Wednesday, February 17, 2010

ಅಂದು ಸಂಜೆಯ ಹೊತ್ತು...

ತಿಳಿಗೊಳದಲಲ್ಲೊಂದು
ಸುಳಿಯೆದ್ದು ಬಂದಂತೆ
ಹೊನಲ ತೋಟದಿ ಮಿಂಚಿ
ಮರೆಯಾದಂತೆ ಮಿಣುಕು ಹುಳು..
ಬೆನ್ನಟ್ಟಿ ಬರುತಲಿತ್ತು
ಅರ್ಥವಾಗದ ಭಾವ
ಆಚೀಚೆ ಸುಳಿಸುಳಿದು ತನ್ನಷ್ಟಕೆ.


ವ್ಯಕ್ತವಾಗದ ಬರಿಯ
ಅಸ್ಪಷ್ಟ ಚಹರೆಯ
ಸುತ್ತ ಹತ್ತೆಂಟು ಅಕ್ಷಿ ಸಾಕ್ಷಿ
ಅವಲೋಕನವೋ .. ಅನುಶಾಸನವೋ..
ಕತ್ತೆತ್ತಿ ನೋಡಲೆನಗೆ
ಭಯ, ಗೊಂದಲ
ಮತ್ತಲ್ಲೇ ಮಧುರ ಬೆಂಬಲ
ಸುಪ್ತವಾಗಿಯೋ... ಗುಪ್ತವಾಗಿಯೋ
ಆಸೆಯೊಂದರ ಮಂಜು ಹನಿದಂತೆ
ಪವನನವಸರದಿತೀಡಿ ನಾಚಿ
ಸರಿಯುವ ಗಂಧದಂತೆ
ಒಲವೊಂದು ಬಳಸಿ
ಪಿಸುಮಾತನುಸುರಿದಂತೆ

ಅಂದು ನನ್ನ ವಧುಪರೀಕ್ಷೆ.....!
.
.
.
ಮತ್ತೆ ತಿಂಗಳಿಗೆ ವಧೂಪ್ರವೇಶ......!!!!!

22 comments:

  1. ಅರ್ಥವಾಗದ ಭಾವಕ್ಕೆ ಮದುವೆ ಎ೦ಬ ಮೂರಕ್ಷರ ಎಷ್ಟೊ೦ದು ಅರ್ಥ ಸಾರುವುದು ಅಲ್ಲವೆ?
    ಚಿತ್ರ ಕವನ ಎರಡು ಸು೦ದರವಾಗಿದೆ.

    ReplyDelete
  2. ವಧುಪರೀಕ್ಷೆಯ ಪೂರ್ವಭಾವಿ ಭಾವನೆಗಳನ್ನು ತುಂಬ ಸುಂದರವಾಗಿ ವರ್ಣಿಸಿದ್ದೀರಿ!

    ReplyDelete
  3. kavana tumbaa chennaagide........ avyakta bhaavada mukhagalannu tilisida kavana.....

    ReplyDelete
  4. ಅಂದು ಅರ್ಥವಾಗದ್ದನ್ನ ಇಂದು ಎಲ್ಲರಿಗೂ ಅರ್ಥಮಾಡಿಸಿದಿರಲ್ಲ, ಚೆನ್ನಾಗಿದೆ!

    ReplyDelete
  5. ಪರೀಕ್ಷೆಗೆ ಮುನ್ನ ವಧುವಿನಲ್ಲಿ ಇಷ್ಟೆಲ್ಲಾ ಭಾವಗಳಿರುತ್ತವೆಯೇ?! :)...ಸೊಗಸಾಗಿದೆ ವಧುಪರೀಕ್ಷೆಯ ಕವನ. ಚಿತ್ರಗಳೂ ಸಹ. ಧನ್ಯವಾದ

    ReplyDelete
  6. ತು೦ಬಾ ಚೆ೦ದದ ಭಾವ ಅಧು ಪರೀಕ್ಷೆಯ ಮೇಲೆ. ಈ ಸಾಲು ತು೦ಬಾ ಇಷ್ಟವಾಯಿತು -"ಗುಪ್ತವಾಗಿಯೋ ಆಸೆಯೊಂದರ ಮಂಜು ಹನಿದಂತೆ"

    ReplyDelete
  7. 'ಚುಕ್ಕಿಚಿತ್ತಾರ' ಅವ್ರೆ..,

    ಪದಗಳ ಬಳಕೆ ತುಂಬಾ ಚೆನ್ನಾಗಿದೆ...

    ನನ್ನ 'ಮನಸಿನಮನೆ'ಗೆ ಬನ್ನಿ:http://manasinamane.blogspot.com/

    ReplyDelete
  8. ಭಾವ ತುಂಬಿದ ಕವನ...
    ಚಿತ್ರದೊಂದಿಗೆ ಸೊಗಸಾಗಿದೆ.

    ReplyDelete
  9. tumba chennagide chitra haagu saalugaLu hosa bhaava tumbiddeeri

    ReplyDelete
  10. ವಾಹ್ . ಸರಳ ನುಡಿಗಳಲ್ಲಿ ಹೆಣ್ಣಿನ ಭಾವನೆಯನ್ನು ವ್ಯಕ್ತಪಡಿಸಿದ್ದೀರಿ.
    ಚೆನ್ನಾಗಿದೆ.

