ಹೈದರಾಬಾದಿನಲ್ಲಿ ನೋಡಿದ ಸ್ಥಳಗಳಲ್ಲಿ ನನ್ನನ್ನು ಸೆಳೆದದ್ದು ಈ ಕೋಟೆ.
ಕೋಟೆ ಕೊತ್ತಲಗಳನ್ನು ನೋಡಲು ಅದೇಕೋ ತುಂಬಾ ಇಷ್ಟ. ಆಗಿನ ಕಾಲದ ಜನ ಜೀವನ ಹೇಗಿರಬಹುದು ? ಅವರೇನು ಮಾಡುತ್ತಿದ್ದರು? ಅಲ್ಲಿಯ ವಾಸ್ತು ಶಿಲ್ಪದ ವಿಶೇಷತೆ ಇವೆಲ್ಲ ಮನಸ್ಸನ್ನು ಕಾಡಲು ಶುರುಮಾಡಿಬಿಡುತ್ತವೆ.
ಬಾಲಹಿಸಾರಿನ ದ್ವಾರದ ಒಳಭಾಗದಲ್ಲಿ ಚಾವಣಿಯನ್ನು ಗಮನಿಸಿ. ಇದರ ಕೆಳಗೆ ಚಪ್ಪಾಳೆ ತಟ್ಟಿದರೆ ಅದು ಕೋಟೆಯ ಮೇಲ್ಭಾಗದಲ್ಲಿ ಕೇಳಲ್ಪಡುತ್ತಿತ್ತಂತೆ. ದ್ವಾರಪಾಲಕರು ಚಪ್ಪಾಳೆ ತಟ್ಟುವುದರ ಮೂಲಕ ಒಳಪ್ರವೇಶಿಸಿದವರು ಮಿತ್ರರೊ? ಶತ್ರುಗಳೋ ಎಂಬ ಸೂಚನೆಯನ್ನು ರಾಜನಿಗೆ ರವಾನಿಸುತ್ತಿದ್ದರಂತೆ.
ದರ್ಬಾರ್ ಹಾಲ್ ನ ನೋಟ ದೂರದಿಂದ..!
ಈ ಕಲ್ಲು ನೋಡಿ, ಎರಡು ಕ್ವಿಂಟಾಲ್ ಇದೆಯಂತೆ. ಇದನ್ನು ಎತ್ತಿದವರಿಗೆ ಕುತುಬಶಾಹಿ ರಾಜರ ಸೈನ್ಯದಲ್ಲಿ ಕೆಲಸ ಗ್ಯಾರಂಟಿ.ತಲೆಗಿಂತ ತಾಕತ್ತಿಗೆ ಬೆಲೆ...! ಇದನ್ನು ಯಾರೂ ಕದ್ದುಕೊಂಡು ಹೋಗಿಲ್ಲ ನೋಡಿ..!!
ಕೋಟೆಯ ಒಳ ಬರುವವರನ್ನು , ಹೋಗುವವರನ್ನು ಪರೀಕ್ಷಿಸುವ ಚೆಕಿಂಗ್ ಏರಿಯ ..
ತಾರಾಮತಿ ಪ್ಯಾಲೇಸ್. ರಾಣಿಯ ನೆಂಟರಿಷ್ಟರು ಉಳಿದುಕೊಳ್ಳಲು ಇಲ್ಲಿ ವ್ಯವಸ್ಥೆಯಂತೆ. ಇಲ್ಲಿ ಗೋಡೆಗಳಿಗೂ ಕಿವಿಗಳಿವೆ ಮಾರಾಯ್ರೇ.! ಕೋಣೆಯ ಒಂದು ಮೂಲೆಯಲ್ಲಿ ಮಾತನಾಡಿದರೆ ಇನ್ನೊಂದು ಮೂಲೆಗೆ, ಮಧ್ಯದಲ್ಲಿ ಮಾತಾಡಿದರೆ ಮೇಲಿನ ಕೋಣೆಗೆ, ಹೀಗೆ ಯಾರು ಏನು ಪಿಸುಗುಟ್ಟಿದರೂ ಕೇಳಿಸುತ್ತದೆ. ನಾವು ಸುಮಾರು ಟ್ರಯಲ್ ಮಾಡಿದೆವು..! ಏನೇ ಮಸಲತ್ತು ಮಾಡಿದರೂ ಗೊತ್ತಾಗುವ ಹಾಗೆ ವ್ಯವಸ್ಥೆ ..! ಇಲ್ಲಿ ಯಾವ ಗುಟ್ಟು ಮಾಡಿದರೂ ಅದು ರಟ್ಟು ...
