''ಕಸ ಕಸ ಕಸವೆಂದೂ ಎಸೆದಾಡದಿರಿ ನಿಮ್ಮ ಕಸದ ಕೊಳೆಯನೇನಾದರು ಬಲ್ಲಿರಾ ಬಲ್ಲಿರಾ.. ''[ದಾಸೋತ್ತಮರಲ್ಲಿ ಕ್ಷಮೆ ಯಾಚಿಸುತ್ತಾ] ಎನ್ನುವಂತೆ ನಮ್ಮ ಮನೆಗಳ ಮುಂದೆ ವಾರಕ್ಕೆರಡು ದಿನ ಬೆಳ್ಳಂ ಬೆಳಿಗ್ಗೆ ಕಸಪ್ಪ ಸೀಟಿ ಹೊಡೆಯುತ್ತಾ ಗಡ ಗಡ ಸದ್ದಿನೊಂದಿಗೆ ಗಾಡಿಯನ್ನು ತಂದು ನಿಲ್ಲಿಸುತ್ತಾನೆ. ಮಕ್ಕಳಿಗೆ ಸ್ನಾನ ಮಾಡಿಸುತ್ತಿರುವರು ಅರ್ಧಕ್ಕೆ ಬಿಟ್ಟು, ಮಗಳಿಗೆ ಜಡೆ ಬಾಚುತ್ತಿದ್ದರೆ ಹಾಗೆಯೇ ಹಿಡ್ಕೋ ಒಂಚೂರು, ಅನ್ನುತ್ತಾ ನೂಕಿ, ಗಂಡನಿಗೆ ಚಾ ಕಾಸುತ್ತಿದ್ದರೆ ಅದು ಒಲೆ ಮೇಲೆ ಬೇಕಿದ್ದರೆ ಉಕ್ಕಿ ಹರಿಯಲಿ, ಕ್ಯಾರೆ ಮಾಡದೆ ಎಲ್ಲ ಹೆಂಗಸರೂ ಹಿಡಿದ ಕೆಲಸ ಬಿಟ್ಟು ಕಸದ ಬುಟ್ಟಿ ಹಿಡಿದು, ನೈಟಿ ಸರಬರ ಮಾಡಿಕೊಂಡು,ಎಡ ಗೈಲಿ ಕೂದಲು ತಳ್ಳುತ್ತಾ, ದಾಪುಗಾಲಿಕ್ಕುತ್ತಾ ಗಾಡಿಗೆ ಕಸ ಹಾಕುವುದರಲ್ಲಿ ಬ್ಯುಸಿ..! ವಾರಕ್ಕೆರಡೇ ಬಾರಿ ಕಸಪ್ಪನ ಆಗಮನ ನಮ್ಮ ಏರಿಯಾಕ್ಕೆ. ಮನೆಯನ್ನೇ ಮಗುಚಿ ಬಿಡುವರೆನೋ ಎನ್ನುವಷ್ಟು ಕಸ ಶೇಖರಣೆ ಯಾಗಿರುತ್ತದೆ. ಈ ಕ್ಲಿಷ್ಟಕರ ಸಮಯದಲ್ಲಿ ಬಡಪಾಯಿ ಗಂಡಂದಿರೇನಾದರೂ ಪೇಪರ್ ಓದುತ್ತಾ ಕೂತಿದ್ದುದು ಕಣ್ಣಿಗೆ ಬಿದ್ದಿದ್ದೆ ಹೌದಾದರೆ ಥೇಟ್ ಶುದ್ಧ ಸೋಮಾರಿಯಂತೆಯೇ ಕಂಡು ಹೆಂಗಸರ ಉಗ್ರ ನೇತ್ರಗಳಿಗೆ ಆ ದಿನವಿಡೀ ಈಡಾಗಬೇಕಾಗುತ್ತದೆ..!!!
