ಈ ನೇಮಿಚಂದ್ರ ಇಷ್ಟೊಂದು ಕಾಡುತ್ತಾರೆ ಅಂತ ಗೊತ್ತಾಗಿದ್ದೇ ಅವರ ಪೆರುವಿನ ಪವಿತ್ರ ಕಣಿವೆಯಲ್ಲಿ ಅನ್ನುವ ಪ್ರವಾಸ ಕಥನವನ್ನು ಓದಿದಾಗಲಿಂದ. ಸುಧಾದಲ್ಲಿ ಧಾರಾವಾಹಿಯಾಗಿ ಪ್ರಕಟಿಸುತ್ತಿರುವಾಗಲೂ ಓದಿದ್ದೆ.. ಆದರೆ ಈಗ ಪುಸ್ತಕ ರೂಪದಲ್ಲಿ ಒಂದೇ ಸಲ ಮುಕ್ಕಿದಂತೆ ಓದಿದ್ದೇನೆ. ಅವರು ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡು ಹಾರಿದ್ದು, ದೇಶ ದೇಶ ಸುತ್ತಿದ್ದು, ಅಲ್ಲಿ ಸೋವಿಯಲ್ಲಿ ಅಮೂಲ್ಯವಾದ ಅನುಭವಗಳನ್ನು ಇನ್ನಿಲ್ಲದಂತೆ ಚೀಲದಲ್ಲಿ ತುರುಕಿಕೊಂಡಿದ್ದು, ಅದನ್ನು ಒಂದೂ ಕೊಂಡಿ ತಪ್ಪದಂತೆ ಮತ್ತೆ ಚೀಲದಿಂದ ತೆಗೆದು ಬರಹಕ್ಕೆ ಭಟ್ಟಿ ಇಳಿಸಿದ್ದು ,,,, ಇವೆಲ್ಲವೂ ನನಗಂತೂ ರೋಚಕವಾಗಿ ಮನಸ್ಸಿನಾಳಕ್ಕೆ ಇಳಿಯುತ್ತದೆ. ಸುಧಾದಲ್ಲಿ ಅವರ ಇಡಾಸ್ಕಡರ್ ಕುರಿತಾದ ಲೇಖನವನ್ನು ಸಹಾ ಇನ್ನಿಲ್ಲದ ಕುತೂಹಲದಿಂದ ಓದಿದ್ದೆ. ಈಗೀಗ ಕನಸಿನಲ್ಲಿಯೂ ಕೂಡಾ ಪೆರುವಿನ ಬೀದಿಗಳೇ, ಪರ್ವತಗಳೇ ಕಾಣಿಸುತ್ತಿವೆ. ತಕ್ಷಣ ಪೆರುವಿಗೇ ಹೊರಟು ಬಿಡೋಣ ಅನ್ನಿಸಿಬಿಡುತ್ತದೆ.
ಪ್ರತೀ ಸಲ ಅವರ ಪುಸ್ತಕ ಕೈಗೆತ್ತಿಕೊಳ್ಳುವಾಗ ನಾನೂ ಅವರ ಜೊತೆ ಕೈ ಚೀಲದಂತೆ ಹೊರಟು ಬಿಡುತ್ತೇನೆ ಮನಸ್ಸಿನಲ್ಲಿಯೇ.. ಅಷ್ಟೊಂದು ತಾದಾತ್ಮ್ಯ ಭಾವವನ್ನು ಮೂಡಿಸುತ್ತದೆ ಅವರ ವಿಚಾರಗಳು ಮತ್ತು ಅದನ್ನು ಅವರು ಮಂಡಿಸುವ ಬಗೆ. ಅವರು ಭಯವಿಲ್ಲದೆ ಮುಂದೆ ಮುಂದೆ ಹೋಗುತ್ತಿದ್ದರೆ ನನಗೆ ಮಾತ್ರಾ ಭಯ ಶುರುವಾಗುತ್ತದೆ. ಎರಡೆರಡು ತಿಂಗಳು ಅದು ಹೇಗೆ ಆರೋಗ್ಯವನ್ನು ಕಾಪಾಡಿಕೊಂಡರೋ.. ? ಹೇಗೆ ಮುಂಚಿತವಾಗಿ ಪ್ಲಾನೇ ಮಾಡಲು ಅವಕಾಶ ಸಿಗದ ಸ್ಥಳಗಳಿಗೆಲ್ಲ ಹೋಗಿಬಂದರೋ, ಆಹಾರವನ್ನು ಹೊಂದಿಸಿಕೊಂಡರೋ ..? ಆಶ್ಚರ್ಯದ ಜೊತೆ ನನಗೆ ಭಯ ಆಗುತ್ತದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಶ್ರೀಮಂತ ಅನುಭವಗಳನ್ನೆಲ್ಲಾ ಬಿಟ್ಟೂ ಬಿಡದೇ ಎಲ್ಲವನ್ನೂ ಮೂಟೆ ಕಟ್ಟಿ ತಂದು ಸುರಿದರೆ ಒಮ್ಮೆಲೇ ಭ್ರಾಂತಿಯೇ ಆಗುತ್ತದೆ. ಅದೂ ಒಬ್ಬ ಹೆಣ್ಣು ಮಗಳು ಎಲ್ಲಾ ತರದ ಕಷ್ಟಗಳಿಗೂ ಹೊಂದಿಕೊಳ್ಳುತ್ತಾ ಕೇವಲ ಕನಸನೊಂದೆ ಬೆನ್ನಟ್ಟಿ ಹೋಗಿ ಕದ್ದು ತರುವುದಿದೆಯಲ್ಲ..! ಅದು ರೋಮಾಂಚನವನ್ನು ಉಂಟು ಮಾಡುತ್ತದೆ.
ನಾವು ಎಲ್ಲಿ ಪ್ರವಾಸ ಹೋಗಬೇಕಾದರೂ ಮುಂಚಿತವಾಗಿ ತೆಗೆದುಕೊಳ್ಳುವ ಮುಂಜಾಗ್ರತೆಯೇ ಎಲ್ಲಕ್ಕಿಂತ ಭಾರವಾಗಿರುತ್ತದೆ..! ಯಾವ ತರದ ರೂಮು ಬೇಕು..? ಯಾವ ಹೋಟೆಲಲ್ಲಿ ಯಾವ ತರದ ತಿನಿಸು ಸಿಗುತ್ತದೆ..? ಎಲ್ಲಿ ಏನು ನೋಡಲು ಸಿಗುತ್ತದೆ..? ಯಾವ ಸಮಯಕ್ಕೆ ಎಲ್ಲಿಗೆ ಹೋಗುವುದು? ಎಲ್ಲಿ ನಿಂತ್ಕೋ ಬೇಕು ಎಲ್ಲಿ ಕೂತ್ಕೋ ಬೇಕು ? ಎನ್ನುವುದರ ಪಟ್ಟಿಯನ್ನು 'ಅ' ದಿಂದ 'ಳ' ವರೆಗೆ ಮೊದಲೇ ತೀರ್ಮಾನಿಸಿ ಬರೆದುಕೊಂಡು, ಅದರ ಪ್ರಕಾರ ಚಾಚೂ ತಪ್ಪದೆ ಹಾಕಿಕೊಂಡ ಬಟ್ಟೆಯ ಇಸ್ತ್ರಿ ಮುರಿಯದಂತೆ, ಮುಖದ ಮೇಕಪ್ಪು ಸರಿಯದಂತೆ, ಚಪ್ಪಲಿಗೆ ಚೂರೂ ನೋವಾಗದಂತೆ ಹೋಗಿ ಬರುವ ಪ್ರವಾಸದ ಅನುಭವಗಳಿಗೂ, ಹೋದಲ್ಲೆಲ್ಲಾ ಸಿಕ್ಕಷ್ಟೂ ಅನುಭವಗಳನ್ನು ಕೊಳ್ಳೆ ಹೊಡೆಯುವ ನೇಮಿಚಂದ್ರರ ಕಡಿಮೆ ಖರ್ಚಿನ ಶ್ರೀಮಂತ ಪ್ರವಾಸ ಕಥನಕ್ಕೂ ಎಲ್ಲಿಂದೆಲ್ಲಿಯ ಹೋಲಿಕೆ ..? ಆ ಪೂರ್ಣ ಚಂದ್ರನಿಗೂ ಭೂಮಿಗೂ ಇರುವಷ್ಟು ಅಂತರ ..!!
