ಮನೆ ಅ೦ದ ಮೇಲೆ ಜಿರಳೆ, ಸೊಳ್ಳೆ, ನೊಣ, ಗೋಡೆಯ ಮೇಲೆ ನಾಲ್ಕಾರು ಹಲ್ಲಿಗಳು, ಗೋಡೆ ಬದಿಯಲ್ಲಿ ಸಾಲಿಕ್ಕುವ ಇರುವೆಗಳು ಇದ್ದೇ ಇರುತ್ತವೆ ಬಿಡಿ.
ಹಾಗೂ ಇವೆಲ್ಲಕ್ಕೂ ಸೊಳ್ಳೆ ಬತ್ತಿ, ಲಕ್ಷ್ಮಣ ರೇಖೆ, ಹಿಟ್ಟು ಪಟ್ಟು ಅನ್ನುವ ಉಪಶಮನಕಾರಿ ವಸ್ತುಗಳೂ ಇರುತ್ತವೆ.. ಅನ್ನಿ.
ಉಳಿದವು ಸಾಯಲಿ.. ಮನೆಯ ಮಹಿಳೆಯರಿಗೆ ವಿಪರೀತವೆನ್ನುವಷ್ಟು ರೇಜಿಗೆ ಉಂಟು ಮಾಡುವ ಈ ಜಿರಳೆ ಮಾತ್ರ ಸುಮಾರಿಗೆ ಯಾವುದಕ್ಕೂ ಜಗ್ಗುವ ಕುಗ್ಗುವ ಬಾಬತ್ತಿನದಲ್ಲ..
ನೀವು ಯಾರ ಮನೆಗಾದರೂ ಹೋದಾಗ ಅಲ್ಲೇನಾದರೂ ಸೆರಗು ಸಿಕ್ಕಿಸಿ ಪೊರಕೆ ಹಿಡಿದು ಹಿತ್ತಿಲ ಬಾಗಿಲ ಕಡೆ ವೀರಾಗ್ರಣಿಯಂತೆ ನಿಂತಿರುವ ಮಹಿಳೆಯರನ್ನೆನಾದರೂ ನೋಡಿದರೆ, ಜೊತೆಗೆ ರಾಪ್ .. ರಾಪ್...ಅನ್ನುವ ಹಿನ್ನೆಲೆ ಸಂಗೀತವಿದ್ದರೆ ಹೆಜ್ಜೆ ಕಿತ್ತಿಡಲು ಯೋಚನೆ ಮಾಡುವುದೇನೂ ಬೇಡ.. ಹೆಂಗಸರಿಗೆ ಜಪ್ಪಲು ಜಿರಳೆಗಳೂ ಇವೆ..! ಮಹಿಳೆಯರ ನಿಜವಾದ ವೈರಿಗಳೆಂದರೆ ಈ ಜಿರಲೆಗಳೇ.. !!
ಮೊಸರಿನ ಪಾತ್ರೆಗೇ ಬಿದ್ದು ಸಾಯುತ್ತವೆ ಹಾಳಾದವು..
ಅವು ಲಕ್ಷ್ಮಣ ರೇಖೆಗೆ ನಿರೋಧಕ ಶಕ್ತಿ ಬೆಳೆಸಿಕೊಂಡು ಬಿಟ್ಟಿವೆ. ನಾವೇ ಸಾಯಬೇಕೆ ಹೊರತೂ ಜಿರಳೆಗಳು ಅವುಗಳ ಮೇಲೆ ಆರಾಮಾಗಿ ಓಡಾಡಿಕೊಂಡಿರುತ್ತವೆ....! {ನನ್ನ ಮಕ್ಕಳಿಗೆ ರಾಮಾಯಣದ ಕಥೆ ಹೇಳಲು ಹೋಗಿ 'ಅವಾಗ ಕೂಡ ಲಕ್ಷ್ಮಣ ರೇಖೆ ಇತ್ತೇ, ಮತ್ತು ಅದನ್ನು ಮನುಷ್ಯರಿಗೆ ಹಾಕುತ್ತಿದ್ದರೇ...?' ಎನ್ನುವ ಪ್ರಶ್ನೆಗೆ ಉತ್ತರ ಕೊಡಲು ಹೋಗಿ ಸೋತಿದ್ದು ನನ್ನ ಜೀವಮಾನದ ಸೋಲಾಗಿ ಹೋಗಿದೆ..!}
ಲಕ್ಷ್ಮಣ ರೇಖೆ ಬೇಡ ಬಿಡಿ. ಅದಕ್ಕಿಂತಲೂ ಒಳ್ಳೆಯ ಉಪಾಯ ಇದೆ ಜಿರಳೆ ಸಂಹಾರಕ್ಕೆ.