    ReplyDelete
  11. ವಧು ಪರೀಕ್ಷೆಗೆ ತಯಾರಾಗುವ ಮುನ್ನ, ಹುಡುಗಿಯ ಮನಃಸ್ಥಿತಿ ಹೇಗಿರಬಹುದೆಂಬುದನ್ನು ಕವಿತೆಯಲ್ಲಿ ಬಹು ಚೆನ್ನಾಗಿ ಕಾಣಿಸಿದ್ದೀರಿ.

    ReplyDelete
  12. ಮನಮುಕ್ತಾ..
    ಸುನಾಥ್ ಕಾಕ.
    ದಿನಕರ ಮೊಗೇರ...
    ವಿ.ಆರ್.ಭಟ್...
    ಸುಬ್ರಹ್ಮಣ್ಯ ಭಟ್..
    ಸೀತಾರಾ೦..ಸರ್
    ಗುರು-ದೆಸೆ....
    ಸವಿಗನಸು..
    ಮನಸು..
    ಕಾರ್ತೀಕ್..
    ಶ್ರೀಧರ್...
    ತೇಜಸ್ವಿನಿ...
    ಪ್ರತಿಕ್ರಿಯಿಸಿದ ಎಲ್ಲರಿಗೂ ವ೦ದನೆಗಳು.

    ReplyDelete
  13. ಹುಡುಗಿಯರ ಮನಸ್ಥಿತಿಯನ್ನ ಚಂದವಾಗಿ ಕವನದಲ್ಲಿ ಬರೆದಿದ್ದೀರಿ

    ReplyDelete
  14. ಪುಟ್ಟ ಪುಟ್ಟ ಸಾಲುಗಳು ಬೆಟ್ಟದಂತಿದ್ದವೇನೋ ಅಂದು...ಯಾರೋ..? ಹೇಗೋ? ಎಲ್ಲೋ? ಈ ಎಲ್ಲಾ ಯಕ್ಷ ಪ್ರಶ್ನೆಗೆ ಆಗ ನುಣಿಚಿಕೊಂಡಿದ್ದ ಉತ್ತರ ಈಗ ಸಿಕ್ಕಿದೆಯಲ್ಲಾ..ಅದನ್ನು ನಮಗೂ ಉಣಬಡಿಸಿದಿರಿ....ಧನ್ಯವಾದ ಚಂದದ ಸಾಲುಗಳಿಗೆ.

    ReplyDelete
  15. chennagide nimma kavana haagu chitragalu.. :)

    ReplyDelete
  16. ನಿಮ್ಮ ವಧುಪರೀಕ್ಷೆಯ ಮೊದಲು ಬಂದ ಭಾವಗಳನ್ನು ಕವನದಲ್ಲಿ ಸೊಗಸಾಗಿ ಬರೆದಿದ್ದೀರಿ...
    ಸುಪ್ತವಾಗಿಯೋ..
    ಗುಪ್ತವಾಗಿಯೋ...ಪದಪ್ರಯೋಗ ಮೂಡಿದ್ದು ನಿಮ್ಮ ಸುಂದರ ಕವಿಸಮಯದಲ್ಲಿ ಅಂತ ನನಗನ್ನಿಸುತ್ತೆ...

    ReplyDelete
  17. ತು೦ಬಾ ಸೀರಿಯಸ್ ಆಗಿ ಓದುತ್ತಿದ್ದವನಿಗೆ ಕೊನೆಯಲ್ಲಿ ಟ್ವಿಸ್ಟ್ ಕೊಟ್ಟಿದ್ದೀರಲ್ಲಾ...!

    ಚೆನ್ನಾಗಿದೆ :)

    ReplyDelete
  18. ತು೦ಬಾ ಸೀರಿಯಸ್ ಆಗಿ ಓದುತ್ತಿದ್ದವನಿಗೆ ಕೊನೆಯಲ್ಲಿ ಟ್ವಿಸ್ಟ್ ಕೊಟ್ಟಿದ್ದೀರಲ್ಲಾ...!

    ಚೆನ್ನಾಗಿದೆ :)

    ReplyDelete
  19. ರ೦ಜಿತಾ...
    ನನ್ನ ಬ್ಲಾಗಿಗೆ ಸ್ವಾಗತ.ವ೦ದನೆಗಳು.

    ಜಲನಯನ..ಸರ್
    ಸುಮಾ..
    ಶಿವು ಸರ್..
    ಸುಧೇಶ್ ಶೆಟ್ಟಿ...
    ಪ್ರತಿಕ್ರಿಯಿಸಿದ ಎಲ್ಲರಿಗೂ ವ೦ದನೆಗಳು...

    ReplyDelete
  20. ಹಾಯ್ ಚುಕ್ಕಿ ಚಿತ್ತಾರ


    ತುಂಬಾ ಸುಂದರವಾಗಿ ತಳಮಳವನ್ನು ಚಿತ್ರಿಸಿದ್ದೀರ


    ಪ್ರವಿ

    ReplyDelete