರಿಸಲು...ಅವನ ಕಿವಿಗಳು ಎಂದೋ ಕೆಪ್ಪಾಗಿ ಹೋಗಿವಿ...ಇನ್ನು ಅಷ್ಟಾವಧಾನದ ಸಂಗೀತ-ನೃತ್ಯ ಸೇವೆಯಲ್ಲಿ ’ರೋಕೋ’ಸಾವಂತಿ ಯನ್ನು ಗಣೇಶ ನೋಡಿಯಾದರೂ ಆನಂದಿಸಲಿ ಬಿಡಿ....ನಿಮಗ್ಯಾಕ್ರಿ ಹೊಟ್ಟೆಕಿಚ್ಚು ಅವರ ಮೇಲೆ..!! ಮೈಸೂರು ಅನಂತಸ್ವಾಮಿ ಯವರ ಆತ್ಮ ಜೋರಗಿ ಅಳುತ್ತಿದೆಯಂತೆ...ಕೇಳಿಸುತ್ತಿದೆಯಾ ನಿಮಗೆ...!!?
  ಸಕ್ಕತ್ ಹಾಟ್ ಕಣ್ರೀ.....ವಿಡಂಬನೆ ಚೆನ್ನಾಗಿದೆ. ಧನ್ಯವಾದಗಳು..

  ReplyDelete
 2. ನಿಜ. ಇಮೊಶನಲ್ ಬ್ಲಾಕ್ ಮೇಲ್ ಮಾಡಿಸಿಕೊ೦ಡು ದುಡ್ಡು ಕೊಟ್ಟು, ಬಲವ೦ತದಿ೦ದ ತರವಲ್ಲದ ಹಾಡುಗಳನ್ನು ಕೇಳುವುದು ಮಾತ್ರಾ ನಮ್ಮ ದುಡ್ದುಕೊಟ್ಟ ಕರ್ಮ. ಅನುಭವಿಸದೆ ವಿಧಿಯಿಲ್ಲ.ಅಲ್ವಾ?

  ReplyDelete
 3. ಚುಕ್ಕಿ,
  ಚೆನ್ನಾಗಿ ವಿಡಂಬಿಸಿದ್ದೀರಿ. Grin and bear it ಅಂತ ಹೇಳ್ತಾರಲ್ಲವೆ? ಸಕತ್ cool!

  ReplyDelete
 4. ಹಹಾಹಹ....
  ಗಣೇಶನನ್ನು ಕೂಡಿಸೋದು, ಅಣ್ಣಮ್ಮನನ್ನು ಕೂಡಿಸೋದು, ರಾಜ್ಯೇತ್ಸವ ಮಾಡೋದು ಇದೆಲ್ಲಾ ಮಾಡೋಕಂತಾಲೆ ನಮ್ಮೂರಲ್ಲಿ ಜನ ಇದ್ದಾರೆ....ಒಳ್ಳೆ ಚಂದಾ ದುಡ್ಡು (ದೇವರ ಹೆಸರಲ್ಲಿ ಸುಲಿಗೆ) ಸಂಜೆ ಆದ್ರೆ ತೀರ್ಥ ಸೇವನೆ.....ಕಾರ್ಯಕ್ರಮ ಮುಗಿದ ಮೇಲೆ ಮಿಕ್ಕ ಹಣದಲ್ಲಿ ವಾಚು ಬಟ್ಟೆ ಇದೆಲ್ಲಾ ಕೊಳ್ತಾರೆ(ಇದು ನಿಮಗೆ ಗೊತ್ತಿರಲಿಕ್ಕಿಲ್ಲ....ನಾನು ನೋಡಿದ್ದೆ ಅದಕ್ಕೆ)....
  ಎಂತ ಮಜಾ ಮಾಡ್ತಾರೆ ಎಲ್ಲದಕ್ಕೂ ದೇವರ ಹೆಸರು....
  ಚೆನ್ನಾಗಿದೆ ವಿಡಂಬನೆ....

  ReplyDelete
 5. ತುಂಬಾ ಚೆನ್ನಾಗಿದೆ ವಿಡಂಬನೆ. ಹಾಡುಗಳ ಸಾಲುಗಳು ಬಹಳ ತಗು ತರಿಸಿದವು :) ನಿಜಕ್ಕೂ ಗಣೇಶನನ್ನು ಅವನಪ್ಪನೇ ಕಾಪಾಡಬೇಕು ಇವರಿಂದ!

