ಗೆಳತಿ ಜಯಲಕ್ಷ್ಮಿ ಶೇಖರ್ ಯಾವತ್ತೂ ಹೇಳ್ತಿರ್ತಾರೆ , ''ವಿಜಯ ನಮ್ಮ ಕಾಲನ್ನು ನಾವೇ ಎಳ್ ಕೊಳ್ಳೋದು ಕಷ್ಟ ಕಣ್ರೀ, ಆದ್ರೆ ನೀವು ನಿಮ್ಮ ಕಾಲನ್ನೇ ಎಷ್ಟ್ ಚನ್ನಾಗಿ ಎಳ್ಕೊತೀರ ಅಂತೆಲ್ಲಾ. ನನಗೆ ಆಶ್ಚರ್ಯ, '' ನಾನ್ಯಾವಾಗ ನನ್ ಕಾಲ್ ಎಳ್ಕೊಂಡೆ, ಇವ್ರ್ಯಾವಾಗ ನೋಡಿದ್ರು ಅಂತಾ.'' ಆದರೂ 'ಚನ್ನಾಗಿ' ಅಂತ ಹೇಳಿದ್ರು ಅಂತ ನಾನು ಯಾರೂ ಇಲ್ಲದಾಗ ನನ್ನ ಕಾಲು ನಾನೇ ಎಳೆದುಕೊಳ್ಳುವ ಪ್ರಯೋಗ ಶುರುಮಾಡಿದೆ . ನನ್ನ ಕೈಗೆ ಕಾಲೇ ಎಟುಕಲಿಲ್ಲ. ಎನ್ಮಾಡಲಿ ..? ಬೇಜಾರಾಗೊಯ್ತು. ಮನಸ್ಸೆಲ್ಲಾ ಬ್ಲಾಂಕು ..ಸೊನ್ನೆ, . ತಲೆ ಪೂರಾ ಶೂನ್ಯ.. ಜಯಲಕ್ಷ್ಮಿ ಸುಳ್ಳೇ ಹೇಳಿದ್ದಾರೆ ಅಂತ ತಲೆ ಮೇಲೆ ಕೈ ಹೊತ್ತು ಕೂತೆ. ಪ್ರಾಕ್ಟಿಕಲ್ ಫೇಲು .. ಥಿಯರಿನಾದ್ರೂ ಬರಿಯೋಣ ಅಂದುಕೊಂಡು ಪೆನ್ನು ತಗೊಂಡಿದ್ದಕ್ಕೆ ಹೀಗಾಯ್ತು ನನ್ನ ಕಥೆ. ನನ್ನ ಕಾಲು ನಾನೇ ಎಳೆದುಕೊಂಡರೆ, ಎಳೆದುಕೊಳ್ಳುತ್ತಾ ಇದ್ದರೆ ನಾನು ಹೀಗೇ ಕಾಣಬಹುದು ಸೊನ್ನೆ ಥರಾ, ಅನ್ನುವ ಇಮ್ಯಾಜಿನೆಷನ್ನು... :) :)
ನಾನು ಈ ಪ್ರಯತ್ನ ಮಾಡುವ ಹಾಗಿಲ್ಲ..
ReplyDeleteನನ್ನ ದೇಹದ ಆಕಾರ ಇದಕ್ಕೆ ಕಾರಣ...
ನಾನೂ ಈ ಪ್ರಯತ್ನ ಮಾಡುತ್ತೇನೆ. ನೋಡೋಣ . :)
ReplyDeleteಹಹ್ಹಹ್ಹ.. ವಿಜಯಕ್ಕ ಫುಲ್ ಪ್ರಾಕ್ಟೀಸ್ ಮಾಡಿ..
ReplyDeleteಇರಲಿ, try ಮಾಡೋಣ...
ReplyDeletehttp://badari-poems.blogspot.in/
ಜಯಕ್ಕನ ಮಾತು ನಂಬಬೇಡಿ.. ನಾವು ಪ್ರಯೋಗನೋ ಯೋಗನೋ ಮಾಡ್ಲಿ ಅಂತ ಹೀಗೆ ಆಗಾಗ ನಮ್ಮ ಕಾಲೆಳೀತಾರೆ :)
ReplyDeleteಎಷ್ಟು ಚೆನ್ನಾಗಿ (ನೀವೇ ನಿಮ್ಮ) ಕಾಲು ಎಳೆಯೋ ಕೆಲಸ ಮಾಡಿದ್ದೀರಿ ಅನ್ನೋದನ್ನು ಕಣ್ಣಾರೆ ಕಂಡು ಖುಶಿಯಾಯ್ತು, ಮೇಡಮ್!
ReplyDeleteಬರಹ ಹಾಗು ಚಿತ್ರ: ಚಿಕ್ಕವಾದರೂ ಚೊಕ್ಕ ಚಿನ್ನ!
:)
ReplyDeleteಹಹಹ ... ಚೆನ್ನಾಗಿದೆ.. ಚಿಕ್ಕ ಚೊಕ್ಕ ಬರಹ....
ReplyDeleteಜಸ್ಟ್ ಸೂಪರ್ ವಿಜಯಕ್ಕ ..
ReplyDeleteಯಾವಾಗಿನಂಗೆಯಾ ...
ನನ್ನ ಕಾಲನ್ನ ನಾನೇ ಎಳೆಯೋ ಪ್ರಯತ್ನಕ್ಕೆ ಬಿದ್ದರೆ ಗಂಟು ಗಂಟಾಗಿ ಆಮೇಲೆ ಬಿಡಿಸಲು ಬರದಂತಾಗುವುದು ಗ್ಯಾರೆಂಟಿ ,...
ಸೊ ಪ್ರಯತ್ನಿಸುವುದನ್ನು ಕೈ ಬಿಡಲಾಗಿದೆ ...
ಜಯಶ್ರೀಯವರೆ..ನೀವು ನಿಮ್ಮ ಬರಹಕ್ಕೆ ಕೊಟ್ಟ ಚಿತ್ರದಿಂದ ಅರೆ ಹೌದಲ್ವ ಅನ್ನಿಸಿತು.ಚಿತ್ರ ನೋಡಿದ ನನಗೆ ಪೂರ್ತಿ ಓದುವ ಅಂತನಿಸಿತು.ಬರಹಕ್ಕೆ ಕೊಟ್ಟ ತಲೆ ಬರಹ ಪ್ರಶ್ನಾರ್ತಕ ಮತ್ತು ಆಶ್ಚರ್ಯಕರ ಚಿಹ್ನೆಯೊಂದಿಗೆ ತುಂಬಾ ಚೆನ್ನಾಗಿದೆ.
ReplyDeleteನನ್ನ ಬ್ಲಾಗಿಗೂ ಭೇಟಿ ಕೊಡಿ ಒಂದು ಒಳ್ಳೆಯ ಕಥೆ ನಿಮನ್ನು ಕಾದಿದೆ.
ReplyDeleteಹ ಹ ಹ.. ಸೂಪರ್ ವಿಜಯಕ್ಕ.. :-)
ReplyDeleteಹ ಹ ಹ,,, ನಮ್ಮ ಬೆನ್ನನ್ನು ನಾವೇ ತಟ್ಟಕೊಳ್ಳಬಹುದು ಆದರೆ ನಮ್ಮ ಕಾಲನ್ನು ನಾವೇ ಎಳೆದುಕೊಳ್ಳುವುದು.. ತಾಕತ್ ಪ್ರಶ್ನೆ ಸೂಪರ್.... ಮೇಡಂ
ReplyDeleteಹ ಹ ಹ....
ReplyDelete