Wednesday, March 14, 2012

ಒ೦ದು ಬಸ್ಸಿನ ಪ್ರಯಾಣ..!

ಕ.ರಾ.ರ. ಸಾ.ಸಂ ಬಸ್ಸು ನಾವಿದ್ದ ಸ್ಟಾಪಿಗೆ  ಬ೦ದು ನಿಲ್ಲುತ್ತಿದ್ದ೦ತೆ ಟಿಕೆಟ್ ತೋರಿಸಿ ಲಗುಬಗೆಯಿ೦ದ ಹತ್ತಿದೆವು. ಒಂದು ದಿನದ ಮಟ್ಟಿಗೆ ನಮಗೆ ಊರಿಗೆ ಹೋಗುವುದಿತ್ತು. ದಿವಂಗತ ಮಾವ ನಮ್ಮನ್ನು ಹರಸಿ ಹೋಗಲು ಬರುವ ದಿನವಾಗಿತ್ತು. ಅದಕ್ಕೆ ಮಕ್ಕಳಿಗೆ ಒಂದು ದಿನದ ರಜೆ ಹಾಕಿಸಿ ಕರೆದೊಯ್ದಿದ್ದೆವು. ಬಸ್ಸಿನ ಒಳಗೆ ಹತ್ತುತ್ತಿದ್ದಂತೆಯೇ ಡ್ರೈವರ್ ''ಓಹೋ ಊರಿಗೆ ಹೋಗುವಾಗ ಎಲ್ಲಾ ಒಟ್ಟಿಗೆ ಹೋಗುವುದಾ...?'' ಎಂದು ಕೇಳಿದ. ನಾನೂ ನನ್ನ ಓರಗಿತ್ತಿ ಮಕ್ಕಳೊಂದಿಗೆ ಹೊರಟಿದ್ದೆವು. ಅವನಿಗೆ ಈ ಪರೀಕ್ಷಾ ಸಮಯದಲ್ಲಿ  ಬಸ್ಸಿನಲ್ಲಿ  ಜನಸಮೂಹವೇ ಕಾಣಿಸಿದಂತಾಗಿ ಆಶ್ಚರ್ಯ ಗೊಂಡಿದ್ದ.  ಅವನು  ನಮ್ಮೂರ ಬಸ್ ರೂಟಿನ ಖಾಯಂ ಡ್ರೈವರ್ರು. ನಮಗೆ ಅವನ ಪರಿಚಯವಿಲ್ಲದಿದ್ದರೂ ಅವನಿಗೆ ಮಾತ್ರಾ ಅವನ ಬಸ್ಸಿನ ರೂಟಿನ ಅಷ್ಟೂ ಮನೆಗಳಿಗೆ ಬೆಂಗಳೂರಿನಿಂದ ಯಾರ್ಯಾರು ನೆಂಟರು ಬರುತ್ತಾರೆಂಬುದು ಎಲ್ಲರಿಗಿಂತ ಚನ್ನಾಗಿ  ಗೊತ್ತು...!

ರಾತ್ರಿ  ಇಲ್ಲಿ ಬಸ್ಸು ಹತ್ತಿದರೆ ಬೆಳಕು ಹರಿಯುವ ಮುನ್ನ ಊರಲ್ಲಿರಬಹುದು. ನಮ್ಮೂರ ಕ.ರಾ.ರ. ಸಾ.ಸಂ ರಾಜ[ ಹಿಂಸೆ ]ಹಂಸ  ಬಸ್ಸು ಹತ್ತಿ ಕಾದಿಟ್ಟ ಸೀಟಿನಲ್ಲಿ ವಿರಾಜಮಾನರಾದೆವು.. ಮತ್ತು ನಾನಂತೂ ಅಲರ್ಟ್ ಆಗಿಯೇ ಕುಳಿತುಕೊಂಡೆ!   ಮತ್ತೇನಲ್ಲ ..  ಬಸ್ಸಿನ ಮೂಲನಿವಾಸಿಗಳಿಗೆ ಗೌರವ ಕೊಟ್ಟು!     ಅಗಣಿತ  ತಿಗಣೆಯ  ಗಣಗಳ ನಡುವೆ ಸುಮ್ಮನೆ ಕುಳಿತಿಹೆ ನಾನು..! ಸಮಾಜವಾದದ ಪ್ರಕಾರ  ನನ್ನದು   ತಿಗಣೆ   ಸಾಮ್ರಾಜ್ಯದ ಮೇಲಿನ ಅತಿಕ್ರಮಣ.. ಅಲ್ಲವೇ..? ತಿಗಣೆ , ಜಿರಳೆ ಮತ್ತು ಅಲೆಮಾರಿ ಜನಾಂಗದವರಾದ ಸೊಳ್ಳೆಗಳಿಗೂ ಈ ಭೂಮಿಯ ಅರ್ಥಾತ್ ಬಸ್ಸಿನ ಮೇಲೆ ಬದುಕಲು ಹಕ್ಕಿಲ್ಲವೇ..?   ಅವರ ಖಾಯಂ ಸೀಟಿನಲ್ಲಿ ನಾನು ಟೆಂಪರರಿಯಾಗಿ ಭಯ ಭಕ್ತಿಯಿ೦ದ ಕುಳಿತುಕೊಳ್ಳುವುದೇ ಕ್ಷೇಮ.

ಸುಮಾರು ಹೊತ್ತು ಬಹಳ ಹುಶಾರಿಯಿಂದಲೇ ಕುಳಿತರೂ ಕುಳಿತುಕೊಳ್ಳಲು ಪರಿಸ್ಥಿತಿ ಸುಮ್ಮನೆ ಬಿಡದು. ಶಿಶಿರ ''ಅಮ್ಮಾ ಕಥೆ ಹೇಳು'' ಅಂದ.  ಅವನಿಗೆ ಕಥೆ ಹೇಳಿದ್ದು ಅಕ್ಕಪಕ್ಕದವರಿಗೆ ಹರಿಕಥೆಯೋ ಶನಿಕಥೆಯೋ ಆಗಿ ಪರಿಣಮಿಸಿದರೆ ಅದಕ್ಕೆ ನಾನು ಜವಾಬ್ಧಾರಳೇ..?  ಅಷ್ಟೊತ್ತಿಗೆ ಬಸ್ಸಿನ ತೊನೆದಾಟ ಮತ್ತು ಬ್ರೇಕು ಹಾಕುವುದು, ಹೊಂಡ ಹಾರಿ ಮುಗ್ಗರಿಸುವುದು.. ಇದರೊಳಗೆ ನನ್ನ ಹುಶಾರಿಯೆಲ್ಲಾ ಹಾರಿಹೋಯಿತು.ಮತ್ತು ಎಲ್ಲಿವರೆಗೆ ಸಾಧ್ಯ..?

ಒಮ್ಮೆಯಂತೂ ಹೀಗೆ ಊರಿಗೆ ಹೋಗುವಾಗ ಪುಟ್ಟ ಶಿಶಿರನಿಗೆ ಸಿಕ್ಕಾಪಟ್ಟೆ ತಿಗಣೆ  ಕಚ್ಚಿ  ಬಿಳಿಯ ಆಗಸದಲ್ಲಿ ಕೆಂಪು ನಕ್ಷತ್ರಗಳು ಹೊಳೆಯುವಂತೆ  ಮುಖ  ಥಳ ಗುಟ್ಟುತ್ತಿತ್ತು.    ಗುಲಾಬಿ ಕಾಲ್ಗಳಲ್ಲಿ ಮದರಂಗಿಯ ಬೊಟ್ಟುಗಳನ್ನಿಟ್ಟಂತೆ   ತಿಗಣೆ ಚಿತ್ತಾರ ಬಿಡಿಸಿತ್ತು.
 ಸ್ವಲ್ಪ ಹೊತ್ತಿಗೆ ಅವ ನಿದ್ದೆ ಹೋದ. ನನಗೆ  ಹಾಗೆಲ್ಲಾ ನಿದ್ದೆ ಬಂದು ಬಿಡುವುದೇ.. ಅದೂ ಹೀಗೆಲ್ಲಾ ಸಂಗತಿ  ಇರುವಾಗ.

