Saturday, January 2, 2010

ಅಮ್ಮಾ.......



ಅಮ್ಮಾ , ನಿನ್ನ ತೋಳತೆಕ್ಕೆಯಲ್ಲಿ,
ಮಡಿಲ ಮೆತ್ತೆಯಲ್ಲಿ,
ಕಣ್ಣಂಚಿನ ರಕ್ಷೆಯಲ್ಲಿ,
ಬರೆದಿದ್ದು ನನ್ನ ಬಾಳನಕ್ಷೆಯಲ್ಲವೇ...?



ಮೊಗದ ತುಂಬಾ
ಮಮತೆ ಬಿಂಬ,
ಹೊತ್ತೆ ನೀನು, ಹೆತ್ತೆ ನೀನು,
ಗೊತ್ತೇ ಆಗಲಿಲ್ಲ.... ನಿನ್ನ ಕಷ್ಟವೇನು...?



ಅಲ್ಲಿ ನೋವು ಕಾಣೆ, ದುಃಖ ಕಾಣೆ,
ಕಥೆಯಿಲ್ಲ, ವ್ಯಥೆಯಿಲ್ಲ,
ದೇವರಾಣೆಗೂ ಮಮತೆಯೊಂದರ
ಒರತೆಯಷ್ಟೇ..... ಅಲ್ವೇ ಅಮ್ಮಾ...?



[ ಮೇಲಿನ ಚಿತ್ರ ನನ್ನದೇ ರಚನೆ. ಯಾರೂ ಇಲ್ಲದಿದ್ದಾಗ, ಹೊತ್ತು ಕಳೆಯಲು ಏನಾದರೂ ಬೇಕಲ್ಲ . ಅನಿಸಿದ್ದನ್ನು ಬರೆದು ಮುಗಿಸಿದಾಗ ಮನಸ್ಸಿಗೆ ಧ್ಯಾನ ನಂತರ ಸಿಗುವ ಆನಂದ ದೊರೆತಂತೆ ಭಾಸವಾಗುವುದು .
ಇದು ನಾನು ಬಾಲ್ಯದಿಂದ ಬೆಳೆಸಿಕೊಂಡು ಬಂದ ಹವ್ಯಾಸ.
ಗುಣಮಟ್ಟ ಹೇಗೆ ಇದ್ದರೂ.... ಹೆತ್ತವಳಿಗೆ ಹೆಗ್ಗಣ ಮುದ್ದು...
ಹಾಗೆ ...
ಅದನ್ನು ಹೆಚ್ಚಿಸಿಕೊಳ್ಳಲು ನಿಮ್ಮೆಲ್ಲರ ಪ್ರೋತ್ಸಾಹ ಅಗತ್ಯ..]

33 comments:

  1. ನಿಮ್ಮ ರೇಖೆಯಲ್ಲಿ ಹಿಡಿತದ ಹದವಿದೆ, ಭಾವವನ್ನು ಹೊಮ್ಮಿಸಬೇಕಾದಲ್ಲಿ ಸರಿಯಾಗಿ ರೇಖೆಗಳು ಮತ್ತು ಅದರ ನೆರಿಗೆಗಳು[ಷೇಡ್ಸ್]ಚಲಿಸುತ್ತವೆ. ಇದನ್ನು ಸ್ವಲ್ಪ ಉತ್ಸಾಹದಿಂದ ಮುಂದುವರಿಸಿ. ಖಂಡಿತ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಕವನ ಕೂಡ...ಮತ್ತಷ್ಟು ಧ್ಯಾನಸ್ಥರಾಗಲು ಮುಂದುವರಿಸಿ...

    ReplyDelete
  2. ಶಿವು ಸರ್,
    ಚಿತ್ರ ಹಳೆಯದು...
    ಕವಿತೆ ಹೊಸತು...
    ನಿಮ್ಮ ಪ್ರೋತ್ಸಾಹ ..
    ಮತ್ತೆ ತರುವುದು ನವೋತ್ಸಾಹ..
    ವ೦ದನೆಗಳು.

