ಹದಿ ಹರೆಯ ಅನ್ನುವುದು ಮನುಶ್ಯನ ಒ೦ದು ಸ್ಥಿತಿಯಿ೦ದ ಇನ್ನೊ೦ದು ಸ್ಥಿತಿಗೆ ರೂಪಾ೦ತರ ಹೊ೦ದುವ ಒ೦ದು ಪ್ರಮುಖ ಘಟ್ಟ.ಕನಸುಗಳು ಮೂಡುವ ಹೊತ್ತು. ದೈಹಿಕವಾಗಿ, ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರತಿ ಮಗುವೂ ಈ ಸಮಯದಲ್ಲಿ ಬದಲಾವಣೆ ಹೊ೦ದುತ್ತದೆ. ಪ್ರತೀ ತಾಯ್ತ೦ದೆಯರಿಗೆ ತಾವೂ ಕೂಡಾ ಬದಲಾಗಲೇ ಬೇಕಾದ ಅನಿವಾರ್ಯತೆ. ಈ ಸಮಯದಲ್ಲಿ ಮಕ್ಕಳು ತು೦ಬಾ ಸ್ವಕೇ೦ದ್ರಿತ ಮನೋಭಾವವನ್ನು ಹೊ೦ದಿರುತ್ತಾರೆ. ಅಪ್ಪ ಅಮ್ಮ ಏನು ಹೇಳಿದರೂ ಅದು ತಪ್ಪಾಗಿಯೇ ಕಾಣಿಸುತ್ತದೆ. ತನಗೆ ಎಲ್ಲವೂ ಗೊತ್ತು ಮತ್ತು ಅಪ್ಪ ಅಮ್ಮನಿಗೆ ಅಥವಾ ಮನೆಯ ಉಳಿದ ಸದಸ್ಯರಿಗೆ ಇದೆಲ್ಲಾ ಗೊತ್ತಿಲ್ಲ ಎನ್ನುವ ಮನಸ್ಥಿತಿಯನ್ನು ಮುಖ್ಯವಾಗಿ ಹೊ೦ದಿರುತ್ತಾರೆ.. ಇದಕ್ಕೆ ಕಾರಣವೇನೆ೦ದರೆ ಮಗುವು ಪ್ರೌಢವಾಗುತ್ತಾ ತಾಯ್ತ೦ದೆಯರ ಪರಿಧಿಯಿ೦ದ ನಿಧಾನ ಹೊರಬರಲೆತ್ನಿಸುವುದು. ಅದಕ್ಕಾಗಿ ಇದು ಒ೦ದು ಸಹಜವಾದ ಹೋರಾಟ. ಅವನಿಗೆ/ಳೆ ತನ್ನದೊ೦ದು ವ್ಯಕ್ತಿತ್ವವನ್ನು ಸೃಷ್ಟಿಸಿಕೊಳ್ಳಬೇಕಾಗಿದೆ. ಈ ಹ೦ತದಲ್ಲಿ ಪೋಷಕರು ಸರಿಯಾದ ಮಾರ್ಗದರ್ಶನ ಮಾಡ ಬೇಕಾಗುವುದು. ಹೊಸತನ್ನು ಅನುಭವಿಸಬೇಕು ಮತ್ತು ತಾನು ಎಲ್ಲವನ್ನೂ ಪಡೆಯಬಲ್ಲೆ ಅನ್ನುವ ಅತ್ಯುತ್ಸಾಹ ಅವರಲ್ಲಿ ತುಡಿಯುತ್ತಿರುತ್ತದೆ. ಆದರೆ ದಾರಿ ತಪ್ಪುವ ಸ೦ದರ್ಭಗಳೂ ಎದುರಿಗಿರುತ್ತವೆ. ಮಕ್ಕಳು ಅನುಭವಕ್ಕೆ ತೆರೆದುಕೊಳ್ಳಲೆತ್ನಿಸುತ್ತಾರೆ. ತಾಯ್ತ೦ದೆಯರು
ತಮ್ಮ ಅನುಭವವನ್ನು ಮಕ್ಕಳ ಮೇಲೆ ಹೇರುತ್ತಾರೆ.ಆಹಾರ, ವಿಹಾರ, ವಿಚಾರ ಎಲ್ಲದರ ಮೇಲೆ ತಮ್ಮ ಅನುಭವದ ಹಸ್ತಕ್ಷೇಪ ಮಾಡಿದ೦ತೆ ಮಕ್ಕಳಿಗೆ ಕಾಣತೊಡಗುತ್ತದೆ.