ನಿಮ್ಮನೆಯಲ್ಲಿ ಕೇರಂ ಬೋರ್ಡ್ ಇದೆಯಾ.. ?
ಏಕೆಂದರೆ ಕೇರಂ ಬೋರ್ಡ್ ಇದ್ದವರ ಮನೆಯಲ್ಲಿ ಸುಮಾರಾಗಿ ಬೋರ್ಡ್ ಗೆ ಹಾಕಲು '' ಬೋರಿಕ್ ಪೌಡರ್ '' ಅಂತೂ ಇದ್ದೇ ಇರುತ್ತದೆ..
ಈಗ ಹೀಗೆ ಮಾಡಿ.. ಐದು ಚಮಚ ಬೋರಿಕ್ ಪೌಡರ್ ಗೆ ಐದು ಚಮಚ ಮೈದಾಹಿಟ್ಟು ಹಾಕಿ. ನೀರು ಹಾಕಿ ಕಲೆಸಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ [ ಜಾಮೂನಿನ ಉಂಡೆಗಳ ಗಾತ್ರದಲ್ಲಿ] ಮಾಡಿ ಅಡುಗೆ ಮನೆಯಲ್ಲಿ, ಪುಸ್ತಕದ ಕಪಾಟುಗಳಲ್ಲಿ, ಬಚ್ಚಲು ಮನೆಯಲ್ಲಿ ಹೀಗೆ ಎಲ್ಲಿ ಬೇಕಾದರಲ್ಲಿ ಜಿರಳೆಗಳು ಬರುವಲ್ಲಿ ಮೀಟರಿಗೊಂದರಂತೆ ಇಡಿ. ಬೋರಿಕ್ ಪೌಡರ್ ಬೇಕಿದ್ದರೆ ಇನ್ನೊಂದು ಸ್ವಲ್ಪ ಹೆಚ್ಚಿಗೆಯೂ ಹಾಕಬಹುದು.
ಹೀಗೆ ಮಾಡಿ.. ಒಂದು ವಾರದ ನಂತರದಲ್ಲಿ ನಿಮಗೆ ಒಂದಾದರೂ ಜಿರಳೆ ಬೇಕೆಂದರೆ ತರಲು ಪಕ್ಕದ ಮನೆಗೇ ಹೋಗಬೇಕಾಗುತ್ತದೆ.!
ಇದು ನಾನು ಮಾಡಿ ನೋಡಿದ ಪ್ರಯೋಗ. ನನ್ನ ತವರು ಮನೆಯಲ್ಲಿ ದಶಕಗಳ ಹಿಂದಿನಿಂದಲೇ ಈ ಪ್ರಯೋಗ ಮಾಡಿ ಫಲಕಾರಿಯಾಗಿತ್ತು..
ಸೈಡ್ ಎಫೆಕ್ಟ್ ಇರದ ಉಪಾಯ..[ ಅಂದುಕೊಂಡಿದ್ದೇನೆ.] ಆದರೆ ಚಿಕ್ಕ ಮಕ್ಕಳಿರುವವರ ಮನೆಯಲ್ಲಿ ಜಾಗ್ರತೆ ಅಗತ್ಯ. ಆಗ ಮಿಶ್ರಣವನ್ನು ಪೇಷ್ಟ್ ತರಾ ಮಾಡಿ ಸಂದಿ ಗೊಂದಿನಲ್ಲಿ ಹಚ್ಚ ಬಹುದು.
ಆಸಕ್ತರು ಪ್ರಯೋಗಿಸಿ ನೋಡಿ. ಮತ್ತೆ ಹೇಳಿ..
