Wednesday, October 21, 2009

ಆಟಿಸಂ ...ಒಂದು ಭಿನ್ನತೆ.

ಮೊದಲು ಇದನ್ನು ಪೀಟಿಕೆಯಿಂದ ಶುರು ಮಾಡೋಣ.
ಆಪಕೀ ಅಂತರಾ....ಎನ್ನುವ ಒಂದು ಮೆಘಾ ಧಾರಾವಾಹಿ ಝೀ ಟೀವಿಯಲ್ಲಿ ದಿನಾಲು ರಾತ್ರಿ ೮.೩೦ ರಿಂದ ಪ್ರಸಾರವಾಗುತ್ತಿದೆ.ಇದು ಇತ್ತೀಚಿನ ದಿನಗಳಲ್ಲಿ ಪ್ರಸಾರವಾಗುತ್ತಿರುವ , ಮನೋವಿಜ್ಞಾನಕ್ಕೆ ಸಂಬಂಧಿಸಿದ  ಒಂದು ಉತ್ತಮ ಧಾರಾವಾಹಿ ಎನ್ನಬಹುದು.

ಇದರ ಕಥಾವಸ್ತುವೇ ಆಟಿಸಂ.ಒಂದು ಆಟಿಸ್ಟಿಕ್ ಮಗು ಮನೆಯಲ್ಲಿದ್ದರೆ ಆ ಸಂಸಾರ ಏನೆಲ್ಲಾ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ ಎನ್ನುವುದನ್ನು ತುಂಬಾ ವಿವರವಾಗಿ,ನೈಜವಾಗಿ ತೋರಿಸುತ್ತಿದ್ದಾರೆ.ನೆರೆಹೊರೆಯವರ ತಿರಸ್ಕಾರ ,ಸಮಾಜದ ಪೂರ್ವಾಗ್ರಹ ,ನಂತರದಲ್ಲಿ ಆಟಿಸಂ ಬಗ್ಗೆ ಅರಿವು ಮೂಡಿಸುವ ಪ್ರಯತ್ನ,ಥೆರಪಿ ಇವುಗಳನ್ನು ತುಂಬಾ ವಿಸ್ತಾರವಾಗಿ ಚಿತ್ರಿಸಿದ್ದಾರೆ.

ನಮ್ಮ ನಡುವೆಯೇ ಈ ರೀತಿಯ ಮಗುವೊಂದಿದ್ದಿದ್ದರೆ ಧಾರಾವಾಹಿಯಲ್ಲಿ ವರ್ಣಿಸಿದಂತಹ ಸಮಸ್ಯೆಗಳೇ ಉದ್ಭವಿಸುತ್ತಿತ್ತೇನೋ..?ಸುತ್ತಲಿನ ಸಮಾಜ ಮಗುವಿನ ತೊಂದರೆಯನ್ನು ಹುಚ್ಚು ಎಂದು ಪರಿಗಣಿಸಿ ದೂರ ಸರಿಸುವುದು ಹಾಗು ತಾಯ್ತಂದೆಯರ ವಿಹ್ವಲತೆ ನೋಡುಗರನ್ನು ಯೋಚನೆಗೆ ಹಚ್ಚುತ್ತದೆ.


ಹಾಗಾದರೆ ಈ ಆಟಿಸಂ ಎಂದರೆ ಏನು ?ಅದರ ಗುಣ ಲಕ್ಷಣಗಳೇನು?