    ReplyDelete
  3. ಕವಿತೆ ಹೊಸದಾದರೇನು ಚಿತ್ರ ಹಳೆಯದಾದರೇನು... ಭಾವನೆಗಳ ಪೂರವನ್ನು ತುಂಬಿದ್ದೀರಲ್ಲಾ ಅದೇ ವಿಶೇಷ.. ಚಿತ್ರ ಚೆನ್ನಾಗಿದೆ ಹೀಗೆ ಮುಂದುವರಿಸಿ... ಹಾಗೆ ಅಮ್ಮನ ಒಡಲಾಳ ಅರಿಯುವುದು ನಾವು ಅಮ್ಮನಾದಾಗ ಅಲ್ಲವೆ.

    ReplyDelete
  4. ವಿಜಯಶ್ರೀ,
    ಕವನ ತುಂಬ ಭಾವಪೂರ್ಣವಾಗಿದೆ. ನೀವು ಬರೆದ ಚಿತ್ರವೂ ಸಹ ಚೆನ್ನಾಗಿ ಬಂದಿದೆ. ನಿಮ್ಮ ಈ ಕಲೆ ಗೊತ್ತಿರಲಿಲ್ಲ. Keep it up.

    ReplyDelete
  5. ಚಿತ್ರ ಮತ್ತು ಕವನ ಎರಡೂ ಚೆನ್ನಾಗಿವೆ. ಚುಕ್ಕಿಚಿತ್ತಾರ ಈ ಬಾರಿ ಗೆರೆಯ ಚಿತ್ತಾರವಾಗಿದೆ!

    ReplyDelete
  6. ಅಮ್ಮಾ... ಮಮತೆಯೊಂದರ ಒರತೆ .... ಎಷ್ಟು ಸುಂದರ ಸತ್ಯ ಆಲ್ವಾ....... ಕವನ ಭಾವಪೂರ್ಣವಾಗಿದೆ.

    ReplyDelete
  7. ಚುಕ್ಕಿಚಿತ್ತಾರ...

    ಚಿತ್ರ ತುಂಬಾ ಚೆನ್ನಾಗಿದೆ..
    ಅದರಲ್ಲಿ ಮಲಗಿರುವ ಮಗುವಿನ ಭಾವಗಳು ಇಷ್ಟವಾಗಿಬಿಡುತ್ತವೆ..
    ಅದನ್ನು ನೋಡುತ್ತ ಕವನ ಓದುತ್ತಿದ್ದರೆ..
    ತುಂಬಾ ಖುಷಿಯಾಗುತ್ತದೆ..
    ಇದು ನಮ್ಮದೇ ಭಾವ ಅನಿಸುವಷ್ಟು...

    ಅಂದದ ಚಿತ್ರ..
    ಚಂದದ ಕವನ.. ಎರಡಕ್ಕೂ ಅಭಿನಂದನೆಗಳು...

    ReplyDelete
  8. ಮನಸು
    ನಿಜ..ನಾವು ಅಮ್ಮನಾದಾಗ ’ಅಮ್ಮ’ಅನ್ನುವುದರ ಅರ್ಥ ಅರಿವಾಗುವುದು.
    ನನ್ನ ಚಿತ್ರ, ಕವನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.

    ಸುನಾಥ್ ಕಾಕಾ
    ಚಿತ್ರ ಬರೆಯುವುದೇ ನನ್ನ ನಿಜವಾದ ಹವ್ಯಾಸ..
    ಪ್ರಯತ್ನ ಸ್ವಲ್ಪ ಕಡಿಮೆಯಾಗಿದೆ....ಈಗೀಗ.
    ನಿಮ್ಮೆಲ್ಲರ ಪ್ರೋತ್ಸಾಹ ನನ್ನ ಉತ್ಸಾಹವನ್ನು ಚಿಗುರಿಸುತ್ತಿದೆ..
    ವ೦ದನೆಗಳು.