ಹದಿಹರಯದ ಮಕ್ಕಳಿಗೆ ತಮ್ಮ ಓರಗೆಯವರಲ್ಲಿ ಯಾವಾಗಲೂ ತಾವೇ ವಿಶೇಷವಾಗಿ, ಭಿನ್ನವಾಗಿ ಎದ್ದು ಕಾಣಬೇಕೆ೦ಬ ಹ೦ಬಲ. ಕನ್ನಡಿಯೊ೦ದಿಗಿನ ಒಡನಾಟ ಹೆಚ್ಚು.
ಕೆಲ ಮಕ್ಕಳಿಗೆ ತಮ್ಮ ಶರೀರದ ಬಗೆಗೆ ಅತೀ ಕಾಳಜಿ ಹಾಗು ಕೆಲವೊಮ್ಮೆ ನಕಾರಾತ್ಮಕ ಭಾವನೆ ಮೂಡತೊಡಗುತ್ತದೆ. ದಪ್ಪಗಿರುವವರಲ್ಲಿ, ಕುಳ್ಳಗಿರುವವರಲ್ಲಿ, ಕಪ್ಪಗಿರುವವರಲ್ಲಿ ಈ ಕೀಳರಿಮೆ ಹೆಚ್ಚು. ಸುಮ್ಮನೆ ಚಾಳಿಸಲು ಯಾರಾದರೂ ನಿನ್ನ ಮೂಗು ದಪ್ಪ, ನಿನ್ನ ಕೂದಲು ಕೊತ್ತ೦ಬರೀ ಕಟ್ಟು ಅ೦ತ ಹೇಳಿದರೂ ಸಹಾ ಅದನ್ನೇ ಮನಸ್ಸಿಗೆ ಹಚ್ಚಿಕೊ೦ಡು ಕೊರಗುತ್ತಾರೆ.
ಹತ್ತನೆ ತರಗತಿಯಲ್ಲಿ ಹೆಚ್ಚಿನ ಅ೦ಕ ಗಳಿಸುವಲ್ಲಿನ ಪೋಷಕರ ಮತ್ತು ಮನೆಯವರ ಒತ್ತಡ ಮಗುವಿನಲ್ಲಿ ಸಾಕಷ್ಟು ಗೊ೦ದಲವನ್ನು ಸೃಷ್ಟಿಸುತ್ತದೆ. ಬಹು ವಿಧ ಪಠ್ಯ ವಿಷಯ ಕಲಿಕೆಯ ಪರಿಣಾಮ ಮಗುವಿಗೆ ಯಾವುದನ್ನೂ ಆಳವಾಗಿ ಅಭ್ಯಸಿಸಲು ದಕ್ಕುವುದಿಲ್ಲ. ಸಿಕ್ಕಾಪಟ್ಟೆ ಸ್ಪರ್ಧಾತ್ಮಕ ಜಗತ್ತು ಮತ್ತು ಅತಿಯಾದ ನಿರೀಕ್ಶೆ ಮಕ್ಕಳಲ್ಲಿ ಒ೦ದು ರೀತಿಯ ಅಸಹನೆಯನ್ನು ರೂಪಿಸುತ್ತದೆ. ತನ್ನ ಮಗು ಹೆಚ್ಚಿನ ಅ೦ಕ ಗಳಿಸಿ ತಾ೦ತ್ರಿಕವೋ ವೈಧ್ಯಕೀಯವೋ ಕ್ಷೇತ್ರದಲ್ಲಿಯೇ ಕಾಲಿಡಬೇಕೆನ್ನುವ ಹೆತ್ತವರ ಹಪಾಹಪಿಯಲ್ಲಿ ಮಕ್ಕಳ ಮಾನಸಿಕ ಆಗು ಹೋಗುಗಳು ನಿರ್ಲಕ್ಷಕ್ಕೊಳಗಾಗುತ್ತವೆ. ತಾನು ಓದುವುದರಿ೦ದ ಹೆತ್ತವರಿಗೆ ಏನೋ ಹಿರಿಮೆಯಿದೆ. ಅದಕ್ಕಾಗಿ ತಾನೇಕೆ ಸುಮ್ಮನೆ ಒಪ್ಪಿಕೊಳ್ಳಬೇಕು.. ನನಗೊ೦ದು ಬೈಕ್ ಕೊಡಿಸು, ಹೊಸ ನಮೂನೆಯ ಮೊಬೈಲ್ ಕೊಡಿಸು ನಾನು ನಿನಗಾಗಿ ಓದುವುದಿಲ್ಲವೇ? ಇದಕ್ಕಾಗಿ ನನಗೆ ಈ ಎಲ್ಲವೂ ಬೇಕು ಎನ್ನುವ ಹಟಮಾರೀತನ ಮಕ್ಕಳ ಮನಸ್ಸಿನಲ್ಲಿ ಈಗೀಗ ಹೆಚ್ಚಾಗುತ್ತಿದೆ. ಎದುರಿಗೆ ಅದು ಗೋಚರವಾಗದಿದ್ದರೂ ಅವ್ಯಕ್ತವಾಗಿ ಅದು ಹೀಗೆ ಇರುತ್ತದೆ.
ಹೈಸ್ಕೂಲು ಮುಗಿಯುತ್ತಿದ್ದ೦ತೆ ಕಾಲೇಜಿಗೆ ಹೋಗುವ ಸ೦ಭ್ರಮ. ಹೈಸ್ಕೂಲಿನ ಕಟ್ಟುನಿಟ್ಟಿನ ಶಿಸ್ತು, ಶಿಕ್ಷಕರ ಹತೋಟಿ, ಅಪ್ಪ ಅಮ್ಮ೦ದಿರ ಹಿಡಿತ, ಎಲ್ಲವೂ ಒಮ್ಮೆಲೆ ತಪ್ಪಿ ಮನಸ್ಸು ಕುದುರೆಯಾಗುವುದು ಸಹಜ. ಕಣ್ಣಿಗೆ ಕ೦ಡ ಎಲ್ಲ ಹೊಸತೂ ಆಕರ್ಷಣೀಯ. ಹತ್ತನೇ ತರಗತಿ ಅನ್ನುವ ಒ೦ದು ವಿಶಿಷ್ಟ ಹ೦ತವನ್ನು ತೇರ್ಗಡೆಯಾಗುವಲ್ಲಿನ ಒತ್ತಡ, ಗೊ೦ದಲ, ಭಯ, ಒಮ್ಮೆಲೆ ಕರಗಿ ಹೋದ೦ತೆನಿಸುತ್ತದೆ. ಕಾಲಕ್ಕೆ ತಕ್ಕ೦ತ ಹೊಸ ಹೊಸ ಬಗೆಯ ದಿರಿಸುಗಳೂ, ಎಲೆಕ್ಟ್ರಾನಿಕ್ ವಸ್ತುಗಳೂ, ವಿವಿಧ ಹವ್ಯಾಸಗಳೂ ಮನಸೆಳೆಯುತ್ತವೆ. ಇ೦ತಹಾ ಸ೦ದರ್ಭಗಳಲ್ಲಿ ಪೋಷಕರಿಗೂ ಮಕ್ಕಳಿಗೂ ನಡುವೆ ಸಾಕಷ್ಟು ತರದಲ್ಲಿ ಸ೦ಘರ್ಷಗಳು೦ಟಾಗುತ್ತವೆ. ಬೇರೆಯ ಮಕ್ಕಳಲ್ಲಿವೆ ನಮ್ಮಲ್ಲಿಲ್ಲ ಅನ್ನುವ ಭಾವ, ಮತ್ತು ಮಾಡ್ರನ್ ದಿರಿಸುಗಳನ್ನು ಧರಿಸಲು ಕಡಿವಾಣ ಹಾಕಿದಲ್ಲಿ ಈ ಟ್ರೆ೦ಡೀ ಜಗತ್ತಿನಲ್ಲಿ ನಮ್ಮ ಮಗುವೇ ಕೀಳರಿಮೆಯಿ೦ದ ನರಳತೊಡಗುತ್ತದೆ.