ಮೆದುಳಿನಲ್ಲಿರುವ ನರಗಳ ಬೆಳವಣಿಗೆಯಲ್ಲಿನ ಅವ್ಯವಸ್ಥೆಯೇ ಆಟಿಸಂ ಅಥವಾ ಆಟಿಸ್ಟಿಕ್.
ಇಂತಹಾ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಸಾಮಾಜಿಕ ಹೊಂದಾಣಿಕೆ ಮತ್ತು ಭಾಷೆಯ ಬಳಕೆಯಲ್ಲಿನ ತೊಡಕು ಎದ್ದು ಕಾಣುವ ಲಕ್ಷಣಗಳಾಗಿವೆ.ಇದು ಮುಖ್ಯವಾಗಿ ಆನುವಂಶಿಕ ತಳಹದಿಯನ್ನು ಹೊಂದಿದ್ದರೂ ಕೂಡಾ ಅದನ್ನು ಅರ್ಥೈಸಿ ಕೊಳ್ಳುವುದು ತುಂಬಾ ಕಠಿಣ ತರದ್ದಾಗಿದೆ. ಆಟಿಸಂ ನ ಲಕ್ಷಣಗಳು ಸುಮಾರಾಗಿ ಎರಡು ವರ್ಷದ ಮಕ್ಕಳಿರುವಾಗಿನಿಂದಲೇ ಕಾಣಿಸಿಕೊಳ್ಳುತ್ತದೆ.ಇದು ಮಗುವಿನಿಂದ ಮಗುವಿಗೆ ಭಿನ್ನವಾಗಿರುತ್ತದೆ.ಕಣ್ಣುಗಳಲ್ಲಿ ಕಾಂತಿ ಇಲ್ಲದಿರುವಿಕೆ,ಸಂವಹನದ ಕೊರತೆ ,ಪುನರಾವರ್ತಿತ ಕ್ರಿಯೆಗಳು(ಮಾಡಿದ್ದನ್ನೇ ಮಾಡುವುದು,ಒಂದೇ ಶಬ್ಧವನ್ನು ಪದೇ ಪದೇ ಉಚ್ಚರಿಸುತ್ತಿರುವುದು) ಒಬ್ಬರನ್ನೇ ನೆಚ್ಚಿ ಕೊಳ್ಳುವುದು ಇವು ಇತರ ಲಕ್ಷಣಗಳಾಗಿವೆ.
ಆದರೆ ಆಟಿಸ್ಟಿಕ್ ಮಕ್ಕಳು ಸಾಮಾನ್ಯ ಮಕ್ಕಳಂತೆ ನೆನಪಿನ ಶಕ್ತಿ ,ಸಮಸ್ಯೆ ಬಿಡಿಸುವಿಕೆ,ಗಣಿತ,ಕಲೆ ಇವುಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಬಲ್ಲರು.


ಪೋಷಕರು ಚಿಕ್ಕಂದಿನಲ್ಲಿಯೇ ಈ ತೊಂದರೆಯನ್ನು ಗುರುತಿಸಿ ಸೂಕ್ತ ಪಾಲನೆ, ಪೋಷಣೆ ಮತ್ತು ಉತ್ತಮ ತರಬೇತಿಯನ್ನು ಕೊಟ್ಟಲ್ಲಿ ಅವರನ್ನು ಕೂಡಾ ಸಮಾಜದ ಮುಖ್ಯವಾಹಿನಿಯಲ್ಲಿ ತರುವುದು ಕಷ್ಟ ಸಾಧ್ಯವೇನಲ್ಲ.ಸಮಾಜ ಇವರ ತೊಡಕನ್ನು ಅರಿತುಕೊಂಡು ,ಇದೊಂದು ರೋಗ ,ಹುಚ್ಚು ಸ್ವಲ್ಪ ಲೂಸು ಎಂಬಿತ್ಯಾದಿ ಹಣೆ ಪಟ್ಟಿ ಕಟ್ಟದೆ ಕೈಲಾದ ಸಹಾಯವನ್ನು ಮಾಡುವುದು ಹೊಣೆಯರಿತಕೆಲಸವಾಗಿದೆ.
ಇದು ಒಂದು ಅಸಮತೆ ಅಥವಾ ಭಿನ್ನತೆಯೇ ಹೊರತು ರೋಗವಲ್ಲ .ಆದರೆ ಇದಕ್ಕೆ ಉಪಶಮನವೇ ಹೊರತು ನಿವಾರಣೆ ಇಲ್ಲವೇ ಇಲ್ಲ.ಆಟಿಸ್ಟಿಕ್ ಮಗು ಆಟಿಸ್ಟಿಕ್ ವ್ಯಕ್ತಿಯಾಗಿಯೇ ಜೀವಿಸುವುದು ಅನಿವಾರ್ಯ.ನಿಯಮಿತ ಶಿಕ್ಷಣ ,ಥೆರಪಿ ಇವುಗಳಿಂದ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳ ಬಹುದು ಅಷ್ಟೆ.
ಇರುವ ಸಮಸ್ಯೆಯನ್ನು ಒಪ್ಪಿಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಮಾತ್ರ ಇದಕ್ಕೆ ಪರಿಹಾರ.ಪೋಷಕರ ಸಹನೆ,ಸಹಕಾರ ಅತ್ಯಗತ್ಯ.

10 comments:

 1. ಆಟಿಸಮ್ ಬಗೆಗಿನ ಈ ಧಾರವಾಹಿಯನ್ನು ನಮ್ಮನೆಯಲ್ಲಿ ನೋಡುತ್ತಾರೆ....
  ನಾನೂ ಕೂಡ ಕೆಲವೊಮ್ಮೆ ನೋಡುತ್ತೇನೆ..
  ತುಂಬಾ ಚೆನ್ನಾಗಿದೆ...