    ಸುಪ್ತವರ್ಣ
    ಚುಕ್ಕಿಯನ್ನು ವಿಸ್ತರಿಸಿ ಗೆರೆ ಮಾಡಿದ್ದು ನಿಮಗೆಲ್ಲಾ ಇಷ್ಟವಾದರೆ ನನ್ನ್ನ ಪ್ರಯತ್ನ ಸಾರ್ಥಕ.ಪ್ರಶ್ನೆ ಎ೦ದರೆ ನೀವು ನಿಮ್ಮ ಪುಟದಲ್ಲಿ ಸುಪ್ತವಾಗಿ,ಗುಪ್ತವಾಗಿದ್ದೀರಲ್ಲಾ..ಹೊಸ ಬರಹ ಬರುವುದು ಯಾವಾಗ..?
    ವ೦ದನೆಗಳು.

    ನಾರಾಯಣ ಭಟ್ ಅವರೆ
    ನನ್ನ ಬ್ಲಾಗಿಗೆ ಸ್ವಾಗತ.
    ನನ್ನ ಕವಿತೆ ಇಷ್ಟಪಟ್ಟಿದ್ದಕ್ಕೆ ವ೦ದನೆಗಳು.

    ReplyDelete
  9. ಪ್ರಕಾಶಣ್ಣ
    ಚಿತ್ರ ಬರೆಯುವುದನ್ನು ಈಗೀಗ ಮತ್ತೆ ಶುರು ಮಾಡಿದ್ದೇನೆ.
    ಚಿತ್ರ ಬರೆಯುವುದರಲ್ಲಿನ ಆನ೦ದವೇ ಬೇರೆ.
    ಅದು ನನ್ನ ಮೂಲ ಮಾಧ್ಯಮ.
    ನಿಮ್ಮೆಲ್ಲರ ಪ್ರೋತ್ಸಾಹ ಅದನ್ನು ಮುಖ್ಯಮಾಧ್ಯಮವನ್ನಾಗಿಸಲು ಪ್ರೇರೇಪಿಸುತ್ತದೆ.
    ಚಿತ್ರ ಕವನ ಇಷ್ಟಪಟ್ಟಿದ್ದಕ್ಕೆ ಆಭಾರಿಯಾಗಿದ್ದೇನೆ.

    ReplyDelete
  10. ಭಾವ ತು೦ಬಿದ ಕವನ ....

    ಕಲೆಯು ತು೦ಬಿದೆ ಬೆರಳುಗಳಲ್ಲಿ....
    ಸವಿಭಾವ ತು೦ಬಿದೆ ಮನದಲ್ಲಿ...
    ಪ್ರಯತ್ನ ಹೊರಹಾಕಿದೆ ಶಬ್ದಚಿತ್ರಗಳಲ್ಲಿ...
    ಮತ್ತೆ ಮತ್ತೆ ಮೂಡಿಸಿ ಭಾವಗಳ ಚಿತ್ರದಲ್ಲಿ...

    ReplyDelete
  11. ವಿಜಯಶ್ರೀ ಮೇಡಂ,
    ಕವನ , ಚಿತ್ರ ಎರಡೂ ಚೆನ್ನಾಗಿದೆ...... ಚಿತ್ರದಲ್ಲಿನ ಮಗುವಿನ ಮುಗ್ಧ ಮುಖ, ಅಮ್ಮನ ಮುಖ ತುಂಬಾ ಚೆನ್ನಾಗಿ ಮೂಡಿ ಬಂದಿದೆ....... ಕವನವೂ ಸಹ....... ನಿಮಗೂ ಹೊಸ ವರ್ಷದ ಶುಭಾಶಯಗಳು.................

