Sunday, March 27, 2011

''ಶ್ರೀಖಂಡ '' ಮಾಡುವ ಸುಲಭ ವಿಧಾನ..

ಶ್ರೀಖ೦ಡ ಮಾಡಲೂ ಸುಲಭ ವಿಧಾನವೇ..? ಎ೦ದು ನೀವು ಹುಬ್ಬೇರಿಸಬೇಡಿ.. 
ಮೊಸರನ್ನು ನೀರು ತೆಗೆದು ಗಟ್ಟಿ ಮಾಡಿ ಸಕ್ಕರೆ, ಏಲಕ್ಕಿ ಹಾಕಿ ಚೆನ್ನಾಗಿ ಅರೆದು ಗೋಡ೦ಬಿ, ದ್ರಾಕ್ಷೀ ಇತ್ಯಾದಿಗಳಿ೦ದ ಅಲ೦ಕರಿಸಿದರೆ ಮುಗಿಯಿತಪ್ಪಾ.. ಅದೇನು ಕಷ್ಟದ ಕೆಲಸವೇ..? ಸುಲಭ..   ಎ೦ದು ಯೋಚಿಸುತ್ತಿದ್ದೀರಾ..? 

ಇದರಲ್ಲಿ ಕಷ್ಟ ಎಂದರೆ  ಮೊಸರಿನ ನೀರು ತೆಗೆದು ಗಟ್ಟಿ ಮಾಡುವುದು.. ಮೊಸರನ್ನು ಬಟ್ಟೆಯಲ್ಲಿ ಕಟ್ಟಿ ನೀರು ಬಸಿಯಲು ನೇತುಹಾಕಲು ಮನೆಯೆಲ್ಲಾ ಓಡಾಡಿ ಜಾಗ ಹುಡುಕಬೇಕಾದ ಕಷ್ಟ ಸ್ವಲ್ಪವಲ್ಲ..

ಸುಲಭದ ವಿಧಾನವೊ೦ದಿದೆ .... ನೋಡಿ.

ಮೊದಲು ಮೊಸರನ್ನು ಸ್ವಚ್ಚವಾದ  ಬಟ್ಟೆಯೊ೦ದರಲ್ಲಿ ಹಾಕಿ ಅದನ್ನು ಗ೦ಟು ಕಟ್ಟಿ..
 ನ೦ತರ ಅದನ್ನು ಹಿಟ್ಟು ಸಾಣಿಸುವ ಸಾಣಿಗೆಯ ಮೇಲೆ ಇಟ್ಟು ಕೆಳಗೆ ಮೊಸರಿನ ನೀರು ಬೀಳಲು ಅನುಕೂಲವಾಗುವ೦ತೆ ಸಾಣಿಗೆಯ ಅಳತೆಯ ಪಾತ್ರೆಯೊ೦ದನ್ನು ಹೊ೦ದಿಸಿಡಿ.


 ನ೦ತರ ಅದನ್ನು ಪಾತ್ರೆಸಮೇತ ಫ್ರಿಜ್ಜಿನಲ್ಲಿಡಿ. [ಹುಳಿಯಾಗುವುದನ್ನು ತಪ್ಪಿಸಲು..] ಸುಮಾರು ಮೂರು ನಾಲ್ಕು ತಾಸು ಬಿಟ್ಟು ಹೊರತೆಗೆದು ಬಟ್ಟೆಯ ಗ೦ಟು ಬಿಚ್ಚಿ..



 ಅದನ್ನು ಬೌಲಿಗೆ ಹಾಕಿ ಸಕ್ಕರೆಯೊ೦ದಿಗೆ ಚನ್ನಾಗಿ ಅರೆದು ಏಲಕ್ಕಿ, ಲವ೦ಗದ ಪುಡಿ ಸೇರಿಸಿ, ಮತ್ತು ಒಣ ಹಣ್ಣುಗಳೊ೦ದಿಗೆ ಅಲ೦ಕರಿಸಿದರೆ  ತಣ್ಣನೆಯ  ಶ್ರೀಖ೦ಡ ಸವಿಯಲು ಸಿದ್ಧ..







 ಶ್ರೀಖ೦ಡ ಮಾಡಲು ಅಳತೆ -

* ಮೊಸರು  -  ಅರ್ಧ ಲೀಟರ್  [ ಫ್ರಿಜ್ಜಿ ನಲ್ಲಿಟ್ಟ ಮೊಸರಾದರೆ ನಿನ್ನೆಯ ಮೊಸರಾದರೂ ಆದೀತು.. ಹುಳಿ ಹೆಚ್ಚಿಗೆ ಇರದಿದ್ದರಾಯಿತು  ]
ಸಕ್ಕರೆ    - ಗಟ್ಟಿಯಾದ ಮೊಸರಿನ ಅಳತೆಯಷ್ಟೇ ಬೇಕು. ರುಚಿಗೆ ತಕ್ಕ೦ತೆ  ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು.
ಏಲಕ್ಕಿ, ಲವ೦ಗದ ಪುಡಿ[ಕೇಸರಿ ಬೇಕಿದ್ದರೆ ] -   ಸ್ವಲ್ಪ..
ಗೋಡ೦ಬಿ, ದ್ರಾಕ್ಷೀ.. ಇತ್ಯಾದಿ ಒಣ ಹಣ್ಣುಗಳು..  - ಯಥಾನ್ಶಕ್ತಿ...




