Thursday, February 4, 2010

ಚಿಟ್ಟೆ ನೀನ್ಯಾರು.....?


ಒಗಟಾಗಿತ್ತು
ನನಗೆ...ನಿನ್ನಂತರಂಗ..
ಪುಸ್ತಕವೊಂದ ಎದೆಗವಚಿ ,
ಮುಂಗುರುಳನೊತ್ತಿ,
ರಸ್ತೆಯಲಿ ನಡೆವ ಕಾಲೇಜು ಕನ್ಯೆಯ
ಓರೆನೋಟ ನೋಡಿ
ಸಿಳ್ಳೆ ಹಾಕಿದ್ದ ಹುಡುಗ
''
ಬಣ್ಣದ ಚಿಟ್ಟೆ ಬಂತಲ್ಲಿ ನೋಡು..''
ಅನಿಸಿತ್ತು ನೀ ಪೋರಿಯೇ... ಇರಬೇಕು




ಆದರೂ
ಅನುಮಾನ ಕಾಡಿತ್ತು...
ಆಗಷ್ಟೇ ಬಿರಿದ ಹೂಮೊಗ್ಗ
ಮುದ್ದಿಸಿ ಮಕರಂದ ಹೀರುವಾಗ...
ಒರಟು ಮೀಸೆಯವ 'ಪೋರ ' ನೀನೆಂದು




ನೀ ಗಂಡೋ ...ಹೆಣ್ಣೋ...
ಮೂಡಿತ್ತು ಪ್ರಶ್ನೆ
ಬಗೆಹರಿಯದ ಪ್ರಶ್ನೆಯಾಗಿಯೇ ಕಾಡಿತ್ತು..
ಬದಲಾಗುವೆಯಲ್ಲ..ನೀ ಕವಿತೆಯಲ್ಲಿ
ಭಾವಕ್ಕೆ ತಕ್ಕಂತೆ ಕವಿಸಮಯದಲ್ಲಿ..!!!


23 comments:

  1. ಆಹಾ, ಸಮಸ್ಯೆಯೂ ಸಹ ಕವನವಾಗಿ ಹೊರಹೊಮ್ಮಬಹುದೆಂದು ತೋರಿಸಿದ್ದೀರಿ ನೀವು! ಇಂತಹ ಸಮಸ್ಯೆಯನ್ನು ಸೃಷ್ಟಿಸಿದ ಚಿಟ್ಟೆಗೆ
    ಧನ್ಯವಾದಗಳು.

    ReplyDelete
  2. ಅರೆ ವಾವ್..!
    ಭಾವನೆ ಮತ್ತು ಕಲ್ಪನೆಗೆ ಎಲ್ಲೆ ಎಲ್ಲಿದೇ..!!

    ReplyDelete
  3. ಚ್ನೆನಾಗಿದೆ,ಹುಡುಗರು ಬರೆಯುವುದನ್ನು ನೀವು ಬರೆದಿದ್ದೀರಿ !

    ReplyDelete
  4. mattomme chitragalu maatanaadive! kavite kooda chennagide. :)

    ReplyDelete
  5. ಕಾಕಾ..
    ನನ್ನ ಸಮಸ್ಯೆಯ ಕವನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

    ಮನಮುಕ್ತಾ
    ಸಮಸ್ಯೆಯ ಆಳ ಇಲ್ಲಿದೆ...!

    ವಿ.ಆರ್.ಭಟ್ರೆ..
    ನನ್ನ ಬ್ಲಾಗಿಗೆ ಸ್ವಾಗತ..
    ಚಿಟ್ಟೆ ಹೆಣ್ಣೆ೦ದು ಭಾವಿಸುವಲ್ಲಿ ನೀವೆ೦ದಿದ್ದು ಸರಿಯಾಗಿದೆ.
    ನಾನಿಲ್ಲಿ ಹೆಣ್ಣು, ಗ೦ಡು ಎರಡರ ಹೋಲಿಕೆಯನ್ನೂ ಕೊಟ್ಟಿದ್ದೇನೆ.ವ೦ದನೆಗಳು.

    ಕಾರ್ತೀಕ್
    ಮಾತಾಡುವ ಚಿತ್ರಗಳು ಕವಿತೆ ಹಾಡಿವೆ...ಅನ್ನಲೇ...!!
    ವ೦ದನೆಗಳು.