    ReplyDelete
  12. ಚುಕ್ಕಿ ಚಿತ್ತಾರ ಅವರೇ,
    ಕವನದ ಸಾಲು ತುಂಬಾ ಚೆನ್ನಾಗಿದೆ... ಚಿತ್ರ ಬಿಡಿಸುದನ್ನು ನಿಲ್ಲಿಸಬೇಡಿ... ಚೆನ್ನಾಗಿದೆ ಬಂದಿದೆ...
    ನಿಮ್ಮವ,
    ರಾಘು.

    ReplyDelete
  13. ಮನಮುಕ್ತಾ..
    ಮನದ ಭಾವ ಬೆರಳಿಗಿಳಿಯಲು ಮನಸ್ಸು ಕೆಲವೊಮ್ಮೆ ನೆವ ಹೇಳುತ್ತದೆ.
    ಅದಿಲ್ಲ ಇದಿಲ್ಲ..ತಾಪತ್ರಯಗಳ ಸರಮಾಲೆ..ಹೀಗೆ..
    ಪ್ರೋತ್ಸಾಹಕ್ಕೆ ಧನ್ಯವಾದಗಳು.

    ದಿನಕರ..
    ನನ್ನ ಚಿತ್ರ ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು.

    ರಾಘು ಅವರೇ
    ನಿಮ್ಮೆಲ್ಲರ ಪ್ರೋತ್ಸಾಹದಿ೦ದ ನನ್ನ ಕಲೆ ಹೆಚ್ಚುತ್ತದೆ.
    ಚಿತ್ರ ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು.

    ReplyDelete
  14. ಸುಂದರ ಚಿತ್ರ, ಅಷ್ಟೇ ಸೊಗಸಾದ ಕವನ.

    ReplyDelete
  15. ಚಿತ್ರ ಚೆನ್ನಾಗಿದೆ. ಎಲ್ಲಕ್ಕಿಂತಲೂ ಕವನದ ಭಾವಾಭಿವ್ಯಕ್ತಿ ಸೆಳೆಯುತ್ತದೆ. ವಂದನೆಗಳು..

    ReplyDelete
  16. ಚಿತ್ರ ಹಾಗೂ ಕವನ ಎರಡೂ ತುಂಬ ಚೆನ್ನಾಗಿದೆ ....

    ReplyDelete
  17. ಚೆಲುವಿನ ಚಿತ್ತಾರ:)

    ReplyDelete
  18. ವಿಜಯಶ್ರೀ, ನಿಮ್ಮ ಕವಿತೆಯ ಹಿಡಿತದ ಗುಣ ನಿಮ್ಮ ಚಿತ್ರದಲ್ಲೂ ಇದೆ..ನಿಜಕ್ಕೂ ಈ ಜುಗಲ್ ಬಂದಿ ಮುಂದುವರೆಸಿ....ಅಮ್ಮನ ಮನಸು...ಅಮ್ಮನ ಕನಸು ಎಲ್ಲ ಮಕ್ಕಳಲ್ಲಿ...ಯಾವುದೇ ನಿರೀಕ್ಷೆಯಿಲ್ಲದೇ ಗೈಯುವ ಸೇವೆಗೆ ಅಮ್ಮ ಒಂದು ನಿದರ್ಶನ. ಭಾವದ ಭಾಷಾಂತರ ನಿಮ್ಮ ರೇಖೆಗಳಲ್ಲಿ ಮೂಡಿದೆ....

    ReplyDelete
  19. ಆನ೦ದ
    ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದಕ್ಕೆಧನ್ಯವಾದಗಳು.

    ಸುಬ್ರಹ್ಮಣ್ಯ ಭಟ್ ಅವರೇ.
    ನನ್ನರಮನೆಗೆ ಸ್ವಾಗತ.
    ಚಿತ್ರ, ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು.

    ಸವಿಗನಸು
    ಚಿತ್ರ, ಕವನ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆಧನ್ಯವಾದಗಳು.

    ಸ೦ದೀಪ್ ಕಾಮತ್ ಅವರೆ..
    ನನ್ನರಮನೆಗೆ ಸ್ವಾಗತ.
    ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದಕ್ಕೆಧನ್ಯವಾದಗಳು.