ಬಸ್ಸು ಬಹುಷಃ ಖರೀದಿಸಿದ  ಮೊದಲಲ್ಲಿ ಹೊಸದಾಗಿಯೇ ಇತ್ತೇನೋ..! ನಮ್ಮೂರ ಬಸ್ಸು .. ಅದು. ಅದರ  ಬಗೆಗೆ ಅಭಿಮಾನ ಇರಬೇಕಾದ್ದು ನ್ಯಾಯ.   ನಾನೂ ಹಾಗೆಯೇ ಒರಗಿಕೊಂಡೆ. ನನ್ನ ತಲೆ ಕಡೆಯೇ ಒ೦ದು ಲೈಟ್ ಇತ್ತು.  ಅದರ ಹೊರಗಾಜು ಒಡೆದುಹೋಗಿ ಸೀಳು ಸೀಳಾಗಿತ್ತು.. ನನ್ನ ಪ್ರಕಾರ ಯಾರೋ ಎಂಟಡಿ ಇರುವವರ ತಲೆಗೆ ತಾಗಿ ಅದು ಒಡೆದಿರಬಹುದು! ಆದರೂ ಬೆಳಕಿತ್ತು..!   ಒಂದೆರಡು ಸೊಳ್ಳೆಗಳು ಮುಖದ ಮೇಲೆ ಹಾರಾಡಿ  ತಮ್ಮ  ಸಂಗೀತವನ್ನು ಚೆನ್ನಾಗಿ  ನುಡಿಸಿ ಹಾರಿಹೋದವು. ಲೈಟೆಲ್ಲಾ ಆರಿಸಿ ಸುಮಾರು ಹೊತ್ತಾಯ್ತು .ತಣ್ಣನೆಯ ಗಾಳಿ ತನ್ನ ಚಾಮರ ಸೇವೆಯನ್ನು ಒದಗಿಸಲು ತೊಡಗಿತು.ಕಿಟಕಿ ಗ್ಲಾಸ್ ಮುಚ್ಚಿದೆನಾದರೂ ಅದಕ್ಕೆ ಮತ್ತಿನ್ನೆಂತಾ ದಾಕ್ಷಿಣ್ಯವೋ ಏನು ಕಥೆಯೋ ಅದು ನಿಧಾನಕ್ಕೆ ಜಾರಿ ಜಾರಿ ಗಾಳಿಯ ಸೇವೆಯನ್ನು ಜಾರಿಯಲ್ಲಿರಿಸಿತು.ತುಂಬಾ ಚಳಿ  ಆಗುತ್ತಿತ್ತು. ಮನೆಯಿಂದ ಹೊರಡುವಾಗ ಎಷ್ಟು ಸೆಖೆ..  ಬಸ್ಸಿನಲ್ಲಿ  ವಿಪರೀತ ಚಳಿ..!   ಹವಾಮಾನ  ಕ್ಷಣ ಕ್ಷಣ  ಬದಲಾಗುತ್ತದೆ.  ಮುಂದೆ ಹೋಗಬೇಕೋ  ಹಿಂದೆ ಹೋಗಬೇಕೋ  ಅದಕ್ಕೂ ಕಾಲದ ಕನ್ಫ್ಯೂಜನ್ನು. ಕಾಣದ ಪೊಲ್ಯೂಷನ್ನು.
ಬಸ್ಸಿನ   ಸೀಟು ಮಾತ್ರ ಒಳ್ಳೆ ಜಾರುಬಂಡಿಯನ್ನು ನೆನಪಿಸಿತು ನನಗೆ. ಬಸ್ಸು ಮುಂದೆ ಮುಂದೆ ಸಾಗಿದಂತೆ ಸೀಟಿನಲ್ಲಿ ಕುಳಿತವರು ಮೆಲ್ಲ ಮೆಲ್ಲ ಧರೆಗೆ..


ಮಧ್ಯ ರಾತ್ರಿಯಷ್ಟಿರಬಹುದು. ನನಗೆ ನಿದ್ರೆ ಆವರಿಸಿಕೊಳ್ಳುತ್ತೆ ಅನ್ನುವಷ್ಟರಲ್ಲಿ ಬಾಗಿಲು ನಿಧಾನ ಜಾರಿ ಗಾಳಿ ನುಗ್ಗುತ್ತಿತ್ತು. ಕಿವಿಗೆ ಶಾಲು ಸುತ್ತಿಕೊಂಡರೂ ಮುಖಕ್ಕೆ ಗಾಳಿಯ ಬಡಿತ.  ಆಡ್ರಾ ಡ್ಡ ಣಾಕು ಮುಕಾ  ಣಾಕು ಮುಕಾ.. ಎ೦ದು ಮುಂಗುರುಳು ಮುಖದ ಮೇಲೆ ನರ್ತಿಸುತ್ತಿತ್ತು.

