ನಿನ್ನೆ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಬೆಂಬಲ ಸೂಚಿಸಿ ರಾತ್ರಿ ಎಂಟರಿಂದ ಒಂಬತ್ತರ ವರೆಗೆ ಮನೆಯ ದೀಪಗಳನ್ನೆಲ್ಲಾ ಆರಿಸಿದ್ದೆವಲ್ಲಾ .. ಅವನಿಗೆ ಅದು ಆಶ್ಚರ್ಯದ ಸಂಗತಿಯಾಗಿತ್ತು.ಅವನಿಗೆ ನಾನು ವಿವರಿಸಿ ಹೇಳಿದ್ದು ಎಷ್ಟರ ಮಟ್ಟಿಗೆ ಅರ್ಥವಾಯಿತೋ ಗೊತ್ತಾಗಲಿಲ್ಲ. ಕತ್ತಲೆ ಅನ್ನುವುದು ಅವನಿಗೆ ಭಯ ಮೂಡಿಸಿದ್ದು ನಿಜ.
ಆಚೆ ಈಚೆ ಹಾರುವ ಹಾಗಿಲ್ಲ. ಮನಸ್ಸಿಗೆ ಬಂದ ಹಾಗೆ ಕುಣಿಯುವ ಹಾಗಿಲ್ಲ. ಬರೀ ಮೋಂಬತ್ತಿಯ ಬೆಳಕಿನಲ್ಲಿ ತನ್ನದ್ಯಾವುದೋ ಪುಸ್ತಕ ತೆಗೆದು ಬರೆಯುವುದು, ಚಿತ್ರ ಬಿಡಿಸುವುದು ಮಾಡತೊಡಗಿದ. ನಮ್ಮಲ್ಲಿ ಯು.ಪಿ. ಎಸ್ ಇರುವುದರಿಂದ ಪವರ್ ಕಟ್ ಇದ್ದಾಗ ಕೂಡಾ ಅದರ ಅನುಭವ ಆಗುವುದೇ ಇಲ್ಲ. ಇದು ಒಂತರಾ ಹೊಸ ಅನುಭವ ಮಕ್ಕಳಿಗೆ. ಆದರೆ ಇದರ ಹಿಂದಿನ ಉದ್ದೇಶ ಅವರಿಗೆ ಸ್ವಲ್ಪ ಯೋಚಿಸುವಂತೆ ಮಾಡಿತ್ತೆನಿಸುತ್ತದೆ.ಈಗ ಈ ವಯಸ್ಸಿನಲ್ಲಿ ಅವರಿಗೆ ಏನೂ ಅರ್ಥವಾಗದಿದ್ದರೂ ಕೂಡಾ ಅವರದ್ದೇ ಆದ ಜೀವನ ನಡೆಸುವಾಗ, ನಿರ್ಧಾರ ತೆಗೆದುಕೊಳ್ಳುವಾಗ ಈ ಸಂಗತಿ ನೆನಪಾಗಬಹುದೆಂಬ ಭರವಸೆ ನನಗೆ.ಭ್ರಷ್ಟಾಚಾರದ ವಿರುದ್ಧ ಈ ವಯಸ್ಸಿನಲ್ಲಿ ಒಂದು ಚಿಕ್ಕದಾಗಿ ಸಂಚಲನೆ ಶುರುವಾದರೂ ಸಾಕು.
ಕತ್ತಲೆಯಲ್ಲಿದ್ದಾಗ ಬೆಳಕಿನ ಮಹತ್ವ ಗೊತ್ತಾಗುತ್ತದೆ.ಕತ್ತಲೆ ಮನದೊಳಕ್ಕೆ ತೆರೆದುಕೊಳ್ಳಲು ಸಹಕಾರಿಯಾಗುತ್ತದೆ. ಅದು ಕತ್ತಲೆಯ ಇನ್ನೊಂದು ಮುಖ. ಬಾಹ್ಯಾಕರ್ಷಣೆಗಳು ಕತ್ತಲಲ್ಲಿ ಕಳೆದುಹೋಗಿ ಚಿಂತನೆಗಳು ಮನದೊಳಕ್ಕೆ ಬೆಳಕು ಬೀರತೊಡಗುತ್ತದೆ. ಬಹುಷಃ ನಮಗೂ ಈಗ ಅದೇ ಆಗುತ್ತಿರುವುದು.ಈ ಭ್ರಷ್ಟಾಚಾರ, ಲಂಚ, ಶೋಷಣೆ ಇವುಗಳ ಕತ್ತಲೆಯ ಕೂಪದಲ್ಲಿದ್ದಾಗ ಇದರ ಮುಕ್ತಿಗಾಗಿ ಒದ್ದಾಡುತ್ತೇವೆ. ದೂರದ ಬೆಳಕಿಗಾಗಿ ಕೈ ಚಾಚುತ್ತೇವೆ. ಕೈ ಚಾಚಿದಂತೆಲ್ಲಾ ಸಿಗದೇ ದೂರ ಓಡುವ ಚುಕ್ಕೆಯನ್ನು ಹಿಂಬಾಲಿಸ ತೊಡಗುತ್ತೇವೆ.