ಕೋಟೆಯ ತುದಿಯಲ್ಲಿರುವ ಅರಮನೆಯ ಮೇಲೆ ಚಾರ್ಮಿನಾರಿನ ಪ್ರತಿರೂಪ. ಇದಕ್ಕೆ ನೇರವಾಗಿ ಎಂಟು ಕಿ.ಮೀ. ದೂರದಲ್ಲಿ ಚಾರ್ ಮಿನಾರ್ ಇದೆ.( ಚಾರ್ಮಿನಾರ್ ನೋಡಲು ಸುಂದರವಾಗಿದೆ. ಅಲ್ಲಿ ಹೋದಾಗ ಅದರ ಸೌಂದರ್ಯವನ್ನು ಮಾತ್ರ ನೋಡಬೇಕು.. ! ಕಾಲು ಬುಡ ನೋಡಬಾರದು.. ಅಲ್ಲಿಯ ಸುತ್ತಲಿನ ಸ್ಥಳ ನನಗೆ ರಾಜರ ಪೀಕದಾನಿಯನ್ನು ನೆನಪಿಸಿತು. ಅದು ಹೈದರಾಬಾದಿನ ಪೀಕದಾನಿ ...!!)
ಕೋಟೆ ಹತ್ತಲು ಮೆಟ್ಟಿಲುಗಳು..
ಕರ್ಟನ್ ವಾಲ್ .. ಸೈನಿಕರು ಯುದ್ಧದ ಸಮಯದಲ್ಲಿ ಶತ್ರುಗಳ ಚಲನವಲನವನ್ನು ಇದರ ಮರೆಯಿಂದ ಗಮನಿಸುತ್ತಿದ್ದರಂತೆ..
ಬಾಲಹಿಸಾರಿನ ಮೆಟ್ಟಿಲು ಹತ್ತಿ ದರ್ಬಾರ್ ಹಾಲ್ ನೋಡಲು ಹೋಗಬೇಕಿದೆ.. ಆಗ ನಾನು..!!!!
ಕೋಟೆಯ ಮೇಲಿನಿಂದ ಕೆಳಗೆ ನೋಡಿದರೆ ಹಾಳಾದ ವಾಸ್ತುಶಿಲ್ಪಗಳು, ಅರಮನೆಗಳು ಒಂದೇ ದೃಷ್ಟಿಗೆ ನಿಲುಕುತ್ತವೆ.
ಕೋಟೆ ಕೊತ್ತಲಗಳನ್ನು ನೋಡಲು ಅದೇಕೋ ತುಂಬಾ ಇಷ್ಟ. ಆಗಿನ ಕಾಲದ ಜನ ಜೀವನ ಹೇಗಿರಬಹುದು ? ಅವರೇನು ಮಾಡುತ್ತಿದ್ದರು? ಅಲ್ಲಿಯ ವಾಸ್ತು ಶಿಲ್ಪದ ವಿಶೇಷತೆ ಇವೆಲ್ಲ ಮನಸ್ಸನ್ನು ಕಾಡಲು ಶುರುಮಾಡಿಬಿಡುತ್ತವೆ.
ಇಲ್ಲಿಂದ ಕೋಟೆ ಹತ್ತಲು ಶುರು...
ಬಾಲ ಹಿಸಾರ್ ದ್ವಾರ ..
ಬಾಲಹಿಸಾರಿನ ದ್ವಾರದ ಒಳಭಾಗದಲ್ಲಿ ಚಾವಣಿಯನ್ನು ಗಮನಿಸಿ. ಇದರ ಕೆಳಗೆ ಚಪ್ಪಾಳೆ ತಟ್ಟಿದರೆ ಅದು ಕೋಟೆಯ ಮೇಲ್ಭಾಗದಲ್ಲಿ ಕೇಳಲ್ಪಡುತ್ತಿತ್ತಂತೆ. ದ್ವಾರಪಾಲಕರು ಚಪ್ಪಾಳೆ ತಟ್ಟುವುದರ ಮೂಲಕ ಒಳಪ್ರವೇಶಿಸಿದವರು ಮಿತ್ರರೊ? ಶತ್ರುಗಳೋ ಎಂಬ ಸೂಚನೆಯನ್ನು ರಾಜನಿಗೆ ರವಾನಿಸುತ್ತಿದ್ದರಂತೆ.