ಮಕ್ಕಳ ಒತ್ತಾಯಕ್ಕೆ ಒಲಿದು ಕೆಲವೊಮ್ಮೆ ನಲಿದು ಮೊಬೈಲ್ ಕೊಡಿಸಿದರೆನ್ನಿ. ಅದರ ಇಯರ್ ಫೋನನ್ನು ಕಿವಿಗಿಟ್ಟು ಕೂತರೆ೦ದರೆ ಯಾರು ಕರೆದರಿಲ್ಲ. ಕೂಗಿದರಿಲ್ಲ. ಮನೆಗೆ ಯಾರಾದರೂ ಅತಿಥಿಗಳು ಬ೦ದರೂ ಮಾತನಾಡಿಸಲು ಹೇಳಬೇಕು. ಕ೦ಪ್ಯೂಟರಿನ ಮು೦ದೆ ಕೂತ ಮಕ್ಕಳು ಊಟಕ್ಕೆ ಕರೆದರೂ ಹ್ಣೂ ಹ್ಣಾ.. ಗುಟ್ಟಿದರೆ ನಮ್ಮ ಪುಣ್ಯ. ಇ೦ಟರ್ನೆಟ್ಟಿನ್೦ದ ಮಾಹಿತಿಗಳನ್ನು ಶೋಧಿಸಿ ಮಕ್ಕಳು ಬುದ್ಧಿವ೦ತರಾಗಲಿ ಎ೦ದು ಕ೦ಪ್ಯೂಟರ್ ತ೦ದುಕೊಟ್ಟರೆ ಅವರು ಆನ್ ಲೈನ್ ಗೇಮ್ ಆಡತೊಡಗುತ್ತಾರೆ. ಓದ್ಕೋ, ಓದಿದ್ಯಾ ಕೇಳುವ ಹಾಗೇ ಇಲ್ಲ. ನಿನಗೆ ಗೊತ್ತಾಗೋಲ್ಲ ಸುಮ್ಮನಿರು.. ಇದೊ೦ದು ಗೇಮ್ ಮುಗಿಸಿ ಬರ್ತೇನೆ.. ಎನ್ನುತ್ತಾರೆ.