    ಜಲನಯನ ಸರ್..
    ಅಮ್ಮ... ಎಲ್ಲರಲ್ಲೂ ಮೂಡುವ ಚ೦ದದ ಗೀತೆ,
    ಅಮ್ಮನಿಗೆ ಅಮ್ಮನೇ ಹೋಲಿಕೆ..
    ಚಿತ್ರ, ಕವನ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆಧನ್ಯವಾದಗಳು.

    ReplyDelete
  20. ವಿಜಯಶ್ರ್‍ಈಯವರೇ,
    ಚೆ೦ದದ ಕವನ ಜೊತೆಗೆ ಉತ್ತಮ ರೇಖಾಚಿತ್ರ. ಮನಕ್ಕೆ ಮುದ ನೀಡಿತು. ಅಮ್ಮನಲ್ಲಿರುವದು ಕೇವಲ ಮಮತೆ ಪ್ರ್‍ಈತಿ-ಸತ್ಯದ ಮಾತು.

    ReplyDelete
  21. ಚಿತ್ರ-ಕವನ ಎರಡೂ ಚೆನ್ನಾಗಿವೆ.

    ReplyDelete
  22. ಚಿತ್ರ ಹಾಗೂ ಕವನ ಎರಡೂ ತುಂಬ ಚೆನ್ನಾಗಿದೆ.

    ReplyDelete
  23. ಹಳೆ ಚಿತ್ರ, ಹೊಸ ಕವನ ಎರಡು ತುಂಬಾ ಚನ್ನಾಗಿವೆ... :)

    ReplyDelete
  24. ಚಿತ್ರ ತುಂಬಾ ಚೆನ್ನಾಗಿದೆ ಮೇಡಂ..
    ಭಾವನೆಗಳಿಂದ ತುಂಬಿದ ಕವನ ಬಹಳ ಇಷ್ಟವಾಯಿತು :)

    ReplyDelete
  25. ತುಂಬಾ ಚೆನ್ನಾಗಿದೆ ಚಿತ್ರ ಹಾಗೂ ನಿಮ್ಮ ಕವನ. ಇವತ್ತು ಯಾಕೋ ಅಮ್ಮನ ನೆನಪು ಬಹಳ ಆಗುತ್ತಿತ್ತು. ನಿಮ್ಮ ಕವನವನ್ನೋದಿ, ಚಿತ್ರ ನೋಡಿ ಮನಸೆಲ್ಲಾ ಭಾರ. ಅಮ್ಮ ದೂರದಲ್ಲೇ ಇರಲಿ, ಆಕೆಯ ಇರುವಿಕೆಯ ಅರಿವು, ಮಮತೆ ಕಂಪು ನಮ್ಮನ್ನು ಬಹು ಬೆಚ್ಚಗಿಡುತ್ತದೆ ಅಲ್ಲವೇ?

    ReplyDelete
  26. ಮೊಗದ ತುಂಬಾ
    ಮಮತೆ ಬಿಂಬ,
    ಹೊತ್ತೆ ನೀನು, ಹೆತ್ತೆ ನೀನು,
    ಗೊತ್ತೇ ಆಗಲಿಲ್ಲ.... ನಿನ್ನ ಕಷ್ಟವೇನು...?
    ಎಂಥಹ ಸಾಲುಗಳು
    ತುಂಬಾ ಸುಂದರವಾಗಿದೆ

    ReplyDelete
  27. ಅಮ್ಮನ ಬಳಿ ಯಾವಾಗಲೂ ಬೆಚ್ಚಗಿನ ಭಾವ... ಅವಳ ಅಸ್ಥಿತ್ವವೇ ಹಾಗೆ..
    ಸೀತಾರಾ೦ ಸರ್,
    ಪರಾ೦ಜಪೆ ಸರ್,
    ನಿಶಾ ಮೇಡ೦,
    ಶಿವಪ್ರಕಾಶ್,
    ತೇಜಸ್ವಿನಿ,
    ಸ್ನೊವೈಟ್ ಸುಮಾ,
    ಗುರುಮೂರ್ತಿ..
    ನಿಮ್ಮೆಲ್ಲರ ಚೆ೦ದದ ಪ್ರತಿಕ್ರಿಯೆಗೆ, ಪ್ರೋತ್ಸಾಹಕ್ಕೆ ಧನ್ಯವಾದಗಳು.