ಆಗ  ನಿಧಾನಕ್ಕೆ  ಕೇಳಿಸ ತೊಡಗಿತ್ತು ,   ಕಟ ಕಟ.. ಕಟ ಕಟ... ಮಧ್ಯೆ ಮದ್ಯೆ ಜರೀಲ್ ...ಜರೀಲ್ .. ಅನ್ನುವಂತೆ ಒಡಕು ಗೆಜ್ಜೆಯ ಸ್ವರ... ಏನದು ಸದ್ದು..? ಯಾವುದರದ್ದು..?  ಸ್ಮಶಾನದಲ್ಲಿ ಎಲುಬು ಕಡಿಯುವ ಶಾಕಿನಿ ಡಾಕಿಣಿ ಪಿಶಾಚಗಳಿರಬಹುದೇ..? ಅಥವಾ ಮೊಹಿನಿಯೋ , ನಾಗವಲ್ಲಿಯೋ..?  ಯಾವದಾದರೂ ಸಂಸ್ಕಾರ ಸಿಗದ ಪ್ರೇತ ದಾರಿ ತಪ್ಪಿ  ಬಸ್ಸಿಗೆ ಬಂದಿರಬಹುದೇ..?

  ಥತ್ಥೆರಿಕೆ .... ಮುಂದಿನ ಸೀಟಿನ ಕಿಟಕಿಯ ಗ್ಲಾಸೂ.. ಅದರ ಮುಂದಿನ ಸೀಟಿನದೂ.. ಅದಕ್ಕೂ ಮುಂದಿನ .. ಹಿಂದಿನ ಕಿಟಕಿಯ ಗ್ಲಾಸುಗಳು ಇಂಗ್ಲೀಷರು  ಸ್ವಾತಂತ್ರ್ಯ ಕೊಟ್ಟಿದ್ದು ತಮಗೇನೆ ಎಂಬಂತೆ ಹಿಂದೆ ಮುಂದೆ ಅಲುಗಾಡುತ್ತಾ.. ಸದ್ದು ಮಾಡುತ್ತಾ..  ಸರ್ವ ಸ್ವಾತಂತ್ರ್ಯವನ್ನೂ ಅನುಭವಿಸುತ್ತಿದ್ದವು.. ಮಕ್ಕಳೆಲ್ಲಾ ನಿದ್ರೆಯಲ್ಲಿ ಸಿಲುಕಿಕೊಂಡಿರುವುದರಿಂದ ಅದನ್ನು ವಿವರಿಸಿ ಹೇಳುವ ಪ್ರಮೆಯವೊಂದು ಬರಲಿಲ್ಲ. ಇಲ್ಲದಿದ್ದರೆ ಹಾರರ್ ಸಿನಿಮಾದ ಪ್ರಭಾವದಿಂದ ಸದ್ದು  ಭೂತದ್ದೇ ಇರಬಹುದು, ಎಂದು ಮಕ್ಕಳು ವಾದ ಹೂಡಿ..ತೋರಿಸು ಎಂದೂ.. ಅದರ ಕುರಿತಾಗಿ ಪ್ರಶ್ನೆ ಕೇಳುತ್ತಾ ಬಸ್ಸಿನ ಎಲ್ಲರೂ ನನ್ನನ್ನು ಪ್ರೇತವನ್ನು ನೋಡುವಂತೆ ನೋಡಿ ಬಿಡುವ ಪ್ರಸಂಗವೊಂದು ತನ್ನಷ್ಟಕ್ಕೆ ತಾನೇ ತಪ್ಪಿ ಹೋಯಿತು.