  ReplyDelete
 6. ವಿಡ೦ಬನಾ ಲೇಖನ ಚೆನ್ನಾಗಿದೆ.

  ReplyDelete
 7. ಸುಬ್ರಹ್ಮಣ್ಯ ಭಟ್...
  ನನಗ೦ತೂ ಗಣೇಶನ ಫಿಸಿಯಾಲಜಿ, ಸೈಕಾಲಜಿಗಳನ್ನ ನೋಡುತ್ತಿದ್ದರೆ ಬೇಡಿಕೊಳ್ಳುವುದಕ್ಕಿ೦ತ ಆಡಿಕೊಳ್ಳಲೇ ಇಷ್ಟ.

  ಈ ಪ್ರಮಾದಗಳನ್ನೆಲ್ಲಾ ಮೇಲಿ೦ದ ನೋಡುತ್ತಿರುವ ಬಾಲಗ೦ಗಾಧರ ತಿಲಕ್ ರ ಆತ್ಮ ಕರಗಿ, ಕರಟಿಹೋಗಿರುವ ವಿಚಾರವೂ ನಿಮಗೆ ಗೊತ್ತಿದ್ದಿರಲೇ ಬೇಕು....!
  ಆತ್ಮೀಯ ಪ್ರತಿಕ್ರಿಯೆಗೆ .ವ೦ದನೆಗಳು

  ಮನಸು.. ಥ್ಯಾ೦ಕ್ಸ್ ಕಣ್ರೀ..

  ಮನಮುಕ್ತಾ...
  ಈ ಸಲ ಬ್ಲಾಕ್ ಮೇಲ್ ಗೆ ಒಳಗಾಗಿಲ್ಲ ಅನ್ನುವುದು ಸ೦ತಸದ ವಿಷಯ...!ಧನ್ಯವಾದಗಳು.

  ಕಾಕಾ...
  ಇವತ್ತು ಕಾರ್ಯಕ್ರಮ ಮುಗಿದಿದೆ..ಸ್ವಲ್ಪ ಕೂಲ್ ಇದ್ದೇನೆ....!! ವ೦ದನೆಗಳು.

  ಸವಿಗನಸು...
  ನಿಜ.... ಚ೦ದಾ ದುಡ್ಡು ಮತ್ತಿನ್ಯಾವ ಮನೆಹಾಳು ಕೆಲಸಕ್ಕೆ ಉಪಯೊಗಿಸಲ್ಪಡುತ್ತೋ ಗೊತ್ತಿಲ್ಲ.ಪ್ರೋತ್ಸಾಹಕ್ಕೆ ವ೦ದನೆಗಳು.

  ತೇಜಸ್ವಿನಿ..
  ಕನ್ನಡವನ್ನು ನು೦ಗಿ ನೀರು ಕುಡಿದ೦ತಿದೆ.. ಒ೦ದೊ೦ದು ಹಾಡಿನ ಸಾಹಿತ್ಯವೂ...
  ಧನ್ಯವಾದಗಳು..

  ಸೀತಾರಾ೦..ಸರ್.
  ಪ್ರೋತ್ಸಾಹಕ್ಕೆ ಧನ್ಯವಾದಗಳು...

  ReplyDelete
 8. ha ha ha... namdu same problem madam..
  nam mane melene mike hakirta idru... tale chittu hidita ittu...
  idakke enadru rules madbeku madam...

  ReplyDelete
 9. chennagide nimma lekhana..
  ella haadugalu kanta paata haagirbekallwa ? :) :)

  ReplyDelete
 10. ನಿಜ ಕಣ್ರೀ, ಪಾಪ ಗಣಪ ಅದೆಲ್ಲಾ ಹೇಗೆ ಸಹಿಸಿಕೊಳ್ತಾನೋ.... :)

  ReplyDelete
 11. ವಿಜಯಶ್ರಿ ಮೇಡಮ್,

  ನಿಮ್ಮ ಲೇಖನವನ್ನು ಓದಿ ನನಗಂತೂ ಸಕತ್ ನಗು ಬಂತು. ನಾವು ಹಳೆ ಮನೆಯಲ್ಲಿದ್ದಾಗ ಹೀಗೆ ಗಣೇಶನ ಹಾವಳಿಯಿಂದ ಕಂಗೆಟ್ಟಿದ್ದು ನೆನಪಾಯಿತು. ಅದರ ಬಗ್ಗೆ ಒಂದು ಲೇಖನವನ್ನು ಚಿತ್ರಸಹಿತ ಬರೆದು ಬ್ಲಾಗಿನಲ್ಲಿ ಹಾಕಿದ್ದೆ.

