ಕಾರ್ತಿಕ ಮಾಸದುದ್ದಕ್ಕೂನಡೆಯುವ ದೀಪೋತ್ಸವಕ್ಕೆ ದೀಪಾವಳಿಯೇ ನಾಂದಿ. ಮನೆಗಳಲ್ಲಿ, ದೇವಾಲಯಗಳಲ್ಲಿ, ಅಶ್ವತ್ಥ ಕಟ್ಟೆಯ ಸುತ್ತ, ಹೀಗೆ ಬಗೆ ಬಗೆಯಾಗಿ ದೀಪ ಬೆಳಗಿ ದೀಪೋತ್ಸವ ನಡೆಸುತ್ತಾರೆ. ಬಾನಂಗಳಕ್ಕೆ ಸೆಡ್ಡು ಹೊಡೆಯುವಂತೆ ಊರ ತುಂಬಾ ದೀಪಗಳ ಬಿತ್ತನೆ ಮಾಡುತ್ತಾರೆ. ದೀಪದಿಂದ ದೀಪ ಬೆಳಗುತ್ತಾರೆ. ಮೈ ಮನಗಳಲ್ಲೆಲ್ಲಾ ಬೆಳಕನ್ನೇ ತುಂಬಿಕೊಳ್ಳಲು ಹವಣಿಸುತ್ತಾರೆ. ದೀಪ ದಾನದ ಮೂಲಕ ಜ್ಞಾನದಾನದ ಸಂದೇಶವನ್ನು ಸಾರಲಾಗುತ್ತದೆ. ವರ್ಷಕ್ಕೆ ಮೂರು ದಿನದ ಮಟ್ಟಿಗೆ ಭೂಮಿಗಿಳಿದು ಬರುವ ಬಲೀಂದ್ರನಿಗೆ ದೀಪಾರಾಧನೆಯಿಂದ ಸ್ವಾಗತ ಮತ್ತು ಬೀಳ್ಕೊಡುಗೆ!
ಎಲ್ಲಾ ಕಡೆ ಹಣತೆಗೆ ಎಣ್ಣೆ ಹಾಕಿ ಬತ್ತಿ ಇಟ್ಟು ಅದಕ್ಕೆ ದೀಪ ಹಚ್ಚುವುದು ಸಾಮಾನ್ಯ. ಅದು ಸಾಂಪ್ರದಾಯಿಕ ಶೈಲಿಯಾದರೂ ಗಾಳಿ ಬಂದರೆ ದೀಪ ಆರಿ ಹೋಗುತ್ತದೆ. ತುಂಬಾ ಹೊತ್ತು ಉರಿಯುವಂತೆ ಮತ್ತು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಲು ಕೆಲವು ಸರಳ ಉಪಾಯಗಳು ಹಲವಾರಿವೆ. ಅವುಗಳ ಪೈಕಿ ಒಂದು ಬಾಳೆ ದಿಂಡಿನ ದೀಪಸ್ಟ್ಯಾಂಡ್. ಅದನ್ನು ತಯಾರಿಸುವುದು ಹೇಗೆ ? ಏನೆಲ್ಲ ವಸ್ತು ಬೇಕು ಎಂಬ ಬಗ್ಗೆ ತಿಳಿದುಕೊಳ್ಳೋಣ.
ಬಳಸುವ ವಸ್ತುಗಳು - ಸೂಕ್ತ ಅಳತೆಯ ಬಾಳೆ ದಿಂಡು, ಹಣತೆ ದೀಪ ಅಥವಾ ಮೊಂಬತ್ತಿ, ಚಿಕ್ಕ ಚಾಕು.
* ಮೊದಲು ಬಾಳೆ ದಿಂಡಿನ ಹೊರಗೆ ಇರುವ ಒಣಗಿದ ಮತ್ತು ಹಸಿರು ನಾರನ್ನು ಬಿಡಿಸಿ ಎಸೆದು ಒಳಗಿರುವ ಬಿಳಿ ನಾರನ್ನು ಮಾತ್ರ ಚಂದವಾಗಿ ಬಿಡಿಸಿಕೊಳ್ಳಿ.
* ಬಾಳೆ ದಿಂಡಿನ ಎರಡು ನಾರನ್ನು ಒಂದರೊಳಗೊಂದು ಹಾಕಿ ಕೊಳವೆಯಂತೆ ಮಾಡಿ.