ಆದರೆ ಪ್ರತಿ ಸಲದಂತೆ ಈ ಸಲ ತಿಗಣೆ  ಕಡಿಯದೇ,  ಈ ಮೊದಲು  ಕಚ್ಚಿಸಿಕೊಂಡ  ಸಂತ್ರಸ್ತ  ಜನರ ಒಕ್ಕೊರಲ  ಆರ್ತನಾದವನ್ನು ಆಲಿಸಿ ಅದರ   ಸಂತಾನವನ್ನು ಸರಕಾರದವರು ಕಡಿತಗೊಳಿಸಿದ್ದುದು,  ಅದರಿಂದಾಗಿ ಈ ಬಸ್ಸಿನಲ್ಲಿ ಅವುಗಳ  ಸಂಸಾರವೇ ಸರ್ವನಾಶಗೊಂಡಿದ್ದುದು  ನನಗೆ ಬೆಳಗಾದ ನಂತರ ಜ್ಞಾನೋದಯವಾಯಿತು..! ಜಿರಳೆಗಳೂ ತಮ್ಮ ವಾಸ್ತವ್ಯವನ್ನು ಬೇರೆಡೆಯಲ್ಲೆಲ್ಲಿಯೋ ಹೂಡಿ ಅವುಗಳೂ ಕಾಣದಾಗಿ ಬಸ್ಸು ಪ್ರಾಯಶಃ   ಬಣ ಬಣ ಗುಟ್ಟಿತು.ಹಾಗಾಗಿ ಬರಿಯ ಸಂಗೀತಸೇವೆಯೇ ಅಂದಿನ  ಪ್ರಧಾನ ಆಕರ್ಷಣೆಯಾಗಿತ್ತು.

ಅಂತೂ ಯಾವುದೇ ಪ್ರಾಣಿ ರೂಪೀ  ಮಾರಕಾಸ್ತ್ರಗಳ ಹಾವಳಿಗೊಳಗಾಗದೆ ಸಾವಕಾಶ ಮನೆ ತಲುಪಿದೆವು.. ರಾತ್ರಿ ಪುನಃ ವಾಪಾಸು ಬೆಂಗಳೂರಿಗೆ ಹೊರಟು ಅತಿ ಬುದ್ಧಿವಂತಿಕೆಯಿಂದ ಪ್ಲಾನ್ ಮಾಡಿ  ಸ್ಲೀಪಿಂಗ್ ಕೋಚ್ ಬಸ್ಸಿನಲ್ಲಿ ಬಂದೆವು. ಅದು ಒಳ್ಳೆ ರೋಲರ್ ಕೋಸ್ಟರ್ ತರಾ ನಮ್ಮೂರ ತಿರುಮುರುವು ರಸ್ತೆಯಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಬೀಸಿ ಬೀಸಿ ಒಗೆಯುತ್ತಾ ಜಾತ್ರೆಯ ಅನುಭವವನ್ನು   ನೆನಪು ಮಾಡಿಕೊಳ್ಳುತ್ತಾ ಬೆಂಗಳೂರು ತಲುಪಿಸಿದ್ದು ಈಗ ಇತಿಹಾಸ....!



43 comments:

  1. ನಮಗೂ ಇದೇ ರೀತಿ ಪ್ರಯಾಣದ ಅನುಭವ ವಾಗಿದ್ದರೂ ನಿಮ್ಮಹಾಗೆ ವರ್ಣಿಸಲು ಸಾಧ್ಯವಿಲ್ಲ ...ಮತ್ತೊಮ್ಮೆ ಊರಿಗೆ ಹೋಗಿ ಬಂದ ಹಾಗಾಯ್ತು .

    ReplyDelete
  2. ಹಳ್ಳಿಗೆ ಹೋಗೋ ಅನುಭವವೇ ಅನುಭವ ಚೆನ್ನಾಗಿದೆ ಲೇಖನ...

    ReplyDelete
  3. ನೆನಪುಗಳ ಮೆಲಕು... ಕಿಟಕಿ ಬಾಗಿಲು ಬಡಿತದ ಸಂಗೀತ ಕೇಳ್ಕೊಂಡೇ (ಸದ್ಯ ತಿಗಣೆಗಳ ಕಾಟ ಇರ್ಲಿಲ್ಲ ಅಂದ್ರಲ್ಲಾ..) ಪ್ರ(ಯಾ)ವಾಸ ಮುಗಿಸಿದ್ರಿ...
    ಜಾತ್ರೆ ಬಗ್ಗೆ ಬರಲಿ ಬೇಗ ಮುಂದಿನ ಭಾಗದಲ್ಲಿ.....

    ReplyDelete
    Replies
    1. ಹ್ನೂ.. ಆಜಾದ್ ಭಯ್ಯಾ...
      ಥ್ಯಾ೦ಕ್ಸ್ ..