ಮೊದಲೆಲ್ಲಾ ಹಸಿ ಒಣ ಅಂತೇನೂ ಬೇರೆ ಮಾಡದೆ ಇದ್ದ ಹಾಗೆಯೇ ಕಸ ತಗೊಂಡು ಹೋಗಿ ನಿರ್ಲಕ್ಷ್ಯವಾಗಿ ಸುರುವಿ ಬಂದಿದ್ದರೆ ಮುಗಿದು ಹೋಗುತ್ತಿತ್ತು. ಈಗ ಕಾನೂನು..ಕಾನೂನು ಬಂದಿದೆಯಲ್ಲ. ಹಸಿ,ಒಣ ವಿಷಯುಕ್ತ ಅಂತೆಲ್ಲಾ ವಿಂಗಡಿಸಿ ಕಸ ಹಾಕಬೇಕು ಅಂತ. ಕಾನೂನು ಆಗಲೂ ಇತ್ತು, ಬಿಗಿ ಇರಲಿಲ್ಲ. ಕಸಪ್ಪ ಸೀಟೀ ಹೊಡೆಯುತ್ತಲೇ ನೆಲದ ಮೇಲೊಂದು ಕತ್ತರಿಸಿದ ಪ್ಲಾಸ್ಟಿಕ್ ಚೀಲವೊಂದನ್ನು ಜಮಖಾನ ಹಾಸಿದಂತೆ ಹಾಸಿ ಎಲ್ಲ ಕಸವನ್ನೂ ಮೊದಲು ಅದರ ಮೇಲೆ ಸುರುವಲು ತಾಕೀತು ಮಾಡಿ ಅದರಲ್ಲೇನಾದರೂ ವ್ಯತ್ಯಾಸವಾಗಿ ಹಸಿ ಒಣ ಮಿಕ್ಸ್ ಆಗಿದ್ದು ಕಂಡು ಬಂದರೆ ಕಸ ತಂದವರ ಹತ್ತಿರವೇ ಬೇರೆ ಬೇರೆ ಮಾಡಿಸುತ್ತಾನೆ. ಈಗ ಹೆಂಗಸರಿಗೆ ರಸ್ತೆಯ ಮೇಲೆ ಕಸ ಕೆದಕುವ ಗತಿ.. ಆಚೀಚೆಯವರು ಕಸ ಗೆಬರುವುದನ್ನು ನೋಡಿಯಾರೆಂಬ ಒಂತರಾ ಆಗುವಿಕೆ, ಈ ಎಲ್ಲದರ ಮಧ್ಯೆ ಬೆಳಗಿನ ಗಡಿಬಿಡಿ ಎಲ್ಲವೂ ಸೇರಿ ತಲೆ ಪೂರಾ ಕಸದ ತೊಟ್ಟಿ..!
ಕಸಪ್ಪನ ಸ್ಟ್ರಿಕ್ಟ್ ಆಜ್ಞೆಯ ಮೇರೆಗೆ ಈಗ ಎಲ್ಲಾ ಕಸ ಬೇರೆ ಬೇರೆ ಮಾಡಿಯೇ ಕೊಡುತ್ತಾರೆ. ಇಲ್ಲದಿದ್ದರೆ ರಸ್ತೆಯಲ್ಲಿ ಕಸ ಹೆಕ್ಕಿಸುತ್ತಾನೆ ಅವನು..ಹಾಳಾದವನು. ಕಸ ವಾಪಾಸ್ ಕಳಿಸುತ್ತಾನೆ. ಗಂಡ ಮಕ್ಕಳಿಗೆ ಹೆದರಿಸಿಯಾದರೂ ಕಸ ವಿಂಗಡಣೆಯ ಕಾನೂನು ಪಾಲನೆ ಮಾಡುತ್ತಾರೆ ಕಸಪ್ಪನ ಕಸ ಹೆಕ್ಕಿಸುವಿಕೆಗೆ ಹೆದರಿ. ಯಾವಾಗಲೂ ಅದು ಹಾಗೆಯೇ.. ಸುಮ್ಮನೆ ಹೇಳಿದರೆ ಯಾರು ಕೇಳುತ್ತಾರೆ..? ತಲೆ ಮೇಲೆ ಮೊಳೆ ಇಟ್ಟು ಸುತ್ತಿಗೆ ಎತ್ತಿದರೆ ಮಾತ್ರ ಹೇಳಿದ ಮಾತು ಕೇಳುವುದು.ಕಸಪ್ಪನಾದರೂ ಅಷ್ಟೇ ಅವನಿಗೆ ಅಲ್ಲಿ ಬಿಸಿ, ನಮಗೆ ಇಲ್ಲಿ ಬಿಸಿ. ಏನಾದರೂ ಆಗಲಿ ಕಸಕ್ಕೊಂದು ಗತಿಯಾಯಿತಲ್ಲಾ, ಅಭ್ಯಾಸವಾಗುವ ವರೆಗೆ ಜನರಿಗೂ ರಗಳೆ, ನಂತರ ತನ್ನಿಂದ ತಾನೇ ಸರಿಯಾಗಿ ಬಿಡುತ್ತದೆ.ಬದಲಾಗಲಿಕ್ಕೆ ಸಮಯ ಮತ್ತು ಭಯ ಬೇಕಾಗುತ್ತದೆ! ರೂಲ್ಸ್ ಫಾಲೋ ಮಾಡಲು ಸರಿಯಾಗಿ ಬಿಗಿ ಬೇಕು!