* ನಾರಿನ ಮೇಲೆ ಬೇಕಿದ್ದರೆ ಚಿಕ್ಕ ಚಿಕ್ಕ ಕಿಂಡಿ ಅಥವಾ ವಿನ್ಯಾಸಗಳನ್ನು ಕೊರೆದು ನಮ್ಮ ಕಲಾತ್ಮಕತೆಯನ್ನು ಸಾದರಪಡಿಸಬಹುದು
* ನಾರಿನ ಮೇಲೆ ಬೇಕಿದ್ದರೆ ಚಿಕ್ಕ ಚಿಕ್ಕ ಕಿಂಡಿ ಅಥವಾ ವಿನ್ಯಾಸಗಳನ್ನು ಕೊರೆದು ನಮ್ಮ ಕಲಾತ್ಮಕತೆಯನ್ನು ಸಾದರಪಡಿಸಬಹುದು
* ಹಣತೆ ಅಥವಾ ಮೊಂಬತ್ತಿಯನ್ನು ಹಚ್ಚಿ ಮಧ್ಯದಲ್ಲಿ ಬರುವಂತೆ ಇಟ್ಟು ಬಾಳೆದಿಂಡಿನ ಕೊಳವೆಯನ್ನು ಕೌಚಿಡಿ.
ಈಗ ಸಾವಯವ ಕೊಳವೆ ದೀಪ ರೆಡಿ. ಬಾಳೆ ನಾರಿನ ಮೂಲಕ ಹೊರಬರುವ ಬೆಳಕು ನೋಡಲು ತುಂಬಾ ಆಕರ್ಷಕವಾಗಿರುತ್ತದೆ. ಡೂಮ್ ಲೈಟಿನಂತೆ ಶ್ರೀಮಂತವಾಗಿ ಕಂಗೊಳಿಸುತ್ತದೆ. ಗಾರ್ಡನ್ನಿನ ಹೂಗಿಡಗಳ ಪಕ್ಕದಲ್ಲಿ ಇಟ್ಟರೆ ನೋಡಲು ನಮ್ಮ ಮನೆಯಂಗಳವೀಗ ನಂದನದ ಅಂಗಳ !
ದೀಪಾವಳಿಯ ಹೊರತಾಗಿ ಮನೆಯ ವಿಶೇಷ ಕಾರ್ಯಕ್ರಮಗಳಲ್ಲೂ ಹೀಗೆಯೇ ದೀಪಗಳನ್ನು ಹಚ್ಚಿದರೆ ಸುಂದರ ಮತ್ತು ಎಣ್ಣೆ ಖಾಲಿಯಾಗುವವರೆಗೆ ದೀಪ ಆರುವ ಭಯವಿಲ್ಲ. ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ.
ಇದು ದೀಪಾವಳಿ ಸ್ಪೆಶಲ್ ದೀಪ.
ಈ ಲೇಖನ ದಿನಾಂಕ 03-11-2012 ರ ವಿಜಯಕರ್ನಾಟಕ ಪತ್ರಿಕೆಯ ವಿ.ಕೆ ಪ್ರಾಪರ್ಟಿಯಲ್ಲಿ ಪ್ರಕಟವಾಗಿದೆ.
ಸಖತ್ತಾಗಿದ್ದು :-)
ReplyDeleteಥ್ಯಾ೦ಕ್ಸ್..
Deleteಕ್ರಿಯಾಶೀಲ ಸಲಹೆ.
ReplyDeleteಪ್ರಸ್ತುತ ಎಲ್ಲವೂ ಕೃತಕವಾಗಿರುವಾಗ ಈ ರೀತಿಯ ಕ್ರಿಯಾಶೀಲತೆಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಸಿಗಲಾರವು.
ಹಂಚಿಕೊಂಡದ್ದಕ್ಕೆ ಧನ್ಯವಾದಗಳು. ರಜೆಯಲ್ಲಿ ಊರಿಗೆ ಹೋದರೆ ಈ ಪ್ರಯತ್ನ ಮಾಡಬಹುದು.
ವ೦ದನೆಗಳು.. ಇಲ್ಲಿಯೂ ಹಬ್ಬ ಸಮಯದಲ್ಲಿ ಬಾಳೇ ಗಿಡಗಳು ದೊರೆಯುತ್ತವಲ್ಲ ..ಪ್ರಯತ್ನಿಸಿ..:)
DeleteWOW!!!! Great idea.......
ReplyDeleteಥ್ಯಾ೦ಕ್ಸ್..
Deletesuper..
ReplyDeleteಥ್ಯಾ೦ಕ್ಸ್..
Deletethumba channagide nanu praythna mandbeyku ... ourige hodavaga....)
ReplyDeleteಬ್ಲಾಗಿಗೆ ಸ್ವಾಗತ, ಸುಜನ್ ಅವರೇ..