      Delete
  4. ಹ ಹ ಹ .. ಅಗಣಿತ ತಿಗಣೆ ಗಣಗಳ ನಡುವೆ ...... ಸೂಪರ್ ವಿಜಿ !!
    ನಂಗೂ ಒಂದಾನೊಂದು ಕಾಲದಲ್ಲಿ ಬಸ್ಸಿನಲ್ಲಿ ಹೀಗೇ ಅಲರ್ಟ್ ಆಗಿ ಕುಳಿತು ಹೋದ ನೆನಪು ಮತ್ತೇ ಎದುರಿಗೆ ಬಂದಂತೆ ಆಯ್ತು ! ಹಾಗೇ ಅಲರ್ಟ್ ಆಗಿ ಕೂತ್ಕೊಳೋದು ಎಷ್ಟು ಅಭ್ಯಾಸ ಅಗಿತ್ತಪ್ಪ ಅಂದ್ರೆ ..ಮೋಡ ಮೊದಲು ನಮ್ಮದೇ ಕಾರಲ್ಲಿ ಕೂತಾಗಲೂ ಸೀಟಿನ ತುದಿಗೆ ಕೂರುತ್ತಿದ್ದೆ , ನಮ್ ಪರ್ಸನಲ್ ಡ್ರೈವರ್ ಕಂ ಕಾರಿನ ಓನರ್ " ಸರ್ಯಾಗಿ ಕೊತಕೊ ಇದು ಬಸ್ಸಲ್ಲ " ಎಂದು ಎಚ್ಚರಿಸೋವರೆಗೂ ...

    ಸಖತ್ ಇದೆ ಬರಹ !!

    ReplyDelete
    Replies
    1. ಚಿತ್ರಾ..
      ನಿನ್ ಕಥೆನೂ ಮಜಾ ಇದ್ದು.. ಧನ್ಯವಾದ..:)

      Delete
  5. ಕಟ ಕಟ.. ಕಟ ಕಟ... ಮಧ್ಯೆ ಮದ್ಯೆ ಜರೀಲ್ ...ಜರೀಲ್ .. ,ಆಡ್ರಾ ಡ್ಡ ಣಾಕು ಮುಕಾ ಣಾಕು ಮುಕಾ..ಇಂಥ ಶಭ್ದಗಳು ಎಲ್ಲಿಂದ ಸಿಕ್ತಾವೊ ಕಾಣೆ? ಮಸ್ತಾಗಿದೆ ಬಸ್ ಪ್ರಯಾಣ ವಿವರಿಸಿದ ಪರಿ.

    ReplyDelete
    Replies
    1. ರಾಗವೇ೦ದ್ರ ಅವರೆ ಬ್ಲಾಗಿಗೆ ಸ್ವಾಗತ.. ಪ್ರತಿಕ್ರಿಯೆಗೆ ವ೦ದನೆಗಳು.

      Delete
  6. ಚೆನ್ನಾಗಿದೆ ಬಸ್ಸಿನ ಪ್ರಯಾಣದ ಅನುಭವ :)

    ReplyDelete
  7. ನಿಮ್ಮ ಲೇಖನ ನಮ್ಮೆಲ್ಲರನ್ನೂ ಅಲರ್ಟ್ ಮಾಡುವದರಲ್ಲಿ ಸಂಶಯವಿಲ್ಲ. ನೆನಪಿಡುವಂತಹ ಬಸ್ ಪ್ರಯಾಣ!

    ReplyDelete
  8. ಚೆನ್ನಾಗಿದೆ...............

    ReplyDelete
  9. ರಾಜಹಂಸ ಗಳೆಲ್ಲಾ ಆ ರಾಜರ ಕಾಲದಿಂದಲೇ ಓಡುತ್ತಿರುವ ಗಾಡಿಗಳು ಅನ್ಸುತ್ತೆ ..ಅದ್ಕೆ ಹಾಗೆ :) ಹಾಸ್ಯಭರಿತ ಸುಂದರ ಲೇಖನ. ಇಷ್ಟವಾಯ್ತು. :)

    ReplyDelete
    Replies
    1. ಚೇತನಾ.. ಅದೂ ಆಗಿರಬಹುದು.. ರಾಜರ ಕಾಲದ್ದು... ಹ್ಹ..ಹ್ಹ..
      ಥ್ಯಾ೦ಕ್ಸ್..