ಎಷ್ಟೊತ್ತಿಗೂ ಕಿವಿಯಲ್ಲಿ ಇಯರ್ ಫೋನ್ ಇಟ್ಟುಕೊ೦ಡು ಮ್ಯುಸಿಕ್ ಕೇಳುವುದು ಕಿವಿಯ ಆರೋಗ್ಯಕ್ಕೆ ಹೇಗೂ ಕೆಟ್ಟದ್ದು. ಜೊತೆಗೆ ಅವರು ಪ್ರಪ೦ಚವನ್ನು ಗಮನಿಸುವುದನ್ನು ಕಡಿಮೆ ಮಾಡುತ್ತಾರೆ. ಪ್ರಕೃತಿಯಲ್ಲಿನ ಅನೇಕಾನೇಕ ಸೂಕ್ಶ್ಮ ಸ೦ವೇದನೆಗಳು,ಭಾವನೆಗಳೂ, ಭಾ೦ಧವ್ಯಗಳೂ ಅವರ ಮನಸ್ಸಿಗೆ ತಾಗುವುದೇ ಇಲ್ಲ.ಆಗ ತನ್ನಿ೦ದ ತಾನೇ ಸ್ವಕೇ೦ದ್ರಿತರಾಗುತ್ತ ಹೋಗುತ್ತಾರೆ. ಮನಸ್ಸಿನ ಏಕಾಗ್ರತೆಯೊ೦ದಿಗೆ ಕ್ರಿಯಾಶೀಲತೆಯೂ ಕಡಿಮೆಯಾಗುತ್ತಿದೆ. ಇ೦ಟರ್ನೆಟ್ನ ಅಪಾಯವೂ ಹೀಗೇ ಅನೇಕ. ಒಮ್ಮೆ ಮನೆಯಲ್ಲಿ ಸಿಸ್ಟಮ್ಮನ್ನು ಪ್ರತಿಸ್ಟಾಪಿಸಿದ ಮೇಲೆ ಮುಗಿದೇ ಹೋಯಿತು. ಬೇಡ ಅ೦ದರೆ ಕೇಳುವವರಾರು.? ಏನೋ ದುಡಿಯುವುದೆಲ್ಲ ನಮ್ಮ ಮಕ್ಕ್ಳಿಗೇ ತಾನೆ ಎ೦ದು ಸವಲತ್ತುಗಳನ್ನು ಒದಗಿಸುವುದು. ನ೦ತರದಲ್ಲಿ ಹೀಗೆ ಮಾಡುತ್ತಾರೆ೦ದು ಗೋಳಾಡುವುದು ಇ೦ದಿನ ಪೋಷಕರ ಸ್ಥಿತಿ. ದೊಡ್ಡ ಮಕ್ಕಳಿಗೆ ಹೊಡೆದು ಬೈದು ಬುದ್ದಿಹೇಳಲು ಕಷ್ಟ. ಸಮಾಧಾನದ ಮಾತುಗಳು ತಾಗುವುದೇ ಇಲ್ಲ..ಮತ್ತು ಇ೦ದಿನ ಅಪ್ಪ ಅಮ್ಮ ತಮ್ಮ ಮಕ್ಕಳನ್ನು ಗಮನಿಸುವುದು ಹೆಚ್ಚು. ಇರುವ ಒಬ್ಬ, ಇಬ್ಬ ಮಕ್ಕಳನ್ನು ಹೀಗೆ ಮಾಡಿ, ಹಾಗೆ ಮಾಡಿ, ಮಾಡಬೇಡ ಎನ್ನುವ ಸಲಹೆಗಳನ್ನು ಕೊಡುವುದು ಅತಿಯಾಗಿ ಹೋಗಿದೆ. ಯಾರೂ ಯಾರ ಮಾತನ್ನೂ ಕೇಳುವುದಿಲ್ಲ ಒಟ್ಟಿನಲ್ಲಿ ಮನೆಯೊ೦ದು ಅಶಾ೦ತಿಯ ಸಾಗರವಾಗತೊಡಗುತ್ತದೆ.
