Thursday, October 8, 2009

ಕನಸುಗಳು

ಕನಸುಗಳು ಏಕೆ ಬೀಳುತ್ತವೆ ?ಇದುಒಂದು ಮಿಲಿಯನ್ ಡಾಲರ್ ಪ್ರಶ್ನೆ.ಇದುವರೆಗೂ ಕನಸುಗಳನ್ನು ಕುರಿತಾಗಿ ಅನೇಕ ಸಂಶೋಧನೆಗಳು ನಡೆದರೂ ಯಾರಿಗೂ ಈ ಪ್ರಶ್ನೆಗೆ ಸಮರ್ಪಕ ಉತ್ತರ ದೊರಕಿಲ್ಲ.ಅಲ್ಲದೆ ಮೆದುಳಿನ ಯಾವ ಭಾಗದಿಂದ ಕನಸು ಉತ್ಪತ್ತಿಯಾಗುತ್ತದೆಯೆಂದು ಕೂಡ ನಿಖರವಾಗಿ ತಿಳಿದಿಲ್ಲ.ಆದರೆ ನಿದ್ರೆಯ ಯಾವ ಸ್ಥಿತಿಯಲ್ಲಿ ಕನಸು ಬೀಳುತ್ತದೆ ಎನ್ನುವುದನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ.ಅನಿಯಂತ್ರಿತ ಕಣ್ಣುಗಳ ಚಲನೆಯನ್ನು ಹೊಂದಿದಂತಹ ನಿದ್ರೆಯಲ್ಲಿ ಕನಸುಗಳು ಹೆಚ್ಚಾಗಿ ಬೀಳುತ್ತವೆ ಹಾಗು ನೆನಪಿನಲ್ಲುಳಿಯುತ್ತವೆ.


ಕನಸುಗಳಿಗೆ ಅರ್ಥವಿದೆಯೇ?ಪ್ರಸಿದ್ದ ಮನೋವಿಶ್ಲೇ ಶಕ ಸಿಗ್ಮಂಡ್ ಫ್ರಾಯ್ಡ್ ತನ್ನ The intrepritation of dreams ಎನ್ನುವ ಪುಸ್ತಕದಲ್ಲಿ ಕನಸುಗಳನ್ನು ವಿವರಿಸಿದ್ದಾನೆ."ಮನಸ್ಸು ತಾನು ತಡೆ ಹಿಡಿದ ಆಸೆಗಳು ಹಾಗು ಅತೃಪ್ತಿಗಳನ್ನ ಪೂರೈಸಿಕೊಳ್ಳಲು ನಿದ್ರೆಯಲ್ಲಿ ಗುಪ್ತ ಸಂದೇಶಗಳ ಮೂಲಕ ಹೊರಹಾಕುವ ತಂತ್ರವೇ ಕನಸು"ಸಾಮಾನ್ಯವಾಗಿ ನಮಗೆ ಬೀಳುವ ಕನಸುಗಳ ಅರ್ಥಗಳು ಹೀಗಿರಬಹುದು.ಕನಸಿನಲ್ಲಿ ಹಾರಾಟ : ಹಾರಾಟ ಎನ್ನುವುದು ಸುಖಕ್ಕೆ ಸಂಬಂಧಿಸಿದೆ .ಯಾವುದೇ ತಲೆಬಿಸಿ ಹಾಗು ಜವಾಬ್ಧಾರಿ ಇಲ್ಲದಿದ್ದಾಗ ಹಾರಾಡುವ ಕನಸುಗಳು ಬೀಳುತ್ತವೆ.ಬೆತ್ತಲೆ: ಅನೇಕ ಸಲ ಸಾರ್ವಜನಿಕವಾಗಿ ಬೆತ್ತಲೆಯಾಗಿ ಕಾಣಿಸಿಕೊಂಡಂತೆ ,ಅದರಿಂದ ಮುಜುಗರಕ್ಕೊಳಗಾದಂತೆ ಕನಸುಗಳು ಬೀಳುತ್ತಿರುತ್ತವೆ.ನಮ್ಮ ಗೌಪ್ಯತೆಯು ಬಯಲಾದರೆ...... ಎನ್ನುವಂತಹ ಭಯವನ್ನು ಇದು ಸೂಚಿಸುತ್ತದೆ.ಕೆಲವು ವಸ್ತುಗಳು: ಗೋಡೆಗಳು ,ಚಿಕ್ಕಮನೆ ಅಥವಾ ಮುಚ್ಚಿದ ಬಾಗಿಲುಗಳು ಸತತವಾಗಿ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ,ಅದು ಲೈಂಗಿಕ ಅತೃಪ್ತಿಯನ್ನು ಸೂಚಿಸುತ್ತದೆ.ಬಾಲ್ಯದ ಅನುಭವಗಳು :ಚಿಕ್ಕಂದಿನಲ್ಲಿ ನಡೆದ ಘಟನೆಗಳು ಪದೇ ಪದೇ ಕಾಣಿಸಿಕೊಂಡರೆ ಅದು ವ್ಯಕ್ತಿಯ ಬೇಜವಾಬ್ಧಾರಿತನ ,ನೈತಿಕ ಸ್ಥೈರ್ಯದ ಕೊರತೆ ,ನಿರ್ಲಕ್ಷಕ್ಕೊಳಗಾಗಿರುವುದು ಇತ್ಯಾದಿ ನಕಾರಾತ್ಮಕ ಭಾವನೆಗಳನ್ನು ಪ್ರಕಟ ಪಡಿಸುತ್ತದೆ.ನಮ್ಮ ಮನೆಗಳಲ್ಲಿ ಹಿರಿಯರು ಹೇಳುತ್ತಿರುತ್ತಾರೆ .ಹೊಟ್ಟೆ ತುಂಬಾ ಊಟ ಮಾಡಿದ ಕನಸು ಬಿದ್ದರೆ ಆರೋಗ್ಯ ಕೆಡುತ್ತಿರುವ ಸೂಚನೆ ಎಂದು.ನನ್ನ ವಿಷಯದಲ್ಲಿ ಇದು ಬಹುತೇಕ ನಿಜವಾಗಿದೆ.ಹಾಗಾಗಿ ನಮಗೆ ಪದೇ ಪದೇ ಒಂದೇ ರೀತಿಯ ಕನಸುಗಳು ಬೀಳುತ್ತಿದ್ದರೆ ಅದನ್ನು ನಮ್ಮ ಜೀವನದ ಜೊತೆ ಹೋಲಿಸಿಕೊಳ್ಳಬಹುದು.ಪರಿಹಾರ ಕಂಡುಕೊಳ್ಳಬಹುದು.