ಆಕೆಗೊಂದು ದೀರ್ಘ ಪ್ರಣಾಮ...

ಕೆಲವೊಂದು ಪುಸ್ತಕಗಳೇ ಹಾಗೆ ಓದಿದರೆ ಒಮ್ಮಿಂದೊಮ್ಮೆ ಅದರಿಂದ ಹೋಗಿಬಿಡುತ್ತೇವೆ. ನೀವು ಹೇಳಿದಂತೆ ನೇಮಿಚೆಂದ್ರ ಅವರ ಪುಸ್ತಕ ಓದಬೇಕು ಎನಿಸುತ್ತೆ ನಾವು ಪ್ರವಾಸ ಹೋಗಬಹುದು ಕನಸಿಗೆ ರೆಕ್ಕೆ ಕಟ್ಟಿಕೊಂಡು ಏನಂತೀರಿ.
ReplyDeleteತಮ್ಮ ಅನುಭವಗಳನ್ನು ಸಾದೃಶ್ಯವೆನಿಸುವ೦ತೆ ಬರಹದಲ್ಲಿ ಮೂಡಿಸುವ ಕಲೆ ಸಾಮಾನ್ಯವಲ್ಲ... ನಿಜ.. ಶ್ಲಾಘನೀಯ.
ReplyDeleteನಮಗೂ ನೇಮಿಚಂದ್ರರ ಕೃತಿಗಳು ಇಷ್ಟ.
ReplyDelete' ಪೆರುವಿನ ಪವಿತ್ರ ಕಣಿವೆಯಲ್ಲಿ' ಓದಿಲ್ಲ.
ಯಾದ್ ವಶೇಮ್ ನಮಗೆ ಇಷ್ಟ ಆಗಿತ್ತು.
ಸ್ವರ್ಣಾ
Nemichandra aa kaaranakkaagi nanagoo ishta aagtaare ..
ReplyDeleteಶ್ರೀಮತಿ ನೇಮಿಚಂದ್ರ ರ ಬರಹ ಗಳೇ ಹಾಗೆ . ಪ್ರತಿ ಆದಿತ್ಯವಾರ ಉದಯವಾಣಿಯ ಅವರ ಲೇಖನ ಓದದೆ ಚಹ ಹಿಡಿಸುದಿಲ್ಲ . ಎಷ್ಟೊಂದು ಸರಳವಾಗಿ ಎಳೆಎಳೆಯಾಗಿ ವಿಷಯವನ್ನು ನಮಗೆ ಮನದಟ್ಟು ಮಾಡುತ್ತಾರೆ. ಅವರ ಅನುಭವ ಕಥನಗಳು ಅದ್ಭುತ . ಸರಳ ಭಾಷೆಯಲ್ಲೇ ಅನುಭವನ್ನು ಸಾರಾಗವಾಗಿ ಹಂಚಿಕೊಳ್ಳುತ್ತಾರೆ .
ReplyDeleteNemichandra bareda 'peruvina pavitra kaniveyalli' oduvaaga avara jotege naanu idda anubhava .. ಆಕೆಗೊಂದು ದೀರ್ಘ ಪ್ರಣಾಮ...
ReplyDeleteನೇಮಿಚಂದ್ರ ನಾನೂ ಮೆಚ್ಚುವ ಒಬ್ಬರು. ಸರಳ ಮತ್ತೆ ಸುಂದರ.
ReplyDeleteಕೆಲವು ಲೇಖಕರ ಬರವಣಿಗೆಯ ಮಹತ್ವವೇ ಅಂತಹುದು. ಓದುಗನಿಗೆ ಪ್ರತ್ಯಕ್ಷ ಅನುಭವದ ಮನವರಿಕೆ ಮಾಡಿಕೊಡುತ್ತಾರೆ. ಅಂತಹ ಕೆಲವೇ ಕೆಲವು ಕವಿಗಳಲ್ಲಿ ಶ್ರೀಮತಿ ನೆಮಿಚಂದ್ರರು ಒಬ್ಬರು.