ದರ್ಬಾರ್ ಹಾಲ್ ನ ನೋಟ ದೂರದಿಂದ..!
ಈ ಕಲ್ಲು ನೋಡಿ, ಎರಡು ಕ್ವಿಂಟಾಲ್ ಇದೆಯಂತೆ. ಇದನ್ನು ಎತ್ತಿದವರಿಗೆ ಕುತುಬಶಾಹಿ ರಾಜರ ಸೈನ್ಯದಲ್ಲಿ ಕೆಲಸ ಗ್ಯಾರಂಟಿ.ತಲೆಗಿಂತ ತಾಕತ್ತಿಗೆ ಬೆಲೆ...! ಇದನ್ನು ಯಾರೂ ಕದ್ದುಕೊಂಡು ಹೋಗಿಲ್ಲ ನೋಡಿ..!!
ಕೋಟೆಯ ಒಳ ಬರುವವರನ್ನು , ಹೋಗುವವರನ್ನು ಪರೀಕ್ಷಿಸುವ ಚೆಕಿಂಗ್ ಏರಿಯ ..
ನಟರಾಜ್...
ತಾರಾಮತಿ ಪ್ಯಾಲೇಸ್. ರಾಣಿಯ ನೆಂಟರಿಷ್ಟರು ಉಳಿದುಕೊಳ್ಳಲು ಇಲ್ಲಿ ವ್ಯವಸ್ಥೆಯಂತೆ. ಇಲ್ಲಿ ಗೋಡೆಗಳಿಗೂ ಕಿವಿಗಳಿವೆ ಮಾರಾಯ್ರೇ.! ಕೋಣೆಯ ಒಂದು ಮೂಲೆಯಲ್ಲಿ ಮಾತನಾಡಿದರೆ ಇನ್ನೊಂದು ಮೂಲೆಗೆ, ಮಧ್ಯದಲ್ಲಿ ಮಾತಾಡಿದರೆ ಮೇಲಿನ ಕೋಣೆಗೆ, ಹೀಗೆ ಯಾರು ಏನು ಪಿಸುಗುಟ್ಟಿದರೂ ಕೇಳಿಸುತ್ತದೆ. ನಾವು ಸುಮಾರು ಟ್ರಯಲ್ ಮಾಡಿದೆವು..! ಏನೇ ಮಸಲತ್ತು ಮಾಡಿದರೂ ಗೊತ್ತಾಗುವ ಹಾಗೆ ವ್ಯವಸ್ಥೆ ..! ಇಲ್ಲಿ ಯಾವ ಗುಟ್ಟು ಮಾಡಿದರೂ ಅದು ರಟ್ಟು ...
ಕೋಟೆಯ ತುದಿಯಲ್ಲಿರುವ ಅರಮನೆಯ ಮೇಲೆ ಚಾರ್ಮಿನಾರಿನ ಪ್ರತಿರೂಪ. ಇದಕ್ಕೆ ನೇರವಾಗಿ ಎಂಟು ಕಿ.ಮೀ. ದೂರದಲ್ಲಿ ಚಾರ್ ಮಿನಾರ್ ಇದೆ.( ಚಾರ್ಮಿನಾರ್ ನೋಡಲು ಸುಂದರವಾಗಿದೆ. ಅಲ್ಲಿ ಹೋದಾಗ ಅದರ ಸೌಂದರ್ಯವನ್ನು ಮಾತ್ರ ನೋಡಬೇಕು.. ! ಕಾಲು ಬುಡ ನೋಡಬಾರದು.. ಅಲ್ಲಿಯ ಸುತ್ತಲಿನ ಸ್ಥಳ ನನಗೆ ರಾಜರ ಪೀಕದಾನಿಯನ್ನು ನೆನಪಿಸಿತು. ಅದು ಹೈದರಾಬಾದಿನ ಪೀಕದಾನಿ ...!!)
ಕೋಟೆ ಹತ್ತಲು ಮೆಟ್ಟಿಲುಗಳು..
ಕರ್ಟನ್ ವಾಲ್ .. ಸೈನಿಕರು ಯುದ್ಧದ ಸಮಯದಲ್ಲಿ ಶತ್ರುಗಳ ಚಲನವಲನವನ್ನು ಇದರ ಮರೆಯಿಂದ ಗಮನಿಸುತ್ತಿದ್ದರಂತೆ..