ಹ್ಞೂ , ಕಸದ್ದೇ ಸುದ್ದಿಯಾಯಿತು.. ನಾನಾದರೂ ಈ ನಡುವೆ ಕೆಲವು ಒಳ್ಳೆಯ ಕೆಲಸ ಮಾಡಿ ಒಳ್ಳೆಯವಳಾಗಲು ಹೊರಟಿದ್ದೇನೆ. ಕೆಲವಾರು ಚಿತ್ರ ಪತ್ರ ಬರೆದು ಖುಷಿ ಪಡುತ್ತಿದ್ದೇನೆ. ನಿಜ, ನನ್ನ ಈ ಚಿತ್ರ ಬರೆಯುವ ವಿಚಾರಕ್ಕೆ ಮಹಾ ಇತಿಹಾಸವೇ ಇದೆ ನಂಬಿ! ಬಾಲ್ಯದಿಂದಲೂ ಚಿತ್ರ ಬರೆಯುತ್ತಿದ್ದುದರಿಂದ ಮತ್ತು ಈಗಲೂ ಅದೇ ತೆರದಲ್ಲಿ ಬರೆಯುವುದರಿಂದ ನನ್ನನ್ನು ನೀವು 'ಬಾಲ ಕಲಾವಿದೆ' ಎಂದು ಬೇಕಾದರೆ ಈಗಲೂ ಕರೆಯಿರಿ ಪರವಾಗಿಲ್ಲ..:)
ಹೈಸ್ಕೂಲು, ಕಾಲೇಜು ಕಲಿಯುವಾಗ ನನ್ನ ನೋಟ್ಸು, ರೆಕಾರ್ಡುಗಳ ರಕ್ಷಾ ಪುಟದ ಮುಂಬದಿ ಮತ್ತು ಹಿಂಬದಿ, ಮೊದಲ ಪುಟ, ಕೊನೆಯ ಪುಟ, ಮಧ್ಯದ ಪುಟ ಹೀಗೆ ಪುಸ್ತಕದ ಅನೇಕ ಕಡೆ ಚಿತ್ರ ಬರೆದಿಟ್ಟುಕೊಳ್ಳುತ್ತಿದ್ದೆ. ನನ್ನ ಪುಸ್ತಕವೊಂದೇ ಅಲ್ಲದೆ ಗೆಳತಿಯರ ನೋಟ್ ಬುಕ್ಕುಗಳ ಮೇಲೂ. 'ಏ ನನಗೊಂದು ಚಿತ್ರ ಬರ್ಕೊಡೇ,' ಅನ್ನುತ್ತಾ ಒಬ್ಬೊಬ್ಬರಾಗಿ ತಮ್ಮ ನೋಟ್ಸ್ ಗಳನ್ನೂ ನನ್ನ ಮುಂದಿಡುತ್ತಿದ್ದರು. ನಾನು ಒಳ್ಳೆ ಆಸ್ಥಾನ ಕಲಾವಿದೆಯ ಹುರುಪಿನಲ್ಲಿ ಯಾರಿಗೂ ಇಲ್ಲವೆನ್ನದೇ ಎಲ್ಲರ ಪುಸ್ತಕದ ಮೇಲೂ ನವಿಲು, ಚಿಟ್ಟೆ, ಹೂಬಳ್ಳಿ, ತರತರ ಡಿಸೈನುಗಳೂ, ದೇವರುಗಳೂ, ತೀರಾ ಆಪ್ತರಿಗೆ ಎರಡೆರಡು ಚಿತ್ರಗಳೂ, ಹೀಗೆ ಬರೆದು ಪ್ರಾಕ್ಟೀಸ್ ಮಾಡುತ್ತಿದ್ದೆ. ಲೀಸರ್ ಪೀರಿಯಡ್ಡಿನಲ್ಲಿ , ಊಟದ ಸಮಯದಲ್ಲಿ, ಬಸ್ಸಿಗೆ ಕಾಯುತ್ತಿರುವ ಸಮಯದಲ್ಲಿ ಕೂರುವ ವ್ಯವಸ್ಥೆಯಿದ್ದರೆ, ಬಸ್ಸಿನಲ್ಲಿ, ಹೀಗೆ ಎಲ್ಲೆಂದರಲ್ಲಿ ನನ್ನ ಗೆಳತಿಯರಿಗೆ ಚಿತ್ರ ಬರೆದು ಕೊಡುತ್ತಿದ್ದೆ. ನನ್ನ ಗೆಳತಿಯರ ಮಧ್ಯೆ ಆಗ ನಾನು ಸಿಕ್ಕಾಪಟ್ಟೆ ವರ್ಲ್ಡ್ ಫೇಮಸ್ಸು!