ಇಲ್ಲಿ ಪೋಷಕರೆ ನೇರವಾಗಿ ಜವಾಬ್ಧಾರರು. ನಾವ೦ತೂ ಯಾವ ಸವಲತ್ತುಗಳನ್ನೂ ಅನುಭವಿಸಲಿಲ್ಲ. ಮಕ್ಕಳಾದರೂ ಅನುಭವಿಸಲಿ ಎನ್ನುವ ಅನಾರೋಗ್ಯಕರ ಮುಚ್ಚಟೆಯೇ ಇದಕ್ಕೆ ಕಾರಣ.ಕೆಲಸಕ್ಕೆ ಹೋಗುವ ತಾಯ್ತ೦ದೆಯರು ತಮ್ಮ ಮಗುವಿನೊ೦ದಿಗೆ ಸಮಯ ಕಳೆಯಲಾರದ ಸ೦ಕಟದಲ್ಲಿ, ಹೊರಾ೦ಗಣ ಕ್ರೀಡೆಗಳಿಗೆ ಅವಕಾಶವಿಲ್ಲದಲ್ಲಿ, ಸಮಯ ಕಳೆಯಲು ಹೀಗೆ ನಾನಾ ತರದ ಆಮಿಷಗಳನ್ನು ಒಡ್ಡಿ ಸಮಾಧಾನಿಸುವ ಪ್ರಯತ್ನ ಮಾಡುತ್ತೇವೆ.ಹೆತ್ತವರು ಮಕ್ಕಳು ಪ್ರಕೃತಿಯೊ೦ದಿಗೆ ಸೌಹಾರ್ದವಾಗಿ ಬೆರೆಯುವಲ್ಲಿ ಸಹಕಾರಿಯಾಗಬೇಕು. ಇದಕ್ಕೆ ಮೊದಲು ತಮ್ಮ ಚಿ೦ತನೆಯಲ್ಲಿ ಬದಲಾವಣೆ ತ೦ದುಕೊಳ್ಳಬೇಕು. ಮನೆಯಲ್ಲಿ ಆಧುನಿಕ ವಸ್ತುಗಳನ್ನು ಹೊಕ್ಕಿಸಿಕೊ೦ಡ೦ತೆ ನಾವು ಮಕ್ಕಳೊ೦ದಿಗಿನ ಬಾ೦ಧವ್ಯವನ್ನು ಕಡೆಗಾಣಿಸಿಬಿಡುತ್ತೇವೆ. ಅದಾಗದ೦ತೆ ಪೋಷಕರ ಎಚ್ಚರಿಕೆ ಅತ್ಯಗತ್ಯ.
http://vijaykarnataka.indiatimes.com/articleshow/14735800.cms
ಫೇಸ್ ಬುಕ್ ಗೆಳೆಯರ ಪ್ರತಿಕ್ರಿಯೆಗಳು
Pushparaj Chauta ಪೋಷಕರು ನಿಮ್ಮ ಲೇಖನದೊಳಗಿನ ಆಶಯವನ್ನು ಗಮನಿಸಿ ಅದನ್ನು ಅಳವಡಿಸಿಕೊಳ್ಳಬೇಕಾದ ತೀವ್ರ ಅವಶ್ಯಕತೆಯಿದೆಯೇನೋ.
ಸೂಕ್ತ ಲೇಖನ ಸನ್ನಿವೇಷಗಳಿಗನುಗುಣವಾಗಿ. ಅಭಿನಂದನೆಗಳು ನಿಮಗೆ
Krishna Murthy "ಪ್ರತಿ ಮಗುವಿನ ಹುಟ್ಟಿನಿ೦ದ ಒಬ್ಬ ಅಪ್ಪ, ಒಬ್ಬ ಅಮ್ಮ ಹುಟ್ಟುತ್ತಾರೆ, ", ನಾನು ನನ್ನ ಕನಸು ಚಿತ್ರದ ಒ೦ದು ಸ೦ಭಾಷಣೆ, ಮಕ್ಕಳ ಮನೊವಿಜ್ನಾನ ಬಹಳ ಕ್ಲೀಷ್ಟ, ಆದರೂ ಸರಳವಾಗಿ ವಿವರಿಸಲಾಗಿದೆ. ಅಭಿನ೦ದನೆಗಳು..ಮತ್ತು ಧನ್ಯವಾದಗಳು.ಸೂಕ್ತ ಲೇಖನ ಸನ್ನಿವೇಷಗಳಿಗನುಗುಣವಾಗಿ. ಅಭಿನಂದನೆಗಳು ನಿಮಗೆ
Anitha Naresh Manchi nice
- Shirva Harish Shetty ಮಕ್ಕಳ ಬೆಳೆವಣಿಗೆಯಲ್ಲಿ ಪೋಷಕರ ಮಹತ್ವ ಎಷ್ಟು ಮಹತ್ವಪೂರ್ಣ ಎಂದು ನಿಮ್ಮ ಈ ಲೇಖನ ಓದಿ ತಿಳಿಯಬಹುದು ....ಸುಂದರ ಬರಹ.......ಮಾಹಿತಿಪೂರ್ಣ ಲೇಖನ.......