ReplyDeleteಒಳ್ಳೆಯ ಮಾಹಿತಿಯೊಂದನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ಹೌದು ವಿಜಯಶ್ರೀ, ನೇಮಿಚಂದ್ರ ತಮ್ಮ ಬರಹಗಳಿಂದ ನಮ್ಮನ್ನು ಮಂತ್ರಮುಗ್ಧಗೊಳಿಸುವ ಲೇಖಕಿ. ಅವರ ಬರಹದ ಆಳ, ಸರಳತೆ, ಆಪ್ತತೆ ಎಷ್ಟೋ ದಿನದವರೆಗೂ ನಮ್ಮನ್ನು ಕಾಡುತ್ತಲೇ ಇರುತ್ತವೆ.
ReplyDeleteನೀವು ಹೇಳೋದು ಸರಿ .. ಕೆಲ ಲೇಖಕರ ಕೃತಿಗಳೇ ಅವರ ನೆನಪನ್ನು ಮತ್ತೆ ಮತ್ತೆ ತಂದು ನಾವೇ ಅವರಾಗಿ ಹೋದಂತಹಾ ಅನುಭವ ನೀಡುತ್ತದೆ
ReplyDeleteಕಾಡುವ ಬರಹಗಳು ಅವರದ್ದು. ಎಷ್ಟು ಹೇಳಿದರೂ ಕಡಿಮೆಯೆ !.
ReplyDeleteನೇಮಿಚಂದ್ರರ ಹಲವಾರು ಅಭಿಮಾನಿಗಳಲ್ಲಿ ನಾನೂ ಒಬ್ಬ.ಅವರ'ಸಮಗ್ರ ಕಥೆಗಳು' ಸಂಕಲವನ್ನು ಓದಿ ದಂಗಾಗಿದ್ದೆ.ಅವರ'ಬದುಕು ಬದಲಿಸಬಹುದು'ಪುಸ್ತಕವೂ ಬಹಳ ಇಷ್ಟವಾಗಿತ್ತು.ಅವರ ಪ್ರವಾಸ ಕಥನಗಳನ್ನು ಓದಬೇಕು.
ReplyDeletenemichandra avara barahagala shailiyee adbuta. avaru odugarannu avara joteyee karedoyyuttarembudu satyavada matu.. yaad va shem saha antha ondu adbuta prayanada anubhava..
ReplyDeleteನೇಮಿಚಂದ್ರರ ಬರಹಗಳೇ ಹಾಗೇ... ನಮ್ಮನ್ನು ಮೈಮರೆವಂತೆ ಮಾಡುತ್ತವೆ..
ReplyDeleteನೇಮಿಚಂದ್ರ ನನ್ನನ್ನು ಕಾಡಲು ಸಾಧ್ಯವೇ ಇಲ್ಲ.ಯಾಕೆಂದರೆ ನಾನು ಅವರ ಪುಸ್ತಕ ಓದಿಯೇ ಇಲ್ಲ:-)
ReplyDeleteಹೌದು .. ನನಗೂ ಅವರ ಬರಹಗಳು ಬಹಳವೇ ಇಷ್ಟವಾಗುತ್ತದೆ. ಅವರು ಬರೆಯುವ ರೀತಿಯೇ ಹಾಗೆ . ನಾವೇ ಆ ಸ್ಥಳದಲ್ಲಿದ್ದಂತೆ ಭಾಸವಾಗುವ ಹಾಗೆ .ಯಾದ್ ವಶೇಮ್ (ನೂರು ಸಾವಿರ ಸಾವಿನ ನೆನಪು ) ಓದಿದ್ದೆ ನಾನು.