  ನೀವು ಆ ಮನಸ್ಥಿತಿಯನ್ನು ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದೀರಿ..

  ತುಂಬ ಉಪಯುಕ್ತ ಮಾಹಿತಿಗಳನ್ನು ಕೊಟ್ಟಿದ್ದೀರಿ...

  ಧನ್ಯವಾದಗಳು...

  ReplyDelete
 2. ನನ್ನ ಬರಹವನ್ನು ಗಮನಿಸಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.ಪ್ರಕಾಶ್ ಅವರೆ....

  ReplyDelete
 3. ನಿಮ್ಮ ಲೇಖನವನ್ನು ಓದಿ ನಾನು ಆ ಧಾರವಾಹಿಯನ್ನು ನೋಡಬೇಕೆನಿಸಿದೆ[ಸಾಮಾನ್ಯವಾಗಿ ನಾನು ಯಾವ ಧಾರವಾಹಿಯನ್ನು ನೋಡುವುದಿಲ್ಲ] ಚೆನ್ನಾಗಿ ಬರೆದಿದ್ದೀರಿ...

  ReplyDelete
 4. ಮಾನಸಿಕ ಸಮಸ್ಯೆಗಳ ಕುರಿತು ಜನಸಾಮಾನ್ಯರಿಗೆ ಈ ರೀತಿಯ ಮಾಹಿತಿ ದೊರಕಿದಲ್ಲಿ,ಬಳಲುತ್ತಿರುವವರಿಗೆ ಬಗ್ಗೆ ಜನರ ಮನೊಭಾವ ಸಕರತ್ಮಕವಾಗಿ ಬದಲಾಗಬಹುದು ಅನ್ನಿಸುತ್ತದೆ.ಮಹಿತಿ ಕುರಿತು ದನ್ಯವಾದಗಳು.

  ReplyDelete
 5. ನನ್ನ ಲೇಖನಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಕ್ಕೆ ತು೦ಬಾ ಧನ್ಯವಾದಗಳು.ಶಿವು ಹಾಗು ಮನಮುಕ್ತಾ ಅವರೆ.....

  ReplyDelete
 6. ಚುಕ್ಕಿ ಚಿತ್ತಾರ ಒಳ್ಳೆ ಚುಕ್ಕಿಗಳನ್ನ ಸೇರಿಸಿ ಉತ್ತಮ ಚಿತ್ತಾರ ಮೂಡಿಸಿದ್ದಿರಿ..ಮನೋಶಾಸ್ತ್ರದ ಹಲವಾರು ಕಗ್ಗಂಟುಗಳು ಬಿಡಿಸೋಕಾಗದೇ ಪುನರ್ ಜನ್ಮ, ಅತೀಮಾನವೀ ಶಕ್ತಿ ಹೀಗೆಲ್ಲಾ ಹೇಳೋದುಂಟು...ಚನ್ನಾಗಿ ಮೂಡಿದೆ ಲೇಖನ...ನನ್ನ ಬ್ಲಾಗ್ ಗೂ ಬನ್ನಿ..ನಿಮ್ಮ ಚುಕ್ಕಿ ಇಡಿ..

  ReplyDelete
 7. ನಿಜ ಅಕ್ಕ ,ಇಂತಹ ಮಕ್ಕಳನ್ನು ನೋಡುವ ಸಮಾಜದ ದೃಷ್ಠಿಯಲ್ಲಿ ಸುಧಾರಣೆಯಾಗಬೇಕಿದೆ. ಲೇಖನ ಚೆನ್ನಾಗಿದೆ, ಮಾಹಿತಿಪೂರ್ಣವಾಗಿದೆ.

  ReplyDelete
 8. ಮನೋವಿಜ್ಞಾನದ ಬರವಣಿಗೆ
  ಆಗಲಿ ನಿತ್ಯದ ಮೆರವಣಿಗೆ
  ಚೆನ್ನಾಗಿದೆ ಬರವಣಿಗೆ,ಅತ್ತಿಗೆ
  ಹೊರತರಬೇಕು ನೀನೊಂದು ಹೊತ್ತಿಗೆ.

  ReplyDelete
 9. ಬಾವ ಮತ್ತು ಸುಮಾ .... ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರೋತ್ಸಾಹಕ್ಕೆ ಥ್ಯಾ೦ಕ್ಸ್......

  ReplyDelete
 10. ಜಲನಯನ ಅವರೆ,

  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..

  ReplyDelete