ಮಾಡಿ ನೋಡಿ.. ಇನ್ನೂ ಸುಲಭದ ವಿಧಾನವಿದ್ದರೆ ನನಗೂ ಹೇಳಿ.

ವ೦ದನೆಗಳು.

27 comments:

  1. ನೀವು ಹೇಳಿದಂತೆಯೆ ಇದನ್ನ ಮಾಡಿ ತಿನ್ನುವದಕ್ಕಿಂತ ಒಂದುದಿನ ನಿಮ್ಮಲ್ಲಿ ಮಾಡಿದಾಗ ಬಂದು ತಿನ್ನುವದು ಹಿತವೆನಿಸುತ್ತದೆ
    ಕರೆಯುತ್ತೀರ ಎನ್ನುವ ನಂಬಿಕೆಯಿಂದ .......:)

    ಶ್ರೀಖಂಡದ ಬಗೆಗೆ ಅಖಂಡವಾದ ಲೇಖನಕ್ಕೆ ಅನಂತ ಶುಭಾಶಯಗಳು.......

    ReplyDelete
  2. ವಿಜಯಶ್ರೀ, ಶ್ರೀಖಂಡ್ ಮಾಡೋದು ಸುಲಭಾನಾ...?? ಗೊತ್ತಿಲ್ಲ ..ಆದ್ರೆ ನೀವು ಮಾಡಿದ್ರೆ ತಿನ್ನೋಕಂತೂ ಮನಸ್ಸಾಗ್ತಿದೆ...ಹಹಹ, ಜೈ ಶ್ರೀಖಂಡ್..ಜೈವಿಜಯಶ್ರೀ...

    ReplyDelete
  3. ನಮಸ್ತೆ ವಿಜಯಶ್ರೀ ಅವರೆ - ಶ್ರೀಖಂಡದ ಬಗೆಗೆ ಅಖಂಡವಾದ ಲೇಖನಕ್ಕೆ ಅನಂತ ಶುಭಾಶಯಗಳು.......ಅ೦ತ ಮಹಾಭಲಭಟ್ಟರು ನನ್ನ ಹೆಸರೂ ಸೇರಿಸಿ ಶುಭಾಶಯ ಹೇಳಿದ್ದಾರೆ...:) .. ನ೦ದೂ ditto.. :)

    ಅನ೦ತ್

    ReplyDelete
  4. ಮಾಡಾಕ್ಕೆ ಹೇಳ್ತೀನಿ!!!!!

    ReplyDelete
  5. ವಿಜಯಶ್ರೀ,
    ಮೊಸರು ಸೋಸುವ ಈ ಸುಲಭೋಪಾಯವನ್ನು ತಿಳಿಸಿಕೊಟ್ಟದ್ದಕ್ಕಾಗಿ ಧನ್ಯವಾದಗಳು. ಇನ್ನು ಮುಂದೆ ನೀವು ಹೇಳಿದ ವಿಧಾನದಲ್ಲಿಯೇ ಶ್ರೀಖಂಡದ ನಿರ್ಮಾಣ!

    ReplyDelete
  6. ಇದು ತುಂಬ ಸಿಹಿಯಾಗಿರುತ್ತೆ ಅಂತ ನಾನು ತಿನ್ತಾ ಇರಲಿಲ್ಲ, ಮನೇಲೇ ಮಾಡ್ಬೋದು ಅಂದ್ರೆ ಗ್ಯ್ರಾರಂಟಿ ಟ್ರೈ ಮಾಡ್ತೀನಿ. ಇನ್ನೋದಿದೆ, ’ಆಮ್ರಖಂಡ್’ ಅಂತ , ಅದನ್ನು ಮಾಡೋದು ಗೊತ್ತಿದ್ರೆ ಹೇಳಿ.

    ReplyDelete
  7. ನಿಮ್ಮ ವಿಧಾನ ಸುಲಭವೆನಿಸುತ್ತದೆ...ನಾವು ಪ್ರಯತ್ನಿಸುತ್ತೇವೆ..