ಒಬ್ಬ ಜವಾಬ್ಧಾರಿಯುತ ಮಹಿಳೆಯಾಗಿ ನನ್ನಂತೆ ಸಮಾನ ದುಃಖಿಗಳಾದ ಮಹಿಳೆಯರಿಗೆ ಮಹಿಳಾದಿನಾಚರಣೆಯ ಸಂದರ್ಭದಲ್ಲಿ ಹೀಗಾದರೂ ಕಿಂಚಿತ್ ಸಹಾಯವನ್ನು ಮಾಡೋಣ ಎಂಬುದು ನನ್ನ ಬಯಕೆ..!
ಜಿರಳೆ ಸಂಹಾರಕ್ಕೆ ಜಯ ಸಿಗಲಿ...:)
ವಂದನೆಗಳು.
karpura athva soda haakidruu jirle barolla....
ReplyDeleteನಾನು ಖಂಡಿತವಾಗಿಯು try ಮಾಡ್ತೆನೆ. ನಿಮಗೆ ತುಂಬಾ thanks
ReplyDeleteಉತ್ತಮ ಸಲಹೆಗೆ ಧನ್ಯವಾದಗಳು.
ReplyDeleteನಿಜ, ನಾನೂ ಈ ಆಯುಧ ಉಪಯೋಗಿಸಿ ಜಿರಲೆಯೆಂಬ ವೈರಿಗಳನ್ನು ನಮ್ಮ ಮನೆಯಿಂದ ಓಡಿಸಿದ್ದೇನೆ :)
ReplyDeleteಜಿರಳೆ ಕಂಡ್ರೆ ನನಗೂ ಕೋಪಾನೆ. ಅಟ್ಟಕ್ಕೆ ಒಣಗಿಸಿದ ಅಡಿಕೆಯ ಕಣ್ಣುಗಳನ್ನು ತಿಂದುಹಾಕಿದ್ದವು.ಅವುಗಳನ್ನು ಬಲಿ ಹಾಕಲು ಒಳ್ಳೆ ಐಡಿಯಾ ಕೊಟ್ಟಿದ್ದಕ್ಕೆ ಧನ್ಯವಾದಗಳು.
ReplyDeleteಜಿರಲೆ ಸ೦ಹಾರಕ್ಕೆ ನಿಜವಾಗಿಯೂ ಇದು ಅತಿ ಒಳ್ಳೆ ಉಪಾಯ...
ReplyDeleteಎಲ್ಲರೂ ಈ ಪ್ರಯೋಗ ಮಾಡಲ್ ಹಿಡದ್ರೆ..ಪಕ್ಕದ್ ಮನೆಯಲ್ಲೂ ಜಿರ್ಲೆ ಸಿಕ್ತಲ್ಲೆ..
ಕಾಲೇಜಲ್ಲಿ ಸೈನ್ಸ್ ತಗ೦ಡವ್ಕೆ ಬಯಾಲೊಜಿ ಪ್ರಾಕ್ಟಿಕಲ್ ಮಾಡಲೆ ಜಿರ್ಲೆ ಸಿಕ್ಕದ್ ಕಷ್ಟನೆಯ ನೋಡು.. :):)
ee vishya gotte irlilla, prayoga maadi nodteeni....
ReplyDeleteವಿಜಯಶ್ರೀ,
ReplyDeleteಧನ್ಯವಾದಗಳು. ಈ ಹೊಸ ವಿಧಾನವನ್ನು ತಕ್ಷಣವೇ ಪ್ರಯೋಗಿಸಿ ನೋಡುವೆ.
nanna mumbai ya roominalli punyakke jiraLegaLilla..... :)
ReplyDeleteaadre saakashtu sanna iruvegaLive :(
nimma salahe mundakke upayogakke barabahudu :)
thumba thanks :)
ವಿಜಯಾ...
ReplyDeleteತುಂಬಾ ಒಳ್ಳೆಯ ಉಪಾಯ...
ಸರಳ ಹಾಗೂ ಆರೋಗ್ಯಕರ ಮದ್ದು ಇದು...
ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು... ಜೈ ಹೋ.. !
ಒಳ್ಳೆ ಸಲಹೆ.. ಪ್ರಯತ್ನಿಸಿ ನೋಡುವೆ..
ReplyDeleteನಾನೂ ಅಮ್ಮಂಗೆ ಹೇಳ್ತ್ನೆ.....