      Delete
  10. ತುಂಬಾ ಚೆನ್ನಾಗಿದೆ.... :)

    ReplyDelete
    Replies
    1. ಬ್ಲಾಗಿಗೆ ಸ್ವಾಗತ.. ಪ್ರತಿಕ್ರಿಯೆಗೆ ವ೦ದನೆಗಳು.

      Delete
  11. Replies
    1. nice :) ನಾನು ಸ್ಲೀಪರ್ ಕೋಚ್‍ನಲ್ಲಿ ಆ ರೋಡಲ್ಲಿ ಬಂದವಳು ಇನ್ನು ಜೀವಮಾನದಲ್ಲಿ ಸ್ಲೀಪರ್ ಕೋಚ್ ಹತ್ತೋದಿಲ್ಲ ಅಂತ ಧೀರ ಪ್ರತಿಜ್ಞೆ ಮಾಡಿದ್ದೇನೆ. ಬಂದು ಎರಡು ದಿನವಾದರೂ ಯಾವ್ಯಾವ ಬಾಡಿಪಾರ್ಟ್ಸ್ ಎಲ್ಲೆಲ್ಲಿವೆ ಅಂತನೇ ತಿಳೀತಿಲ್ಲ :(

      Delete
    2. ಬ್ಲಾಗಿಗೆ ಸ್ವಾಗತ.. ಪ್ರತಿಕ್ರಿಯೆಗೆ ವ೦ದನೆಗಳು.Swarna ಅವರೆ..

      Delete
  12. nice :) ನಾನು ಸ್ಲೀಪರ್ ಕೋಚ್‍ನಲ್ಲಿ ಆ ರೋಡಲ್ಲಿ ಬಂದವಳು ಇನ್ನು ಜೀವಮಾನದಲ್ಲಿ ಸ್ಲೀಪರ್ ಕೋಚ್ ಹತ್ತೋದಿಲ್ಲ ಅಂತ ಧೀರ ಪ್ರತಿಜ್ಞೆ ಮಾಡಿದ್ದೇನೆ. ಬಂದು ಎರಡು ದಿನವಾದರೂ ಯಾವ್ಯಾವ ಬಾಡಿಪಾರ್ಟ್ಸ್ ಎಲ್ಲೆಲ್ಲಿವೆ ಅಂತನೇ ತಿಳೀತಿಲ್ಲ :(

    ReplyDelete
    Replies
    1. ಥ್ಯಾ೦ಕ್ಸ್ ಸುಮ.. ಯಡವಟ್ಟಾತು..ಸ್ವಲ್ಪ...!

      Delete
  13. ಹ್ಹ ಹ್ಹ, ನನಗೂ ಕ ರಾ ರ ಸಾ ಸಂ ಗೂ ಹತ್ತಿರದ ಸಂಬಂಧ.. :) ಲೇಖನ ಚೆನ್ನಾಗಿದೆ.

    ReplyDelete
    Replies
    1. ISHWARA BHAT K

      ನಿಮ್ಮ ಸ೦ಬ೦ಧದ ಬಗ್ಗೆ ಇನ್ನಷ್ಟು ವಿವರಿಸಿ ಬರೆಯಿರಿ...!!!!
      ಥ್ಯಾ೦ಕ್ಸ್..

      Delete
  14. ಕರ್ನಾಟಕ .ರಾ.ರ.ಸಾ.ಸಂ. ಯು ತಿಗಣೆಗಳಿಂದ ಕೆರ್ನಾಟಕ ಆಗಿರುವುದನ್ನು ನಗುವಿನ ಬುಗ್ಗೆಯೊಂದಿಗೆ ಬರೆದಿದ್ದೀರಿ. ಒಂದು ಅಲರ್ಟ್ ಕೊಡುವ ಬರಹವೂ ನಿಜ.

    ReplyDelete
    Replies
    1. ಸುಬ್ರಹ್ಮಣ್ಯ.. ಹೌದು.. ಕೆರ್ನಾಟಕ ಆಗಿದೆ....!! ಈಗ ಸ್ವಲ್ಪ ಕಡಿತ.. ಕಡಿತವಾಗಿದೆ..!!
      ಥ್ಯಾ೦ಕ್ಸ್..