ನನ್ನದೊಂದು ಸಮಸ್ಯೆ ಎಂದರೆ ಏನೋ ಮೂಡು ಬಂದಾಗ ಬರೆದು ಬಿಡುತ್ತೇನೆ. ಮತ್ತೆ ವರ್ಷಗಟ್ಟಲೆ ಬರೆಯದಿದ್ದರೂ ಆದೀತು. ಯಾರಾದರೂ ಬರ್ಕೊಡು ಅಂದಾಗ ಮಾತ್ರ ನನಗೆ ಬರೆಯುವ ನೆನಪಾಗಿ ಬಿಡುತ್ತದೆ ಮಹಾ ದೊಡ್ಡದಾಗಿ. ಹೀಗೆ ಸುಮ್ಮನೆ ಫೇಸ್ ಬುಕ್ಕಿನ ಗೆಳತಿಗೆ ಸರ್ಪ್ರೈಸ್ ಮಾಡಲು ಒಂದು ಚಿತ್ರ ಬರೆದು ಗೋಡೆಗೆ ತೂಗು ಬಿಟ್ಟಿದ್ದೆ. ಎಲ್ಲರೂ ಅದನ್ನು ಅವರೇ ಅಂತ ಗುರುತಿಸಿ ನನಗೇ ಸರ್ಪ್ರೈಸ್ ಮಾಡಿದರು! ಅಲ್ಲಿಂದ ಮುಂದೆ ನನಗೆ ನನ್ನ ಶಾಲಾ ದಿನಗಳೇ ಎದುರಿಗೆ ಬಂದಿತು. ನಂದೊಂದು ಚಿತ್ರ ಬರ್ಕೊಡಿ. ಅನ್ನುವ ಸ್ನೇಹಮಯ ಬೇಡಿಕೆಗಳು. ಎಲ್ಲರ ಕಾಲ್ಪನಿಕ ನೋಟ್ಸುಗಳು. ನನ್ನ ಎಲ್ಲಾ ಚಿತ್ರಗಳು ಏನು ಬರೆದಿದ್ದೀನೋ ಅದೇ ಆಗಿರುತ್ತದೆಂಬ ನಂಬಿಕೆ ನನಗೆ ಯಾವತ್ತೂ ಇಲ್ಲವಾದರೂ ಸುಮಾರು ಜನರ ಚಿತ್ರ ಬರೆದೆ. ನಾನು ಚಿತ್ರಿಸಿದ ಗೆಳತಿಯರು ಹೋಲಿಕೆ ಇದೆಯೋ ಇಲ್ಲವೋ ಅಂತೂ ಚೆನ್ನಾಗಿದೆ ಅಂತ ಒಪ್ಪಿಕೊಂಡು ನನ್ನ ಬೆನ್ನು ತಟ್ಟಿ, ಕಾಮೆಂಟು ಕುಟ್ಟಿ ನನಗೆ ಇನ್ನಷ್ಟು ಚಿತ್ರಿಸಲು ಪ್ರೋತ್ಸಾಹ ಕೊಡುತ್ತಿದ್ದಾರೆ. ನನ್ನ ಪೆನ್ಸಿಲ್ಲಿನ ಒರಟು ರೇಖೆಗಳಲ್ಲಿ ಅವರ ಮುಖಗಳನ್ನು ಸುರೂಪವಾಗಿಸಿದ್ದೆನೆಯೋ ಕುರೂಪವಾಗಿಸಿದ್ದೇನೆಯೋ ಅಂತೂ ನನಗೆ ಮಾತ್ರ ಅನೇಕ ರೀತಿಯ ಮುಖಗಳು ಸಿಕ್ಕು ನನ್ನ ಭಾವಚಿತ್ರ ಬರೆಯುವ ಕಲೆ ನನಗೇ ಅರಿವಿಲ್ಲದಂತೆ ಅಭಿವೃದ್ಧಿಯಾಗುತ್ತಿದೆ. ನನಗೆ ಯಾರಾದರೂ, ಬರೀ... ಅಂತ ನನ್ನ ನೂಕ ಬೇಕು. ಇಲ್ಲದಿದ್ದರೆ ಬರೆದರಾಯಿತು ಅಂದುಕೊಂಡು ನಾಳೆಗೆ ಇಟ್ಟುಕೊಳ್ಳುತ್ತೇನೆ. ಅದು ವರ್ಷ ಗಟ್ಟಲೆ ಮುಂದುವರೆದು ಬಿಡುತ್ತದೆ. ಈ ಕಸ ಹಾಕುವ ಕಾನೂನಿನಂತೆಯೇ. ಸ್ವಲ್ಪ ಒತ್ತಾಯ ಬೇಕು.ಜೊತೆಗೆ ಮುಲಾಜು ಬೇಕು..!