ReplyDeleteಒಳ್ಳೆ ಮಾತ್ರ......
nammaneli jirale barode illa bidi :)
ReplyDeleteನಮ್ಮ ಪಕ್ಕದ ಮನೆಯವರಿಗೆ ಇದನ್ನು ಹೇಳಬೇಡಿ ಆಮೇಲೆ ನಮ್ಮ ಮನೆಗೆ ಬಂದಾವು ಆ ಜಿರಲೆಗಳು....
ReplyDeleteಒಹ್.. ಒಂದೊಳ್ಳೆ ಉತ್ತಮ ಉಪಾಯವನ್ನು ಹೇಳಿದ್ದೀರಿ. ಧನ್ಯವಾದಗಳು. ನಮ್ಮಲ್ಲೂ ಇದರ ಉಪಟಳ ಜಾಸ್ತಿಯಾಗಿ ನಾನು "No Entry(Cockroach Vanish" ಅನ್ನು ಉಪಯೋಗಿಸಿದೆ. ಇದು ಎಲ್ಲಾ ಅಂಗಡಿಗಳಲ್ಲೂ ಸಾಮಾನ್ಯವಾಗಿ ಸಿಗೊತ್ತೆ. ಇದೂ ತುಂಬಾ ಪರಿಣಾಮಕಾರಿ.
ReplyDeleteಜಿರಲೆ ಓಡಿಸುವ ಉಪಾಯ ತಿಳಿಸಿದ್ದಕ್ಕೆ ಥ್ಯಾಂಕ್ಸ್..
ReplyDeleteತರಲೆಯ ಜಿರಲೆಗೊ೦ದು ಹೊಸ ಬಾ೦ಬ್.
ReplyDeleteಮೇಡ೦.. patent ಗೆ ಪ್ರಯತ್ನ ಮಾಡಬಹುದಿತ್ತು..! :)
ananth
olleya uvpaaya tilisiddira.ella mahileyaara manadalluu nive nalidaaduttira.
ReplyDeletenice, you can also place Naphthalene balls in the sink and when the water falls on it it gradually melts and kills many cockroaches in the pipes. This is also effective and used in corporate offices.
ReplyDeletenice idea
ReplyDeleteಮೊಸರಿನ ಪಾತ್ರೆಗೇ ಬಿದ್ದು ಸಾಯುತ್ತವೆ ಹಾಳಾದವು..
ReplyDeleteಅವು ಲಕ್ಷ್ಮಣ ರೇಖೆಗೆ ನಿರೋಧಕ ಶಕ್ತಿ ಬೆಳೆಸಿಕೊಂಡು ಬಿಟ್ಟಿವೆ. ನಾವೇ ಸಾಯಬೇಕೆ ಹೊರತೂ ಜಿರಳೆಗಳು ಅವುಗಳ ಮೇಲೆ ಆರಾಮಾಗಿ ಓಡಾಡಿಕೊಂಡಿರುತ್ತವೆ....! {ನನ್ನ ಮಕ್ಕಳಿಗೆ ರಾಮಾಯಣದ ಕಥೆ ಹೇಳಲು ಹೋಗಿ 'ಅವಾಗ ಕೂಡ ಲಕ್ಷ್ಮಣ ರೇಖೆ ಇತ್ತೇ, ಮತ್ತು ಅದನ್ನು ಮನುಷ್ಯರಿಗೆ ಹಾಕುತ್ತಿದ್ದರೇ...?' ಎನ್ನುವ ಪ್ರಶ್ನೆಗೆ ಉತ್ತರ ಕೊಡಲು ಹೋಗಿ ಸೋತಿದ್ದು ನನ್ನ ಜೀವಮಾನದ ಸೋಲಾಗಿ ಹೋಗಿದೆ..!}
ನಾವು ಕೂಡ ಮೊಸರಿನ ಪಾತ್ರೆಗೇ ಬಿದ್ದು ಬಿದ್ದು ನಕ್ಕ ಸೌಂಡ್ ಏನಾದ್ರೂ ಕೇಳಿಸಿತೇ????
Try madtinri., namma mane jiralegalu ee undegalige hedari odidare matte bandu thanx heltini..
ReplyDelete