Deleteವ೦ದನೆಗಳು.
thumba channagide
ReplyDeleteSooper... Mast idea kottidde, But ee sala deepaavalige try madale agtille.. :(
ReplyDeleteಸ೦ಧ್ಯಾ.. ಥ್ಯಾ೦ಕ್ಸ್..
Deleteಊರಿಗೆ ಹೋಗಲಾಗದಿದ್ದರೆ ಇಲ್ಲೇ ಬಾಳೆಗಿಡ ಖರೀದಿಸಿ ಮಾಡಿ..
ವಿಜಯಶ್ರಿ ಮೇಡಮ್,
ReplyDeleteThis is something special! ಗ್ರೇಟ್ ಐಡಿಯ ಕೊಟ್ಟಿದ್ದಕ್ಕೆ ಥ್ಯಾಂಕ್ಸ್.
ಧನ್ಯವಾದಗಳು..
DeleteInnovative -msh
ReplyDeletewelcome and thanks sir.
DeleteInnovative -msh
ReplyDeleteಇದು ಮಾಡ್ಲೇಬೇಕು. ಸೂಪರಾಗಿದೆ.
ReplyDeleteಖ೦ಡಿತಾ ಮಾಡಿ..ಚನ್ನಾಗಿರುತ್ತೆ..
Deleteಥ್ಯಾ೦ಕ್ಸ್..
ಇದು ಮಾಡಲೇಬೇಕು. ಸೂಪರ್ರಾಗಿದೆ
ReplyDeleteIt looks fantastic...Will surely try it...
ReplyDeleteಅರೆ ಹೌದಲ್ವಾ , ಎಂತಹಾ ಕ್ರಿಯಾಶೀಲತೆ ಇದೆ ಇದರಲ್ಲಿ, ಪರಿಸರಕ್ಕೆ ಹಾನಿಮಾಡದೆ , ಕೇವಲ ಸಾವಯವ ಸಾಮಗ್ರಿಗಳಿಂದ ರಚಿಸಬಹುದಾದ ದೀಪಗಳ ಬಗ್ಗೆ ಉತ್ತಮ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಥ್ಯಾಂಕ್ಸ್.
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು.
ಧನ್ಯವಾದಗಳು ಬಾಲು ಸರ್..
Deleteಬಾಳೆ ದಿಂಡಿನ ದೀಪ..:)
ReplyDeleteಎಕೋ ಫ್ರೆಂಡ್ಲಿ ದೀಪ ಚೆನ್ನಾಗಿದೆ.
ನನ್ನ ಬ್ಲಾಗಗೂ ಒಮ್ಮೆ ಭೇಟಿ ಕೊಡಿ. ಈಗಷ್ಟೆ ಹೆಜ್ಜೆಯನ್ನಿಡುತ್ತಿದ್ದೇನೆ, ತಿದ್ದಿ ಬೆಳೆಸಿ.
vijayashree medam vishesha
ReplyDeleteuttama prayogada maahitigaagi
dhanyavaadagalu.
ದೀಪಾವಳಿ" ಹೆಸರೇ ಸೂಚಿಸುವಂತೆ ಬೆಳಕಿನ ಹಬ್ಬ. ದೀಪವೆಂದರೆ ಅರಿವು; ದೀಪವೆಂದರೆ ಜ್ನಾನ; ದೀಪವೆಂದರೆ ಪ್ರಗತಿಯ ಪ್ರತೀಕ; ದೀಪವೆಂದರೆ ಚೈತನ್ಯದ ಸಂಕೇತ.
ReplyDeleteಬದುಕಿನ ಅಂಧಕಾರವನ್ನು ಕಳೆದು ಜ್ನಾನದ ಜ್ಯೋತಿ ಬೆಳಗುವುದೇ ದೀಪಾವಳಿ.
ಈ ದೀಪಾವಳಿ ಮಾನವನ ಬದುಕಿನ ಕತ್ತಲೆಯನ್ನು ಕಳೆದು, ಅರಿವಿನ ದೀವಿಗೆಯಾಗಲಿ.
ಬನ್ನಿ.. ಬೆಳಕಿನ ಪ್ರಣತಿಯನ್ನು ಮನ ಮನಗಳಲ್ಲಿ, ಮನೆ ಮನೆಗಳಲ್ಲಿ ಹತ್ತಿಸೋಣ. ಅಂಧಕಾರವ ಕಳೆಯೋಣ. ಎಲ್ಲರಿಗೂ ದೀಪಾವಳಿಯ ��ಶುಭಾಷಯಗಳು.�� ����