ಬಾಲಹಿಸಾರಿನ ಮೆಟ್ಟಿಲು ಹತ್ತಿ ದರ್ಬಾರ್ ಹಾಲ್ ನೋಡಲು ಹೋಗಬೇಕಿದೆ.. ಆಗ ನಾನು..!!!!
ಕೋಟೆಯ ಮೇಲಿನಿಂದ ಕೆಳಗೆ ನೋಡಿದರೆ ಹಾಳಾದ ವಾಸ್ತುಶಿಲ್ಪಗಳು, ಅರಮನೆಗಳು ಒಂದೇ ದೃಷ್ಟಿಗೆ ನಿಲುಕುತ್ತವೆ.
ಕೋಟೆಯ ಮೇಲಿನಿಂದ ಕೆಳಗೆ ನೋಡಿದಾಗ ...:(
ನೀರು ಸಂಗ್ರಹಕ್ಕೆ..
ಆಗಲೇ ಅವರು ಮಳೆ ಕೊಯ್ಲು ಮಾಡುತ್ತಿದ್ದರಂತೆ. ಯುದ್ಧದ ಸಮಯದಲ್ಲಿ ನೀರಿನ ಅಭಾವವಾಗದಿರಲು ನೀರು ಶೇಖರಣೆ ಮಾಡುತ್ತಿದ್ದರಂತೆ.
ವಾತಾಯನ ವ್ಯವಸ್ಥೆಗೆ ..ಕಿಂಡಿ.
ಇದು ಏರ್ ಕಂಡಿಶನ್ ವ್ಯವಸ್ಥೆ, ಗೋಡೆಯಲ್ಲಿ ಹುದುಗಿಸಿದ ಮಣ್ಣಿನ ಪೈಪುಗಳ ಮೂಲಕ ನೀರು ಸಂಚಲನೆ.
ಆಗಿನ ಕಾಲದ ರಾಜರ ವೈಭವಗಳನ್ನು ಆಯಾ ಸ್ಥಳಗಳಲ್ಲಿಯೇ ಕಲ್ಪಿಸಿಕೊಳ್ಳಲು ಒಂತರಾ ಮಜಾ.ಅವರದ್ದೇನು ವೈಭೋಗ, ಆರ್ಭಟ ! ಆದರೂ ಈಗಿನಂತೆ ವಿಮಾನು, ಇಂಟರ್ನೆಟ್ಟು, ಮೆಟ್ರೋ ಟ್ರೇನು ಇದೆಲ್ಲ ಇರಲಿಲ್ಲ ಬಿಡಿ. ಸಾಮಾನ್ಯ ಜನರಾದರೂ ನಾವೇ ಬೆಟರ್ರು.. :)
ವಿಜಯಶ್ರೀ ನಿಮ್ಮ ಫೋಟೋಗಳು, ವಿವರಣೆ ಇತ್ಯಾದಿ ನನ್ನನ್ನು ೧೯೮೭ ಆಗಸ್ಟ್ ತಿಂಗಳಿಗೆ ಕೊಂಡೋಯ್ದವು.. ಆಗ ನಾವು ನಮ್ಮ ಭಾರತೀಯ ಕೃಷಿ ವಿಜ್ಞಾನಿ ಚಯನ ಸಮಿತಿಯಿಂದ ಆಯ್ಕೆಯಾಗಿ ಹೈದರಾಬಾದಿನಲ್ಲಿ ಐದು ತಿಂಗಳ ಕೃಷಿ ಸಂಶೋಧನಾ ಅಕ್ಯಾಡಮಿಯಲ್ಲಿ ಟ್ರೈನಿಂಗ್ ಪಡೆಯುತ್ತಿದ್ದ ದಿನಗಳು... ಪ್ರತಿ ಭಾನುವಾರ ಇಲ್ಲೆಲ್ಲಾ ಸುತ್ತಾಡುತ್ತಿದ್ದೆವು..
ReplyDeleteಧನ್ಯವಾದ ..ರಿಫ್ರೆಶ್ ಮಾಡಿದ್ದಕ್ಕೆ
ಧನ್ಯವಾದಗಳು.. ಆಜಾದ್ ಸರ್..