ReplyDeleteNemichandrara barahagaLu andare nanagoo achchumechchu... avara "baduku badalisabahudu", "Nemichandrara samagra kathegaLu" mattu "yaad vashem" odiddene... neevu odida pustaka oduvudu innu baaki idhe... avara baraha shailiye odugarannu mantramugdhavaagisuvantaddu :)
ReplyDeleteನಿಜಕ್ಕೂ ಹೌದು ವಿಜಿ. ಅವರ ಬರಹಗಳನ್ನು ಓದುವಾಗ ನಾನೂ ನಾನಾಗಿರದೇ ಬರಹದ ಒಂದು ಭಾಗವಾಗಿಬಿಡುತ್ತೇನೆ. ಅವರ ಪ್ರವಾಸ ಕಥನದಲ್ಲಿ ನಾನೋ ಅವರ ಸಹಪ್ರವಾಸಿಯಾಗಿ ಬಿಡುತ್ತೇನೆ. ಅದು ಅವರ ಬರವಣಿಗೆಯ ಶೈಲಿ ! ಓದುಗರನ್ನು ತನ್ನ ಭಾಗವಾಗಿಸಿಕೊಂಡು ಬಿಡುವುದು ! " ಪೆರುವಿನ ಪವಿತ್ರ ಕಣಿವೆಯಲ್ಲಿ " ಓಡಾಡುವಾಗ .. ಅವರ ಜೊತೆಗೆ ಹೋಗಿದ್ದ ಅವರ ಸಹೋದ್ಯೋಗಿಯ ಬಗ್ಗೆ ತುಂಬಾ ಹೊಟ್ಟೆ ಕಿಚ್ಚಾಗುತ್ತಿತ್ತು. ಮುಂದಿನ ಸಲ ಎಲ್ಲಾದರು ಹೀಗೇ ಹೊರಟರೆ .." ನಾನೂ ಬರುತ್ತೇನೆ ನಿಮ್ಮೊಂದಿಗೆ" ಎಂದು ನೇಮಿಚಂದ್ರರಿಗೆ ಪತ್ರ ಬರೆಯಬೇಕೆಂದುಕೊಂಡಿದ್ದೆ . ನನ್ನ ಬಲು ಮೆಚ್ಚಿನ ಲೇಖಕಿಯರಲ್ಲೊಬ್ಬರು ನೇಮಿಚಂದ್ರ !
ReplyDeleteನೇಮಿಚಂದ್ರ ನನ್ನನ್ನು ಕಾಡಲು ಸಾಧ್ಯವೇ ಇಲ್ಲ.ಯಾಕೆಂದರೆ ನಾನು ಅವರ ಪುಸ್ತಕ ಓದಿಯೇ ಇಲ್ಲ:-)
ReplyDeleteಹೌದು. ನೇಮಿಚಂದ್ರರ ಬರಹಗಳೇ ಹಾಗೆ... ಕಾಡುತ್ತವೆ. ನನ್ನ ಇಷ್ಟದ ಬರಹಗಾರರು ಅವರು.
ReplyDeleteಅವರ ಯಾದ್ ವಶೇಮ್ ಪುಸ್ತಕದ್ದೇ ಒಂದು ತೂಕವಾದರ, ಅವರ ಪ್ರವಾಸ ಕಥನಗಳದ್ದೇ ಮತ್ತೊಂದು ತೂಕ. ಜೊತೆಗೆ ಜೀವನ ಪ್ರೀತಿಯ ಪುಸ್ತಕಗಳು ಬದುಕಲು ಕಲಿಸುವಂತವು..