    ReplyDelete
  6. ಎಷ್ಟು ಚ೦ದ ಬರೆದಿದ್ದೀರಿ...! ಚಿತ್ರಗಳು ಕೂಡ ತು೦ಬಾ ಸು೦ದರವಾಗಿವೆ...

    ReplyDelete
  7. ನಿಮ್ಮ ಮನದಲ್ಲಿ ಈ ಭಾವಗಳು ಹೇಗೆ ಮೂಡುತ್ತವೆ ಎಂಬುದೇ ನನಗೆ ಆಶ್ಚರ್ಯ..!! Any way.. ಕವನ..ಕನದೊಳಗೊಂದು ಚಿಂತನೆ..ಅದರೊಲ್ಲೊಂದು ಸಮಸ್ಯೆ...ಅದಕ್ಕೆ ಮತ್ತೊಂದು ಭಾವ...ಅಬ್ಬಾ..ಚುಕ್ಕಿ..ಚಿಟ್ಟೆ ಎರಡಕ್ಕೂ ಪಾರವೇ ಇಲ್ಲ..! ಧನ್ಯವಾದಗಳು

    ReplyDelete
  8. ಚುಕ್ಕಿ ಚಿತ್ತಾರ ಮೂಡಿಸಿದರೆ ಈಗ ಚಿಟ್ಟೆ ಚಿತ್ತಾರದ ಸರದಿಯೇ?
    ಬಹಳ ಚನ್ನಾಗಿವೆ ಸಾಲುಗಳು, ಹೂವಿನ ಸಾಲಿನಲ್ಲಿ ಹಾರಾಡುವ ಚಿಟ್ತೆಯಂತೆ ಪದಗಳನ್ನು ಹರಿಯಬಿಟ್ಟಿದ್ದೀರಿ...

    ReplyDelete
  9. ಒಳ್ಳೆ ಹೋಲಿಕೆ...
    ಚೆನ್ನಾಗಿದೆ...

    ReplyDelete
  10. ಫೋಟೋಸ್ ತುಂಬಾ ಚೆನ್ನಾಗಿವೆ ...
    ಸಾಲುಗಳು ಕೂಡ ...:)

    ReplyDelete
  11. ಸುಧೇಶ್ ಶೆಟ್ಟಿಯವರೇ..
    ನನ್ನ ಕವನ ಮತ್ತು ಫೋಟೋಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ಸುಬ್ರಹ್ಮಣ್ಯ ಭಟ್ರೇ...
    ಭಾವಗಳು ಹೇಗೆ ಹುಟ್ಟುತ್ತವೆಯೊ ಗೊತ್ತಿಲ್ಲ....ನನಗೂ.
    ತೀರಾ ಭಾವಜೀವಿಯಲ್ಲ ನಾನು..
    ನಿಮಗೆಲ್ಲ ಇಷ್ಟವಾದರೆ ಅಲ್ಲಿ ನನ್ನದೊ೦ದು ಸಾರ್ಥಕ್ಯ ಭಾವನೆ..
    ನಿಮ್ಮ ವಿಶ್ವಾಸಕ್ಕೆ ಋಣಿ....

    ಜಲನಯನ ಸರ್..
    ಮತ್ಸ್ಯಗಳ ಮಧ್ಯದಿ೦ದ ಚುಕ್ಕಿಚಿತ್ತಾರದ ಚಿಟ್ಟೆ ಚಿತ್ತಾರವನ್ನು ನೋಡಿ ಬಣ್ಣಿಸಿದ್ದೀರಿ...ಪ್ರತಿಕ್ರಿಯಿಸಿದ್ದೀರಿ..
    ನಿಮಗೆ ಅನ೦ತಾನ೦ತ ಧನ್ಯವಾದಗಳು.

    ಸವಿಗನಸು..ಮಹೇಶ್..
    ನಿಮ್ಮ ಮೆಚ್ಚುಗೆಗೆ ವ೦ದನೆಗಳು.

    ದಿವ್ಯಾ ಹೆಗ್ಡೆ....
    ನಿಮ್ಮ ಪ್ರತಿಕ್ರಿಯೆಗೆ, ಪ್ರೋತ್ಸಾಹಕ್ಕೆ ಧನ್ಯವಾದಗಳು.

    ReplyDelete
  12. ಚಿತ್ರ, ಕಲ್ಪನೆ ಮತ್ತೆ ಬರಹ ಎಲ್ಲವೂ ಚೆನ್ನಾಗಿದೆ.