ಕೆಲವು ಚಿತ್ರಗಳು.
ಅಂತೂ ಇಂತೂ ಈ ಮೂರು ವರ್ಷಗಳು ನೀವು ನನ್ನ ರಗಳೆಯನ್ನು ಸಹಿಸಿಕೊಂಡು ಮತ್ತಷ್ಟು ರಗಳೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಟೆಕ್ನಾಲಜಿಯಲ್ಲಿ ನಾನು ಯಾವತ್ತೂ ಹಿಂದೆ ಮತ್ತು ಕಂಪ್ಯೂಟರ್ ನಲ್ಲಂತೂ ನಾನು ಅನಕ್ಷರಸ್ತೆ. ಈಗೀಗ ವಯಸ್ಕರ ಶಾಲೆಯಲ್ಲಿ ಅಕ್ಷರ ಕಲಿಯುವಂತೆ ಮಕ್ಕಳಿಂದ ಚೂರು ಪಾರು ಕಲಿತುಕೊಂಡು ಬ್ಲಾಗು ಫೇಸ್ ಬುಕ್ ಬಳಸುವುದನ್ನು ಗೊತ್ತು ಮಾಡಿಕೊಂಡಿದ್ದೇನೆ. ಆದರೂ ಎಷ್ಟು ಮಾಡಿದರೂ ಕಾಗುಣಿತ ತಪ್ಪಿ ಹೋಗಿಬಿಡುತ್ತದೆ. ಸರಿ ಮಾಡಲು ಮತ್ತೆ ಕಷ್ಟ ಪಡಬೇಕು. ಕನ್ನಡವನ್ನು ಇಂಗ್ಲೀಷಲ್ಲಿ ಬರೆದು ಇಂಗ್ಲೀಷನ್ನು ಕನ್ನಡದ ಇಂಗ್ಲೀಶ್ ಸ್ಪೆಲ್ಲಿಂಗ್ ನಲ್ಲಿ ಬರೆಯುವ ಮಟ್ಟಕ್ಕೆ ಹೋಗಿಬಿಟ್ಟಿದ್ದೇನೆ. ಹೀಗೆ ಆಗಾಗ ಆಗುವ ಅಪಸವ್ಯವನ್ನು ತಿದ್ದುತ್ತಾ ಮತ್ತೆ ಮತ್ತೆ ಬರೆಯಲು ಎಳಸುವ ನಿಮ್ಮ ಪ್ರೋತ್ಸಾಹಕರ ನುಡಿಗಳನ್ನು ಈ ನಾಲ್ಕನೆಯ ವರ್ಷಕ್ಕೆ ಕಾಲಿಡುವ ಸಮಯದಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿದ್ದೇನೆ.
ಎಲ್ಲರಿಗೂ ವಂದನೆಗಳು.

ನನಗೆ ಈ ಕಸದ ಕಷ್ಟ ಇಲ್ಲ! ನಡುರಾತ್ರಿ ಅಂದರೆ ಈಗಷ್ಟೇ ವಿಂಗಡಿಸದ ಕಸಗಳನ್ನು ಆಚೆ ಬಿಸಾಡಿ ಬಂದೆ! ಅಂದಹಾಗೆ ಕಸ ಒತ್ತಟ್ಟಿಗಿರಲಿ ಮೂಲೆಯಲಿ ನಾಳೆ ನೋಡಿದರಾಯಿತು..