Deleteತುಂಬಾ ಚೆನ್ನಾಗಿ ವಿವರಿಸಿದ್ದೀರಿ... ಈ ಸ್ಥಳವನ್ನು ನಾವೂ ನೋಡಬೇಕು ಎಂದೆನಿಸಿದೆ... ಹಾಗೆ ಚಿತ್ರಗಳು ಮಸ್ತ್ ಇದಾವೆ.. ನೀವು ತುಂಬಾ ಚೆನ್ನಾಗಿ ಕಾಣ್ತೀರಿ... ಹಾಗೆ ನಮ್ಮ ಐಶು ಮಸ್ತ ಇದಾಳೆ.. ಹಹ
ReplyDeleteTHANKS..:) SUGUNA..
Deleteಗೋಲ್ಕೊಂಡ ನನ್ನ ಮೆಚ್ಚಿನ ಸ್ಥಳವು ಹೌದು.
ReplyDeleteಚೆಂದದ ವಿವರಣೆ
ವಿಜಯಶ್ರೀ,
ReplyDeleteಹೈದರಾಬಾದಿಗೆ ಹೋಗುವ ಅವಕಾಶ ದೊರೆತಾಗ ,ಈ ಅದ್ಭುತ ಕೋಟೆಯನ್ನು ನಾವೂ ನೋಡಿದ್ದಿವಿ.ಉತ್ತಮ ಮಾಹಿತಿಯನ್ನು ಹಾಗು ಫೋಟೋಗಳನ್ನು ಕೊಟ್ಟಿರುವಿರಿ.
ನಾವು ಕಳೆದ ವರ್ಷ ಹೋಗಿದ್ವಿ..ಆದ್ರೆ ಬೇರೆಲ್ಲ ಕಡೆ ಸುತ್ತಿ ಅಲ್ಲಿ ಹೋದಾಗ ಸ್ವಲ್ಪ ಕತ್ತಲಾಗಿತ್ತು, ಹಾಗಾಗಿ ಕೋಟೆ ಹತ್ತಲು ಸಾಧ್ಯವಾಗಿರಲಿಲ್ಲ..ರಾತ್ರಿಯ light n sound show ನೋಡಿದ್ದೆವು, ಚೆನ್ನಾಗಿತ್ತು..ನಮಿಗೆ ಕೂಡ golkonda fort ತುಂಬಾ ಇಷ್ಟವಾಗಿತ್ತು..ಒಳ್ಳೆಯ ವಿವರಣೆ :)
ReplyDeleteಪ್ರತಿಕ್ರಿಯಿಸಿದ
ReplyDeleteಆಜಾದ್ ಸರ್,
ಮನಸು,
ಸೀತಾರಾ೦ ಸರ್,
ಕಾಕ
ಮತ್ತು ವನಿತಾ
ಇಷ್ಟ ಪಟ್ಟಿದ್ದಕ್ಕೆ, ಅನುಭವ ಹ೦ಚಿಕೊ೦ಡಿದ್ದಕ್ಕೆ ತು೦ಬಾ ಧನ್ಯವಾದಗಳು.
free aagi golkonda torisiddakke tanks akka :)
ReplyDeleteಎರಡು ವರ್ಷದ ಹಿಂದೆ ಹೋಗಿದ್ದೆ.....ಒಮ್ಮೆ ನೋಡಲೇಬೇಕಾದ ಸ್ಥಳ.....ನಿಮ್ಮ ಬರಹ ನನ್ನನ್ನು ಪುನಹ ಅಲ್ಲಿಗೆ ಕೊಂಡೊಯ್ಯಿತು...ಉತ್ತಮ ಮಾಹಿತಿಯನ್ನು ಕೊಟ್ಟಿದ್ದೀರಿ...ಧನ್ಯವಾದಗಳು...
ReplyDeletegood photos and writeup. plz visit my blog usdesai.blogspot.com
ReplyDeleteUnlike Chitradurga fort this seems well maintained. Nice post.
ReplyDeleteಹೈದರಾಬಾದಿನ ಚಿತ್ರಗಳೊಂದಿಗೆ ವಿವರಣೆ ಇಷ್ಟವಾಯಿತು. ಹೀಗೆ ನಾವು ನೋಡದ ಊರಿನ ವಿವರಣೆ ಸಿಕ್ಕರೆ
ReplyDeleteಮುಂದಿನ ಪ್ರವಾಸ ಆಯೋಜಿಸಲು ಸುಲಭ.
ಹೌದು "ಸಾಮಾನ್ಯ ಜನರಾದರೂ ನಾವೇ ಬೆಟರ್ರು" ರಾಜರಿಗೆ ಕೋಟೆ ಕಟ್ಟಿ ಕೊಡಲು ಅದೆಷ್ಟು ಜನ ಪ್ರಾಣ ತೆತ್ತಿದ್ದಾರೋ?