ಸಿಗುತ್ತದೆ ಎನ್ನುವ ಚಿಕ್ಕದೊಂದು ಆಶಾವಾದದಿಂದ. ಖಂಡಿತಾ ಸಿಗುತ್ತದೆ. ಮನಸ್ಸಿಗೆ ಹಾಕಿದ ಕರ್ಫ್ಯೂ ತೆಗೆದಾಗ!
ಜೈ ಅಣ್ಣಾ..
ವಿಜಯಾ...
ReplyDeleteಅಣ್ಣಾಹಜಾರೆಯವರಿಗೆ ನಾವೆಲ್ಲ ಬೆಂಬಲ ಕೊಡ ಬೇಕು..
ಕಪ್ಪುಚುಕ್ಕೆ ಇಲ್ಲದ ನಾಯಕ ಅವರು..
ನನಗೆ ಇಲ್ಲಿ ಇಷ್ಟವಾಗಿದ್ದು ಸುಂದರ ಫೋಟೊಗಳು..
ಕಪ್ಪುಬಿಳುಪು ಫೋಟೊ ಸೂಪರ್ರೂ... !!
ಜೈ ಹೋ !!
ಚುಕ್ಕಿ,
ReplyDeleteನಮ್ಮೆಲ್ಲರನ್ನೂ ಸುತ್ತುವರಿದಿರುವ ಈ ಭ್ರಷ್ಟಾಚಾರವನ್ನು ಕೊನೆಗೊಳಿಸುವದು ಎಂಥಾ ಕಷ್ಟದ ಕೆಲಸ ಅಲ್ಲವೆ! ಆದರೂ ಆಸೆ ಬಿಡಬೇಕಾಗಿಲ್ಲ: ‘ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ?"
madam,
ReplyDeletephoto nijakku chennaagide...
nivu heLalu prayatnisida bhaavane ishTa aaytu.....
ಫೋಟೋಗಳು ತುಂಬಾ ಚೆನ್ನಾಗಿವೆ..
ReplyDeleteಅಣ್ಣಾ ಹಜ಼ಾರೆಯವರಿಗೆ ಜೈ!
ಸಮಯಕ್ಕೆ ಸರಿಯಾಗಿ ಬಂದ ಈ ಪೊಸ್ಟನ್ನು ಓದಿ, ತುಂಬಾ ಖುಶಿಯಾಯಿತು. 'ಭ್ರಷ್ಟಾಚಾರ ಅಂದರೆ ಸರ್ಕಾರಿ ಉದ್ಯೋಗ'ಎಂದರೆ ತಪ್ಪಾಗಲಾರದು ಅಲ್ಲವೇ? ಬಹುಷಃ ಮುಂದೆ 'ಭ್ರಷ್ಟಾಚಾರ ಅಂದರೆ ಸರ್ಕಾರ' ಎಂಬ ಅರ್ಥಕ್ಕೆ ಭಡ್ತಿ ಸಿಗುವ ಸಾಧ್ಯತೆ ಇದೆ!
ReplyDeleteಉದ್ದೇಶ ದೊಡ್ಡದಿದೆ. ವ್ಯವಸ್ಥೆಯೂ ಅಷ್ಟೇ ಕೆಟ್ಟದಿದೆ. ಇದರ ನಡುವೆಯೇ ಸಾಧಿಸಬೇಕಿರುವುದು ಇಂದಿನ ಜರೂರತ್ತು.
ReplyDeletelet's hope for the best !.
ಹೊಸತನ ಅನ್ಸ್ತು...