ReplyDeleteಬ್ಲಾಗ್ ಪ್ರಪಂಚದಲಿ ನಾಲ್ಕನೇ ವರ್ಷದ ಆಚರಣೆಗೆ ಅಭಿನಂದನೆಗಳು. ಚಿತ್ರಕಲೆ, ಬರಹಕಲೆಗಳ ಇನ್ನಷ್ಟು 'ರಸ'ಧಾರೆಗಳು ಹರಿದು ಬರಲಿ. ಓದಿ ನಾವು ಸೀಟಿ ಊದುತ್ತೇವೆ ಸಂತಸದಿ!
ಆತ್ಮೀಯ ಪ್ರತಿಕ್ರಿಗೆಯೆ ಧನ್ಯವಾದಗಳು ಚೌಟರೆ..
Deleteಕಸದ ಬಗ್ಗೆ ಓದಿ ಖುಷಿ ಆತ್ರಿ..ಈಗ ಬೆಂಗಳೂರಿನ ಗೃಹಿಣಿಯರ ಮಾತುಕತೆ ಇದರಸುತ್ತಲೇ ಗಿರ್ಕಿ ಹೊಡೀತಿದೆ..
ReplyDeleteನಮ್ಮ ಮನೆಯಲ್ಲೂ ಇದೇ ಹಾಡು-ಪಾಡು....ಚಿತ್ರ ನಿಜಕ್ಕೂ ಛಂದ ಅವ..
ಬಿಡುವಿದ್ದಾಗ ನನ್ನ ಬ್ಲಾಗಿಗೂ ಬರ್ರಿ...ಹೊಸಾ ಕತಿ ಅದ..
ವ೦ದನೆಗಳು ದೇಸಾಯಿಯವರೆ.. ತಮ್ಮ ಬ್ಲೊಗ್ ತೆರೆದುಕೊಳ್ಳುತ್ತಿಲ್ಲ ಯಾಕೋ.. ಮತ್ತೆ ಪ್ರಯತ್ನಿಸುತ್ತೇನೆ..
Deleteತುಂಬಾ ಚೆನ್ನಾಗಿ ಬರೆದಿದ್ದೀರಿ ...ಚಿತ್ರಗಳಂತೂ ಅಧ್ಭುತ ...ಅಭಿನಂದನೆಗಳು .
ReplyDeleteವ೦ದನೆಗಳು ಅನು ಅಕ್ಕ..
Deletehappy birthday akka blogige
ReplyDeleteಥ್ಯಾ೦ಕ್ಸ್..ಸುಮಾ..
Deleteನಾಲ್ಕನೇ ವರ್ಷಾಚರಣೆಗೆ ಶುಭಾಶಯಗಳು ವಿಜಯಕ್ಕ, ಕಸ ವಿಂಗಡಿ ನಿಜಕ್ಕೂ ಗಮನ ಹರಿಸಲೇಬೇಕು.. ನೀವು ಬರೆದ ಚಿತ್ರಗಳಂತೂ ಅದ್ಭುತ ನಿಮ್ಮಲಿರುವ ಆ ಕಲೆ ಮತ್ತಷ್ಟು ಬೆಳಗಲಿ.. ಶುಭವಾಗಲಿ
ReplyDeleteಥ್ಯಾ೦ಕ್ಸ್ ಮನಸು..
Deleteಸ್ವಾರಸ್ಯಕರ ಬರಹ. ನಾಲ್ಕು ವರ್ಷದಿಂದ ನಲ್ವತ್ತಕ್ಕೆ ಬೆಳೆಯಲಿ. ಅಭಿನಂದನೆಗಳು. ತಮ್ಮ ಎಲ್ಲ ಆಸಕ್ತಿಗಳಿಗೂ ಶುಭವಾಗಲಿ. ನನ್ನ ಚಿತ್ರಕ್ಕೆ ಮಾತ್ರ ಇನ್ನೂ ಕಾಯುತ್ತಿದ್ದೇನೆ! :)
ReplyDeleteಥ್ಯಾ೦ಕ್ಸ್ ಲತಾ ಅವರೇ.. ಹ್ಹ..ಹ್ಹ..ಕಾಯ್ತಾ ಇರಿ..