    ReplyDelete
  28. ಚುಕ್ಕಿ ಚಿತ್ತಾರ [ವಿಜಯಾ] ರವರೆ ,
    ಸುಂದರ ಚಿತ್ರದೊಂದಿಗೆ ..ಸುಂದರ ಕಾವ್ಯ ಕೂಡ ..
    ನನ್ನ ಬ್ಲಾಗ್ ಗೆ ಸ್ಪಂದಿಸಿದಕ್ಕೆ ದನ್ಯವಾದಗಳು ,
    ವರ್ಗಸರದ ಶ್ರುತಿಯೊಂದಿಗೆ ನನ್ನ ಮದುವೆ ಆಗಿದ್ದು ,,,,
    ನಿಮಗೆ ಅವರ ಪರಿಚಯವಿದೆಯ ..

    ReplyDelete
  29. ಚುಕ್ಕಿ ಚಿತ್ತಾರ
    ಕವನ ಹಾಗು ಚಿತ್ರ ತುಂಬ ಚೆನ್ನಾಗಿ ಇದೆ... ನಿಮಗೆ ಚಿತ್ರ ಬಿಡಿಸುವಲ್ಲಿ ಆಸಕ್ತಿ ಇದ್ದರೆ ಮುಂದುವರಿಸಿ....ತುಂಬ ಚೆನ್ನಾಗಿ ಇರುತ್ತೆ... ಅಮ್ಮನ ಬಗ್ಗೆ ಏನೆ ಬರೆದರೂ,, ಅದು gr8 ಅಲ್ವ ....

    ReplyDelete
  30. ಶ್ರೀಧರ್..ಪ್ರತಿಕ್ರಿಯೆಗೆ ಧನ್ಯವಾದಗಳು.
    ವರ್ಗಾಸರದವರು ನಮಗೆ ತು೦ಬಾ ಹತ್ತಿರದ ಬ೦ಧುಗಳು.ಹೇಮಾವತಿಯ ಅತ್ತಿಗೆ ಅ೦ದರೆ ಶ್ರುತಿಗೆ ಗೊತ್ತಾಗ ಬಹುದು.

    ReplyDelete
  31. ಗುರು ಅವರೆ..
    ನನ್ನ ಚಿತ್ರ, ಕವನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.

    ReplyDelete
  32. ಹಾಯ್
    ನಿಮ್ಮ ಕವಿತೆಗಿಂತ ಚಿತ್ರಾನೆ
    ಮುದ್ದಾಗಿದೆ
    ನೊರಾರು ಶಬ್ದಗಳು ಹೇಳುವದನ್ನು ಒಂದು ಚಿತ್ರ ಹೆಳುತ್ತದೆ
    ಅಂತೆ ಅದು ದೇವರಾಣೆಗೂ ನಿಜಾನೆ
    ಧನ್ಯವಾದಗಳೋಂದಿಗೆ
    ಕನಸು

    ReplyDelete
  33. ಬಹಳ ಚೆನ್ನಾಗಿದೆ, ಚಿತ್ರ ಕವಿತೆ ಎರಡು... ನೀವು ಚಿತ್ರ ಬಹಳ ಚೆನ್ನಾಗಿ ಬರೀತೀರಿ, ಫೋಟೋ ತುಂಬಾ ಚೆನ್ನಾಗಿ ತೆಗಿತೀರಿ, ಅಡಿಗೆ ಅಂತು ಸೂಪರ್.

    ಹೀಗೆ ಬರೆಯುತ್ತಿರಿ..

    ReplyDelete