  ಒಟ್ಟಾರೆ ಸೂಪರ್ ನಗುವಿನ ಲೇಖನ.

  ReplyDelete
 12. ಪದೆ ಪದೆ ಕೇಳಿದ್ದನ್ನೆ ಕೇಳುತ್ತಿದ್ದರೆ ತಲೆ ಚಿಟ್ಟು ಬರದೇ ಹೋಗುತ್ತದೆಯೆ...
  ಕಾನೂನುಗಳು ಇದ್ದರೂ ಪಾಲಿಸುವವರಿಲ್ಲವಲ್ಲ..
  ಇವರ ಹಬ್ಬದಿ೦ದ ಎಲ್ಲದಕ್ಕೂ ತೊ೦ದರೆಯೇ..
  ಪ್ರತಿಕ್ರಿಯಿಸಿದ ಸಾಗರದಾಚೆಯ ಇಂಚರ,
  ಶಿವಪ್ರಕಾಶ್,ಸುಮ, ಆನಂದ ಹಾಗೂ ಶಿವು ಸರ್...ಧನ್ಯವಾದಗಳು

  ReplyDelete
 13. ವಿಜಯಶ್ರೀ ಮೇಡಂ,
  ತುಂಬಾ ನಗು ತರಿಸಿತು..... ಎಲ್ಲ ಹಾಡುಗಳ ವಿಡಂಬನೆ ಯಾಗಿ ಉಪಯೋಗಿಸಿದ್ದೀರಿ..... ಚೆನ್ನಾಗಿದೆ........

  ReplyDelete
 14. ವಿಜಯಶ್ರೀ... ಇದೇನು ಗಣೇಶನಹಬ್ಬ ಹೋಗಿ ಕಾಲ ಆಯ್ತು..? ಎಂದುಕೊಳ್ಳುವಾಗ...ಹಾಡುಗಳು....ಹಹಹ...ನಿಜ ಇನ್ನು ಚಂದಾ ಹಾವಳಿಯಂತೂ ತಲೆ ಕೆಡುತ್ತೆ ಇಂತಹ ಸಮಾರಂಭಗಳು, ಹಬ್ಬಗಳು ಬಂದರೆ...ಚನ್ನಾಗಿದೆ ಬರಹ

  ReplyDelete
 15. ನಾನೂ ಈ ವಿಷಯದಲ್ಲಿ ಸಂತ್ರಸ್ತನೇ. ನಮ್ ಮನೆ ಹತ್ತಿರ ಈ ಕಿರಿಕಿರಿ ಇದ್ದಾಗ ಬೆಳಗ್ಗೆ ಬೇಗನೇ ಮನೆ ಬಿಟ್ಟು ರಾತ್ರಿ ೧೦ರ ಮೇಲೆ ಮನೆ ಸೇರಿಕೊಳ್ಳುತ್ತೇನೆ. :(. ಅದ್ಯಾವ್ ಚಂದಕ್ಕೆ ಮಾಡ್ತಾರೋ ಈ ಹಬ್ಬಗಳನ್ನ ಇವ್ರು!

  ReplyDelete
 16. ದಿನಕರ ಮೊಗೇರ.
  ಧನ್ಯವಾದಗಳು.

  ಜಲನಯನ..
  ವ೦ದನೆಗಳು

  ವಿ.ರಾ.ಹೆ...
  ವ೦ದನೆಗಳು.

  ReplyDelete
 17. ಸಂಗ್ರಹ ಯೋಗ್ಯ ಲೇಖನ... ಸ್ವತಹ ಲೇಖಕನಾದ ಗಣಪತಿಯು ಅವನ ಸ್ಥಿತಿಯನ್ನು ಇಷ್ಟು ಚೆನ್ನಾಗಿ ಬರೆಯಲಿಕ್ಕಿಲ್ಲ...

  ReplyDelete