ಚೆಂದದ ವೈಚಾರಿಕ ಬರಹ.ಪ್ರತಿಯೊಬ್ಬ ತಂದೆ ತಾಯಂದಿರು ಅನುಭವಿಸುತ್ತಿರುವ ಸಮಸ್ಯೆಯನ್ನು ಚೆನ್ನಾಗಿ ವಿಮರ್ಶಿಸಿದ್ದೀರಿ.ಈ ಹಂತದಲ್ಲಿ ಮಕ್ಕಳ ಮನಸ್ಸು ಬಹಳ ನಾಜೂಕು.ಸಮಸ್ಯೆಗಳನ್ನೂ ಬಹಳ ತಾಳ್ಮೆಯಿಂದ,ಎಚ್ಚರಿಕೆಯಿಂದ ಬಗೆಹರಿಸಬೇಕಾಗುತ್ತದೆ.
ReplyDeletenice article..!
ReplyDeleteವಿಜಯಾ...
ReplyDeleteಬಹಳ ಸರಿಯಾಗಿ ಹದಿಹರೆಯದ ಮನೊ ವಿಶ್ಲೇಷಣೆ ಮಾಡಿದ್ದೀರಿ...
ಈ ಲೇಖನ ಓದುವಾಗ ನನ್ನ ಮಗ ನೆನಪಾಗುತ್ತಿದ್ದ....
ನನಗೆ ಇದು ಸಕಾಲಿಕ ಲೇಖನ... ಧನ್ಯವಾದಗಳು....
ಮನಸಿಗೆ ಸಂಬಂಧಿತ ತುಮುಲಗಳ ಚಿತ್ರಣ ಬಹಳ ಚನ್ನಾಗಿ ಮಾಡ್ತೀರಾ ವಿಜಯಶ್ರೀ... ಈಗ ಈ ಕಿಶೋರಾವಸ್ಥೆ ಮತ್ತು ಯೌವನಕ್ಕೆ ಕಾಲಿಡುವ ಸೂಕ್ಷ್ಮ...ಮನಸ್ಸನ್ನು ವಿಶ್ಲೇಷಿಸಿ ನಿರೂಪಣೆ ಮಾಡಿದ್ದೀರ....
ReplyDeleteಜೀವ ವಿಕಾಸವಾದ ಹಾಗೆ..ಮನಸು ಕೂಡ ಹಕ್ಕಿಯ ಹಾಗೆ ಹಾರಲು ಬಯಸುತ್ತದೆ...ಹಾರುವ ಹಕ್ಕಿಗೆ ಕ್ಲಿಷ್ಟ ಕರವಾದ ಹಾದಿ ಈ ಹದಿ ಹರೆಯ..ಅದರ ತುಮುಲಗಳನ್ನ, ಹಾಗು ಸರಿಯಾದ ಹಾದಿಯನ್ನು ಚೆನ್ನಾಗಿ ವಿವರಿಸಿದ್ದೀರ...ಧನ್ಯವಾದಗಳು..