ಹೀಗೆ ಬ್ಲೋಗ್ ಓದುತ್ತಿರುವಾಗ,ಮತ್ತಷ್ಟು ಕಣ್ಣು ಹಾಯಿಸುವಾಗ... ಅಲ್ಲಿಗೆ ನಿಂತಿತು ಕಂಗಳು ನೇಮಿಜೀಯವರ ಬಗ್ಗೆ ಬರೆದ ಬರಹ ನೋಡಿದೊಡನೆ... ನಾನು ಅವರ ಲೇಖನ ಮೊದಲು ಓದಿದ್ಡಿದು, ಉದಯವಾಣಿ ವಾರ ಪತ್ರಿಕೆಯಲ್ಲಿ. ಆದಿನಗಳಲ್ಲಿ ಅವರು ಬರೆಯುವ ರೀತಿಯೇ ಅಂತದ್ದು ಯಾರಿಗೂ ಓದುವ ಗೀಳು ಹಿಡಿಸುವಂಥದ್ದು. ಓದುವ ಗೀಳೀದ್ದ ನನಗೆ ಪ್ರತಿ ವಾರದ ಸಾಪ್ತಾಹಿಕ ಸಂಪದ ಕಾಯುವುದೆ ಕೆಲಸವಾಗಿತ್ತು. ಆಗಷ್ಟೇ P.U.C ಮೆಟ್ಟಿಲೇರಿದ್ದ ನನ್ನ ಕಂಗಳಲ್ಲಿ ಆಗಷ್ಟೇ ಅರಳಿದ್ದ ಸಾವಿರ ಕನಸುಗಳಿದ್ದವು... ಆಗಿಂದ ಈಗಿನವರೆಗೂ ಅಚ್ಚರಿಯಿದೆ ಅವರ ಕನಸಿನ ಬಗ್ಗೆ, ಕನಸು ಕಾಣುವ ಬಗೆಯ ಬಗ್ಗೆ.ತಮ್ಮ ಬುಸಿ ಜೀವನದಲಿ ಒಂದಿಷ್ಟು ಸಮಯ ಎತ್ತಿಟ್ಟು ಬರೆಯುವ ತವಕದಲಿ ನಿಬ್ಬೇರಗಿದೆ ಇಂದಿಗೂ...!
ReplyDeleteಹೀಗೋಮ್ಮೆ ಬ್ಲೋಗ್ ಓದುವಾಗ, ಹಾಗೆಯೇ ಮತ್ತಷ್ಟು ಕಣ್ಣು ಹಾಯಿಸಿದಾಗ, ಕಂಗಳು ಅಲ್ಲಿಯೇ ನಿಂತು ಬಿಟ್ಟಿತು ಕ್ಷಣಮಾತ್ರದಲಿ, ನೇಮೀಜಿಯವರ ಬಗ್ಗೆ ಬರೆದ ಲೇಖನ ಕಂಗಳಿಗೆ ರಾಚಿ, ನೇಮೀಜಿಯವರು ಬರೆಯುವ ರೀತಿಯೇ ಅಂತದ್ದು ಯಾರಿಗೂ ಓದುವ ಗೀಳು ಹಿಡಿಸುವಂಥದ್ದು... !!! ನಾನು ಮೊದಲು ಅವರ ಬರಹಗಳನ್ನು ಓದಿದ್ದು ಉದಯವಾಣಿ ವಾರ ಪತ್ರಿಕೆ "ಸಾಪ್ತಾಹಿಕ ಸಂಪದ"ದಲಿ ಅಂಕಣ "ಬದುಕು ಬೆಳಕು". ಓದುವ ಗೀಳಿದ್ದ ನನಗೆ, ಪ್ರತಿ ವಾರ ಬರುವ ಭಾನುವಾರದ ಪತ್ರಿಕೆಗೆ ಕಾಯುವುದೇ ಹಿತವಾಗಿತ್ತು...!!! ಆಗಷ್ಟೇ ಪೀ.ಉ.ಸೀ ಮೆಟ್ಟಿಲೇರಿದ್ದ ನನ್ನ ಕಂಗಳಲ್ಲಿ ರಾಶಿ ಕನಸುಗಳಿದ್ದವು ನಾಳೆಗಳ ಬಗ್ಗೆ, ಅಂದಿನಿಂದ ಇಂದಿನವರೆಗೂ ಅಚ್ಚರಿಯಿದೆ ಅವರ ಕನಸುಗಳ ಬಗೆ, ಅವರ ಕನಸು ಕಾಣುವ ಬಗೆ ಬಗ್ಗೆ. ತಮ್ಮ ಬುಸಿ ಜೀವನದಲಿ ಒಂದಿಷ್ಟು ಸಮಯ ಎತ್ತಿಟ್ಟು ಬರೆಯುವ ಅವರ ತವಕದಲಿ ನಿಬ್ಬೇರಗಿದೆ ಇಂದಿಗೂ...!!!
ReplyDelete