Deleteಸ್ವಾರಸ್ಯಕರ ಬರಹ. ನಾಲ್ಕು ವರ್ಷದಿಂದ ನಲ್ವತ್ತಕ್ಕೆ ಬೆಳೆಯಲಿ. ಅಭಿನಂದನೆಗಳು. ತಮ್ಮ ಎಲ್ಲ ಆಸಕ್ತಿಗಳಿಗೂ ಶುಭವಾಗಲಿ. ನನ್ನ ಚಿತ್ರಕ್ಕೆ ಮಾತ್ರ ಇನ್ನೂ ಕಾಯುತ್ತಿದ್ದೇನೆ!
ReplyDeleteವಿಜಿ ,
ReplyDeleteಮೊದಲನೆದಾಗಿ , ಶುಭಾಶಯಗಳು , ನಾಲ್ಕನೇ ವರ್ಷಕ್ಕೆ ಕಾಲಿಡ್ತಾ ಇದ್ದಿದ್ದಕ್ಕೆ ! ಅಭಿನಂದನೆಗಳು ತುಂಬಾ ಒಳ್ಳೊಳ್ಳೆ, ವೈವಿಧ್ಯಮಯ ಹಾಗೂ ಆಸಕ್ತಿ ತರುವಂಥಾ ಬರಹಗಳಿಗೆ !
ಕಸಕ್ಕಿಂತ ಹೆಚ್ಚು ರಸವೇ ಕಂಡಿದ್ದು ನಂಗಿಲ್ಲಿ ! ಮುಂದುವರಿಯಲಿ ಹೀಂಗೆ ಈ ಪ್ರಯಾಣ !!!
ಥ್ಯಾ೦ಕ್ಸೆ..ಚಿತ್ರಾ..
Deleteನಿಮ್ಮೊಳಗಿರುವ ಕಲಾವಿದೆಯ ಪರಿಚಯವು ಈ ಬ್ಲಾಗಿನ ಮೂಲಕವೇ ಆಗಿತ್ತು. ಇಲ್ಲಿರುವ ಚಿತ್ರಗಳಂತೂ ತುಂಬ ಚೆನ್ನಾಗಿದೆ. ಕಸ ವಿಂಗಡಣೆಯಂತಹ ವಿಷಯವೂ ನಿಮ್ಮ ಕ್ರಿಯೇಟೀವ್ ತಲೆಯಿಂದ ರಸವತ್ತಾಗಿ ಬಂದಿದೆ. ನಾಲ್ಕು ವರುಷಗಳಿಂದ ಅನೇಕ ಉತ್ತಮ ಲೇಖನಗಳನ್ನು ಕೊಟ್ಟಿದ್ದೀರಿ, ಮುಂದೆಯೂ ಕೊಡುತ್ತಿರಿ.
ReplyDeleteಸುಬ್ರಹ್ಮಣ್ಯ ..
Deleteಆತ್ಮೀಯ ಪ್ರತಿಕ್ರಿಯೆಗಳಿಗೆ ಆಭಾರಿ..
ನಾಲ್ಕನೆಯ ಹುಟ್ಟುಹಬ್ಬಕ್ಕೆ ಶುಭಾಶಯಗಳು. ಈ ನಾಲ್ಕು ವರ್ಷಗಳಲ್ಲಿ ನಮಗೆ ರಸದೌತಣ ಬಡಿಸಿದ್ದೀರಿ. ಧನ್ಯವಾದಗಳು. ಕನಕದಾಸರ(!) ಕವನ ತುಂಬ ಚೆನ್ನಾಗಿದೆ!
ReplyDeleteಕಾಕಾ..
Deleteವ೦ದನೆಗಳು..
:)
ವಿಜಯಕ್ಕಾ.. ಸೂಪರ್ ಚಿತ್ರಗಳು :) ಇಂತಹ ಚಿತ್ರ ಬರ್ತಾ ಇರ್ಲಿ.. ಜೊತೆಗೆ ಉತ್ತಮ ಬರಹಗಳೂ ಕುಡ.. ಬ್ಲಾಗಿಂಗ್ ಬೆಳೆಯಲಿ :) ಅಭಿನಂದನೆ.
ReplyDeleteಥ್ಯಾ೦ಕ್ಸ್ ತೇಜಸ್ವಿನಿ...