3 comments:

  1. ಕನಸುಗಳನ್ನು ಅರ್ಥಸಲು ಅನುಕೂಲವಾಗುವಂತೆ ಇನ್ನಿಷ್ಟು ಉದಾಹರೆಗಳೊಂದಿಗೆ ಪ್ರತ್ಯೇಕ ಲೇಖನವನ್ನು ಬರೆಯಲು ನಿಮ್ಮಲ್ಲಿ ವಿನಂತಿಸುತ್ತೇನೆ.

    ReplyDelete
  2. ಸರ್... ನಿಮ್ಮ ಮಾತನ್ನು ಖ೦ಡಿತಾ ನಡೆಸಿಕೊಡುತ್ತೆನೆ.ಆಗಾಗ್ಗೆ ಬೀಳುವ ಕಾಡುವ ಕನಸುಗಳು ನಮ್ಮ ಸ೦ಸ್ಕಾರ,ಪರಿಸರ,ನಮ್ಮ ದ್ರುಷ್ಟಿಕೋನ,ನಮ್ಮ ಜೀವನದ ಏರಿಳಿತಗಳು ಇವೆಲ್ಲಾ ಅ೦ಶಗಳನ್ನು ಒಳಗೊ೦ಡಿರುತ್ತದೆ೦ಬುದು ನನ್ನ ಭಾವನೆ. ನಾನು ಇದರ ಬಗ್ಗೆ ಹೆಚ್ಚಿನ ಕ್ರುಷಿ ಮಾಡಬೇಕಿದೆ.ನಿಮ್ಮ ಪ್ರೋತ್ಸಾಹಕ್ಕೆ ನಮನಗಳು.

    ReplyDelete
  3. ನನಗೂ ಬ್ಲಾಗೂರು ನೋಡಿ ಭಾಳ ಖುಶಿಯಾತು, ನೇಪಥ್ಯದಿಂದ ಸಂಪರ್ಕ ಬಂತು, ಬಹುಶಃ ನನ್ನ ಎಳವೆಯಲ್ಲೇ ನನಗೊಬ್ಬ ಕವಿಯಪ್ಪ, ಸಂತ ಅಪ್ಪ ಆಸೆ ಇತ್ತು, ಬರೆದದ್ದನ್ನ ಕೆಲಸದ ಒತ್ತಡದಲ್ಲಿ ಕಳೆದಿದ್ದೇ ಜಾಸ್ತಿ, ಈಗ ಅದಕ್ಕೇ ಒಂದು ಗೂಡು ಮಾಡಿದ್ದಿ, ಸದ್ಯಕ್ಕೆ ಇಲ್ಲಿರ್ಲಿ ಅಂತ, ನೋಡನ ಗೂಡಿನ ಪಕ್ಷಿ ನಾಡಲ್ಲಿ ಹಾರಾಡುವ ದಿನ ಬಕ್ಕು,ಧನ್ಯವಾದ

    ReplyDelete