ReplyDeleteಮೊಂಬತ್ತಿಯಲ್ಲಿ ,ಏನೋ ಬರೆಯುತ್ತಿರುವ ಚಿತ್ರ ನೋಡಿ ಮನೆಯ ನೆನೆಪಾಯ್ತು.. ನಾನು ತಂಗಿ ,ಲಾಟೀನು ನನ್ನ ಕಡೇನೇ ಇರಬೇಕು ಅಂತಾ ಜಗಳ ಅಡ್ತಾ ಇದ್ದಿದ್ದು ನೆನಪಾಗಿ ನಗು ಬಂತು. ಆ ಕಪ್ಪು ಬಿಳಿ ಚಿತ್ರ ಸಕತ್ತಾಗಿದೆ.. ಮಸ್ತ್ ಇಷ್ಟಾ ಆಯ್ತು.
ಬ್ರಷ್ಟಾಚಾರದ ಬಗ್ಗೆ ನನಗನಿಸಿದ್ದನ್ನು ನಮ್ಮನೆಯ ಗೋಡೆಯಲ್ಲಿ ಗೀಚಿದ್ದೇನೆ, ಬನ್ನಿ ನಮ್ಮನೆಗೆ,
http://chinmaysbhat.blogspot.com/
ಧನ್ಯವಾದಗಳೊಂದಿಗೆ ,
ನಿಮ್ಮನೆ ಹುಡುಗ
ಚಿನ್ಮಯ್
ತಮ್ಮ ಆಶಾವಾದ ತುಂಬಾ ಅವಶ್ಯವಾದದ್ದು..
ReplyDeleteಸುಂದರವಾದ ಆತ್ಮೀಯ ಲೇಖನ...
ReplyDeleteಉತ್ತಮವಾದ ಛಾಯಾಚಿತ್ರಗಳು...
ಖುಷಿಯಾಯಿತು..
ಅಭಿನಂದನೆಗಳು.
ವಿಚಾರ ಪೂರಿತ ಚಿ೦ತನೆಯನ್ನು ಮನಮುಟ್ಟುವ ರೀತಿಯಲ್ಲಿ ಪ್ರಸ್ತುತಿಸಿದ್ದೀರಿ, ಪೂರಕವಾದ ಚಿತ್ರಗಳೂ ಕೂಡ ಮನಸೂರೆಗೊಳ್ಳುತ್ತವೆ. ಅಭಿನ೦ದನೆಗಳು.
ReplyDeleteಅನ೦ತ್
ಒಳ್ಳೆಯ ಲೇಖನ..
ReplyDeleteಚೆ೦ದದ ಫೋಟೋಗಳು... :)
Good one . . .sure, we need to step away from dark to light. This post makes difference in current situation.
ReplyDeleteನಮ್ಮ ಆಶಯವೂ ಇದೆ.
ReplyDelete_ನನ್ನ ಬ್ಲಾಗಿಗೂ ಬನ್ನಿ: ಚಿಂತನಾ ಕೂಟ
Itz nice !!!As of the current situation,itz our responsibility to fight against corruption...whether we can ruin the corruption completely or not.but without loosing hope we have to fight against it...
ReplyDeleteಹೌದು, ಕತ್ತಲೆಯಲ್ಲಿದ್ದಾಗ ಬೆಳಕಿನ ಮಹತ್ವ ಅರಿವಾಗುತ್ತದೆ. ಆದರೆ ಬೆಳಕಿನಲ್ಲೇ ಇರುವ ಭ್ರಷ್ಟರಿಗೆ ಕತ್ತಲಿನ ಮಹತ್ವ ಅರಿವಾಗುವುದೇ ಇಲ್ಲ....
ReplyDeleteಜೈ ಅಣ್ಣಾ
-ಅವಿನಾಶ್
ಜೈ ಜೈ ಹೋ...!
ReplyDeleteಆತ್ಮೀಯವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ
ReplyDeleteಪ್ರಕಾಶಣ್ಣ,
ಕಾಕ,
ದಿನಕರ್,
ಪ್ರದೀಪ್,
ಪಾಪು,
ಸುಬ್ರಹ್ಮಣ್ಯ,
ಚಿನ್ಮಯ್,
ಸೀತಾರ೦ ಸರ್
ವೆ೦ಕಟಕೃಷ್ಣ ಸರ್,
ಅನ೦ತ ಸರ್,
ಮನಮುಕ್ತಾ,
ನಾಗರಾಜ್,
ಗುರುಪ್ರಸಾದ್,
ಗಿರೀಶ್,
ಅವಿನಾಶ್,
ಗುಬ್ಬಚ್ಚಿ ಸತೀಶ್
ಎಲ್ಲರಿಗೂ ಹೃತ್ಪೂರ್ವಕ ನಮನಗಳು.