    ReplyDelete
  13. ನಿಮ್ಮ ಈ ಕವನ ಓದಿ .. ಕಲ್ಪನೆಗೆ , ಭಾವನೆಗಳಿಗೆ ಒಂದು ಮಿತಿ ಅನ್ನುವುದು ಇಲ್ಲ ಅಂತ
    ಸ್ಪಷ್ಟವಾಗಿ ಗೋಚರಿಸುತ್ತಿದೆ. ಸುಂದರ ಕಲ್ಪನೆ ಹಾಗು ಅಷ್ಟೆ ಸುಂದರ
    ಚಿಟ್ಟೆಗಳ ಛಾಯಾಚಿತ್ರ ಕೂಡ.

    ReplyDelete
  14. ಅತ್ತ್ಯುತ್ತಮ ಚಿತ್ರಗಳಿಗೆ ಒಪ್ಪವಾದ ಕಾವ್ಯ ಸ೦ವಾದದ ತೋರಣ. ನವಿರು ಹಾಸ್ಯ. ಚೆ೦ದದ ಬರಹ. ನಿಜವಾಗಿಯೂ ಚುಕ್ಕಿ ಚಿತ್ತಾರವೇ......

    ReplyDelete
  15. ಇದು ಸಮಸ್ಯೆಯನ್ನು ಕವನ ರೂಪದಲ್ಲಿ ಚಿತ್ರಿಸಿದ್ದೀರಿ .......... ಚಿತ್ರ ಕವನ ಚೆನ್ನಾಗಿದೆ....... ಫೋಟೋ ಸೂಪರ್... ........

    ReplyDelete
  16. ಸುಂದರ ಚಿಟ್ಟೆಗಳ ಚಿತ್ರಕ್ಕೆ ತಕ್ಕಂತೆ ಸುಂದರ ಕವನ.
    ನಿಮ್ಮಲ್ಲಿ ಮೂಡಿದ ಭಾವನೆಗಳನ್ನು ಪದಗಳಲ್ಲಿ ಚೆನ್ನಾಗಿ ಪೋಣೀಸಿದ್ದೀರಿ.

    ReplyDelete
  17. ಚುಕ್ಕಿ ಚಿತ್ತಾರ
    ಸೊಗಸಾದ ಫೋಟೋಗಳೊಂದಿಗೆ ಸುಂದರ ಕವನ
    ಓದೋಕೆ ಬಹಳ ಖುಷಿ ಆಗುತ್ತೆ

    ReplyDelete
  18. ತುಂಬಾ ಚೆನ್ನಾಗಿದೆ ಈ ಭಾವನೆ..ಮತ್ತು ಕಲ್ಪನೆ...

    ReplyDelete
  19. chitragaLu adakke takkanaada saalugaLu ellavu heLi maadisidantide. istavaayitu

    ReplyDelete
  20. ಸಮಸ್ಯೆಯನ್ನೇ ಕವನವಾಗಿ ಬರೆದಿದ್ದೀರಾ .... ಫೋಟೋ ಚೆನ್ನಾಗಿದೆ.....

    ReplyDelete
  21. ನಾರಾಯಣ ಭಟ್,
    ಶ್ರೀಧರ್,
    ಸೀತಾರಾ೦ ಸರ್,
    ದಿನಕರ,
    ಶಿವು ಸರ್,
    ಸಾಗರದಾಚೆಯ ಇಂಚರ,
    ಶಿವಪ್ರಕಾಶ್,
    ಮನಸು
    ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳು.

    ಜ್ಯೋತಿ ಶೀಗೆಪಾಲ್ ಅವರೇ..
    ನನ್ನ ಬ್ಲಾಗಿಗೆ ಸ್ವಾಗತ..
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  22. ಕವಿಯನ್ನೋದಿದ ಮೇಲೆ ನನಗೂ ಸಂಶಯ ಮೂಡತೊಡಗಿದೆ, ಚಿಟ್ಟೆ ಗಂಡೋ ಹೆಣ್ಣೋ ಎಂದು :) ಸುಂದರ ಚಿತ್ರ, ಅದಕ್ಕೆ ತಕ್ಕುದಾದ ಕವನ. ಎರಡೂ ಇಷ್ಟವಾಯಿತು.

    ReplyDelete