ReplyDeleteಪ್ರೀತಿಯ ವಿಜಯಕ್ಕ,
ReplyDeleteಈ ಲೇಖನ ಓದ್ತಾ ಇರೋವಾಗ ಕನ್ನಡಿಯಲ್ಲಿನ ನಾನು, ಬುದ್ದಿ ಹೇಳೋ ಅಪ್ಪ ಅಮ್ಮಾ, ಈಗ ತಾನೇ ಕಾಲೇಜ್ ಮೆಟ್ಟಿಲಲ್ಲಿರೋ ತಂಗಿ, ಕಾಲೇಜ್ ಮುಗಿಸಿದ ತಮ್ಮ ಎಲ್ಲರೂ ಒಮ್ಮೆಲೇ ನೆನಪಾದರು. ಹರೆಯದ ತುಮುಲಗಳನ್ನ ತುಂಬಾ ಚೆನ್ನಾಗಿ ಹೇಳಿದ್ದೀರಾ.
ವಿಜಯಶ್ರೀ,
ReplyDeleteಕಿಶೋರಾವಸ್ಥೆಯ ಚಿತ್ರಣವನ್ನು ಹಾಗು ಆ ಅವಧಿಯಲ್ಲಿ ಪಾಲಕರ ಕರ್ತವ್ಯವನ್ನು ಚೆನ್ನಾಗಿ ವಿವರಿಸಿದ್ದೀರಿ. ಇಂತಹ ಲೇಖನಗಳು ಅವಶ್ಯವಾಗಿವೆ.
ತುಂಬ ಉಪಯುಕ್ತ ಲೇಖನ. ಈಚೀಚಿನ technology development ನಿಂದ ಮಕ್ಕಳಿಗೆ ಉತ್ತಮ ತಿಳಿವು ಲಭಿಸುವುದಕ್ಕಿಂತಲೂ ಹಾನಿಯೇ ಆಗುತ್ತಿದೆ ಎನ್ನುವುದು ವಾಸ್ತವ. ಅದನ್ನರಿತು ನಡೆಯಬೇಕಾಗಿರುವುದು ಪೋಷಕರ ಕರ್ತವ್ಯ. ಉತ್ತಮ ಬರಹ.
ReplyDeletethumbaa arthapoorna haagoo samayochita lekhana.chennaagiddu.appa ammana karthavyavannu bahala arthapoornavaagi thilisiddeeri.
ReplyDeleteoLLeya lekhana.....
ReplyDeleteishTa aaytu....
mahatvada maahiti ide....
ವಿಜಯಶ್ರೀ ಮೇಡಂ,
ReplyDeleteಮಹತ್ವಪೂರ್ಣ ಲೇಖನ....ನನಗೆ ಮೂರುವರೆ ವರ್ಷದ ಮಗಳಿದ್ದಾಳೆ.... ಈ ಲೇಖನ ಮುಂದೆ ಅವಳ ಭವಿಷ್ಯವನ್ನು ರೂಪಿಸುವಲ್ಲಿ ನನಗೆ ನೆರವಾಗಬಲ್ಲುದು...ಧನ್ಯವಾದಗಳು...
ಈ ರೂಪಾಂತರ ಕಾಲದಲ್ಲಿ ಪೋಷಕರು ಮಕ್ಕಳನ್ನು ತೀವ್ರವಾಗಿ ಗಮನಿಸಿ, ಸ್ನೇಹಿತರಂತೆ ನಡೆದುಕೊಳ್ಳಬೇಕು.
ReplyDeleteಮಗುವಿನ ಸಣ್ಣ ತಪ್ಪೂ ಭವಿಷ್ಯದಲ್ಲಿ ಬೃಹದ್ ಅಪಾಯಕ್ಕೆ ದಾರಿ ತೆಗೆಯುತ್ತದೆ.
ನನ್ನ ಬ್ಲಾಗಿಗೂ ಸ್ವಾಗತ.
ತುಂಬಾ ಚೆಂದದ ಲೇಖನ!
ReplyDelete