      Delete
  15. ಮೇಡಮ್,
    ತಿಗಣೆ ಕಾಟ ಇತ್ತೀಚೆಗೆ ನಮ್ಮ ಬಸ್ಸುಗಳಲ್ಲಿ ಜಾಸ್ತಿಯಾಗಿದೆ ಎಂದುಕೊಂಡರೆ, ನಾವು ಪಾಂಡಿಚೇರಿಗೆ ಹೊರಟಾಗ ತಮಿಳುನಾಡಿನ ಬಸ್ಸಿನಲ್ಲಿ ನಮಗೆ ಸಕತ್ ಕಾಟ ಕೊಟ್ಟವು. ನಮ್ಮೊಳಗೆ ಮಾತ್ರವೇ ಭಾಷೆ, ರಾಜ್ಯ ಇತ್ಯಾದಿಗಳು. ಚುರುಕಾದ ಹಾಸ್ಯದೊಂದಿಗೆ ಚೆನ್ನಾಗಿದೆ ಲೇಖನ.

    ReplyDelete
    Replies
    1. ಶಿವು ಸರ್..
      ಹ್ಹ ಹ್ಹ.. ನಿಜ ಅವುಗಳ ಸಾಮರಸ್ಯವನ್ನು ನೋಡಿ ನಾವು ಪಾಠ ಕಲಿಯಬೇಕಿದೆ...!!
      ವ೦ದನೆಗಳು.

      Delete
  16. nimma baraha tumba chennagide...........

    ReplyDelete
  17. Replies
    1. ಬ್ಲಾಗಿಗೆ ಸ್ವಾಗತ.. ಪ್ರತಿಕ್ರಿಯೆಗೆ ವ೦ದನೆಗಳು ಕಾವ್ಯಾದರ್ಶ ಅವರೆ...

      Delete
  18. ಒಳ್ಳೆಯ ಮಜಾ ಬಂತು. ಕ ರಾ ರ ಸಾ ಸಂ ಮಾತ್ರವಲ್ಲ ವಿಜಯಾನಂದ ರೋಡ್ ಲೈನ್ಸ್ ಬಸ್ಸಿನ ಪ್ರಯಾಣದ ಅನುಭವವೂ ಇದೆ.
    ನನಗೆ "ತಗಣೆ" "ತಿಗಣೆ" ಮತ್ತು "ತಗಣಿ" ಈ ಮೂರ್ವರಲ್ಲಿ ಯಾವುದು ಸರಿಯಾದ ಪ್ರಯೋಗ ಅನ್ನುವ ವ್ಯಾಕರಣ ಕಂಫ್ಯುಷನ್ನು!!
    "ತಗಣೆ ಕಡೀತದ ಚೊಣ್ಣ ದಾಗ ಹೊಕ್ಕ"
    "ತಿಗಣೆ ಕಡೀತದ ಹಾಶ್ಯಾಗ ಹೊಕ್ಕ"
    "ತಗಣಿ ಕಡೀತದ ಬಸ್ನಾಗ ಸಿಕ್ಕ!! ಸುಂದರ ಹಾಡುಗಳನ್ನು ಗುನುಗುತ್ತ ಶಾಲೆಯ ಪ್ರವಾಸದಲ್ಲಿ ನಮ್ಮನ್ನು ನಗಿಸುತ್ತಿದ್ದ ಮಾಸ್ತರು ನೆನಪಾದರು!

    ReplyDelete
  19. ಶಿವರಾ೦ ..
    ನನಗೂ ಯಾವುದು ಸರಿಯಾದ ಪ್ರಯೋಗ ಅನ್ನುವುದು ಗೊತ್ತಾಗದೆ ಅ೦ತೂ ಒ೦ದನ್ನು ಬರೆದಿದ್ದೇನೆ. ಕಡಿಸಿಕೊಳ್ಳುವುದರ ಜೊತೆಗೆ ಹೆಸರೂ ಹೇಗೆ ತೊ೦ದರೆ ಕೊಡತ್ತಿದೆ.. ಅಲ್ಲವೇ...? ಹ್ಹ ಹ್ಹ.. ಪ್ರತಿಕ್ರಿಯೆಗೆ ವ೦ದನೆಗಳು

    ReplyDelete