ಅವಿನಾಶ್, ಚಿತ್ತಾರದರಮನೆಗೆ ಸ್ವಾಗತ..
ಉತ್ತಮ ಚಿತ್ರಲೇಖನ, ಇಷ್ಟವಾಯಿತು.
ReplyDeleteನಿಮ್ಮ ಲೇಖನ ಸಕಾಲಿಕವಾಗಿದೆ ಹಾಗೂ ಅತ್ಯುತ್ತಮವಾಗಿದೆ ವಿಜಯಶ್ರೀಯವರೇ, 'ಈ ವಯಸ್ಸಿನಲ್ಲಿ ಅವರಿಗೆ ಏನೂ ಅರ್ಥವಾಗದಿದ್ದರೂ ಕೂಡಾ ಅವರದ್ದೇ ಆದ ಜೀವನ ನಡೆಸುವಾಗ, ನಿರ್ಧಾರ ತೆಗೆದುಕೊಳ್ಳುವಾಗ ಈ ಸಂಗತಿ ನೆನಪಾಗಬಹುದೆಂಬ ಭರವಸೆ ನನಗೆ.' ಈ ನಿಮ್ಮ ಆಶಾವಾದ ನನಗೆ ಬಹಳ ಇಷ್ಟವಾಯಿತು. ಈಗ ಹೆಮ್ಮರವಾಗಿರುವ ಭ್ರಷ್ಟಾಚಾರವನ್ನು ನಿರ್ಮೂಲಗೊಳಿಸಲು ಮಕ್ಕಳ ಮನಃ ಸ್ಥಿತಿಯನ್ನು ಉತ್ತಮಗೊಲಿಸುವುದೂ ಒ೦ದು ಮಾರ್ಗವಾಗಿದೆ. ಧನ್ಯವಾದಗಳು.
ReplyDeleteತುಂಬಾ ಇಷ್ಟವಾಯಿತು ನಿಮ್ಮ ಭಾವಗಳ ಹರಡಿಕೊಳ್ಳುವಿಕೆ ಮತ್ತು ಭಾವದೊಂದಿಗೆ ಮಿಳಿತಗೊಂಡ ಚಿಂತನೆ ಕೂಡ. ಅದು ಹಾಗೆಯೇ ಸಾಗಲಿ ಕತ್ತಲೆಯಲ್ಲಿ ಎಳೆಯುವ ಬೆಳಕಿನ ತೇರಿನಂತ.
ReplyDeleteಪ್ರಾಥಮಿಕ ಶಾಲೆಯಲ್ಲಿದ್ದಾಗ ಒಂದು ಪಾಠದಲ್ಲಿ ಓದಿದ್ದೆವು
ReplyDeleteಸೂರ್ಯ ಮುಳುಗಿದ. ಎಲ್ಲೆಡೆಯೂ ಕತ್ತಲು ಆವರಿಸಿತು ಎಲ್ಲೆಲ್ಲೂ ಅಂಧಕಾರ
ಆಗ ಪುಟ್ಟ ಹಣತೆಯೊಂದು "ನಾನು ನಿಮಗೆಲ್ಲಾ ಬೆಳಕು ನೀಡುವೆ ಎಂದಿತಂತೆ"
ಆಗ ಕತ್ತಲೆಯು ಮಾಯವಾಗಿ,ಎಲ್ಲರೂ ಸಂತಸಪಟ್ಟರಂತೆ
ಹಾಗೆ ಅಂಧಕಾರ ದೊಡ್ಡದಾಗಿದ್ದರೂ ಪುಟ್ಟ ಹಣತೆಯ ಮುಂದೆ ಸೋಲೊಪ್ಪಬಲ್ಲದು
ಹಾಗೆ ಕೆಟ್ಟದ್ದಕ್ಕೆ ಶಕ್ತಿ,ವ್ಯಾಪ್ತಿ ಹೆಚ್ಚು,ಆದರೆ ಬಾಳ್ವಿಕೆ ಕಡಿಮೆ, ಅಂಧಕಾರ ನೀಗಿಸುವ ದೀಪ ಹಚ್ಚುವ ಕೈಗಳು ಬೇಕಷ್ಟೆ,ಆಗ ಮಾತ್ರ ಬೆಳಕಿನ ಅರಿವಾಗಬಲ್ಲದು
ಚಿತ್ರಗಳು ಚನ್ನಾಗಿವೆ
First time illi tumba chennagide..being a food blogger never peeked outside the food blogs..and very nice reads and thoughts.