ರಾಜರ ಕೋಟೆ ಮಾತ್ರ ಚೆನ್ನಾಗಿತ್ತು... ಸಾಮಾನ್ಯ ಜನರ ಮನೆ ಈ ರೀತಿ ಇದ್ದ ಒಂದು ಉದಾಹರಣೆಯೂ ಇಲ್ಲ:-)
nice photos and article. :)
ReplyDeleteಹೈದರಾಬಾದಿಗೆ ಹೋಗಲೇಬೇಕಾದ ಸ್ಥಿತಿಗ್ರ್ ತಂದಿಟ್ಟುಬಿಟ್ಟಿರಿ !. ಚಿತ್ರಗಳು, ವಿವರಣೆ ಕೂತೂಹಲಕಾರಿಯಾಗಿತ್ತು.
ReplyDeleteಚನ್ನಾಗಿದೆ. ನಾವೇ ಹೋಗಿ ನೋಡಿಬಂದಂತಾಯ್ತು.
ReplyDeleteಛೆ ಮೊನ್ನೆ ಆಪೀಸಿನ ಕೆಲಸದ ಮೇಲೆ ಹೈದರಾಬಾದ್ ಗೆ ಹೋದಾಗ ಅಲ್ಲಿಗೆ ಹೋಗಿ ಎಂದರೂ ಹೋಗಲಾಗಲಿಲ್ಲ ...ಇನ್ನೊಮ್ಮೆ ಖಂಡಿತ ಹೋಗುತ್ತೇನೆ ...ಚೆನ್ನಾಗಿದೆ
ReplyDeleteಸುಂದರ ಚಿತ್ರ ವಿವರಣೆ. ಚಿತ್ರವಳೆಲ್ಲ ತುಂಬಾ ಚೆನ್ನಾಗಿ ಬಂದಿವೆ.
ReplyDeleteಶಿವಪ್ರಕಾಶ್,
ReplyDeleteಅಶೋಕ್ ಕೊಡ್ಲಾಡಿ,
ದೇಸಾಯಿ ಸರ್,
ಶಿವರಾ೦,
ಮನಮುಕ್ತಾ,
ಸುಬ್ರಹ್ಮಣ್ಯ,
ಸುಬ್ರಹ್ಮಣ್ಯಮಾಚೀಕೊಪ್ಪ,
ಚೇತನಾ
ನಿಮ್ಮೆಲ್ಲರ ಅಮೂಲ್ಯ ಪ್ರತಿಕ್ರಿಯೆಗೆ ವ೦ದನೆಗಳು.
A=|)o ಮತ್ತು ನನ್ನೊಳಗಿನ ಕನಸು...
ಚಿತ್ತಾರದರಮನೆಗೆ ಸ್ವಾಗತ ಮತ್ತು ವ೦ದನೆಗಳು.
ಚುಕ್ಕಿಚಿತ್ತಾರ ಮೇಡಮ್
ReplyDeleteಗೋಲ್ಕೋಂಡ ಕೋಟೆ ತುಂಬಾ ಚನ್ನಾಗಿದೆ.
ಗೋಲ್ಕೋಂಡ ಕೋಟೆಗೆ ಹೋಗುವವರಿಗೆ ಒಂದು ಸಲಹೆ. ಅರ್ಧದಿನದ ಬಿಡುವು ಮಾಡಿಕೊಂಡು ಗೈಡ್ ನೆರವನ್ನು ಪದೆದು ಕೋಟೆ. ಸಂಜೆ ವೇಳೆ ಲೈಟ್ ಶೋ ತಪ್ಪದೇ ನೋಡಿಬರಬೇಕು.
ದನ್ಯವಾದಗಳು.
ಉತ್ತಮ ಮಾಹಿತಿ ಚಿತ್ರಣ ಮತ್ತು ಚಿತ್ರಗಳು. ಧನ್ಯವಾದಗಳು ಮೇಡ೦.
ReplyDeleteಅನ೦ತ್
ಅಲ್ಲಿಗೆ ಹೋಗಿ ನೋಡ್ಕಂಡ್ ಬಂದಷ್ಟೇ ಖುಶಿ ಆತು
ReplyDeleteGolkonda ista aytu... tumba chendada vivarane hagu photos... "samanya janaradru naave better.." ha ha ha nija nija...
ReplyDelete