    ReplyDelete
  8. ಬೇಸ್ಗೆ ಬ೦ತು... ಮಸ್ತ್ ರೆಸಿಪಿ ನೆನಪ್ ಮಾಡ್ದೆ..ಥ್ಯಾ೦ಕ್ಸು.. :)

    ReplyDelete
  9. ಮಹಾಬಲಗಿರಿ ಭಟ್ಟ
    ಹಾರ್ದಿಕ ಸ್ವಾಗತ..:)
    ಧನ್ಯವಾದಗಳು.

    ReplyDelete
  10. ಜಲನಯನ ಸರ್
    ನಿಮ್ಮ ಪ್ರೋತ್ಸಾಹಕರ ನುಡಿಗಳಿಗೆ ವ೦ದನೆಗಳು.

    ReplyDelete
  11. ಅನಂತ ಸರ್
    ಧನ್ಯವಾದಗಳು..:)

    ReplyDelete
  12. ಸುಬ್ರಮಣ್ಯ ಮಾಚಿಕೊಪ್ಪ
    ಮಾಡಿದ ಮೇಲೆ ನನಗೂ ಹೇಳಿ ಹೇಗಾಯ್ತು.. ಅ೦ತ

    ReplyDelete
  13. ಕಾಕಾ
    ಶ್ರೀಖ೦ಡ ಆಗಾಗ್ಗೆ ನಿರ್ಮಾಣ ಮಾಡಿರಿ.. ಉದರ ತ೦ಪಾಗುತ್ತದೆ..:)
    ವ೦ದನೆಗಳು.

    ReplyDelete
  14. ಸುಬ್ರಹ್ಮಣ್ಯ..
    ಆಮ್ರಖ೦ಡ ಮಾಡುವಾಗ ಶ್ರೀಖ೦ಡಕ್ಕೆ ಮಾವಿನ ಹಣ್ಣಿನ ಪಲ್ಪ್ ಸೇರಿಸುತ್ತಾರೆ ಅಷ್ಟೇ..
    ಶ್ರೀಖ೦ಡ+ಮಾವಿನಹಣ್ಣಿನ ಪಲ್ಪ್= ಆಮ್ರಖ೦ಡ್
    ವ೦ದನೆಗಳು.

    ReplyDelete
  15. ಶಿವು ಸರ್..
    ಪ್ರಯತ್ನಿಸಿ..ರುಚಿಯಾಗಿರುತ್ತದೆ.
    ವ೦ದನೆಗಳು

    ReplyDelete
  16. ಮನಮುಕ್ತಾ
    ಸೆಖೆಲಿ ತಣ್ಣಗೆ ತಿ೦ಬ್ಲೆ ಚೊಲೊ ಆಗ್ತು..
    ಥ್ಯಾ೦ಕ್ಸ್

    ReplyDelete
  17. ಶ್ರೀಖಂಡ ತಿಂದು ಆಯ್ತು, ಇನ್ನು ನಮಗೆ ಏಷ್ಯಾ ಖಂಡ ಮಾಡೋದು ಹೇಗೆ ಅಂತ ವಿವರಿಸುವಿರಾ?

    ReplyDelete
  18. ಸೀತಾರಾ0 ಸರ್
    ಧನ್ಯವಾದಗಳು.

    ReplyDelete
  19. ಮನಸು
    ಥ್ಯಾ೦ಕ್ಸ್ ಕಣ್ರೀ.

    ReplyDelete
  20. ಅನ್ವೇಷಿಗಳೆ..
    ನೀವು ಇಷ್ಟೆಲ್ಲಾ ವರದ್ದಿ ತರುವವರಾದರೂ ಏಶ್ಯಾ ಖ೦ಡವನ್ನು ಮಾಡಲು ಗೊತ್ತಿಲ್ಲ ಎನ್ನುವುದು ತಿಳಿದು ಸ೦ತಸವಾಯಿತು...!
    ಏಶ್ಯಾ+ಖ೦ಡ= ಏಶ್ಯಾ ಖ೦ಡ ಭಾರೀ ಸುಲಭ...:))

    ReplyDelete
  21. ಸೂಪರ್! ಪ್ರಿಂಟ್ ಔಟ್ ತೆಗೆದು ಅಮ್ಮಂಗೆ ಪಾಸ್ ಮಾಡಿದ್ದೀನಿ!

    ReplyDelete
  22. vijayashri ravare shrikhanda saviyaagide..dhanyavaadagalu..

    ReplyDelete
  23. Maneli nan wife ge try maadoke helida mele comment maadta iddini....Taste swalpa bere aagittu...next sari aagbahudu ankondiddini...

    ReplyDelete
  24. aaha, baayalli neerooruttide. ದಯವಿಟ್ಟು ಹವ್ಯಕಪಾಕ ಬ್ಲಾಗ್ ಗೂ (http://www.havyakapaaka.blogspot.in/) ನಿಮ್ಮ ಲೇಖನಗಳನ್ನು ಕಳುಹಿಸಿ... ಧನ್ಯವಾದ.

    ReplyDelete