ReplyDeleteVijaya Madam,
ReplyDeleteHajaareyanta naayakaru bekaagide indu
Jai Ho
ವಿಭಿನ್ನ ದೃಷ್ಠಿಕೋನದಲ್ಲಿ ಬರೆದಿರುವ ಲೇಖನ...ವಿಶಿಷ್ಟ ನಿರೂಪಣೆ...ತುಂಬ ಇಷ್ಟವಾಯ್ತು ಅಕ್ಕ :)
ReplyDeleteಉದ್ದೇಶ ಸದುದ್ದೇಶ, ಸಾರ್ಥಕ....ಬದಲಾವಣೆಯ ಪ್ರೇರಕ...ಚಿತ್ರಗಳೂ ಪೂರಕ...
ಈಗ ಗೋಚರವಾಗಿರುವ ಅರಿವಿನ ಕಿಡಿ/ಜ್ಯೋತಿ ಇನ್ನಷ್ಟು ಪ್ರಖರತೆ ಇಂದ ಪ್ರಜ್ವಲಿಸಲಿ..ವ್ಯವಸ್ತೆ ಬದಲಾಗಲಿ!
ವಿಜಯಶ್ರೀ ಅಣ್ಣಾ ಒಂದು ಧ್ಯೇಯ ಹಿಡಿದು ಹೊರಟಿದ್ದಾರೆ..ಯಾವುದೇ ರಾಜಕೀಯ ಪಕ್ಷದತ್ತ ಒಲವು ತೋರದೇ ದೇಶಕ್ಕೆ ಅಂಟಿರುವ ಭ್ರಷ್ಟಾಚಾರದ ಪಿಡುಗನ್ನು ಓಡಿಸಲು ಎಲ್ಲರೂ ಸಹಕಾರಿ ಆಗ್ತಾರೆ..ಜೈ ಹೋ ಅವರ ಪ್ರಯತ್ನಗಳಿಗೆ ..ಒಳ್ಲೆ ಲೇಖನ...ಚಿತ್ರಗಳೂ ಸೂಪರ್..
ReplyDeleteಅಣ್ಣಾ ಹಜಾರೆ ಅವ್ರ ಉಪವಾಸ ಸತ್ಯಾಗ್ರಹ ನಡೀತಿದ್ದಾಗ ನಾವೆಲ್ಲಾ facebook ಅಲ್ಲಿ ಅವ್ರದ್ದೇ profile pic ಗಳ್ನ ಹಾಕ್ಕಂಡು, ಅಣ್ಣಾ ಅವರಿಗೆ ಬೆಂಬಲವಾಗಿ ನಮ್ಮೂರಲ್ಲಿ ನಡೀತಿರೋ ಪ್ರತಿಭಟನೆಗಳ್ನ ಹಾಕ್ತಾ , ಪೂರಕ Status ಗಳ್ನ ಹಾಕ್ತಾ , ಅದಕ್ಕೆ ಅಂತಲೇ ಕನ್ನಡದ್ದೊಂದು, ಇಂಗ್ಲೀಷಿದ್ದೊಂದು group ಮಾಡಿ ಅಲ್ಲೂ ಅವರಿಗೆ ಬೆಂಬಲ ಸೂಚಿಸುತ್ತಾ, Anna hazare page ನ like ಮಾಡಿ .. ಹಿಂಗೆಲ್ಲಾ ಬೆಂಬಲ ಸೂಚಿಸಿದ್ಯ. ಒಂದಿನ ಲೈಟು ಆಫು ಮಾಡಿದ್ದು ನೆನಪಿದ್ದು.. ಈ ಲೇಖನ ಆ ಎಲ್ಲಾ ನೆನಪುಗಳ್ನ ಮತ್ತೆ ತಂತು. ಉತ್ತಮ ಲೇಖನಕ್ಕೆ ತಡವಾದ ಪ್ರತಿಕ್ರಿಯೆ, ಅಭಿನಂದನೆಗಳು :-)
ReplyDelete