Deleteಕಸದ ಕರಕರೆಯ ಬಗ್ಗೆ ನಂಗೇನೂ ಗೊತ್ತಿಲ್ಲಪ್ಪಾ...ಮನೆಯಲ್ಲಿ ಜಗುಲಿಯಲ್ಲಿ ಚಾಕಲೇಟು,ಅದು ಇದು ಕಾಗದ ಬಿಸಾಡುವುದು(ಆ ಮೇಲೆ ಅಮ್ಮನ ಬೈಸಿಕೊಳ್ಳುವುದು ಬೇರೆ ಮಾತು!),ರೂಮಿನಲ್ಲಿ ಕಸದ ಬುಟ್ಟಿಯನ್ನು ತುಂಬಿಸುವುದು ಅಷ್ಟೇ ಗೊತ್ತಿರುವುದು..ಕಸದ ಬಗ್ಗೆ ಹೊಸ ವಿಚಾರಗಳನ್ನು ತಿಳಿಸಿಕೊಟ್ಟಿದಕ್ಕೆ ಧನ್ಯವಾದ...ಲೇಖನ,ಚಿತ್ರಗಳು ಚೆನಾಗಿತ್ತು..
ReplyDeleteನಾಲ್ಕನೇ ವರುಷ ಅಂದ್ರೆ ಬ್ಲಾಗು ಸಣ್ಣ ಬಿನ್ನೆತ್ತಿ(LKG) ಗೆ ಬಂತು ಅನ್ಸ್ತು ..ಹುಷಾರಪಾ...ಯಾವ್ದಾರು ಪತ್ರಿಕೆಗೆ ಬೇಗ ಪ್ರವೇಶ ಕೊಡ್ಸಿ ಬಿಡಿ..ಎಲ್ರೂ ಓದ್ಲಿ...
ಹಾಂ ಕಸದ ಬಗ್ಗೆ ಹೇಳುವಾಗ ಇನ್ನೊಂದು ಕಸ ಬಿಟ್ರಿ,ಅದು ನಮ್ಮ ಕಡೆಯಲ್ಲಿ ಅಜ್ಜಿಯಂದಿರಿಂದ ಸಾಮಾನ್ಯವಾಗಿ ಕೇಳುವ ಮಾತು..
"ತಮ್ಮಾ ಕಾಲಿಗ್ ಕಸ ಬಂದೋಜೋ...ಪ್ಯಾಟಿಂದ ಕಸುವಿನ ಗುಳಿಗೆ ತಗ ಬಾ"..
ಬರಿತಾ ಇರಿ ಅಕ್ಕಾ,ಓದ್ತಾ ಇರ್ತಿ...
ನಮಸ್ತೆ...
ನಾಲ್ಕನೇ ಹುಟ್ಟು ಹಬ್ಬದ ಶುಭಾಶಯಗಳು ..
ReplyDeleteಇದನ್ನು ಓದಿ ನಾನೂ ಆಸ್ಥಾನ ಕಲಾವಿದೆಯಂತೆ ಮೆರೆದದ್ದು ನೆನಪಾಯಿತು..:)
ಚಂದದ ಚಿತ್ರಗಳು ವಿಜಯಕ್ಕ.. ಹೀಗೆ ಬಿಡಿಸುತ್ತಾ ಇರಿ ...:)
ReplyDeleteಚಂದ ಬರೆತಿರಿ ಮತ್ತು ಬಿಡಿಸುತ್ತಿರಿ
ಅಭಿನಂದನೆಗಳು
ಸ್ವರ್ಣಾ
ಮೂರು ವರ್ಷ ತು೦ಬಿದ ಸ೦ಭ್ರಮದ ಕಡಲು ಚಿತ್ತಾರದರಮನೆಯಲ್ಲಿ,
ReplyDeleteತು೦ಬಿಹುದು ಬಗೆಬಗೆಯ ಬರಹಗಳ, ಸು೦ದರ ಚಿತ್ರಗಳ ಮೇಳದಲಿ,
ಮತ್ತಷ್ಟು ಕ೦ಗೊಳಿಸಲಿ ಅರಮನೆಯು ಬಗೆ ಬಗೆಯ ಚಿತ್ತಾರದಲಿ,
ಚಿತ್ರ ಬರಹಗಳು ಬರಲಿ ಹೊತ್ತಗೆಯ ರೂಪದಲ್ಲಿ,
ಹಾರ್ದಿಕ ಶುಭಾಶಯಗಳು. :)
kasada rasabharita kathe jotege tamma baala (tail?)kale ella chennagide. tamma chitragalu baree hennu makkalade ide?? meeseyavara chitrakke kai tadavarisideyaa?
ReplyDeletevaicidhyateya unisuttiruva tamma blog nalkane varshakke shubhaashayagalu